Job · chapter 7 · verse 1
Job 7:1 in Kannada
ಭೂಮಿಯ ಮೇಲೆ ಮನುಷ್ಯನಿಗೆ ನೇಮಿಸಲ್ಪಟ್ಟ ಕಾಲ ಉಂಟಲ್ಲವೋ? ಅವನ ದಿವಸಗಳು ಕೂಲಿಯವನ ದಿವಸಗಳ ಹಾಗಲ್ಲವೋ?
Bhoomiya mele manushyanige nemisalpatta kaala untallavo? Avana divasagalu kooliyavana divasagala haagallavo?
Job 7:1 in English
- King James Version (KJV)
- [Is there] not an appointed time to man upon earth? [are not] his days also like the days of an hireling?
- World English Bible (WEB)
- “Isn’t a man forced to labor on earth? Aren’t his days like the days of a hired hand?
- American Standard Version (ASV)
- Is there not a warfare to man upon earth? And are not his days like the days of a hireling?
- Bible in Basic English (BBE)
- Has not man his ordered time of trouble on the earth? and are not his days like the days of a servant working for payment?
- Darby Translation (DBY)
- Hath not man a life of labour upon earth? and are not his days like the days of a hireling?
- Webster's Bible (WBS)
- [Is there] not an appointed time to man upon earth? [are not] his days also like the days of a hireling?
- Young's Literal Translation (YLT)
- Is there not a warfare to man on earth? And as the days of an hireling his days?
Read in context
- 1ಭೂಮಿಯ ಮೇಲೆ ಮನುಷ್ಯನಿಗೆ ನೇಮಿಸಲ್ಪಟ್ಟ ಕಾಲ ಉಂಟಲ್ಲವೋ? ಅವನ ದಿವಸಗಳು ಕೂಲಿಯವನ ದಿವಸಗಳ ಹಾಗಲ್ಲವೋ?
- 2ಸೇವಕನು ನೆರಳನ್ನು ಅಪೇಕ್ಷಿಸುವ ಪ್ರಕಾರವೂ ಕೂಲಿಯವನು ತನ್ನ ಕೂಲಿಯನ್ನು ಕೋರುವ ಪ್ರಕಾ ರವೂ
- 3ನಾನು ಸಹ ವ್ಯರ್ಥವಾದ ತಿಂಗಳುಗಳನ್ನು ಬಾಧ್ಯವಾಗಿ ತಕ್ಕೊಳ್ಳಬೇಕಾಯಿತು; ಬೇಸರಿಕೆಯ ರಾತ್ರಿ ಗಳು ನನಗೆ ನೇಮಿಸಲ್ಪಟ್ಟವು.
Cross references
- Job 14:5–6 ಯೋಬನು 14:5–6ಅವನ ದಿವಸಗಳು ನೇಮಕವಾಗಿವೆ; ಅವನ ತಿಂಗಳುಗಳ ಲೆಕ್ಕ ನಿನ್ನ ಬಳಿಯಲ್ಲಿ ಅದೆ; ಅವನು ದಾಟಲಾರದ ಹಾಗೆ ಅವನ ಮೇರೆಗಳನ್ನು ಮಾಡಿದಿ. ಹೀಗಿರುವ ದರಿಂದ ಅವನು ಕೂಲಿಯವನ ಹಾಗೆ ತನ್ನ ದಿವಸದಲ್ಲಿ ವಿಶ್ರಾಂತಿ ಪಡೆಯುವಂತೆ ಅವನು ಪೂರೈಸುವ ವರೆಗೆ ಅವನಿಂದ ತಿರುಗು.
- Psalm 39:4 ಕೀರ್ತನೆಗಳು 39:4ಕರ್ತನೇ, ನಾನು ಎಷ್ಟು ಅಸ್ಥಿರನೆಂದು ತಿಳಿಯುವ ಹಾಗೆ ನನ್ನ ಅಂತ್ಯವನ್ನೂ ನನ್ನ ದಿವಸಗಳು ಕೊಂಚ ವೆಂಬದನ್ನೂ ನನಗೆ ತಿಳಿಸು.
- Job 5:7 ಯೋಬನು 5:7ಕಿಡಿಗಳು ಹಾರುವ ಪ್ರಕಾರವೇ ಮನುಷ್ಯನು ಕಷ್ಟಕ್ಕಾಗಿ ಹುಟ್ಟುತ್ತಾನೆ.
- Job 14:13–14 ಯೋಬನು 14:13–14ನೀನು ನನ್ನನ್ನು ಸಮಾಧಿಯಲ್ಲಿ ಮರೆಮಾಡಿ, ನಿನ್ನ ಕೋಪವು ತಿರುಗುವ ವರೆಗೂ ನನ್ನನ್ನು ಅಡಗಿಸಿ ನನಗೆ ನೇಮಕವಾದ ಸಮಯವನ್ನು ನೇಮಿಸಿ ನನ್ನನ್ನು ಜ್ಞಾಪಕಮಾಡಿಕೊಂಡರೆ ಲೇಸು. ಮನುಷ್ಯನು ಸತ್ತರೆ ಅವನು ತಿರುಗಿ ಬದುಕುವನೋ? ನನಗೆ ನೇಮಕ ಮಾಡಿದ ಸಮಯದ ದಿನಗಳೆಲ್ಲಾ ನನಗೆ ಬದಲು ಬರುವ ವರೆಗೆ ನಾನು ಕಾದುಕೊಂಡಿರುವೆನು.
- Leviticus 25:50 ಯಾಜಕಕಾಂಡ 25:50ಅವನು ತನ್ನನ್ನು ಕೊಂಡುಕೊಂಡವನಿಗೆ ಮಾರಲ್ಪಟ್ಟ ವರುಷ ಮೊದಲುಗೊಂಡು ಜೂಬಿಲಿ ಸಂವತ್ಸರದ ವರೆಗೆ ಅವನೊಂದಿಗೆ ಲೆಕ್ಕಮಾಡಬೇಕು. ಅವನ ಮಾರಾಟದ ಕ್ರಯವು ವರುಷಗಳ ಲೆಕ್ಕದ ಪ್ರಕಾರ ಕೂಲಿಯಾಳಿನ ಸಮಯಕ್ಕೆ ತಕ್ಕಂತೆ ಅವನೊಂದಿಗೆ ಅದು ಇರುವದು.
- Deuteronomy 15:18 ಧರ್ಮೋಪದೇಶಕಾಂಡ 15:18ಅವನನ್ನು ನಿನ್ನಿಂದ ಬಿಡುಗಡೆಯಾಗಿ ಕಳುಹಿಸು ವದು ನಿನಗೆ ಕಠಿಣವೆಂದು ಕಾಣಿಸಬಾರದು; ಅವನು ಆರು ವರುಷ ನಿನ್ನ ದಾಸನಾಗಿದ್ದರಿಂದ ಸಂಬಳದ ಸೇವಕನಿಗಿಂತ ಎರಡರಷ್ಟಾಗಿದ್ದನು; ಹೀಗೆ ನೀನು ಮಾಡುವದೆಲ್ಲಾದರಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ಆಶೀರ್ವದಿಸುವನು.
- John 11:9–10 ಯೋಹಾನನು 11:9–10ಯೇಸು--ಹಗಲಿಗೆ ಹನ್ನೆರಡು ತಾಸುಗಳು ಇವೆಯಲ್ಲವೇ? ಯಾವ ಮನುಷ್ಯನಾದರೂ ಹಗಲಿ ನಲ್ಲಿ ತಿರುಗಾಡಿದರೆ ಈ ಲೋಕದ ಬೆಳಕನ್ನು ನೋಡು ವದರಿಂದ ಅವನು ಎಡವುವದಿಲ್ಲ. ಆದರೆ ಒಬ್ಬ ಮನುಷ್ಯನು ರಾತ್ರಿಯಲ್ಲಿ ತಿರುಗಾಡಿದರೆ ತನ್ನಲ್ಲಿ ಬೆಳಕು ಇಲ್ಲವಾದದರಿಂದ ಅವನು ಎಡವುತ್ತಾನೆ ಎಂದು ಉತ್ತರಕೊಟ್ಟನು.
- Isaiah 40:2 ಯೆಶಾಯ 40:2ಯೆರೂಸಲೇಮಿನ ಸಂಗಡ ನೀವು ಹೃದಯಾಂಗಮ ವಾಗಿ ಮಾತಾಡಿರಿ; ಅದರ ಯುದ್ಧವು ತೀರಿತೆಂದೂ ದೋಷವು ಕ್ಷಮಿಸಲ್ಪಟ್ಟಿದೆ ಎಂದು ಕೂಗಿರಿ; ಅದು ಎಲ್ಲಾ ಪಾಪಗಳಿಗೂ ಕರ್ತನಿಂದ ಎರಡರಷ್ಟು ಹೊಂದಿ ದ್ದಾಯಿತು.
- Matthew 20:1–15 ಮತ್ತಾಯನು 20:1–15ತನ್ನ ದ್ರಾಕ್ಷೇ ತೋಟಕ್ಕೆ ಕೂಲಿಯಾಳು ಗಳನ್ನು ಕರೆಯುವದಕ್ಕಾಗಿ ಬೆಳಿಗ್ಗೆ ಹೊರಟ ಮನೇ ಯಜಮಾನನಿಗೆ ಪರಲೋಕರಾಜ್ಯವು ಹೋಲಿ ಕೆಯಾಗಿದೆ. ಅವನು ದಿನಕ್ಕೆ ಒಂದು ಪಾವಲಿಯಂತೆ (ಪೆನ್ನಿ) ಕೂಲಿಯಾಳುಗಳೊಂದಿಗೆ ಒಪ್ಪಂದ ಮಾಡಿ ಕೊಂಡು ತನ್ನ ದ್ರಾಕ್ಷೇತೋಟಕ್ಕೆ ಅವರನ್ನು ಕಳುಹಿಸಿ ಕೊಟ್ಟನು. ಮತ್ತು ಅವನು ಸುಮಾರು ಮೂರನೆಯ ತಾಸಿನಲ್ಲಿ ಹೊರಗೆಹೋಗಿ ಇನ್ನು ಕೆಲವರು ಸಂತೆಯ ಸ್ಥಳದಲ್ಲಿ ಕೆಲಸವಿಲ್ಲದೆ ನಿಂತಿರುವದನ್ನು ಕಂಡು ಅವರಿಗೆ--ನೀವು ಸಹ ದ್ರಾಕ್ಷೇ ತೋಟಕ್ಕೆ ಹೋಗಿರಿ; ಸರಿಯಾದ ಕೂಲಿಯನ್ನು ನಾನು ನಿಮಗೆ ಕೊಡುವೆನು ಎಂದು ಹೇಳಿದನು. ಆಗ ಅವರು ಹೊರಟು ಹೋದರು. ಅವನು ಸುಮಾರು ಆರನೆಯ ಮತ್ತು ಒಂಭತ್ತನೆಯ ತಾಸಿನಲ್ಲಿ ತಿರಿಗಿ ಹೋಗಿ ಹಾಗೆಯೇ ಮಾಡಿದನು. ತರುವಾಯ ಸುಮಾರು ಹನ್ನೊಂದ ನೆಯ ತಾಸಿನಲ್ಲಿ ಅವನು ಹೊರಗೆಹೋಗಿ ಬೇರೆ ಕೆಲವರು ಕೆಲಸವಿಲ್ಲದೆ ನಿಂತಿರುವದನ್ನು ಕಂಡು ಅವರಿಗೆ--ನೀವು ದಿನವೆಲ್ಲಾ ಇಲ್ಲಿ ಕೆಲಸವಿಲ್ಲದೆ ನಿಂತಿರುವದೇಕೆ ಎಂದು ಕೇಳಿದನು. ಅವರು ಅವನಿಗೆ--ಯಾಕಂದರೆ ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ ಅಂದರು. ಆಗ ಅವನು ಅವರಿಗೆ--ನೀವು ಸಹ ದ್ರಾಕ್ಷೇತೋಟಕ್ಕೆ ಹೋಗಿರಿ ಮತ್ತು ಸರಿಯಾದದ್ದನ್ನು ನೀವು ಹೊಂದುವಿರಿ ಎಂದು ಹೇಳಿ ದನು. ಹೀಗೆ ಸಾಯಂಕಾಲವಾದಾಗ ದ್ರಾಕ್ಷೇತೋಟ ದ ಯಜಮಾನನು ತನ್ನ ಮನೇವಾರ್ತೆಯವನಿಗೆ-- ಕೂಲಿಯಾಳುಗಳನ್ನು ಕರೆದು ಕೊನೆಯವನಿಂದ ಪ್ರಾರಂಭಿಸಿ ಮೊದಲನೆಯವನ ವರೆಗೆ ಕೂಲಿಯನ್ನು ಕೊಡು ಎಂದು ಹೇಳಿದನು. ಸುಮಾರು ಹನ್ನೊಂದನೆ ಯ ತಾಸಿನಲ್ಲಿ ಕರೆಯಲ್ಪಟ್ಟವರಾದ ಪ್ರತಿಯೊಬ್ಬನು ಒಂದೊಂದು ಪಾವಲಿಯನ್ನು ಹೊಂದಿದನು. ಆದರೆ ಮೊದಲು ಬಂದವರು ತಮಗೆ ಹೆಚ್ಚು ದೊರೆಯುವ ದೆಂದು ನೆನಸಿದರು. ಆದರೂ ಅವರಲ್ಲಿ ಪ್ರತಿಯೊಬ್ಬನು ಅದೇ ರೀತಿಯಲ್ಲಿ ಒಂದೊಂದು ಪಾವಲಿಯನ್ನು ಹೊಂದಿದನು. ಅವರು ಅದನ್ನು ಹೊಂದಿದಾಗ ಮನೇ ಯಜಮಾನನಿಗೆ ವಿರೋಧವಾಗಿ ಗುಣು ಗುಟ್ಟುತ್ತಾ-- ಕಡೆಯವರಾದ ಇವರು ಒಂದೇ ತಾಸು ಕೆಲಸ ಮಾಡಿದ್ದಾರೆ; ಆದರೆ ದಿನವೆಲ್ಲಾ ಬಿಸಿಲಿನಲ್ಲಿ ಭಾರ ಹೊತ್ತು ಕೆಲಸ ಮಾಡಿದ ನಮಗೆ ನೀನು ಅವರನ್ನು ಸಮಮಾಡಿದ್ದೀ ಅಂದರು. ಆದರೆ ಅವನು ಅವರಲ್ಲಿ ಒಬ್ಬನಿಗೆ ಪ್ರತ್ಯುತ್ತರವಾಗಿ--ಸ್ನೇಹಿ ತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ; ಒಂದು ಪಾವಲಿಗೆ ನೀನು ನನ್ನೊಂದಿಗೆ ಒಪ್ಪಂದ ಮಾಡಿಕೊಳ್ಳ ಲಿಲ್ಲವೇ? ನಿನ್ನದನ್ನು ತಕ್ಕೊಂಡು ಹೋಗು; ನಿನಗೆ ನಾನು ಕೊಟ್ಟಂತೆಯೇ ಈ ಕಡೆಯವನಿಗೂ ಕೊಡುವೆನು. ನನ್ನ ಸ್ವಂತದ್ದನ್ನು ನನ್ನ ಇಷ್ಟಬಂದಂತೆ ಮಾಡುವದು ನನಗೆ ನ್ಯಾಯವಲ್ಲವೋ? ನಾನು ಒಳ್ಳೆಯವನಾದ ದರಿಂದ ನಿನ್ನ ಕಣ್ಣು ಕೆಟ್ಟದ್ದಾಗಿದೆಯೋ ಅಂದನು.
- Ecclesiastes 8:8 ಪ್ರಸಂಗಿ 8:8ಆತ್ಮವನ್ನು ಹಿಡಿ ಯುವ ಶಕ್ತಿ ಯಾವ ಮನುಷ್ಯನಿಗೂ ಇಲ್ಲ; ಹಾಗೆಯೇ ಮರಣ ದಿನವನ್ನು ತಡೆಯುವ ಶಕ್ತಿಯು ಯಾರಿಗೂ ಇರುವದಿಲ್ಲ. ಯುದ್ಧದಿಂದ ಬಿಡುಗಡೆಯೂ ಹೇಗೆ ಇಲ್ಲವೋ ಹಾಗೆಯೇ ದುಷ್ಟನಿಗೆ ಅದರಿಂದ ಬಿಡು ಗಡೆಯೇ ಇಲ್ಲ.
- Isaiah 38:5 ಯೆಶಾಯ 38:5ನೀನು ಹೋಗಿ ಹಿಜ್ಕೀ ಯನಿಗೆ ಹೇಳತಕ್ಕದ್ದೇನಂದರೆ--ನಿನ್ನ ತಂದೆಯಾದ ದಾವೀದನ ದೇವರಾದ ಕರ್ತನು ಹೀಗೆ ಹೇಳುತ್ತಾನೆ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ನೋಡಿದ್ದೇನೆ; ಇಗೋ, ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನೂ ಕೂಡಿಸುತ್ತೇನೆ.
- Isaiah 21:16 ಯೆಶಾಯ 21:16ಕರ್ತನು ನನಗೆ ಹೀಗೆ ಹೇಳುತ್ತಾನೆ--ಕೂಲಿಯವನ ವರುಷಗಳಂತೆ ಒಂದು ವರುಷದೊಳಗೆ ಕೇದಾರಿನ ವೈಭವವು ತೀರಿಹೋಗುವದು.ಬಿಲ್ಲುಗಾರರಲ್ಲಿ ಉಳಿದವರು ಕೇದಾರಿನ ಮಕ್ಕಳ ಬಲಿಷ್ಠರು ಕುಗ್ಗಿಸಲ್ಪಡು ವರು ಎಂದು ಇಸ್ರಾಯೇಲ್ಯರ ದೇವರಾದ ಕರ್ತನು ಇದನ್ನು ನುಡಿದಿದ್ದಾನೆ.