Proverbs · chapter 28 · verse 13
Proverbs 28:13 in Kannada
ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನು ವೃದ್ಧಿಯಾಗನು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನು ಕರುಣೆ ಹೊಂದುವನು.
Tanna paapagalannu muchchikolluvavanu vruddhiyaaganu; avugalannu oppikondu bittubiduvavanu karune honduvanu.
Proverbs 28:13 in English
- King James Version (KJV)
- He that covereth his sins shall not prosper: but whoso confesseth and forsaketh [them] shall have mercy.
- World English Bible (WEB)
- He who conceals his sins doesn’t prosper, but whoever confesses and renounces them finds mercy.
- American Standard Version (ASV)
- He that covereth his transgressions shall not prosper; But whoso confesseth and forsaketh them shall obtain mercy.
- Bible in Basic English (BBE)
- He who keeps his sins secret will not do well; but one who is open about them, and gives them up, will get mercy.
- Darby Translation (DBY)
- He that covereth his transgressions shall not prosper; but whoso confesseth and forsaketh [them] shall obtain mercy.
- Webster's Bible (WBS)
- He that covereth his sins shall not prosper: but he who confesseth and forsaketh [them] shall have mercy.
- Young's Literal Translation (YLT)
- Whoso is covering his transgressions prospereth not, And he who is confessing and forsaking hath mercy.
Read in context
- 11ತನ್ನ ಸ್ವಂತ ಅಭಿಪ್ರಾಯದಲ್ಲಿ ಐಶ್ವರ್ಯ ವಂತನು ಜ್ಞಾನಿಯಾಗಿದ್ದಾನೆ; ವಿವೇಕಿಯಾದ ಬಡವನು ಅವನನ್ನು ಪರೀಕ್ಷಿಸುತ್ತಾನೆ.
- 12ನೀತಿವಂತರು ಉಲ್ಲಾಸಿಸಿ ದರೆ ದೊಡ್ಡ ಘನತೆ ಇರುವದು; ದುಷ್ಟರಿಗೆ ಏಳಿಗೆ ಯಾದರೆ ಮನುಷ್ಯನು ಅಡಗಿಕೊಳ್ಳುತ್ತಾನೆ.
- 13ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನು ವೃದ್ಧಿಯಾಗನು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನು ಕರುಣೆ ಹೊಂದುವನು.
- 14ಯಾವಾಗಲೂ ಭಯದಿಂದ ಇರು ವವನು ಧನ್ಯನು; ತನ್ನ ಹೃದಯವನ್ನು ಕಠಿಣಪಡಿಸಿ ಕೊಳ್ಳುವವನು ಕೇಡಿಗೆ ಸಿಕ್ಕಿಬೀಳುವನು.
- 15ಗರ್ಜಿಸುವ ಸಿಂಹದಂತೆಯೂ ಅಲೆದಾಡುವ ಕರಡಿಯಂತೆಯೂ ಬಡವರಾದ ಜನರನ್ನು ಆಳುವ ದುಷ್ಟನು ಇರುತ್ತಾನೆ.
Cross references
- 1 John 1:8–10 1 ಯೋಹಾನನು 1:8–10ನಮ್ಮಲ್ಲಿ ಪಾಪವಿಲ್ಲ ವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸ ಪಡಿಸಿಕೊಳ್ಳುತ್ತೇವೆ, ಸತ್ಯವು ನಮ್ಮಲ್ಲಿಲ್ಲ. ನಾವು ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿ ಮಾಡುವನು.ನಾವು ಪಾಪ ಮಾಡಲಿಲ್ಲವೆಂದು ಹೇಳಿದರೆ ಆತನನ್ನು ಸುಳ್ಳುಗಾರನನ್ನಾಗಿ ಮಾಡುತ್ತೇವೆ, ಮತ್ತು ಆತನ ವಾಕ್ಯವು ನಮ್ಮಲ್ಲಿಲ್ಲ. ನಾವು ಪಾಪ ಮಾಡಲಿಲ್ಲವೆಂದು ಹೇಳಿದರೆ ಆತನನ್ನು ಸುಳ್ಳುಗಾರನನ್ನಾಗಿ ಮಾಡುತ್ತೇವೆ, ಮತ್ತು ಆತನ ವಾಕ್ಯವು ನಮ್ಮಲ್ಲಿಲ್ಲ.
- Psalm 32:3–5 ಕೀರ್ತನೆಗಳು 32:3–5ನಾನು ಮೌನವಾಗಿದ್ದಾಗ ದಿನವೆಲ್ಲಾ ನರಳುವದ ರಿಂದ ನನ್ನ ಎಲುಬುಗಳು ಸವೆದು ಹೋದವು. ರಾತ್ರಿ ಹಗಲು ನಿನ್ನ ಕೈ ನನ್ನ ಮೇಲೆ ಭಾರವಾಗಿತ್ತು; ಬೇಸಿಗೆಯ ಬರಗಾಲಕ್ಕೆ ನನ್ನ ಸಾರವು ತಿರುಗಿಕೊಂಡಿತು. ಸೆಲಾ. ನನ್ನ ಪಾಪವನ್ನು ನಿನಗೆ ತಿಳಿಸಿದೆನು. ನನ್ನ ಅಪರಾಧವನ್ನು ಮುಚ್ಚಲಿಲ್ಲ. ನನ್ನ ದ್ರೋಹಗಳನ್ನು ಕುರಿತು ಕರ್ತನಿಗೆ ಅರಿಕೆಮಾಡುವೆನೆಂದು ಹೇಳಿದೆನು; ಆಗ ನೀನು ನನ್ನ ಪಾಪದ ಅಕ್ರಮವನ್ನು ಪರಿಹರಿ ಸಿದಿ--ಸೆಲಾ.
- Job 31:33 ಯೋಬನು 31:33ನಾನು ಎದೆ ಯಲ್ಲಿ ನನ್ನ ಅನ್ಯಾಯವನ್ನು ಅಡಗಿಸಿ, ಆದಾಮನ ಪ್ರಕಾರ ನನ್ನ ದ್ರೋಹವನ್ನು ಮುಚ್ಚಿಕೊಳ್ಳಲಿಲ್ಲ.
- Luke 15:18–24 ಲೂಕನು 15:18–24ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ--ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ನಾನು ಪಾಪಮಾಡಿದ್ದೇನೆ; ಇನ್ನೆಂದಿಗೂ ನಾನು ನಿನ್ನ ಮಗನೆಂದು ಕರೆಯಲ್ಪಡುವದಕ್ಕೆ ಯೋಗ್ಯನಲ್ಲ; ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಅನ್ನುವೆನು ಎಂದು ಅಂದುಕೊಂಡು ಎದ್ದು ತನ್ನ ತಂದೆಯ ಬಳಿಗೆ ಬಂದನು. ಆದರೆ ಅವನು ಇನ್ನೂ ಬಹಳ ದೂರದಲ್ಲಿರುವಾಗಲೇ ಅವನ ತಂದೆಯು ಅವನನ್ನು ನೋಡಿ ಕನಿಕರಪಟ್ಟು ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಮುದ್ದಿಟ್ಟನು. ಮಗನು ಅವನಿಗೆ--ಅಪ್ಪಾ, ನಾನು ಪರಲೋಕಕ್ಕೆ ವಿರೋಧ ವಾಗಿಯೂ ನಿನ್ನ ದೃಷ್ಟಿಯಲ್ಲಿಯೂ ಪಾಪ ಮಾಡಿದ್ದೇನೆ; ನಿನ್ನ ಮಗನೆನಿಸಿಕೊಳ್ಳುವದಕ್ಕೆ ಇನ್ನೆಂದಿಗೂ ನಾನು ಯೋಗ್ಯನಲ್ಲ ಅಂದನು. ಆದರೆ ತಂದೆಯು ತನ್ನ ಸೇವಕರಿಗೆ--ಶ್ರೇಷ್ಠವಾದ ನಿಲುವಂಗಿಯನ್ನು ತಂದು ಇವನಿಗೆ ತೊಡಿಸಿರಿ; ಇವನ ಕೈಗೆ ಉಂಗುರವನ್ನೂ ಪಾದಗಳಿಗೆ ಕೆರಗಳನ್ನೂ ಹಾಕಿರಿ; ಇದಲ್ಲದೆ ಕೊಬ್ಬಿದ ಆ ಕರುವನ್ನು ಇಲ್ಲಿ ತಂದು ವಧಿಸಿರಿ; ನಾವು ಉಂಡು ಸಂತೋಷಪಡೋಣ; ಯಾಕಂದರೆ ಈ ನನ್ನ ಮಗನು ಸತ್ತವನಾಗಿದ್ದನು, ತಿರಿಗಿ ಬದುಕಿದ್ದಾನೆ; ಕಳೆದು ಹೋಗಿದ್ದನು, ಈಗ ಸಿಕ್ಕಿದ್ದಾನೆ ಎಂದು ಹೇಳಿದನು; ಹೀಗೆ ಅವರು ಸಂತೋಷ ಪಡಲಾರಂಭಿಸಿದರು.
- Jeremiah 3:12–13 ಯೆರೆಮೀಯ 3:12–13ನೀನು ಹೋಗಿ ಉತ್ತರ ದಿಕ್ಕಿಗೆ ಈ ಮಾತುಗಳನ್ನು ಸಾರು; ಯಾವವಂದರೆ--ಹಿಂದಿ ರುಗಿದ ಇಸ್ರಾಯೇಲೇ, ತಿರುಗಿಕೋ ಎಂದು ಕರ್ತನು ಅನ್ನುತ್ತಾನೆ. ನಾನು ನನ್ನ ಕೋಪವನ್ನು ನಿನ್ನ ಮೇಲೆ ಬೀಳ ಮಾಡುವದಿಲ್ಲ; ನಾನು ದಯಾಪರನು ಎಂದು ಕರ್ತನು ಅನ್ನುತ್ತಾನೆ, ಎಂದೆಂದಿಗೂ ಕೋಪವಿಟ್ಟು ಕೊಳ್ಳುವದಿಲ್ಲ. ನಿನ್ನ ದೇವರಾದ ಕರ್ತನಿಗೆ ವಿರೋಧ ವಾಗಿ ದ್ರೋಹಮಾಡಿ ಒಂದೊಂದು ಹಸಿರು ಮರದ ಕೆಳಗೆ ನಿನ್ನ ಮಾರ್ಗಗಳನ್ನು ಅನ್ಯರಿಗೆ ಚದರಿಸಿ ನನ್ನ ಶಬ್ದಕ್ಕೆ ಕಿವಿಗೊಡಲಿಲ್ಲವೆಂಬ ನಿನ್ನ ಅಕ್ರಮವನ್ನು ಮಾತ್ರ ಅರಿಕೆಮಾಡೆಂದು ಕರ್ತನು ಅನ್ನುತ್ತಾನೆ.
- Psalm 51:1–5 ಕೀರ್ತನೆಗಳು 51:1–5ಓ ದೇವರೇ, ನನ್ನ ಮೇಲೆ ಕರುಣೆಯಿಡು; ನಿನ್ನ ಪ್ರೀತಿಕರುಣೆಯ ಪ್ರಕಾರ ನಿನ್ನ ಅತಿ ಶಯವಾದ ಅಂತಃಕರುಣೆಗಳ ಪ್ರಕಾರ ನನ್ನ ದ್ರೋಹ ಗಳನ್ನು ಅಳಿಸಿಬಿಡು. ನನ್ನ ಅಕ್ರಮದಿಂದ ನನ್ನನ್ನು ಪೂರ್ಣವಾಗಿ ತೊಳೆ; ನನ್ನ ಪಾಪದಿಂದ ನನ್ನನ್ನು ಶುದ್ಧಿಮಾಡು. ನನ್ನ ದ್ರೋಹಗಳನ್ನು ನಾನು ಒಪ್ಪಿ ಕೊಳ್ಳುತ್ತೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ. ನೀನು ನಿನ್ನ ಮಾತುಗಳಲ್ಲಿ ನೀತಿವಂತ ನಾಗಿಯೂ ನಿನ್ನ ನ್ಯಾಯತೀರ್ವಿಕೆಯಲ್ಲಿ ನಿರ್ಮಲನಾ ಗಿಯೂ ಇದ್ದಿಯಲ್ಲಾ; ನಿನಗೆ ಮಾತ್ರವೇ ವಿರೋಧ ವಾಗಿ ನಾನು ಪಾಪಮಾಡಿ ನಿನ್ನ ದೃಷ್ಟಿಯಲ್ಲಿ ಈ ಕೆಟ್ಟದ್ದನ್ನು ಮಾಡಿದ್ದೇನೆ. ಇಗೋ, ನಾನು ಅಕ್ರ ಮದಲ್ಲಿ ರೂಪಿಸಲ್ಪಟ್ಟೆನು; ಪಾಪದಲ್ಲಿ ನನ್ನ ತಾಯಿ ನನ್ನನ್ನು ಗರ್ಭಧರಿಸಿದಳು.
- Daniel 9:20–23 ದಾನಿಯೇಲನು 9:20–23ನಾನು ಮಾತನಾಡುತ್ತಾ ಪ್ರಾರ್ಥನೆ ಮಾಡುತ್ತಾ ನನ್ನ ಪಾಪವನ್ನೂ ನನ್ನ ಜನರಾದ ಇಸ್ರಾಯೇಲ್ಯರ ಪಾಪವನ್ನೂ ಅರಿಕೆಮಾಡುತ್ತಾ ನನ್ನ ದೇವರ ಪರಿಶುದ್ಧ ಪರ್ವತಕ್ಕೋಸ್ಕರ ನನ್ನ ವಿಜ್ಞಾಪನೆಯನ್ನು ನನ್ನ ದೇವರಾದ ಕರ್ತನ ಮುಂದೆ ಅರ್ಪಿಸುತ್ತಾ ಇದ್ದೆನು. ಹೌದು, ನಾನು ಪ್ರಾರ್ಥನೆಯಲ್ಲಿ ಮಾತನಾಡುತ್ತಿ ರುವಾಗ ನಾನು ಮೊದಲಿನ ದರ್ಶನದಲ್ಲಿ ಕಂಡ ಗಬ್ರಿಯೇಲನೆಂಬ ಮನುಷ್ಯನು ಬೇಗನೆ ಹಾರಿಬಂದು ಸುಮಾರು ಸಾಯಂಕಾಲದ ಕಾಣಿಕೆಯನ್ನು ಅರ್ಪಿಸುವ ಹೊತ್ತಿನಲ್ಲಿ ನನ್ನನ್ನು ಮುಟ್ಟಿದನು. ಅವನು ನನಗೆ ತಿಳಿಸಿ ನನ್ನೊಡನೆ ಮಾತಾಡಿ ಹೇಳಿದ್ದೇನಂದರೆ--ಓ ದಾನಿಯೇಲನೇ, ನಿನಗೆ ವಿವೇಕವನ್ನೂ ಬುದ್ಧಿಯನ್ನೂ ಕೊಡುವದಕ್ಕೆ ಈಗ ನಾನು ಬಂದಿದ್ದೇನೆ. ನಿನ್ನ ವಿಜ್ಞಾಪನೆಯ ಆರಂಭದಲ್ಲಿಯೇ ಆಜ್ಞೆಯು ಬಂದಿತು. ಅದನ್ನು ನಿನಗೆ ತಿಳಿಸುವದಕ್ಕೆ ನಾನು ಬಂದಿದ್ದೇನೆ; ನೀನು ಅತಿಪ್ರಿಯನಾಗಿರುವಿ. ಆದದರಿಂದ ವಿಷಯ ವನ್ನು ಗ್ರಹಿಸಿಕೊಂಡು ದರ್ಶನವನ್ನು ಆಲೋಚಿಸು.
- Psalm 51:10 ಕೀರ್ತನೆಗಳು 51:10ಓ ದೇವರೇ, ಶುದ್ಧಹೃದಯವನ್ನು ನನ್ನಲ್ಲಿ ಸೃಷ್ಟಿಸು, ಸ್ಥಿರವಾದ ಆತ್ಮವನ್ನು ನನ್ನ ಅಂತರಂಗದಲ್ಲಿ ನೂತನಪಡಿಸು.
- Exodus 10:16–17 ವಿಮೋಚನಕಾಂಡ 10:16–17ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ ಅವರಿಗೆ--ನಾನು ನಿಮ್ಮ ದೇವ ರಾದ ಕರ್ತನಿಗೂ ನಿಮಗೂ ವಿರೋಧವಾಗಿ ಪಾಪ ಮಾಡಿದ್ದೇನೆ. ಹೀಗಿರುವದರಿಂದ ಈಗ ಈ ಒಂದೇ ಸಾರಿ ನನ್ನ ಪಾಪವನ್ನು ಕ್ಷಮಿಸಬೇಕೆಂದು ನಾನು ನಿಮ್ಮನ್ನು ಬೇಡುತ್ತೇನೆ. ಈ ಮರಣವನ್ನು ಮಾತ್ರ ನನ್ನಿಂದ ತೊಲಗಿಸುವಂತೆ ನಿಮ್ಮ ದೇವರಾದ ಕರ್ತನನ್ನು ಬೇಡಿ ಕೊಳ್ಳಿರಿ ಅಂದನು.
- Job 33:27 ಯೋಬನು 33:27ಆತನು ಮನುಷ್ಯರನ್ನು ನೋಡಿ--ಯಾವನಾದರೂ--ನಾನು ಪಾಪಮಾಡಿ; ನ್ಯಾಯವನ್ನು ವಕ್ರಮಾಡಿದ್ದೇನೆ, ಆದರೆ ನನಗೆ ಅದರಿಂದ ಲಾಭವಾಗಲಿಲ್ಲ ಎಂದು ಹೇಳಿದರೆ;
- Matthew 23:25–28 ಮತ್ತಾಯನು 23:25–28ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ಅವು ಒಳಗೆ ಸುಲಿಗೆಯಿಂದಲೂ ದುರಾಶೆಯಿಂದಲೂ ತುಂಬಿರುತ್ತವೆ. ಕುರುಡನಾದ ಫರಿಸಾಯನೇ, ಮೊದಲು ಪಾತ್ರೆಯ ಮತ್ತು ತಟ್ಟೆಯ ಒಳಗಿನ ಭಾಗ ವನ್ನು ಶುಚಿಮಾಡು; ಆಗ ಅವುಗಳ ಹೊರ ಭಾಗವೂ ಶುಚಿಯಾಗುವದು. ಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಸುಣ್ಣಾ ಹಚ್ಚಿದ ಸಮಾಧಿ ಗಳಿಗೆ ಹೋಲಿಕೆಯಾಗಿದ್ದೀರಿ. ಅವು ಹೊರಗೆ ನಿಜಕ್ಕೂ ಅಂದವಾಗಿ ಕಾಣುತ್ತವೆ; ಆದರೆ ಒಳಗೆ ಸತ್ತವರ ಎಲುಬು ಗಳಿಂದಲೂ ಎಲ್ಲಾ ಅಶುದ್ಧತೆಯಿಂದಲೂ ತುಂಬಿರು ತ್ತವೆ. ಅದರಂತೆಯೇ ನೀವು ಸಹ ಹೊರಗಡೆ ಮನುಷ್ಯರಿಗೆ ನೀತಿವಂತರಂತೆ ಕಾಣಿಸಿಕೊಳ್ಳುತ್ತೀರಿ; ಆದರೆ ನೀವು ಒಳಗೆ ಕಪಟದಿಂದಲೂ ದುಷ್ಟತನ ದಿಂದಲೂ ತುಂಬಿದವರಾಗಿದ್ದೀರಿ.
- Acts 26:20 ಅಪೊಸ್ತಲರ ಕೃತ್ಯಗಳು 26:20ಆದರೆ ಅವರು ಮಾನಸಾಂತರಪಟ್ಟು ದೇವರ ಕಡೆಗೆ ತಿರುಗಿ ಕೊಂಡು ಮಾನಸಾಂತರಪಟ್ಟದ್ದಕ್ಕಾಗಿ ಯೋಗ್ಯವಾದ ಕ್ರಿಯೆಗಳನ್ನು ಮಾಡಬೇಕೆಂದು ಮೊದಲನೆಯದಾಗಿ ದಮಸ್ಕದವರಿಗೂ ಯೆರೂಸಲೇಮಿನಲ್ಲಿಯೂ ಯೂದಾಯದ ಎಲ್ಲಾ ಕಡೆಯ ತೀರಗಳಲ್ಲಿಯೂ ಅನ್ಯಜನಾಂಗದವರಿಗೂ ಪ್ರಕಟಿಸಿದೆನು.