Exodus · chapter 10 · verse 16
Exodus 10:16 in Kannada
ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ ಅವರಿಗೆ--ನಾನು ನಿಮ್ಮ ದೇವ ರಾದ ಕರ್ತನಿಗೂ ನಿಮಗೂ ವಿರೋಧವಾಗಿ ಪಾಪ ಮಾಡಿದ್ದೇನೆ.
Aaga pharohanu moshe aaronarannu tvareyaagi kareyisi avarige--naanu nimma deva raada kartanigoo nimagoo virodhavaagi paapa maadiddene.
Exodus 10:16 in English
- King James Version (KJV)
- Then Pharaoh called for Moses and Aaron in haste; and he said, I have sinned against the LORD your God, and against you.
- World English Bible (WEB)
- Then Pharaoh called for Moses and Aaron in haste, and he said, “I have sinned against the LORD your God, and against you.
- American Standard Version (ASV)
- Then Pharaoh called for Moses and Aaron in haste; and he said, I have sinned against Jehovah your God, and against you.
- Bible in Basic English (BBE)
- Then Pharaoh quickly sent for Moses and Aaron, and said, I have done evil against the Lord your God and against you.
- Darby Translation (DBY)
- And Pharaoh called Moses and Aaron in haste; and he said, I have sinned against Jehovah your God, and against you.
- Webster's Bible (WBS)
- Then Pharaoh called for Moses and Aaron in haste; and he said, I have sinned against the LORD your God, and against you.
- Young's Literal Translation (YLT)
- And Pharaoh hasteth to call for Moses and for Aaron, and saith, 'I have sinned against Jehovah your God, and against you,
Read in context
- 14ಹೀಗೆ ಮಿಡತೆಗಳು ಐಗುಪ್ತ ದೇಶದಲ್ಲೆಲ್ಲಾ ಬಂದು ಐಗುಪ್ತದ ಎಲ್ಲಾ ಮೇರೆಗಳಲ್ಲಿ ದೊಡ್ಡ ಸಮೂಹವಾಗಿ ಸೇರಿಕೊಂಡವು. ಅವು ಕ್ರೂರ ವಾದವುಗಳಾಗಿದ್ದವು. ಅವುಗಳಂತೆ ಹಿಂದೆ ಎಂದಿಗೂ ಇರಲಿಲ್ಲ, ಅನಂತರವೂ ಇರಲಾರವು.
- 15ಅವು ಭೂ ಮುಖವನ್ನೆಲ್ಲಾ ಮುತ್ತಿಕೊಂಡದ್ದರಿಂದ ಆ ದೇಶವು ಕತ್ತಲಾಯಿತು. ಅವು ಭೂಮಿಯ ಎಲ್ಲಾ ಸೊಪ್ಪನ್ನೂ ಆನೆಕಲ್ಲಿನ ಮಳೆಯು ಉಳಿಸಿದ ಮರಗಳ ಎಲ್ಲಾ ಫಲವನ್ನೂ ತಿಂದುಬಿಟ್ಟವು. ಮರಗಳಲ್ಲಾದರೂ ಹೊಲದ ಗಿಡಗಳಲ್ಲಾದರೂ ಹಸುರಾದದ್ದು ಐಗುಪ್ತ ದೇಶದಲ್ಲೆಲ್ಲಿಯೂ ಉಳಿಯಲಿಲ್ಲ.
- 16ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ ಅವರಿಗೆ--ನಾನು ನಿಮ್ಮ ದೇವ ರಾದ ಕರ್ತನಿಗೂ ನಿಮಗೂ ವಿರೋಧವಾಗಿ ಪಾಪ ಮಾಡಿದ್ದೇನೆ.
- 17ಹೀಗಿರುವದರಿಂದ ಈಗ ಈ ಒಂದೇ ಸಾರಿ ನನ್ನ ಪಾಪವನ್ನು ಕ್ಷಮಿಸಬೇಕೆಂದು ನಾನು ನಿಮ್ಮನ್ನು ಬೇಡುತ್ತೇನೆ. ಈ ಮರಣವನ್ನು ಮಾತ್ರ ನನ್ನಿಂದ ತೊಲಗಿಸುವಂತೆ ನಿಮ್ಮ ದೇವರಾದ ಕರ್ತನನ್ನು ಬೇಡಿ ಕೊಳ್ಳಿರಿ ಅಂದನು.
- 18ಆಗ ಅವನು ಫರೋಹನನ್ನು ಬಿಟ್ಟುಹೋಗಿ ಕರ್ತನನ್ನು ಬೇಡಿಕೊಂಡನು.
Cross references
- Exodus 9:27 ವಿಮೋಚನಕಾಂಡ 9:27ಆಗ ಫರೋಹನು ಮೋಶೆ ಆರೋನರನ್ನು ಕರೇ ಕಳುಹಿಸಿ ಅವರಿಗೆ--ಈ ಸಾರಿ ನಾನು ಪಾಪಮಾಡಿ ದ್ದೇನೆ. ಕರ್ತನು ನೀತಿವಂತನು, ನಾನೂ ನನ್ನ ಜನರೂ ದುಷ್ಟರಾಗಿದ್ದೇವೆ.
- Job 34:31–32 ಯೋಬನು 34:31–32ನಿಶ್ಚಯವಾಗಿ ದೇವರಿಗೆ ಹೇಳತಕ್ಕದ್ದೇನಂದರೆ--ನಾನು ಶಿಕ್ಷೆಯನ್ನು ತಾಳಿದ್ದೇನೆ, ಇನ್ನು ಮೇಲೆ ಕೆಟ್ಟತನ ಮಾಡುವದಿಲ್ಲ. ನಾನು ನೋಡಿದ್ದನ್ನು ನೀನು ನನಗೆ ಬೋಧಿಸು; ನಾನು ಅನ್ಯಾಯವನ್ನು ಮಾಡಿದ್ದರೆ, ಇನ್ನು ಮೇಲೆ ತಿರುಗಿ ಮಾಡೆನು.
- Numbers 21:7 ಅರಣ್ಯಕಾಂಡ 21:7ಆದದರಿಂದ ಜನರು ಮೋಶೆಯ ಬಳಿಗೆ ಬಂದು --ನಾವು ಕರ್ತನಿಗೂ ನಿನಗೂ ವಿರೋಧವಾಗಿ ಮಾತನಾಡಿ ಪಾಪಮಾಡಿದ್ದೇವೆ; ಆತನು ನಮ್ಮಿಂದ ಸರ್ಪಗಳನ್ನು ದೂರ ಮಾಡುವ ಹಾಗೆ ಆತನಿಗೆ ಪ್ರಾರ್ಥನೆಮಾಡು ಅಂದರು. ಮೋಶೆಯು ಜನರಿ ಗೋಸ್ಕರ ಪ್ರಾರ್ಥನೆಮಾಡಿದನು.
- Matthew 27:4 ಮತ್ತಾಯನು 27:4ಅವನು--ನಾನು ನಿರಪರಾಧದ ರಕ್ತವನ್ನು ಹಿಡುಕೊಟ್ಟು ಪಾಪಮಾಡಿದ್ದೇನೆ ಅಂದನು. ಅದಕ್ಕೆ ಅವರು--ಅದು ನಮಗೇನು? ನೀನೇ ಅದನ್ನು ನೋಡಿಕೋ ಅಂದರು.
- Proverbs 28:13 ಜ್ಞಾನೋಕ್ತಿಗಳು 28:13ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನು ವೃದ್ಧಿಯಾಗನು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನು ಕರುಣೆ ಹೊಂದುವನು.
- Numbers 22:34 ಅರಣ್ಯಕಾಂಡ 22:34ಆಗ ಬಿಳಾಮನು ಕರ್ತನ ದೂತನಿಗೆ ಹೇಳಿದ್ದುನಾನು ಪಾಪಮಾಡಿದ್ದೇನೆ; ನೀನು ನನಗೆದುರಾಗಿ ಮಾರ್ಗದಲ್ಲಿ ನಿಂತಿದ್ದಿ ಎಂದು ನನಗೆ ತಿಳಿಯಲಿಲ್ಲ; ಹೀಗಿರಲಾಗಿ ಅದು ನಿನ್ನ ದೃಷ್ಟಿಯಲ್ಲಿ ಕೆಟ್ಟದ್ದಾದರೆ ನಾನು ತಿರುಗಿ ಹಿಂದಕ್ಕೆ ಹೋಗುತ್ತೇನೆ ಅಂದನು.
- 1 Samuel 15:24 1 ಸಮುವೇಲನು 15:24ಆಗ ಸೌಲನು ಸಮುವೇಲನಿಗೆ--ನಾನು ಕರ್ತನ ವಾಕ್ಯವನ್ನೂ ನಿನ್ನ ಮಾತುಗಳನ್ನೂ ವಿಾರಿ ಪಾಪಮಾಡಿದೆನು. ನಾನು ಜನರಿಗೆ ಭಯಪಟ್ಟು ಅವರ ಮಾತನ್ನು ಕೇಳಿದೆನು.
- 1 Samuel 15:30 1 ಸಮುವೇಲನು 15:30ಅದಕ್ಕವನು--ನಾನು ಪಾಪವನ್ನು ಮಾಡಿದೆನು; ಆದರೆ ಈಗ ನೀನು ದಯಮಾಡಿ ನನ್ನ ಜನರ ಹಿರಿಯರ ಮುಂದೆಯೂ ಇಸ್ರಾಯೇಲ್ಯರ ಮುಂದೆಯೂ ನನ್ನನ್ನು ಗೌರವಿಸು ನಾನು ನಿನ್ನ ದೇವರಾದ ಕರ್ತನನ್ನು ಆರಾಧಿಸುವ ಹಾಗೆ ನೀನು ನನ್ನ ಸಂಗಡ ಹಿಂದಿರುಗಿ ಬಾ ಅಂದನು.
- 2 Samuel 19:20 2 ಸಮುವೇಲನು 19:20ಯಾಕಂದರೆ ಪಾಪಮಾಡಿದೆನೆಂದು ನಿನ್ನ ಸೇವಕನಾಗಿರುವ ನಾನು ತಿಳಿದಿದ್ದೇನೆ. ಆದದರಿಂದ ಇಗೋ, ಅರಸನಾದ ನನ್ನ ಒಡೆಯನನ್ನು ಎದುರುಗೊಳ್ಳಲು ಯೋಸೇಫನ ಮನೆಯ ಎಲ್ಲರಿಗಿಂತ ಮುಂದಾಗಿ ಈ ದಿನ ಬಂದೆನು ಅಂದನು.
- 1 Samuel 26:21 1 ಸಮುವೇಲನು 26:21ಆಗ ಸೌಲನುನಾನು ಪಾಪಮಾಡಿದೆನು; ನನ್ನ ಮಗನಾದ ದಾವೀ ದನೇ, ತಿರಿಗಿ ಬಾ; ಯಾಕಂದರೆ ನನ್ನ ಜೀವವು ಈ ಹೊತ್ತು ನಿನ್ನ ದೃಷ್ಟಿಗೆ ಅಮೂಲ್ಯವಾಗಿದ್ದರಿಂದ ನಾನು ಇನ್ನು ಮೇಲೆ ನಿನಗೆ ಕೇಡುಮಾಡೆನು; ಇಗೋ, ನಾನು ಹುಚ್ಚು ಕೆಲಸಮಾಡಿದ್ದೇನೆ. ಮಹಾ ಹೆಚ್ಚಾದ ತಪ್ಪು ಮಾಡಿದೆನು ಅಂದನು.