Deuteronomy · chapter 29 · verse 24
Deuteronomy 29:24 in Kannada
ಯಾಕೆ ಕರ್ತನು ಈ ದೇಶಕ್ಕೆ ಹೀಗೆ ಮಾಡಿದ್ದಾನೆ. ಈ ದೊಡ್ಡ ಕೊಪಾಗ್ನಿ ಏನು ಎಂದು ಜನಾಂಗಗಳೆಲ್ಲಾ ಕೇಳುವರು.
Yaake kartanu ee deshakke heege maadiddaane. Ee dodda kopaagni enu endu janaangagalellaa keluvaru.
Deuteronomy 29:24 in English
- King James Version (KJV)
- Even all nations shall say, Wherefore hath the LORD done thus unto this land? what [meaneth] the heat of this great anger?
- World English Bible (WEB)
- Even all the nations will say, “Why has the LORD done this to this land? What does the heat of this great anger mean?”
- American Standard Version (ASV)
- even all the nations shall say, Wherefore hath Jehovah done thus unto this land? what meaneth the heat of this great anger?
- Bible in Basic English (BBE)
- Truly all the nations will say, Why has the Lord done so to this land? what is the reason for this great and burning wrath?
- Darby Translation (DBY)
- even all nations shall say, Why has Jehovah done thus to this land? whence the heat of this great anger?
- Webster's Bible (WBS)
- Even all the nations shall say, Why hath the LORD done thus to this land? what [meaneth] the heat of this great anger?
- Young's Literal Translation (YLT)
- yea, all the nations have said, Wherefore hath Jehovah done thus to this land? what the heat of this great anger?
Read in context
- 22ಹೀಗೆ ನಿಮ್ಮ ತರುವಾಯ ಹುಟ್ಟುವ ನಿಮ್ಮ ಮಕ್ಕಳ ಮುಂದಿನ ಸಂತತಿಯೂ ದೂರ ದೇಶದಿಂದ ಬರುವ ಅನ್ಯನೂ ಆ ದೇಶದ ಬಾಧೆಗಳನ್ನೂ ಕರ್ತನು ಅದರಲ್ಲಿ ಬರಮಾಡಿದ ರೋಗಗಳನ್ನೂ ನೋಡಿ
- 23ಕರ್ತನು ತನ್ನ ಕೋಪದಲ್ಲಿಯೂ ರೌದ್ರದಲ್ಲಿಯೂ ಕೆಡವಿ ಹಾಕಿದ ಸೊದೋಮ್ ಗೊಮೋರ ಅದ್ಮಾಚೆಬೋ ಯಾಮ್ ಇವುಗಳ ಹಾಗೆ ಆ ದೇಶವೆಲ್ಲಾ ಗಂಧಕವೂ ಉಪ್ಪೂ ಉರಿಯುತ್ತಾ ಬಿತ್ತಲ್ಪಡದೆ ಮೊಳೆಯದೆ ಯಾವ ಹುಲ್ಲನ್ನಾದರೂ ಬೆಳೆಸದೆ ಇರುವದನ್ನು ನೋಡಿ--
- 24ಯಾಕೆ ಕರ್ತನು ಈ ದೇಶಕ್ಕೆ ಹೀಗೆ ಮಾಡಿದ್ದಾನೆ. ಈ ದೊಡ್ಡ ಕೊಪಾಗ್ನಿ ಏನು ಎಂದು ಜನಾಂಗಗಳೆಲ್ಲಾ ಕೇಳುವರು.
- 25ಆಗ ಜನರು--ಅವರು ತಮ್ಮನ್ನು ಐಗುಪ್ತ ದೇಶದೊಳಗಿಂದ ಹೊರಗೆ ತರುವಾಗ ತಮ್ಮ ಪಿತೃಗಳ ದೇವರಾದ ಕರ್ತನು ತಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಮರೆತುಬಿಟ್ಟು,
- 26ಹೋಗಿ ಬೇರೆ ದೇವರುಗಳನ್ನೂ ತಮಗೆ ತಿಳಿಯದಂಥ, ಆತನು ತಮಗೆ ನೇಮಿಸದಂಥ ದೇವರುಗಳನ್ನೂ ಸೇವಿಸಿ ಅಡ್ಡಬಿದ್ದ ದರಿಂದ
Cross references
- Jeremiah 22:8–9 ಯೆರೆಮೀಯ 22:8–9ಅನೇಕ ಜನಾಂಗಗಳು ಈ ಪಟ್ಟಣವನ್ನು ಹಾದುಹೋಗುವರು, ಕರ್ತನು ಈ ದೊಡ್ಡ ಪಟ್ಟಣಕ್ಕೆ ಯಾಕೆ ಈ ಪ್ರಕಾರ ಮಾಡಿ ದ್ದಾನೆಂದು ನೆರೆಯವರು ಒಬ್ಬರಿಗೊಬ್ಬರು ಹೇಳಿಕೊಳ್ಳು ವರು. ಆಗ ಅವರು--ತಮ್ಮ ದೇವರಾದ ಕರ್ತನ ಒಡಂಬಡಿಕೆಯನ್ನು ಬಿಟ್ಟು, ಬೇರೆ ದೇವರುಗಳಿಗೆ ನಮ ಸ್ಕರಿಸಿ ಸೇವಿಸಿದ್ದರಿಂದಲೇ ಎಂದು ಅವರು ಉತ್ತರ ಕೊಡುವರು.
- 1 Kings 9:8–9 1 ಅರಸುಗಳು 9:8–9ಇಸ್ರಾಯೇಲು ಸಮಸ್ತ ಜನಗಳಲ್ಲಿ ಗಾದೆ ಯಾಗಿಯೂ ಅಪಹಾಸ್ಯವಾಗಿಯೂ ಇರುವದು. ಇದ ಲ್ಲದೆ ಈ ಎತ್ತರವಾಗಿರುವ ಮನೆಯನ್ನು ಹಾದುಹೋಗು ವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು--ಛೀ ಅಂದುಕರ್ತನು ಈ ದೇಶಕ್ಕೂ ಈ ಮಂದಿರಕ್ಕೂ ಹೀಗೆ ಯಾಕೆ ಮಾಡಿದನು ಎಂದು ಅನ್ನುವರು. ಅವರು ಪ್ರತ್ಯುತ್ತರವಾಗಿ--ತಮ್ಮ ತಂದೆಗಳನ್ನು ಐಗುಪ್ತದೇಶ ದೊಳಗಿಂದ ಬರಮಾಡಿದ ತಮ್ಮ ದೇವರಾದ ಕರ್ತ ನನ್ನು ಬಿಟ್ಟು ಅನ್ಯದೇವರುಗಳನ್ನು ಹೊಂದಿಕೊಂಡು ಅವುಗಳಿಗೆ ಅಡ್ಬಬಿದ್ದು ಸೇವಿಸಿದ್ದರಿಂದ ಕರ್ತನು ಈ ಕೇಡನ್ನೆಲ್ಲಾ ನಮ್ಮ ಮೇಲೆ ಬರಮಾಡಿದನೆಂದು ಹೇಳು ವರು ಅಂದನು.
- Lamentations 4:12 ಪ್ರಲಾಪಗಳು 4:12ಭೂ ರಾಜರೂ ವಿರೋಧಿಯೂ ಶತ್ರುವೂ ಯೆರೂಸಲೇ ಮಿನಲ್ಲಿ ಪ್ರವೇಶಿಸಿದ್ದನ್ನು ಪ್ರಪಂಚದ ಎಲ್ಲಾ ನಿವಾಸಿಗಳೂ ನಂಬುತ್ತಿರಲಿಲ್ಲ.
- Romans 2:5 ರೋಮಾಪುರದವರಿಗೆ 2:5ಹೀಗೆ ನಿನ್ನ ಕಾಠಿಣ್ಯತೆ ಮತ್ತು ಪಶ್ಚಾತ್ತಾಪವಿಲ್ಲದ ಹೃದಯದಿಂದ ಉಗ್ರತೆಯ ದಿನಕ್ಕಾಗಿಯೂ ದೇವರ ನೀತಿಯುಳ್ಳ ನ್ಯಾಯತೀರ್ವಿಕೆಯ ಪ್ರತ್ಯಕ್ಷತೆಗಾಗಿಯೂ ದೇವರ ಕೋಪವನ್ನು ನಿನಗೋಸ್ಕರ ಕೂಡಿಸಿಟ್ಟುಕೊಳ್ಳುತ್ತಾ ಇದ್ಧೀ.
- Ezekiel 14:23 ಯೆಹೆಜ್ಕೇಲನು 14:23ನೀವು ಅದರ ದುರ್ಮಾರ್ಗಗಳನ್ನೂ ದುಷ್ಕೃತ್ಯ ಗಳನ್ನೂ ನೋಡುವಾಗ ಅದರಿಂದಲೇ ನಿಮಗೆ ಸಮಾಧಾನವಾಗುವದು; ನಾನು ಅದರೊಳಗೆ ಮಾಡಿದ್ದೆಲ್ಲವು ಕಾರಣವಿಲ್ಲದೆ ಮಾಡಲಿಲ್ಲವೆಂದು ತಿಳಿದುಕೊಳ್ಳುವಿರಿ ಎಂದು ದೇವರಾದ ಕರ್ತನು ಹೇಳುತ್ತಾನೆ.
- Lamentations 2:15–17 ಪ್ರಲಾಪಗಳು 2:15–17ದಾರಿಯಲ್ಲಿ ಹೋಗುವವ ರೆಲ್ಲರೂ ನಿನ್ನ ವಿಷಯದಲ್ಲಿ ತಮ್ಮ ಕೈಗಳನ್ನು ತಟ್ಟುತ್ತಾರೆ; ಅವರು ಯೆರೂಸಲೇಮಿನ ಕುಮಾರ್ತೆಯ ವಿಷಯದಲ್ಲಿ ಸಿಳ್ಳು ಹಾಕಿ ತಲೆಯಾಡಿಸಿ--ಆ ಮನುಷ್ಯರು ಕರೆಯು ತ್ತಿದ್ದ ಸೌಂದರ್ಯದ ಸಂಪೂರ್ಣತೆಯೂ ಸರ್ವ ಭೂಮಿಯ ಸಂತೋಷವೂ ಆಗಿರುವ ನಗರಿಯು ಇದೇಯೋ? ನಿನ್ನ ಎಲ್ಲಾ ಶತ್ರುಗಳು ನಿನಗೆ ವಿರೋಧವಾಗಿ ತಮ್ಮ ಬಾಯಿ ತೆರೆದಿದ್ದಾರೆ; ಅವರು ಸಿಳ್ಳು ಹಾಕಿ ಹಲ್ಲು ಕಡಿಯುತ್ತಾ--ನಾವು ಅವಳನ್ನು ನುಂಗಿ ಬಿಟ್ಟಿದ್ದೇವೆ; ನಿಶ್ಚಯವಾಗಿ ನಾವು ನಿರೀಕ್ಷಿಸಿದ ದಿನವು ಇದೇ; ಅದನ್ನು ನಾವು ಕಂಡಿದ್ದೇವೆ; ನೋಡಿ ದ್ದೇವೆ ಎಂದು ಅವರು ಹೇಳುತ್ತಾರೆ. ಕರ್ತನು ತಾನು ಸಂಕಲ್ಪಿಸಿದ್ದನ್ನು ಮಾಡಿದ್ದಾನೆ; ಆತನು ಪುರಾತನ ಕಾಲದ ದಿನಗಳಲ್ಲಿ ಆಜ್ಞಾಪಿಸಿದ ತನ್ನ ವಾಕ್ಯವನ್ನು ಪೂರೈಸಿದ್ದಾನೆ. ಆತನು ಕೆಡವಿ ಕನಿಕರಿಸಲಿಲ್ಲ; ಆತನು ನಿನ್ನ ಶತ್ರುವನ್ನು ನಿನ್ನ ವಿಷಯವಾಗಿ ಸಂತೋಷಪಡುವ ಹಾಗೆ ಮಾಡಿ ಅವನ ಕೊಂಬನ್ನು ಎತ್ತಿದ್ದಾನೆ.
- 2 Chronicles 7:21–22 2 ಪೂರ್ವಕಾಲವೃತ್ತಾಂತ 7:21–22ಎತ್ತರವಾಗಿರುವ ಈ ಮನೆಯು ಹಾದು ಹೋಗುವ ಪ್ರತಿ ಮನುಷ್ಯನಿಗೆ ಆಶ್ಚರ್ಯ ವಾಗಿರುವದು; ಅವನು ಈ ದೇಶಕ್ಕೂ ಈ ಮನೆಗೂ ಕರ್ತನು ಹೀಗೆ ಯಾಕೆ ಮಾಡಿದನು ಅನ್ನುವನು.ಅದಕ್ಕೆ ಅವರು ತಂದೆಗಳನ್ನು ಐಗುಪ್ತದೇಶ ದೊಳಗಿಂದ ಬರಮಾಡಿದ ತಮ್ಮ ದೇವರಾದ ಕರ್ತ ನನ್ನು ತೊರೆದು ಅನ್ಯದೇವರುಗಳನ್ನು ಹಿಂಬಾಲಿಸಿ ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದ ಆತನು ಈ ಕೇಡೆಲ್ಲಾ ಅವರ ಮೇಲೆ ಬರಮಾಡಿದನು ಎಂದು ಹೇಳುವರು. ಅದಕ್ಕೆ ಅವರು ತಂದೆಗಳನ್ನು ಐಗುಪ್ತದೇಶ ದೊಳಗಿಂದ ಬರಮಾಡಿದ ತಮ್ಮ ದೇವರಾದ ಕರ್ತ ನನ್ನು ತೊರೆದು ಅನ್ಯದೇವರುಗಳನ್ನು ಹಿಂಬಾಲಿಸಿ ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದ ಆತನು ಈ ಕೇಡೆಲ್ಲಾ ಅವರ ಮೇಲೆ ಬರಮಾಡಿದನು ಎಂದು ಹೇಳುವರು.