Deuteronomy · chapter 3 · verse 15
Deuteronomy 3:15 in Kannada
ಗಿಲ್ಯಾದನ್ನು ಮಾಕೀರನಿಗೆ ಕೊಟ್ಟೆನು.
Gilyaadannu maakeeranige kottenu.
Deuteronomy 3:15 in English
- King James Version (KJV)
- And I gave Gilead unto Machir.
- World English Bible (WEB)
- I gave Gilead to Machir.
- American Standard Version (ASV)
- And I gave Gilead unto Machir.
- Bible in Basic English (BBE)
- And Gilead I gave to Machir.
- Darby Translation (DBY)
- And I gave Gilead to Machir.
- Webster's Bible (WBS)
- And I gave Gilead to Machir.
- Young's Literal Translation (YLT)
- And to Machir I have given Gilead.
Read in context
- 13ಮಿಕ್ಕ ಗಿಲ್ಯಾದನ್ನೂ ಓಗನ ರಾಜ್ಯವಾದ ಎಲ್ಲಾ ಬಾಷಾನನ್ನೂ ಮನಸ್ಸೆಯ ಅರ್ಧ ಕುಲಕ್ಕೆ ಕೊಟ್ಟೆನು; ಅರ್ಗೋಬಿನ ಸಮಸ್ತ ಸೀಮೆಯನ್ನೂ ಮಹಾಶರೀರಗಳ ದೇಶವೆಂದು ಹೇಳ ಲ್ಪಟ್ಟ ಸಮಸ್ತ ಭಾಷಾನನ್ನು ಅವರಿಗೆ ಕೊಟ್ಟೆನು.
- 14ಮನಸ್ಸೆಯ ಮಗನಾದ ಯಾಯಾರನು ಅರ್ಗೋ ಬಿನ ದೇಶವನ್ನೆಲ್ಲಾ ಗೆಷೂರ್ಯರ, ಮಾಕಾತ್ಯರ ಮೇರೆಯ ವರೆಗೆ ತಕ್ಕೊಂಡು ಆ ಬಾಷಾನಿಗೆ ತನ್ನ ಹೆಸರಿನ ಪ್ರಕಾರ ಇಂದಿನ ವರೆಗೆ ಹವ್ವೊತ್ ಯಾಯಾ ರೆಂದು ಹೆಸರಿಟ್ಟನು.
- 15ಗಿಲ್ಯಾದನ್ನು ಮಾಕೀರನಿಗೆ ಕೊಟ್ಟೆನು.
- 16ರೂಬೇನನ ಮನೆಯವರಿಗೂ ಗಾದನ ಮನೆಯವರಿಗೂ ಗಿಲ್ಯಾದ್ ಮೊದಲುಗೊಂಡು ಅರ್ನೋನ್ ನದಿಯ ವರೆಗೆ ಕೊಟ್ಟೆನು.
- 17ಬೈಲನ್ನೂ ಯೊರ್ದನನ್ನೂ ಅದರ ಸೀಮೆಯನ್ನೂ ಕಿನ್ನೆರೆತ್ ಮೊದಲುಗೊಂಡು ಪೂರ್ವದಲ್ಲಿರುವ ಅಷ್ಡೋದ್ ಪಿಸ್ಗಾದ ಕೆಳಗಿರುವ ಉಪ್ಪಿನಸಮುದ್ರವಾದ ಬೈಲು ಸಮುದ್ರದ ವರೆಗೆ ಕೊಟ್ಟೆನು.
Cross references
- Numbers 32:39–40 ಅರಣ್ಯಕಾಂಡ 32:39–40ಮನಸ್ಸೆಯ ಮಗನಾದ ಮಾಕೀರನ ಮಕ್ಕಳು ಗಿಲ್ಯಾದ್ ದೇಶಕ್ಕೆ ಹೋಗಿ ಅದನ್ನು ತಕ್ಕೊಂಡು, ಅದರಲ್ಲಿದ್ದ ಅಮೋರಿಯರನ್ನು ಹೊರಡಿಸಿದರು. ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗನಾದ ಮಾಕೀರನಿಗೆ ಕೊಟ್ಟದ್ದರಿಂದ ಅವನು ಅದರಲ್ಲಿ ವಾಸಿ ಸಿದನು.
- Joshua 22:7 ಯೆಹೋಶುವ 22:7ಮನಸ್ಸೆಯ ಅರ್ಧ ಗೋತ್ರಕ್ಕೆ ಮೋಶೆಯು ಬಾಷಾನಿನಲ್ಲಿ ಸ್ವಾಸ್ತ್ಯ ಕೊಟ್ಟಿದ್ದನು. ಆದರೆ ಅವರ ಉಳಿದ ಅರ್ಧ ಗೋತ್ರಕ್ಕೆ ಯೆಹೋ ಶುವನು ಯೊರ್ದನಿನ ಪಶ್ಚಿಮಕ್ಕೆ ಅವರ ಸಹೋದರರ ನಡುವೆ ಸ್ವಾಸ್ತ್ಯವನ್ನು ಕೊಟ್ಟನು. ಇದಲ್ಲದೆ ಯೆಹೋ ಶುವನು ಅವರನ್ನು ಅವರ ಡೇರೆಗಳಿಗೆ ಕಳುಹಿಸಿ ಬಿಡುವಾಗ ಅವರನ್ನು ಆಶೀರ್ವದಿಸಿದನು.
- Numbers 26:29 ಅರಣ್ಯಕಾಂಡ 26:29ಮಾಕೀರನು ಗಿಲ್ಯಾದನನ್ನು ಪಡೆದನು; ಗಿಲ್ಯಾದ ನಿಂದ ಗಿಲ್ಯಾದ್ಯರ ಕುಟುಂಬ;
- Genesis 50:23 ಆದಿಕಾಂಡ 50:23ಯೋಸೇಫನು ಎಫ್ರಾಯಾಮಿನ ಮರಿ ಮೊಮ್ಮಕ್ಕ ಳನ್ನೂ ನೋಡಿದನು. ಮನಸ್ಸೆಯ ಮಗನಾದ ಮಾಕೀ ರನ ಮಕ್ಕಳು ಸಹ ಯೋಸೇಫನ ತೊಡೆಯ ಮೇಲೆಯೇ ಬೆಳೆದರು.
- Joshua 17:1–3 ಯೆಹೋಶುವ 17:1–3ಇದಲ್ಲದೆ ಮನಸ್ಸೆಯ ಗೋತ್ರಕ್ಕೂ ಭಾಗಸಿಕ್ಕಿತು. ಯಾಕಂದರೆ ಅವನು ಯೋಸೇಫ ನಿಗೆ ಚೊಚ್ಚಲ ಮಗನಾಗಿದ್ದನು. ಮನಸ್ಸೆಯ ಹಿರಿಯ ಮಗನಾದ ಗಿಲ್ಯಾದನ ತಂದೆಯಾದ ಮಾಕೀರನು ಶೂರನಾದದರಿಂದ ಗಿಲ್ಯಾದು ಬಾಷಾನು ಅವನ ಪಾಲಿಗೆ ಬಂದವು; ಮನಸ್ಸೆಯ ಉಳಿದ ಮಕ್ಕಳಾದ ಅಬೀಯೇಜೆರಿನ ಮಕ್ಕಳಿಗೂ ಹೇಲೆಕನ ಮಕ್ಕಳಿಗೂ ಅಸ್ರೀಯೇಲನ ಮಕ್ಕಳಿಗೂ ಶೆಕೆಮನ ಮಕ್ಕಳಿಗೂ ಹೇಫೆರನ ಮಕ್ಕಳಿಗೂ ಶೆವಿಾದನನ ಮಕ್ಕಳಿಗೂ ಅವರ ಕುಟುಂಬಗಳಿಗೆ ತಕ್ಕ ಬಾಧ್ಯತೆ ಉಂಟಾಯಿತು. ಇವರು ತಮ್ಮ ಕುಟುಂಬಗಳ ಪ್ರಕಾರ ಯೋಸೇಫನ ಮಗ ನಾದ ಮನಸ್ಸೆಯ ಗಂಡು ಮಕ್ಕಳಾಗಿದ್ದವರು. ಆದರೆ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ ಗಿಲ್ಯಾ ದನ ಮೊಮ್ಮಗನೂ ಹೇಫೆರನ ಮಗನಾದ ಚಲ್ಪಹಾದನಿಗೆ ಕುಮಾರರಿಲ್ಲ; ಆದರೆ ಮಹ್ಲಾ, ನೋವಾ, ಹೋಗ್ಲಾ, ಮಿಲ್ಕಾ, ತಿರ್ಚಾ ಎಂಬ ಹೆಸರುಳ್ಳ ಕುಮಾರ್ತೆ ಯರಿದ್ದರು.