Exodus · chapter 13 · verse 9
Exodus 13:9 in Kannada
ಕರ್ತನ ನ್ಯಾಯಪ್ರಮಾಣವು ನಿನ್ನ ಬಾಯಲ್ಲಿ ಇರುವಂತೆ ಅದು (ಆಚರಣೆಯು) ನಿನ್ನ ಕೈ ಮೇಲೆ ಗುರುತಾಗಿಯೂ ನಿನ್ನ ಕಣ್ಣುಗಳ ಮಧ್ಯೆ ಜ್ಞಾಪಕಾರ್ಥವಾಗಿಯೂ ಇರ ಬೇಕು. ಕರ್ತನು ನಿನ್ನನ್ನು ತನ್ನ ಬಲವಾದ ಕೈಯಿಂದ ಐಗುಪ್ತದಿಂದ ಹೊರಗೆ ಬರಮಾಡಿದ್ದಾನೆ.
Kartana nyaayapramaanavu ninna baayalli iruvante adu (aacharaneyu) ninna kai mele gurutaagiyoo ninna kannugala madhye jnyaapakaarthavaagiyoo ira beku. Kartanu ninnannu tanna balavaada kaiyinda aiguptadinda horage baramaadiddaane.
Exodus 13:9 in English
- King James Version (KJV)
- And it shall be for a sign unto thee upon thine hand, and for a memorial between thine eyes, that the LORD’s law may be in thy mouth: for with a strong hand hath the LORD brought thee out of Egypt.
- World English Bible (WEB)
- It shall be for a sign to you on your hand, and for a memorial between your eyes, that the LORD’s law may be in your mouth; for with a strong hand the LORD has brought you out of Egypt.
- American Standard Version (ASV)
- And it shall be for a sign unto thee upon thy hand, and for a memorial between thine eyes, that the law of Jehovah may be in thy mouth: for with a strong hand hath Jehovah brought thee out of Egypt.
- Bible in Basic English (BBE)
- And this will be for a sign to you on your hand and for a mark on your brow, so that the law of the Lord may be in your mouth: for with a strong hand the Lord took you out of Egypt.
- Darby Translation (DBY)
- And it shall be for a sign to thee on thy hand, and for a memorial between thine eyes, that the law of Jehovah may be in thy mouth; for with a powerful hand hath Jehovah brought thee out of Egypt.
- Webster's Bible (WBS)
- And it shall be for a sign to thee upon thy hand, and for a memorial between thy eyes; that the LORD'S law may be in thy mouth: for with a strong hand hath the LORD brought thee out of Egypt.
- Young's Literal Translation (YLT)
- and it hath been to thee for a sign on thy hand, and for a memorial between thine eyes, so that the law of Jehovah is in thy mouth, for by a strong hand hath Jehovah brought thee out from Egypt;
Read in context
- 7ಹುಳಿಯಿಲ್ಲದ ರೊಟ್ಟಿಯನ್ನು ಆ ಏಳು ದಿನಗಳಲ್ಲಿ ತಿನ್ನಬೇಕು, ನಿನ್ನ ಬಳಿಯಲ್ಲಿ ಹುಳಿ ರೊಟ್ಟಿಯು ಕಾಣಿಸಬಾರದು. ಇಲ್ಲವೆ ಹುಳಿ ಹಿಟ್ಟು ನಿನ್ನ ಯಾವ ಮೇರೆಯಲ್ಲೂ ಕಾಣಬಾರದು.
- 8ಆ ದಿನದಲ್ಲಿ ನಿನ್ನ ಮಗನಿಗೆ ತಿಳಿಸಿ ಹೇಳಬೇಕಾದದ್ದೇನಂದರೆ--ನಾನು ಐಗುಪ್ತದಿಂದ ಹೊರಗೆ ಬಂದಾಗ ಕರ್ತನು ನನಗೆ ಮಾಡಿದ್ದಕ್ಕಾಗಿ ಇದು ಆಚರಿಸಲ್ಪಡುತ್ತದೆ.
- 9ಕರ್ತನ ನ್ಯಾಯಪ್ರಮಾಣವು ನಿನ್ನ ಬಾಯಲ್ಲಿ ಇರುವಂತೆ ಅದು (ಆಚರಣೆಯು) ನಿನ್ನ ಕೈ ಮೇಲೆ ಗುರುತಾಗಿಯೂ ನಿನ್ನ ಕಣ್ಣುಗಳ ಮಧ್ಯೆ ಜ್ಞಾಪಕಾರ್ಥವಾಗಿಯೂ ಇರ ಬೇಕು. ಕರ್ತನು ನಿನ್ನನ್ನು ತನ್ನ ಬಲವಾದ ಕೈಯಿಂದ ಐಗುಪ್ತದಿಂದ ಹೊರಗೆ ಬರಮಾಡಿದ್ದಾನೆ.
- 10ಹೀಗಿರು ವದರಿಂದ ನೀನು ವರುಷ ವರುಷಕ್ಕೆ ನೇಮಿತವಾದ ಕಾಲದಲ್ಲಿ ಈ ಶಾಸನವನ್ನು ಕೈಕೊಳ್ಳಬೇಕು.
- 11ಕರ್ತನು ನಿನಗೂ ನಿನ್ನ ಪಿತೃಗಳಿಗೂ ಪ್ರಮಾಣಮಾಡಿದ ಪ್ರಕಾರ ನಿನ್ನನ್ನು ಕಾನಾನ್ಯರ ದೇಶಕ್ಕೆ ಬರಮಾಡಿ ಅದನ್ನು ನಿನಗೆ ಕೊಡುವನು.
Cross references
- Deuteronomy 6:8 ಧರ್ಮೋಪದೇಶಕಾಂಡ 6:8ಅವುಗಳನ್ನು ಗುರುತಾಗಿ ನಿನ್ನ ಕೈ ಮೇಲೆ ಕಟ್ಟಿಕೊಳ್ಳಬೇಕು; ಅವು ನಿನ್ನ ಕಣ್ಣುಗಳ ನಡುವೆ ಹಣೆ ಕಟ್ಟಾಗಿರಬೇಕು.
- Deuteronomy 11:18–19 ಧರ್ಮೋಪದೇಶಕಾಂಡ 11:18–19ಆದದರಿಂದ ಈ ನನ್ನ ವಾಕ್ಯಗಳನ್ನು ನಿಮ್ಮ ಹೃದಯದಲ್ಲಿಯೂ ಮನಸ್ಸಿನಲ್ಲಿಯೂ ಇಟ್ಟುಕೊಳ್ಳಿರಿ; ಅವುಗಳನ್ನು ಗುರುತಾಗಿ ನಿಮ್ಮ ಕೈಗಳಿಗೆ ಕಟ್ಟಿಕೊಳ್ಳಿರಿ; ಅವು ನಿಮ್ಮ ಕಣ್ಣುಗಳ ನಡುವೆ ಹಣೆಕಟ್ಟಾಗಿರಲಿ. ನಿಮ್ಮ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯ ಮಾತನಾಡಿ ಅವುಗಳನ್ನು ನಿಮ್ಮ ಮಕ್ಕಳಿಗೆ ಕಲಿಸಬೇಕು.
- Exodus 13:16 ವಿಮೋಚನಕಾಂಡ 13:16ಇದು ನಿನ್ನ ಕೈಮೇಲೆ ಗುರುತಾಗಿಯೂ ನಿನ್ನ ಕಣ್ಣುಗಳ ನಡುವೆ ಹಣೆಯ ಕಟ್ಟಾಗಿಯೂ ಇರಲಿ. ಯಾಕಂದರೆ ಕರ್ತನು ತನ್ನ ಬಲವಾದ ಕೈಯಿಂದ ನಮ್ಮನ್ನು ಐಗುಪ್ತದೊಳಗಿನಿಂದ ಹೊರಗೆ ಬರಮಾಡಿದ್ದಾನೆ.
- Numbers 15:39 ಅರಣ್ಯಕಾಂಡ 15:39ಅದನ್ನು ನೀವು ಗೊಂಡೆಯಾಗಿ ಇಟ್ಟುಕೊಂಡು ಅದನ್ನು ನೋಡುವಾಗ ಕರ್ತನ ಸಕಲ ಆಜ್ಞೆಗಳನ್ನು ನೆನಸಿ ಅವುಗಳ ಪ್ರಕಾರ ಮಾಡಿ ನಿಮ್ಮ ಹೃದಯವನ್ನೂ ಕಣ್ಣುಗಳನ್ನೂ ಅವು ಗಳಿಗನುಸಾರವಾಗಿ ಜಾರತ್ವಮಾಡುವಂತೆ ಹಿಂಬಾ ಲಿಸದೆ
- Exodus 12:14 ವಿಮೋಚನಕಾಂಡ 12:14ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವದು; ನೀವು ಇದನ್ನು ಕರ್ತನಿಗೆ ಹಬ್ಬವಾಗಿ ತಲತಲಾಂತರ ಗಳಲ್ಲಿ ಆಚರಿಸಬೇಕು; ಇದನ್ನು ನಿತ್ಯ ಶಾಸನದಂತೆ ಎಂದೆಂದಿಗೂ ಆಚರಿಸಬೇಕು.
- Matthew 23:5 ಮತ್ತಾಯನು 23:5ಆದರೆ ತಾವು ಮಾಡುವ ತಮ್ಮ ಕ್ರಿಯೆಗಳನ್ನೆಲ್ಲಾ ಜನರು ನೋಡುವಂತೆ ಮಾಡು ತ್ತಾರೆ. ಅವರು ತಮ್ಮ ಜ್ಞಾಪಕಪಟ್ಟಿಗಳನ್ನು ಅಗಲಮಾಡಿ ಉಡುಪುಗಳ ಅಂಚುಗಳನ್ನು ಉದ್ದ ಮಾಡುತ್ತಾ
- Romans 10:8 ರೋಮಾಪುರದವರಿಗೆ 10:8ಆದರೆ ಅದು ಏನು ಹೇಳುತ್ತದೆ? ವಾಕ್ಯವು ನಿನ್ನ ಸವಿಾಪದಲ್ಲಿಯೂ ನಿನ್ನ ಬಾಯಲ್ಲಿಯೂ ನಿನ್ನ ಹೃದಯದಲ್ಲಿಯೂ ಇದೆ ಎಂದು ಅನ್ನುತ್ತದೆ; ಅದೇನಂದರೆ--ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ.
- Isaiah 59:21 ಯೆಶಾಯ 59:21ಕರ್ತನು ಹೇಳುವದೇ ನಂದರೆ--ನಾನಾದರೋ ಅವರ ಸಂಗಡ ಮಾಡುವ ಒಡಂಬಡಿಕೆ ಇದೇ--ನಿನ್ನ ಮೇಲಿರುವ ನನ್ನ ಆತ್ಮನೂ ನಾನು ನಿನ್ನ ಬಾಯಲ್ಲಿ ಇಟ್ಟಿರುವ ನನ್ನ ವಾಕ್ಯಗಳೂ ಇಂದಿನಿಂದ ಸದಾಕಾಲಕ್ಕೆ ನಿನ್ನ ಬಾಯಿಂದಲೂ ನಿನ್ನ ಸಂತಾನದ ಬಾಯಿಂದಲೂ ನಿನ್ನ ಸಂತತಿಯ ಸಂತಾ ನದ ಬಾಯಿಂದಲೂ ತೊಲಗುವದಿಲ್ಲವೆಂದು ಕರ್ತನು ಹೇಳುತ್ತಾನೆ.
- Proverbs 6:20–23 ಜ್ಞಾನೋಕ್ತಿಗಳು 6:20–23ನನ್ನ ಮಗನೇ, ನಿನ್ನ ತಂದೆಯ ಆಜ್ಞೆಯನ್ನು ಕೈಕೊಳ್ಳು, ತಾಯಿಯ ಕಟ್ಟಳೆಯನ್ನು ತ್ಯಜಿಸಬೇಡ. ಅವುಗಳನ್ನು ಯಾವಾಗಲೂ ನಿನ್ನ ಹೃದಯಕ್ಕೆ ಬಂಧಿಸು. ನಿನ್ನ ಕಂಠಕ್ಕೆ ಕಟ್ಟಿಕೋ. ನೀನು ಹೋಗು ವಾಗ ಅದು ನಿನ್ನನ್ನು ನಡಿಸುವದು; ಮಲಗುವಾಗ ನಿನ್ನನ್ನು ಕಾಯುವದು; ಎಚ್ಚರಗೊಂಡಾಗ ನಿನ್ನೊಂದಿಗೆ ಮಾತಾಡುವದು. ಆಜ್ಞೆಯು ದೀಪವಾಗಿದೆ, ಕಟ್ಟ ಳೆಯು ಬೆಳಕಾಗಿದೆ; ಶಿಕ್ಷಣದ ಗದರಿಕೆಗಳು ಜೀವದ ಮಾರ್ಗವಾಗಿವೆ.
- Deuteronomy 30:14 ಧರ್ಮೋಪದೇಶಕಾಂಡ 30:14ಈ ವಾಕ್ಯವು ನಿನಗೆ ಬಹಳ ಸವಿಾಪವಾಗಿದೆ; ಅದನ್ನು ಕೈಕೊಳ್ಳುವ ಹಾಗೆ ನಿನ್ನ ಬಾಯಲ್ಲಿಯೂ ನಿನ್ನ ಹೃದಯದಲ್ಲಿಯೂ ಅದೆ.
- Joshua 1:8–9 ಯೆಹೋಶುವ 1:8–9ಈ ಪುಸ್ತಕದಲ್ಲಿ ಬರೆದಿರುವ ನ್ಯಾಯಪ್ರಮಾಣವು ನಿನ್ನ ಬಾಯಿಂದ ಹೋಗಬಾರದು; ಅದರಲ್ಲಿ ಬರೆದಿರುವ ಪ್ರಕಾರವೇ ಕೈಕೊಂಡು ನಡೆಯುವ ಹಾಗೆ ರಾತ್ರಿಹಗಲು ಅದನ್ನು ಧ್ಯಾನಿಸಬೇಕು. ಆಗ ನಿನ್ನ ಮಾರ್ಗವನ್ನು ಸಫಲಮಾಡಿ ಕೊಂಡು ಮಹಾ ಜಯಶಾಲಿಯಾಗುವಿ. ನಿನಗೆ ಆಜ್ಞಾ ಪಿಸಿದ್ದೇನಲ್ಲಾ; ಬಲವಾಗಿರು, ಒಳ್ಳೆ ಧೈರ್ಯದಿಂದಿರು; ಭಯಪಡಬೇಡ, ನಿರಾಶೆಗೊಳ್ಳಬೇಡ. ನೀನು ಹೋಗು ವಲ್ಲೆಲ್ಲಾ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ ಎಂದು ಹೇಳಿದನು.
- Exodus 13:3 ವಿಮೋಚನಕಾಂಡ 13:3ಆಗ ಮೋಶೆಯು ಜನರಿಗೆ--ನೀವು ಐಗುಪ್ತದ ದಾಸತ್ವದ ಮನೆಯಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಯಾಕಂದರೆ ಕರ್ತನು ತನ್ನ ಬಲವಾದ ಕೈಯಿಂದ ನಿಮ್ಮನ್ನು ಅಲ್ಲಿಂದ ಹೊರಗೆ ಬರಮಾಡಿದ್ದಾನೆ. ಹೀಗಿರುವದರಿಂದ ಅಂದು ನೀವು ಹುಳಿ ರೊಟ್ಟಿಯನ್ನು ತಿನ್ನಬಾರದು.