Exodus · chapter 12 · verse 14
Exodus 12:14 in Kannada
ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವದು; ನೀವು ಇದನ್ನು ಕರ್ತನಿಗೆ ಹಬ್ಬವಾಗಿ ತಲತಲಾಂತರ ಗಳಲ್ಲಿ ಆಚರಿಸಬೇಕು; ಇದನ್ನು ನಿತ್ಯ ಶಾಸನದಂತೆ ಎಂದೆಂದಿಗೂ ಆಚರಿಸಬೇಕು.
Ee dinavu nimage jnyaapakaarthavaagiruvadu; neevu idannu kartanige habbavaagi talatalaantara galalli aacharisabeku; idannu nitya shaasanadante endendigoo aacharisabeku.
Exodus 12:14 in English
- King James Version (KJV)
- And this day shall be unto you for a memorial; and ye shall keep it a feast to the LORD throughout your generations; ye shall keep it a feast by an ordinance for ever.
- World English Bible (WEB)
- This day shall be a memorial for you. You shall keep it as a feast to the LORD. You shall keep it as a feast throughout your generations by an ordinance forever.
- American Standard Version (ASV)
- And this day shall be unto you for a memorial, and ye shall keep it a feast to Jehovah: throughout your generations ye shall keep it a feast by an ordinance for ever.
- Bible in Basic English (BBE)
- And this day is to be kept in your memories: you are to keep it as a feast to the Lord through all your generations, as an order for ever.
- Darby Translation (DBY)
- And this day shall be unto you for a memorial; and ye shall celebrate it [as] a feast to Jehovah; throughout your generations [as] an ordinance for ever shall ye celebrate it.
- Webster's Bible (WBS)
- And this day shall be to you for a memorial; and ye shall keep it a feast to the LORD throughout your generations: ye shall keep it a feast by an ordinance for ever.
- Young's Literal Translation (YLT)
- 'And this day hath become to you a memorial, and ye have kept it a feast to Jehovah to your generations; — a statute age-during; ye keep it a feast.
Read in context
- 12ನಾನು ಈ ರಾತ್ರಿ ಐಗುಪ್ತದೇಶದಲ್ಲಿ ಹಾದುಹೋಗುತ್ತೇನೆ. ಐಗುಪ್ತದೇಶದಲ್ಲಿರುವ ಎಲ್ಲಾ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಇರುವ ಚೊಚ್ಚ ಲಾದವುಗಳನ್ನು ಸಂಹರಿಸುವೆನು. ಐಗುಪ್ತದ ದೇವರುಗ ಳಿಗೆಲ್ಲಾ ನಾನು ನ್ಯಾಯತೀರಿಸುವೆನು; ನಾನೇ ಕರ್ತನು.
- 13ಆದರೆ ನೀವು ಇರುವ ಎಲ್ಲಾ ಮನೆಗಳ ಮೇಲೆ ರಕ್ತವು ನಿಮಗೆ ಗುರುತಾಗಿರುವದು. ಆ ರಕ್ತವನ್ನು ನಾನು ನೋಡುವಾಗ ನಿಮ್ಮನ್ನು ದಾಟಿಹೋಗುವೆನು. ಐಗುಪ್ತದೇಶವನ್ನು ನಾನು ಹೊಡೆಯುವ ಸಮಯದಲ್ಲಿ ನಿಮ್ಮನ್ನು ನಾಶಮಾಡುವ ಯಾವ ಬಾಧೆಯೂ ನಿಮ್ಮ ಮೇಲೆ ಬರುವದಿಲ್ಲ.
- 14ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವದು; ನೀವು ಇದನ್ನು ಕರ್ತನಿಗೆ ಹಬ್ಬವಾಗಿ ತಲತಲಾಂತರ ಗಳಲ್ಲಿ ಆಚರಿಸಬೇಕು; ಇದನ್ನು ನಿತ್ಯ ಶಾಸನದಂತೆ ಎಂದೆಂದಿಗೂ ಆಚರಿಸಬೇಕು.
- 15ಏಳು ದಿನಗಳ ವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಹಾಕಬೇಕು; ಮೊದಲನೆಯ ದಿನದಿಂದ ಏಳ ನೆಯ ದಿನದ ವರೆಗೆ ಹುಳಿರೊಟ್ಟಿಯನ್ನು ತಿನ್ನುವವರು ಇಸ್ರಾಯೇಲಿನೊಳಗಿಂದ ತೆಗೆದು ಹಾಕಲ್ಪಡಬೇಕು.
- 16ಇದಲ್ಲದೆ ಮೊದಲನೆಯ ದಿನದಲ್ಲಿ ಪರಿಶುದ್ಧ ಸಭೆಯೂ ಏಳನೆಯ ದಿನದಲ್ಲಿ ಪರಿಶುದ್ಧ ಸಭೆಯೂ ನಿಮಗೆ ಇರಬೇಕು. ಊಟಮಾಡುವದನ್ನು ಬಿಟ್ಟು ಆ ದಿನಗಳಲ್ಲಿ ಯಾವ ತರವಾದ ಕೆಲಸವನ್ನೂ ಮಾಡ ಬಾರದು.
Cross references
- 2 Kings 23:21 2 ಅರಸುಗಳು 23:21ಅರಸನು ಎಲ್ಲಾ ಜನರಿಗೂ--ಈ ಒಡಂಬಡಿಕೆಯ ಪುಸ್ತಕದಲ್ಲಿ ಬರೆಯಲ್ಪಟ್ಟ ಹಾಗೆಯೇ ನಿಮ್ಮ ದೇವ ರಾದ ಕರ್ತನ ಪಸ್ಕವನ್ನು ಆಚರಿಸಿರಿ ಎಂದು ಆಜ್ಞಾಪಿ ಸಿದನು.
- Exodus 12:24 ವಿಮೋಚನಕಾಂಡ 12:24ಇದನ್ನು ಒಂದು ಶಾಸನವಾಗಿ ನೀವೂ ನಿಮ್ಮ ಕುಮಾರರೂ ಸದಾಕಾಲಕ್ಕೂ ಇದನ್ನು ಆಚರಿಸತಕ್ಕದ್ದು.
- Exodus 12:17 ವಿಮೋಚನಕಾಂಡ 12:17ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬ ವನ್ನು ಆಚರಿಸಬೇಕು. ಆ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ್ದೇನೆ; ಆದಕಾರಣ ನಿಮ್ಮ ಸಂತತಿಗಳಲ್ಲಿ ಸದಾ ಕಾಲಕ್ಕೂ ಒಂದು ಶಾಸನವಾಗಿ ಈ ದಿನವನ್ನು ನೀವು ಆಚರಿಸಬೇಕು.
- Exodus 13:9–10 ವಿಮೋಚನಕಾಂಡ 13:9–10ಕರ್ತನ ನ್ಯಾಯಪ್ರಮಾಣವು ನಿನ್ನ ಬಾಯಲ್ಲಿ ಇರುವಂತೆ ಅದು (ಆಚರಣೆಯು) ನಿನ್ನ ಕೈ ಮೇಲೆ ಗುರುತಾಗಿಯೂ ನಿನ್ನ ಕಣ್ಣುಗಳ ಮಧ್ಯೆ ಜ್ಞಾಪಕಾರ್ಥವಾಗಿಯೂ ಇರ ಬೇಕು. ಕರ್ತನು ನಿನ್ನನ್ನು ತನ್ನ ಬಲವಾದ ಕೈಯಿಂದ ಐಗುಪ್ತದಿಂದ ಹೊರಗೆ ಬರಮಾಡಿದ್ದಾನೆ. ಹೀಗಿರು ವದರಿಂದ ನೀನು ವರುಷ ವರುಷಕ್ಕೆ ನೇಮಿತವಾದ ಕಾಲದಲ್ಲಿ ಈ ಶಾಸನವನ್ನು ಕೈಕೊಳ್ಳಬೇಕು.
- 1 Corinthians 5:7–8 1 ಕೊರಿಂಥದವರಿಗೆ 5:7–8ಆದದರಿಂದ ನೀವು ಹುಳಿ ಇಲ್ಲದ ವರಾದ ಕಾರಣ ಹೊಸ ಕಣಿಕವಾಗಿರುವಂತೆ ಆ ಹಳೇ ಹುಳಿಯನ್ನು ತೆಗೆದುಹಾಕಿರಿ. ಯಾಕಂದರೆ ನಮ್ಮ ಪಸ್ಕವಾಗಿರುವ ಕ್ರಿಸ್ತನೇ ನಮಗೋಸ್ಕರ ಯಜ್ಞಾರ್ಪಿತ ನಾಗಿದ್ದಾನೆ. ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವ ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೆ ಸರಳತೆ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯಿಂದ ಹಬ್ಬವನ್ನು ಆಚರಿಸೋಣ.
- Leviticus 23:4–5 ಯಾಜಕಕಾಂಡ 23:4–5ನೀವು ಅವುಗಳ ಕಾಲಗಳಲ್ಲಿ ಪ್ರಕಟಿಸಬೇಕಾದ ಪವಿತ್ರ ಸಭಾಕೂಟ ಗಳೂ ಕರ್ತನ ಹಬ್ಬಗಳೂ ಇವೇ. ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿವ ಸದ ಸಾಯಂಕಾಲದಲ್ಲಿ ಕರ್ತನ ಪಸ್ಕವು.
- Exodus 12:43 ವಿಮೋಚನಕಾಂಡ 12:43ಕರ್ತನು ಮೋಶೆ ಆರೋನರಿಗೆ--ಪಸ್ಕದ ಶಾಸನವು ಇದೇ: ಅನ್ಯರಲ್ಲಿ ಯಾರೂ ಅದನ್ನು ತಿನ್ನ ಬಾರದು.
- Deuteronomy 16:11 ಧರ್ಮೋಪದೇಶಕಾಂಡ 16:11ಆಗ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ಬಾಗಲು ಗಳಲ್ಲಿರುವ ಲೇವಿಯನೂ ನಿನ್ನ ಮಧ್ಯದಲ್ಲಿರುವ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲಿ ನಿನ್ನ ದೇವರಾದ ಕರ್ತನ ಮುಂದೆ ಸಂತೋಷ ಪಡಬೇಕು.
- Matthew 26:13 ಮತ್ತಾಯನು 26:13ನಾನು ನಿಮಗೆ ನಿಜವಾಗಿ ಹೇಳುವದೇ ನಂದರೆ--ಲೋಕದಲ್ಲೆಲ್ಲಾ ಎಲ್ಲೆಲ್ಲಿ ಈ ಸುವಾರ್ತೆಯು ಸಾರಲ್ಪಡುವದೋ ಅಲ್ಲೆಲ್ಲಾ ಈ ಸ್ತ್ರೀಯು ಮಾಡಿದ್ದು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳಲ್ಪಡುವದು ಅಂದನು.
- Deuteronomy 16:1 ಧರ್ಮೋಪದೇಶಕಾಂಡ 16:1ಆಬೀಬ್ ತಿಂಗಳನ್ನು ಆಚರಿಸು. ಅದರಲ್ಲಿ ನಿನ್ನ ದೇವರಾದ ಕರ್ತನಿಗೆ ಪಸ್ಕವನ್ನು ಆಚರಿಸಬೇಕು; ಯಾಕಂದರೆ ಆಬೀಬ್ ತಿಂಗಳಿನಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ರಾತ್ರಿಯಲ್ಲಿ ಐಗುಪ್ತ ದೊಳಗಿಂದ ಹೊರಗೆ ಬರಮಾಡಿದನು;
- Psalm 135:13 ಕೀರ್ತನೆಗಳು 135:13ಓ ಕರ್ತನೇ, ನಿನ್ನ ಹೆಸರು ಶಾಶ್ವತವಾದದ್ದು, ಓ ಕರ್ತನೇ, ನಿನ್ನ ಜ್ಞಾಪಕವು ತಲತಲಾಂತರಕ್ಕೂ ಇರುವದು.
- Exodus 5:1 ವಿಮೋಚನಕಾಂಡ 5:1ತರುವಾಯ ಮೋಶೆಯೂ ಆರೋನನೂ ಹೋಗಿ ಫರೋಹನಿಗೆ--ಇಸ್ರಾಯೇಲಿನ ದೇವರಾದ ಕರ್ತನು--ಅರಣ್ಯದಲ್ಲಿ ನನ್ನ ಜನರು ನನಗೆ ಹಬ್ಬವನ್ನಾಚರಿಸುವದಕ್ಕೆ ಅವರನ್ನು ಹೋಗಗೊಡಿಸು ಎಂದು ಹೇಳುತ್ತಾನೆ ಅಂದರು.