Exodus · chapter 27 · verse 3
Exodus 27:3 in Kannada
ಅದರ ಬೂದಿಗಾಗಿ ತಟ್ಟೆಗಳನ್ನು ಸಲಿಕೆಗಳನ್ನು ಬೋಗುಣಿಗಳನ್ನು ಮುಳ್ಳುಗಳನ್ನು ಅಗ್ನಿಪಾತ್ರೆಗಳನ್ನು ಎಲ್ಲಾ ಉಪಕರಣಗಳನ್ನು ಹಿತ್ತಾಳೆಯಿಂದ ಮಾಡಬೇಕು.
Adara boodigaagi tattegalannu salikegalannu bogunigalannu mullugalannu agnipaatregalannu ellaa upakaranagalannu hittaaleyinda maadabeku.
Exodus 27:3 in English
- King James Version (KJV)
- And thou shalt make his pans to receive his ashes, and his shovels, and his basons, and his fleshhooks, and his firepans: all the vessels thereof thou shalt make [of] brass.
- World English Bible (WEB)
- You shall make its pots to take away its ashes; and its shovels, its basins, its meat hooks, and its fire pans. You shall make all its vessels of bronze.
- American Standard Version (ASV)
- And thou shalt make its pots to take away its ashes, and its shovels, and its basins, and its flesh-hooks, and its firepans: all the vessels thereof thou shalt make of brass.
- Bible in Basic English (BBE)
- And make all its vessels, the baskets for taking away the dust of the fire, the spades and basins and meat-hooks and fire-trays, of brass.
- Darby Translation (DBY)
- And thou shalt make its pots to cleanse it of the fat, its shovels, and its bowls, and its forks, and its firepans; for all the utensils thereof thou shalt employ copper.
- Webster's Bible (WBS)
- And thou shalt make its pans to receive its ashes, and its shovels, and its basins, and its flesh-hooks, and its fire-pans: all its vessels thou shalt make [of] brass.
- Young's Literal Translation (YLT)
- And thou hast made its pots to remove its ashes, and its shovels, and its bowls, and its forks, and its fire-pans, even all its vessels thou dost make of brass.
Read in context
- 1ಇದಲ್ಲದೆ ಜಾಲೀ ಮರದಿಂದ ಯಜ್ಞವೇದಿಯನ್ನು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾಗಿಯೂ ಮಾಡಬೇಕು. ಆ ಯಜ್ಞವೇದಿಯು ಚಚ್ಚೌಕವಾಗಿರಬೇಕು. ಅದರ ಎತ್ತ ರವು ಮೂರು ಮೊಳ ಇರಬೇಕು.
- 2ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಬೇಕು. ಆ ಕೊಂಬುಗಳು ಯಜ್ಞವೇದಿಗೆ ಎತ್ತರವಾಗಿರಬೇಕು; ನೀನು ಅದನ್ನು ಹಿತ್ತಾಳೆಯಿಂದ ಹೊದಿಸಬೇಕು.
- 3ಅದರ ಬೂದಿಗಾಗಿ ತಟ್ಟೆಗಳನ್ನು ಸಲಿಕೆಗಳನ್ನು ಬೋಗುಣಿಗಳನ್ನು ಮುಳ್ಳುಗಳನ್ನು ಅಗ್ನಿಪಾತ್ರೆಗಳನ್ನು ಎಲ್ಲಾ ಉಪಕರಣಗಳನ್ನು ಹಿತ್ತಾಳೆಯಿಂದ ಮಾಡಬೇಕು.
- 4ಅದಕ್ಕೆ ಹಿತ್ತಾಳೆಯ ಜಾಳಿಗೆಯನ್ನು ಮಾಡಿ ಆ ಜಾಳಿಗೆಯ ಮೇಲೆ ನಾಲ್ಕು ಮೂಲೆಗಳಿಗೆ ಹಿತ್ತಾಳೆಯ ನಾಲ್ಕು ಬಳೆಗಳನ್ನು ಮಾಡಬೇಕು.
- 5ಆ ಜಾಳಿಗೆಯು ಯಜ್ಞವೇದಿಯ ಸುತ್ತಲಿರುವ ಕಟ್ಟೆಯ ಕೆಳಗೆ ಇದ್ದು, ಯಜ್ಞವೇದಿಯ ಬುಡದಿಂದ ನಡುವಿನ ತನಕ ಇರು ವಂತೆ ಹಾಕಿಸಬೇಕು.
Cross references
- 1 Kings 7:45 1 ಅರಸುಗಳು 7:45ಹೀರಾಮನು ಕರ್ತನ ಮನೆಗೋಸ್ಕರ ಅರಸನಾದ ಸೊಲೊಮೋನನಿಗೆ ಮಾಡಿದ ಈ ಸಾಮಾನುಗಳೆಲ್ಲಾ ಹೊಳೆಯುವ ತಾಮ್ರದವುಗಳಾಗಿದ್ದವು.
- 1 Kings 7:40 1 ಅರಸುಗಳು 7:40ಹೀಗೆಯೇ ಹೀರಾಮನು ತೊಟ್ಟಿ ಗಳನ್ನೂ ಸಲಿಕೆಗಳನ್ನೂ ಪಾತ್ರೆಗಳನ್ನೂ ಮಾಡಿದನು. ಹೀರಾಮನು ಕರ್ತನ ಮನೆಗೋಸ್ಕರ ಅರಸನಾದ ಸೊಲೊಮೋನನು ಮಾಡಿಸಿದ ಎಲ್ಲಾ ಕೆಲಸಗಳನ್ನು ಮಾಡಿ ತೀರಿಸಿದನು.
- 1 Samuel 2:13–14 1 ಸಮುವೇಲನು 2:13–14ಆ ಯಾಜಕರು ಜನರನ್ನು ನಡಿಸಿದ ವಿಧ ಏನಂದರೆ, ಯಾವನಾದರೂ ಬಲಿ ಅರ್ಪಿಸಿದರೆ ಅರ್ಪಿಸಿದ ಆ ಬಲಿಯ ಮಾಂಸವನ್ನು ಬೇಯಿಸುವಾಗ ಯಾಜಕನ ಸೇವಕನು ಮೂರು ಮುಳ್ಳು ಗಳುಳ್ಳ ಕೊಂಡಿಯನ್ನು ತಕ್ಕೊಂಡು ಅದನ್ನು ತಪ್ಪಲೆ ಯಲ್ಲಾಗಲಿ ಪಾತ್ರೆಯಲ್ಲಾಗಲಿ ತಟ್ಟೆಯಲ್ಲಾಗಲಿ ಗಡಿಗೆ ಯಲ್ಲಾಗಲಿ ಚುಚ್ಚುವನು. ಆ ಆಯುಧದಲ್ಲಿ ಬರುವ ದನ್ನೆಲ್ಲಾ ಯಾಜಕನು ತನಗೆ ತಕ್ಕೊಳ್ಳುವನು. ಹೀಗೆಯೇ ಅವರು ಶೀಲೋವಿನಲ್ಲಿ ಅಲ್ಲಿಗೆ ಬರುವ ಸಮಸ್ತ ಇಸ್ರಾಯೇಲ್ಯರಿಗೆ ಮಾಡಿದರು.
- 2 Kings 25:15 2 ಅರಸುಗಳು 25:15ಕಾವಲುಗಾರರ ಅಧಿಪತಿಯು ಅಗ್ನಿಪಾತ್ರೆಗಳನ್ನೂ ತಟ್ಟೆಗಳನ್ನೂ ಬಂಗಾರ ದವುಗಳಾದ ಬಂಗಾರವನ್ನೂ ಬೆಳ್ಳಿಯವುಗಳಾದ ಬೆಳ್ಳಿ ಯನ್ನೂ ತಕ್ಕೊಂಡನು.
- Numbers 4:14 ಅರಣ್ಯಕಾಂಡ 4:14ಸೇವೆ ಮಾಡುವ ಎಲ್ಲಾ ವಸ್ತುಗಳನ್ನೂ ಅಗ್ನಿಪಾತ್ರೆಗಳನ್ನೂ ಮುಳ್ಳುಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಬಲಿಪೀಠದ ಎಲ್ಲಾ ವಸ್ತುಗಳನ್ನೂ ಅದರ ಮೇಲಿಟ್ಟು ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹಾಕಿ ಅದರ ಕೋಲುಗಳನ್ನು ಇಡಬೇಕು.
- 2 Chronicles 4:11 2 ಪೂರ್ವಕಾಲವೃತ್ತಾಂತ 4:11ಹೂರಾಮನು ಪಾತ್ರೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಹೀಗೆಯೇ ಹೂರಾ ಮನು ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊ ಮೋನನಿಗೆ ಮಾಡಬೇಕಾದ ಕಾರ್ಯವನ್ನು ಮಾಡಿ ತೀರಿಸಿದನು.
- Exodus 38:3 ವಿಮೋಚನಕಾಂಡ 38:3ಅನಂತರ ಅವನು ಬಲಿಪೀಠದ ಎಲ್ಲಾ ಸಾಮಾನುಗಳನ್ನು ಮಾಡಿ ದನು: ಕೊಡಗಳು, ಸಲಿಕೆಗಳು, ಬೋಗುಣಿಗಳು, ಮಾಂಸ ಸಿಕ್ಕಿಸುವ ಕೊಂಡಿಗಳು, ಅಗ್ಗಿಷ್ಟಿಗೆಗಳು; ಇವೆಲ್ಲ ವುಗಳನ್ನು ಅವನು ಹಿತ್ತಾಳೆಯಿಂದ ಮಾಡಿದನು.
- 1 Chronicles 28:17 1 ಪೂರ್ವಕಾಲವೃತ್ತಾಂತ 28:17ಅದೇ ಪ್ರಕಾರ ಮುಳ್ಳುಗಳೂ ಪಾತ್ರೆಗಳೂ ಹೂಜೆಗಳೂ ಇವುಗಳಿಗೋಸ್ಕರ ಚೊಕ್ಕ ಬಂಗಾರವನ್ನು ಕೊಟ್ಟನು. ಬಂಗಾರದ ಬಟ್ಟಲುಗಳಿ ಗೋಸ್ಕರ ಒಂದೊಂದು ಬಟ್ಟಲಿಗೋಸ್ಕರ ಅದರ ತೂಕವಾಗಿಯೂ ಬೆಳ್ಳಿಯ ಒಂದೊಂದು ಬಟ್ಟಲಿಗೋ ಸ್ಕರ ಅದರ ತೂಕವಾಗಿಯೂ ಕೊಟ್ಟನು.
- Leviticus 16:12 ಯಾಜಕಕಾಂಡ 16:12ಅವನು ಕರ್ತನ ಸನ್ನಿಧಿಯಲ್ಲಿರುವ ಯಜ್ಞವೇದಿಯಿಂದ ಧೂಪ ಸುಡುವ ಪಾತ್ರೆಯ ತುಂಬ ಬೆಂಕಿಯಿಂದ ಉರಿಯುವ ಕೆಂಡ ಗಳನ್ನು ಮತ್ತು ತನ್ನ ಕೈಗಳ ತುಂಬ ಸಣ್ಣದಾಗುವಂತೆ ಕಟ್ಟಿದ ಧೂಪವನ್ನು ತೆಗೆದುಕೊಂಡು ಅದನ್ನು ತೆರೆಯ ಒಳಗಡೆ ತರಬೇಕು.
- Exodus 24:6 ವಿಮೋಚನಕಾಂಡ 24:6ಮೋಶೆಯು ರಕ್ತದಲ್ಲಿ ಅರ್ಧವನ್ನು ತೆಗೆದುಕೊಂಡು ಬೋಗುಣಿಗಳಲ್ಲಿ ಹಾಕಿ ದನು ಮತ್ತು ರಕ್ತದಲ್ಲಿ ಅರ್ಧವನ್ನು ಯಜ್ಞವೇದಿಯ ಮೇಲೆ ಚಿಮುಕಿಸಿದನು.
- 2 Chronicles 4:16 2 ಪೂರ್ವಕಾಲವೃತ್ತಾಂತ 4:16ಅವುಗಳ ಎಲ್ಲಾ ಸಾಮಾನುಗಳನ್ನೂ ಅರಸನಾದ ಸೊಲೊಮೋನನಿಗೆ ಅವನ ತಂದೆಯಾದ ಹೂರಾಮನು ಹೊಳೆಯುವ ತಾಮ್ರದಿಂದ ಕರ್ತನ ಆಲಯಕ್ಕೋಸ್ಕರ ಮಾಡಿದನು.
- Jeremiah 52:18–20 ಯೆರೆಮೀಯ 52:18–20ಗುಡಾಣಗಳನ್ನೂ ಸಲಿಕೆಗಳನ್ನೂ ಕತ್ತರಿಗಳನ್ನೂ ತಂಬಿಗೆಗಳನ್ನೂ ಸೌಟುಗಳನ್ನೂ ಸೇವೆಗೆ ಸಂಬಂಧವಾದ ಎಲ್ಲಾ ಹಿತ್ತಾಳೆಯ ಪಾತ್ರೆಗಳನ್ನೂ ತಕ್ಕೊಂಡರು. ಇದಲ್ಲದೆ ಬೋಗುಣಿಗಳನ್ನೂ ಅಗ್ನಿಪಾತ್ರೆಗಳನ್ನೂ ಬಟ್ಟಲುಗ ಳನ್ನೂ ಗುಡಾಣಗಳನ್ನೂ ದೀಪಸ್ತಂಭಗಳನ್ನೂ ಸೌಟುಗ ಳನ್ನೂ ಬಟ್ಟಲುಗಳನ್ನೂ ಬಂಗಾರದ್ದಾದರೆ, ಅದರ ಬಂಗಾರವನ್ನೂ ಬೆಳ್ಳಿಯದ್ದಾದರೆ, ಅದರ ಬೆಳ್ಳಿಯನ್ನೂ ಕಾವಲಿನ ಅಧಿಪತಿಯು ತಕ್ಕೊಂಡನು. ಅರಸನಾದ ಸೊಲೊಮೋನನು ಕರ್ತನ ಆಲಯದಲ್ಲಿ ಮಾಡಿಸಿದ ಎರಡು ಸ್ತಂಭಗಳನ್ನೂ ಒಂದು ಸಮುದ್ರವನ್ನೂ ಗದ್ದಿಗೆಗಳ ಕೆಳಗಿದ್ದ ಹನ್ನೆರಡು ಹಿತ್ತಾಳೆಯ ಎತ್ತುಗಳನ್ನೂ ತಕ್ಕೊಂಡನು; ಈ ಎಲ್ಲಾ ಪಾತ್ರೆಗಳಿಗೆ ಲೆಕ್ಕವಿಲ್ಲದಷ್ಟು ಹಿತ್ತಾಳೆ ತೂಕವಾಗಿತ್ತು.