Esther · chapter 3 · verse 4
Esther 3:4 in Kannada
ಆದರೆ ಅವರು ದಿನ ದಿನ ಅವನಿಗೆ ಹೇಳಿದಾಗ್ಯೂ ಅವನು ಅವರ ಮಾತು ಕೇಳದೆ ಹೋದದರಿಂದ ಅವರು ಮೊರ್ದೆಕೈಯ ಮಾತುಗಳು ನಿಲ್ಲುವವೋ ಎಂದು ನೋಡಿಕೊಳ್ಳಲು ಹಾಮಾನನಿಗೆ ತಿಳಿಸಿದರು. ಯಾಕಂದರೆ ತಾನು ಯೆಹೂದ್ಯನೆಂದು ಅವರಿಗೆ ಹೇಳಿದ್ದನು.
Aadare avaru dina dina avanige helidaagyoo avanu avara maatu kelade hodadarinda avaru mordekaiya maatugalu nilluvavo endu nodikollalu haamaananige tilisidaru. Yaakandare taanu yehoodyanendu avarige heliddanu.
Esther 3:4 in English
- King James Version (KJV)
- Now it came to pass, when they spake daily unto him, and he hearkened not unto them, that they told Haman, to see whether Mordecai’s matters would stand: for he had told them that he [was] a Jew.
- World English Bible (WEB)
- Now it came to pass, when they spoke daily to him, and he didn’t listen to them, that they told Haman, to see whether Mordecai’s reason would stand; for he had told them that he was a Jew.
- American Standard Version (ASV)
- Now it came to pass, when they spake daily unto him, and he hearkened not unto them, that they told Haman, to see whether Mordecai’s matters would stand: for he had told them that he was a Jew.
- Bible in Basic English (BBE)
- Now when they had said this to him day after day and he gave no attention, they let Haman have news of it, to see if Mordecai's behaviour would be overlooked: for he had said to them that he was a Jew.
- Darby Translation (DBY)
- And it came to pass as they spoke daily to him, and he hearkened not to them, that they informed Haman, to see whether Mordecai's matters would stand; for he had told them that he was a Jew.
- Webster's Bible (WBS)
- Now it came to pass, when they spoke daily to him, and he hearkened not to them, that they told Haman, to see whether Mordecai's matters would stand: for he had told them that he [was] a Jew.
- Young's Literal Translation (YLT)
- And it cometh to pass, in their speaking unto him, day by day, and he hath not hearkened unto them, that they declare [it] to Haman, to see whether the words of Mordecai do stand, for he hath declared to them that he [is] a Jew.
Read in context
- 2ಆದಕಾರಣ ಅರಮನೆಯ ಬಾಗಲ ಲ್ಲಿರುವ ಅರಸನ ಸಮಸ್ತ ಸೇವಕರು ಬೊಗ್ಗಿ ಹಾಮಾನ ನಿಗೆ ಅಡ್ಡಬಿದ್ದರು. ಅರಸನು ಅವನನ್ನು ಕುರಿತು ಹಾಗೆಯೇ ಆಜ್ಞಾಪಿಸಿದ್ದನು, ಆದರೆ ಮೊರ್ದೆಕೈ ಬೊಗ್ಗದೆ ಅಡ್ಡಬೀಳದೆ ಇದ್ದನು.
- 3ಆಗ ಅರಮನೆಯ ಬಾಗಲಲ್ಲಿರುವ ಅರಸನ ಸೇವಕರು ಮೊರ್ದೆಕೈಗೆ ನೀನು ಅರಸನ ಆಜ್ಞೆಯನ್ನು ವಿಾರುವದೇನು ಅಂದರು.
- 4ಆದರೆ ಅವರು ದಿನ ದಿನ ಅವನಿಗೆ ಹೇಳಿದಾಗ್ಯೂ ಅವನು ಅವರ ಮಾತು ಕೇಳದೆ ಹೋದದರಿಂದ ಅವರು ಮೊರ್ದೆಕೈಯ ಮಾತುಗಳು ನಿಲ್ಲುವವೋ ಎಂದು ನೋಡಿಕೊಳ್ಳಲು ಹಾಮಾನನಿಗೆ ತಿಳಿಸಿದರು. ಯಾಕಂದರೆ ತಾನು ಯೆಹೂದ್ಯನೆಂದು ಅವರಿಗೆ ಹೇಳಿದ್ದನು.
- 5ಮೊರ್ದೆಕೈ ತನಗೆ ಬೊಗ್ಗದೆ ಅಡ್ಡ ಬೀಳದೆ ಇರು ವದನ್ನು ಹಾಮಾನನು ನೋಡಿ ಕೋಪವುಳ್ಳವ ನಾದನು.
- 6ಆದರೆ ಮೊರ್ದೆಕೈಯ ಮೇಲೆ ಮಾತ್ರ ಕೈ ಹಾಕುವದು ಅವನಿಗೆ ಅಲ್ಪವಾಗಿ ತೋರಿತು. ಯಾಕಂದರೆ ಅವರು ಮೊರ್ದೆಕೈ ಜನವನ್ನು ಅವನಿಗೆ ತೋರಿಸಿದ್ದರು. ಆದದರಿಂದ ಹಾಮಾನನು ಅಹಷ್ವೇರೋಷನ ಸಮಸ್ತ ರಾಜ್ಯದಲ್ಲಿರುವ ಮೊರ್ದೆಕೈಯ ಜನವಾದ ಯೆಹೂದ್ಯರನ್ನೆಲ್ಲಾ ನಾಶಮಾಡಲು ಯೋಚಿ ಸಿದನು.
Cross references
- Genesis 39:10 ಆದಿಕಾಂಡ 39:10ಅವಳು ಪ್ರತಿದಿನ ಯೋಸೇಫನ ಸಂಗಡ ಮಾತನಾಡಿದಾಗ್ಯೂ ಅವನು ಅವಳ ಕೂಡ ಮಲಗುವದಕ್ಕಾದರೂ ಅವಳ ಹತ್ತಿರ ಇರುವದ ಕ್ಕಾದರೂ ಕಿವಿಗೊಡದೆ ಹೋದನು.
- Daniel 6:20–28 ದಾನಿಯೇಲನು 6:20–28ಗವಿಯ ಹತ್ತಿರ ಬಂದಾಗ ದುಃಖದ ಧ್ವನಿಯಲ್ಲಿ ದಾನಿಯೇಲನ ಕಡೆಗೆ ಕೂಗಿದನು; ಅರಸನು ಮಾತನಾಡಿ ದಾನಿಯೇಲನಿಗೆ--ಜೀವವುಳ್ಳ ದೇವರ ಸೇವಕನಾದ ಓ ದಾನಿಯೇಲನೇ, ನೀನು ಯಾವಾ ಗಲೂ ಸೇವಿಸುವ ಆ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಬಿಡಿಸಲು ಸಮರ್ಥನಾಗಿದ್ದಾನೆಯೇ? ಎಂದು ಕೇಳಿದನು. ಆಗ ದಾನಿಯೇಲನು ಅರಸನಿಗೆ--ಓ ಅರಸನೇ, ನೀನು ನಿರಂತರವಾಗಿ ಬಾಳು. ನನ್ನ ದೇವರು ತನ್ನ ದೂತನನ್ನು ಕಳುಹಿಸಿ ನನಗೆ ಕೇಡು ಮಾಡದ ಹಾಗೆ ಸಿಂಹಗಳ ಬಾಯಿಗಳನ್ನು ಮುಚ್ಚಿ ಹಾಕಿದ್ದಾನೆ; ಆತನ ಮುಂದೆ ನಾನು ಯಥಾರ್ಥನೆಂದು ತಿಳಿದುಬಂದಿದ್ದೇನೆ. ಓ ಅರಸನೇ, ನಿನ್ನ ಮುಂದೆಯೂ ಸಹ ನಾನು ಯಾರಿಗೂ ಕೇಡುಮಾಡಲಿಲ್ಲ ಎಂದು ಹೇಳಿದನು. ಆಗ ಅರಸನು ಅವನ ವಿಷಯದಲ್ಲಿ ಬಹಳ ಸಂತೋಷಪಟ್ಟು ದಾನಿಯೇಲನನ್ನು ಗವಿಯೊಳ ಗಿಂದ ಮೇಲಕ್ಕೆತ್ತಬೇಕೆಂದು ಆಜ್ಞೆ ಮಾಡಿದನು; ಹೀಗೆ ದಾನಿಯೇಲನನ್ನು ಗವಿಯೊಳಗಿಂದ ಮೇಲಕೆತ್ತಿದರು ಮತ್ತು ಅವನು ತನ್ನ ದೇವರಲ್ಲಿ ನಂಬಿಕೆಯಿಟ್ಟದ್ದರಿಂದ ಯಾವ ತರಹ ಹಾನಿಯೂ ಅವನಲ್ಲಿ ಕಾಣಲಿಲ್ಲ. ಆಗ ಅರಸನು ಆಜ್ಞಾಪಿಸಲಾಗಿ ದಾನಿಯೇಲನ ಮೇಲೆ ತಪ್ಪುಹೊರಿಸಿದ ಮನುಷ್ಯರನ್ನು ತಂದು ಅವ ರನ್ನೂ ಅವರ ಹೆಂಡತಿ ಮಕ್ಕಳನ್ನೂ ಸಿಂಹಗಳ ಗವಿಯಲ್ಲಿ ಹಾಕಿದರು. ಅವರು ಗವಿಯ ತಳವನ್ನು ಮುಟ್ಟುವದಕ್ಕೆ ಮೊದಲೇ ಸಿಂಹಗಳು ಹಾರಿಬಂದು ಅವರ ಎಲುಬುಗ ಳನ್ನೆಲ್ಲಾ ತುಂಡು ತುಂಡಾಗಿ ಮುರಿದು ಹಾಕಿದವು. ಆಗ ಅರಸನಾದ ದಾರ್ಯಾವೆಷನು ಭೂಲೋ ಕದ ಎಲ್ಲಾ ಕಡೆಯಲ್ಲೂ ವಾಸವಾಗಿರುವ ಸಕಲ ಪ್ರಜೆ, ಜನಾಂಗ ಭಾಷೆಗಳವರಿಗೆ ಬರೆದದ್ದೇನಂದರೆ--ನಿಮಗೆ ಸಮಾಧಾನವು ಹೆಚ್ಚಾಗಲಿ. ನಾನು ಮಾಡುವ ತೀರ್ಮಾನವೇನಂದರೆ, ನನ್ನ ರಾಜ್ಯದ ಪ್ರತಿಯೊಬ್ಬ ಮನುಷ್ಯರು ದಾನಿಯೇಲನ ದೇವರಿಗೆ ಭಯಭಕ್ತಿ ಯಿಂದ ನಡೆದುಕೊಳ್ಳಬೇಕು. ಯಾಕಂದರೆ ಜೀವವುಳ್ಳ ದೇವರಾಗಿದ್ದು ಎಂದೆಂದಿಗೂ ಸ್ಥಿರವಾದವನು ಆತನೇ. ಆತನ ರಾಜ್ಯವು ನಾಶವಾಗದೆ ಆತನ ಆಳಿಕೆಯು ಶಾಶ್ವತವಾಗಿ ಕೊನೆಯವರೆಗೂ ನಿಲ್ಲುವದು. ಆತನೇ ಉದ್ಧರಿಸುವವನೂ ರಕ್ಷಿಸುವವನೂ ಆಗಿದ್ದು ಪರ ಲೋಕದಲ್ಲಿಯೂ ಭೂಲೋಕದಲ್ಲಿಯೂ ಅದ್ಭುತ ಮಹತ್ವಗಳನ್ನು ನಡೆಸುತ್ತಾನೆ; ದಾನಿಯೇಲನನ್ನು ಸಿಂಹ ಗಳ ಸಾಮರ್ಥ್ಯದಿಂದ ಬಿಡಿಸಿದಾತನು ಆತನೇ.ಹೀಗೆ ಈ ದಾನಿಯೇಲನು ದಾರ್ಯಾವೆಷನ ಆಳಿಕೆಯಲ್ಲಿಯೂ ಪಾರಸೀಯನಾದ ಕೋರೇಷನ ಆಳಿಕೆಯಲ್ಲಿಯೂ ಅಭಿವೃದ್ಧಿಯಾಗಿ ಬಾಳಿದನು. ಹೀಗೆ ಈ ದಾನಿಯೇಲನು ದಾರ್ಯಾವೆಷನ ಆಳಿಕೆಯಲ್ಲಿಯೂ ಪಾರಸೀಯನಾದ ಕೋರೇಷನ ಆಳಿಕೆಯಲ್ಲಿಯೂ ಅಭಿವೃದ್ಧಿಯಾಗಿ ಬಾಳಿದನು.
- Jonah 1:9 ಯೋನ 1:9ನಿನ್ನ ದೇಶ ಯಾವದು, ನೀನು ಯಾವ ಜನಾಂಗದವನು, ನಮಗೆ ತಿಳಿಸು ಅಂದರು. ಅವನು ಅವರಿಗೆ--ನಾನು ಇಬ್ರಿಯನು; ಸಮುದ್ರವನ್ನೂ ಒಣಗಿದ ಭೂಮಿಯನ್ನೂ ಉಂಟುಮಾಡಿದ ಪರ ಲೋಕದ ದೇವರಾದ ಕರ್ತನಿಗೆ ಭಯಪಡುವವ ನಾಗಿದ್ದೇನೆಂದು ಹೇಳಿದನು.
- Daniel 6:13 ದಾನಿಯೇಲನು 6:13ಆಗ ಅವರು ಪ್ರತ್ಯುತ್ತರವಾಗಿ ಅರಸನ ಮುಂದೆ--ಯೆಹೂದದ ಸೆರೆಯ ಮಕ್ಕಳಲ್ಲಿ ಒಬ್ಬನಾದ ಆ ದಾನಿಯೇಲನು ಅರಸನಾದ ನಿನ್ನನ್ನಾದರೂ ನೀನು ರುಜುಹಾಕಿದ ನಿರ್ಣಯವನ್ನಾದರೂ ಲಕ್ಷಿಸದೆ ದಿನಕ್ಕೆ ಮೂರು ಸಾರಿ ತನ್ನ ಪ್ರಾರ್ಥನೆಯನ್ನು ಮಾಡುತ್ತಾನೆ ಅಂದರು.
- Daniel 3:8–9 ದಾನಿಯೇಲನು 3:8–9ಹೀಗಿರಲು ಆ ಸಮಯದಲ್ಲಿ ಕಸ್ದೀಯರು ಯೆಹೂದ್ಯರ ಮೇಲೆ ದೂರು ಹೊರಿಸಲು ಸನ್ನಿಧಿಗೆ ಬಂದು ಮಾತ ನಾಡಿ ಅರಸನಾದ ನೆಬೂಕದ್ನೆಚ್ಚರನಿಗೆ--ಓ ಅರಸನೇ, ನೀನು ನಿರಂತರವಾಗಿ ಬಾಳು.
- Daniel 3:12 ದಾನಿಯೇಲನು 3:12ಈಗ ನೀನು ಬಾಬೆಲ್ ಪ್ರಾಂತ್ಯದ ಕೆಲಸಗಳ ಮೇಲೆ ಇಟ್ಟಿರುವ ಕೆಲವರು ಯೆಹೂದ್ಯರು ಇದ್ದಾರೆ, ಅಂದರೆ ಶದ್ರಕ್ ಮೇಷಕ್ ಅಬೇದ್ನೆಗೋ. ಓ ಅರಸನೇ, ಈ ಮನು ಷ್ಯರು ನಿನ್ನನ್ನು ಲಕ್ಷಿಸುವದಿಲ್ಲ. ಅವರು ನಿನ್ನ ದೇವರು ಗಳನ್ನೂ ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯ ನ್ನಾದರೂ ಸೇವಿಸಲಿಲ್ಲ ಎಂದು ಹೇಳಿದರು.
- Daniel 3:23–30 ದಾನಿಯೇಲನು 3:23–30ಶದ್ರಕ್ ಮೇಷಕ್ ಅಬೇದ್ನೆಗೋ ಈ ಮೂವರು ಕಟ್ಟಲ್ಪಟ್ಟವ ರಾಗಿ ಧಗಧಗನೆ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಬಿದ್ದರು. ಆಗ ಅರಸನಾದ ನೆಬೂಕದ್ನೆ ಚ್ಚರನು ವಿಸ್ಮಯಗೊಂಡವನಾಗಿ ತ್ವರೆಯಾಗಿ ಎದ್ದು ತನ್ನ ಆಲೋಚನಾಗಾರರ ಸಂಗಡ ಮಾತನಾಡಿ--ನಾವು ಮೂವರು ಮನುಷ್ಯರನ್ನು ಕಟ್ಟಿ ಬೆಂಕಿಯಲ್ಲಿ ಹಾಕಿದೆ ವಲ್ಲವೇ? ಅಂದನು. ಆಗ ಅವರು ಅರಸನಿಗೆ--ಓ ಅರಸನೇ, ಹೌದು, ಸತ್ಯ ಎಂದು ಉತ್ತರಿಸಿದರು. ಆಗ ಅರಸನು ಅವರಿಗೆ ಪ್ರತ್ಯುತ್ತರವಾಗಿ--ಇಗೋ, ಕಟ್ಟಲ್ಪಡದ ನಾಲ್ಕು ಮನುಷ್ಯರು ಬೆಂಕಿಯಲ್ಲಿ ನಡೆಯುತ್ತಿ ರುವದನ್ನು ನೋಡುತ್ತೇನೆ; ಅವರಿಗೆ ಯಾವ ಹಾನಿಯೂ ಇಲ್ಲ; ಅಲ್ಲದೆ ನಾಲ್ಕನೆಯವನ ರೂಪವು ದೇವ ಕುಮಾರನ ಹಾಗಿದೆ ಎಂದು ಹೇಳಿದನು. ಆ ಮೇಲೆ ನೆಬೂಕದ್ನೆಚ್ಚರನು ಧಗಧಗನೆ ಉರಿಯುತ್ತಿರುವ ಬೆಂಕಿಯ ಆವಿಗೆಯ ಬಾಯಿಯ ಸವಿಾಪಕ್ಕೆ ಬಂದು ಮಾತನಾಡಿ--ಓ ಶದ್ರಕ್ ಮೇಷಕ್ ಅಬೇದ್ನೆಗೋ ಎಂಬವರೇ, ಮಹೋನ್ನತ ದೇವರ ಸೇವಕರೇ, ಹೊರಗೆ ಬನ್ನಿರಿ ಎನ್ನಲು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬವರು ಬೆಂಕಿಯೊಳಗಿಂದ ಹೊರಗೆ ಬಂದರು. ಆಗ ಪ್ರಧಾನರು ರಾಜ್ಯಪಾಲರು, ಅಧಿಪತಿಗಳು, ಅರಸನ ಆಲೋಚನಾಗಾರರು ಎಲ್ಲರೂ ಒಟ್ಟುಗೂಡಿ ಇವರ ಶರೀರದ ಮೇಲೆ ಬೆಂಕಿಯ ಅಧಿಕಾರವು ಇಲ್ಲದಿ ರುವದನ್ನೂ ಅವರ ತಲೇಕೂದಲುಗಳಲ್ಲಿ ಒಂದಾದರೂ ಸುಡದಿರುವದನ್ನೂ ಅವರ ಅಂಗಿಗಳು ಬದಲಾಗದಿರು ವದನ್ನೂ ಬೆಂಕಿಯ ವಾಸನೆಯೂ ಸಹ ಅವರನ್ನು ಮುಟ್ಟದಿರುವ ಆ ಮನುಷ್ಯರನ್ನು ಕಂಡರು. ಆಮೇಲೆ ನೆಬೂಕದ್ನೆಚ್ಚರನು ಮಾತನಾಡಿ--ಶದ್ರಕ್ ಮೇಷಕ್ ಅಬೇದ್ನೆಗೂ ಎಂಬವರ ದೇವರಿಗೆ ಸ್ತೋತ್ರ ವಾಗಲಿ. ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ನಂಬಿಕೆ ಯಿಟ್ಟಂತ ಅರಸನ ಆಜ್ಞೆಯನ್ನು ವಿಾರಿದಂತಹ ಸ್ವಂತ ದೇವರನ್ನೇ ಹೊರತು ಬೇರೆ ಯಾವ ದೇವರನ್ನೂ ಸೇವಿಸದೆ ಆರಾಧಿಸದೇ ಇರುವ ಹಾಗೆ ತಮ್ಮ ಶರೀರ ವನ್ನು ಒಪ್ಪಿಸಿದಂತೆ ಸೇವಕರುಗಳನ್ನು ರಕ್ಷಿಸಿದ್ದಾನೆ. ಆದದರಿಂದ ನಾನು ನಿರ್ಣಯಮಾಡುವದರಿಂದ ಸಕಲ ಪ್ರಜೆ, ಜನಾಂಗ ಮತ್ತು ಭಾಷೆಗಳಲ್ಲಿ ಯಾರು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬವರ ದೇವ ರಿಗೆ ವಿರೋಧವಾಗಿ ದೂಷಣೆ ಮಾಡುವರೋ ಅವರು ತುಂಡುತುಂಡಾಗಿ ಕತ್ತರಿಸಲ್ಪಟ್ಟು ಅವರ ಮನೆಗಳು ತಿಪ್ಪೆಗುಂಡಿಗಳಾಗಿ ಮಾಡಲ್ಪಡುವದು. ಈ ವಿಧವಾಗಿ ರಕ್ಷಿಸುವ ದೇವರು ಇನ್ಯಾರು ಇರುವದಿಲ್ಲ.ಆಗ ಅರಸನು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬ ವರನ್ನು ಬಾಬೆಲ್ ಪ್ರಾಂತ್ಯದಲ್ಲಿ ಉನ್ನತ ಪದವಿಗೆ ತಂದನು. ಆಗ ಅರಸನು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬ ವರನ್ನು ಬಾಬೆಲ್ ಪ್ರಾಂತ್ಯದಲ್ಲಿ ಉನ್ನತ ಪದವಿಗೆ ತಂದನು.
- Daniel 3:16–18 ದಾನಿಯೇಲನು 3:16–18ಆಗ ಶದ್ರಕ್ ಮೇಷಕ್ ಅಬೇದ್ ನೆಗೋ ಎಂಬವರು ಅರಸನಿಗೆ ಪ್ರತ್ಯುತ್ತರವಾಗಿ--ಓ ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಉತ್ತರಕೊಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಹಾಗೆ ಇದ್ದರೆ ನಿಶ್ಚಯವಾಗಿ ನಾವು ಸೇವಿಸುವ ನಮ್ಮ ದೇವರು ಉರಿಯುವ ಬೆಂಕಿಯ ಆವಿಗೆಯೊಳಗಿಂದ ನಮ್ಮನ್ನು ತಪ್ಪಿಸಲು ಸಮರ್ಥನಾಗಿದ್ದಾನೆ. ಓ ಅರಸನೇ, ನಿನ್ನ ಕೈಯಿಂದಲೂ ನಮ್ಮನ್ನು ತಪ್ಪಿಸುವನು. ಆತನು ಒಂದು ವೇಳೆ ತಪ್ಪಿಸದಿದ್ದರೂ ಓ ಅರಸನೇ, ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವದಿಲ್ಲವೆಂದೂ ನಿನಗೆ ತಿಳಿದಿರಲಿ ಅಂದರು.
- Ezra 1:3 ಎಜ್ರನು 1:3ಆತನ ಸಮಸ್ತ ಜನರಾದ ನಿಮ್ಮೊಳಗೆ ಯಾರಿದ್ದೀರಿ? ಅವನ ಸಂಗಡ ಅವನ ದೇವರು ಇರಲಿ. ಅವನು ಯೆಹೂದದಲ್ಲಿ ರುವ ಯೆರೂಸಲೇಮಿಗೆ ಹೋಗಲಿ. ಯೆರೂಸಲೇಮಿನಲ್ಲಿರುವ ಇಸ್ರಾಯೇಲಿನ ದೇವರಾದ ಕರ್ತನ ಆಲಯವನ್ನು ಕಟ್ಟಲಿ (ಆತನೇ ದೇವರು).