Ecclesiastes · chapter 3 · verse 2
Ecclesiastes 3:2 in Kannada
ಹುಟ್ಟುವದಕ್ಕೆ ಒಂದು ಸಮಯ, ಸಾಯುವದಕ್ಕೆ ಒಂದು ಸಮಯ; ನೆಡುವದಕ್ಕೆ ಒಂದು ಸಮಯ, ನೆಟ್ಟದ್ದನ್ನು ಕಿತ್ತು ಹಾಕು ವದಕ್ಕೆ ಒಂದು ಸಮಯ;
Huttuvadakke ondu samaya, saayuvadakke ondu samaya; neduvadakke ondu samaya, nettaddannu kittu haaku vadakke ondu samaya;
Ecclesiastes 3:2 in English
- King James Version (KJV)
- A time to be born, and a time to die; a time to plant, and a time to pluck up [that which is] planted;
- World English Bible (WEB)
- a time to be born, and a time to die; a time to plant, and a time to pluck up that which is planted;
- American Standard Version (ASV)
- a time to be born, and a time to die; a time to plant, and a time to pluck up that which is planted;
- Bible in Basic English (BBE)
- A time for birth and a time for death; a time for planting and a time for uprooting;
- Darby Translation (DBY)
- A time to be born, and a time to die; A time to plant, and a time to pluck up that which is planted;
- Webster's Bible (WBS)
- A time to be born, and a time to die; a time to plant, and a time to pluck up [that which is] planted;
- Young's Literal Translation (YLT)
- A time to bring forth, And a time to die. A time to plant, And a time to eradicate the planted.
Read in context
- 1ಆಕಾಶದ ಕೆಳಗೆ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲವಿದೆ; ಪ್ರತಿಯೊಂದು ಉದ್ದೇಶಕ್ಕೂ ಒಂದು ಸಮಯವಿದೆ.
- 2ಹುಟ್ಟುವದಕ್ಕೆ ಒಂದು ಸಮಯ, ಸಾಯುವದಕ್ಕೆ ಒಂದು ಸಮಯ; ನೆಡುವದಕ್ಕೆ ಒಂದು ಸಮಯ, ನೆಟ್ಟದ್ದನ್ನು ಕಿತ್ತು ಹಾಕು ವದಕ್ಕೆ ಒಂದು ಸಮಯ;
- 3ಕೊಲ್ಲುವದಕ್ಕೆ ಒಂದು ಸಮಯ, ಸ್ವಸ್ಥಮಾಡುವದಕ್ಕೆ ಒಂದು ಸಮಯ ಕೆಡವಿ ಬಿಡುವದಕ್ಕೆ ಒಂದು ಸಮಯ, ಕಟ್ಟುವದಕ್ಕೆ ಒಂದು ಸಮಯ;
- 4ಅಳುವದಕ್ಕೆ ಒಂದು ಸಮಯ, ನಗುವದಕ್ಕೆ ಒಂದು ಸಮಯ; ಗೋಳಾಡುವದಕ್ಕೆ ಒಂದು ಸಮಯ, ಕುಣಿದಾಡುವದಕ್ಕೆ ಒಂದು ಸಮಯ;
Cross references
- Hebrews 9:27 ಇಬ್ರಿಯರಿಗೆ 9:27ಒಂದೇ ಸಾರಿ ಸಾಯುವದೂ ತರುವಾಯ ನ್ಯಾಯತೀರ್ಪೂ ಮನುಷ್ಯರಿಗೆ ನೇಮಕವಾಗಿದೆ.ಹಾಗೆಯೇ ಕ್ರಿಸ್ತನು ಬಹು ಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತ ನಾದನು. ತನ್ನನ್ನು ನಿರೀಕ್ಷಿಸಿ ಕೊಂಡಿರುವವರಿಗೆ ರಕ್ಷಣೆ ಯನ್ನುಂಟು ಮಾಡುವದಕ್ಕೋಸ್ಕರ ಪಾಪವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.
- Job 14:5 ಯೋಬನು 14:5ಅವನ ದಿವಸಗಳು ನೇಮಕವಾಗಿವೆ; ಅವನ ತಿಂಗಳುಗಳ ಲೆಕ್ಕ ನಿನ್ನ ಬಳಿಯಲ್ಲಿ ಅದೆ; ಅವನು ದಾಟಲಾರದ ಹಾಗೆ ಅವನ ಮೇರೆಗಳನ್ನು ಮಾಡಿದಿ.
- Matthew 15:13 ಮತ್ತಾಯನು 15:13ಅದಕ್ಕೆ ಆತನು ಪ್ರತ್ಯುತ್ತರವಾಗಿ ಅವರಿಗೆ--ಪರ ಲೋಕದ ನನ್ನ ತಂದೆಯು ನೆಡದೆ ಇರುವ ಪ್ರತಿಯೊ ಂದು ಗಿಡವು ಬೇರು ಸಹಿತವಾಗಿ ಕಿತ್ತುಹಾಕಲ್ಪಡುವದು.
- Jeremiah 18:7–10 ಯೆರೆಮೀಯ 18:7–10ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿ ಮತ್ತು ಒಂದು ರಾಜ್ಯದ ವಿಷಯವಾಗಿ ಅದನ್ನು ಕೀಳುವದಕ್ಕೂ ಕೆಡವುವ ದಕ್ಕೂ ನಾಶಮಾಡುವದಕ್ಕೂ ಮಾತಾಡುತ್ತೇನೋ ಆ ಜನಾಂಗಕ್ಕೆ ವಿರೋಧವಾಗಿ ನಾನು ಮಾತನಾಡಿದ ತನ್ನ ಕೆಟ್ಟತನವನ್ನು ಬಿಟ್ಟು ತಿರುಗಿದರೆ ನಾನು ಅದಕ್ಕೆ ಮಾಡಬೇಕೆಂದು ಯೋಚಿಸಿದ ಕೆಟ್ಟದ್ದನ್ನು ಕುರಿತು ಪಶ್ಚಾ ತ್ತಾಪ ಪಡುವೆನು. ಇದಲ್ಲದೆ ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿಯೂ ಒಂದು ರಾಜ್ಯದ ವಿಷಯವಾಗಿಯೂ ಅದನ್ನು ಕಟ್ಟುವದಕ್ಕೂ ನೆಡುವದಕ್ಕೂ ಮಾತನಾಡುತ್ತೇನೋ ಅದು ನನ್ನ ಸ್ವರಕ್ಕೆ ವಿಧೇಯವಾಗದೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರೆ ನಾನು ಅದಕ್ಕೆ ಮೇಲನ್ನು ಮಾಡುತ್ತೇನೆಂದು ಹೇಳಿದ ಒಳ್ಳೇದನ್ನು ಕುರಿತು ಪಶ್ಚಾತ್ತಾಪಪಡುವೆನು.
- Isaiah 38:1 ಯೆಶಾಯ 38:1ಆ ಕಾಲದಲ್ಲಿ ಹಿಜ್ಕೀಯನು ರೋಗಿಯಾಗಿ ಸಾಯುವದಕ್ಕಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ--ನಿನ್ನ ಮನೆಯ ವಿಷಯವಾಗಿ ವ್ಯವಸ್ಥೆ ಮಾಡಿಕೋ; ಯಾಕಂದರೆ ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ ಎಂಬದಾಗಿ ಕರ್ತನು ಹೇಳುತ್ತಾನೆ ಎಂದು ಹೇಳಿದನು.
- Galatians 4:4 ಗಲಾತ್ಯದವರಿಗೆ 4:4ಆದರೆ ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಸ್ತ್ರೀಯಿಂದ ಹುಟ್ಟಿದವನನ್ನಾಗಿಯೂ ನ್ಯಾಯ ಪ್ರಮಾಣಕ್ಕೆ ಒಳಗಾದವನನ್ನಾಗಿಯೂ ಮಾಡಿ ಕಳುಹಿಸಿದ್ದಲ್ಲದೆ
- John 16:21 ಯೋಹಾನನು 16:21ಒಬ್ಬ ಸ್ತ್ರೀಗೆ ತನ್ನ ಪ್ರಸವವೇದನೆಯ ಗಳಿಗೆ ಬಂದಾಗ ದುಃಖವಿರುವದು; ಆಕೆಯು ಮಗುವನ್ನು ಹೆತ್ತಕೂಡಲೆ ಈ ಲೋಕದೊಳಗೆ ಒಬ್ಬ ಮನುಷ್ಯನು ಹುಟ್ಟಿದನೆಂದು ಸಂತೋಷದಿಂದ ಆ ನೋವನ್ನು ಆಕೆಯು ನೆನಪಿಗೆ ತರುವದೇ ಇಲ್ಲ.
- Luke 1:20 ಲೂಕನು 1:20ಇಗೋ, ತಕ್ಕ ಕಾಲದಲ್ಲಿ ನೆರವೇರುವ ನನ್ನ ಮಾತುಗಳನ್ನು ನೀನು ನಂಬದೆ ಹೋದದರಿಂದ ಈ ಸಂಗತಿಗಳು ಈಡೇರುವ ದಿನದ ವರೆಗೆ ನೀನು ಮೂಕನಾಗಿದ್ದು ಮಾತನಾಡಲಾರದೆ ಇರುವಿ ಅಂದನು.
- Job 7:1 ಯೋಬನು 7:1ಭೂಮಿಯ ಮೇಲೆ ಮನುಷ್ಯನಿಗೆ ನೇಮಿಸಲ್ಪಟ್ಟ ಕಾಲ ಉಂಟಲ್ಲವೋ? ಅವನ ದಿವಸಗಳು ಕೂಲಿಯವನ ದಿವಸಗಳ ಹಾಗಲ್ಲವೋ?
- Acts 7:20 ಅಪೊಸ್ತಲರ ಕೃತ್ಯಗಳು 7:20ಆ ಸಮಯ ದಲ್ಲೇ ಹುಟ್ಟಿದ ಮೋಶೆಯು ದಿವ್ಯ ಸುಂದರನಾಗಿದ್ದನು; ಅವನು ತನ್ನ ತಂದೆಯ ಮನೆಯಲ್ಲಿ ಮೂರು ತಿಂಗಳು ಸಾಕಲ್ಪಟ್ಟನು.
- Acts 7:17 ಅಪೊಸ್ತಲರ ಕೃತ್ಯಗಳು 7:17ಆದರೆ ದೇವರು ಅಬ್ರಹಾಮನಿಗೆ ಆಣೆಯಿಟ್ಟು ವಾಗ್ದಾನ ಮಾಡಿದ್ದ ಕಾಲವು ಹತ್ತಿರಕ್ಕೆ ಬರುತ್ತಿರುವಾಗ
- Jeremiah 45:4 ಯೆರೆಮೀಯ 45:4ನೀನು ಅವನಿಗೆ ಹೇಳತಕ್ಕದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ಇಗೋ, ಕಟ್ಟಿದ್ದನ್ನು ಕೆಡವಿಬಿಡುತ್ತೇನೆ; ನಾನು ನೆಟ್ಟದ್ದನ್ನು ಕಿತ್ತು ಹಾಕುತ್ತೇನೆ; ಹೌದು, ಈ ಸಮಸ್ತ ದೇಶವನ್ನೇ ನಾಶಮಾಡುತ್ತೇನೆ.ಹಾಗಾದರೆ ನೀನು ನಿನಗೋಸ್ಕರ ಮಹತ್ತಾದವು ಗಳನ್ನು ಹುಡುಕುತ್ತೀಯೋ? ಹುಡುಕಬೇಡ; ಇಗೋ, ನಾನು ಎಲ್ಲಾ ಶರೀರದ ಮೇಲೆ ಕೇಡನ್ನು ತರುತ್ತೇನೆಂದು ಕರ್ತನು ಅನ್ನುತ್ತಾನೆ; ಆದರೂ ನೀನು ಹೋಗುವ ಎಲ್ಲಾ ಸ್ಥಳಗಳಲ್ಲಿ ನಿನ್ನ ಪ್ರಾಣವನ್ನು ನಿನಗೆ ಕೊಳ್ಳೆಯಾಗಿ ಕೊಡುತ್ತೇನೆ.