Proverbs · chapter 3 · verse 9
Proverbs 3:9 in Kannada
ನಿನ್ನ ಆಸ್ತಿಯಿಂದಲೂ ಅಭಿವೃದ್ಧಿಯ ಎಲ್ಲಾ ಪ್ರಥಮ ಫಲಗಳಿಂದಲೂ ಕರ್ತನನ್ನು ಸನ್ಮಾನಿಸು.
Ninna aastiyindaloo abhivruddhiya ellaa prathama phalagalindaloo kartanannu sanmaanisu.
Proverbs 3:9 in English
- King James Version (KJV)
- Honour the LORD with thy substance, and with the firstfruits of all thine increase:
- World English Bible (WEB)
- Honor the LORD with your substance, with the first fruits of all your increase;
- American Standard Version (ASV)
- Honor Jehovah with thy substance, And with the first-fruits of all thine increase:
- Bible in Basic English (BBE)
- Give honour to the Lord with your wealth, and with the first-fruits of all your increase:
- Darby Translation (DBY)
- Honour Jehovah with thy substance, and with the first-fruits of all thine increase;
- Webster's Bible (WBS)
- Honor the LORD with thy substance, and with the first-fruits of all thy increase:
- Young's Literal Translation (YLT)
- Honour Jehovah from thy substance, And from the beginning of all thine increase;
Read in context
- 7ನಿನ್ನ ದೃಷ್ಟಿಯಲ್ಲಿ ಜ್ಞಾನಿಯಂತೆ ನೀನು ಇರಬೇಡ; ಕರ್ತನಿಗೆ ಭಯಪಟ್ಟು ಕೆಟ್ಟತನದಿಂದ ನೀನು ತೊಲಗಿಹೋಗು.
- 8ಅದು ನಿನ್ನ ದೇಹಕ್ಕೆ ಆರೋಗ್ಯವೂ ಎಲುಬುಗಳಿಗೆ ಸಾರವೂ ಆಗಿರುವದು.
- 9ನಿನ್ನ ಆಸ್ತಿಯಿಂದಲೂ ಅಭಿವೃದ್ಧಿಯ ಎಲ್ಲಾ ಪ್ರಥಮ ಫಲಗಳಿಂದಲೂ ಕರ್ತನನ್ನು ಸನ್ಮಾನಿಸು.
- 10ಹೀಗೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬಲ್ಪಡುವವು, ಹೊಸ ದ್ರಾಕ್ಷಾರಸದಿಂದ ನಿನ್ನ ತೊಟ್ಟಿಗಳು ತುಂಬಿ ತುಳುಕುವವು.
- 11ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಮಾತ್ರವಲ್ಲದೆ ಆತನ ತಿದ್ದುವಿಕೆಗೆ ಬೇಸರ ಗೊಳ್ಳಬೇಡ;
Cross references
- Deuteronomy 26:2–15 ಧರ್ಮೋಪದೇಶಕಾಂಡ 26:2–15ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಿಂದ ನೀನು ತರತಕ್ಕ ಭೂಮಿಯ ಎಲ್ಲಾ ಹುಟ್ಟುವಳಿಯ ಪ್ರಥಮ ಫಲವನ್ನು ಪುಟ್ಟಿಯ ಲ್ಲಿಟ್ಟು ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳಕ್ಕೆ ತಕ್ಕೊಂಡು ಹೋಗಬೇಕು. ಅಲ್ಲಿ ಆ ಕಾಲದಲ್ಲಿರುವ ಯಾಜಕನ ಬಳಿಗೆ ಹೋಗಿ ಅವನಿಗೆ--ಕರ್ತನು ನಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣಮಾಡಿದ ದೇಶದಲ್ಲಿ ನಾನು ಸೇರಿದ್ದೇನೆಂದು ಈಹೊತ್ತು ನಿನ್ನ ದೇವರಾದ ಕರ್ತನಿಗೆ ಪ್ರಮಾಣಮಾಡುತ್ತೇನೆ ಎಂದು ಹೇಳಬೇಕು. ಆಗ ಯಾಜಕನು ಪುಟ್ಟಿಯನ್ನು ನಿನ್ನ ಕೈಯಿಂದ ತೆಗೆದು ನಿನ್ನ ದೇವರಾದ ಕರ್ತನ ಬಲಿಪೀಠದ ಮುಂದೆ ಇಡಬೇಕು. ಆ ಮೇಲೆ ನೀನು ಉತ್ತರಕೊಟ್ಟು ನಿನ್ನ ದೇವರಾದ ಕರ್ತನ ಮುಂದೆ--ನನ್ನ ತಂದೆ ನಾಶ ವಾಗುವ ಅರಾಮ್ಯನಾಗಿ ಐಗುಪ್ತಕ್ಕೆ ಇಳಿದು ಹೋಗಿ ಅಲ್ಲಿ ಸ್ವಲ್ಪ ಮಂದಿಯ ಸಂಗಡ ಪರವಾಸವಾಗಿದ್ದು ಅಲ್ಲಿ ದೊಡ್ಡದಾದ, ಬಲಿಷ್ಠವಾದ, ಅಧಿಕವಾದ ಜನಾಂಗವಾದನು. ಆದರೆ ಐಗುಪ್ತ್ಯರು ನಮಗೆ ಕೇಡನ್ನುಮಾಡಿ ನಮ್ಮನ್ನು ಕುಂದಿಸಿ ಕಠಿಣವಾದ ಸೇವೆಯನ್ನು ನಮ್ಮ ಮೇಲೆ ಹೊರಿಸಿದರು. ಆಗ ನಾವು ನಮ್ಮ ಪಿತೃಗಳ ದೇವರಾದ ಕರ್ತನಿಗೆ ಮೊರೆ ಯಿಡಲಾಗಿ ಆತನು ನಮ್ಮ ಸ್ವರವನ್ನು ಕೇಳಿ ನಮ್ಮ ಸಂಕಟವನ್ನೂ ಕಷ್ಟವನ್ನೂ ಬಾಧೆಯನ್ನೂ ನೋಡಿದನು. ಆದದರಿಂದ ಕರ್ತನು ನಮ್ಮನ್ನು ತನ್ನ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾ ಭಯದಿಂದಲೂ ಗುರುತುಗಳಿಂದಲೂ ಅದ್ಭುತ ಗಳಿಂದಲೂ ಐಗುಪ್ತದಿಂದ ಹೊರಗೆ ಬರಮಾಡಿ ನಮ್ಮನ್ನು ಈ ಸ್ಥಳಕ್ಕೆ ಕರಕೊಂಡು ಬಂದು ಹಾಲೂ ಜೇನೂ ಹರಿಯುವ ಈ ದೇಶವನ್ನು ನಮಗೆ ಕೊಟ್ಟಿ ದ್ದಾನೆ. ಹೀಗಿರುವದರಿಂದ ಇಗೋ ಕರ್ತನೇ, ನೀನು ನನಗೆ ಕೊಟ್ಟ ಭೂಮಿಯ ಪ್ರಥಮ ಫಲವನ್ನು ತಂದಿ ದ್ದೇನೆ ಎಂದು ಹೇಳಬೇಕು. ಆಗ ಅದನ್ನು ನಿನ್ನ ದೇವ ರಾದ ಕರ್ತನ ಮುಂದೆ ನೀನು ಇಟ್ಟು ನಿನ್ನ ದೇವರಾದ ಕರ್ತನನ್ನು ಆರಾಧಿಸಬೇಕು. ನಿನ್ನ ದೇವರಾದ ಕರ್ತನು ನಿನಗೂ ನಿನ್ನ ಮನೆಗೂ ಕೊಡುವ ಎಲ್ಲಾ ಒಳ್ಳೆ ವಸ್ತುಗಳಲ್ಲಿ ನೀನೂ ಲೇವಿಯರೂ ನಿನ್ನ ಸಂಗಡ ಇರುವ ಪರವಾಸಿಯೂ ಸಂತೋಷಪಡಬೇಕು. ಹತ್ತನೆಯ ಪಾಲನ್ನು ಕೊಡುವ ವರುಷವಾಗಿರುವ ಮೂರನೆಯ ವರುಷದಲ್ಲಿ ನೀನು ನಿನ್ನ ಎಲ್ಲಾ ಹುಟ್ಟು ವಳಿಯ ಹತ್ತನೇ ಪಾಲನ್ನು ಕೊಟ್ಟು ತೀರಿಸಿದ ಮೇಲೆ ಲೇವಿಗೂ ಪರವಾಸಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಕೊಡಬೇಕು; ಅವನು ನಿನ್ನ ಬಾಗಲುಗಳಲ್ಲಿ ತಿಂದು ತೃಪ್ತಿ ಹೊಂದಲಿ. ಆಗ ನೀನು ನಿನ್ನ ದೇವರಾದ ಕರ್ತನ ಮುಂದೆ--ನಾನು ಪರಿಶುದ್ಧವಾದವುಗಳನ್ನು ನನ್ನ ಮನೆಯೊಳಗಿಂದ ತಕ್ಕೊಂಡು ನೀನು ನನಗೆ ಆಜ್ಞಾಪಿಸಿದ ಎಲ್ಲಾ ಆಜ್ಞೆಗಳ ಹಾಗೆಯೇ ಲೇವಿಗೂ ಪರವಾಸಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಕೊಟ್ಟಿ ದ್ದೇನೆ; ನಿನ್ನ ಆಜ್ಞೆಗಳನ್ನು ವಿಾರಲಿಲ್ಲ, ಮರೆಯಲಿಲ್ಲ. ದುಃಖದಲ್ಲಿರುವಾಗ ಅದರಲ್ಲಿ ತಿನ್ನಲಿಲ್ಲ, ಅದರಲ್ಲಿ ತಕ್ಕೊಂಡು ಅಶುದ್ಧವಾದದ್ದಕ್ಕೂ ಉಪಯೋಗಿಸಲಿಲ್ಲ. ಅದರಲ್ಲಿ ಸತ್ತವರಿಗೋಸ್ಕರ ಏನೂ ಕೊಡಲಿಲ್ಲ; ನನ್ನ ದೇವರಾದ ಕರ್ತನ ಮಾತನ್ನು ಕೇಳಿದ್ದೇನೆ; ನೀನು ನನಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮಾಡಿದ್ದೇನೆ. ಆಕಾಶದೊಳಗಿಂದ, ನಿನ್ನ ಪರಿಶುದ್ಧ ನಿವಾಸದೊ ಳಗಿಂದ ಕಣ್ಣಿಡು; ನಿನ್ನ ಜನರಾದ ಇಸ್ರಾಯೇಲನ್ನೂ ನೀನು ನಮ್ಮ ಪಿತೃಗಳಿಗೆ ಪ್ರಮಾಣಮಾಡಿದ ಪ್ರಕಾರ ನಮಗೆ ಕೊಟ್ಟಂಥ ಹಾಲೂ ಜೇನೂ ಹರಿಯುವ ದೇಶವಾಗಿರುವಂಥ ದೇಶವನ್ನೂ ಆಶೀರ್ವದಿಸು ಎಂದು ಹೇಳಬೇಕು.
- 1 Corinthians 16:2 1 ಕೊರಿಂಥದವರಿಗೆ 16:2ನಾನು ಬಂದಾಗ (ಹಣ) ಕೂಡಿಸುವದು ಇರದಂತೆ ದೇವರು ಅಭಿವೃದ್ಧಿ ಪಡಿಸಿದ ಪ್ರಕಾರ ವಾರದ ಮೊದಲನೆಯ ದಿನದಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಹತ್ತಿರ ಕೂಡಿಟ್ಟುಕೊಳ್ಳಲಿ.
- Proverbs 14:31 ಜ್ಞಾನೋಕ್ತಿಗಳು 14:31ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನನ್ನು ಹೀನೈಸುವನು; ಆತನನ್ನು ಸನ್ಮಾನಿಸುವವನು ಬಡವರನ್ನು ಕನಿಕರಿಸುತ್ತಾನೆ.
- Exodus 23:19 ವಿಮೋಚನಕಾಂಡ 23:19ನಿನ್ನ ಭೂಮಿಯ ಪ್ರಥಮ ಫಲಗಳಲ್ಲಿ ಮೊದಲ ನೆಯದನ್ನು ನಿನ್ನ ದೇವರಾದ ಕರ್ತನ ಆಲಯಕ್ಕೆ ತರ ಬೇಕು. ಮೇಕೆಯ ಮರಿಯನ್ನು ತಾಯಿಯ ಹಾಲಿನಲ್ಲಿ ಬೇಯಿಸಬಾರದು.
- Philippians 4:17–18 ಫಿಲಿಪ್ಪಿಯವರಿಗೆ 4:17–18ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವೆನೆಂತಲ್ಲ ಆದರೆ ನಿಮ್ಮ ಲೆಕ್ಕಕ್ಕೆ ಸಮೃದ್ಧಿಯಾದ ಫಲವನ್ನೇ ಅಪೇಕ್ಷಿಸು ತ್ತೇನೆ. ಆದರೆ ಬೇಕಾದದ್ದೆಲ್ಲ ನನಗುಂಟು, ಸಮೃದ್ಧಿ ಯಾಯಿತು. ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲುಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ ಮೆಚ್ಚಿಕೆ ಯಾದದ್ದು; ಸುಗಂಧವಾಸನೆಯೇ, ಇಷ್ಟಯಜ್ಞವೇ
- Malachi 3:8–10 ಮಲಾಕಿಯ 3:8–10ಮನುಷ್ಯನು ದೇವರದನ್ನು ಕಳ್ಳತನ ಮಾಡುವನೋ? ಆದರೆ ನೀವು ನನ್ನದನ್ನು ಕಳ್ಳತನ ಮಾಡಿದ್ದೀರಿ; ಆದರೆ ನೀವು--ಯಾವದರಲ್ಲಿ ನಿನ್ನದನ್ನು, ಕಳ್ಳತನ ಮಾಡಿದ್ದೇವೆಂದು ಅನ್ನುತ್ತೀರಿ? ದಶಮಭಾಗ ಮತ್ತು ಅರ್ಪಣೆಗಳನ್ನೇ. ಇದರ ಮೂಲಕ ಶಪಿಸಲ್ಪಟ್ಟಿ; ನೀವು, ಹೌದು, ಈ ಸಮಸ್ತ ಜನಾಂಗವೇ ನನ್ನದನ್ನು ಕಳ್ಳತನ ಮಾಡಿದ್ದೀರಿ. ನನ್ನ ಆಲಯದಲ್ಲಿ ಆಹಾರವಿರುವ ಹಾಗೆ ಹತ್ತನೇ ಪಾಲು ಗಳನ್ನೆಲ್ಲಾ ಬೊಕ್ಕಸದ ಮನೆಯಲ್ಲಿ ತನ್ನಿರಿ; ಇದರಿಂದ ನನ್ನನ್ನು ಪರೀಕ್ಷಿಸಿರಿ; ನಾನು ನಿಮಗೆ ಆಕಾಶದ ಕಿಟಕಿ ಗಳನ್ನು ತೆರೆದು ಸಾಕಾಗುವಷ್ಟಕ್ಕಿಂತ ಹೆಚ್ಚಾಗುವಷ್ಟು ಆಶೀರ್ವಾದ ನಿಮಗೆ ಸುರಿಸದಿರುವೆನೇ? ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Exodus 22:29 ವಿಮೋಚನಕಾಂಡ 22:29ನಿನ್ನ ಪ್ರಥಮ ಫಲಗಳನ್ನೂ ಪಾನಗಳನ್ನೂ ನನಗೆ ಅರ್ಪಿಸಲು ತಡ ಮಾಡಬೇಡ. ನಿನ್ನ ಮಕ್ಕಳಲ್ಲಿ ಚೊಚ್ಚಲಾದವರನ್ನು ನನಗೆ ಕೊಡಬೇಕು.
- Haggai 1:4–9 ಹಗ್ಗಾಯ 1:4–9ಈ ಮನೆ ಹಾಳಾಗಿರಲಾಗಿ ನೀವು ನಿಮ್ಮ ಚಿತ್ರ ಹಲಗೆಗಳುಳ್ಳ ಮನೆಗಳಲ್ಲಿ ವಾಸಮಾಡುವದಕ್ಕೆ ಇದು ನಿಮಗೆ ಸಮಯವೋ? ಆದದರಿಂದ ಈಗ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ಮಾರ್ಗಗಳನ್ನು ಯೋಚಿಸಿಕೊಳ್ಳಿರಿ. ನೀವು ಬಹಳವಾಗಿ ಬಿತ್ತಿದ್ದೀರಿ, ಆದರೆ ಕೊಂಚವಾಗಿ ತಂದಿದ್ದೀರಿ; ನೀವು ತಿನ್ನುತ್ತೀರಿ, ಆದರೆ ಸಾಕಾಗಲಿಲ್ಲ; ಕುಡಿಯುತ್ತೀರಿ, ಆದರೆ ತೃಪ್ತಿ ಯಾಗಲಿಲ್ಲ; ಧರಿಸುತ್ತೀರಿ, ಆದರೆ ಬೆಚ್ಚಗಾಗಲಿಲ್ಲ; ಸಂಬಳವನ್ನು ಸಂಪಾದಿಸುವವನು ಅದನ್ನು ತೂತು ಗಳುಳ್ಳ ಚೀಲದಲ್ಲಿ ಹಾಕುವದಕ್ಕೆ ಸಂಪಾದಿಸುತ್ತಾನೆ. ಸೈನ್ಯಗಳ ಕರ್ತನು ಹೇಳುವದೇನಂದರೆ -- ನಿಮ್ಮ ಮಾರ್ಗಗಳನ್ನು ಯೋಚಿಸಿಕೊಳ್ಳಿರಿ. ಬೆಟ್ಟಕ್ಕೆ ಹೋಗಿ ಮರವನ್ನು ತಂದು ಮನೆಯನ್ನು ಕಟ್ಟಿರಿ; ಆಗ ನಾನು ಅದಕ್ಕೆ ಮೆಚ್ಚಿ ಮಹಿಮೆಯನ್ನು ಹೊಂದುವೆನೆಂದು ಕರ್ತನು ಹೇಳುತ್ತಾನೆ. ಬಹಳ ಆಗಬೇಕೆಂದು ನಿರೀಕ್ಷಿ ಸಿದಿರಿ. ಆದರೆ ಇಗೋ, ಕೊಂಚವೇ ಆಯಿತು; ನೀವು ಅದನ್ನು ಮನೆಗೆ ತಂದಾಗ ನಾನು ಅದರ ಮೇಲೆ ಊದಿಬಿಟ್ಟೆನು. ಯಾತಕ್ಕೆ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. ನನ್ನ ಆಲಯವು ಹಾಳಾಗಿ ರುವದರಿಂದ ನೀವು ನಿಮ್ಮ ನಿಮ್ಮ ಸ್ವಂತ ಮನೆಗಳಿಗೆ ಓಡಿ ಹೋಗುತ್ತೀರಲ್ಲಾ?
- 2 Corinthians 8:2–3 2 ಕೊರಿಂಥದವರಿಗೆ 8:2–3ಆ ಸಭೆಗಳವರು ಬಹಳ ಹಿಂಸೆಯನ್ನು ತಾಳುವವರಾದರೂ ವಿಪರೀತ ವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು. ಅವರು ಶಕ್ತ್ಯಾನುಸಾರವಾಗಿ ಮಾತ್ರ ಕೊಡಲಿಲ್ಲ; ಹೌದು, ಶಕ್ತಿಯನ್ನು ವಿಾರಿ ತಮ್ಮಷ್ಟಕ್ಕೆ ತಾವೇ ಕೊಟ್ಟರು; ಇದಕ್ಕೆ ನಾನು ಸಾಕ್ಷಿ.
- Exodus 34:26 ವಿಮೋಚನಕಾಂಡ 34:26ನಿಮ್ಮ ಭೂಮಿಯ ಪ್ರಥಮ ಫಲಗಳಲ್ಲಿ ಮೊದಲ ನೆಯದನ್ನು ನಿಮ್ಮ ದೇವರಾದ ಕರ್ತನ ಮನೆಗೆ ತರ ಬೇಕು. ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು ಎಂದು ಹೇಳಿದನು.
- Exodus 35:20–29 ವಿಮೋಚನಕಾಂಡ 35:20–29ಆಗ ಇಸ್ರಾಯೇಲ್ ಮಕ್ಕಳ ಸಭೆಯವರೆಲ್ಲರೂ ಮೋಶೆಯ ಎದುರಿನಿಂದ ಹೊರಟುಹೋದರು. ಅವರಲ್ಲಿ ಪ್ರತಿಯೊಬ್ಬನು ಹೃದಯ ಪ್ರೇರಣೆಯಿಂದ ಮತ್ತು ಪ್ರತಿಯೊಬ್ಬನು ತನ್ನ ಮನಸ್ಸು ಇಷ್ಟಪಡುವಂತೆ ಸಭೆಯ ಗುಡಾರದ ಕೆಲಸಕ್ಕಾಗಿಯೂ ಅದರ ಎಲ್ಲಾ ಸೇವೆಗಾಗಿಯೂ ಪರಿಶುದ್ಧ ವಸ್ತ್ರಗಳಿಗಾಗಿಯೂ ಕರ್ತನಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬಂದರು. ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿ ಬಂದು ಬಳೆಗಳನ್ನೂ ಮುರುವುಗಳನ್ನೂ ಉಂಗುರಗಳನ್ನೂ ಮುದ್ರೆಗಳನ್ನೂ ಚಿನ್ನದ ಎಲ್ಲಾ ಒಡವೆಗಳನ್ನೂ ತಂದರು. ಪ್ರತಿಯೊಬ್ಬನೂ ಚಿನ್ನದ ಕಾಣಿಕೆಯನ್ನು ಕರ್ತನಿಗೆ ಅರ್ಪಿಸಿದನು. ನೀಲಿ, ಧೂಮ್ರ, ರಕ್ತವರ್ಣ ನಯವಾದ ನಾರುಮಡಿ, ಮೇಕೆಯ ಕೂದಲು; ಟಗರುಗಳ ಕೆಂಪು ಬಣ್ಣದ ಚರ್ಮಗಳು, ಕಡಲು ಹಂದಿಯ ಚರ್ಮಗಳು, ಯಾರ ಬಳಿಯಲ್ಲಿದ್ದವೋ ಅವರೆಲ್ಲರು ತಂದರು. ಬೆಳ್ಳಿ ಹಿತ್ತಾಳೆಗಳ ಕಾಣಿಕೆ ಗಳನ್ನು ಅರ್ಪಿಸುವದಕ್ಕೆ ಮನಸ್ಸಿದ್ದವರೆಲ್ಲರೂ ಕರ್ತನಿಗೆ ಕಾಣಿಕೆಗಳನ್ನು ತಂದರು. ಸೇವೆಯ ಎಲ್ಲಾ ಕೆಲಸ ಕ್ಕೋಸ್ಕರ ಜಾಲೀ ಮರವಿದ್ದವರು ಅದನ್ನು ತಂದರು. ಜ್ಞಾನ ಹೃದಯವುಳ್ಳ ಸ್ತ್ರೀಯರೆಲ್ಲರೂ ತಮ್ಮ ಕೈಗಳಿಂದ ನೇಯ್ದ ನೀಲಿ, ಧೂಮ್ರ, ರಕ್ತವರ್ಣ ಮತ್ತು ನಯವಾದ ನಾರುಮಡಿ ಇವುಗಳನ್ನು ತಂದರು. ಜ್ಞಾನದಲ್ಲಿ ಹೃದಯ ಪ್ರೇರಣೆ ಹೊಂದಿದ ಸ್ತ್ರೀಯರೆಲ್ಲರೂ ಮೇಕೆ ಕೂದಲುಗಳನ್ನೂ ನೇಯ್ದರು. ಅಧಿಪತಿಗಳು ಎಫೋ ದಿನಲ್ಲಿಯೂ ಎದೆಪದಕದಲ್ಲಿಯೂ ಕೂಡ್ರಿಸುವದಕ್ಕೆ ಗೋಮೇಧಿಕಗಳನ್ನೂ ರತ್ನಗಳನ್ನೂ ಸುಗಂಧದ್ರವ್ಯ ಗಳನ್ನೂ ದೀಪಕ್ಕೋಸ್ಕರವೂ ಅಭಿಷೇಕಿಸುವ ತೈಲ ಕ್ಕೋಸ್ಕರವೂ ಪರಿಮಳ ಧೂಪಕ್ಕೋಸ್ಕರವೂ ಎಣ್ಣೆ ಯನ್ನೂ ತಂದರು. ಹೀಗೆ ಮಾಡಬೇಕೆಂದು ಕರ್ತನು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಎಲ್ಲಾ ಕೆಲಸಕ್ಕೋಸ್ಕರ ತರುವದಕ್ಕೆ ಹೃದಯ ಪ್ರೇರಿತರಾದ ಇಸ್ರಾಯೇಲಿನ ಎಲ್ಲಾ ಪುರುಷರೂ ಸ್ತ್ರೀಯರೂ ಕರ್ತ ನಿಗೆ ಮನಃಪೂರ್ವಕವಾದ ಕಾಣಿಕೆಯನ್ನು ತಂದರು.
- 2 Corinthians 8:8–9 2 ಕೊರಿಂಥದವರಿಗೆ 8:8–9ನಾನು ಇದನ್ನು ಆಜ್ಞೆಯಂತೆ ಹೇಳದೆ ಇತರರ ಆಸಕ್ತಿಯನ್ನು ತೋರಿಸಿಕೊಟ್ಟು ನಿಮ್ಮ ಪ್ರೀತಿಯು ಯಥಾರ್ಥವಾದದ್ದೆಂಬದನ್ನು ಸಿದ್ಧಾಂತಪಡಿಸುವದ ಕ್ಕಾಗಿಯೇ ಹೇಳುತ್ತೇನೆ. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯನ್ನು ನೀವು ಅರಿತವರಾಗಿದ್ದೀರಿ; ಹೇಗಂದರೆ ಆತನು ಐಶ್ವರ್ಯವಂತನಾಗಿದ್ದರೂ ಆತನ ಬಡತನದ ಮೂಲಕ ನೀವು ಐಶ್ವರ್ಯವಂತ ರಾಗುವಂತೆ ಆತನು ನಿಮಗೋಸ್ಕರ ಬಡವನಾದನು.