Exodus · chapter 20 · verse 4
Exodus 20:4 in Kannada
ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು.
Ninage aakaashadallaagali bhoomiyallaagali bhoomiya kelagiruva neerugalallaagali yaavadara vigrahavannaagali roopavannaagali neenu maadikolla baaradu.
Exodus 20:4 in English
- King James Version (KJV)
- Thou shalt not make unto thee any graven image, or any likeness [of any thing] that [is] in heaven above, or that [is] in the earth beneath, or that [is] in the water under the earth:
- World English Bible (WEB)
- “You shall not make for yourselves an idol, nor any image of anything that is in the heavens above, or that is on the earth beneath, or that is in the water under the earth:
- American Standard Version (ASV)
- Thou shalt not make unto thee a graven image, nor any likeness [of any thing] that is in heaven above, or that is in the earth beneath, or that is in the water under the earth:
- Bible in Basic English (BBE)
- You are not to make an image or picture of anything in heaven or on the earth or in the waters under the earth:
- Darby Translation (DBY)
- Thou shalt not make thyself any graven image, or any form of what is in the heavens above, or what is in the earth beneath, or what is in the waters under the earth:
- Webster's Bible (WBS)
- Thou shalt not make to thee any graven image, or any likeness [of any thing] that [is] in heaven above, or that [is] in the earth beneath, or that [is] in the water under the earth:
- Young's Literal Translation (YLT)
- 'Thou dost not make to thyself a graven image, or any likeness which [is] in the heavens above, or which [is] in the earth beneath, or which [is] in the waters under the earth.
Read in context
- 2ನಿನ್ನನ್ನು ಐಗುಪ್ತದೇಶದಿಂದಲೂ ದಾಸತ್ವದ ಮನೆಯೊಳ ಗಿಂದಲೂ ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ.
- 3ನನ್ನ ಮುಂದೆ ನಿನಗೆ ಬೇರೆ ದೇವರುಗಳು ಇರಬಾರದು.
- 4ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು.
- 5ನೀನು ಅವುಗಳಿಗೆ ಅಡ್ಡಬೀಳಬಾರದು, ಸೇವಿಸಲೂ ಬಾರದು. ನಿನ್ನ ದೇವರಾದ ಕರ್ತನಾಗಿರುವ ನಾನು ರೋಷವುಳ್ಳ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆಗಳ ಅಪರಾಧವನ್ನು ಮಕ್ಕಳ ಮೇಲೆ ಯೂ ಮೂರನೆಯ ನಾಲ್ಕನೆಯ ತಲೆಗಳ ವರೆಗೂ ಬರಮಾಡುವೆನು.
- 6ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆ ಗಳನ್ನು ಕೈಕೊಳ್ಳುವವರಿಗೆ ಸಾವಿರ ತಲೆಗಳ ವರೆಗೆ ದಯೆತೋರಿಸುವೆನು.
Cross references
- Deuteronomy 5:8 ಧರ್ಮೋಪದೇಶಕಾಂಡ 5:8ಮೇಲಿನ ಆಕಾಶ ದಲ್ಲಾಗಲಿ ಕೆಳಗಿನ ಭೂಮಿಯಲ್ಲಾಗಲಿ ಭೂಮಿಯ ಕೆಳಗಿನ ನೀರುಗಳಲ್ಲಾಗಲಿ ಇರುವಂಥ ಯಾವ ದೊಂದರ ರೂಪದ ವಿಗ್ರಹವನ್ನು ನಿನಗೆ ಮಾಡಿ ಕೊಳ್ಳಬಾರದು,
- Leviticus 26:1 ಯಾಜಕಕಾಂಡ 26:1ನೀವು ನಿಮಗಾಗಿ ವಿಗ್ರಹಗಳನ್ನಾಗಲಿ ಕೆತ್ತಿದ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ; ನಿಲ್ಲಿಸುವ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ. ಕಲ್ಲಿನ ವಿಗ್ರಹಗಳನ್ನಾಗಲಿ ನಿಮ್ಮ ದೇಶದಲ್ಲಿಟ್ಟು ಕೊಂಡು ಅವುಗಳಿಗೆ ಅಡ್ಡ ಬೀಳಬೇಡಿರಿ. ನಿಮ್ಮ ದೇವರಾಗಿರುವ ಕರ್ತನು ನಾನೇ.
- Deuteronomy 4:15–19 ಧರ್ಮೋಪದೇಶಕಾಂಡ 4:15–19ಆದದರಿಂದ ನಿಮ್ಮ ವಿಷಯವಾಗಿ ಬಹಳ ಜಾಗ್ರತೆಯಾಗಿರ್ರಿ; ಕರ್ತನು ಹೋರೇಬಿನಲ್ಲಿ ಬೆಂಕಿ ಯೊಳಗಿಂದ ನಿಮ್ಮ ಸಂಗಡ ಮಾತನಾಡಿದ ದಿನದಲ್ಲಿ ನೀವು ಯಾವ ತರವಾದ ಆಕಾರವನ್ನೂ ನೋಡಲಿ ಲ್ಲವಲ್ಲಾ. ನಿಮ್ಮನ್ನು ನೀವೇ ಕೆಡಿಸಿಕೊಳ್ಳದ ಹಾಗೆ ನಿಮಗಾಗಿ ಕೆತ್ತಿದ ವಿಗ್ರಹವನ್ನು ಅಂದರೆ ಗಂಡು ಇಲ್ಲವೆ ಹೆಣ್ಣಿನ ಆಕಾರದಲ್ಲಿ ಯಾವ ವಿಧವಾದ ಪ್ರತಿಮೆ ಯನ್ನೂ ಭೂಮಿಯ ಮೇಲಿರುವ ಯಾವದೊಂದು ಮೃಗದ ಹೋಲಿಕೆಯನ್ನೂ ಆಕಾಶದಲ್ಲಿ ಹಾರುವಂಥ ರೆಕ್ಕೆಯುಳ್ಳ ಯಾವದೊಂದು ಪಕ್ಷಿಯ ಹೋಲಿಕೆ ಯನ್ನೂ ಭೂಮಿಯ ಮೇಲೆ ಹರಿದಾಡುವಂಥ ಯಾವ ದೊಂದರ ಹೋಲಿಕೆಯನ್ನೂ ಭೂಮಿಯ ಕೆಳಗಿನ ನೀರುಗಳಲ್ಲಿರುವ ಯಾವದೊಂದು ವಿಾನಿನ ಹೋಲಿಕೆ ಯನ್ನೂ ಮಾಡದ ಹಾಗೆಯೂ ನೀನು ನಿನ್ನ ಕಣ್ಣು ಗಳನ್ನು ಆಕಾಶದ ಕಡೆಗೆ ಎತ್ತಿ ಸೂರ್ಯ, ಚಂದ್ರ, ನಕ್ಷತ್ರಗಳ ಆಕಾಶ ಸೈನ್ಯವನ್ನೆಲ್ಲಾ ನೋಡಲಾಗಿ ನಿನ್ನ ದೇವರಾದ ಕರ್ತನು ಆಕಾಶದ ಕೆಳಗಿರುವ ಎಲ್ಲಾ ಜನಾಂಗಗಳಿಗೆ ಹಂಚಿಕೊಟ್ಟ ಇವುಗಳಿಗೆ ಅಡ್ಡಬಿದ್ದು ಇವುಗಳನ್ನು ಸೇವಿಸುವದಕ್ಕೆ ನಡಿಸಲ್ಪಡದಂತೆಯೂ ನೋಡಿಕೊಳ್ಳಿರಿ.
- Psalm 97:7 ಕೀರ್ತನೆಗಳು 97:7ಕೆತ್ತಿದ ವಿಗ್ರಹಗಳನ್ನು ಸೇವಿಸಿ, ವಿಗ್ರಹಗಳಲ್ಲಿ ಹೆಮ್ಮೆಪಡುವ ವರೆಲ್ಲರು ನಾಚಿಕೆಪಡಲಿ; ಎಲ್ಲಾ ದೇವರುಗಳೇ, ಆತನನ್ನು ಆರಾಧಿಸಿರಿ.
- Leviticus 19:4 ಯಾಜಕಕಾಂಡ 19:4ನೀವು ವಿಗ್ರಹ ಗಳ ಕಡೆಗೆ ತಿರುಗಿಕೊಳ್ಳಬೇಡಿರಿ ನಿಮಗೋಸ್ಕರವಾಗಿ ಎರಕದ ದೇವರುಗಳನ್ನು ಮಾಡಿಕೊಳ್ಳಬೇಡಿರಿ; ನಿಮ್ಮ ದೇವರಾಗಿರುವ ಕರ್ತನು ನಾನೇ.
- Deuteronomy 27:15 ಧರ್ಮೋಪದೇಶಕಾಂಡ 27:15ಕರ್ತನಿಗೆ ಅಸಹ್ಯ ವಾಗಿರುವ ವಿಗ್ರಹವನ್ನಾಗಲಿ ಎರಕ ಹೊಯಿದದ್ದ ನ್ನಾಗಲಿ ಮಾಡಿಕೊಂಡು ಶಿಲ್ಪಿಯ ಕೈಯಿಂದ ಮಾಡಿಸಿಗುಪ್ತವಾಗಿ ನಿಲ್ಲಿಸುವವನಿಗೆ ಶಾಪ. ಜನವೆಲ್ಲಾ ಉತ್ತರ ಕೊಟ್ಟು ಆಮೆನ್ ಎಂದು ಹೇಳಲಿ.
- Revelation 16:2 ಪ್ರಕಟನೆ 16:2ಆಗ ಮೊದಲನೆಯವನು ಹೊರಟು ತನ್ನ ಪಾತ್ರೆ ಯಲ್ಲಿದ್ದದ್ದನ್ನು ಭೂಮಿಯ ಮೇಲೆ ಹೊಯಿದನು; ಆಗ ಮೃಗದ ಗುರುತನ್ನು ಹೊಂದಿ ಅದರ ವಿಗ್ರಹಕ್ಕೆ ಆರಾಧನೆ ಮಾಡಿದ ಮನುಷ್ಯರ ಮೇಲೆ ಕೊಳೆಯುವ ಘೋರವಾದ ಹುಣ್ಣು ಎದ್ದಿತು.
- Acts 17:29 ಅಪೊಸ್ತಲರ ಕೃತ್ಯಗಳು 17:29ನಾವು ದೇವರ ಸಂತಾನದವ ರಾಗಿದ್ದ ಮೇಲೆ ದೈವತ್ವವು ಮನುಷ್ಯನ ಶಿಲ್ಪ ವಿದ್ಯೆ ಯಿಂದಲೂ ಕಲ್ಪನೆಯಿಂದಲೂ ಕೆತ್ತಿರುವ ಚಿನ್ನ ಬೆಳ್ಳಿ ಕಲ್ಲಿಗೆ ಸಮಾನವೆಂದು ನಾವು ಭಾವಿಸಲೇಬಾರದು.
- Psalm 115:4–8 ಕೀರ್ತನೆಗಳು 115:4–8ಅವರ ವಿಗ್ರಹಗಳು ಬೆಳ್ಳಿಯೂ ಬಂಗಾರವೂ ಮನುಷ್ಯನ ಕೈಕೆಲಸವೂ ಆಗಿವೆ. ಅವುಗಳಿಗೆ ಬಾಯಿ ಉಂಟು; ಮಾತಾಡುವದಿಲ್ಲ; ಕಣ್ಣುಗಳುಂಟು; ನೋಡು ವದಿಲ್ಲ. ಕಿವಿಗಳುಂಟು; ಕೇಳುವದಿಲ್ಲ. ಮೂಗು ಉಂಟು; ಮೂಸುವದಿಲ್ಲ. ಕೈಗಳುಂಟು; ಮುಟ್ಟುವ ದಿಲ್ಲ. ಕಾಲುಗಳುಂಟು; ನಡೆಯುವದಿಲ್ಲ. ತಮ್ಮ ಗಂಟಲಿನಿಂದ ಮಾತನಾಡುವದಿಲ್ಲ, ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವ ರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
- Jeremiah 10:14–16 ಯೆರೆಮೀಯ 10:14–16ಪ್ರತಿ ಮನುಷ್ಯನು ತನ್ನ ಜ್ಞಾನದಲ್ಲಿ ಪಶುವಾಗಿದ್ದಾನೆ; ಎರಕ ಹೊಯ್ಯುವವರೆಲ್ಲಾ ಕೆತ್ತಿದ ವಿಗ್ರಹಕ್ಕೋಸ್ಕರ ನಾಚಿಕೆಪಡುತ್ತಾರೆ; ಅವರ ಎರಕ ವಿಗ್ರಹವು ಸುಳ್ಳಾದದ್ದು; ಅವುಗಳಲ್ಲಿ ಉಸಿರು ಇಲ್ಲ. ಅವು ವ್ಯರ್ಥವೇ, ತಪ್ಪಾದ ಕೆಲಸವೇ; ಅವು ವಿಚಾ ರಿಸಲ್ಪಡುವ ಕಾಲದಲ್ಲಿ ನಾಶವಾಗುವವು. ಯಾಕೋ ಬ್ಯರ ಪಾಲು ಇವುಗಳ ಹಾಗಲ್ಲ; ಆತನು ಸಮಸ್ತ ವನ್ನು ರೂಪಿಸಿದಾತನೇ; ಇಸ್ರಾಯೇಲ್ ಆತನ ಸ್ವಾಸ್ತ್ಯದ ಕೋಲು; ಸೈನ್ಯಗಳ ಕರ್ತನು ಎಂಬದು ಆತನ ಹೆಸರಾಗಿದೆ.
- Isaiah 45:16 ಯೆಶಾಯ 45:16ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.
- Romans 1:23 ರೋಮಾಪುರದವರಿಗೆ 1:23ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಕ್ಷಿ, ಪಶುಗಳ ಮತ್ತು ಹರಿದಾಡುವವುಗಳ ಪ್ರತಿಮೆಗೆ ಮಾರ್ಪಡಿಸಿದರು.