Isaiah · chapter 3 · verse 17
Isaiah 3:17 in Kannada
ಚೀಯೋನ್ ಕುಮಾ ರ್ತೆಯರ ತಲೆಯ ಮೇಲ್ಭಾಗವನ್ನು ಕಜ್ಜಿಯಿಂದ ಕರ್ತನು ಹೊಡೆಯುವನು, ಅವರ ಗುಪ್ತಾಂಗಗಳನ್ನು ಬೈಲುಪಡಿಸುವನು.
Cheeyon kumaa rteyara taleya melbhaagavannu kajjiyinda kartanu hodeyuvanu, avara guptaangagalannu bailupadisuvanu.
Isaiah 3:17 in English
- King James Version (KJV)
- Therefore the Lord will smite with a scab the crown of the head of the daughters of Zion, and the LORD will discover their secret parts.
- World English Bible (WEB)
- therefore the Lord brings sores on the crown of the head of the women of Zion, and the LORD will make their scalps bald.”
- American Standard Version (ASV)
- therefore the Lord will smite with a scab the crown of the head of the daughters of Zion, and Jehovah will lay bare their secret parts.
- Bible in Basic English (BBE)
- The Lord will send disease on the heads of the daughters of Zion, and the Lord will let their secret parts be seen.
- Darby Translation (DBY)
- therefore the Lord will make bald the crown of the head of the daughters of Zion, and Jehovah will lay bare their secret parts.
- Webster's Bible (WBS)
- Therefore the LORD will smite with a scab the crown of the head of the daughters of Zion, and the LORD will uncover their secret parts.
- Young's Literal Translation (YLT)
- The Lord also hath scabbed The crown of the head of daughters of Zion, And Jehovah their simplicity exposeth.
Read in context
- 15ನೀವು ನನ್ನ ಪ್ರಜೆಯನ್ನು ಹೊಡೆದು ಚೂರು ಗಳನ್ನಾಗಿ ಮಾಡಿ ಬಡವರ ಮುಖಗಳನ್ನು ಹಿಂಡು ವದರ ಅರ್ಥವೇನು ಎಂದು ಸೈನ್ಯಗಳ ದೇವರಾದ ಕರ್ತನು ಹೇಳುತ್ತಾನೆ.
- 16ಇದಲ್ಲದೆ ಕರ್ತನು ಇಂತೆನ್ನುತ್ತಾನೆ --ಚೀಯೋನ್ ಕುಮಾರ್ತೆಯರು ಅಹಂಕಾರಿಗಳಾಗಿದ್ದು ಕತ್ತು ತೂಗುತ್ತಾ ಕಣ್ಣುಗಳನ್ನು ತಿರುಗಿಸುತ್ತಾ ನಾಜೂಕಿ ನಿಂದ ಹೆಜ್ಜೆಇಡುತ್ತಾ ಕಾಲುಗೆಜ್ಜೆ ಜಣಜಣಿಸುತ್ತಾ ನಡೆ ಯುವವರಾಗಿರುವದರಿಂದ,
- 17ಚೀಯೋನ್ ಕುಮಾ ರ್ತೆಯರ ತಲೆಯ ಮೇಲ್ಭಾಗವನ್ನು ಕಜ್ಜಿಯಿಂದ ಕರ್ತನು ಹೊಡೆಯುವನು, ಅವರ ಗುಪ್ತಾಂಗಗಳನ್ನು ಬೈಲುಪಡಿಸುವನು.
- 18ಆ ದಿನದಲ್ಲಿ ಕರ್ತನು ಅವರ ಅಂದುಗೆ, ತುರುಬುಬಲೆ, ಅರ್ಧಚಂದ್ರ,
- 19ಸರ, ಬಳೆ, ಮುಂಡಾಸ,
Cross references
- Jeremiah 13:22 ಯೆರೆಮೀಯ 13:22ಇವು ನನಗೆ ಯಾಕೆ ಸಂಭವಿಸಿದವೆಂದು ನೀನು ನಿನ್ನ ಹೃದಯದಲ್ಲಿ ಅಂದುಕೊಂಡರೆ, ಬಹಳವಾದ ನಿನ್ನ ಅಕ್ರಮದ ನಿಮಿತ್ತ ನಿನ್ನ ಬಟ್ಟೆಗಳು ತೆಗೆಯಲ್ಪಟ್ಟು ನಿನ್ನ ಹಿಮ್ಮಡಿಗಳು ಬೆತ್ತಲೆಯಾದವು.
- Leviticus 13:29–30 ಯಾಜಕಕಾಂಡ 13:29–30ಒಬ್ಬ ಪುರುಷನಿಗಾಗಲಿ ಸ್ತ್ರೀಗಾಗಲಿ ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ವ್ಯಾಧಿಯು ಇದ್ದರೆ ಆಗ ಯಾಜಕನು ಆ ವ್ಯಾಧಿಯನ್ನು ನೋಡಬೇಕು. ಇಗೋ, ಅದು ನೋಡುವದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ ಮತ್ತು ಅದರಲ್ಲಿ ಹಳದಿಯ ತೆಳ್ಳನೆಯ ಕೂದಲಿದ್ದರೆ ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು; ಅದು ಒಣಗಿದ ಇಸಬಾಗಿರುವದು. ಅದು ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ಇರುವ ಕುಷ್ಠವಾಗಿದೆ.
- Revelation 16:2 ಪ್ರಕಟನೆ 16:2ಆಗ ಮೊದಲನೆಯವನು ಹೊರಟು ತನ್ನ ಪಾತ್ರೆ ಯಲ್ಲಿದ್ದದ್ದನ್ನು ಭೂಮಿಯ ಮೇಲೆ ಹೊಯಿದನು; ಆಗ ಮೃಗದ ಗುರುತನ್ನು ಹೊಂದಿ ಅದರ ವಿಗ್ರಹಕ್ಕೆ ಆರಾಧನೆ ಮಾಡಿದ ಮನುಷ್ಯರ ಮೇಲೆ ಕೊಳೆಯುವ ಘೋರವಾದ ಹುಣ್ಣು ಎದ್ದಿತು.
- Leviticus 13:43–44 ಯಾಜಕಕಾಂಡ 13:43–44ಆಗ ಯಾಜಕನು ಅವನನ್ನು ನೋಡಬೇಕು ಇಗೋ, ಅವನ ಬೋಳು ತಲೆಯಲ್ಲಾಗಲಿ ಪಟ್ಟೆತಲೆಯಲ್ಲಾಗಲಿ ಏಳುತ್ತಿರುವ ಆ ಮಚ್ಚೆಯು ಬಿಳುಪಾಗಿ ಕೆಂಪಾಗಿದ್ದರೆ ಶರೀರದ ಚರ್ಮ ದಲ್ಲಿ ಇರುವ ಕುಷ್ಠದ ಹಾಗಿದ್ದರೆ ಕುಷ್ಠರೋಗಿ ಎಂದೂ ಅಶುದ್ಧನೆಂದೂ ವ್ಯಾಧಿಯು ಅವನ ತಲೆಯಲ್ಲಿದೆ ಯೆಂದೂ ಖಂಡಿತವಾಗಿ ಅಶುದ್ಧನೆಂದೂ ಯಾಜಕನು ಹೇಳಬೇಕು.
- Micah 1:11 ಮೀಕ 1:11ಶಾಫೀರಿನ ನಿವಾಸಿಯೇ, ನಾಚಿಕೆ ಮುಚ್ಚದೆ ಹಾದುಹೋಗು; ಬೇತೇಚೆಲಿನ ಗೋಳಾಟದಲ್ಲಿ ಚಾನಾನಿನ ನಿವಾಸಿ ಮುಂದೆ ಬರಲಿಲ್ಲ; ಅವನು ನಿಮ್ಮಿಂದ ತನ್ನ ಸ್ಥಾನವನ್ನು ತಕ್ಕೊಳ್ಳುವನು.
- Isaiah 20:4 ಯೆಶಾಯ 20:4ಹಾಗೆಯೇ ಅಶ್ಶೂರಿನ ಅರಸನು ಐಗುಪ್ತ್ಯರನ್ನು ಬಂಧಿಸಿ ಐಥಿಯೋಪಿಯಾದ ಕೈದಿಗಳನ್ನು ಅವರು ದೊಡ್ಡವರಾಗಲಿ ಸಣ್ಣವರಾಗಲಿ ಬಟ್ಟೆ ಕೆರಗಳಿಲ್ಲದೆ ಬರಿ ಕುಂಡಿಯವರಾಗಿ ಐಗುಪ್ತದ ಮಾನಭಂಗಕ್ಕೋ ಸ್ಕರ ಸೆರೆಗೆ ನಡೆಯುವಂತೆ ಮಾಡುವನು.
- Nahum 3:5 ನಹೂಮ 3:5ಸೈನ್ಯಗಳ ಕರ್ತನು ಹೇಳುವದೇ ನಂದರೆ--ಇಗೋ, ನಾನು ನಿನಗೆ ವಿರೋಧವಾಗಿ ದ್ದೇನೆ; ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲೆ ಎತ್ತಿ ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ.
- Ezekiel 23:25–29 ಯೆಹೆಜ್ಕೇಲನು 23:25–29ಇದಲ್ಲದೆ ನನ್ನ ಅಸೂಯೆಯನ್ನು ನಿನಗೆ ವಿರುದ್ಧವಾಗಿ ಬರಮಾಡುವೆನು; ಅವರು ನಿನ್ನಲ್ಲಿ ಕೋಪತೀರಿಸಿ ಕೊಳ್ಳುವರು; ನಿನ್ನ ಮೂಗನ್ನೂ ಕಿವಿಗಳನ್ನೂ ತೆಗೆದು ಹಾಕುವರು; ನಿನ್ನಲ್ಲಿ ಉಳಿದವರು ಕತ್ತಿಯಿಂದ ಬೀಳು ವರು; ನಿನ್ನ ಗಂಡು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನಲ್ಲಿ ಉಳಿದವರೆಲ್ಲರೂ ಅಗ್ನಿಗೆ ಆಹುತಿಯಾಗುವರು. ಇದಲ್ಲದೆ ನಿನ್ನ ವಸ್ತ್ರಗಳನ್ನು ತೆಗೆದುಹಾಕಿ, ನಿನ್ನ ಸೌಂದರ್ಯದ ಒಡವೆಗಳನ್ನು ಕಸಿದುಕೊಳ್ಳುವರು; ಹೀಗೆ ನಾನು ನಿನ್ನ ದುಷ್ಕರ್ಮವನ್ನು ನೀನು ಐಗುಪ್ತದಲ್ಲಿದ್ದಂದಿನಿಂದ ನಡೆಸಿದ ವ್ಯಭಿಚಾರವನ್ನು ನಿನ್ನಿಂದ ತೊಲಗಿಸುವೆನು; ಆಮೇಲೆ ನೀನು ಅವರ ಕಡೆಗೆ ಕಣ್ಣೆತ್ತದೆ, ಐಗುಪ್ತವನ್ನು ಜ್ಞಾಪಕಕ್ಕೆ ತರದೇ ಇರುವಿ. ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ನೀನು ಹಗೆಮಾಡುವವರ ಕೈಯಲ್ಲಿಯೂ ಯಾರ ಕಡೆಯಿಂದ ನಿನ್ನ ಮನಸ್ಸು ಅಗಲಿ ಹೋಯಿತೋ ಅವರ ಕೈಯಲ್ಲಿಯೂ ನಿನ್ನನ್ನು ಒಪ್ಪಿಸುತ್ತೇನೆ. ಅವರು ನಿನ್ನ ವಿಷಯದಲ್ಲಿ ಹಗೆಯವರಾಗಿ ನಡೆಯುವರು; ನಿನ್ನ ಕಷ್ಟಾರ್ಜಿತವನ್ನು ತೆಗೆದುಕೊಂಡು ನಿನ್ನನ್ನು ಬೆತ್ತಲೆಯಾಗಿಯೂ ಬರಿದಾಗಿಯೂ ಮಾಡಿ ಬಿಡುವರು. ಆಗ ನಿನ್ನ ವ್ಯಭಿಚಾರವೂ ದುಷ್ಕರ್ಮವೂ ಜಾರತ್ವವೂ ಪ್ರಕಟವಾಗುವದು.
- Isaiah 47:2–3 ಯೆಶಾಯ 47:2–3ಬೀಸುವ ಕಲ್ಲನ್ನು ಹಿಡಿದು ಹಿಟ್ಟನ್ನು ಬೀಸು, ಮುಸುಕನ್ನು ತೆಗೆದುಹಾಕಿ ನಿನ್ನ ಕಾಲನ್ನು ಬರಿದುಮಾಡಿ, ತೊಡೆಯನ್ನು ಮುಚ್ಚದೆ ನದಿಗಳನ್ನು ಹಾದುಹೋಗು. ನಿನ್ನ ಬೆತ್ತಲೆತನವು ಮುಚ್ಚಲ್ಪಡದೇ ಇದ್ದದರಿಂದ ನೀನು ನಾಚಿಕೆಗೆ ಈಡಾಗುವಿ, ನಾನು ನಿನ್ನನ್ನು ಮನುಷ್ಯನಂತೆ ಸಂದಿಸದೆ ನಿನಗೆ ಮುಯ್ಯಿ ತೀರಿಸುವೆನು.
- Deuteronomy 28:27 ಧರ್ಮೋಪದೇಶಕಾಂಡ 28:27ಕರ್ತನು ನಿನ್ನನ್ನು ಐಗುಪ್ತದ ಹುಣ್ಣುಗಳಿಂದಲೂ ಗಡ್ಡೆವ್ಯಾಧಿಯಿಂದಲೂ ಕಜ್ಜಿಯಿಂದಲೂ ಇಸಬಿನಿಂದ ಲೂ ನೀನು ವಾಸಿಯಾಗಕೂಡದ ಹಾಗೆ ಹೊಡೆ ಯುವನು.
- Ezekiel 16:36–37 ಯೆಹೆಜ್ಕೇಲನು 16:36–37ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಿನ್ನ ಅಸಹ್ಯವು ಸುರಿಯಲ್ಪಟ್ಟ ಕಾರಣ ದಿಂದಲೂ ನಿನ್ನ ಬೆತ್ತಲೆತನವು ಪ್ರಕಟವಾಗುವಂತೆ ನಿನ್ನ ಪ್ರಿಯರ ಸಂಗಡ ಮಾಡಿದ ವ್ಯಭಿಚಾರದಿಂದಲೂ ನಿನ್ನ ಎಲ್ಲಾ ಅಸಹ್ಯವಾದ ವಿಗ್ರಹಗಳಿಂದಲೂ ನೀನು ಅವರಿಗೆ ಕೊಟ್ಟ ನಿನ್ನ ಮಕ್ಕಳ ರಕ್ತದಿಂದಲೂ ಇಗೋ, ನೀನು ಆನಂದ ಪಟ್ಟವರೊಂದಿಗೆ ಪ್ರೀತಿ ಮಾಡಿದವರೆ ಲ್ಲರನ್ನೂ ಹಗೆಮಾಡಿದವರೆಲ್ಲರನ್ನೂ ಸಹ ಕೂಡಿಸು ವೆನು; ನಾನು ಅವರನ್ನು ನಿನಗೆ ವಿರುದ್ಧವಾಗಿ ಸುತ್ತಲೂ ಕೂಡಿಸಿ ಅವರಿಗೆ ನಿನ್ನ ಬೆತ್ತಲೆಯನ್ನು ಪ್ರಕಟಪಡಿಸು ವೆನು. ಆಗ ಅವರು ನಿನ್ನ ಬೆತ್ತಲೆಯನ್ನು ನೋಡುವರು.