Habakkuk · chapter 3 · verse 14
Habakkuk 3:14 in Kannada
ಅವನ ದೊಣ್ಣೆಗಳಿಂದಲೇ ತನ್ನ ಹಳ್ಳಿಗಳ ಮುಖ್ಯಸ್ಥನನ್ನು ಹೊಡೆದಿದ್ದೀ; ಅವರು ನನ್ನನ್ನು ಚದುರಿಸುವದಕ್ಕೆ ಬಿರುಗಾಳಿಯಂತೆ ಬಂದರು; ಬಡವರನ್ನು ಅಂತರಂಗದಲ್ಲಿ ನುಂಗಿಬಿಡುವ ಹಾಗೆ ಅವರಿಗೆ ಸಂತೋಷವು ಇರುವದು.
Avana donnegalindale tanna halligala mukhyasthanannu hodediddee; avaru nannannu chadurisuvadakke birugaaliyante bandaru; badavarannu antarangadalli nungibiduva haage avarige santoshavu iruvadu.
Habakkuk 3:14 in English
- King James Version (KJV)
- Thou didst strike through with his staves the head of his villages: they came out as a whirlwind to scatter me: their rejoicing [was] as to devour the poor secretly.
- World English Bible (WEB)
- You pierced the heads of his warriors with their own spears. They came as a whirlwind to scatter me, gloating as if to devour the wretched in secret.
- American Standard Version (ASV)
- Thou didst pierce with his own staves the head of his warriors: They came as a whirlwind to scatter me; Their rejoicing was as to devour the poor secretly.
- Bible in Basic English (BBE)
- You have put your spears through his head, his horsemen were sent in flight like dry stems; they had joy in driving away the poor, in making a meal of them secretly.
- Darby Translation (DBY)
- Thou didst strike through with his own spears the head of his leaders: They came out as a whirlwind to scatter me, Whose exulting was as to devour the afflicted secretly.
- Webster's Bible (WBS)
- Thou didst strike through with his staffs the head of his villages: they came out as a whirlwind to scatter me: their rejoicing [was] as to devour the poor secretly.
- Young's Literal Translation (YLT)
- Thou hast pierced with his staves the head of his leaders, They are tempestuous to scatter me, Their exultation [is] as to consume the poor in secret.
Read in context
- 12ನೀನು ಸಿಟ್ಟಿನಿಂದ ದೇಶದ ಮೇಲೆ ನಡೆದುಹೋಗಿ ಕೋಪದಿಂದ ಅನ್ಯಜನಾಂಗಗಳನ್ನು ತುಳಿದುಹಾಕಿದ್ದೀ.
- 13ನಿನ್ನ ಜನರ ರಕ್ಷಣೆಗೋಸ್ಕರವೂ ನಿನ್ನ ಅಭಿಷಿಕ್ತರ ರಕ್ಷಣೆಗೊಸ್ಕರವೂ ನೀನು ಹೊರಟು ಹೋಗಿ ಕುತ್ತಿಗೆಯ ವರೆಗೂ ಆಸ್ತಿವಾರವನ್ನು ಬರಿದು ಮಾಡಿದ ಹಾಗೆ ದುಷ್ಟರ ಮನೆಯ ತಲೆಯನ್ನು ಗಾಯ ಮಾಡಿಬಿಟ್ಟಿದ್ದೀ. ಸೆಲಾ.
- 14ಅವನ ದೊಣ್ಣೆಗಳಿಂದಲೇ ತನ್ನ ಹಳ್ಳಿಗಳ ಮುಖ್ಯಸ್ಥನನ್ನು ಹೊಡೆದಿದ್ದೀ; ಅವರು ನನ್ನನ್ನು ಚದುರಿಸುವದಕ್ಕೆ ಬಿರುಗಾಳಿಯಂತೆ ಬಂದರು; ಬಡವರನ್ನು ಅಂತರಂಗದಲ್ಲಿ ನುಂಗಿಬಿಡುವ ಹಾಗೆ ಅವರಿಗೆ ಸಂತೋಷವು ಇರುವದು.
- 15ನೀನು ನಿನ್ನ ಕುದುರೆಗಳ ಸಂಗಡ ಸಮುದ್ರದಲ್ಲಿಯೂ ಮಹಾಜಲ ಗಳ ಸಮೂಹದಲ್ಲಿಯೂ ನಡೆದುಹೋದಿ.
- 16ನಾನು ಕೇಳಿದಾಗ ನನ್ನ ಹೊಟ್ಟೆಯು ತಳಮಳಗೊಂಡಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು; ಇಕ್ಕಟ್ಟಿನ ದಿನದಲ್ಲಿ ನಾನು ವಿಶ್ರಾಂತಿಯನ್ನು ಹೊಂದುವ ಹಾಗೆ ಕೊಳೆಯುವಿಕೆಯು ನನ್ನ ಎಲುಬುಗಳಲ್ಲಿ ಸೇರಿತು, ನಾನು ನಿಂತ ಹಾಗೆಯೇ ನಡುಗಿದೆನು; ಆತನು ಜನರ ಬಳಿಗೆ ಬರುವಾಗ ತನ್ನ ಸೈನ್ಯಗಳ ಕೂಡ ಅವರ ಮೇಲೆ ದಾಳಿ ಮಾಡುವನು.
Cross references
- Zechariah 9:14 ಜೆಕರ್ಯ 9:14ಇದಲ್ಲದೆ ಕರ್ತನು ಅವರ ಮೇಲೆ ಕಾಣಿಸಿಕೊಳ್ಳುವನು; ಆತನ ಬಾಣಗಳು ಮಿಂಚಿನ ಹಾಗೆ ಹೊರಡುವವು; ಕರ್ತನಾದ ದೇವರು ತುತೂರಿ ಯನ್ನು ಊದಿ, ದಕ್ಷಿಣದ ಸುಳಿಗಾಳಿಯಲ್ಲಿ ಹೋಗು ವನು.
- Daniel 11:40 ದಾನಿಯೇಲನು 11:40ಅಂತ್ಯಕಾಲದಲ್ಲಿ ದಕ್ಷಿಣದ ಅರಸನು ಅವನ ಮೇಲೆ ಬೀಳುವನು; ಉತ್ತರದ ಅರಸನು ರಥಗಳೊಂ ದಿಗೂ ಸವಾರರೊಂದಿಗೂ ಅನೇಕ ಹಡಗುಗಳೊಂ ದಿಗೂ ಸುಳಿಗಾಳಿಯಂತೆ ಅವನಿಗೆ ವಿರೋಧವಾಗಿ ದೇಶಗಳನ್ನು ಪ್ರವೇಶಿಸಿ ಪ್ರಳಯದಂತೆ ಹಾದು ಹೋಗುವನು.
- Psalm 118:10–12 ಕೀರ್ತನೆಗಳು 118:10–12ಎಲ್ಲಾ ಜನಾಂಗದವರು ನನ್ನನ್ನು ಸುತ್ತಿಕೊಂಡರು; ನಾನು ಕರ್ತನ ಹೆಸರಿನಲ್ಲಿ ಅವರನ್ನು ನಾಶಮಾಡು ವೆನು. ಅವರು ನನ್ನನ್ನು ಸುತ್ತಿಕೊಂಡರು; ಹೌದು, ನನ್ನನ್ನು ಸುತ್ತಿಕೊಂಡರು; ಕರ್ತನ ಹೆಸರಿನಲ್ಲಿ ಅವ ರನ್ನು ಸಂಹರಿಸುವೆನು. ಜೇನ್ನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ ಅವರು ಮುಳ್ಳುಗಳ ಬೆಂಕಿಯ ಹಾಗೆ ಆರಿಹೋಗುತ್ತಾರೆ, ಕರ್ತನ ಹೆಸರಿನಲ್ಲಿ ನಾನು ಅವ ರನ್ನು ಸಂಹರಿಸುವೆನು.
- Exodus 15:9–10 ವಿಮೋಚನಕಾಂಡ 15:9–10ಶತ್ರುವು--ನಾನು ಹಿಂದಟ್ಟಿ, ಹಿಡಿ ಯುವೆನು, ಕೊಳ್ಳೆಯನ್ನು ಹಂಚಿಕೊಳ್ಳುವೆನು, ನನ್ನ ಆಶೆಗಳು ಅವರಿಂದ ತೃಪ್ತಿಹೊಂದುವವು. ನಾನು ನನ್ನ ಖಡ್ಗವನ್ನು ಹಿರಿಯುವೆನು, ನನ್ನ ಕೈ ಅವರನ್ನು ಸಂಹಾರ ಮಾಡುವದು ಅಂದನು. ನೀನು ನಿನ್ನ ಗಾಳಿಯನ್ನು ಊದಿದಾಗ ಸಮುದ್ರವು ಅವರನ್ನು ಮುಚ್ಚಿಕೊಂಡಿತು. ಅವರು ಸೀಸದಂತೆ ಮಹಾಜಲಗಳಲ್ಲಿ ಮುಳುಗಿ ಹೊದರು.
- Exodus 1:10–16 ವಿಮೋಚನಕಾಂಡ 1:10–16ಬನ್ನಿ, ಅವರು ಹೆಚ್ಚಾಗದ ಹಾಗೆಯೂ ನಮಗೆ ಯುದ್ಧ ಸಂಭವಿಸಿದರೆ ಅವರು ನಮ್ಮ ಶತ್ರುಗಳ ಸಂಗಡ ಕೂಡಿಕೊಂಡು ನಮಗೆ ವಿರೋಧವಾಗಿ ಯುದ್ಧಮಾಡಿ ದೇಶವನ್ನು ಬಿಟ್ಟು ಹೋಗದ ಹಾಗೆಯೂ ಅವ ರೊಂದಿಗೆ ಬುದ್ಧಿವಂತಿಕೆಯಿಂದ ವರ್ತಿಸೋಣ ಎಂದು ಹೇಳಿದನು. ಆಗ ಅವರನ್ನು ತಮ್ಮ ಬಿಟ್ಟೀಕೆಲಸಗಳಿಂದ ಶ್ರಮೆಪಡಿಸುವ ಹಾಗೆ ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ನೇಮಿಸಿದರು. ಅವರು ಫರೋಹನಿಗೆ ಪಿತೋಮ್ ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು. ಆದರೆ ಇವರು ಅವರನ್ನು ಎಷ್ಟು ಶ್ರಮೆಪಡಿಸಿದರೋ ಅಷ್ಟು ಅಧಿಕ ವಾಗಿ ಅವರು ಹೆಚ್ಚಿ ಹರಡಿಕೊಂಡರು. ಐಗುಪ್ತ್ಯರು ಇಸ್ರಾಯೇಲ್ ಮಕ್ಕಳಿಗಾಗಿ ಸಂತಾಪಪಟ್ಟರು. ಆದ ದರಿಂದ ಐಗುಪ್ತ್ಯರು ಇಸ್ರಾಯೇಲನ ಮಕ್ಕಳಿಂದ ಕ್ರೂರವಾಗಿ ಸೇವೆ ಮಾಡಿಸಿಕೊಂಡರು. ಮಣ್ಣಿನ ಕೆಲಸದಲ್ಲಿಯೂ ಇಟ್ಟಿಗೆಯನ್ನು ಮಾಡುವ ಕೆಲಸದ ಲ್ಲಿಯೂ ವ್ಯವಸಾಯದ ಎಲ್ಲಾ ವಿಧವಾದ ಕೆಲಸಗಳ ಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವನ ವನ್ನು ಬೇಸರಪಡಿಸಿದರು. ಅವರು ಅವರಿಂದ ಮಾಡಿ ಸಿದ ಎಲ್ಲಾ ಸೇವೆಯೂ ಕಠಿಣವಾಗಿತ್ತು. ಇದಲ್ಲದೆ ಐಗುಪ್ತದ ಅರಸನು ಶಿಪ್ರಾ ಮತ್ತು ಪೂಗಾ ಎಂದು ಹೆಸರಿದ್ದ ಇಬ್ರಿಯ ಸೂಲಗಿತ್ತಿಯರ ಸಂಗಡ ಮಾತನಾಡಿದನು. ಅವನು ಅವರಿಗೆ--ನೀವು ಇಬ್ರಿಯ ಸ್ತ್ರೀಯರಿಗೆ ಸೂಲಗಿತ್ತಿಯ ಕೆಲಸ ಮಾಡುವದಕ್ಕೆ ಹೆರಿಗೆಯ ಪೀಠದಲ್ಲಿ ಅವರನ್ನು ಪರಾಂಬ ರಿಸುವಾಗ ಗಂಡು ಮಗುವಾದರೆ ಅದನ್ನು ಕೊಂದು ಹಾಕಿರಿ, ಹೆಣ್ಣಾದರೆ ಬದುಕಲಿ ಎಂದು ಹೇಳಿದನು.
- Exodus 14:17–18 ವಿಮೋಚನಕಾಂಡ 14:17–18ಇಗೋ, ನಾನು ಐಗುಪ್ತ್ಯರ ಹೃದಯವನ್ನು ಕಠಿಣಮಾಡುತ್ತೇನೆ; ಅವರು ಇವರನ್ನು ಹಿಂದಟ್ಟುವರು. ಇದಲ್ಲದೆ ಫರೋಹನ ಮೇಲೆಯೂ ಅವನ ಎಲ್ಲಾ ಸೈನ್ಯದ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಳ್ಳುವೆನು. ನಾನು ಫರೋ ಹನ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿ ಕೊಂಡಾಗ ನಾನೇ ಕರ್ತನೆಂದು ಐಗುಪ್ತ್ಯರು ತಿಳಿದು ಕೊಳ್ಳುವರು ಅಂದನು.
- Exodus 11:4–7 ವಿಮೋಚನಕಾಂಡ 11:4–7ಆಗ ಮೋಶೆಯು ಫರೋಹನಿಗೆ--ಕರ್ತನು ಹೀಗೆ ಹೇಳುತ್ತಾನೆ--ಸುಮಾರು ಮಧ್ಯರಾತ್ರಿಯಲ್ಲಿ ನಾನು ಐಗುಪ್ತದ ಮಧ್ಯದಲ್ಲಿ ಹಾದು ಹೋಗುವೆನು. ಆಗ ಐಗುಪ್ತದೇಶದ ಚೊಚ್ಚಲ ಮಕ್ಕಳು ಅಂದರೆ ಸಿಂಹಾ ಸನದ ಮೇಲೆ ಕೂತಿರುವ ಫರೋಹನ ಚೊಚ್ಚಲ ಮಗನು ಮೊದಲುಗೊಂಡು ಬೀಸುವ ಕಲ್ಲಿನ ಹಿಂದೆ ಇರುವ ದಾಸಿಯ ಚೊಚ್ಚಲ ಮಗನ ವರೆಗೆ ಮತ್ತು ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವು ಸಾಯುವವು. ಐಗುಪ್ತದೇಶದಲ್ಲೆಲ್ಲಾ ದೊಡ್ಡ ಗೋಳಾಟವಿರುವದು. ಇಂಥದ್ದು ಹಿಂದೆಯೂ ಇರಲಿಲ್ಲ, ಇನ್ನು ಮುಂದೆಯೂ ಇರುವದಿಲ್ಲ. ಆದರೆ ಕರ್ತನು ಐಗುಪ್ತ್ಯರಿಗೂ ಇಸ್ರಾಯೇಲ್ಯರಿಗೂ ಮಧ್ಯದಲ್ಲಿಟ್ಟಿರುವ ವ್ಯತ್ಯಾಸವನ್ನು ನೀವು ತಿಳಿದುಕೊಳ್ಳುವಂತೆ ಇಸ್ರಾಯೇಲ್ ಮಕ್ಕಳೆಲ್ಲರ ಮೇಲೆ ಮನುಷ್ಯರು ಮೊದಲುಗೊಂಡು ಪಶುಗಳ ವರೆಗೆ ಒಂದು ನಾಯಿಯಾದರೂ ತನ್ನ ನಾಲಿಗೆಯನ್ನು ಅಲ್ಲಾಡಿಸುವದಿಲ್ಲ.
- Exodus 12:29–30 ವಿಮೋಚನಕಾಂಡ 12:29–30ಮಧ್ಯರಾತ್ರಿಯಲ್ಲಿ ನಡೆದದ್ದೇನಂದರೆ, ಸಿಂಹಾ ಸನದ ಮೇಲೆ ಕೂತುಕೊಂಡ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನ ವರೆಗೂ ಅಂದರೆ ಐಗುಪ್ತದೇಶ ದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವನ್ನೂ ಕರ್ತನು ಸಂಹರಿಸಿದನು. ಆಗ ಫರೋಹನೂ ಅವನ ಎಲ್ಲಾ ಸೇವಕರೂ ಎಲ್ಲಾ ಐಗುಪ್ತ್ಯರೂ ರಾತ್ರಿಯಲ್ಲಿ ಎದ್ದರು. ಆಗ ಐಗುಪ್ತದಲ್ಲಿ ದೊಡ್ಡ ಗೋಳಾಟವಾಯಿತು. ಅಲ್ಲಿ ಸತ್ತವರಿಲ್ಲದ ಒಂದು ಮನೆಯಾದರೂ ಇರಲಿಲ್ಲ.
- Exodus 1:22 ವಿಮೋಚನಕಾಂಡ 1:22ಆದರೆ ಫರೋಹನು ತನ್ನ ಜನರಿಗೆಲ್ಲಾ--(ಇಬ್ರಿಯರಿಗೆ) ಹುಟ್ಟುವ ಗಂಡು ಮಕ್ಕಳನ್ನೆಲ್ಲಾ ನದಿಯಲ್ಲಿ ಹಾಕಬೇಕು. ಹೆಣ್ಣು ಮಕ್ಕಳ ನ್ನೆಲ್ಲಾ ಜೀವದಿಂದ ಉಳಿಸಬೇಕು ಎಂದು ಅಪ್ಪಣೆ ಕೊಟ್ಟನು.
- Psalm 10:8 ಕೀರ್ತನೆಗಳು 10:8ಅವನು ಹೊಂಚು ಹಾಕುವ ಗ್ರಾಮಗಳ ಸ್ಥಳಗಳಲ್ಲಿ ಕೂತುಕೊಂಡು ಗುಪ್ತವಾದ ಸ್ಥಳಗಳಲ್ಲಿ ನಿರಪರಾಧಿಯನ್ನು ಕೊಲ್ಲು ತ್ತಾನೆ. ಅವನ ಕಣ್ಣುಗಳು ಗತಿಯಿಲ್ಲದವನನ್ನು ಹೊಂಚಿ ನೋಡು ತ್ತವೆ;
- Exodus 12:12–13 ವಿಮೋಚನಕಾಂಡ 12:12–13ನಾನು ಈ ರಾತ್ರಿ ಐಗುಪ್ತದೇಶದಲ್ಲಿ ಹಾದುಹೋಗುತ್ತೇನೆ. ಐಗುಪ್ತದೇಶದಲ್ಲಿರುವ ಎಲ್ಲಾ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಇರುವ ಚೊಚ್ಚ ಲಾದವುಗಳನ್ನು ಸಂಹರಿಸುವೆನು. ಐಗುಪ್ತದ ದೇವರುಗ ಳಿಗೆಲ್ಲಾ ನಾನು ನ್ಯಾಯತೀರಿಸುವೆನು; ನಾನೇ ಕರ್ತನು. ಆದರೆ ನೀವು ಇರುವ ಎಲ್ಲಾ ಮನೆಗಳ ಮೇಲೆ ರಕ್ತವು ನಿಮಗೆ ಗುರುತಾಗಿರುವದು. ಆ ರಕ್ತವನ್ನು ನಾನು ನೋಡುವಾಗ ನಿಮ್ಮನ್ನು ದಾಟಿಹೋಗುವೆನು. ಐಗುಪ್ತದೇಶವನ್ನು ನಾನು ಹೊಡೆಯುವ ಸಮಯದಲ್ಲಿ ನಿಮ್ಮನ್ನು ನಾಶಮಾಡುವ ಯಾವ ಬಾಧೆಯೂ ನಿಮ್ಮ ಮೇಲೆ ಬರುವದಿಲ್ಲ.
- Exodus 14:5–9 ವಿಮೋಚನಕಾಂಡ 14:5–9ಜನರು ಓಡಿಹೋದರೆಂದು ಐಗುಪ್ತದ ಅರಸನಿಗೆ ತಿಳಿಸಲ್ಪಟ್ಟಿತು; ಆಗ ಫರೋಹನ ಮತ್ತು ಅವನ ಸೇವಕರ ಹೃದಯವು ಜನರಿಗೆ ವಿರೋಧವಾಗಿ ತಿರುಗಿಕೊಂಡಿತು; ಅವರು--ಇಸ್ರಾಯೇಲ್ಯರು ನಮ್ಮ ಸೇವೆಮಾಡುವದನ್ನು ಬಿಟ್ಟುಹೋಗಿಬಿಡುವಂತೆ ನಾವು ಯಾಕೆ ಮಾಡಿದೆವು ಅಂದರು. ಆಗ ಅವನು ತನ್ನ ರಥವನ್ನು ಸಿದ್ಧಮಾಡಿ ಕೊಂಡು ತನ್ನ ಜನರೊಂದಿಗೆ ಹೊರಟನು. ಇದಲ್ಲದೆ ಅವನು ಆರಿಸಿಕೊಂಡ ಆರು ನೂರು ರಥಗಳನ್ನೂ ಐಗುಪ್ತದ ಎಲ್ಲಾ ರಥಗಳನ್ನೂ ಅವುಗಳ ಮೇಲೆ ಅಧಿ ಪತಿಗಳನ್ನೂ ತೆಗೆದುಕೊಂಡು ಹೋದನು. ಐಗುಪ್ತದ ಅರಸನಾದ ಫರೋಹನ ಹೃದಯವನ್ನು ಕರ್ತನು ಕಠಿಣ ಮಾಡಿದ್ದರಿಂದ ಅವನು ಇಸ್ರಾಯೇಲ್ ಮಕ್ಕಳನ್ನು ಹಿಂದಟ್ಟಿದನು. ಆದರೆ ಇಸ್ರಾಯೇಲ್ ಮಕ್ಕಳು ಧೈರ್ಯ ದಿಂದ ಹೊರಗೆ ಹೋದರು. ಐಗುಪ್ತ್ಯರು ಅವರನ್ನು ಹಿಂದಟ್ಟಿದ್ದರು; ಅವರು ಸಮುದ್ರ ತೀರದಲ್ಲಿ ಇಳು ಕೊಂಡಿರುವಾಗ ಫರೋಹನ ಎಲ್ಲಾ ಕುದುರೆಗಳೂ ರಥಗಳೂ ಕುದುರೆ ಸವಾರರೂ ಅವನ ಸೈನ್ಯವೂ ಪೀಹಹೀರೋತಿನ ಸವಿಾಪದಲ್ಲಿ ಬಾಳ್ಚೆಫೋನಿನ ಎದುರಾಗಿ ಸವಿಾಪಿಸಿದರು.