Exodus · chapter 32 · verse 31
Exodus 32:31 in Kannada
ಹೀಗೆ ಮೋಶೆಯು ಕರ್ತನ ಬಳಿಗೆ ತಿರಿಗಿ ಹೋಗಿ ಹೇಳಿದ್ದೇನಂದರೆ, ಅಯ್ಯೋ, ಈ ಜನರು ದೊಡ್ಡ ಪಾಪವನ್ನು ಮಾಡಿದ್ದಾರೆ. ಅವರು ತಮಗೆ ಚಿನ್ನದ ದೇವರುಗಳನ್ನು ಮಾಡಿಕೊಂಡಿದ್ದಾರೆ.
Heege mosheyu kartana balige tirigi hogi heliddenandare, ayyo, ee janaru dodda paapavannu maadiddaare. Avaru tamage chinnada devarugalannu maadikondiddaare.
Exodus 32:31 in English
- King James Version (KJV)
- And Moses returned unto the LORD, and said, Oh, this people have sinned a great sin, and have made them gods of gold.
- World English Bible (WEB)
- Moses returned to the LORD, and said, “Oh, this people have sinned a great sin, and have made themselves gods of gold.
- American Standard Version (ASV)
- And Moses returned unto Jehovah, and said, Oh, this people have sinned a great sin, and have made them gods of gold.
- Bible in Basic English (BBE)
- Then Moses went back to the Lord and said, This people has done a great sin, making themselves a god of gold;
- Darby Translation (DBY)
- And Moses returned to Jehovah, and said, Alas, this people has sinned a great sin, and they have made themselves a god of gold!
- Webster's Bible (WBS)
- And Moses returned to the LORD, and said, Oh, this people have sinned a great sin, and have made them gods of gold.
- Young's Literal Translation (YLT)
- And Moses turneth back unto Jehovah, and saith, 'Oh this people hath sinned a great sin, that they make to themselves a god of gold;
Read in context
- 29ಮೋಶೆಯು--ಈ ದಿನ ಆತನು ನಿಮ್ಮ ಮೇಲೆ ತನ್ನ ಆಶೀರ್ವಾದವನ್ನು ಅನುಗ್ರಹಿಸುವಂತೆ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಮಗನಿಗೋಸ್ಕರವೂ ತನ್ನ ಸಹೋದರನಿಗೋಸ್ಕರವೂ ಈ ದಿನ ಕರ್ತನಿಗೆ ಪ್ರತಿಷ್ಠೆ ಮಾಡಿಕೊಳ್ಳಲಿ ಅಂದನು.
- 30ಮರುದಿನದಲ್ಲಿ ಆದದ್ದೇನಂದರೆ, ಮೋಶೆಯು ಜನರಿಗೆ-ನೀವು ದೊಡ್ಡ ಪಾಪವನ್ನು ಮಾಡಿದ್ದೀರಿ, (ಆದದರಿಂದ) ಈಗ ನಾನು ಕರ್ತನ ಬಳಿಗೆ ಹೋಗು ವೆನು, ಒಂದು ವೇಳೆ ನಿಮ್ಮ ಪಾಪಕ್ಕಾಗಿ ನಾನು ಪ್ರಾಯ ಶ್ಚಿತ್ತ ಮಾಡಿಯೇನು ಅಂದನು.
- 31ಹೀಗೆ ಮೋಶೆಯು ಕರ್ತನ ಬಳಿಗೆ ತಿರಿಗಿ ಹೋಗಿ ಹೇಳಿದ್ದೇನಂದರೆ, ಅಯ್ಯೋ, ಈ ಜನರು ದೊಡ್ಡ ಪಾಪವನ್ನು ಮಾಡಿದ್ದಾರೆ. ಅವರು ತಮಗೆ ಚಿನ್ನದ ದೇವರುಗಳನ್ನು ಮಾಡಿಕೊಂಡಿದ್ದಾರೆ.
- 32ಆದಾಗ್ಯೂ ಈಗ ನೀನು ಅವರ ಪಾಪವನ್ನು ಕ್ಷಮಿಸಬೇಕು. ಇಲ್ಲ ವಾದರೆ ನೀನು ಬರೆದ ನಿನ್ನ ಪುಸ್ತಕದಿಂದ ನನ್ನ ಹೆಸರನ್ನು ಅಳಿಸಿಬಿಡು ಎಂದು ಬೇಡಿಕೊಂಡನು.
- 33ಅದಕ್ಕೆ ಕರ್ತನು ಮೋಶೆಗೆ--ನನಗೆ ವಿರೋಧ ವಾಗಿ ಪಾಪಮಾಡಿದವನ ಹೆಸರನ್ನೇ ನಾನು ನನ್ನ ಪುಸ್ತಕದಿಂದ ಅಳಿಸಿಬಿಡುವೆನು.
Cross references
- Exodus 20:23 ವಿಮೋಚನಕಾಂಡ 20:23ನನ್ನ ಹೊರತಾಗಿ ಬೆಳ್ಳಿ ಬಂಗಾರದ ದೇವರುಗಳನ್ನೂ ನೀವು ಮಾಡಿಕೊಳ್ಳಬಾರದು.
- Exodus 32:30 ವಿಮೋಚನಕಾಂಡ 32:30ಮರುದಿನದಲ್ಲಿ ಆದದ್ದೇನಂದರೆ, ಮೋಶೆಯು ಜನರಿಗೆ-ನೀವು ದೊಡ್ಡ ಪಾಪವನ್ನು ಮಾಡಿದ್ದೀರಿ, (ಆದದರಿಂದ) ಈಗ ನಾನು ಕರ್ತನ ಬಳಿಗೆ ಹೋಗು ವೆನು, ಒಂದು ವೇಳೆ ನಿಮ್ಮ ಪಾಪಕ್ಕಾಗಿ ನಾನು ಪ್ರಾಯ ಶ್ಚಿತ್ತ ಮಾಡಿಯೇನು ಅಂದನು.
- Daniel 9:8 ದಾನಿಯೇಲನು 9:8ಓ ಕರ್ತನೇ, ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದರಿಂದ ನಮ್ಮ ಅರಸರಿಗೂ ಪ್ರಧಾ ನರಿಗೂ ಮತ್ತು ನಮ್ಮ ತಂದೆಗಳಿಗೂ ನಮಗೂ ನಾಚಿಕೆಯ ಮುಖಗಳಿವೆ.
- Daniel 9:11 ದಾನಿಯೇಲನು 9:11ಹೌದು, ಎಲ್ಲಾ ಇಸ್ರಾಯೇಲ್ಯರು ನಿನ್ನ ನ್ಯಾಯ ಪ್ರಮಾಣವನ್ನು ವಿಾರಿ ನಿನ್ನ ಸ್ವರಕ್ಕೆ ಕಿವಿಗೊಡದೆ ತೊಲಗಿದ್ದದರಿಂದ ಶಾಪವು ದೇವರ ಸೇವಕನಾದ ಮೋಶೆಯು ನ್ಯಾಯ ಪ್ರಮಾಣದಲ್ಲಿ ಬರೆದ ಆಣೆಯು, ಆತನಿಗೆ ವಿರುದ್ಧವಾಗಿ ನಾವು ಮಾಡಿದ ಪಾಪದ ನಿಮಿತ್ತ ನಮ್ಮ ಮೇಲೆ ಹೊಯ್ಯಲ್ಪಟ್ಟಿದೆ.
- Deuteronomy 9:18–19 ಧರ್ಮೋಪದೇಶಕಾಂಡ 9:18–19ಆ ಮೇಲೆ ನೀವು ಮಾಡಿದ ಎಲ್ಲಾ ಪಾಪಗಳ ನಿಮಿತ್ತವೂ ನೀವು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನುಮಾಡಿ ಆತನಿಗೆ ಕೋಪವನ್ನೆಬ್ಬಿಸಿದ ನಿಮಿತ್ತವೂ ಮುಂಚಿನಂತೆ ನಾಲ್ವತ್ತು ಹಗಲು ನಾಲ್ವತ್ತು ರಾತ್ರಿ ರೊಟ್ಟಿ ತಿನ್ನದೆ, ನೀರು ಕುಡಿಯದೆ, ಕರ್ತನ ಮುಂದೆ ನಾನು ಬಿದ್ದಿದ್ದೆನು. ಕರ್ತನು ನಿಮ್ಮನ್ನು ನಾಶಮಾಡುವ ಹಾಗೆ ನಿಮ್ಮ ಮೇಲೆ ಮಾಡುವ ಕೋಪ ರೌದ್ರಗಳಿಗೆ ಹೆದರಿದೆನು; ಆ ಕಾಲದಲ್ಲಿಯೂ ಕರ್ತನು ನನ್ನ ಪ್ರಾರ್ಥನೆ ಯನ್ನು ಕೇಳಿದನು.
- Nehemiah 9:33 ನೆಹೆಮೀಯ 9:33ಆದರೆ ನೀನು ನಮ್ಮ ಮೇಲೆ ಬರಮಾಡಿದ ಎಲ್ಲಾದರಲ್ಲಿ ನೀತಿಪರನಾಗಿದ್ದಿ. ಯಾಕಂದರೆ ನೀನು ಮಾಡಿದ್ದು ಸತ್ಯವಾದದ್ದು; ಆದರೆ ನಾವು ದುಷ್ಟರಾಗಿ ನಡೆದೆವು.
- Ezra 9:15 ಎಜ್ರನು 9:15ಇಸ್ರಾಯೇಲ್ ದೇವ ರಾಗಿರುವ ಕರ್ತನೇ, ನೀನು ನೀತಿವಂತನಾಗಿದ್ದೀ; ಇಂದಿನ ಪ್ರಕಾರ ನಾವು ತಪ್ಪಿಸಿಕೊಂಡವರಾಗಿ ಉಳಿ ದಿದ್ದೇವೆ. ಇಗೋ, ನಾವು ನಿನ್ನ ಮುಂದೆ ನಮ್ಮ ಅಪರಾಧಗಳಲ್ಲಿದ್ದೇವೆ. ಇದರ ನಿಮಿತ್ತವಾಗಿ ನಿನ್ನ ಮುಂದೆ ನಿಲ್ಲಲಾರದವರಾಗಿದ್ದೇವೆ.
- Exodus 34:28 ವಿಮೋಚನಕಾಂಡ 34:28ಮೋಶೆಯು ನಾಲ್ವತ್ತು ಹಗಲು ನಾಲ್ವತ್ತು ರಾತ್ರಿ ರೊಟ್ಟಿಯನ್ನು ತಿನ್ನದೆ ನೀರನ್ನು ಕುಡಿಯದೆ ಅಲ್ಲಿ ಕರ್ತನ ಸಂಗಡ ಇದ್ದನು. ಆತನು ಒಡಂಬಡಿಕೆಯ ವಾಕ್ಯಗಳಾದ ಹತ್ತು ಆಜ್ಞೆಗಳನ್ನು ಹಲಗೆಗಳ ಮೇಲೆ ಬರೆದನು.
- Daniel 9:5 ದಾನಿಯೇಲನು 9:5ನಾವು ಪಾಪ ಅಕ್ರಮವನ್ನು ಮಾಡಿದ್ದೇವೆ; ಇದಲ್ಲದೆ ಕೆಟ್ಟವರಾಗಿ ನಡೆದು ತಿರುಗಿಬಿದ್ದಿದ್ದೇವೆ; ಅಂದರೆ ನಿನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಬಿಟ್ಟುಹೋಗಿದ್ದೇವೆ.
- Ezra 9:6–7 ಎಜ್ರನು 9:6–7ನನ್ನ ದೇವರೇ, ನಾನು ನನ್ನ ಮುಖವನ್ನು ನಿನ್ನ ಮುಂದೆ ಎತ್ತುವಹಾಗೆ ಲಜ್ಜೆಯಿಂದ ನಾಚಿಕೆಪಡು ತ್ತೇನೆ. ನನ್ನ ದೇವರೇ, ನಮ್ಮ ಅಕ್ರಮಗಳು ನಮ್ಮ ತಲೆಯ ಮೇಲೆ ಹೆಚ್ಚಿದವು; ನಮ್ಮ ಅಪರಾಧವು ಆಕಾಶದ ಪರ್ಯಂತರ ಬೆಳೆಯಿತು. ನಮ್ಮ ತಂದೆಗಳ ದಿವಸಗಳು ಮೊದಲುಗೊ ಂಡು ಈ ದಿವಸದ ವರೆಗೆ ದೊಡ್ಡ ಅಪರಾಧಕ್ಕೊಳಗಾಗಿದ್ದೇವೆ. ಇಂದಿನ ಪ್ರಕಾರವೇ ನಾವು ಈ ದೇಶಗಳ ಅರಸುಗಳ ಕೈಗೆ ಒಪ್ಪಿಸಲ್ಪಟ್ಟು ನಮ್ಮ ಅಕ್ರಮಗಳಿಗೋಸ್ಕರ ನಾವೂ ನಮ್ಮ ಅರಸುಗಳೂ ನಮ್ಮ ಯಾಜಕರೂ ಕತ್ತಿಗೂ ಸೆರೆಗೂ ಕೊಳ್ಳೆಗೂ ನಾಚಿಕೆಗೂ ಗುರಿಯಾಗಿದ್ದೇವೆ
- Exodus 20:4 ವಿಮೋಚನಕಾಂಡ 20:4ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು.