Exodus · chapter 20 · verse 2
Exodus 20:2 in Kannada
ನಿನ್ನನ್ನು ಐಗುಪ್ತದೇಶದಿಂದಲೂ ದಾಸತ್ವದ ಮನೆಯೊಳ ಗಿಂದಲೂ ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ.
Ninnannu aiguptadeshadindaloo daasatvada maneyola gindaloo horage tanda ninna devaraada kartanu naane.
Exodus 20:2 in English
- King James Version (KJV)
- I [am] the LORD thy God, which have brought thee out of the land of Egypt, out of the house of bondage.
- World English Bible (WEB)
- “I am the LORD your God, who brought you out of the land of Egypt, out of the house of bondage.
- American Standard Version (ASV)
- I am Jehovah thy God, who brought thee out of the land of Egypt, out of the house of bondage.
- Bible in Basic English (BBE)
- I am the Lord your God who took you out of the land of Egypt, out of the prison-house.
- Darby Translation (DBY)
- I am Jehovah thy God, who have brought thee out of the land of Egypt, out of the house of bondage.
- Webster's Bible (WBS)
- I [am] the LORD thy God, who have brought thee out of the land of Egypt, out of the house of bondage.
- Young's Literal Translation (YLT)
- I [am] Jehovah thy God, who hath brought thee out of the land of Egypt, out of a house of servants.
Read in context
- 1ದೇವರು ಈ ಎಲ್ಲಾ ವಾಕ್ಯಗಳನ್ನು ಹೇಳಿದನು. ಅವು ಯಾವವಂದರೆ--
- 2ನಿನ್ನನ್ನು ಐಗುಪ್ತದೇಶದಿಂದಲೂ ದಾಸತ್ವದ ಮನೆಯೊಳ ಗಿಂದಲೂ ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ.
- 3ನನ್ನ ಮುಂದೆ ನಿನಗೆ ಬೇರೆ ದೇವರುಗಳು ಇರಬಾರದು.
- 4ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು.
Cross references
- Deuteronomy 5:6 ಧರ್ಮೋಪದೇಶಕಾಂಡ 5:6ನಿನ್ನನ್ನು ಐಗುಪ್ತದೇಶದೊಳಗಿಂದ ಅಂದರೆ ದಾಸ ತ್ವದ ಮನೆಯೊಳಗಿಂದ ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನು ನಾನೇ.
- Hosea 13:4 ಹೋಶೇಯ 13:4ಆದಾಗ್ಯೂ ನಾನು ಐಗುಪ್ತದಿಂದ ನಿನ್ನ ದೇವರಾಗಿರುವ ಕರ್ತನಾಗಿದ್ದೇನೆ, ನೀನು ನನ್ನ ಹೊರತು ಯಾವ ದೇವರನ್ನೂ ತಿಳಿದುಕೊಳ್ಳಬಾರದು; ಯಾಕಂದರೆ ನನ್ನ ಹೊರತು ನಿನಗೆ ಬೇರೆ ರಕ್ಷಕನು ಇಲ್ಲ.
- Leviticus 26:13 ಯಾಜಕಕಾಂಡ 26:13ಐಗುಪ್ತ ದೇಶದವರಿಗೆ ನೀವು ದಾಸರಾಗಿರದ ಹಾಗೆ ಅವರ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿ ನಿಮ್ಮ ನೊಗದ ಕಟ್ಟುಗಳನ್ನು ಮುರಿದು ನಿಮ್ಮನ್ನು ನೆಟ್ಟಗೆ ನಡೆಯಮಾಡಿದ ನಿಮ್ಮ ದೇವರಾದ ಕರ್ತನು ನಾನೇ.
- Psalm 81:10 ಕೀರ್ತನೆಗಳು 81:10ಐಗುಪ್ತದೇಶದಿಂದ ನಿನ್ನನ್ನು ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ; ನಿನ್ನ ಬಾಯನ್ನು ಅಗಲವಾಗಿ ತೆರೆ; ಆಗ ನಾನು ಅದನ್ನು ತುಂಬಿಸುವೆನು.
- Exodus 13:3 ವಿಮೋಚನಕಾಂಡ 13:3ಆಗ ಮೋಶೆಯು ಜನರಿಗೆ--ನೀವು ಐಗುಪ್ತದ ದಾಸತ್ವದ ಮನೆಯಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಯಾಕಂದರೆ ಕರ್ತನು ತನ್ನ ಬಲವಾದ ಕೈಯಿಂದ ನಿಮ್ಮನ್ನು ಅಲ್ಲಿಂದ ಹೊರಗೆ ಬರಮಾಡಿದ್ದಾನೆ. ಹೀಗಿರುವದರಿಂದ ಅಂದು ನೀವು ಹುಳಿ ರೊಟ್ಟಿಯನ್ನು ತಿನ್ನಬಾರದು.
- Leviticus 19:36 ಯಾಜಕಕಾಂಡ 19:36ನ್ಯಾಯದತ್ರಾಸು, ನ್ಯಾಯದ ಕಲ್ಲುಗಳು, ನ್ಯಾಯದಎಫವು ಮತ್ತು ನ್ಯಾಯದಹೀನ್ ನಿಮಗಿರಬೇಕು. ಐಗುಪ್ತದೇಶದೊಳಗಿಂದ ನಿಮ್ಮನ್ನು ಹೊರಗೆ ತಂದ ನಿಮ್ಮ ದೇವರಾದ ಕರ್ತನು ನಾನೇ.ಆದದರಿಂದ ನನ್ನ ಎಲ್ಲಾ ನಿಯಮಗಳನ್ನೂ ನ್ಯಾಯ ಗಳನ್ನೂ ಕೈಕೊಂಡು ಅವುಗಳನ್ನು ಮಾಡಬೇಕು; ನಾನೇ ಕರ್ತನು ಎಂದು ಹೇಳಿದನು.
- Genesis 17:7–8 ಆದಿಕಾಂಡ 17:7–8ಇದಲ್ಲದೆ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ದೇವರಾಗಿರುವದಕ್ಕೆ ನನಗೂ ನಿನಗೂ ನಿನ್ನ ತರುವಾಯ ಬರುವ ತಲ ತಲಾಂತರಗಳಲ್ಲಿ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುತ್ತೇನೆ. ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ಶಾಶ್ವತವಾದ ಸ್ವಾಸ್ಥ್ಯವಾಗಿ ಕೊಡುತ್ತೇನೆ. ನಾನು ಅವರ ದೇವರಾಗಿರುವೆನು ಅಂದನು.
- Deuteronomy 26:6–8 ಧರ್ಮೋಪದೇಶಕಾಂಡ 26:6–8ಆದರೆ ಐಗುಪ್ತ್ಯರು ನಮಗೆ ಕೇಡನ್ನುಮಾಡಿ ನಮ್ಮನ್ನು ಕುಂದಿಸಿ ಕಠಿಣವಾದ ಸೇವೆಯನ್ನು ನಮ್ಮ ಮೇಲೆ ಹೊರಿಸಿದರು. ಆಗ ನಾವು ನಮ್ಮ ಪಿತೃಗಳ ದೇವರಾದ ಕರ್ತನಿಗೆ ಮೊರೆ ಯಿಡಲಾಗಿ ಆತನು ನಮ್ಮ ಸ್ವರವನ್ನು ಕೇಳಿ ನಮ್ಮ ಸಂಕಟವನ್ನೂ ಕಷ್ಟವನ್ನೂ ಬಾಧೆಯನ್ನೂ ನೋಡಿದನು. ಆದದರಿಂದ ಕರ್ತನು ನಮ್ಮನ್ನು ತನ್ನ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾ ಭಯದಿಂದಲೂ ಗುರುತುಗಳಿಂದಲೂ ಅದ್ಭುತ ಗಳಿಂದಲೂ ಐಗುಪ್ತದಿಂದ ಹೊರಗೆ ಬರಮಾಡಿ
- Deuteronomy 7:8 ಧರ್ಮೋಪದೇಶಕಾಂಡ 7:8ಕರ್ತನು ನಿಮ್ಮನ್ನು ಪ್ರೀತಿಸಿದ್ದರಿಂದಲೂ ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ಕಾಪಾಡುವದರಿಂದಲೂ ಕರ್ತನು ನಿಮ್ಮನ್ನು ಬಲವಾದ ಕೈಯಿಂದ ಹೊರಗೆ ಬರಮಾಡಿ ನಿನ್ನನ್ನು ದಾಸತ್ವದ ಮನೆಯಿಂದಲೂ ಐಗುಪ್ತದ ಅರಸನಾದ ಫರೋಹನ ಕೈಯಿಂದಲೂ ವಿಮೋಚಿಸಿದನು.
- Deuteronomy 5:15 ಧರ್ಮೋಪದೇಶಕಾಂಡ 5:15ನೀನು ಐಗುಪ್ತ ದೇಶದಲ್ಲಿ ದಾಸನಾಗಿದ್ದಿ ಎಂದೂ ನಿನ್ನ ದೇವರಾದ ಕರ್ತನು ನಿನ್ನನ್ನು ಅಲ್ಲಿಂದ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಹೊರಗೆ ಬರಮಾಡಿದ ನೆಂದೂ ಜ್ಞಾಪಕಮಾಡಿಕೊಳ್ಳಬೇಕು. ಆದಕಾರಣ ನಿನ್ನ ದೇವರಾದ ಕರ್ತನು ನಿನಗೆ ಸಬ್ಬತ್ ದಿವಸವನ್ನು ಆಚರಿಸಬೇಕೆಂದು ಆಜ್ಞಾಪಿಸಿದ್ದಾನೆ.
- Leviticus 23:43 ಯಾಜಕಕಾಂಡ 23:43ನಾನು ಇಸ್ರಾಯೇಲ್ ಮಕ್ಕಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡಿದಾಗ ಅವರು ಗುಡಾರಗಳಲ್ಲಿ ವಾಸಿಸುವಂತೆ ಮಾಡಿದೆನೆಂದು ನಿಮ್ಮ ಸಂತತಿಯವರು ತಿಳಿದುಕೊಳ್ಳುವರು; ನಿಮ್ಮ ದೇವರಾ ಗಿರುವ ಕರ್ತನು ನಾನೇ ಎಂಬದು.ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಕರ್ತನ ಹಬ್ಬಗಳನ್ನು ಪ್ರಕಟ ಮಾಡಿದನು.
- Deuteronomy 13:10 ಧರ್ಮೋಪದೇಶಕಾಂಡ 13:10ಐಗುಪ್ತ ದೇಶದೊಳಗಿಂದಲೂ ದಾಸತ್ವದ ಮನೆಯೊ ಳಗಿಂದಲೂ ನಿನ್ನನ್ನು ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನ ಬಳಿಯಿಂದ ನಿನ್ನನ್ನು ದೂಡುವದಕ್ಕೆ ಅವನು ಪ್ರಯತ್ನಮಾಡಿದ್ದರಿಂದ ಅವನು ಸಾಯುವಹಾಗೆ ಕಲ್ಲೆಸೆಯಬೇಕು.