Ezekiel · chapter 20 · verse 20
Ezekiel 20:20 in Kannada
ನನ್ನ ಸಬ್ಬತ್ತುಗಳನ್ನು ಪರಿಶುದ್ಧಮಾಡಿರಿ ನಾನೇ ನಿಮ್ಮ ದೇವರಾದ ಕರ್ತನು ಎಂದು ಅವು ನಿಮಗೂ ನನಗೂ ನೀವು ತಿಳಿಯುವ ಹಾಗೆ ಗುರುತುಗಳಾಗಿರುವವು.
Nanna sabbattugalannu parishuddhamaadiri naane nimma devaraada kartanu endu avu nimagoo nanagoo neevu tiliyuva haage gurutugalaagiruvavu.
Ezekiel 20:20 in English
- King James Version (KJV)
- And hallow my sabbaths; and they shall be a sign between me and you, that ye may know that I [am] the LORD your God.
- World English Bible (WEB)
- Make my Sabbaths holy. They shall be a sign between me and you, that you may know that I am the LORD your God.’
- American Standard Version (ASV)
- and hallow my sabbaths; and they shall be a sign between me and you, that ye may know that I am Jehovah your God.
- Bible in Basic English (BBE)
- And keep my Sabbaths holy; and they will be a sign between me and you so that it may be clear to you that I am the Lord your God.
- Darby Translation (DBY)
- and hallow my sabbaths; and they shall be a sign between me and you, that ye may know that I [am] Jehovah your God.
- Webster's Bible (WBS)
- And hallow my sabbaths; and they shall be a sign between me and you, that ye may know that I [am] the LORD your God.
- Young's Literal Translation (YLT)
- And My sabbaths sanctify, And they have been for a sign between Me and you, To know that I, Jehovah, [am] your God.
Read in context
- 18ಆದರೆ ನಾನು ಅರಣ್ಯದಲ್ಲಿ ಅವರ ಮಕ್ಕಳಿಗೆ ಹೇಳಿದ್ದೇನಂದರೆ--ನಿಮ್ಮ ತಂದೆಗಳ ನಿಯಮಗಳಲ್ಲಿ ನಡೆಯಬೇಡಿರಿ, ಅವರ ನ್ಯಾಯಗಳನ್ನು ಅನುಸರಿಸ ಬೇಡಿರಿ, ಅವರ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರ ಮಾಡಿಕೊಳ್ಳಬೇಡಿರಿ;
- 19ನಾನೇ ಕರ್ತನೂ ನಿಮ್ಮ ದೇವರೂ ಆಗಿದ್ದೇನೆ ನನ್ನ ನಿಯಮಗಳಲ್ಲಿಯೇ ನಡೆ ಯಿರಿ ನ್ಯಾಯಗಳನ್ನು ಕೈಕೊಂಡು ಅವುಗಳನ್ನೇ ಮಾಡಿರಿ;
- 20ನನ್ನ ಸಬ್ಬತ್ತುಗಳನ್ನು ಪರಿಶುದ್ಧಮಾಡಿರಿ ನಾನೇ ನಿಮ್ಮ ದೇವರಾದ ಕರ್ತನು ಎಂದು ಅವು ನಿಮಗೂ ನನಗೂ ನೀವು ತಿಳಿಯುವ ಹಾಗೆ ಗುರುತುಗಳಾಗಿರುವವು.
- 21ಆದಾಗ್ಯೂ ಮಕ್ಕಳು ನನಗೆ ವಿರೋಧವಾಗಿ ತಿರುಗಿ ಬಿದ್ದರು; ಯಾವವುಗಳನ್ನು ಮನುಷ್ಯನು ಮಾಡಿದರೆ ಬದುಕುವನೋ ಆ ನನ್ನ ನಿಯಮಗಳಲ್ಲಿ ನಡೆಯಲಿಲ್ಲ ನನ್ನ ನ್ಯಾಯಗಳನ್ನು ಕೈಕೊಂಡುಮಾಡಲಿಲ್ಲ; ನನ್ನ ಸಬ್ಬತ್ತುಗಳನ್ನು ಅಪವಿತ್ರ ಪಡಿಸಿದಾಗ ಅವರ ಮೇಲೆ ನನ್ನ ರೋಷವನ್ನು ಸುರಿದುಬಿಡುವೆನೆಂದೂ ನನ್ನ ಕೋಪ ವನ್ನು ಅರಣ್ಯದಲ್ಲಿ ಅವರ ಮೇಲೆ ತೀರಿಸಿಬಿಡುವೆ ನೆಂದೂ ಹೇಳಿದೆನು.
- 22ಆದಾಗ್ಯೂ ನಾನು ನನ್ನ ಕೈಯನ್ನು ಹಿಂತೆಗೆದು ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಹೊರಗೆ ಬರಮಾಡಿದೆನೋ ಆ ಅನ್ಯಜನಾಂಗ ಗಳ ದೃಷ್ಟಿಯಲ್ಲಿ ನನ್ನ ಹೆಸರು ಅಪವಿತ್ರವಾಗದ ಹಾಗೆ ನನ್ನ ಹೆಸರಿಗೋಸ್ಕರವೇ ಕೆಲಸ ಮಾಡಿದೆನು.
Cross references
- Jeremiah 17:22 ಯೆರೆಮೀಯ 17:22ಸಬ್ಬತ್ತಿನ ದಿವಸದಲ್ಲಿ ಹೊರೆಯನ್ನು ನಿಮ್ಮ ಮನೆಗಳೊಳಗಿಂದ ತಕ್ಕೊಂಡು ಹೋಗಬೇಡಿರಿ; ಯಾವ ಕೆಲಸವನ್ನೂ ಮಾಡಬೇಡಿರಿ; ನಾನು ನಿಮ್ಮ ತಂದೆಗಳಿಗೆ ಆಜ್ಞಾಪಿಸಿದ ಪ್ರಕಾರವೇ ಸಬ್ಬತ್ತಿನ ದಿವಸವನ್ನು ಪರಿಶುದ್ಧ ಮಾಡಬೇಕು ಎಂಬದು.
- Isaiah 58:13 ಯೆಶಾಯ 58:13ನೀನು ಸಬ್ಬತ್ತಿನಲ್ಲಿ ನಿನ್ನ ಕಾಲನ್ನು ಹಿಂದೆಗೆದು, ನನ್ನ ಪರಿಶುದ್ಧ ದಿವಸದಲ್ಲಿ ನಿನ್ನ ಇಷ್ಟ ವನ್ನು ಮಾಡದೇ ಹೋದರೆ ಸಬ್ಬತ್ತನ್ನು ಆನಂದಕರ ವಾದದ್ದೆಂದೂ ಕರ್ತನ ಪರಿಶುದ್ಧ ದಿವಸವನ್ನು ಘನವುಳ್ಳದ್ದೆಂದೂ ಕರೆದರೆ, ಸ್ವಂತ ಕೆಲಸಗಳನ್ನು ಮಾಡದೆ ಸ್ವಂತ ಇಷ್ಟವನ್ನು ಕಂಡುಕೊಳ್ಳದೆ, ಸ್ವಂತ ಮಾತುಗಳನ್ನು ಆಡದೆ, ಅದನ್ನು ಘನಪಡಿಸಿದರೆ,ಆಗ ಕರ್ತನಲ್ಲಿ ಆನಂದಗೊಳ್ಳುವಿ; ಭೂಮಿಯ ಎತ್ತರವಾದ ಸ್ಥಳಗಳ ಮೇಲೆ ನಿನ್ನನ್ನು ಹತ್ತಿಸಿ, ನಿನ್ನ ತಂದೆಯಾದ ಯಾಕೋಬನ ಬಾಧ್ಯತೆಯನ್ನು ಅನುಭವಿ ಸುವಂತೆ ನಿನಗೆ ಮಾಡುವೆನು. ಕರ್ತನೇ ಇದನ್ನು ನುಡಿದಿದ್ದಾನೆ.
- Exodus 31:13–17 ವಿಮೋಚನಕಾಂಡ 31:13–17ನೀನು ಇಸ್ರಾಯೇಲ್ ಮಕ್ಕಳೊಂದಿಗೆ ಸಹ ಮಾತ ನಾಡಿ--ನಿಶ್ಚಯವಾಗಿ ನೀವು ನನ್ನ ಸಬ್ಬತ್ತುಗಳನ್ನು ಕೈಕೊಳ್ಳಬೇಕು. ನಿಮ್ಮನ್ನು ಪರಿಶುದ್ಧ ಮಾಡುವ ಕರ್ತನು ನಾನೇ ಎಂದು ನೀವು ತಿಳಿಯುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರಿಗೂ ಗುರುತಾಗಿದೆ. ಹೀಗಿರುವದರಿಂದ ನೀವು ಸಬ್ಬತ್ತನ್ನು ಕೈಕೊಳ್ಳ ಬೇಕು, ಅದು ನಿಮಗೆ ಪರಿಶುದ್ಧವಾದದ್ದು. ಅದನ್ನು ಅಪವಿತ್ರಮಾಡುವ ಪ್ರತಿಯೊಬ್ಬನು ಖಂಡಿತವಾಗಿ ಸಾಯಬೇಕು. ಆ ದಿನದಲ್ಲಿ ಯಾರಾದರೂ ಕೆಲಸ ಮಾಡಿದರೆ ಅವರನ್ನು ತನ್ನ ಜನರೊಳಗಿಂದ ತೆಗೆದು ಹಾಕಬೇಕು. ಆರು ದಿವಸ ಕೆಲಸಮಾಡಬೇಕು; ಆದರೆ ಏಳನೆಯ ದಿನವು ಕರ್ತನಿಗೆ ಪರಿಶುದ್ಧವಾದ ವಿಶ್ರಾಂತಿಯ ಸಬ್ಬತ್ತು. ಸಬ್ಬತ್ ದಿನದಲ್ಲಿ ಕೆಲಸ ಮಾಡು ವವರೆಲ್ಲಾ ಖಂಡಿತವಾಗಿ ಸಾಯಬೇಕು. ಹೀಗಿರ ಲಾಗಿ ಇಸ್ರಾಯೇಲ್ ಮಕ್ಕಳು ತಮ್ಮ ತಲತಲಾಂತರ ಗಳಲ್ಲಿ ನಿತ್ಯ ಒಡಂಬಡಿಕೆಯಾಗಿ ಆಚರಿಸುವಂತೆ ಸಬ್ಬತ್ತ ನ್ನು ಕೈಕೊಳ್ಳಬೇಕು. ನನಗೂ ಇಸ್ರಾಯೇಲ್ ಮಕ್ಕ ಳಿಗೂ ಇದೇ ಶಾಶ್ವತವಾದ ಗುರುತು. ಯಾಕಂದರೆ ಆರು ದಿವಸಗಳಲ್ಲಿ ಕರ್ತನು ಆಕಾಶವನ್ನೂ ಭೂಮಿ ಯನ್ನೂ ಉಂಟುಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿ ಕೊಂಡು ಉಲ್ಲಾಸಗೊಂಡನು ಎಂದು ಹೇಳು ಅಂದನು.ಆತನು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ ಅವನಿಗೆ ಆ ಎರಡು ಸಾಕ್ಷಿ ಹಲಗೆಗಳನ್ನೂ ಕೊಟ್ಟನು. ಅವು ದೇವರ ಕೈಯಿಂದ ಕೆತ್ತಲ್ಪಟ್ಟ ಕಲ್ಲಿನ ಹಲಗೆಗಳಾಗಿದ್ದವು.
- Ezekiel 20:12 ಯೆಹೆಜ್ಕೇಲನು 20:12ಇದಲ್ಲದೆ ಅವರನ್ನು ಪರಿಶುದ್ಧ ಮಾಡುವ ಕರ್ತನು ನಾನೇ ಎಂದು ಅವರು ತಿಳಿಯುವ ಹಾಗೆ ನನಗೂ ಅವರಿಗೂ ಗುರುತಾಗಿರುವದಕ್ಕೆ ನನ್ನ ಸಬ್ಬತ್ ದಿನಗಳನ್ನು ನಾನು ಅವರಿಗೆ ಕೊಟ್ಟೆನು.
- Ezekiel 44:24 ಯೆಹೆಜ್ಕೇಲನು 44:24ಜಗಳವಾಡುವಾಗ ಅವರು ನ್ಯಾಯಕ್ಕಾಗಿ ನಿಂತು, ನನ್ನ ನ್ಯಾಯವಿಧಿಗಳ ಪ್ರಕಾರ ಅವರಿಗೆ ತಿಳಿಸಬೇಕು. ಅವರು ನನ್ನ ನ್ಯಾಯಪ್ರಮಾಣಗಳನ್ನೂ ನಿಯಮಗ ಳನ್ನೂ ನನ್ನ ಸಭೆಗಳಲ್ಲಿ ಕೈಕೊಳ್ಳಬೇಕು; ನನ್ನ ಸಬ್ಬತ್ತು ಗಳನ್ನು ಪರಿಶುದ್ಧಪಡಿಸಬೇಕು.
- Nehemiah 13:15–22 ನೆಹೆಮೀಯ 13:15–22ಆ ದಿವಸಗಳಲ್ಲಿ ನಾನು ಯೆಹೂದದೊಳಗೆ ಸಬ್ಬತ್ತುಗಳಲ್ಲಿ ಕೆಲವರು ದ್ರಾಕ್ಷೆ ತುಳಿಯುವದನ್ನೂ ಸಿವುಡುಗಳನ್ನು ತರುವದನ್ನೂ ಕತ್ತೆಗಳ ಮೇಲೆ ಹೇರಿ ಕೊಂಡು ಬರುವದನ್ನೂ ಮತ್ತು ಸಬ್ಬತ್ತುಗಳಲ್ಲಿ ಯೆರೂಸಲೇಮಿಗೆ ದ್ರಾಕ್ಷಾರಸವನ್ನೂ ದ್ರಾಕ್ಷೆ ಹಣ್ಣು ಗಳನ್ನೂ ಅಂಜೂರದ ಹಣ್ಣುಗಳನ್ನೂ ಎಲ್ಲಾ ಹೊರೆ ಗಳನ್ನೂ ತರುವದನ್ನು ನಾನು ನೋಡಿದ್ದರಿಂದ ಮಾರುವ ದಿವಸದಲ್ಲಿ ನಾನು ಸಾಕ್ಷಿಯಾಗಿ ಹೇಳಿದೆನು. ಇದಲ್ಲದೆ ವಿಾನುಗಳನ್ನೂ ಎಲ್ಲಾ ಸರುಕುಗಳನ್ನೂ ತಕ್ಕೊಂಡು ಬಂದು ಸಬ್ಬತ್ ದಿವಸದಲ್ಲಿ ಯೆಹೂದದ ಮಕ್ಕಳಿಗೆ ಮಾರುವ ತೂರಿನವರು ಯೆರೂಸಲೇಮಿ ನಲ್ಲಿ ವಾಸವಾಗಿದ್ದರು. ಆಗ ನಾನು ಯೆಹೂದದ ಶ್ರೇಷ್ಠರನ್ನು ಗದರಿಸಿ, ಅವರಿಗೆ -- ಸಬ್ಬತ್ ದಿನವನ್ನು ನೀವು ಅಪವಿತ್ರಮಾಡುವ ಈ ಕೆಟ್ಟಕಾರ್ಯವೇನು? ನಿಮ್ಮ ತಂದೆಗಳು ಈ ಪ್ರಕಾರ ಮಾಡಿದ್ದರಿಂದ ನಮ್ಮ ದೇವರು ನಮ್ಮ ಮೇಲೆಯೂ ಪಟ್ಟಣದ ಮೇಲೆಯೂ ಈ ಕೇಡನ್ನೆಲ್ಲಾ ಬರಮಾಡಲ್ಲಿಲ್ಲವೋ? ಆದರೆ ನೀವು ಸಬ್ಬತ್ ದಿವಸವನ್ನು ಅಪವಿತ್ರ ಮಾಡುವದರಿಂದ ಇಸ್ರಾಯೇಲಿನ ಮೇಲೆ ಇನ್ನೂ ಉರಿಯನ್ನು ಬರಮಾಡುವಿರಿ. ಆದಕಾರಣ ಸಬ್ಬತ್ ಆಗುವದಕ್ಕಿಂತ ಮುಂಚೆ ಯೆರೂಸಲೇಮಿನ ಬಾಗಲು ಗಳಲ್ಲಿ ಕತ್ತಲು ಆಗಲಾರಂಭಿಸಿದಾಗ ಬಾಗಲುಗಳನ್ನು ಹಾಕುವ ಹಾಗೆಯೂ ಸಬ್ಬತ್ ದಿವಸವು ತೀರುವ ವರೆಗೆ ಅವುಗಳನ್ನು ತೆರೆಯದೆ ಇರುವ ಹಾಗೆಯೂ ನಾನು ಅವರಿಗೆ ಹೇಳಿದೆನು. ಮತ್ತು ಸಬ್ಬತ್ ದಿವಸದಲ್ಲಿ ಹೊರೆ ಏನಾದರೂ ಒಳಗೆ ತಾರದ ಹಾಗೆ ನನ್ನ ಸೇವಕರಲ್ಲಿ ಕೆಲವರನ್ನು ಬಾಗಲುಗಳ ಬಳಿಯಲ್ಲಿ ಇಟ್ಟೆನು. ಆಗ ವರ್ತಕರೂ ಎಲ್ಲಾ ಸರಕುಗಳನ್ನು ಮಾರುವವರೂ ಒಂದೆರಡು ಸಾರಿ ಯೆರೂಸಲೇಮಿನ ಹೊರಗೆ ರಾತ್ರಿಯನ್ನು ಕಳೆದರು. ಆಗ ನಾನು ಅವರನ್ನು ಗದರಿಸಿ ಅವರಿಗೆ--ನೀವು ಕೋಟೆಯ ಮುಂದೆ ಇಳುಕೊಂಡಿರುವದೇನು? ನೀವು ಇನ್ನು ಮೇಲೆ ಹಾಗೆ ಮಾಡಿದರೆ ನಿಮ್ಮ ಮೇಲೆ ಕೈ ಹಾಕುವೆನು ಅಂದೆನು. ಆ ಹೊತ್ತಿನಿಂದ ಅವರು ಸಬ್ಬತ್ ದಿವಸದಲ್ಲಿ ಬರಲೇ ಇಲ್ಲ; ಆಗ ಲೇವಿಯರು ತಮ್ಮನ್ನು ಶುಚಿ ಮಾಡಿಕೊಳ್ಳಬೇಕೆಂದೂ ಸಬ್ಬತ್ ದಿವಸವನ್ನು ಪರಿಶುದ್ಧ ಮಾಡುವ ಹಾಗೆ ಅವರು ಬಂದು ಬಾಗಲುಗಳನ್ನು ಕಾಯಬೇಕೆಂದೂ ಅವರಿಗೆ ಹೇಳಿದೆನು. ನನ್ನ ದೇವರೇ, ಇದಕ್ಕೋಸ್ಕರ ನೀನು ನನ್ನನ್ನು ನೆನಸಿ ನಿನ್ನ ಮಹಾ ಕೃಪೆಯ ಪ್ರಕಾರ ನನ್ನನ್ನು ಕರುಣಿಸು ಅಂದೆನು.
- Jeremiah 17:24 ಯೆರೆಮೀಯ 17:24ನೀವು ನನ್ನನ್ನು ಜಾಗ್ರತೆಯಾಗಿ ಕೇಳಿ ಸಬ್ಬತ್ತಿನ ದಿನದಲ್ಲಿ ಈ ಪಟ್ಟಣದ ಬಾಗಿಲುಗಳಲ್ಲಿ ಹೊರೆಯನ್ನು ತಕ್ಕೊಂಡುಬಾರದೆ ಸಬ್ಬತ್ತಿನ ದಿನದಲ್ಲಿ ಯಾವದೊಂದು ಕೆಲಸಮಾಡದೆ ಪರಿಶುದ್ಧ ಮಾಡಿದರೆ
- Exodus 20:11 ವಿಮೋಚನಕಾಂಡ 20:11ಆರು ದಿನಗಳಲ್ಲಿ ಕರ್ತನು ಆಕಾಶವನ್ನೂ ಭೂಮಿಯನ್ನೂ ಸಮುದ್ರ ವನ್ನೂ ಅವುಗಳಲ್ಲಿ ಇರುವವುಗಳೆಲ್ಲವನ್ನೂ ಉಂಟು ಮಾಡಿ ಏಳೆನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದದರಿಂದ ಕರ್ತನು ಸಬ್ಬತ್ ದಿನವನ್ನು ಆಶೀರ್ವದಿಸಿ ಅದನ್ನು ಪರಿಶುದ್ಧಮಾಡಿದನು.
- Jeremiah 17:27 ಯೆರೆಮೀಯ 17:27ಆದರೆ ನೀವು ಸಬ್ಬತ್ತಿನ ದಿವಸವನ್ನು ಪರಿಶುದ್ಧ ಮಾಡಬೇಕೆಂದೂ ಸಬ್ಬತ್ತಿನ ದಿವಸದಲ್ಲಿ ಹೊರೆಯನ್ನು ಹೊತ್ತುಕೊಂಡು ಯೆರೂಸಲೇಮಿನ ಬಾಗಿಲುಗಳಲ್ಲಿ ಪ್ರವೇಶಿಸಬಾರದೆಂದೂ ಹೇಳಿದ ನನ್ನ ಮಾತನ್ನು ಕೇಳದೆ ಹೋದರೆ, ಅದರ ಬಾಗಿಲುಗಳಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಆರಿ ಹೋಗದೆ ಯೆರೂಸಲೇಮಿನ ಅರಮನೆಗಳನ್ನು ದಹಿಸಿಬಿಡುವದು.