Deuteronomy · chapter 3 · verse 26
Deuteronomy 3:26 in Kannada
ಆದರೆ ಕರ್ತನು ನಿಮಗೋಸ್ಕರ ನನ್ನ ಮೇಲೆ ಕೋಪಗೊಂಡು ನನ್ನ ಮನವಿಯನ್ನು ಕೇಳಲಿಲ್ಲ; ಕರ್ತನು ನನಗೆ--ಇನ್ನು ಸಾಕು; ಈ ವಿಷಯ ದಲ್ಲಿ ನನ್ನ ಸಂಗಡ ಇನ್ನೂ ಮಾತನಾಡಬೇಡ.
Aadare kartanu nimagoskara nanna mele kopagondu nanna manaviyannu kelalilla; kartanu nanage--innu saaku; ee vishaya dalli nanna sangada innoo maatanaadabeda.
Deuteronomy 3:26 in English
- King James Version (KJV)
- But the LORD was wroth with me for your sakes, and would not hear me: and the LORD said unto me, Let it suffice thee; speak no more unto me of this matter.
- World English Bible (WEB)
- But the LORD was angry with me because of you, and didn’t listen to me. The LORD said to me, “That is enough! Speak no more to me of this matter.
- American Standard Version (ASV)
- But Jehovah was wroth with me for your sakes, and hearkened not unto me; and Jehovah said unto me, Let it suffice thee; speak no more unto me of this matter.
- Bible in Basic English (BBE)
- But the Lord was angry with me because of you and would not give ear to my prayer; and the Lord said to me, Let it be enough, say no more about this thing.
- Darby Translation (DBY)
- But Jehovah was wroth with me on your account, and did not hear me; and Jehovah said to me, Let it suffice thee; speak no more unto me of this matter!
- Webster's Bible (WBS)
- But the LORD was wroth with me for your sakes, and would not hear me: and the LORD said to me, Let it suffice thee; speak no more to me of this matter.
- Young's Literal Translation (YLT)
- 'And Jehovah sheweth himself wroth with me, for your sake, and hath not hearkened unto me, and Jehovah saith unto me, Enough for thee; add not to speak unto Me any more about this thing:
Read in context
- 24ನನ್ನ ದೇವರಾದ ಕರ್ತನೇ, ನೀನು ನಿನ್ನ ಸೇವಕನಿಗೆ ನಿನ್ನ ಮಹಿಮೆಯನ್ನೂ ನಿನ್ನ ಕೈಯ ಶಕ್ತಿಯನ್ನೂ ತೋರಿಸುವದಕ್ಕೆ ಆರಂಭಮಾಡಿದಿ; ನಿನ್ನ ಕೃತ್ಯಗಳ ಹಾಗೆಯೂ ನಿನ್ನ ಪರಾಕ್ರಮದ ಹಾಗೆಯೂ ಮಾಡಲು ಶಕ್ತನಾದ ದೇವರು ಪರಲೋಕದಲ್ಲಾಗಲಿ ಭೂಮಿಯಲ್ಲಾಗಲಿ ಯಾರಿದ್ದಾರೆ? ನಾನು ದಾಟಿ ಹೋಗಿ
- 25ಯೊರ್ದನಿನ ಆಚೆಯಲ್ಲಿರುವ ಆ ಒಳ್ಳೇ ದೇಶವನ್ನೂ ಆ ಒಳ್ಳೇ ಬೆಟ್ಟವನ್ನೂ ಲೆಬನೋನನ್ನೂ ನೋಡುವದಕ್ಕೆ ಅಪ್ಪಣೆಯಾಗಬೇಕು ಎಂಬದೇ.
- 26ಆದರೆ ಕರ್ತನು ನಿಮಗೋಸ್ಕರ ನನ್ನ ಮೇಲೆ ಕೋಪಗೊಂಡು ನನ್ನ ಮನವಿಯನ್ನು ಕೇಳಲಿಲ್ಲ; ಕರ್ತನು ನನಗೆ--ಇನ್ನು ಸಾಕು; ಈ ವಿಷಯ ದಲ್ಲಿ ನನ್ನ ಸಂಗಡ ಇನ್ನೂ ಮಾತನಾಡಬೇಡ.
- 27ಪಿಸ್ಗಾದ ತುದಿಗೆ ಏರಿ ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಪೂರ್ವಕ್ಕೂ ಕಣ್ಣುಗಳನ್ನೆತ್ತಿ ಅದನ್ನು ಕಣ್ಣಾರೆ ನೋಡು; ಆದರೆ ಈ ಯೊರ್ದನನ್ನು ನೀನು ದಾಟಿಹೋಗುವದಿಲ್ಲ.
- 28ಆದರೆ ಯೆಹೋಶು ವನಿಗೆ ಆಜ್ಞಾಪಿಸಿ ಅವನಿಗೆ ದೃಢಮಾಡಿ ಬಲಪಡಿಸು; ಅವನು ಈ ಜನರ ಮುಂದೆ ದಾಟಿಹೋಗಿ ನೀನು ನೋಡುವ ದೇಶವನ್ನು ಅವರಿಗೆ ಸ್ವಾಸ್ತ್ಯ ವಾಗಿ ಹೊಂದುವಂತೆ ಮಾಡುವನು ಎಂದು ಹೇಳಿದನು.ಆಗ ನಾವು ಬೇತ್ಪೆಗೋರಿಗೆ ಎದುರಾಗಿರುವ ತಗ್ಗಿನಲ್ಲಿ ವಾಸವಾಗಿದ್ದೆವು.
Cross references
- Deuteronomy 1:37 ಧರ್ಮೋಪದೇಶಕಾಂಡ 1:37ನನ್ನ ಮೇಲೆಯೂ ಕರ್ತನು ನಿಮ್ಮ ದೆಸೆಯಿಂದ ಕೋಪಗೊಂಡು--ನೀನು ಸಹ ಅದರಲ್ಲಿ ಪ್ರವೇಶಿಸು ವದಿಲ್ಲ.
- Deuteronomy 31:2 ಧರ್ಮೋಪದೇಶಕಾಂಡ 31:2ಅವನು ಅವರಿಗೆ--ನಾನು ಈಹೊತ್ತು ನೂರ ಇಪ್ಪತ್ತು ವರುಷದವನಾಗಿದ್ದೇನೆ; ನಾನು ಇನ್ನು ಹೊರಗೆ ಹೋಗುವದಕ್ಕೂ ಬರುವದಕ್ಕೂ ಶಕ್ತನಲ್ಲ; ಇದಲ್ಲದೆ ಕರ್ತನು ನನಗೆ--ನೀನು ಈ ಯೊರ್ದನನ್ನು ದಾಟುವದಿ ಲ್ಲವೆಂದು ಹೇಳಿದ್ದಾನೆ.
- 1 Chronicles 28:2–4 1 ಪೂರ್ವಕಾಲವೃತ್ತಾಂತ 28:2–4ಆಗ ಅರಸನಾದ ದಾವೀದನು ಎದ್ದು ನಿಂತು ಹೇಳಿದ್ದೇನಂದರೆ--ನನ್ನ ಸಹೋದರರೇ, ನನ್ನ ಜನರೇ, ನನ್ನ ಮಾತು ಕೇಳಿರಿ, ಕರ್ತನ ಒಡಂಬಡಿ ಕೆಯ ಮಂಜೂಷದ ನಿಮಿತ್ತವಾಗಿಯೂ ನಮ್ಮ ದೇವರ ಪಾದಪೀಠದ ನಿಮಿತ್ತವಾಗಿಯೂ ವಿಶ್ರಾಂತಿಯಾದ ಮನೆಯನ್ನು ನಾನು ಕಟ್ಟಿಸಲು ಮನಸ್ಸಾಗಿದ್ದು ಕಟ್ಟುವಿ ಕೆಯ ನಿಮಿತ್ತ ಸಿದ್ಧಮಾಡಿದೆನು. ಆದರೆ ದೇವರು ನನಗೆ--ನೀನು ನನ್ನ ಹೆಸರಿಗೆ ಮನೆಯನ್ನು ಕಟ್ಟಬೇಡ; ಯಾಕಂದರೆ ನೀನು ಯುದ್ಧದ ಮನುಷ್ಯನಾಗಿದ್ದೀ; ರಕ್ತವನ್ನು ಚೆಲ್ಲಿದ್ದೀ ಅಂದನು. ಆದರೆ ಇಸ್ರಾಯೇಲಿನ ಕರ್ತನಾದ ದೇವರು ಎಂದೆಂದಿಗೂ ಇಸ್ರಾಯೇಲಿನ ಮೇಲೆ ಅರಸನಾಗಿರಲು ನನ್ನ ತಂದೆಯ ಮನೆಯ ಸಮಸ್ತರಿಂದ ನನ್ನನ್ನು ಆದುಕೊಂಡನು. ಯಾಕಂದರೆ ನಾನು ನಾಯಕನಾಗಿರಲು ಯೆಹೂದನನ್ನೂ ಯೆಹೂ ದನ ಮನೆಯಲ್ಲಿ ನನ್ನ ತಂದೆಯ ಮನೆಯನ್ನೂ ಆದು ಕೊಂಡು ನನ್ನ ತಂದೆಯ ಕುಮಾರರಲ್ಲಿ ನನ್ನನ್ನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗ ಮಾಡಲು ಚಿತ್ತ ವುಳ್ಳವನಾಗಿದ್ದನು;
- Psalm 106:32–33 ಕೀರ್ತನೆಗಳು 106:32–33ಅವರು ವಿವಾದದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು; ಅವರ ನಿಮಿತ್ತ ಮೋಶೆಗೆ ಕೇಡು ಬಂತು. ಅವರು ದೇವರಾತ್ಮನನ್ನು ಕೆಣ ಕಿದರು; ಆದದರಿಂದ ಅವನು ಬುದ್ಧಿಹೀನತೆಯಿಂದ ಮಾತನಾಡಿದನು.
- 2 Corinthians 12:8 2 ಕೊರಿಂಥದವರಿಗೆ 12:8ಈ ವಿಷಯದಲ್ಲಿ ಅದು ನನ್ನನ್ನು ಬಿಟ್ಟುಹೋಗಬೇಕೆಂದು ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು.
- 1 Chronicles 22:7–9 1 ಪೂರ್ವಕಾಲವೃತ್ತಾಂತ 22:7–9ದಾವೀ ದನು ಹೇಳಿದ್ದೇನಂದರೆ--ನನ್ನ ಮಗನೇ, ನಾನು ನನ್ನ ದೇವರಾದ ಕರ್ತನ ನಾಮಕ್ಕೆ ಮನೆಯನ್ನು ಕಟ್ಟಿಸ ಬೇಕೆಂಬದು ನನ್ನ ಹೃದಯದಲ್ಲಿ ಇತ್ತು. ಆದರೆ ಕರ್ತ ನಿಂದ ನನಗುಂಟಾದ ವಾಕ್ಯವೇನಂದರೆ--ನೀನು ಬಹು ರಕ್ತವನ್ನು ಚೆಲ್ಲಿದ್ದೀ; ಮಹಾಯುದ್ಧಗಳನ್ನು ಮಾಡಿದ್ದೀ; ನೀನು ನನ್ನ ಹೆಸರಿಗೆ ಮನೆಯನ್ನು ಕಟ್ಟಿಸಬೇಡ; ಯಾಕಂದರೆ ನೀನು ನನ್ನ ಸಮ್ಮುಖದಲ್ಲಿ ಭೂಮಿಯ ಮೇಲೆ ಬಹಳ ರಕ್ತವನ್ನು ಸುರಿಸಿದ್ದಿ. ಇಗೋ, ಸಮಾ ಧಾನವುಳ್ಳ ಮನುಷ್ಯನಾಗಿರುವ ಒಬ್ಬ ಮಗನು ನಿನಗೆ ಹುಟ್ಟುವನು; ಸುತ್ತಲಿರುವ ಅವನ ಸಮಸ್ತ ಶತ್ರುಗಳಿಂದ ನಾನು ಅವನಿಗೆ ಸಮಾಧಾನವನ್ನು ಕೊಡುವೆನು. ಅವ ನಿಗೆ ಸೊಲೊಮೋನನೆಂಬ ಹೆಸರಾಗುವದು; ಅವನ ದಿವಸಗಳಲ್ಲಿ ನಾನು ಇಸ್ರಾಯೇಲಿಗೆ ಸಮಾಧಾನ ವನ್ನೂ ವಿಶ್ರಾಂತಿಯನ್ನೂ ಕೊಡುವೆನು.
- Matthew 26:39 ಮತ್ತಾಯನು 26:39ಆಮೇಲೆ ಆತನು ಸ್ವಲ್ಪದೂರ ಹೋಗಿ ಅಡ್ಡಬಿದ್ದು ಪ್ರಾರ್ಥಿ ಸುತ್ತಾ--ಓ ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ; ಆದಾಗ್ಯೂ ನನ್ನ ಚಿತ್ತದಂತಲ್ಲ; ನಿನ್ನ ಚಿತ್ತದಂತೆಯೇ ಆಗಲಿ ಅಂದನು.
- Isaiah 53:5–6 ಯೆಶಾಯ 53:5–6ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು; ನಮ್ಮ ಸಮಾಧಾನಕ್ಕೆ ಕಾರಣವಾದ ಶಿಕ್ಷೆಯು ಆತನ ಮೇಲೆ ಬಿತ್ತು; ಆತನ ಬಾಸುಂಡೆ ಗಳಿಂದ ನಮಗೆ ಸ್ವಸ್ಥವಾಯಿತು. ನಾವೆಲ್ಲರೂ ದಾರಿ ತಪ್ಪಿದ ಕುರಿಗಳಂತಿದ್ದೆವು; ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು; ಕರ್ತನು ನಮ್ಮ ದುಷ್ಕೃತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು.
- Numbers 20:7–12 ಅರಣ್ಯಕಾಂಡ 20:7–12ಆಗ ಕರ್ತನು ಮೋಶೆಯ ಸಂಗಡ ಮಾತನಾಡಿ-- ಕೋಲನ್ನು ತಕ್ಕೊಂಡು ನೀನು ನಿನ್ನ ಸಹೋದರನಾದ ಆರೋನನು ಸಭೆಯನ್ನು ಕೂಡಿಸಿ ಕೊಂಡು ಅವರ ಕಣ್ಣುಗಳ ಮುಂದೆ ಬಂಡೆಯ ಸಂಗಡ ಮಾತನಾಡಿರಿ; ಅದು ತನ್ನ ನೀರನ್ನು ಕೊಡುವದು; ನೀನು ಅವರಿಗೋಸ್ಕರ ಬಂಡೆಯೊಳಗಿಂದ ನೀರನ್ನು ಹೊರಗೆ ತರುವಿ; ಸಭೆಗೂ ಅವರ ಪಶುಗಳಿಗೂ ನೀನು ಕುಡಿಯಲು ಕೊಡುವಿ ಎಂದು ಹೇಳಿದನು. ಆಗ ಕರ್ತನು ಆಜ್ಞಾಪಿಸಿದ ಹಾಗೆ ಮೋಶೆಯು ಆತನ ಸನ್ನಿಧಿಯಿಂದ ಕೋಲನ್ನು ತಕ್ಕೊಂಡನು. ಮೋಶೆಯೂ ಆರೋನನೂ ಸಭೆಯನ್ನು ಬಂಡೆಯ ಮುಂದೆ ಕೂಡಿಸಿ ಅವರಿಗೆ--ತಿರುಗಿಬಿದ್ದವರೇ, ಕೇಳಿರಿ; ನಾವು ನಿಮಗೋಸ್ಕರ ಈ ಬಂಡೆಯೊಳಗಿಂದ ನೀರನ್ನು ಹೊರಡಿಸಬೇಕೋ ಎಂದು ಹೇಳಿದರು. ಮೋಶೆಯು ತನ್ನ ಕೈಯನ್ನು ಎತ್ತಿ ತನ್ನ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು; ಆಗ ಬಹಳ ನೀರು ಹೊರಗೆ ಬಂತು; ಸಭೆಯೂ ಅವರ ಪಶುಗಳೂ ಕುಡಿದವು. ಆಗ ಕರ್ತನು ಮೋಶೆ ಆರೋನನ ಸಂಗಡ ಮಾತನಾಡಿ--ನೀವು ಇಸ್ರಾಯೇಲ್ ಮಕ್ಕಳ ಕಣ್ಣುಗಳ ಮುಂದೆ ನನ್ನನ್ನು ಪರಿಶುದ್ಧಮಾಡುವದಕ್ಕೆ ನನ್ನಲ್ಲಿ ವಿಶ್ವಾಸಿ ಸದೆ ಇದ್ದ ಕಾರಣ ನಾನು ಅವರಿಗೆ ಕೊಟ್ಟ ದೇಶದಲ್ಲಿ ನೀವು ಸಮೂಹವನ್ನು ಸೇರಿಸುವದಿಲ್ಲ ಅಂದನು.
- Numbers 27:12–14 ಅರಣ್ಯಕಾಂಡ 27:12–14ಆಗ ಕರ್ತನು ಮೋಶೆಗೆ--ನೀನು ಈ ಅಬಾ ರೀಮ್ ಪರ್ವತದ ಮೇಲೆ ಏರಿ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಟ್ಟ ದೇಶವನ್ನು ನೋಡು. ಅದನ್ನು ನೋಡಿದ ಮೇಲೆ ನೀನು ಸಹ ನಿನ್ನ ಸಹೋದರನಾದ ಆರೋನನ ಪ್ರಕಾರ ನಿನ್ನ ಜನರ ಸಂಗಡ ಕೂಡಿಸ ಲ್ಪಡುವಿ. ನೀವು ಜಿನ್ ಎಂಬ ಮರುಭೂಮಿಯ ಲ್ಲಿಯೂ ಸಭೆಯ ವಾಗ್ವಾದದಲ್ಲಿಯೂ ಅವರಿಗೆದು ರಾಗಿ ನೀರಿನ ಬಳಿಯಲ್ಲಿ ನನ್ನನ್ನು ಪರಿಶುದ್ಧ ಮಾಡದೆ ನನ್ನ ಆಜ್ಞೆಯನ್ನು ವಿಾರಿದಿರಿ. ಆ ನೀರು ಅಂದರೆ ಜಿನ್ ಎಂಬ ಅರಣ್ಯದ ಕಾದೇಶಿನಲ್ಲಿರುವ ಮೆರೀಬಾದ ನೀರು ಅಂದನು.
- Deuteronomy 34:4 ಧರ್ಮೋಪದೇಶಕಾಂಡ 34:4ಕರ್ತನು ಅವನಿಗೆ--ನಾನು ನಿನ್ನ ಸಂತತಿಗೆ ಕೊಡುತ್ತೇನೆಂದು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಪ್ರಮಾಣಮಾಡಿದ ದೇಶವು ಇದೇ. ಅದನ್ನು ನಿನಗೆ ತೋರಿಸಿದೆನು; ಆದರೆ ನೀನು ಅಲ್ಲಿಗೆ ದಾಟಿ ಸೇರುವದಿಲ್ಲ ಎಂದು ಹೇಳಿದನು.
- Deuteronomy 32:51–52 ಧರ್ಮೋಪದೇಶಕಾಂಡ 32:51–52ಕಾರಣವೇನಂದರೆ, ನೀವು ಜಿನ್ ಅರಣ್ಯದಲ್ಲಿ ಕಾದೇಶಿನ ಮೆರೀಬಾದ ನೀರಿನ ಬಳಿಯಲ್ಲಿ ನನ್ನನ್ನು ಇಸ್ರಾಯೇಲ್ ಮಕ್ಕಳಲ್ಲಿ ಪರಿಶುದ್ಧ ಮಾಡದೆ ನನಗೆ ವಿರೋಧವಾಗಿ ಆಜ್ಞೆ ವಿಾರಿದಿರಿ.ನೀನು ಆ ದೇಶವನ್ನು ಕಣ್ಣಾರೆ ನೋಡುವಿ; ಆದರೆ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ದೇಶದಲ್ಲಿ ನೀನು ಪ್ರವೇಶಿಸುವದಿಲ್ಲ ಎಂದು ಹೇಳಿದನು. ನೀನು ಆ ದೇಶವನ್ನು ಕಣ್ಣಾರೆ ನೋಡುವಿ; ಆದರೆ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ದೇಶದಲ್ಲಿ ನೀನು ಪ್ರವೇಶಿಸುವದಿಲ್ಲ ಎಂದು ಹೇಳಿದನು.