Isaiah · chapter 65 · verse 13
Isaiah 65:13 in Kannada
ಹೀಗಿರುವದರಿಂದ ದೇವರಾದ ಕರ್ತನು ಹೇಳು ವದೇನಂದರೆ--ಇಗೋ, ನನ್ನ ಸೇವಕರು ತಿನ್ನುವರು ಆದರೆ ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿರುವಿರಿ; ಇಗೋ, ನನ್ನ ಸೇವಕರು ಸಂತೋಷಪಡುವರು; ಆದರೆ ನೀವು ನಾಚಿಕೆಪಡುವಿರಿ;
Heegiruvadarinda devaraada kartanu helu vadenandare--igo, nanna sevakaru tinnuvaru aadare neevu hasidiruviri; igo, nanna sevakaru kudiyuvaru, aadare neevu baayaariruviri; igo, nanna sevakaru santoshapaduvaru; aadare neevu naachikepaduviri;
Isaiah 65:13 in English
- King James Version (KJV)
- Therefore thus saith the Lord GOD, Behold, my servants shall eat, but ye shall be hungry: behold, my servants shall drink, but ye shall be thirsty: behold, my servants shall rejoice, but ye shall be ashamed:
- World English Bible (WEB)
- Therefore the Lord GOD says, “Behold, my servants will eat, but you will be hungry; behold, my servants will drink, but you will be thirsty. Behold, my servants will rejoice, but you will be disappointed.
- American Standard Version (ASV)
- Therefore thus saith the Lord Jehovah, Behold, my servants shall eat, but ye shall be hungry; behold, my servants shall drink, but ye shall be thirsty; behold, my servants shall rejoice, but ye shall be put to shame;
- Bible in Basic English (BBE)
- For this cause says the Lord God, My servants will have food, but you will be in need of food: my servants will have drink, but you will be dry: my servants will have joy, but you will be shamed:
- Darby Translation (DBY)
- Therefore thus saith the Lord Jehovah: Behold, my servants shall eat, and ye shall be hungry; behold, my servants shall drink, and ye shall be thirsty; behold, my servants shall rejoice, and ye shall be ashamed;
- Webster's Bible (WBS)
- Therefore thus saith the Lord GOD, Behold, my servants shall eat, but ye shall be hungry: behold, my servants shall drink, but ye shall be thirsty: behold, my servants shall rejoice, but ye shall be ashamed:
- Young's Literal Translation (YLT)
- Therefore, thus said the Lord Jehovah: Lo, My servants do eat, and ye do hunger, Lo, My servants do drink, and ye do thirst, Lo, My servants rejoice, and ye are ashamed,
Read in context
- 11ಆದರೆ ಕರ್ತನನ್ನು ಬಿಟ್ಟವರೇ, ನೀವು ನನ್ನ ಪರಿ ಶುದ್ಧ ಪರ್ವತವನ್ನು ಮರೆತವರೇ, ಸೈನ್ಯಕ್ಕೆ ಮೇಜನ್ನು ಸಿದ್ಧಮಾಡಿ ಅವರಿಗೆ ಪಾನದರ್ಪಣೆ ಮಾಡುವವರೇ ಆಗಿದ್ದೀರಿ.
- 12ಆದದರಿಂದ ನಿಮ್ಮನ್ನು ಕತ್ತಿಗೆ ನೇಮಿಸು ವೆನು ನೀವೆಲ್ಲರೂ ಕೊಲೆಗೆ ಬೊಗ್ಗಿಕೊಳ್ಳುವಿರಿ. ನಾನು ಕರೆಯಲು, ನೀವು ಉತ್ತರ ಕೊಡಲಿಲ್ಲ; ನಾನು ಮಾತನಾಡಲು ನೀವು ಕೇಳಿಸಿಕೊಳ್ಳಲಿಲ್ಲ; ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದಿರಿ, ನಾನು ಮೆಚ್ಚದ್ದನ್ನು ಆರಿಸಿಕೊಂಡಿರಿ.
- 13ಹೀಗಿರುವದರಿಂದ ದೇವರಾದ ಕರ್ತನು ಹೇಳು ವದೇನಂದರೆ--ಇಗೋ, ನನ್ನ ಸೇವಕರು ತಿನ್ನುವರು ಆದರೆ ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿರುವಿರಿ; ಇಗೋ, ನನ್ನ ಸೇವಕರು ಸಂತೋಷಪಡುವರು; ಆದರೆ ನೀವು ನಾಚಿಕೆಪಡುವಿರಿ;
- 14ಇಗೋ, ನನ್ನ ಸೇವಕರು ಹೃದಯದ ಆನಂದದಿಂದ ಹಾಡುವರು, ಆದರೆ ನೀವು ಹೃದಯದ ವ್ಯಸನದಿಂದ ಅಳುವಿರಿ ಮತ್ತು ಮುರಿದ ಆತ್ಮದಿಂದ ಗೋಳಾಡುವಿರಿ.
- 15ನಾನು ಆದುಕೊಂಡವರಿಗೆ ನಿಮ್ಮ ಹೆಸರನ್ನು ಶಾಪವಾಗಿ ಉಳಿ ಸುವಿರಿ; ಕರ್ತನಾದ ಯೆಹೋವನು ನಿಮ್ಮನ್ನು ಕೊಂದು ಹಾಕಿ, ತನ್ನ ಸೇವಕರಿಗೆ ಬೇರೆ ಹೆಸರನ್ನು ಇಡುವನು.
Cross references
- Malachi 3:18 ಮಲಾಕಿಯ 3:18ಆಗ ನೀವು ತಿಳುಕೊಂಡು ನೀತಿವಂತ ನಿಗೂ ದುಷ್ಟನಿಗೂ ದೇವರ ಸೇವೆಮಾಡುವವನಿಗೂ ಮಾಡದವನಿಗೂ ಇರುವ ಹೆಚ್ಚುಕಡಿಮೆಯನ್ನು ತಿಳುಕೊಳ್ಳುವಿರಿ.
- Isaiah 66:14 ಯೆಶಾಯ 66:14ನೀವು ಅದನ್ನು ನೋಡುವಾಗ ನಿಮ್ಮ ಹೃದಯವು ಸಂತೋಷಿಸುವದು, ನಿಮ್ಮ ಎಲುಬು ಗಳು ಹಸಿರು ಪಲ್ಯದ ಹಾಗೆ ಚಿಗುರುವವು; ಕರ್ತನ ಕೈ ಆತನ ಸೇವಕನ ಕಡೆಗೂ ಆತನ ರೌದ್ರವು ಆತನ ಶತ್ರುಗಳ ಕಡೆಗೂ ಕಾಣಬರುವದು.
- Luke 16:24–25 ಲೂಕನು 16:24–25ಅವನು--ತಂದೆಯಾದ ಅಬ್ರಹಾ ಮನೇ, ನನ್ನ ಮೇಲೆ ಕರುಣೆ ಇಟ್ಟು ಲಾಜರನು ತನ್ನ ತುದಿಬೆರಳನ್ನು ನೀರಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡುವಂತೆ ಅವನನ್ನು ಕಳುಹಿಸು; ಯಾಕಂದರೆ ನಾನು ಈ ಉರಿಯಲ್ಲಿ ಯಾತನೆಪಡುತ್ತಾ ಇದ್ದೇನೆ ಎಂದು ಕೂಗಿ ಹೇಳಿದನು. ಆದರೆ ಅಬ್ರಹಾ ಮನು--ಮಗನೇ, ನೀನು ನಿನ್ನ ಜೀವಿತಕಾಲದಲ್ಲಿ ನಿನ್ನ ಒಳ್ಳೆಯವುಗಳನ್ನು ಹೊಂದಿದಿ; ಅದೇ ರೀತಿಯಲ್ಲಿ ಲಾಜರನು ಕೆಟ್ಟವುಗಳನ್ನು ಹೊಂದಿದ್ದನ್ನು ನೆನಪಿಗೆ ತಂದುಕೋ. ಆದರೆ ಈಗ ಅವನು ಆದರಣೆ ಹೊಂದುತ್ತಾ ಇದ್ದಾನೆ; ನೀನು ಯಾತನೆಪಡುತ್ತಾ ಇದ್ದೀ.
- Isaiah 61:7 ಯೆಶಾಯ 61:7ನಿಮ್ಮ ಅವಮಾನಕ್ಕೆ ಬದಲಾಗಿ ಮಾನವು ಎರಡರಷ್ಟಾಗು ವದು. ಬದಲಾಗಿ ತಮ್ಮ ಪಾಲಿನಲ್ಲಿ ಹರ್ಷಿಸುವರು; ಆದದರಿಂದ ತಮ್ಮ ದೇಶದಲ್ಲಿ ಎರಡರಷ್ಟು ಸ್ವಾಧೀನ ಮಾಡಿಕೊಳ್ಳುವರು, ನಿತ್ಯವಾದ ಸಂತೋಷವು ಅವರಿಗೆ ಆಗುವದು.
- Isaiah 66:5 ಯೆಶಾಯ 66:5ಕರ್ತನ ವಾಕ್ಯವನ್ನು ಕೇಳಿರಿ, ಆತನ ವಾಕ್ಯಕ್ಕೆ ನಡಗುವವರೇ, ನಿಮ್ಮ ಸಹೋದರರು ನಿಮ್ಮನ್ನು ಹಗೆಮಾಡಿ ನನ್ನ ಹೆಸರಿಗೋಸ್ಕರ ನಿಮ್ಮನ್ನು ಹೊರಗೆ ಹಾಕಿ--ಕರ್ತನು ಮಹಿಮೆ ಹೊಂದಲೆಂದು ಹೇಳಿ ದ್ದಾರೆ; ಆದರೆ ಆತನು ನಿಮ್ಮ ಸಂತೋಷಕ್ಕಾಗಿ ಕಾಣಿಸಿ ಕೊಳ್ಳುವನು; ಅವರು ನಾಚಿಕೆಪಡುವರು.
- Isaiah 44:9 ಯೆಶಾಯ 44:9ಕೆತ್ತಿದ ವಿಗ್ರಹವನ್ನು ಮಾಡುವವರೆಲ್ಲರೂ ವ್ಯರ್ಥ ರೇ; ಅವರ ಮನೋರಂಜಕ ವಸ್ತುಗಳು ಯಾತಕ್ಕೂ ಬಾರವು; ಅವರು ನೋಡದೆ ಇಲ್ಲವೆ ತಿಳಿಯದೆ, ನಾಚಿಕೆಗೆ ಗುರಿಯಾಗುವಂತೆ ಅವುಗಳೇ ಅವರಿಗೆ ಸ್ವಂತ ಸಾಕ್ಷಿಗಳಾಗಿರುವವು.
- Luke 14:23–24 ಲೂಕನು 14:23–24ಆಗ ಯಜ ಮಾನನು ಸೇವಕನಿಗೆ--ನೀನು ಬೀದಿಗಳಿಗೂ ಬೇಲಿಗಳ ಬಳಿಗೂ ಹೊರಟುಹೋಗಿ ನನ್ನ ಮನೆ ತುಂಬಿಕೊಳ್ಳುವಂತೆ ಒಳಗೆ ಬರಲು ಅವರನ್ನು ಬಲ ವಂತಮಾಡು; ಕರೆಯಲ್ಪಟ್ಟ ಆ ಜನರಲ್ಲಿ ಒಬ್ಬ ನಾದರೂ ನನ್ನ ಔತಣವನ್ನು ರುಚಿನೋಡಬಾರದು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
- Psalm 34:10 ಕೀರ್ತನೆಗಳು 34:10ಪ್ರಾಯದ ಸಿಂಹಗಳು ಕೊರತೆಯಾಗಿ ಹಸಿಯುತ್ತವೆ; ಆದರೆ ಕರ್ತನನ್ನು ಹುಡುಕುವವರು ಯಾವ ಒಳ್ಳೆಯ ದಕ್ಕಾದರೂ ಕೊರತೆ ಪಡುವದಿಲ್ಲ.
- Psalm 37:19–20 ಕೀರ್ತನೆಗಳು 37:19–20ವಿಪತ್ಕಾಲದಲ್ಲಿ ಅವರು ಆಶಾಭಂಗ ಪಡುವದಿಲ್ಲ; ಕ್ಷಾಮದ ದಿವಸಗಳಲ್ಲಿ ತೃಪ್ತಿಪಡುವರು. ದುಷ್ಟರು ನಾಶವಾಗುವರು; ಕರ್ತನ ಶತ್ರುಗಳು ಕುರಿಮರಿಗಳ ಕೊಬ್ಬಿನ ಹಾಗೆ ಇದ್ದು ಕರಗಿಹೋಗು ವರು; ಹೊಗೆಯಲ್ಲಿ ಕರಗಿಹೋಗುವರು.
- Isaiah 1:19 ಯೆಶಾಯ 1:19ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ;
- Isaiah 41:17 ಯೆಶಾಯ 41:17ಬಡವರೂ ದರಿದ್ರರೂ ನೀರನ್ನು ಹುಡುಕಿ ಕಾಣದೇ ಬಾಯಾರಿಕೆಯಿಂದ ನಾಲಿಗೆ ಒಣಗಿದಾಗ ಕರ್ತನಾದ ನಾನೇ ಅವರನ್ನು ಅಲೈಸುವೆನು, ಇಸ್ರಾಯೇಲ್ ದೇವ ರಾಗಿರುವ ನಾನು ಅವರನ್ನು ಕೈಬಿಡೆನು.
- Daniel 12:2 ದಾನಿಯೇಲನು 12:2ಭೂಮಿಯ ಧೂಳಿನೊಳಗೆ ನಿದ್ರೆಮಾಡುವವ ರಲ್ಲಿ ಅನೇಕರು ಎಚ್ಚತ್ತು ಕೆಲವರು ನಿತ್ಯಜೀವವನ್ನೂ ಕೆಲವರು ನಿತ್ಯ ನಾಚಿಕೆಗಳನ್ನೂ ಅನುಭವಿಸುವರು.