Ecclesiastes · chapter 5 · verse 11
Ecclesiastes 5:11 in Kannada
ಸೊತ್ತುಗಳು ಹೆಚ್ಚಿದರೆ ಅದನ್ನು ತಿನ್ನುವವರು ಹೆಚ್ಚಾ ಗುವರು; ಅವುಗಳನ್ನು ತಮ್ಮ ಕಣ್ಣುಗಳಿಂದ ನೋಡು ವದೇ ಹೊರತು ಅವುಗಳ ಸ್ವಂತದವರಿಗೆ ಯಾವ ಪ್ರಯೋಜನವಿದೆ?
Sottugalu hechchidare adannu tinnuvavaru hechchaa guvaru; avugalannu tamma kannugalinda nodu vade horatu avugala svantadavarige yaava prayojanavide?
Ecclesiastes 5:11 in English
- King James Version (KJV)
- When goods increase, they are increased that eat them: and what good [is there] to the owners thereof, saving the beholding [of them] with their eyes?
- World English Bible (WEB)
- When goods increase, those who eat them are increased; and what advantage is there to its owner, except to feast on them with his eyes?
- American Standard Version (ASV)
- When goods increase, they are increased that eat them; and what advantage is there to the owner thereof, save the beholding [of them] with his eyes?
- Bible in Basic English (BBE)
- When goods are increased, the number of those who take of them is increased; and what profit has the owner but to see them?
- Darby Translation (DBY)
- When goods increase, they are increased that eat them; and what profit is there to the owner thereof, except the beholding [of them] with his eyes?
- Webster's Bible (WBS)
- When goods increase, they are increased that eat them: and what good [is there] to the owners of them, saving the beholding [of them] with their eyes?
- Young's Literal Translation (YLT)
- In the multiplying of good have its consumers been multiplied, and what benefit [is] to its possessor except the sight of his eyes?
Read in context
- 9ಇದಲ್ಲದೆ ಭೂಮಿಯ ಲಾಭವು ಎಲ್ಲರಿಗೂ ಇದೆ; ಭೂಮಿಯಿಂದಲೇ ಅರಸನಿಗೆ ಸೇವೆ ಯಾಗುತ್ತದೆ.
- 10ಬೆಳ್ಳಿಯನ್ನು ಪ್ರೀತಿಸುವವನು ಬೆಳ್ಳಿಯಿಂದ ತೃಪ್ತ ನಾಗನು; ಸಮೃದ್ಧಿಯನ್ನು ಪ್ರೀತಿಸುವವನು ಅಭಿವೃದ್ಧಿ ಯಿಂದ ತೃಪ್ತನಾಗಲಾರನು; ಇದೂ ಕೂಡ ವ್ಯರ್ಥವೇ.
- 11ಸೊತ್ತುಗಳು ಹೆಚ್ಚಿದರೆ ಅದನ್ನು ತಿನ್ನುವವರು ಹೆಚ್ಚಾ ಗುವರು; ಅವುಗಳನ್ನು ತಮ್ಮ ಕಣ್ಣುಗಳಿಂದ ನೋಡು ವದೇ ಹೊರತು ಅವುಗಳ ಸ್ವಂತದವರಿಗೆ ಯಾವ ಪ್ರಯೋಜನವಿದೆ?
- 12ಪ್ರಯಾಸಪಡುವವನು ಸ್ವಲ್ಪ ತಿಂದರೂ ಹೆಚ್ಚಾಗಿ ತಿಂದರೂ ಅವನು ಹಾಯಾಗಿ ನಿದ್ರಿಸುತ್ತಾನೆ; ಐಶ್ವರ್ಯವಂತನ ಸಮೃದ್ಧಿಯು ಅವನನ್ನು ನಿದ್ರೆಮಾಡಗೊಡಿಸದು.
- 13ಸೂರ್ಯನ ಕೆಳಗೆ ವ್ಯಥೆಯಿಂದ ಕೂಡಿದ ಒಂದು ಕೆಟ್ಟತನವನ್ನು ನಾನು ನೋಡಿದ್ದೇನೆ; ಅದು ಯಾವ ದಂದರೆ, ತಮ್ಮ ವ್ಯಥೆಗಾಗಿ ಅವುಗಳ ಯಜ ಮಾನರು ಇಟ್ಟುಕೊಂಡಿದ್ದ ಐಶ್ವರ್ಯವೇ.
Cross references
- 1 John 2:16 1 ಯೋಹಾನನು 2:16ಲೋಕದಲ್ಲಿರುವವುಗಳೆಲ್ಲವು ಅಂದರೆ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಗೆ ಸಂಬಂಧ ಪಟ್ಟವುಗಳಲ್ಲ, ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ.
- Habakkuk 2:13 ಹಬಕ್ಕೂಕ 2:13ಇಗೋ, ಇದು ಸೈನ್ಯಗಳ ಕರ್ತನಿಂದ ಅಲ್ಲವೋ? ಏನಂದರೆ, ಜನರು ಬೆಂಕಿಗೋಸ್ಕರ ಪರಿಶ್ರಮಪಟ್ಟ ವ್ಯರ್ಥಕ್ಕೋಸ್ಕರ ಆಯಾಸಪಡುವದೇ.
- Psalm 119:36–37 ಕೀರ್ತನೆಗಳು 119:36–37ಲೋಭದ ಕಡೆಗಲ್ಲ, ನಿನ್ನ ಸಾಕ್ಷಿಗಳ ಕಡೆಗೆ ನನ್ನ ಹೃದಯವನ್ನು ತಿರುಗಿಸು. ವ್ಯರ್ಥತೆಯನ್ನು ನೋಡದ ಹಾಗೆ ನನ್ನ ಕಣ್ಣುಗಳನ್ನು ತೊಲಗಿಸು; ನಿನ್ನ ಮಾರ್ಗಗಳಲ್ಲಿ ನನ್ನನ್ನು ಚೈತನ್ಯ ಪಡಿಸು.
- Proverbs 23:5 ಜ್ಞಾನೋಕ್ತಿಗಳು 23:5ಇಲ್ಲದಿರುವದರ ಮೇಲೆ ನಿನ್ನ ದೃಷ್ಟಿಯನ್ನು ಇಡುವಿಯಾ? ಐಶ್ವರ್ಯವು ನಿಸ್ಸಂದೇಹವಾಗಿ ರೆಕ್ಕೆಗಳನ್ನು ಕಟ್ಟಿಕೊಂಡು ಹದ್ದಿನಂತೆ ಆಕಾಶದ ಕಡೆಗೆ ಹಾರಿಹೋಗುತ್ತದೆ.
- Ecclesiastes 6:9 ಪ್ರಸಂಗಿ 6:9ಅಪೇಕ್ಷೆಯ ತಿರುಗಾಟ ಕ್ಕಿಂತ ಕಣ್ಣುಗಳ ದೃಷ್ಟಿಯು ಉತ್ತಮ; ಇದೂ ಕೂಡ ವ್ಯರ್ಥವೂ ಮನಸ್ಸಿಗೆ ಆಯಾಸಕರವೂ ಆಗಿದೆ.
- 1 Kings 5:13–16 1 ಅರಸುಗಳು 5:13–16ಆಗ ಅರಸನಾದ ಸೊಲೊಮೋನನು ಸಮಸ್ತ ಇಸ್ರಾಯೇಲ್ಯರಿಂದ ಬಿಟ್ಟೀ ಆಳುಗಳನ್ನು ತಕ್ಕೊಂಡನು. ಆ ಬಿಟ್ಟೀ ಆಳುಗಳ ಲೆಕ್ಕವು ಮೂವತ್ತು ಸಾವಿರ ಜನವಾಗಿತ್ತು. ಅವನು ಅವರನ್ನು ಲೆಬನೋನಿಗೆ ಕಳು ಹಿಸಿದನು. ಅವನು ವಂತಿನ ಪ್ರಕಾರ ತಿಂಗಳಿಗೆ ಹತ್ತು ಸಾವಿರ ಜನರನ್ನು ಲೆಬನೋನಿಗೆ ಕಳುಹಿಸಿದನು; ಅವರು ಒಂದು ತಿಂಗಳು ಲೆಬನೋನಿನಲ್ಲಿದ್ದು ಎರಡು ತಿಂಗಳು ತಮ್ಮ ಮನೆಯಲ್ಲಿದ್ದರು. ಅದೋನೀರಾಮನು ಬಿಟ್ಟೀ ಆಳುಗಳ ಮೇಲೆ ಯಜಮಾನನಾಗಿದ್ದನು. ಇದಲ್ಲದೆ ಸೊಲೊಮೋನನಿಗೆ ಹೊರೆಹೊರುವ ವರು ಎಪ್ಪತ್ತು ಸಾವಿರವೂ ಬೆಟ್ಟಗಳಲ್ಲಿ ಕಲ್ಲುಕುಟಿಗರು ಎಂಭತ್ತು ಸಾವಿರವೂ ಇದ್ದರು. ಇದರ ಹೊರತಾಗಿ ಸೊಲೊಮೋನನ ಮುಖ್ಯವಾದ ಅಧಿಪತಿಗಳು ಕೆಲ ಸದ ಮೇಲೆ ಇದ್ದರು. ಕೆಲಸಮಾಡುವ ಜನರ ಮೇಲೆ ಮೂರು ಸಾವಿರದ ಮುನ್ನೂರು ಮಂದಿ ಇದ್ದರು.
- Genesis 12:16 ಆದಿಕಾಂಡ 12:16ಅವನು ಆಕೆಗೋಸ್ಕರ ಅಬ್ರಾಮನಿಗೆ ಒಳ್ಳೇದನ್ನು ಮಾಡಿದನು. ಅವನಿಗೆ ಕುರಿಗಳೂ ಎತ್ತುಗಳೂ ಕತ್ತೆಗಳೂ ದಾಸರೂ ದಾಸಿ ಯರೂ ಹೆಣ್ಣುಕತ್ತೆಗಳೂ ಒಂಟೆಗಳೂ ದೊರೆತವು.
- Genesis 13:5–7 ಆದಿಕಾಂಡ 13:5–7ಅಬ್ರಾಮನ ಸಂಗಡ ಬಂದ ಲೋಟನಿಗೆ ಸಹ ಕುರಿ ದನಗಳೂ ಗುಡಾರಗಳೂ ಇದ್ದವು. ಆಗ ಅವರು ಒಂದಾಗಿ ವಾಸಿಸುವ ಹಾಗೆ ಸ್ಥಳವು ಸಾಲದೆ ಹೋಯಿತು. ಯಾಕಂದರೆ ಅವರು ಒಟ್ಟಿಗೆ ವಾಸಿಸದಷ್ಟು ಅವರ ಸಂಪತ್ತು ಬಹಳವಾಗಿತ್ತು. ಆಗ ಅಬ್ರಾಮನ ದನಕಾಯುವವರಿಗೂ ಲೋಟನ ದನಕಾಯುವವರಿಗೂ ಜಗಳವಾಯಿತು. ಕಾನಾನ್ಯರೂ ಪೆರಿಜೀಯರೂ ಆಗ ದೇಶದಲ್ಲಿ ವಾಸವಾಗಿದ್ದರು.
- Joshua 7:21–25 ಯೆಹೋಶುವ 7:21–25ಏನಂದರೆ, ನಾನು ಕೊಳ್ಳೆಯಲ್ಲಿ ಬಾಬೆಲಿನ ಒಂದು ಒಳ್ಳೇ ನಿಲುವಂಗಿಯನ್ನೂ ಇನ್ನೂರು ಬೆಳ್ಳಿ ಶೇಕೆಲುಗಳನ್ನೂ ಐವತ್ತು ಶೇಕೆಲ್ ತೂಕವಾದ ಒಂದು ಬಂಗಾರದ ಗಟ್ಟಿಯನ್ನೂ ಕಂಡು ಅವುಗಳನ್ನು ಆಶಿಸಿ ತೆಗೆದುಕೊಂಡೆನು; ಇಗೋ, ಅವುಗಳನ್ನು ನನ್ನ ಗುಡಾರದ ಮಧ್ಯದಲ್ಲಿ ನೆಲದೊಳಗೆ ಬಚ್ಚಿಟ್ಟಿದ್ದೇನೆ; ಬೆಳ್ಳಿಯೂ ಅದರ ಕೆಳಗೆ ಇದೆ ಅಂದನು. ಆಗ ಯೆಹೋಶುವನು ದೂತರನ್ನು ಕಳುಹಿಸಿದನು; ಅವರು ಡೇರೆಗಳಿಗೆ ಓಡಿದರು; ಇಗೋ, ಡೇರೆಯಲ್ಲಿ ಅವು ಬಚ್ಚಿಡಲ್ಪಟ್ಟಿದ್ದವು; ಬೆಳ್ಳಿಯು ಅದರ ಕೆಳಗೆ ಇತ್ತು. ಅವರು ಅವುಗಳನ್ನು ಡೇರೆಯ ಮಧ್ಯದಿಂದ ತೆಗೆದುಕೊಂಡು ಯೆಹೋಶುವನ ಬಳಿಗೂ ಸಮಸ್ತ ಇಸ್ರಾಯೇಲ್ ಮಕ್ಕಳ ಬಳಿಗೂ ತಂದು ಕರ್ತನ ಮುಂದೆ ಇಟ್ಟರು. ಆಗ ಯೆಹೋಶುವನೂ ಅವ ನೊಂದಿಗೆ ಇಸ್ರಾಯೇಲ್ಯರೆಲ್ಲರೂ ಜೆರಹನ ಮಗನಾದ ಆಕಾನನನ್ನೂ ಆ ಬೆಳ್ಳಿಯನ್ನೂ ವಸ್ತ್ರವನ್ನೂ ಬಂಗಾರದ ಗಟ್ಟಿಯನ್ನೂ ಅವನ ಕುಮಾರರನ್ನೂ ಕುಮಾರ್ತೆಯ ರನ್ನೂ ಅವನ ಎತ್ತುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಅವನ ಡೇರೆಯನ್ನೂ ಅವನಿಗಿದ್ದ ಸಮಸ್ತವನ್ನೂ ತೆಗೆದುಕೊಂಡು ಆಕೋರಿನ ತಗ್ಗಿಗೆ ತಂದರು. ಆಗ ಯೆಹೋಶುವನು ಅವನಿಗೆ--ನೀನು ನಮ್ಮನ್ನು ತೊಂದರೆ ಪಡಿಸಿದ್ದೇನು? ಇಂದು ಕರ್ತನು ನಿನ್ನನ್ನು ತೊಂದರೆ ಪಡಿಸುವನು ಅಂದನು. ಆಗ ಇಸ್ರಾಯೇಲ್ಯ ರೆಲ್ಲರೂ ಅವನ ಮೇಲೆ ಕಲ್ಲೆಸೆದರು. ತರುವಾಯ ಬೆಂಕಿಯಿಂದ ಅವರನ್ನು ಸುಟ್ಟುಬಿಟ್ಟುಅವರ ಮೇಲೆ ಕಲ್ಲು ಕುಪ್ಪೆ ಕೂಡಿಸಿದರು. ಅದು ಈ ದಿನದ ವರೆಗೂ ಇದೆ. ಆಗ ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರುಗಿದನು; ಆದದರಿಂದ ಆ ಸ್ಥಳವು ಈ ವರೆಗೂ ಆಕೋರಿನ ತಗ್ಗೆಂದು ಕರೆಯಲ್ಪಡುವದು.
- Ecclesiastes 11:9 ಪ್ರಸಂಗಿ 11:9ಓ ಯೌವನಸ್ಥನೇ, ನಿನ್ನ ಯೌವನದಲ್ಲಿ ಸಂತೋಷಪಡು. ನಿನ್ನ ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ; ನೀನು ನಿನ್ನ ಹೃದಯದ ಮಾರ್ಗಗಳಲ್ಲಿಯೂ ನಿನ್ನ ಕಣ್ಣುಗಳ ನೋಟ ದಲ್ಲಿಯೂ ನಡೆ; ಆ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯತೀರ್ಪಿಗೆ ತರುವನೆಂದು ತಿಳಿದುಕೋ.ಆದಕಾರಣ ನಿನ್ನ ಹೃದಯದಿಂದ ದುಃಖವನ್ನು ತೆಗೆದು ಹಾಕು; ನಿನ್ನ ಶರೀರದಿಂದ ಕೆಟ್ಟದ್ದನ್ನು ತೆಗೆದುಬಿಡು; ಬಾಲ್ಯವೂ ಯೌವನವೂ ವ್ಯರ್ಥವಾಗಿವೆ.
- Genesis 13:2 ಆದಿಕಾಂಡ 13:2ಅಬ್ರಾಮನು ದನಗಳಲ್ಲಿಯೂ ಬೆಳ್ಳಿಯಲ್ಲಿಯೂ ಬಂಗಾರದಲ್ಲಿಯೂ ಬಹು ಧನವಂತನಾಗಿದ್ದನು.
- Nehemiah 5:17–18 ನೆಹೆಮೀಯ 5:17–18ನಮ್ಮ ಸುತ್ತಲೂ ಇರುವ ಜನಾಂಗಗಳಿಂದ ಬಂದವರ ಹೊರ ತು ಯೆಹೂದ್ಯರೂ ಅಧಿಕಾರಸ್ಥರೂ ನೂರ ಐವತ್ತು ಮಂದಿ ನನ್ನ ಮೇಜಿಗೆ ಸೇರುತ್ತಿದ್ದರು. ಪ್ರತಿದಿನಕ್ಕೆ ಸಿದ್ಧಮಾಡಿದ್ದೇನಂದರೆ, ಒಂದು ಎತ್ತೂ ಉತ್ತಮವಾದ ಆರು ಕುರಿಗಳೂ; ಕೋಳಿಗಳೂ, ಹತ್ತು ದಿವಸಕ್ಕೆ ಒಂದು ಸಾರಿ ಸಕಲ ವಿಧವಾದ ದ್ರಾಕ್ಷಾರಸವೂ ನನಗೋಸ್ಕರ ಸಿದ್ಧಮಾಡಲ್ಪಟ್ಟವು. ಆದರೆ ಈ ಜನರ ಮೇಲೆ ಇದ್ದ ದಾಸತ್ವ ಭಾರವಾಗಿದ್ದದರಿಂದ ನಾನು ಅಧಿಪತಿಯಾದವನ ರೊಟ್ಟಿಯನ್ನು ಇದಕ್ಕೋಸ್ಕರ ಕೇಳಿದ್ದಿಲ್ಲ.ನನ್ನ ದೇವರೆ, ನನಗೆ ಮೇಲನ್ನು ಮಾಡಲು ನಾನು ಈ ಜನರಿಗೆ ಮಾಡಿದ ಎಲ್ಲವನ್ನು ಜ್ಞಾಪಕಮಾಡು.