Proverbs · chapter 28 · verse 2
Proverbs 28:2 in Kannada
ದೇಶದ ದೋಷಕ್ಕಾಗಿ ಅನೇಕ ಪ್ರಭುಗಳು ಇರುತ್ತಾರೆ; ಆದರೆ ಮನುಷ್ಯನ ವಿವೇಕದಿಂದಲೂ ತಿಳುವಳಿಕೆಯಿಂದಲೂ ಅದರ ಸ್ಥಿತಿಯು ವಿಸ್ತರಿಸುತ್ತದೆ.
Deshada doshakkaagi aneka prabhugalu iruttaare; aadare manushyana vivekadindaloo tiluvalikeyindaloo adara sthitiyu vistarisuttade.
Proverbs 28:2 in English
- King James Version (KJV)
- For the transgression of a land many [are] the princes thereof: but by a man of understanding [and] knowledge the state [thereof] shall be prolonged.
- World English Bible (WEB)
- In rebellion, a land has many rulers, but order is maintained by a man of understanding and knowledge.
- American Standard Version (ASV)
- For the transgression of a land many are the princes thereof; But by men of understanding [and] knowledge the state [thereof] shall be prolonged.
- Bible in Basic English (BBE)
- Because of the sin of the land, its troubles are increased; but by a man of wisdom and knowledge they will be put out like a fire.
- Darby Translation (DBY)
- By the transgression of a land many are the princes thereof; but by a man of understanding [and] of knowledge, [its] stability is prolonged.
- Webster's Bible (WBS)
- For the transgression of a land many [are] its princes: but by a man of understanding [and] knowledge the state [thereof] shall be prolonged.
- Young's Literal Translation (YLT)
- By the transgression of a land many [are] its heads. And by an intelligent man, Who knoweth right — it is prolonged.
Read in context
- 1ಹಿಂದಟ್ಟುವವನು ಇಲ್ಲದಿದ್ದರೂ ದುಷ್ಟರು ಓಡಿಹೋಗುತ್ತಾರೆ; ಸಿಂಹದ ಹಾಗೆ ನೀತಿವಂತರು ಧೈರ್ಯದಿಂದ ಇರುತ್ತಾರೆ.
- 2ದೇಶದ ದೋಷಕ್ಕಾಗಿ ಅನೇಕ ಪ್ರಭುಗಳು ಇರುತ್ತಾರೆ; ಆದರೆ ಮನುಷ್ಯನ ವಿವೇಕದಿಂದಲೂ ತಿಳುವಳಿಕೆಯಿಂದಲೂ ಅದರ ಸ್ಥಿತಿಯು ವಿಸ್ತರಿಸುತ್ತದೆ.
- 3ಬಡವರನ್ನು ಹಿಂಸಿಸುವ ದರಿದ್ರನು ಆಹಾರವನ್ನು ಉಳಿಸದಂತೆ ಸುರಿಯುವ ಮಳೆಯಂತಿದ್ದಾನೆ.
- 4ಕಟ್ಟಳೆಯನ್ನು ತ್ಯಜಿಸುವವನು ದುಷ್ಟರನ್ನು ಹೊಗಳುತ್ತಾನೆ; ಕಟ್ಟಳೆಯನ್ನು ಕೈಕೊಳ್ಳು ವವರು ಅವರೊಂದಿಗೆ ಹೋರಾಡುತ್ತಾರೆ.
Cross references
- 1 Kings 16:8–29 1 ಅರಸುಗಳು 16:8–29ಯೆಹೂದದ ಅರಸನಾದ ಆಸನ ಇಪ್ಪತ್ತಾರನೇ ವರುಷದಲ್ಲಿ ಬಾಷನ ಮಗನಾದ ಏಲನು ಇಸ್ರಾಯೇ ಲಿನ ಮೇಲೆ ತಿರ್ಚದಲ್ಲಿ ಎರಡು ವರುಷ ಆಳಲಾರಂಭಿ ಸಿದನು. ಆದರೆ ತಿರ್ಚದಲ್ಲಿ ತನ್ನ ಮನೆಯ ಉಗ್ರಾಣಿಕ ನಾದ ಅರ್ಚನ ಮನೆಯಲ್ಲಿ ಅವನು ಕುಡಿದು ಮತ್ತನಾಗಿ ತಿರ್ಚದಲ್ಲಿರುವಾಗ ಅರ್ಧ ರಥಗಳಿಗೆ ಅಧಿಪತಿಯಾಗಿ ರುವ ಅವನ ಸೇವಕನಾದ ಜಿಮ್ರಿ ಅವನಿಗೆ ವಿರೋಧ ವಾಗಿ ಒಳಸಂಚು ಮಾಡಿದನು. ಜಿಮ್ರಿಯು ಒಳಗೆ ಹೋಗಿ ಯೆಹೂದದ ಅರಸನಾದ ಆಸನ ಇಪ್ಪತ್ತೇಳನೇ ವರುಷದಲ್ಲಿ ಅವನನ್ನು ಹೊಡೆದು ಕೊಂದುಹಾಕಿ ಅವನಿಗೆ ಬದಲಾಗಿ ಆಳಿದನು. ಅವನು ಆಳಲು ಆರಂಭಿಸಿದಾಗ ಏನಾಯಿತಂದರೆ, ಅವನು ಸಿಂಹಾ ಸನದ ಮೇಲೆ ಕುಳಿತು ಕೊಳ್ಳುತ್ತಲೇ ಬಾಷನ ಮನೆ ಯವರನ್ನೆಲ್ಲಾ ಕೊಂದುಹಾಕಿದನು. ಅವನ ಬಂಧು ಗಳಲ್ಲಿಯೂ ಸ್ನೇಹಿತರಲ್ಲಿಯೂ ಗಂಡಸರಾದ ಒಬ್ಬ ನನ್ನೂ ಅವನಿಗೆ ಉಳಿಸಲಿಲ್ಲ. ಹೀಗೆ ಭಾಷನೂ ಅವನ ಮಗನಾದ ಏಲನೂ ತಮ್ಮ ಎಲ್ಲಾ ಪಾಪಗಳಿಂದ ಇಸ್ರಾಯೇಲಿನ ದೇವರಾದ ಕರ್ತನಿಗೆ ಕೋಪವನ್ನು ಎಬ್ಬಿಸಿ ತಾವು ಮಾಡಿದ ಪಾಪಗಳಿಂದಲೂ ತಾವು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ್ದ ರಿಂದಲೂ ಕರ್ತನು ಪ್ರವಾದಿಯಾದ ಯೇಹುವಿನ ಮುಖಾಂತರ ಬಾಷನಿಗೆ ವಿರೋಧವಾಗಿ ಹೇಳಿದ ಆತನ ವಾಕ್ಯದ ಪ್ರಕಾರವೇ ಜಿಮ್ರಿಯು ಬಾಷನ ಮನೆಯ ವರನ್ನೆಲ್ಲಾ ನಾಶಮಾಡಿದನು. ಏಲನ ಇತರ ಕ್ರಿಯೆ ಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲ್ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ? ಯೆಹೂದದ ಅರಸನಾದ ಆಸನ ಇಪ್ಪತ್ತೇಳನೇವರುಷದಲ್ಲಿ ಜಿಮ್ರಿಯು ತಿರ್ಚದಲ್ಲಿ ಏಳು ದಿವಸ ಆಳಿದನು. ಆಗ ಜನರು ಫಿಲಿಷ್ಟಿಯರಿಗೆ ಸಂಬಂಧ ಪಟ್ಟ ಗಿಬ್ಬೆತೋನಿನ ಬಳಿಯಲ್ಲಿ ದಂಡಾಗಿ ಇಳಿದಿರುವ ಜಿಮ್ರಿಯು ಒಳಸಂಚು ಮಾಡಿ ಅರಸನನ್ನು ಕೊಂದು ಹಾಕಿದ್ದಾನೆಂದು ಅಲ್ಲಿ ಇಳಿದಿರುವ ದಂಡಿನವರು ಕೇಳಿ ದ್ದರಿಂದ ಇಸ್ರಾಯೇಲ್ಯರೆಲ್ಲರೂ ಅದೇ ದಿವಸದಲ್ಲಿ ದಂಡಿನೊಳಗೆ ದಂಡಿನ ಅಧಿಪತಿಯಾದ ಒಮ್ರಿಯನ್ನು ಇಸ್ರಾಯೇಲಿನ ಮೇಲೆ ಅರಸನಾಗ ಮಾಡಿದರು. ಆಗ ಒಮ್ರಿಯೂ ಅವನ ಸಂಗಡ ಇಸ್ರಾಯೇಲ್ಯ ರೆಲ್ಲರೂ ಗಿಬ್ಬೆತೋನನ್ನು ಬಿಟ್ಟು ಹೋಗಿ ತಿರ್ಚವನ್ನು ಮುತ್ತಿಗೆ ಹಾಕಿದರು. ಪಟ್ಟಣವು ಹಿಡಿಯಲ್ಪಟ್ಟದ್ದನ್ನು ಜಿಮ್ರಿಯು ನೋಡಿದಾಗ ಅವನು ಅರಮನೆಯ ಅಂತಃಪುರದೊಳಗೆ ಪ್ರವೇಶಿಸಿ ಅರಮನೆಯನ್ನು ಬೆಂಕಿ ಯಿಂದ ಸುಟ್ಟು ತಾನೂ ಸತ್ತನು. ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟತನಮಾಡಿ ತಾನು ಮಾಡಿದ ಪಾಪ ಗಳ ನಿಮಿತ್ತವಾಗಿಯೂ ಯಾರೊಬ್ಬಾಮನ ಮಾರ್ಗ ದಲ್ಲಿ ನಡೆದು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಅವನ ಪಾಪದ ನಿಮಿತ್ತವಾಗಿಯೂ ಇದು ಆಯಿತು. ಜಿಮ್ರಿಯ ಇತರ ಕಾರ್ಯಗಳೂ ಅವನು ಮಾಡಿದ ಒಳಸಂಚೂ ಇಸ್ರಾಯೇಲಿನ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ? ಆಗ ಇಸ್ರಾಯೇಲಿನ ಜನರು ಎರಡು ಭಾಗವಾಗಿ ವಿಭಾಗಿಸಲ್ಪಟ್ಟು ಅರ್ಧ ಜನರು ಗೀನತನ ಮಗನಾದ ತಿಬ್ನಿಯನ್ನು ಅರಸನನ್ನಾಗಿ ಮಾಡಲು ಅವನ ಹಿಂದೆ ಹೋದರು. ಅರ್ಧ ಜನರು ಒಮ್ರಿಯ ಹಿಂದೆ ಹೋದರು. ಆದರೆ ಒಮ್ರಿಯ ಹಿಂದೆ ಹೋದ ಜನರು ಜಯಿಸಿದ್ದರಿಂದ ತಿಬ್ನಿಯು ಸತ್ತುಹೋದನು. ಒಮ್ರಿಯು ಆಳಿದನು. ಯೆಹೂದದ ಅರಸನಾದ ಆಸನ ಮೂವ ತ್ತೊಂದನೇ ವರ್ಷದಲ್ಲಿ ಒಮ್ರಿಯು ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ ಹನ್ನೆರಡು ವರುಷ ಆಳಿದನು; ತಿರ್ಚದಲ್ಲಿ ಆರು ವರುಷ ಆಳಿದನು ಅವನು ಶೆಮೆರ್ ನಿಗೆ ಎರಡು ತಲಾಂತು ಬೆಳ್ಳಿಯನ್ನು ಕೊಟ್ಟು ಸಮಾರ್ಯ ವೆಂಬ ಬೆಟ್ಟವನ್ನು ಕೊಂಡುಕೊಂಡು ಆ ಬೆಟ್ಟದ ಮೇಲೆ ಪಟ್ಟಣವನ್ನು ಕಟ್ಟಿಸಿ ಶೆಮೆರನೆಂಬ ಬೆಟ್ಟದ ಯಜಮಾನನ ಹೆಸರಿನ ಹಾಗೆ ತಾನು ಕಟ್ಟಿಸಿದ ಪಟ್ಟಣಕ್ಕೆ ಸಮಾರ್ಯ ವೆಂದು ಹೆಸರಿಟ್ಟನು. ಆದರೆ ಒಮ್ರಿಯು ಕರ್ತನ ಸಮ್ಮುಖದಲ್ಲಿ ಕೆಟ್ಟತನ ಮಾಡಿ ತನಗೆ ಮುಂಚೆ ಇದ್ದ ಎಲ್ಲರಿಗಿಂತ ಕೆಟ್ಟವನಾಗಿ ನಡೆದನು. ಅದೇನಂದರೆ, ಅವನು ನೆಬಾಟನ ಮಗನಾದ ಯಾರೊಬ್ಬಾಮನ ಸಕಲ ಮಾರ್ಗಗಳಲ್ಲಿಯೂ ಇಸ್ರಾಯೇಲಿನ ದೇವ ರಾದ ಕರ್ತನಿಗೆ ತಮ್ಮ ವ್ಯರ್ಥವಾದವುಗಳಿಂದ ಕೋಪ ವನ್ನು ಎಬ್ಬಿಸಿದ ಹಾಗೆ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಯಾರೊಬ್ಬಾಮನ ಪಾಪದಲ್ಲಿಯೂ ನಡೆದನು. ಆದರೆ ಒಮ್ರಿಯು ಮಾಡಿದ ಇತರ ಕಾರ್ಯಗಳೂ ಅವನು ತೋರಿಸಿದ ಅವನ ಪರಾ ಕ್ರಮವೂ ಇಸ್ರಾಯೇಲಿನ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ? ಒಮ್ರಿಯು ತನ್ನ ಪಿತೃಗಳ ಸಂಗಡ ಮಲಗಿ ಸಮಾರ್ಯ ಪಟ್ಟಣ ದಲ್ಲಿ ಹೂಣಿಡಲ್ಪಟ್ಟನು; ಅವನಿಗೆ ಬದಲಾಗಿ ಅವನ ಮಗನಾದ ಅಹಾಬನು ಆಳಿದನು. ಯೆಹೂದದ ಅರಸನಾದ ಆಸನ ಮೂವ ತ್ತೆಂಟನೇ ವರುಷದಲ್ಲಿ ಒಮ್ರಿಯ ಮಗನಾದ ಅಹಾ ಬನು ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಇಪ್ಪತ್ತೆರಡು ವರುಷ ಆಳಿದನು;
- Genesis 45:5–8 ಆದಿಕಾಂಡ 45:5–8ಆದರೆ ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ಈಗ ವ್ಯಸನಪಟ್ಟು ನಿಮ್ಮ ಮೇಲೆ ನೀವೇ ಸಿಟ್ಟು ಮಾಡಿಕೊಳ್ಳಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾನೆ. ಈ ಎರಡು ವರುಷಗಳ ವರೆಗೆ ಭೂಮಿಯಲ್ಲಿ ಕ್ಷಾಮವಿತ್ತು. ಇದಲ್ಲದೆ ಇನ್ನೂ ಐದು ವರುಷಗಳ ವರೆಗೆ ಬಿತ್ತುವದೂ ಕೊಯ್ಯುವದೂ ಇರುವದಿಲ್ಲ. ಆದದ ರಿಂದ ನಿಮ್ಮ ಸಂತತಿಯನ್ನು ಭೂಮಿಯಲ್ಲಿ ಉಳಿಸುವ ದಕ್ಕೂ ದೊಡ್ಡ ಬಿಡುಗಡೆಯಿಂದ ನಿಮ್ಮ ಪ್ರಾಣಗಳನ್ನು ಉಳಿಸುವದಕ್ಕೂ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾನೆ. ಆದದರಿಂದ ಈಗ ನೀವಲ್ಲ, ದೇವರು ತಾನೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಆತನು ನನ್ನನ್ನು ಫರೋಹನಿಗೆ ತಂದೆಯಾಗಿಯೂ ಅವನ ಮನೆಗೆಲ್ಲಾ ಯಜಮಾನನನ್ನಾಗಿಯೂ ಐಗುಪ್ತ ದೇಶಕ್ಕೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದ್ದಾನೆ.
- Job 22:28–30 ಯೋಬನು 22:28–30ನೀನು ಏನಾದರೂ ನಿರ್ಣಯಿಸಿದರೆ ಅದು ನಿನಗೆ ಸ್ಥಿರವಾಗುವದು ಮತ್ತು ನಿನ್ನ ಮಾರ್ಗಗಳಲ್ಲಿ ಬೆಳಕು ಮೂಡುವದು. ಒಬ್ಬನು ತಗ್ಗುವಲ್ಲಿ ಎತ್ತುವದುಂಟು ಅನ್ನುವಿ; ದೀನ ನನ್ನು ಆತನು ರಕ್ಷಿಸುವನು.ಒಂಟಿಯಾದ ನಿರ ಪರಾಧಿಯನ್ನು ತಪ್ಪಿಸುವನು; ನಿನ್ನ ಕೈಗಳ ಶುದ್ಧತ್ವದಿಂದ ಅವನು ತಪ್ಪಿಸಿಕೊಳ್ಳುವನು. ಒಂಟಿಯಾದ ನಿರ ಪರಾಧಿಯನ್ನು ತಪ್ಪಿಸುವನು; ನಿನ್ನ ಕೈಗಳ ಶುದ್ಧತ್ವದಿಂದ ಅವನು ತಪ್ಪಿಸಿಕೊಳ್ಳುವನು.
- 1 Kings 15:28 1 ಅರಸುಗಳು 15:28ಯೆಹೂದದ ಅರಸನಾದ ಆಸನ ಮೂರ ನೇ ವರುಷದಲ್ಲಿ ಬಾಷನು ನಾದಾಬನನ್ನು ಕೊಂದು ಹಾಕಿ ಅವನಿಗೆ ಬದಲಾಗಿ ಆಳಿದನು.
- 2 Kings 15:8–31 2 ಅರಸುಗಳು 15:8–31ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೇ ವರುಷದಲ್ಲಿ ಯಾರೊಬ್ಬಾಮನ ಮಗ ನಾದ ಜೆಕರ್ಯ ಇಸ್ರಾಯೇಲಿನ ಮೇಲೆ ಸಮಾರ್ಯ ದಲ್ಲಿ ಆರು ತಿಂಗಳು ಆಳಿದನು. ಅವನು ತನ್ನ ಪಿತೃಗಳು ಮಾಡಿದ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ. ಆಗ ಯಾಬೇಷನ ಮಗನಾದ ಶಲ್ಲೂಮನು ಅವನ ಮೇಲೆ ಒಳಸಂಚು ಮಾಡಿ ಜನರ ಮುಂದೆ ಅವನನ್ನು ಹೊಡೆದು ಕೊಂದು ಹಾಕಿ ಅವನಿಗೆ ಬದಲಾಗಿ ಅರಸನಾದನು. ಇಗೋ, ಜೆಕರ್ಯನ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ನಿನ್ನ ಕುಮಾರರು ನಾಲ್ಕನೇ ಸಂತತಿಯ ವರೆಗೂ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತಿರುವರು ಎಂದು ಕರ್ತನು ಯೇಹುವಿಗೆ ಹೇಳಿದ ವಾಕ್ಯವು ಇದೇ; ಹೀಗೆಯೇ ಆಯಿತು. ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಮೂವತ್ತೊಂಭತ್ತನೇ ವರುಷದಲ್ಲಿ ಯಾಬೇಷನ ಮಗ ನಾದ ಶಲ್ಲೂಮನು ಆಳಲು ಆರಂಭಿಸಿ ಸಮಾರ್ಯ ದಲ್ಲಿ ಒಂದು ತಿಂಗಳು ಆಳಿದನು. ಯಾಕಂದರೆ ಗಾದಿಯ ಮಗನಾದ ಮೆನಹೇಮನು ತಿರ್ಚದಿಂದ ಹೊರಟು ಹೋಗಿ ಸಮಾರ್ಯಕ್ಕೆ ಬಂದು ಸಮಾರ್ಯ ದಲ್ಲಿ ಯಾಬೇಷನ ಮಗನಾದ ಶಲ್ಲೂಮನನ್ನು ಹೊಡೆದು ಕೊಂದುಹಾಕಿ ಅವನಿಗೆ ಬದಲಾಗಿ ಅರಸ ನಾದನು. ಇಗೋ, ಶಲ್ಲೂಮನ ಇತರ ಕ್ರಿಯೆಗಳೂ ಅವನು ಮಾಡಿದ ಒಳಸಂಚೂ ಇಸ್ರಾಯೇಲಿನ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಆಗ ಮೆನಹೇಮನು ತಿಪ್ಸಹನ್ನೂ ಅದರಲ್ಲಿ ಇದ್ದ ಎಲ್ಲರನ್ನೂ ತಿರ್ಚ ಮೊದಲುಗೊಂಡು ಅದರ ಮೇರೆಗಳನ್ನೂ ಹಾಳುಮಾಡಿದನು. ಅವರು ತಮ್ಮ ಬಾಗಲುಗಳನ್ನು ತನಗೆ ತೆರೆಯದೆ ಇದ್ದದರಿಂದ ಅವರನ್ನು ಹೊಡೆದನು; ಅದರಲ್ಲಿರುವ ಗರ್ಭಿಣಿಯರನ್ನೆಲ್ಲಾ ಸೀಳಿಸಿದನು. ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೊಂಭತ್ತನೇ ವರುಷದಲ್ಲಿ ಗಾದಿಯ ಮಗ ನಾದ ಮೆನಹೇಮನು ಇಸ್ರಾಯೇಲಿನ ಮೇಲೆ ಆಳ ಲಾರಂಭಿಸಿ ಸಮಾರ್ಯದಲ್ಲಿ ಹತ್ತು ವರುಷ ಆಳಿದನು. ಅವನು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು; ಅವನು ತನ್ನ ದಿವಸಗಳಲ್ಲೆಲ್ಲಾ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ. ಆದರೆ ಅಶ್ಶೂರದ ಅರಸನಾದ ಪೂಲನು ದೇಶದ ಮೇಲೆ ಬಂದನು. ಆಗ ಮೆನಹೇಮನು ರಾಜ್ಯವನ್ನು ತನ್ನ ಕೈಯಲ್ಲಿ ಧೃಢಪಡಿಸಲು ಅವನ ಕೈ ತನ್ನ ಸಂಗಡ ಇರುವ ಹಾಗೆ ಪೂಲನಿಗೆ ಸಾವಿರ ಬೆಳ್ಳಿ ತಲಾಂತು ಗಳನ್ನು ಕೊಟ್ಟನು. ಮೆನಹೇಮನು ಈ ಹಣವನ್ನು ಇಸ್ರಾಯೇಲಿನವರಿಂದ ಬರಮಾಡಿದನು. ಹೇಗಂದರೆ, ಅಶ್ಶೂರದ ಅರಸನಿಗೆ ಕೊಡಲು ಎಲ್ಲಾ ಐಶ್ವರ್ಯವಂತ ರಿಂದ ತಲಾ ಐವತ್ತು ಬೆಳ್ಳಿ ಶೆಕೇಲುಗಳನ್ನು ತೆಗೆದು ಕೊಂಡನು. ಆದದರಿಂದ ಅಶ್ಶೂರದ ಅರಸನು ದೇಶ ದಲ್ಲಿ ನಿಲ್ಲದೆ ತಿರಿಗಿ ಹೋದನು. ಮೆನಹೇಮನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಇಸ್ರಾಯೇಲಿನ ಅರಸುಗಳ ವೃತ್ತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ? ಮೆನಹೇಮನು ತನ್ನ ಪಿತೃ ಗಳ ಸಂಗಡ ನಿದ್ರಿಸಿದನು; ಅವನ ಮಗನಾದ ಪೆಕ ಹನು ಅವನಿಗೆ ಬದಲಾಗಿ ಅರಸನಾದನು; ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತನೇ ವರುಷದಲ್ಲಿ ಮೆನಹೇಮನ ಮಗನಾದ ಪೆಕಹನು ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಎರಡು ವರುಷ ಆಳಿದನು. ಅವನು ಕರ್ತನ ಸಮ್ಮುಖ ದಲ್ಲಿ ಕೆಟ್ಟದ್ದನ್ನು ಮಾಡಿದನು; ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾ ದಂಥ ಯಾರೊಬ್ಬಾಮನ ಪಾಪಗಳನ್ನು ತೊರೆಯಲಿಲ್ಲ. ಆದರೆ ಅವನ ಅಧಿಪತಿಯಾದಂಥ, ರೆಮಲ್ಯನ ಮಗನಾದ ಪೆಕಹನು ಅವನ ಮೇಲೆ ಒಳಸಂಚು ಮಾಡಿ ಅರ್ಗೋಬನ್ನೂ ಅರ್ಯೇಯನ್ನೂ ಗಿಲ್ಯಾದಿನ ಜನರಲ್ಲಿ ಐವತ್ತು ಮಂದಿಯನ್ನೂ ತನ್ನ ಸಂಗಡ ಕೂಡಿಸಿ ಕೊಂಡು ಸಮಾರ್ಯದಲ್ಲಿ ಅರಸನಿಗಿದ್ದ ಅರಮನೆ ಯೊಳಗೆ ಅವನನ್ನು ಕೊಂದುಹಾಕಿ ಅವನಿಗೆ ಬದಲಾಗಿ ಅರಸನಾದನು. ಇಗೋ, ಪೆಕಹನ ಇತರ ಕ್ರಿಯೆ ಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತೆರಡನೇ ವರುಷದಲ್ಲಿ ರೆಮಲ್ಯನ ಮಗನಾದ ಪೆಕಹನು ಇಸ್ರಾಯೇಲಿನ ಮೇಲೆ ಸಮಾರ್ಯದಲ್ಲಿ ಆಳಲು ಆರಂಭಿಸಿ ಇಪ್ಪತ್ತು ವರುಷ ಆಳಿದನು. ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ದನು; ಅವನು ಇಸ್ರಾಯೇಲ್ಯರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ. ಇಸ್ರಾಯೇಲಿನ ಅರಸನಾದ ಪೆಕಹನ ದಿವಸಗಳಲ್ಲಿ ಅಶ್ಶೂರದ ಅರಸ ನಾದ ತಿಗ್ಲತ್ಪಿಲೆಸೆರನು ಬಂದು ನೆಫ್ತಾಲಿಯ ದೇಶವಾದ ಇಯ್ಯೋನನ್ನೂ ಅಬೇಲ್ಬೆತ್ಮಾಕವನ್ನೂ ಯಾನೋಹ ವನ್ನೂ ಕೆದೆಷನ್ನೂ ಹಾಚೋರನ್ನೂ ಗಿಲ್ಯಾದನ್ನೂ ಗಲಿಲಾಯವನ್ನೂ ಹಿಡುಕೊಂಡು ಜನರನ್ನು ಸೆರೆಯಾಗಿ ಅಶ್ಯೂರಿಗೆ ಒಯ್ದನು. ಇದಲ್ಲದೆ ಉಜ್ಜೀಯನ ಮಗ ನಾದ ಯೋತಾಮನ ಇಪ್ಪತ್ತನೇ ವರುಷದಲ್ಲಿ ಏಲನ ಮಗನಾದ ಹೋಶೆಯನು ರೆಮಲ್ಯನ ಮಗನಾದ ಪೆಕಹನ ಮೇಲೆ ಒಳಸಂಚು ಮಾಡಿ ಅವನನ್ನು ಸಂಹರಿಸಿ ಅವನಿಗೆ ಬದಲಾಗಿ ಅರಸನಾದನು. ಇಗೋ, ಪೆಕಹನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
- 2 Chronicles 36:1–12 2 ಪೂರ್ವಕಾಲವೃತ್ತಾಂತ 36:1–12ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು, ತಕ್ಕೊಂಡು ಯೆರೂಸಲೇಮಿನಲ್ಲಿ ಅವನ ತಂದೆಗೆ ಬದ ಲಾಗಿ ಅವನನ್ನು ಅರಸನಾಗಿ ಮಾಡಿದರು. ಯೆಹೋ ವಾಹಾಜನು ಆಳಲು ಆರಂಭಿಸಿದಾಗ ಇಪ್ಪತ್ತಮೂರು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಐಗುಪ್ತದ ಅರಸನು ಯೆರೂಸಲೇ ಮಿನಲ್ಲಿ ಅವನನ್ನು ತೆಗೆದುಹಾಕಿ ದೇಶದಿಂದ ನೂರು ತಲಾಂತು ಬೆಳ್ಳಿಯನ್ನೂ ಒಂದು ತಲಾಂತು ಬಂಗಾರ ವನ್ನೂ ದಂಡ ತಕ್ಕೊಂಡನು. ಇದಲ್ಲದೆ ಐಗುಪ್ತದ ಅರಸನು ಅವನ ಸಹೋದರನಾದ ಎಲ್ಯಾಕೀಮ ನನ್ನು ಯೆಹೂದದ ಯೆರೂಸಲೇಮಿನ ಮೇಲೆ ಅರಸ ನಾಗಿ ಮಾಡಿ ಯೆಹೋಯಾಕೀಮನೆಂಬ ಬದಲು ಹೆಸರನ್ನು ಅವನಿಗೆ ಇಟ್ಟನು. ನೆಕೋ ಅವನ ಸಹೋ ದರನಾದ ಯೆಹೋವಾಹಾಜನನ್ನು ತಕ್ಕೊಂಡು ಐಗುಪ್ತಕ್ಕೆ ಒಯ್ದನು. ಯೆಹೋಯಾಕೀಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರುಷ ಆಳಿದನು. ಆದರೆ ತನ್ನ ದೇವ ರಾದ ಕರ್ತನ ಸಮ್ಮುಖದಲ್ಲಿ ಅವನು ಕೆಟ್ಟದ್ದನ್ನು ಮಾಡಿ ದನು. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅವನ ಮೇಲೆ ಬಂದು ಬಾಬೆಲಿಗೆ ಒಯ್ಯುವ ಹಾಗೆ ಅವನಿಗೆ ಸಂಕೋಲೆಗಳನ್ನು ಹಾಕಿಸಿದನು. ಇದಲ್ಲದೆ ನೆಬೂಕದ್ನೆಚ್ಚರನು ಕರ್ತನ ಮನೆಯ ಪಾತ್ರೆಗಳಲ್ಲಿ ಕೆಲವನ್ನು ಬಾಬೆಲಿಗೆ ತಕ್ಕೊಂಡು ಹೋಗಿ ಬಾಬೆಲಿ ನಲ್ಲಿರುವ ತನ್ನ ಮಂದಿರದಲ್ಲಿ ಇರಿಸಿದನು. ಆದರೆ ಯೆಹೋಯಾಕೀಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ ಅಸಹ್ಯಗಳೂ ಅವನಲ್ಲಿ ಕಂಡು ಕೊಂಡದ್ದೂ ಇಗೋ, ಅವು ಇಸ್ರಾಯೇಲ್ ಯೆಹೂದದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಅವನಿಗೆ ಬದಲಾಗಿ ಅವನ ಮಗನಾದ ಯೆಹೋಯಾಕೀನನು ಆಳಿದನು. ಯೆಹೋಯಾಕೀನನು ಆಳಲು ಆರಂಭಿಸಿದಾಗ ಹದಿನೆಂಟು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸ ಆಳಿದನು. ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ಒಂದು ವರುಷವು ತೀರಿದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಜನರನ್ನು ಕಳುಹಿಸಿ ಅವನನ್ನೂ ಕರ್ತನ ಆಲಯದ ಬೆಲೆಯುಳ್ಳ ಪಾತ್ರೆಗಳನ್ನೂ ಬಾಬೆ ಲಿಗೆ ತಕ್ಕೊಂಡು ತರಿಸಿಕೊಂಡು ಅವನ ಸಹೋದರ ನಾದ ಚಿದ್ಕೀಯನನ್ನು ಯೆಹೂದ ಯೆರೂಸಲೇಮಿನ ಮೇಲೆ ಅರಸನಾಗಿ ಮಾಡಿದನು. ಚಿದ್ಕೀಯನು ಆಳಲು ಆರಂಭಿಸಿದಾಗ ಅವನು ಇಪ್ಪತ್ತೊಂದು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಹನ್ನೊಂದು ವರುಷ ಆಳಿದನು. ಅವನು ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಕರ್ತನ ಬಾಯಿ ಮಾತು ಹೇಳಿದ ಪ್ರವಾದಿ ಯಾದ ಯೆರೆವಿಾಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳದೆ ಇದ್ದನು.
- 1 Kings 15:25 1 ಅರಸುಗಳು 15:25ಯೆಹೂದದ ಅರಸನಾದ ಆಸನ ಎರಡನೇ ವರುಷದಲ್ಲಿ ಯಾರೊಬ್ಬಾಮನ ಮಗನಾದ ನಾದಾಬನು ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ ಎರಡು ವರುಷ ಆಳಿದನು.
- Isaiah 3:1–7 ಯೆಶಾಯ 3:1–7ಇಗೋ, ಕರ್ತನು, ಸೈನ್ಯಗಳ ಕರ್ತನೆಂಬ ನಾನು ಜೀವನಕ್ಕೆ ಆಧಾರವಾದ ಅನ್ನಪಾನ ಗಳನ್ನೆಲ್ಲಾ ಯೆರೂಸಲೇಮಿನಿಂದಲೂ ಯೆಹೂದ ದಿಂದಲೂ ತೆಗೆದುಬಿಡುವೆನು. ಇದಲ್ಲದೆ ಶೂರ, ಯುದ್ಧಭಟ, ನ್ಯಾಯಾಧಿಪತಿ, ಪ್ರವಾದಿ, ಪರಿಜ್ಞಾನಿ, ಪ್ರಾಚೀನ ಮನುಷ್ಯನು, ಪಂಚಶತಾಧಿಪತಿ, ಘನ ವುಳ್ಳವನು, ಆಲೋಚನಾಪರನು, ತಾಂತ್ರಿಕನು ಮತ್ತು ವಾಕ್ಚಾತುರ್ಯವುಳ್ಳವನು ಆಗಿರುವ ಇವರನ್ನೆಲ್ಲಾ ತೆಗೆ ದುಬಿಡುವೆನು. ಮಕ್ಕಳನ್ನು ಅವರ ಪ್ರಭುಗಳನ್ನಾ ಗಿಯೂ ಎಳೇ ಕೂಸುಗಳು ಅವರ ಮೇಲೆ ಆಳು ವಂತೆಯೂ ಕೊಡುವೆನು. ಪ್ರತಿಯೊಬ್ಬನು ಇನ್ನೊಬ್ಬ ನಿಂದಲೂ ಪ್ರತಿಯೊಬ್ಬನು ನೆರೆಯವನಿಂದಲೂ ಜನರು ಹಿಂಸಿಸಲ್ಪಡುವರು: ಹುಡುಗನು ವೃದ್ಧನ ವಿರೋಧವಾಗಿಯೂ ನೀಚನು ಘನವಂತನ ವಿರೋಧ ವಾಗಿಯೂ ಸೊಕ್ಕಿನಿಂದ ವರ್ತಿಸುವರು. ಒಬ್ಬನು ತನ್ನ ಸಹೋದರನನ್ನು ತಂದೆಯ ಮನೆಯಲ್ಲಿ ಹಿಡಿ ದು -- ನಿನಗೆ ವಸ್ತ್ರವಿದೆ, ನಮ್ಮನ್ನು ಆಳುವವನಾಗು ಮತ್ತು ಈ ಹಾಳಾದ ಪಟ್ಟಣವು ನಿನ್ನ ಕೈಕೆಳಗಿರಲಿ ಎಂದು ಹೇಳಲು ಆ ದಿನದಲ್ಲಿ ಅವನು ಆಣೆಯಿಟ್ಟು --ನಾನು ಉಪಶಮನ ಮಾಡುವವನಾಗುವದಿಲ್ಲ, ನನ್ನ ಮನೆಯಲ್ಲಿ ಅನ್ನವಾಗಲಿ ವಸ್ತ್ರವಾಗಲಿ ಇಲ್ಲ; ನನ್ನನ್ನು ಪ್ರಜಾಧಿಪತಿಯನ್ನಾಗಿ ಮಾಡಬೇಡಿರಿ ಅಂದನು.
- Daniel 4:27 ದಾನಿಯೇಲನು 4:27ಆದದರಿಂದ ಓ ಅರಸನೇ, ನನ್ನ ಆಲೋಚನೆಯು ನಿನಗೆ ಸಮ್ಮತಿ ಯಾಗಿ ನಿನ್ನ ಪಾಪಗಳನ್ನು ನೀತಿಯಿಂದ ಅಳಿಸಿ ನಿನ್ನ ಅನ್ಯಾಯಗಳನ್ನು ಬಡವರಿಗೆ ದಯೆ ತೋರಿಸುವದ ರಿಂದ ಬಿಟ್ಟುಬಿಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯು ಹೆಚ್ಚಾಗಬಹುದು.
- 2 Chronicles 32:20–26 2 ಪೂರ್ವಕಾಲವೃತ್ತಾಂತ 32:20–26ಇದರ ನಿಮಿತ್ತ ಅರಸನಾದ ಹಿಜ್ಕೀಯನೂ ಆಮೋ ಚನ ಮಗನಾಗಿರುವ ಪ್ರವಾದಿಯಾದ ಯೆಶಾಯನೂ ಪ್ರಾರ್ಥನೆಮಾಡಿ ಪರಲೋಕಕ್ಕೆ ಕೂಗಿದರು. ಆಗ ಕರ್ತನು ತನ್ನ ದೂತನನ್ನು ಕಳುಹಿಸಿದನು; ಅವನು ಅಶ್ಶೂರಿನ ಅರಸನ ದಂಡಿನಲ್ಲಿರುವ ಸಮಸ್ತ ಪರಾ ಕ್ರಮಶಾಲಿಗಳನ್ನೂ ನಾಯಕರನ್ನೂ ಅಧಿಪತಿಗಳನ್ನೂ ನಿರ್ಮೂಲಮಾಡಿದನು. ಹೀಗೆ ಇವನು ಲಜ್ಜಾ ಮುಖದಿಂದ ತನ್ನ ದೇಶಕ್ಕೆ ತಿರುಗಿದನು. ಅವನು ತನ್ನ ದೇವರ ಮನೆಯಲ್ಲಿ ಪ್ರವೇಶಿಸಿದಾಗ ಅವನ ಹೊಟ್ಟೆಯಲ್ಲಿ ಹುಟ್ಟಿದವರು ಅವನನ್ನು ಕತ್ತಿಯಿಂದ ಕೊಂದುಹಾಕಿದರು. ಹೀಗೆಯೇ ಕರ್ತನು ಹಿಜ್ಕೀಯ ನನ್ನೂ ಯೆರೂಸಲೇಮಿನ ನಿವಾಸಿಗಳನ್ನೂ ಅಶ್ಶೂರಿನ ಅರಸನಾದ ಸನ್ಹೇರೀಬನ ಕೈಯೊಳಗಿಂದಲೂ ಸಮಸ್ತರ ಕೈಯೊಳಗಿಂದಲೂ ರಕ್ಷಿಸಿ ಸಮಸ್ತ ಕಡೆಯಿಂದ ಅವ ರನ್ನು ನಡಿಸಿದನು. ಅನೇಕರು ಯೆರೂಸಲೇಮಿ ನಲ್ಲಿರುವ ಕರ್ತನಿಗೆ ಅರ್ಪಣೆಗಳನ್ನೂ ಯೆಹೂದದ ಅರಸನಾದ ಹಿಜ್ಕೀಯನಿಗೆ ವಸ್ತುಗಳನ್ನೂ ತಂದರು. ಅಂದಿನಿಂದ ಅವನು ಸಮಸ್ತ ಜನಾಂಗಗಳ ಸಮ್ಮುಖ ದಲ್ಲಿ ಉನ್ನತಕ್ಕೇರಿಸಲ್ಪಟ್ಟನು. ಆ ದಿನಗಳಲ್ಲಿ ಹಿಜ್ಕೀಯನು ಸಾಯುವ ರೋಗ ದಲ್ಲಿದ್ದದ್ದರಿಂದ ಅವನು ಕರ್ತನಿಗೆ ಪ್ರಾರ್ಥನೆ ಮಾಡಿ ದನು. ಆಗ ಆತನು ಅವನ ಸಂಗಡ ಮಾತನಾಡಿ ಅವನಿಗೆ ಗುರುತನ್ನು ಕೊಟ್ಟನು. ಆದರೆ ಹಿಜ್ಕೀ ಯನು ತನಗೆ ಆದ ಉಪಕಾರಕ್ಕೆ ತಕ್ಕಂತೆ ನಡೆಯದೆ ಇದ್ದನು; ಅವನ ಹೃದಯದಲ್ಲಿ ಅಹಂಕಾರ ತುಂಬಿತ್ತು; ಆದದರಿಂದ ಅವನ ಮೇಲೆಯೂ ಯೆಹೂದ ಯೆರೂ ಸಲೇಮಿನ ಮೇಲೆಯೂ ರೌದ್ರ ಉಂಟಾಯಿತು. ಆದಾಗ್ಯೂ ಹಿಜ್ಕೀಯನೂ ಯೆರೂಸಲೇಮಿನ ನಿವಾಸಿಗಳೂ ತಮ್ಮ ಹೃದಯದ ಗರ್ವದ ವಿಷಯ ತಮ್ಮನ್ನು ತಾವು ತಗ್ಗಿಸಿಕೊಂಡದ್ದರಿಂದ ಹಿಜ್ಕೀಯನ ದಿವಸಗಳಲ್ಲಿ ಕರ್ತನ ರೌದ್ರವು ಅವರ ಮೇಲೆ ಬರಲಿಲ್ಲ.
- Hosea 13:11 ಹೋಶೇಯ 13:11ನನ್ನ ಕೋಪದಲ್ಲಿ ನಿನಗೆ ಅರಸನನ್ನು ಕೊಟ್ಟೆನು, ನನ್ನ ರೌದ್ರದಲ್ಲಿ ಅವನನ್ನು ತೆಗೆದುಹಾಕಿದೆನು.
- Isaiah 58:12 ಯೆಶಾಯ 58:12ಆಗ ನಿನ್ನವರು ಪುರಾತನ ಕಾಲದ ಹಾಳಾದ ಸ್ಥಳಗಳನ್ನು ಕಟ್ಟುವರು, ತಲತಲಾ ಂತರಕ್ಕಿದ್ದ ಅಸ್ತಿವಾರಗಳನ್ನು ನೀನು ಎಬ್ಬಿಸುವಿ; ಸೀಳಿ ದ್ದನ್ನು ಸರಿ ಮಾಡುವವನೆಂದೂ ನಿವಾಸಿಗಳಿಗಾಗಿ ಹಾದಿಗಳನ್ನು ತಿರಿಗಿ ಸರಿಮಾಡುವವನೆಂದೂ ನೀನು ಕರೆಯಲ್ಪಡುವಿ.