Ecclesiastes · chapter 7 · verse 9
Ecclesiastes 7:9 in Kannada
ಕೋಪಿಸಿಕೊಳ್ಳು ವದಕ್ಕೆ ನಿನ್ನ ಮನಸ್ಸಿನಲ್ಲಿ ಆತುರಪಡದಿರು; ಕೋಪವು ಮೂಢರ ಎದೆಯಲ್ಲಿ ನೆಲೆಗೊಳ್ಳುತ್ತದೆ.
Kopisikollu vadakke ninna manassinalli aaturapadadiru; kopavu moodhara edeyalli nelegolluttade.
Ecclesiastes 7:9 in English
- King James Version (KJV)
- Be not hasty in thy spirit to be angry: for anger resteth in the bosom of fools.
- World English Bible (WEB)
- Don’t be hasty in your spirit to be angry, for anger rests in the bosom of fools.
- American Standard Version (ASV)
- Be not hasty in thy spirit to be angry; for anger resteth in the bosom of fools.
- Bible in Basic English (BBE)
- Be not quick to let your spirit be angry; because wrath is in the heart of the foolish.
- Darby Translation (DBY)
- Be not hasty in thy spirit to be vexed; for vexation resteth in the bosom of fools.
- Webster's Bible (WBS)
- Be not hasty in thy spirit to be angry: for anger resteth in the bosom of fools.
- Young's Literal Translation (YLT)
- Be not hasty in thy spirit to be angry, For anger in the bosom of fools resteth.
Read in context
- 7ಖಂಡಿತವಾಗಿಯೂ ಬಲಾತ್ಕಾರವು ಜ್ಞಾನಿಯನ್ನು ಹುಚ್ಚನನ್ನಾಗಿ ಮಾಡುತ್ತದೆ; ಲಂಚವು ಹೃದಯವನ್ನು ನಾಶಮಾಡುತ್ತದೆ.
- 8ಒಂದು ಸಂಗತಿಯ ಪ್ರಾರಂಭ ಕ್ಕಿಂತ ಅದರ ಅಂತ್ಯವೇ ಲೇಸು; ಆತ್ಮದಲ್ಲಿ ಗರ್ವಿಷ್ಠ ನಿಗಿಂತ ತಾಳ್ಮೆಯುಳ್ಳವನೇ ಉತ್ತಮ.
- 9ಕೋಪಿಸಿಕೊಳ್ಳು ವದಕ್ಕೆ ನಿನ್ನ ಮನಸ್ಸಿನಲ್ಲಿ ಆತುರಪಡದಿರು; ಕೋಪವು ಮೂಢರ ಎದೆಯಲ್ಲಿ ನೆಲೆಗೊಳ್ಳುತ್ತದೆ.
- 10ಹಿಂದಿನ ದಿವಸಗಳು ಈ ದಿವಸಗಳಿಗಿಂತ ಮೇಲಾ ಗಿರುವದಕ್ಕಾಗಿ ಕಾರಣವೇನು ಎಂದು ನೀನು ಹೇಳ ಬೇಡ. ಈ ವಿಷಯದಲ್ಲಿ ನೀನು ಜ್ಞಾನದಿಂದ ವಿಚಾರಿ ಸುವದಿಲ್ಲ.
- 11ಜ್ಞಾನವು ಬಾಧ್ಯತೆಯ ಹಾಗೆ ಒಳ್ಳೇದು. ಸೂರ್ಯನನ್ನು ನೋಡುವವರಿಗೆ ಅದರಿಂದ ಲಾಭ ವಿದೆ.
Cross references
- James 1:19 ಯಾಕೋಬನು 1:19ಆದದರಿಂದ ನನ್ನ ಪ್ರಿಯ ಸಹೋದರರೇ, ಪ್ರತಿ ಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತನಾಡುವದರಲ್ಲಿ ಮತ್ತು ಕೋಪಿಸುವದರಲ್ಲಿ ನಿಧಾನವಾಗಿಯೂ ಇರಲಿ.
- Proverbs 14:17 ಜ್ಞಾನೋಕ್ತಿಗಳು 14:17ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುತ್ತಾನೆ; ಕುಯುಕ್ತಿಯುಳ್ಳವನು ಹಗೆಮಾಡು ತ್ತಾನೆ.
- Proverbs 16:32 ಜ್ಞಾನೋಕ್ತಿಗಳು 16:32ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠನು, ತನ್ನ ಮನಸ್ಸನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಉತ್ತಮನು.ಉಡಿಲಲ್ಲಿ ಚೀಟು ಹಾಕಬಹುದು; ಅದನ್ನು ಸ್ಥಿತಿಗೆ ತರುವಂತದ್ದು ಕರ್ತನದೇ.
- Ephesians 4:26–27 ಎಫೆಸದವರಿಗೆ 4:26–27ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ; ಸೈತಾನನಿಗೆ ಅವಕಾಶ ಕೊಡಲೇಬೇಡಿರಿ.
- Proverbs 26:23–26 ಜ್ಞಾನೋಕ್ತಿಗಳು 26:23–26ಉರಿಯುವ ತುಟಿ ಗಳೂ ಕೆಟ್ಟಹೃದಯವೂ ಬೆಳ್ಳಿಯ ಕಿಟ್ಟದಿಂದ ಮುಚ್ಚ ಲ್ಪಟ್ಟ ಬೋಕಿಯಂತೆ ಇದೆ. ಹಗೆಮಾಡುವವನು ತನ್ನ ತುಟಿಗಳಿಂದ ಮೋಸವನ್ನು ನಟಿಸುತ್ತಾನೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾನೆ. ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ. ಯಾವನ ಹಗೆ ತನವು ಮೋಸದಿಂದ ಮುಚ್ಚಲ್ಪಟ್ಟಿದೆಯೋ ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವದು.
- Genesis 34:7–8 ಆದಿಕಾಂಡ 34:7–8ಯಾಕೋಬನ ಮಕ್ಕಳು ಅದನ್ನು ಕೇಳಿದಾಗ ಅವರು ಹೊಲದಿಂದ ಬಂದರು. ಶೆಕೆಮನು ಯಾಕೋಬನ ಮಗಳ ಸಂಗಡ ಮಲಗಿ ಇಸ್ರಾಯೇಲಿ ನಲ್ಲಿ ಅವಮಾನಕರವಾದದ್ದನ್ನು ಮಾಡಿದ್ದರಿಂದ ಆ ಮನುಷ್ಯರು ವ್ಯಸನಪಟ್ಟು ಬಹಳ ಉರಿಗೊಂಡರು. ಅದು ಹಾಗೆ ಆಗಬಾರದಾಗಿತ್ತು. ಹಮೋರನು ಅವರಿಗೆ--ನನ್ನ ಮಗನಾದ ಶೆಕೆಮನ ಮನಸ್ಸು ನಿಮ್ಮ ಮಗಳಿಗಾಗಿ ಆಶಿಸುತ್ತದೆ. ಆಕೆಯನ್ನು ಅವನಿಗೆ ಹೆಂಡತಿಯಾಗಿ ಕೊಡಿರಿ ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ;
- Genesis 34:30–31 ಆದಿಕಾಂಡ 34:30–31ಆಗ ಯಾಕೋಬನು ಸಿಮೆಯೋನನಿಗೂ ಲೇವಿಗೂ ಹೇಳಿದ್ದೇನಂದರೆ--ನೀವು ನನ್ನನ್ನು ದೇಶದ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ದುರ್ವಾಸನೆಯಾಗುವಂತೆ ಮಾಡಿ ನನ್ನನ್ನು ಕಳವಳಪಡಿ ಸಿದಿರಿ; ನಾನು ಸ್ವಲ್ಪ ಮಂದಿಯುಳ್ಳವನು, ಹೀಗಿರುವಲ್ಲಿ ಅವರು ನನಗೆ ವಿರೋಧವಾಗಿ ಕೂಡಿಕೊಂಡು ನನ್ನನ್ನು ಕೊಲ್ಲುವರು. ಆಗ ನಾನೂ ನನ್ನ ಮನೆಯವರೂ ನಾಶವಾಗುವೆವು ಅಂದನು.ಆದರೆ ಅವರುನಮ್ಮ ತಂಗಿಯೊಂದಿಗೆ ಸೂಳೆಯಂತೆ ವರ್ತಿಸಬಹುದೋ ಅಂದರು. ಆದರೆ ಅವರುನಮ್ಮ ತಂಗಿಯೊಂದಿಗೆ ಸೂಳೆಯಂತೆ ವರ್ತಿಸಬಹುದೋ ಅಂದರು.
- 1 Samuel 25:21–22 1 ಸಮುವೇಲನು 25:21–22ಆದರೆ ದಾವೀದನು--ಅಡವಿ ಯಲ್ಲಿದ್ದ ಇವನ ಎಲ್ಲಾದರಲ್ಲಿ ಒಂದಾದರೂ ಕಳಕೊಳ್ಳದ ಹಾಗೆ ನಾನು ಕಾಪಾಡಿದ್ದು ವ್ಯರ್ಥವಾಯಿತು. ಆದರೆ ನಾನು ಮಾಡಿದ ಉಪಕಾರಕ್ಕೆ ಬದಲಾಗಿ ಈಗ ಅವನು ನನಗೆ ಅಪಕಾರ ಮಾಡಿದ್ದಾನೆ. ಅವನಿಗೆ ಇರುವವ ರೆಲ್ಲರಲ್ಲಿ ಉದಯವಾಗುವವರೆಗೆ ನಾನು ಒಬ್ಬ ಗಂಡ ಸನ್ನು ಉಳಿಸಿದರೆ ದೇವರು ದಾವೀದನ ಶತ್ರುಗಳಿಗೆ ಹೀಗೆಯೂ ಇದಕ್ಕಿಂತ ಅಧಿಕವಾಗಿಯೂ ಮಾಡಲಿ ಅಂದನು.
- 2 Samuel 13:22 2 ಸಮುವೇಲನು 13:22ಅಬ್ಷಾಲೋಮನು ತನ್ನ ಸಹೋದರನಾದ ಅಮ್ನೋನನ ಸಂಗಡ ಒಳ್ಳೇದಾ ದರೂ ಕೆಟ್ಟದ್ದಾದರೂ ಮಾತನಾಡದೆ ಇದ್ದನು. ಅವನು ತನ್ನ ಸಹೋದರಿಯಾದ ತಾಮಾರಳನ್ನು ಬಲವಂತ ಮಾಡಿದ್ದರಿಂದ ಅಬ್ಷಾಲೋಮನು ಅವನನ್ನು ಹಗೆ ಮಾಡಿದನು.
- Genesis 4:5–6 ಆದಿಕಾಂಡ 4:5–6ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಆತನು ಗೌರವಿಸಲಿಲ್ಲ. ಆಗ ಕಾಯಿ ನನು ಬಹು ಕೋಪಗೊಂಡನು, ಅವನ ಮುಖವು ಕಳೆಗುಂದಿತು. ಆಗ ಕರ್ತನು ಕಾಯಿನನಿಗೆ--ಯಾಕೆ ಕೋಪಗೊಂಡಿದ್ದೀ? ಯಾಕೆ ನಿನ್ನ ಮುಖವು ಕಳೆಗುಂದಿತು?
- Esther 3:5–6 ಎಸ್ತೇರಳು 3:5–6ಮೊರ್ದೆಕೈ ತನಗೆ ಬೊಗ್ಗದೆ ಅಡ್ಡ ಬೀಳದೆ ಇರು ವದನ್ನು ಹಾಮಾನನು ನೋಡಿ ಕೋಪವುಳ್ಳವ ನಾದನು. ಆದರೆ ಮೊರ್ದೆಕೈಯ ಮೇಲೆ ಮಾತ್ರ ಕೈ ಹಾಕುವದು ಅವನಿಗೆ ಅಲ್ಪವಾಗಿ ತೋರಿತು. ಯಾಕಂದರೆ ಅವರು ಮೊರ್ದೆಕೈ ಜನವನ್ನು ಅವನಿಗೆ ತೋರಿಸಿದ್ದರು. ಆದದರಿಂದ ಹಾಮಾನನು ಅಹಷ್ವೇರೋಷನ ಸಮಸ್ತ ರಾಜ್ಯದಲ್ಲಿರುವ ಮೊರ್ದೆಕೈಯ ಜನವಾದ ಯೆಹೂದ್ಯರನ್ನೆಲ್ಲಾ ನಾಶಮಾಡಲು ಯೋಚಿ ಸಿದನು.
- 2 Samuel 19:43 2 ಸಮುವೇಲನು 19:43ಆದರೆ ಇಸ್ರಾ ಯೇಲ್ ಜನರು ಯೆಹೂದ ಜನರಿಗೆ ಪ್ರತ್ಯುತ್ತರ ವಾಗಿ--ಅರಸನಲ್ಲಿ ನಮಗೆ ಹತ್ತು ಪಾಲುಂಟು; ನಿಮಗಿಂತ ನಮಗೆ ದಾವೀದನ ಬಾಧ್ಯತೆಯು ಅಧಿಕವಾಗಿದೆ. ನಮ್ಮ ಅರಸನನ್ನು ತಿರಿಗಿ ಕರಕೊಂಡು ಬರುವದರ ವಿಷಯದಲ್ಲಿ ಮೊದಲು ಮಾತನಾಡಿ ದವರು ನಾವಲ್ಲವೋ? ಹಾಗಾದರೆ ನಮ್ಮನ್ನು ಯಾಕೆ ಅಲ್ಪವಾಗಿ ಎಣಿಸಿದಿರಿ ಅಂದರು. ಆದರೆ ಇಸ್ರಾಯೇಲ್ ಜನರ ಮಾತುಗಳಿಗಿಂತ ಯೆಹೂದ ಜನರ ಮಾತುಗಳು ಕಠಿಣವಾಗಿದ್ದವು.