Ecclesiastes · chapter 7 · verse 6
Ecclesiastes 7:6 in Kannada
ಗಡಿಗೆಯ ಕೆಳಗೆ ಮುಳ್ಳುಗಳ ಚಟಚಟನೆಯ ಶಬ್ದ ಹೇಗೋ ಮೂಢನ ನಗುವು ಹಾಗೆಯೇ ಇರುವದು; ಇದೂ ಕೂಡ ವ್ಯರ್ಥವೇ.
Gadigeya kelage mullugala chatachataneya shabda hego moodhana naguvu haageye iruvadu; idoo kooda vyarthave.
Ecclesiastes 7:6 in English
- King James Version (KJV)
- For as the crackling of thorns under a pot, so [is] the laughter of the fool: this also [is] vanity.
- World English Bible (WEB)
- For as the crackling of thorns under a pot, so is the laughter of the fool. This also is vanity.
- American Standard Version (ASV)
- For as the crackling of thorns under a pot, so is the laughter of the fool: this also is vanity.
- Bible in Basic English (BBE)
- Like the cracking of thorns under a pot, so is the laugh of a foolish man; and this again is to no purpose.
- Darby Translation (DBY)
- For as the crackling of thorns under a pot, so is the laughter of the fool. This also is vanity.
- Webster's Bible (WBS)
- For as the crackling of thorns under a pot, so [is] the laughter of the fool: this also [is] vanity.
- Young's Literal Translation (YLT)
- For as the noise of thorns under the pot, So [is] the laughter of a fool, even this [is] vanity.
Read in context
- 4ಗೋಳಾಟದ ಮನೆಯಲ್ಲಿ ಜ್ಞಾನಿಯ ಹೃದಯವು ಇರುವದು; ಮೂಢರ ಹೃದಯವು ಉಲ್ಲಾ ಸದ ಮನೆಯಲ್ಲಿರುವದು.
- 5ಮೂಢರ ಹಾಡನ್ನು ಒಬ್ಬ ಮನುಷ್ಯನು ಕೇಳುವದಕ್ಕಿಂತ ಜ್ಞಾನಿಗಳ ಗದರಿಕೆಯನ್ನು ಕೇಳುವದು ಲೇಸು.
- 6ಗಡಿಗೆಯ ಕೆಳಗೆ ಮುಳ್ಳುಗಳ ಚಟಚಟನೆಯ ಶಬ್ದ ಹೇಗೋ ಮೂಢನ ನಗುವು ಹಾಗೆಯೇ ಇರುವದು; ಇದೂ ಕೂಡ ವ್ಯರ್ಥವೇ.
- 7ಖಂಡಿತವಾಗಿಯೂ ಬಲಾತ್ಕಾರವು ಜ್ಞಾನಿಯನ್ನು ಹುಚ್ಚನನ್ನಾಗಿ ಮಾಡುತ್ತದೆ; ಲಂಚವು ಹೃದಯವನ್ನು ನಾಶಮಾಡುತ್ತದೆ.
- 8ಒಂದು ಸಂಗತಿಯ ಪ್ರಾರಂಭ ಕ್ಕಿಂತ ಅದರ ಅಂತ್ಯವೇ ಲೇಸು; ಆತ್ಮದಲ್ಲಿ ಗರ್ವಿಷ್ಠ ನಿಗಿಂತ ತಾಳ್ಮೆಯುಳ್ಳವನೇ ಉತ್ತಮ.
Cross references
- Psalm 58:9 ಕೀರ್ತನೆಗಳು 58:9ನಿಮ್ಮ ಗಡಿಗೆಗಳಿಗೆ ಮುಳ್ಳಿನಕಾವು ತಾಗುವದಕ್ಕಿಂತ ಮುಂಚೆ ಅದು ಹಸಿ ಇರುವಾಗಲೇ ದೇವರು ಕೋಪದಿಂದ ಬಿರುಗಾಳಿಯಿಂ ದಲೋ ಎಂಬಂತೆ ಅವರನ್ನು ಹಾರಿಸಿಬಿಡುವನು.
- Psalm 118:12 ಕೀರ್ತನೆಗಳು 118:12ಜೇನ್ನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ ಅವರು ಮುಳ್ಳುಗಳ ಬೆಂಕಿಯ ಹಾಗೆ ಆರಿಹೋಗುತ್ತಾರೆ, ಕರ್ತನ ಹೆಸರಿನಲ್ಲಿ ನಾನು ಅವ ರನ್ನು ಸಂಹರಿಸುವೆನು.
- Ecclesiastes 2:2 ಪ್ರಸಂಗಿ 2:2ನಗೆಯ ವಿಷಯವಾಗಿ--ಇದು ಹುಚ್ಚು ಎಂದೂ ಸಂತೋಷದ ವಿಷಯವಾಗಿ--ಇದೇನು ಮಾಡುತ್ತದೆ ಎಂದೂ ನಾನು ಹೇಳಿದೆನು.
- Luke 6:25 ಲೂಕನು 6:25ತೃಪ್ತಿಯಿಂದಿರುವವರೇ, ನಿಮಗೆ ಅಯ್ಯೋ! ಯಾಕಂದರೆ ನಿಮಗೆ ಹಸಿವೆಯಾಗುವದು. ಈಗ ನಗುವವರೇ, ನಿಮಗೆ ಅಯ್ಯೋ! ನೀವು ಶೋಕಿಸಿ ಅಳುವಿರಿ.
- Jude 1:12–13 ಯೂದನು 1:12–13ಳಂಕರಾದ ಇವರು ನಿಮ್ಮ ಪ್ರೇಮ ಭೋಜನಗಳಲ್ಲಿ ನಿರ್ಭಯವಾಗಿ ತಿಂದು ತಮ್ಮನ್ನು ತಾವೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಬಡಿಸಿಕೊಂಡು ಹೋಗುವ ನೀರಿಲ್ಲದ ಮೇಘಗಳೂ ಎರಡು ಸಾರಿ ಸತ್ತವರೂ ಹಣ್ಣು ಬಿಡದೆ ಒಣಗಿಹೋಗಿ ಬೇರು ಸಹಿತ ಕಿತ್ತುಬಿದ್ದ ಮರಗಳೂ ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ ಸಮುದ್ರದ ಹುಚ್ಚು ತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರ ಗಳಾದ ಇವರ ಪಾಲಿಗೆ ಕಾರ್ಗತ್ತಲೆಯು ಸದಾಕಾಲ ಇಟ್ಟಿರುವದು.
- 2 Peter 2:13–17 2 ಪೇತ್ರನು 2:13–17ತಮ್ಮ ದುರ್ನೀತಿಗೆ ಸರಿಯಾದ ದುಷ್ಪಲವನ್ನು ಹೊಂದುವರು. ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮ ಸಂಗಡ ಸೇರಿ ಔತಣ ಮಾಡುತ್ತಿರುವಾಗ ವಂಚಕ ರಾಗಿದ್ದು ಕಳಂಕಕ್ಕೂ ನಿಂದೆಗೂ ಕಾರಣರಾಗಿದ್ದಾರೆ. ಇವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲ ಚಿತ್ತರನ್ನು ಮರುಳು ಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ. ಇವರು ನೀಟಾದ ಮಾರ್ಗವನ್ನು ಬಿಟ್ಟು ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದು ತಪ್ಪಿಹೋಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಬಳವನ್ನು ಪ್ರೀತಿಸಿದನು. ಆದರೆ ಅವನ ದುಷ್ಟತ್ವಕ್ಕೆ ಖಂಡನೆಯಾಯಿತು; ಮೂಕ ಕತ್ತೆಯು ಮನುಷ್ಯ ಸ್ವರದಿಂದ ಮಾತನಾಡಿ ಆ ಪ್ರವಾದಿಯ ಹುಚ್ಚುತನಕ್ಕೆ ಅಡ್ಡಿ ಮಾಡಿತು. ಇವರು ನೀರಿಲ್ಲದ ಭಾವಿಗಳೂ ಬಿರುಗಾಳಿಯಿಂದ ಬಡಿಸಿಕೊಂಡು ಹಾರಿ ಹೋಗುವ ಮೇಘಗಳೂ ಆಗಿದ್ದಾರೆ. ಇಂಥವರ ಪಾಲಿಗೆ ನಿರಂತರವಾದ ಕಾರ್ಗತ್ತಲು ಇಟ್ಟಿರುವದು.
- Isaiah 65:13–15 ಯೆಶಾಯ 65:13–15ಹೀಗಿರುವದರಿಂದ ದೇವರಾದ ಕರ್ತನು ಹೇಳು ವದೇನಂದರೆ--ಇಗೋ, ನನ್ನ ಸೇವಕರು ತಿನ್ನುವರು ಆದರೆ ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿರುವಿರಿ; ಇಗೋ, ನನ್ನ ಸೇವಕರು ಸಂತೋಷಪಡುವರು; ಆದರೆ ನೀವು ನಾಚಿಕೆಪಡುವಿರಿ; ಇಗೋ, ನನ್ನ ಸೇವಕರು ಹೃದಯದ ಆನಂದದಿಂದ ಹಾಡುವರು, ಆದರೆ ನೀವು ಹೃದಯದ ವ್ಯಸನದಿಂದ ಅಳುವಿರಿ ಮತ್ತು ಮುರಿದ ಆತ್ಮದಿಂದ ಗೋಳಾಡುವಿರಿ. ನಾನು ಆದುಕೊಂಡವರಿಗೆ ನಿಮ್ಮ ಹೆಸರನ್ನು ಶಾಪವಾಗಿ ಉಳಿ ಸುವಿರಿ; ಕರ್ತನಾದ ಯೆಹೋವನು ನಿಮ್ಮನ್ನು ಕೊಂದು ಹಾಕಿ, ತನ್ನ ಸೇವಕರಿಗೆ ಬೇರೆ ಹೆಸರನ್ನು ಇಡುವನು.
- Amos 8:10 ಆಮೋಸ 8:10ನಿಮ್ಮ ಹಬ್ಬಗಳನ್ನು ದುಃಖಕ್ಕೂ ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು; ಎಲ್ಲರೂ ಸೊಂಟಗಳಿಗೆ ಗೋಣೀತಟ್ಟನ್ನು ಕಟ್ಟಿಕೊಂಡು ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು; ಅದನ್ನು ಒಬ್ಬನೇ ಮಗನಿಗಾಗಿ ದುಃಖಿಸುವಂತೆಯೂ ಅದರ ಅಂತ್ಯವು ಕಹಿಯಾದ ದಿನವಾಗುವಂತೆಯೂ ಮಾಡುವೆನು.
- Proverbs 29:9 ಜ್ಞಾನೋಕ್ತಿಗಳು 29:9ಜ್ಞಾನಿಯು ಬುದ್ಧಿಹೀನನೊಂದಿಗೆ ವ್ಯಾಜ್ಯ ಮಾಡಿ ದರೆ ಅವನು ರೇಗಿದರೂ ನಕ್ಕರೂ ಶಮನವಾಗುವು ದಿಲ್ಲ.
- Luke 16:25 ಲೂಕನು 16:25ಆದರೆ ಅಬ್ರಹಾ ಮನು--ಮಗನೇ, ನೀನು ನಿನ್ನ ಜೀವಿತಕಾಲದಲ್ಲಿ ನಿನ್ನ ಒಳ್ಳೆಯವುಗಳನ್ನು ಹೊಂದಿದಿ; ಅದೇ ರೀತಿಯಲ್ಲಿ ಲಾಜರನು ಕೆಟ್ಟವುಗಳನ್ನು ಹೊಂದಿದ್ದನ್ನು ನೆನಪಿಗೆ ತಂದುಕೋ. ಆದರೆ ಈಗ ಅವನು ಆದರಣೆ ಹೊಂದುತ್ತಾ ಇದ್ದಾನೆ; ನೀನು ಯಾತನೆಪಡುತ್ತಾ ಇದ್ದೀ.