Exodus · chapter 29 · verse 39
Exodus 29:39 in Kannada
ಒಂದು ಕುರಿಮರಿಯನ್ನು ಬೆಳಿಗ್ಗೆ ಅರ್ಪಿಸಬೇಕು, ಮತ್ತೊಂದನ್ನು ಸಾಯಂಕಾಲ ಅರ್ಪಿಸಬೇಕು.
Ondu kurimariyannu beligge arpisabeku, mattondannu saayankaala arpisabeku.
Exodus 29:39 in English
- King James Version (KJV)
- The one lamb thou shalt offer in the morning; and the other lamb thou shalt offer at even:
- World English Bible (WEB)
- The one lamb you shall offer in the morning; and the other lamb you shall offer at evening;
- American Standard Version (ASV)
- The one lamb thou shalt offer in the morning; and the other lamb thou shalt offer at even:
- Bible in Basic English (BBE)
- One lamb is to be offered in the morning and the other in the evening:
- Darby Translation (DBY)
- The one lamb thou shalt offer in the morning; and the other lamb thou shalt offer between the two evenings.
- Webster's Bible (WBS)
- The one lamb thou shalt offer in the morning; and the other lamb thou shalt offer at evening.
- Young's Literal Translation (YLT)
- the one lamb thou dost prepare in the morning, and the second lamb thou dost prepare between the evenings;
Read in context
- 37ಏಳು ದಿವಸ ಯಜ್ಞವೇದಿಗೋಸ್ಕರ ಪ್ರಾಯಶ್ಚಿತ್ತ ಮಾಡಿ ಅದನ್ನು ಪವಿತ್ರಮಾಡಬೇಕು. ಆಗ ಯಜ್ಞ ವೇದಿಯು ಅತಿಪರಿಶುದ್ಧವಾಗಿರುವದು. ಯಜ್ಞವೇದಿ ಯನ್ನು ಮುಟ್ಟುವದೆಲ್ಲಾ ಪವಿತ್ರವಾಗಿರಬೇಕು.
- 38ಇದಲ್ಲದೆ ಯಜ್ಞವೇದಿಯ ಮೇಲೆ ನೀನು ಅರ್ಪಿಸ ಬೇಕಾದದ್ದು ಇದೇ; ಒಂದು ವರುಷದ ಎರಡು ಕುರಿಮರಿಗಳನ್ನು ಪ್ರತಿದಿನ ಬಿಡದೆ ಅರ್ಪಿಸಬೇಕು.
- 39ಒಂದು ಕುರಿಮರಿಯನ್ನು ಬೆಳಿಗ್ಗೆ ಅರ್ಪಿಸಬೇಕು, ಮತ್ತೊಂದನ್ನು ಸಾಯಂಕಾಲ ಅರ್ಪಿಸಬೇಕು.
- 40ಹಿನ್ನಿನ ನಾಲ್ಕನೆಯ ಒಂದು ಪಾಲಿನಷ್ಟು ಹಿಂಡಿದ ಎಣ್ಣೆ ಹೊಯಿದ ನಯವಾದ ಹಿಟ್ಟಿನ ಹತ್ತನೆಯ ಪಾಲೂ ಹಿನ್ನಿನ ನಾಲ್ಕನೆಯ ಪಾಲಿನಷ್ಟು ದ್ರಾಕ್ಷಾರಸದ ಪಾನ ದರ್ಪಣೆಯೂ ಒಂದು ಕುರಿಮರಿಯೊಂದಿಗೆ ಅರ್ಪಿಸ ಬೇಕು.
- 41ಇನ್ನೊಂದು ಕುರಿಮರಿಯನ್ನು ಸಾಯಂಕಾಲ ದಲ್ಲಿ ಅರ್ಪಿಸಬೇಕು. ಉದಯದ ಆಹಾರ ಕಾಣಿಕೆ ಯಂತೆಯೂ ಅದರ ಪಾನದರ್ಪಣೆಯಂತೆಯೂ ಇದಕ್ಕೂ ಮಾಡಿ ಕರ್ತನಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಅರ್ಪಿಸಬೇಕು.
Cross references
- Ezekiel 46:13–15 ಯೆಹೆಜ್ಕೇಲನು 46:13–15ನೀನು ಪ್ರತಿದಿನವೂ ಕರ್ತನಿಗೆ ಒಂದು ವರುಷದ ದೋಷರಹಿತವಾದ ಕುರಿಮರಿಯ ದಹನಬಲಿಯನ್ನು ಸಿದ್ದಮಾಡಬೇಕು. ಹೀಗೆ ಪ್ರತಿದಿನವೂ ಮುಂಜಾನೆ ನಡೆಯಬೇಕು. ಅದಕ್ಕೆ ಅರ್ಪಣೆಯಾಗಿ ಪ್ರತಿದಿನದ ಮುಂಜಾನೆಯಲ್ಲಿ ನೀನು ಏಫದ ಆರನೇ ಪಾಲನ್ನು ಗೋಧಿ ಹಿಟ್ಟಿನಲ್ಲಿ ಕಲಿಸುವ ಹಾಗೆ ಎಣ್ಣೆಯ ಹಿನ್ನಿನಲ್ಲಿ ಮೂರನೇ ಪಾಲನ್ನು ಸಿದ್ಧಮಾಡಬೇಕು. ಇದು ಕರ್ತನಿಗೆ ನಿತ್ಯನಿಯಮದ ಪ್ರಕಾರ ಎಡೆಬಿಡದೆ ಆಹಾರದ ಅರ್ಪಣೆಯಾಗಿದೆ. ಹೀಗೆ ಅವರು ಕುರಿಮರಿಯನ್ನು ಆಹಾರದ ಅರ್ಪಣೆಯನ್ನು ಎಣ್ಣೆಯನ್ನು ಪ್ರತಿದಿನದ ಮುಂಜಾನೆಯಲ್ಲಿ ಎಡೆಬಿಡದೆ ದಹನಬಲಿಯನ್ನಾಗಿ ಸಿದ್ಧಮಾಡಬೇಕು.
- 2 Kings 16:15 2 ಅರಸುಗಳು 16:15ಇದಲ್ಲದೆ ಅರಸನಾದ ಆಹಾಜನು ಯಾಜಕನಾದ ಊರೀಯನಿಗೆ --ಉದಯದಲ್ಲಿ ದಹನಬಲಿಯನ್ನೂ ಸಾಯಂಕಾಲದ ಆಹಾರ ಸಮರ್ಪಣೆಯನ್ನೂ ಅರಸನ ದಹನಬಲಿ ಯನ್ನೂ ಆಹಾರ ಅರ್ಪಣೆಯನ್ನೂ ದೇಶದ ಜನರೆಲ್ಲರ ದಹನಬಲಿಯನ್ನೂ ಅವರ ಆಹಾರ ಸಮರ್ಪಣೆ ಯನ್ನೂ ಪಾನಗಳನ್ನೂ ದೊಡ್ಡ ಬಲಿಪೀಠದ ಮೇಲೆ ಸುಟ್ಟು ದಹನಬಲಿಯ ರಕ್ತವೆಲ್ಲವನ್ನೂ ಬಲಿಯ ರಕ್ತವೆಲ್ಲವನ್ನೂ ಚಿಮಿಕಿಸು; ಆದರೆ ಹಿತ್ತಾಳೆ ಬಲಿಪೀಠವು ನಾನು ವಿಚಾರಿಸುವ ನಿಮಿತ್ತವಾಗಿ ಇರಲಿ ಎಂದು ಆಜ್ಞಾಪಿಸಿದನು.
- 2 Chronicles 13:11 2 ಪೂರ್ವಕಾಲವೃತ್ತಾಂತ 13:11ಅವರು ಪ್ರತಿ ಉದಯದಲ್ಲಿಯೂ ಸಾಯಂಕಾಲದಲ್ಲಿಯೂ ಕರ್ತನಿಗೆ ದಹನಬಲಿಗಳನ್ನೂ ಸುಗಂಧ ಧೂಪವನ್ನೂ ಸುಡುತ್ತಾರೆ. ಇದಲ್ಲದೆ ಪರಿಶುದ್ಧ ಮೇಜಿನ ಮೇಲೆ ರೊಟ್ಟಿಗಳನ್ನು ಇಡುವದುಂಟು; ಪ್ರತಿ ಸಾಯಂಕಾಲ ದಲ್ಲಿ ಬಂಗಾರದ ದೀಪಸ್ಥಂಭವನ್ನೂ ಅದರ ದೀಪ ಗಳನ್ನೂ ಸಿದ್ಧಮಾಡಿ ಹಚ್ಚುತ್ತಾರೆ. ನಾವು ನಮ್ಮ ದೇವರಾದ ಕರ್ತನ ಕಟ್ಟಳೆಯನ್ನು ಕೈಕೊಳ್ಳುತ್ತೇವೆ; ಆದರೆ ನೀವು ಆತನನ್ನು ಬಿಟ್ಟಿದ್ದೀರಿ. ಇಗೋ, ದೇವರು ತಾನೇ ಅಧಿಪತಿಯಾಗಿ ನಮ್ಮ ಸಂಗಡ ಇದ್ದಾನೆ.
- Luke 1:10 ಲೂಕನು 1:10ಧೂಪಾರ್ಪಣೆಯ ಸಮಯದಲ್ಲಿ ಜನ ಸಮೂಹ ವೆಲ್ಲಾ ಹೊರಗೆ ಪ್ರಾರ್ಥಿಸುತ್ತಿದ್ದರು.
- Psalm 5:3 ಕೀರ್ತನೆಗಳು 5:3ಓ ಕರ್ತನೇ, ಬೆಳಿಗ್ಗೆ ನನ್ನ ಸ್ವರವನ್ನು ಕೇಳುವಿ; ಹೊತ್ತಾರೆಯಲ್ಲಿ ನಿನಗೆ ಪ್ರಾರ್ಥಿಸಿ ಮೇಲಕ್ಕೆ ನೋಡುವೆನು.
- Psalm 55:16–17 ಕೀರ್ತನೆಗಳು 55:16–17ನಾನಾದರೋ ದೇವರನ್ನು ಕರೆಯುವೆನು; ಕರ್ತ ನು ನನ್ನನ್ನು ರಕ್ಷಿಸುವನು. ಸಂಜೆಯಲ್ಲಿ ಮುಂಜಾನೆ ಯಲ್ಲಿ ಮಧ್ಯಾಹ್ನದಲ್ಲಿ ಪ್ರಾರ್ಥಿಸಿ ಕೂಗುವೆನು;ಆತನು ನನ್ನ ಸ್ವರವನ್ನು ಕೇಳುವನು.
- Acts 26:7 ಅಪೊಸ್ತಲರ ಕೃತ್ಯಗಳು 26:7ನಮ್ಮ ಹನ್ನೆರಡು ಗೋತ್ರದವರು ಆಸಕ್ತಿಯಿಂದ ಹಗಲಿರುಳು ದೇವರನ್ನು ಸೇವಿಸುತ್ತಾ ಈ ವಾಗ್ದಾನದ ನೆರವೇರಿಕೆಗಾಗಿ ನಿರೀಕ್ಷಿಸುತ್ತಿದ್ದಾರೆ; ಅಗ್ರಿಪ್ಪ ರಾಜನೇ, ಈ ನಿರೀಕ್ಷೆಯ ವಿಷಯಕ್ಕಾಗಿಯೇ ಯೆಹೂದ್ಯರು ನನ್ನ ಮೇಲೆ ತಪ್ಪುಹೊರಿಸುತ್ತಾರೆ.