Luke · chapter 6 · verse 30
Luke 6:30 in Kannada
ನಿನ್ನಿಂದ ಕೇಳುವ ಪ್ರತಿ ಮನುಷ್ಯನಿಗೆ ಕೊಡು; ನಿನ್ನ ಸೊತ್ತನ್ನು ತಕ್ಕೊಳ್ಳುವವನಿಂದ ಅವುಗಳನ್ನು ತಿರಿಗಿ ಕೇಳಬೇಡ.
Ninninda keluva prati manushyanige kodu; ninna sottannu takkolluvavaninda avugalannu tirigi kelabeda.
Luke 6:30 in English
- King James Version (KJV)
- Give to every man that asketh of thee; and of him that taketh away thy goods ask [them] not again.
- World English Bible (WEB)
- Give to everyone who asks you, and don’t ask him who takes away your goods to give them back again.
- American Standard Version (ASV)
- Give to every one that asketh thee; and of him that taketh away thy goods ask them not again.
- Bible in Basic English (BBE)
- Give to everyone who comes with a request, and if a man takes away your property, make no attempt to get it back again.
- Darby Translation (DBY)
- To every one that asks of thee, give; and from him that takes away what is thine, ask it not back.
- Webster's Bible (WBS)
- Give to every man that asketh of thee; and of him that taketh away thy goods, ask [them] not again.
- Young's Literal Translation (YLT)
- 'And to every one who is asking of thee, be giving; and from him who is taking away thy goods, be not asking again;
Read in context
- 28ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ ಮತ್ತು ನಿಮ್ಮನ್ನು ಅವಮಾನ ಪಡಿಸುವವರಿಗೋಸ್ಕರ ಪ್ರಾರ್ಥಿಸಿರಿ.
- 29ಒಂದು ಕೆನ್ನೆಯ ಮೇಲೆ ನಿನ್ನನ್ನು ಹೊಡೆಯುವವನಿಗೆ ಮತ್ತೊಂದನ್ನು ಸಹ ಕೊಡು; ನಿನ್ನ ಮೇಲಂಗಿಯನ್ನು ತಕ್ಕೊಳ್ಳುವವನಿಗೆ ನಿನ್ನ ಒಳಂಗಿಯನ್ನು ತಡೆಯಬೇಡ.
- 30ನಿನ್ನಿಂದ ಕೇಳುವ ಪ್ರತಿ ಮನುಷ್ಯನಿಗೆ ಕೊಡು; ನಿನ್ನ ಸೊತ್ತನ್ನು ತಕ್ಕೊಳ್ಳುವವನಿಂದ ಅವುಗಳನ್ನು ತಿರಿಗಿ ಕೇಳಬೇಡ.
- 31ಜನರು ನಿಮಗೆ ಏನು ಮಾಡಬೇಕೆಂದು ನೀವು ಕೋರುತ್ತೀರೋ ನೀವು ಸಹ ಅವರಿಗೆ ಅದ ರಂತೆಯೇ ಮಾಡಿರಿ.
- 32ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ತಮ್ಮನ್ನು ಪ್ರೀತಿಸುವವ ರನ್ನೇ ಪ್ರೀತಿಸುತ್ತಾರೆ.
Cross references
- Deuteronomy 15:7–10 ಧರ್ಮೋಪದೇಶಕಾಂಡ 15:7–10ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಲ್ಲಿ ನಿನ್ನ ಬಾಗಲುಗಳ ಒಂದರಲ್ಲಿ ನಿನ್ನ ಸಹೋದರರಲ್ಲಿ ಒಬ್ಬನಾಗಿರುವ ಬಡವನು ನಿನ್ನಲ್ಲಿದ್ದರೆ ನಿನ್ನ ಹೃದಯವನ್ನು ಕಠಿಣಮಾಡಿಕೊಳ್ಳಬೇಡ. ನಿನ್ನ ಕೈಯನ್ನು ನಿನ್ನ ಬಡ ಸಹೋದರನಿಗೆ ಮುಚ್ಚಿಕೊಳ್ಳ ಬೇಡ. ನಿನ್ನ ಕೈಯನ್ನು ಅವನಿಗೆ ವಿಶಾಲವಾಗಿ ತೆರೆಯಬೇಕು; ಅವನಿಗೆ ಬೇಕಾಗುವದರಲ್ಲಿ ಬೇಕಾದಷ್ಟು ಸಾಲ ಅವನಿಗೆ ಕೊಡಬೇಕು. ಬಿಡುಗಡೆಯ ವರುಷ ವಾದ ಏಳನೇ ವರುಷವು ಸವಿಾಪವಾಯಿತೆಂಬ ದುಷ್ಟಾಲೋಚನೆ ನಿನ್ನ ಹೃದಯದಲ್ಲಿ ಹುಟ್ಟಿ ನಿನ್ನ ಬಡ ಸಹೋದರನ ಮೇಲೆ ನಿನ್ನ ಕಣ್ಣು ಕೆಟ್ಟದ್ದಾಗಿ ನೀನು ಅವನಿಗೆ ಏನೂ ಕೊಡದೆ ಇರುವದರಿಂದ ಅವನು ನಿನಗೆ ವಿರೋಧವಾಗಿ ಕರ್ತನಿಗೆ ಕೂಗುವಾಗ ನಿನ್ನಲ್ಲಿ ಪಾಪ ಉಂಟಾಗದ ಹಾಗೆ ನೋಡಿಕೋ. ಅವನಿಗೆ ಕೊಟ್ಟೇ ಕೊಡಬೇಕು; ಅವನಿಗೆ ಕೊಡುವಾಗ ನಿನ್ನ ಹೃದಯದಲ್ಲಿ ದುಃಖವಾಗಬಾರದು; ಯಾಕಂದರೆ ಇದಕ್ಕೋಸ್ಕರವೇ ನಿನ್ನ ದೇವರಾದ ಕರ್ತನು ನಿನ್ನನ್ನು ನಿನ್ನ ಎಲ್ಲಾ ಕೆಲಸಗಳಲ್ಲಿಯೂ ನೀನು ಕೈ ಹಾಕುವ ದೆಲ್ಲಾದರಲ್ಲಿಯೂ ಆಶೀರ್ವದಿಸುವನು.
- Acts 20:35 ಅಪೊಸ್ತಲರ ಕೃತ್ಯಗಳು 20:35ನೀವು ಹಾಗೆಯೇ ಕೆಲಸಮಾಡಿ ಬಲಹೀನ ರಿಗೆ ಹೀಗೆ ಆಧಾರವಾಗಿರತಕ್ಕದ್ದೆಂದೂ ಮತ್ತು--ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ ವೆಂದು ಕರ್ತನಾದ ಯೇಸು ಹೇಳಿದ ಮಾತುಗಳನ್ನು ನೀವು ಜ್ಞಾಪಕ ಮಾಡಿಕೊಳ್ಳಬೇಕೆಂದೂ ಇವೆಲ್ಲವು ಗಳನ್ನು ನಾನು ನಿಮಗೆ ತಿಳಿಯಪಡಿಸಿದ್ದೇನೆ.
- Psalm 41:1 ಕೀರ್ತನೆಗಳು 41:1ಬಡವನನ್ನು ಪರಾಂಬರಿಸುವವನು ಧನ್ಯನು; ಕೇಡಿನ ಸಮಯದಲ್ಲಿ ಕರ್ತನು ಅವನನ್ನು ತಪ್ಪಿಸುವನು.
- 2 Corinthians 9:6–14 2 ಕೊರಿಂಥದವರಿಗೆ 9:6–14ಆದರೆ--ಸ್ವಲ್ಪವಾಗಿ ಬಿತ್ತುವವನು (ಪೈರನ್ನು) ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿಯೇ ಕೊಯ್ಯುವನು ಎಂದು ನಾನು ಹೇಳು ತ್ತೇನೆ. ಪ್ರತಿಯೊಬ್ಬನು ತನ್ನ ಹೃದಯದಲ್ಲಿ ನಿರ್ಣಯಿಸಿ ಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿ ಮಾಡುತ್ತಾನೆ. ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವದಕ್ಕೆ ಶಕ್ತನಾದ್ದರಿಂದ ನೀವು ಯಾವಾ ಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆ ಯುಳ್ಳವರಾಗಿ ಸಕಲಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರುವಿರಿ. (ಬರೆದಿರುವ ಪ್ರಕಾರ--ಆತನು ಬಡವರಿಗೆ ಧಾರಾಳವಾಗಿ ಹಂಚಿಕೊಟ್ಟನು; ಆತನ ನೀತಿಯು ಸದಾಕಾಲವೂ ಇರುವದು ಎಂಬದೇ. ಬಿತ್ತುವವನಿಗೆ ಬೀಜವನ್ನೂ ತಿನ್ನುವವನಿಗೆ ಆಹಾರ ವನ್ನೂ ಕೊಡುವಾತನು ನಿಮಗೂ ಬಿತ್ತುವದಕ್ಕೆ ಬೀಜವನ್ನು ಕೊಟ್ಟು ಹೆಚ್ಚಿಸಿ ನಿಮ್ಮ ನೀತಿಯಿಂದಾದ ಕಾರ್ಯಗಳ ಫಲಗಳನ್ನು ವೃದ್ಧಿಪಡಿಸುವನು.) ಹೀಗೆ ನೀವು ಎಲ್ಲಾ ವಿಷಯಗಳಲ್ಲಿ ಐಶ್ವರ್ಯವಂತರಾಗಿದ್ದು ಉದಾರವಾಗಿ ಕೊಡಲು ಶಕ್ತರಾಗುವಿರಿ; ಅದು ನಮ್ಮ ಮೂಲಕ ದೇವರಿಗೆ ಕೃತಜ್ಞತಾಸ್ತುತಿಯನ್ನುಂಟು ಮಾಡುವದು. ಹೇಗಂದರೆ ಈ ನಿಮ್ಮ ಸೇವೆಯ ಪರಿಚರ್ಯವು ಪರಿಶುದ್ಧರ ಕೊರತೆಗಳನ್ನು ನೀಗು ವದು ಮಾತ್ರವಲ್ಲದೆ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿಯನ್ನು ಹುಟ್ಟಿಸುವದು. ಈ ಸಹಾಯ ದಿಂದ ತೋರಿಬಂದ ನಿಮ್ಮ ಯೋಗ್ಯ ಭಾವವನ್ನು ಅವರು ನೋಡುವಾಗ ನೀವು ಕ್ರಿಸ್ತನ ಸುವಾರ್ತೆಗೆ ವಿಧೇಯರಾದದ್ದರಿಂದಲೂ ತಮಗೂ ಎಲ್ಲರಿಗೂ ನೀವು ಉದಾರವಾಗಿ ಸಹಾಯ ಮಾಡಿದ್ದರಿಂದಲೂ ದೇವರನ್ನು ಕೊಂಡಾಡುವರು. ಇದಲ್ಲದೆ ನಿಮ್ಮಲ್ಲಿ ರುವ ದೇವರ ಅಪಾರವಾದ ಕೃಪೆಯ ನಿಮಿತ್ತ ಅವರು ಪ್ರಾರ್ಥನೆ ಮಾಡುವವರಾಗಿ ನಿಮಗೋಸ್ಕರ ಹಂಬಲಿ ಸುತ್ತಾರೆ.ವರ್ಣಿಸಲಶಕ್ಯವಾದ ದೇವರದಾನಕ್ಕಾಗಿ ಆತನಿಗೆ ಸ್ತೋತ್ರವಾಗಲಿ.
- 2 Corinthians 8:9 2 ಕೊರಿಂಥದವರಿಗೆ 8:9ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯನ್ನು ನೀವು ಅರಿತವರಾಗಿದ್ದೀರಿ; ಹೇಗಂದರೆ ಆತನು ಐಶ್ವರ್ಯವಂತನಾಗಿದ್ದರೂ ಆತನ ಬಡತನದ ಮೂಲಕ ನೀವು ಐಶ್ವರ್ಯವಂತ ರಾಗುವಂತೆ ಆತನು ನಿಮಗೋಸ್ಕರ ಬಡವನಾದನು.
- Isaiah 58:7–10 ಯೆಶಾಯ 58:7–10ನಿನ್ನ ರೊಟ್ಟಿಯನ್ನು ಹಸಿದವರಿಗೆ ಹಂಚುವದೂ ಅಲೆಯು ತ್ತಿರುವ ಬಡವರನ್ನು ನಿನ್ನ ಮನೆಗೆ ಬರಮಾಡಿ ಕೊಳ್ಳುವದೂ ಬೆತ್ತಲೆಯವರನ್ನು ಕಂಡಾಗೆಲ್ಲ ಅವರಿಗೆ ಹೊದಿಸುವದೂ ನಿನ್ನ ಸ್ವಂತ ಶರೀರದಂತಿರುವವ ನಿಗೆ ನಿನ್ನನ್ನು ಮರೆಮಾಡಿಕೊಳ್ಳದಿರುವದೂ ಇದೇ ಅಲ್ಲವೋ? ಹೀಗಾದರೆ ನಿನ್ನ ಬೆಳಕು ಉದಯದಂತೆ ಪ್ರತ್ಯಕ್ಷವಾಗುವದು. ನಿನ್ನ ಕ್ಷೇಮವು ಬೇಗನೆ ಚಿಗುರು ವದು. ನಿನ್ನ ನೀತಿಯು ನಿನಗೆ ಮುಂಬಲವಾಗಿ ಮುಂದ ರಿಯುವದು. ಕರ್ತನ ಮಹಿಮೆಯು ನಿನಗೆ ಹಿಂಬಲ ವಾಗಿರುವದು. ಆಗ ನೀನು ಕರೆದರೆ ಕರ್ತನು ಉತ್ತರ ಕೊಡುವನು; ನೀನು ಕೂಗುವಿ ಆಗ ಆತನು--ನಾನು ಇಲ್ಲಿ ಇದ್ದೇನೆ ಅನ್ನುವನು. ನೀನು ನಿನ್ನ ಮಧ್ಯದೊಳ ಗಿಂದ ನೊಗವನ್ನೂ ಬೆರಳ ಸನ್ನೆಯನ್ನೂ ವ್ಯರ್ಥವಾದ ಸಂಭಾಷಣೆಯನ್ನೂ ತೆಗೆದುಹಾಕಿ, ಹಸಿದವನ ಕಡೆಗೆ ನಿನ್ನ ಮನಸ್ಸು ಹೋಗುವಂತೆ ಮಾಡಿ, ಕುಂದಿ ಹೋದವನ ಪ್ರಾಣವನ್ನು ತೃಪ್ತಿಪಡಿಸಿದರೆ ಆಗ ನಿನ್ನ ಬೆಳಕು ಕತ್ತಲೆಯಲ್ಲಿ ಉದಯಿಸುವದು. ನಿನ್ನ ಅಂಧ ಕಾರವು ಮಧ್ಯಾಹ್ನದ ಹಾಗೆ ಇರುವದು.
- Matthew 6:12 ಮತ್ತಾಯನು 6:12ನಮ್ಮ ಸಾಲಗಾರರನ್ನು ನಾವು ಕ್ಷಮಿಸುವಂತೆ ನಮ್ಮ ಸಾಲಗಳನ್ನು ನಮಗೆ ಕ್ಷಮಿಸು.
- Luke 18:22 ಲೂಕನು 18:22ಆಗ ಯೇಸು ಇವುಗಳನ್ನು ಕೇಳಿ ಅವನಿಗೆ--ಆದಾಗ್ಯೂ ನಿನಗೆ ಒಂದು ಕೊರತೆ ಇದೆ; ನಿನಗೆ ಇರುವದೆಲ್ಲವನ್ನು ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತು ಇರುವದು; ಬಂದು ನನ್ನನ್ನು ಹಿಂಬಾ ಲಿಸು ಅಂದನು.
- Matthew 5:42–48 ಮತ್ತಾಯನು 5:42–48ನಿನ್ನನ್ನು ಕೇಳುವವನಿಗೆ ಕೊಡು; ಮತ್ತು ನಿನ್ನಿಂದ ಕಡಾ ತಕ್ಕೊಳ್ಳಬೇಕೆಂದಿರುವವನಿಂದ ನೀನು ತಿರುಗಿಕೊಳ್ಳಬೇಡ. ನೀನು ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ಹಗೆಮಾಡಬೇಕು ಎಂದು ಹೇಳಿರು ವದನ್ನು ನೀವು ಕೇಳಿದ್ದೀರಿ. ಆದರೆ ನಾನು ನಿಮಗೆ ಹೇಳುವದೇನಂದರೆ--ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಒಳ್ಳೇದನ್ನು ಮಾಡಿರಿ; ನಿಮ್ಮನ್ನು ನಿಂದಿಸುವವರಿಗಾಗಿಯೂ ಹಿಂಸಿಸುವವರಿಗಾಗಿಯೂ ಪ್ರಾರ್ಥಿಸಿರಿ. ಇದರಿಂದ ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾ ಗುವಿರಿ; ಯಾಕಂದರೆ ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ; ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ. ನಿಮ್ಮನ್ನು ಪ್ರೀತಿಮಾಡುವವರನ್ನೇ ನೀವು ಪ್ರೀತಿಮಾಡಿದರೆ ನಿಮಗೆ ಯಾವ ಪ್ರತಿಫಲ ಸಿಕ್ಕೀತು? ಸುಂಕದವರೂ ಹಾಗೆ ಮಾಡುತ್ತಾರಲ್ಲವೇ? ಇದಲ್ಲದೆ ನೀವು ನಿಮ್ಮ ಸಹೋದರರನ್ನು ಮಾತ್ರ ವಂದಿಸಿದರೆ ಬೇರೆಯವರಿಗಿಂತ ಹೆಚ್ಚೇನು ಮಾಡಿ ದಂತಾಯಿತು? ಸುಂಕದವರು ಸಹ ಹಾಗೆ ಮಾಡುತ್ತಾರಲ್ಲವೇ?ಆದದರಿಂದ ಪರಲೋಕ ದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣ ನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರ್ರಿ. ಆದದರಿಂದ ಪರಲೋಕ ದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣ ನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರ್ರಿ.
- Proverbs 21:26 ಜ್ಞಾನೋಕ್ತಿಗಳು 21:26ದಿನವೆಲ್ಲಾ ಅವನು ದುರಾಶೆಯಿಂದ ಆಶಿಸುತ್ತಾನೆ; ಆದರೆ ನೀತಿವಂತನು ಹಿಂತೆಗೆಯದೇ ಕೊಡುತ್ತಾನೆ.
- Matthew 18:27–30 ಮತ್ತಾಯನು 18:27–30ಆ ಸೇವಕನ ಧಣಿಯು ಅವನ ಮೇಲೆ ಕನಿಕರಪಟ್ಟು ಅವನನ್ನು ಬಿಡಿಸಿ ಅವನ ಸಾಲವನ್ನೆಲ್ಲಾ ಬಿಟ್ಟು ಬಿಟ್ಟನು. ಆದರೆ ಅದೇ ಸೇವಕನು ಹೊರಗೆ ಹೋಗಿ ತನಗೆ ನೂರು ದೇನಾರುಗಳನ್ನು ಸಾಲ ಕೊಡಬೇಕಾಗಿದ್ದ ತನ್ನ ಜೊತೆ ಸೇವಕರಲ್ಲಿ ಒಬ್ಬನನ್ನು ಕಂಡು ಅವನನ್ನು ಹಿಡಿದು ಕುತ್ತಿಗೆ ಹಿಸುಕಿ--ನನ್ನ ಸಾಲವನ್ನು ತೀರಿಸು ಅಂದನು. ಆಗ ಅವನ ಜೊತೇ ಸೇವಕನು ಅವನ ಪಾದಕ್ಕೆ ಬಿದ್ದು ಅವನಿಗೆ--ನನ್ನನ್ನು ತಾಳಿಕೋ; ನಾನು ನಿನ್ನದನ್ನೆಲ್ಲಾ ತೀರಿಸುತ್ತೇನೆ ಎಂದು ಅವನನ್ನು ಬೇಡಿಕೊಂಡನು. ಅವನು ಅದಕ್ಕೆ ಒಪ್ಪದೆ ಹೊರಟುಹೋಗಿ ತನ್ನ ಸಾಲವನ್ನು ತೀರಿಸುವ ವರೆಗೆ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು.
- Proverbs 19:17 ಜ್ಞಾನೋಕ್ತಿಗಳು 19:17ಬಡವರಿಗೆ ದಯೆತೋರಿಸು ವವನು. ಕರ್ತನಿಗೆ ಸಾಲ ಕೊಡುತ್ತಾನೆ; ಅವನು ಕೊಟ್ಟದ್ದನ್ನು ಆತನು ತಿರುಗಿ ಅವನಿಗೆ ಕೊಡುತ್ತಾನೆ.