Exodus · chapter 18 · verse 21
Exodus 18:21 in Kannada
ಇದಲ್ಲದೆ ನೀನು ಸಮಸ್ತ ಜನರೊಳಗೆ ಸಮರ್ಥರು ಅಂದರೆ ದೇವರಿಗೆ ಭಯ ಪಡುವವರೂ ಸತ್ಯವಂತರೂ ದುರಾಶೆಯನ್ನು ಹಗೆ ಮಾಡುವವರೂ ಆಗಿರುವ ಇಂಥವರನ್ನು ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು.
Idallade neenu samasta janarolage samartharu andare devarige bhaya paduvavaroo satyavantaroo duraasheyannu hage maaduvavaroo aagiruva inthavarannu saavira janara meleyoo nooru janara meleyoo aivattu janara meleyoo hattu janara meleyoo adhikaarigalannaagi nemisabeku.
Exodus 18:21 in English
- King James Version (KJV)
- Moreover thou shalt provide out of all the people able men, such as fear God, men of truth, hating covetousness; and place [such] over them, [to be] rulers of thousands, [and] rulers of hundreds, rulers of fifties, and rulers of tens:
- World English Bible (WEB)
- Moreover you shall provide out of all the people able men which fear God: men of truth, hating unjust gain; and place such over them, to be rulers of thousands, rulers of hundreds, rulers of fifties, and rulers of tens.
- American Standard Version (ASV)
- Moreover thou shalt provide out of all the people able men, such as fear God, men of truth, hating unjust gain; and place such over them, to be rulers of thousands, rulers of hundreds, rulers of fifties, and rulers of tens:
- Bible in Basic English (BBE)
- But for the rest, take from among the people able men, such as have the fear of God, true men hating profits wrongly made; and put such men over them, to be captains of thousands, captains of hundreds and of fifties and of tens;
- Darby Translation (DBY)
- But do thou provide among all the people able men, such as fear God, men of truth, hating covetousness; and place [them] over them, chiefs of thousands, chiefs of hundreds, chiefs of fifties, and chiefs of tens,
- Webster's Bible (WBS)
- Moreover, thou shalt provide out of all the people, able men, such as fear God, men of truth, hating covetousness; and place [such] over them [to be] rulers of thousands, [and] rulers of hundreds, rulers of fifties, and rulers of tens:
- Young's Literal Translation (YLT)
- 'And thou — thou dost provide out of all the people men of ability, fearing God, men of truth, hating dishonest gain, and hast placed [these] over them, heads of thousands, heads of hundreds, heads of fifties, and heads of tens,
Read in context
- 19ಆದದರಿಂದ ಈಗ ನನ್ನ ಮಾತನ್ನು ಕೇಳು, ನಿನಗೆ ಆಲೋಚನೆ ಹೇಳುತ್ತೇನೆ; ದೇವರು ನಿನ್ನ ಸಂಗಡ ಇರಲಿ; ನೀನು ಜನರಿಗಾಗಿ ದೇವರ ಪಕ್ಷದಲ್ಲಿದ್ದು ಅವರ ವ್ಯಾಜ್ಯಗಳನ್ನು ಆತನ ಮುಂದೆ ತರಬೇಕು.
- 20ನೇಮಕಗಳನ್ನೂ ನ್ಯಾಯ ಪ್ರಮಾಣಗಳನ್ನೂ ಅವರಿಗೆ ಕಲಿಸಿ, ಅವರು ಹೋಗ ತಕ್ಕ ಮಾರ್ಗವನ್ನೂ ಅವರು ಮಾಡತಕ್ಕ ಕೆಲಸವನ್ನೂ ಅವರಿಗೆ ತೋರಿಸಬೇಕು.
- 21ಇದಲ್ಲದೆ ನೀನು ಸಮಸ್ತ ಜನರೊಳಗೆ ಸಮರ್ಥರು ಅಂದರೆ ದೇವರಿಗೆ ಭಯ ಪಡುವವರೂ ಸತ್ಯವಂತರೂ ದುರಾಶೆಯನ್ನು ಹಗೆ ಮಾಡುವವರೂ ಆಗಿರುವ ಇಂಥವರನ್ನು ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು.
- 22ಇವರು ಎಲ್ಲಾ ಕಾಲಗಳಲ್ಲಿ ಜನರಿಗೆ ನ್ಯಾಯತೀರಿಸಿ ದೊಡ್ಡ ವ್ಯಾಜ್ಯ ಗಳನ್ನೆಲ್ಲಾ ನಿನ್ನ ಮುಂದೆ ತಂದು ಸಣ್ಣಸಣ್ಣ ವ್ಯಾಜ್ಯಗಳನ್ನು ತಾವೇ ತೀರಿಸಬೇಕು. ಹೀಗೆ ನಿನಗೆ ಸುಲಭವಾಗು ವದು. ಅವರು ನಿನ್ನ ಸಂಗಡ ಭಾರವನ್ನು ಹೊರುವರು.
- 23ಈ ಕಾರ್ಯವನ್ನು ಮಾಡುವದಕ್ಕೆ ದೇವರು ನಿನಗೆ ಅಪ್ಪಣೆಕೊಟ್ಟರೆ ನೀನು ಇದನ್ನು ನಿರ್ವಹಿಸಲು ಶಕ್ತ ನಾಗುವಿ. ಈ ಜನರೆಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಸಮಾಧಾನದಿಂದ ಹೋಗುವರು ಅಂದನು.
Cross references
- Acts 6:3 ಅಪೊಸ್ತಲರ ಕೃತ್ಯಗಳು 6:3ಆದದರಿಂದ ಸಹೋದರರೇ, ಈ ಕೆಲಸದ ಮೇಲೆ ನಾವು ನೇಮಿಸುವಂತೆ ಪವಿತ್ರಾತ್ಮನಿಂದಲೂ ಜ್ಞಾನ ದಿಂದಲೂ ತುಂಬಿದ ಯಥಾರ್ಥವಾದ ಏಳು ಮಂದಿ ಯನ್ನು ನಿಮ್ಮಲ್ಲಿಂದ ಆರಿಸಿಕೊಳ್ಳಿರಿ.
- 2 Chronicles 19:5–10 2 ಪೂರ್ವಕಾಲವೃತ್ತಾಂತ 19:5–10ಪಟ್ಟಣ ದಿಂದ ಪಟ್ಟಣಕ್ಕೆ ದೇಶದ ಕೋಟೆಯ ಪಟ್ಟಣಗಳ ಲ್ಲೆಲ್ಲಾ ಅವನು ನ್ಯಾಯಾಧಿಪತಿಗಳನ್ನು ನೇಮಿಸಿದನು. ನ್ಯಾಯಾಧಿಪತಿಗಳಿಗೆ -- ನೀವು ಮಾಡುವದನ್ನು ನೋಡಿಕೊಳ್ಳಿರಿ; ನೀವು ಮನುಷ್ಯರಿಗೋಸ್ಕರವಲ್ಲ, ನ್ಯಾಯತೀರಿಸುವ ಕಾರ್ಯದಲ್ಲಿ ನಿಮ್ಮ ಸಂಗಡ ಇರುವ ಕರ್ತನಿಗೋಸ್ಕರ ನ್ಯಾಯತೀರಿಸುತ್ತೀರಿ. ಆದಕಾರಣ ಕರ್ತನ ಭಯವು ನಿಮ್ಮ ಮೇಲೆ ಇರಲಿ. ನೀವು ಜಾಗ್ರತೆಯಾಗಿದ್ದು ನಡಿಸಿರಿ. ನಮ್ಮ ಕರ್ತನಾದ ದೇವರ ಬಳಿಯಲ್ಲಿ ಅನ್ಯಾಯವಾದರೂ ಮುಖದಾಕ್ಷಿಣ್ಯ ವಾದರೂ ಲಂಚ ತೆಗೆದುಕೊಳ್ಳುವದಾದರೂ ಇಲ್ಲ ಅಂದನು. ಇದಲ್ಲದೆ ಅವರು ಯೆರೂಸಲೇಮಿಗೆ ತಿರಿಗಿ ಬಂದ ತರುವಾಯ ಯೆಹೋಷಾಫಾಟನು ಕರ್ತನ ನ್ಯಾಯತೀರ್ವಿಕೆಗೋಸ್ಕರವೂ ವ್ಯಾಜ್ಯಗಳಿಗೋ ಸ್ಕರವೂ ಯೆರೂಸಲೇಮಿನೊಳಗೆ ಲೇವಿಯರಲ್ಲಿಯೂ ಯಾಜಕರಲ್ಲಿಯೂ ಪಿತೃಗಳ ಮುಖ್ಯಸ್ಥರಲ್ಲಿಯೂ ಕೆಲ ವರನ್ನು ನೇಮಿಸಿ ಅವರಿಗೆ-- ನೀವು ಈ ಕಾರ್ಯವನ್ನು ಕರ್ತನ ಭಯದಿಂದಲೂ ನಂಬಿಕೆಯಿಂದಲೂ ಪೂರ್ಣ ಹೃದಯದಿಂದಲೂ ಮಾಡಬೇಕು. ಇದಲ್ಲದೆ ರಕ್ತ ರಕ್ತಕ್ಕೂ ನ್ಯಾಯಕ್ಕೂ ಆಜ್ಞೆಗೂ ನಿಯಮಗಳಿಗೂ ನ್ಯಾಯ ತೀರ್ವಿಕೆಗಳಿಗೂ ತಮ್ಮ ಪಟ್ಟಣಗಳಲ್ಲಿ ವಾಸವಾಗಿರುವ ನಿಮ್ಮ ಸಹೋದರರಿಂದ ಯಾವ ಕಾರ್ಯವಾದರೂ ನಿಮ್ಮ ಮುಂದೆ ಬಂದರೆ ರೌದ್ರವು ನಿಮ್ಮ ಮೇಲೆಯೂ ನಿಮ್ಮ ಸಹೋದರರ ಮೇಲೆಯೂ ಬಾರದ ಹಾಗೆ ಕರ್ತನಿಗೆ ವಿರೋಧವಾಗಿ ಅಪರಾಧಮಾಡದಂತೆ ನೀವು ಅವರನ್ನು ಎಚ್ಚರಿಸಬೇಕು. ಇದನ್ನು ಮಾಡಿರಿ, ಆಗ ನೀವು ಅಪರಾಧವಿಲ್ಲದವರಾಗಿರುವಿರಿ.ಇಗೋ, ಪ್ರಧಾನ ಯಾಜಕನಾದ ಅಮರ್ಯನು ಕರ್ತನ ಸಮಸ್ತ ಕಾರ್ಯಗಳಲ್ಲಿಯೂ ಯೆಹೂದದ ಮನೆಯ ನಾಯಕ ನಾಗಿರುವ ಇಷ್ಮಾಯೇಲನ ಮಗನಾದ ಜೆಬದ್ಯನು ಅರಸನ ಸಮಸ್ತ ಕಾರ್ಯಗಳಲ್ಲಿಯೂ ಇದ್ದಾರೆ. ಇದ ಲ್ಲದೆ ಲೇವಿಯರೂ ನಿಮ್ಮ ಮುಂದೆ ಅಧಿಕಾರಿಗಳಾಗಿ ರುವರು. ನೀವು ಬಲಗೊಂಡು ಕೆಲಸ ನಡಿಸಿರಿ; ಕರ್ತನು ಒಳ್ಳೆಯವರ ಸಂಗಡ ಇರುವನು ಅಂದನು.
- Deuteronomy 1:13–17 ಧರ್ಮೋಪದೇಶಕಾಂಡ 1:13–17ನಿಮ್ಮ ಗೋತ್ರಗಳಲ್ಲಿ ಪ್ರಸಿದ್ಧರಾಗಿದ್ದು ಜ್ಞಾನವೂ ಬುದ್ಧಿಯೂಳ್ಳ ಮನುಷ್ಯರನ್ನು ಆರಿಸಿಕೊಳ್ಳಿರಿ; ಆಗ ನಾನು ಅವರನ್ನು ನಿಮಗೆ ಮುಖ್ಯಸ್ಥರನ್ನಾಗಿ ಮಾಡುವೆನು ಅಂದನು. ಅದಕ್ಕೆ ನೀವು ನನಗೆ ಉತ್ತರ ಕೊಟ್ಟು ಹೇಳಿದ್ದೇನಂದರೆ--ನಿನ್ನ ಆಲೋ ಚನೆಯಂತೆ ಮಾಡುವದು ನಮಗೆ ಒಳ್ಳೇದು ಅಂದಾಗ ನಾನು ನಿಮ್ಮ ಕುಟುಂಬಗಳ ಮುಖ್ಯಸ್ಥರಾಗಿದ್ದ ಜ್ಞಾನಿಗಳಾದ ಪ್ರಸಿದ್ಧ ಮನುಷ್ಯರನ್ನು ತಕ್ಕೊಂಡು ನಿಮ್ಮ ಮೇಲೆ ಮುಖ್ಯಸ್ಥರಾಗಿರುವ ಹಾಗೆ ಸಹಸ್ರಾಧಿ ಪತಿಗಳಾಗಿಯೂ ಶತಾಧಿಪತಿಗಳಾಗಿಯೂ ಪಂಚಶ ತಾಧಿಪತಿಗಳಾಗಿಯೂ ದಶಾಧಿಪತಿಗಳಾಗಿಯೂ ನಿಮ್ಮ ಗೋತ್ರಗಳಿಗೆ ಅಧಿಕಾರಿಗಳಾಗಿಯೂ ಮಾಡಿದೆನು. ಆ ಕಾಲದಲ್ಲಿ ನಿಮ್ಮ ನ್ಯಾಯಾಧಿಪತಿಗಳಿಗೆ ಕೊಟ್ಟ ಅಪ್ಪಣೆ ಏನಂದರೆ--ನಿಮ್ಮ ಸಹೋದರರು ತಮ್ಮಲ್ಲಿ ಮಾಡುವ ವ್ಯಾಜ್ಯಗಳನ್ನು ಕೇಳಿ ಒಬ್ಬೊಬ್ಬ ನಿಗೂ ಅವನ ಸಹೋದರನಿಗೂ ಅವನ ಪರವಾ ಸಿಗೂ ನೀತಿಯಾಗಿ ನ್ಯಾಯತೀರಿಸಿರಿ. ನ್ಯಾಯದಲ್ಲಿ ನೀವು ಮುಖದಾಕ್ಷಿಣ್ಯ ನೋಡಬೇಡಿರಿ; ಹಿರಿಯನನ್ನು ಹೇಗೋ, ಹಾಗೆಯೇ ಕಿರಿಯನನ್ನು ಕೇಳಬೇಕು; ಮನುಷ್ಯನ ಮುಖವನ್ನು ನೋಡಿ ಹೆದರಬೇಡಿರಿ; ಯಾಕಂದರೆ ನ್ಯಾಯತೀರ್ಪು ದೇವರದೇ; ನಿಮಗೆ ಕಠಿಣವಾದ ವ್ಯಾಜ್ಯಗಳನ್ನು ನನ್ನ ಮುಂದೆ ತನ್ನಿರಿ; ಆಗ ನಾನು ಅದನ್ನು ತೀರಿಸುವೆನು.
- Deuteronomy 16:18–19 ಧರ್ಮೋಪದೇಶಕಾಂಡ 16:18–19ಕರ್ತನು ನಿನಗೆ ನಿನ್ನ ಗೋತ್ರಗಳ ಪ್ರಕಾರ ಕೊಡುವ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ನ್ಯಾಯಾ ಧಿಪತಿಗಳನ್ನೂ ಅಧಿಕಾರಿಗಳನ್ನೂ ಇಟ್ಟುಕೊಳ್ಳಬೇಕು; ಅವರು ಜನಕ್ಕೆ ನೀತಿಯಿಂದ ನ್ಯಾಯತೀರಿಸಬೇಕು. ನೀನು ನ್ಯಾಯವನ್ನು ಓರೆಮಾಡಬಾರದು,ನೀನು ಮುಖದಾಕ್ಷಿಣ್ಯ ಮಾಡಬಾರದು; ಇಲ್ಲವೆ ಲಂಚ ತೆಗೆದುಕೊಳ್ಳಬಾರದು; ಲಂಚವು ಜ್ಞಾನಿಗಳ ಕಣ್ಣುಗಳನ್ನು ಕುರುಡುಮಾಡಿ ನೀತಿವಂತರ ಮಾತು ಗಳನ್ನು ಡೊಂಕುಮಾಡುತ್ತದೆ.
- 2 Samuel 23:3 2 ಸಮುವೇಲನು 23:3ಇಸ್ರಾಯೇಲಿನ ದೇವರು ಹೇಳಿದ್ದು; ಇಸ್ರಾಯೇಲಿನ ಬಂಡೆ ನನ್ನ ಸಂಗಡ ಮಾತನಾಡಿದ್ದು--ಮನುಷ್ಯರ ಮೇಲೆ ಆಳುವ ವನು ನೀತಿವಂತನಾಗಿರತಕ್ಕದ್ದು; ಅವನು ದೇವರ ಭಯ ದಲ್ಲಿ ಆಳುವನು.
- 1 Timothy 3:3 1 ತಿಮೊಥೆಯನಿಗೆ 3:3ಅವನು ಕುಡಿಯುವವನಾಗಿರಬಾರದು. ಹೊಡೆದಾಡುವವನಾಗಿರಬಾರದು, ದ್ರವ್ಯಾಶೆಯುಳ್ಳವ ನಾಗಿರಬಾರದು; ಆದರೆ ತಾಳ್ಮೆಯುಳ್ಳವನೂ ಕುತರ್ಕ ಮಾಡದವನೂ ದುರಾಶೆಯಿಲ್ಲದವನೂ ಆಗಿರಬೇಕು.
- Psalm 26:9–10 ಕೀರ್ತನೆಗಳು 26:9–10ಪಾಪಾತ್ಮರ ಸಂಗಡ ನನ್ನ ಪ್ರಾಣವನ್ನೂ ರಕ್ತ ಸುರಿಸುವವರ ಸಂಗಡ ನನ್ನ ಜೀವವನ್ನೂ ತೆಗೆಯಬೇಡ. ಅವರ ಕೈಗಳಲ್ಲಿ ಕೇಡು ಅದೆ; ಅವರ ಬಲಗೈ ಲಂಚಗಳಿಂದ ತುಂಬಿದೆ.
- Nehemiah 5:9 ನೆಹೆಮೀಯ 5:9ನಾನು ಅವರಿಗೆನೀವು ಮಾಡುವುದು ಒಳ್ಳೇದಲ್ಲ; ನಮ್ಮ ಶತ್ರುಗಳಾದ ಅನ್ಯರ ನಿಂದೆಯ ನಿಮಿತ್ತ ನೀವು ನಮ್ಮ ದೇವರ ಭಯದಲ್ಲಿ ನಡೆಯಬೇಕಲ್ಲಾ.
- Psalm 15:5 ಕೀರ್ತನೆಗಳು 15:5ತನ್ನ ಹಣವನ್ನು ಬಡ್ಡಿಗೆ ಕೊಡುವದಿಲ್ಲ; ನಿರಪರಾಧಿಗೆ ವಿರೋಧವಾಗಿ ಲಂಚ ತಕ್ಕೊಳ್ಳುವದಿಲ್ಲ. ಇವುಗಳನ್ನು ಮಾಡುವವನು ಎಂದೆಂದಿಗೂ ಕದಲದೆ ಇರುವನು.
- Nehemiah 7:2 ನೆಹೆಮೀಯ 7:2ಆಗ ನಾನು ನನ್ನ ಸಹೋದರನಾದ ಹನಾನಿಗೂ ಅರಮನೆಯ ಅಧಿಪತಿಯಾದ ಹನನ್ಯ ನಿಗೂ ಯೆರೂಸಲೇಮಿನ ಕಾವಲನ್ನು ಒಪ್ಪಿಸಿದೆನು. ಇವನು ಸತ್ಯವುಳ್ಳವನಾಗಿಯೂ ಅನೇಕರಿಗಿಂತ ಹೆಚ್ಚಾಗಿ ದೇವರಿಗೆ ಭಯಪಡುವವನಾಗಿಯೂ ಇದ್ದನು.
- Ezekiel 18:8 ಯೆಹೆಜ್ಕೇಲನು 18:8ಬಡ್ಡಿಗೆ ಸಾಲ ಕೊಡದೆ, ಲಾಭವನ್ನು ತೆಗೆದುಕೊಳ್ಳದೆ, ಅನ್ಯಾಯ ದಿಂದ ತನ್ನ ಕೈಯನ್ನು ಹಿಂತೆಗೆದು ಒಬ್ಬರಿಗೊಬ್ಬರು ಸತ್ಯದ ನ್ಯಾಯವನ್ನು ನಡಿಸಿ,
- Proverbs 28:2 ಜ್ಞಾನೋಕ್ತಿಗಳು 28:2ದೇಶದ ದೋಷಕ್ಕಾಗಿ ಅನೇಕ ಪ್ರಭುಗಳು ಇರುತ್ತಾರೆ; ಆದರೆ ಮನುಷ್ಯನ ವಿವೇಕದಿಂದಲೂ ತಿಳುವಳಿಕೆಯಿಂದಲೂ ಅದರ ಸ್ಥಿತಿಯು ವಿಸ್ತರಿಸುತ್ತದೆ.
Original words (Hebrew)
- provide · H2372חָזָה châzâh
- people · H5971עַם ʻam
- able · H2428חַיִל chayil
- men · H582אֱנוֹשׁ ʼĕnôwsh
- fear · H3373יָרֵא yârêʼ
- God · H430אֱלֹהִים ʼĕlôhîym
- men · H582אֱנוֹשׁ ʼĕnôwsh
- truth · H571אֶמֶת ʼemeth
- hating · H8130שָׂנֵא sânêʼ
- covetousness · H1215בֶּצַע betsaʻ
- place · H7760שׂוּם sûwm
- rulers · H8269שַׂר sar
- thousands · H505אֶלֶף ʼeleph
- rulers · H8269שַׂר sar
- hundreds · H3967מֵאָה mêʼâh
- rulers · H8269שַׂר sar
- fifties · H2572חֲמִשִּׁים chămishshîym
- rulers · H8269שַׂר sar
- tens · H6235עֶשֶׂר ʻeser