Ecclesiastes · chapter 2 · verse 1
Ecclesiastes 2:1 in Kannada
ನಾನು ನನ್ನ ಹೃದಯದಲ್ಲಿ--ಹೋಗು, ನಾನು ನಿನ್ನನ್ನು ಸಂತೋಷದ ಮೂಲಕ ಪರೀಕ್ಷಿಸುವೆನು; ಆದಕಾರಣ ಸುಖವನ್ನು ಅನುಭವಿಸು ಎಂದು ಅಂದುಕೊಂಡೆನು. ಇಗೋ, ಇದು ಕೂಡ ವ್ಯರ್ಥವೇ.
Naanu nanna hrudayadalli--hogu, naanu ninnannu santoshada moolaka pareekshisuvenu; aadakaarana sukhavannu anubhavisu endu andukondenu. Igo, idu kooda vyarthave.
Ecclesiastes 2:1 in English
- King James Version (KJV)
- I said in mine heart, Go to now, I will prove thee with mirth, therefore enjoy pleasure: and, behold, this also [is] vanity.
- World English Bible (WEB)
- I said in my heart, “Come now, I will test you with mirth; therefore enjoy pleasure;” and behold, this also was vanity.
- American Standard Version (ASV)
- I said in my heart, Come now, I will prove thee with mirth; therefore enjoy pleasure: and, behold, this also was vanity.
- Bible in Basic English (BBE)
- I said in my heart, I will give you joy for a test; so take your pleasure — but it was to no purpose.
- Darby Translation (DBY)
- I said in my heart, Come now, I will try thee with mirth, therefore enjoy pleasure. But behold, this also is vanity.
- Webster's Bible (WBS)
- I said in my heart, Come now, I will prove thee with mirth, therefore enjoy pleasure: and behold, this also [is] vanity.
- Young's Literal Translation (YLT)
- I said in my heart, 'Pray, come, I try thee with mirth, and look thou on gladness;' and lo, even it [is] vanity.
Read in context
- 1ನಾನು ನನ್ನ ಹೃದಯದಲ್ಲಿ--ಹೋಗು, ನಾನು ನಿನ್ನನ್ನು ಸಂತೋಷದ ಮೂಲಕ ಪರೀಕ್ಷಿಸುವೆನು; ಆದಕಾರಣ ಸುಖವನ್ನು ಅನುಭವಿಸು ಎಂದು ಅಂದುಕೊಂಡೆನು. ಇಗೋ, ಇದು ಕೂಡ ವ್ಯರ್ಥವೇ.
- 2ನಗೆಯ ವಿಷಯವಾಗಿ--ಇದು ಹುಚ್ಚು ಎಂದೂ ಸಂತೋಷದ ವಿಷಯವಾಗಿ--ಇದೇನು ಮಾಡುತ್ತದೆ ಎಂದೂ ನಾನು ಹೇಳಿದೆನು.
- 3ಜ್ಞಾನದಿಂದ ನನ್ನ ಹೃದಯವನ್ನು ಇನ್ನು ಸಂತೋಷಪಡಿಸುವದಕ್ಕಾಗಿ ದ್ರಾಕ್ಷಾರಸಕ್ಕೆ ನನ್ನನ್ನು ನಾನು ಒಪ್ಪಿಸಿ ಕೊಳ್ಳುವಂತೆಯೂ ಆಕಾಶದ ಕೆಳಗೆ ತಮ್ಮ ಜೀವ ಮಾನದಲ್ಲೆಲ್ಲಾ ಮನುಷ್ಯ ಪುತ್ರರಿಗೆ ಒಳ್ಳೆಯದೇನೆಂದು ನೋಡುವ ತನಕ ಬುದ್ಧಿ ಹೀನತೆಯನ್ನು ಹಿಡಿಯುವದಕ್ಕೂ ನಾನು ನನ್ನ ಹೃದಯ ದಲ್ಲಿ ವಿಚಾರ ಮಾಡಿಕೊಂಡೆನು.
Cross references
- Luke 12:19 ಲೂಕನು 12:19ನಾನು ನನ್ನ ಆತ್ಮಕ್ಕೆ--ಆತ್ಮವೇ, ಅನೇಕ ವರುಷ ಗಳಿಗಾಗಿ ನಿನಗೆ ಬಹಳ ಸರಕು ಇಡಲ್ಪಟ್ಟಿದೆ; ನೀನು ವಿಶ್ರಮಿಸಿಕೋ, ತಿನ್ನು, ಕುಡಿ ಆನಂದವಾಗಿರು ಎಂದು ಹೇಳುವೆನು ಎಂದು ಅಂದುಕೊಂಡನು.
- Ecclesiastes 8:15 ಪ್ರಸಂಗಿ 8:15ಆಗ ನಾನು ಸಂತೋಷವನ್ನು ಹೊಗಳಿದೆನು. ಮನು ಷ್ಯನಿಗೆ ಸೂರ್ಯನ ಕೆಳಗೆ ಕುಡಿಯುವದೂ ತಿನ್ನುವದೂ ಸಂತೋಷಪಡುವದೇ ಹೊರತು ಬೇರೇನೂ ಒಳ್ಳೆ ಯದು ಇಲ್ಲ; ಸೂರ್ಯನ ಕೆಳಗೆ ದೇವರು ಅವನಿಗೆ ಕೊಡುವ ಜೀವನದ ದಿವಸಗಳಲ್ಲಿ ಅವನು ಪಡುವ ಕಷ್ಟದಿಂದ ಅದು ಅವನಿಗೆ ಸೇರುತ್ತದೆ.
- James 5:5 ಯಾಕೋಬನು 5:5ಭೂಲೋಕದಲ್ಲಿ ನೀವು ಭೋಗಿಗಳಾಗಿ ಮನಸ್ಸು ಬಂದಂತೆ ಜೀವಿಸಿದ್ದೀರಿ; ವಧೆಯ ದಿವಸಕ್ಕಾಗಿಯೇ ಎಂಬಂತೆ ನಿಮ್ಮ ಹೃದಯಗಳನ್ನು ಪೋಷಿಸಿಕೊಂಡಿದ್ದೀರಿ.
- Psalm 27:8 ಕೀರ್ತನೆಗಳು 27:8ನೀನು--ನನ್ನ ಮುಖವನ್ನು ನೀವು ಹುಡುಕಿರಿ ಎಂದು ಹೇಳಿದಿಯಲ್ಲಾ. ಕರ್ತನೇ, ನಿನ್ನ ಮುಖವನ್ನು ಹುಡು ಕುವೆನು ಎಂದು ನನ್ನ ಹೃದಯವು ನಿನಗೆ ಹೇಳಿತು.
- James 5:1 ಯಾಕೋಬನು 5:1ಧನಿಕರೇ, ನಿಮಗೆ ಬರುವ ದುರ್ದಶೆ ಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ
- Psalm 30:6–7 ಕೀರ್ತನೆಗಳು 30:6–7ನನ್ನ ಅಭಿವೃದ್ಧಿಯಲ್ಲಿ--ನಾನು ಎಂದಿಗೂ ಕದಲು ವದಿಲ್ಲ ಎಂದು ಹೇಳಿದೆನು. ಕರ್ತನೇ, ನಿನ್ನ ಕಟಾ ಕ್ಷದಿಂದ ನನ್ನ ಬೆಟ್ಟವು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದೀ, ನಿನ್ನ ಮುಖವನ್ನು ಮರೆಮಾಡಲು ಕಳವಳಗೊಂಡೆನು.
- Genesis 11:3–4 ಆದಿಕಾಂಡ 11:3–4ಅವರು--ಬನ್ನಿರಿ, ಇಟ್ಟಿಗೆ ಗಳನ್ನು ಮಾಡಿ ಚೆನ್ನಾಗಿ ಸುಡೋಣ ಎಂದು ಅವರು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅವರಿಗೆ ಕಲ್ಲಿಗೆ ಬದಲಾಗಿ ಇಟ್ಟಿಗೆಯೂ ಸುಣ್ಣಕ್ಕೆ ಬದಲಾಗಿ ಜೇಡಿಮಣ್ಣೂ ಇದ್ದವು. ಅವರು--ಬನ್ನಿರಿ, ಭೂಮಿಯ ಮೇಲೆಲ್ಲಾ ನಾವು ಚದರಿಹೋಗದ ಹಾಗೆ ಆಕಾಶವನ್ನು ಮುಟ್ಟುವ ಒಂದು ಪಟ್ಟಣವನ್ನೂ ಗೋಪುರವನ್ನೂ ನಮಗಾಗಿ ಕಟ್ಟಿಕೊಂಡು ನಾವು ಹೆಸರನ್ನು ಪಡೆಯೋಣ ಅಂದರು;
- Ecclesiastes 1:16–17 ಪ್ರಸಂಗಿ 1:16–17ನಾನು ನನ್ನ ಮನಸ್ಸಿನಲ್ಲಿ ಯೋಚಿಸುತ್ತಾ--ಇಗೋ, ನಾನು ದೊಡ್ಡ ಸ್ಥಾನಕ್ಕೆ ಬಂದಿದ್ದೇನೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದವರೆಲ್ಲರಿಗಿಂತ ನಾನು ಜ್ಞಾನವನ್ನು ಸಂಪಾದಿಸಿದ್ದೇನೆ. ಹೌದು, ಜ್ಞಾನದ ತಿಳುವಳಿಕೆಯ ದೊಡ್ಡ ಅನುಭವವು ನನ್ನ ಹೃದಯಕ್ಕೆ ಆಯಿತು ಎಂದು ಹೇಳಿದೆನು. ಜ್ಞಾನ ವನ್ನೂ ಹುಚ್ಚುತನವನ್ನೂ ಬುದ್ಧಿಹೀನತೆಯನ್ನೂ ತಿಳು ಕೊಳ್ಳುವಂತೆ ನಾನು ಮನಸ್ಸಿಟ್ಟೆನು; ಇದು ಸಹ ಮನಸ್ಸಿಗೆ ಆಯಾಸವೆಂದು ನಾನು ಅರಿತುಕೊಂಡೆನು.ಬಹು ಜ್ಞಾನವಿದ್ದಲ್ಲಿ ದುಃಖ; ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳು ವವನು ತನ್ನ ವ್ಯಥೆಯನ್ನು ಹೆಚ್ಚಿಸಿಕೊಳ್ಳುತ್ತಾನೆ.
- Ecclesiastes 11:9 ಪ್ರಸಂಗಿ 11:9ಓ ಯೌವನಸ್ಥನೇ, ನಿನ್ನ ಯೌವನದಲ್ಲಿ ಸಂತೋಷಪಡು. ನಿನ್ನ ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ; ನೀನು ನಿನ್ನ ಹೃದಯದ ಮಾರ್ಗಗಳಲ್ಲಿಯೂ ನಿನ್ನ ಕಣ್ಣುಗಳ ನೋಟ ದಲ್ಲಿಯೂ ನಡೆ; ಆ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯತೀರ್ಪಿಗೆ ತರುವನೆಂದು ತಿಳಿದುಕೋ.ಆದಕಾರಣ ನಿನ್ನ ಹೃದಯದಿಂದ ದುಃಖವನ್ನು ತೆಗೆದು ಹಾಕು; ನಿನ್ನ ಶರೀರದಿಂದ ಕೆಟ್ಟದ್ದನ್ನು ತೆಗೆದುಬಿಡು; ಬಾಲ್ಯವೂ ಯೌವನವೂ ವ್ಯರ್ಥವಾಗಿವೆ.
- Ecclesiastes 2:15 ಪ್ರಸಂಗಿ 2:15ಆಗ ನಾನು ನನ್ನ ಹೃದಯದಲ್ಲಿ --ಮೂಢನಿಗೆ ಸಂಭವಿಸುವಂತೆ ನನಗೂ ಸಂಭವಿಸು ತ್ತದೆ. ಇದರಿಂದ ಯಾಕೆ ನಾನು ಹೆಚ್ಚು ಜ್ಞಾನದಿಂದ ಇದ್ದೇನೆ ಎಂದು ಅಂದುಕೊಂಡೆನು. ಆಗ ನಾನು ಇದೂ ವ್ಯರ್ಥವೆಂದು ನನ್ನ ಹೃದಯದಲ್ಲಿ ಅಂದು ಕೊಂಡೆನು.
- Ecclesiastes 7:4 ಪ್ರಸಂಗಿ 7:4ಗೋಳಾಟದ ಮನೆಯಲ್ಲಿ ಜ್ಞಾನಿಯ ಹೃದಯವು ಇರುವದು; ಮೂಢರ ಹೃದಯವು ಉಲ್ಲಾ ಸದ ಮನೆಯಲ್ಲಿರುವದು.
- Luke 16:19 ಲೂಕನು 16:19ಊದಾಬಣ್ಣದ ವಸ್ತ್ರಗಳನ್ನೂ ನಯವಾದ ನಾರು ಮಡಿಯನ್ನೂ ಧರಿಸಿಕೊಂಡು ಪ್ರತಿದಿನವೂ ಸಮೃದ್ಧಿ ಯಾಗಿ ಭೋಜನಮಾಡುತ್ತಿದ್ದ ಒಬ್ಬಾನೊಬ್ಬ ಐಶ್ವರ್ಯ ವಂತನಿದ್ದನು.