Exodus · chapter 33 · verse 2
Exodus 33:2 in Kannada
ನಾನು ನಿನ್ನ ಮುಂದೆ ದೂತನನ್ನು ಕಳುಹಿಸಿ ಕಾನಾನ್ಯರನ್ನೂ ಅಮೋರಿಯರನ್ನೂ ಹಿತ್ತಿಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಹೊರಡಿಸಿ ಬಿಡುವೆನು.
Naanu ninna munde dootanannu kaluhisi kaanaanyarannoo amoriyarannoo hittiyarannoo perijeeyarannoo hivviyarannoo yeboosiyarannoo horadisi biduvenu.
Exodus 33:2 in English
- King James Version (KJV)
- And I will send an angel before thee; and I will drive out the Canaanite, the Amorite, and the Hittite, and the Perizzite, the Hivite, and the Jebusite:
- World English Bible (WEB)
- I will send an angel before you; and I will drive out the Canaanite, the Amorite, and the Hittite, and the Perizzite, the Hivite, and the Jebusite.
- American Standard Version (ASV)
- and I will send an angel before thee; and I will drive out the Canaanite, the Amorite, and the Hittite, and the Perizzite, the Hivite, and the Jebusite:
- Bible in Basic English (BBE)
- And I will send an angel before you, driving out the Canaanite and the Amorite and the Hittite and the Perizzite and the Hivite and the Jebusite:
- Darby Translation (DBY)
- (and I will send an angel before thee, and dispossess the Canaanite, the Amorite, and the Hittite, and the Perizzite, the Hivite, and the Jebusite,)
- Webster's Bible (WBS)
- And I will send an angel before thee; and I will drive out the Canaanite, the Amorite, and the Hittite, and the Perizzite, the Hivite, and the Jebusite:
- Young's Literal Translation (YLT)
- (and I have sent before thee a messenger, and have cast out the Canaanite, the Amorite, and the Hittite, and the Perizzite, the Hivite, and the Jebusite,)
Read in context
- 1ಕರ್ತನು ಮೋಶೆಗೆ--ನೀನು ಐಗುಪ್ತ ದೇಶದಿಂದ ಬರಮಾಡಿದ ಜನರ ಸಂಗಡ ಈ ಸ್ಥಳವನ್ನು ಬಿಟ್ಟು ನಾನು ಅಬ್ರಹಾಮ್ ಇಸಾಕ್ ಯಾಕೋಬರಿಗೂ--ನಿಮ್ಮ ಸಂತತಿಗೆ ಅದನ್ನು ಕೊಡು ವೆನು ಎಂದು ಹೇಳಿ ಪ್ರಮಾಣಮಾಡಿದ ದೇಶಕ್ಕೆ ಹೋಗು.
- 2ನಾನು ನಿನ್ನ ಮುಂದೆ ದೂತನನ್ನು ಕಳುಹಿಸಿ ಕಾನಾನ್ಯರನ್ನೂ ಅಮೋರಿಯರನ್ನೂ ಹಿತ್ತಿಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಹೊರಡಿಸಿ ಬಿಡುವೆನು.
- 3ಹಾಲೂ ಜೇನೂ ಹರಿಯುವ ದೇಶಕ್ಕೆ ಹೋಗು, ನಾನು ನಿಮ್ಮ ಮಧ್ಯದಲ್ಲಿ ಹೋಗು ವದಿಲ್ಲ. ನೀವು ಬಗ್ಗದ ಕುತ್ತಿಗೆಯುಳ್ಳ ಜನವಾಗಿದ್ದೀರಿ; ಮಾರ್ಗದಲ್ಲಿ ನಿಮ್ಮನ್ನು ನಾನು ಸಂಹರಿಸೇನು ಅಂದನು.
- 4ಜನರು ಈ ಕಠಿಣವಾದ ಮಾತುಗಳನ್ನು ಕೇಳಿ ದುಃಖಪಟ್ಟರು. ಯಾರೂ ತಮ್ಮ ಆಭರಣಗಳನ್ನು ಹಾಕಿ ಕೊಳ್ಳಲಿಲ್ಲ.
Cross references
- Joshua 24:11 ಯೆಹೋಶುವ 24:11ನೀವು ಯೊರ್ದನನ್ನು ದಾಟಿ ಯೆರಿಕೋವಿಗೆ ಬಂದಿರಿ. ಯೆರಿಕೋವಿನ ನಿವಾಸಿ ಗಳೂ ಅಮೋರಿಯರೂ ಪೆರಿಜ್ಜೀಯರೂ ಕಾನಾನ್ಯರೂ ಹಿತ್ತಿಯರೂ ಗಿರ್ಗಾಷಿಯರೂ ಹಿವ್ವಿಯರೂ ಯೆಬೂಸಿ ಯರೂ ನಿಮ್ಮ ಸಂಗಡ ಯುದ್ಧಮಾಡಿದರು. ಆದರೆ ನಾನು ಅವರನ್ನೂ ನಿಮ್ಮ ಕೈಗೆ ಒಪ್ಪಿಸಿದೆನು.
- Exodus 32:34 ವಿಮೋಚನಕಾಂಡ 32:34ಆದರೆ ಈಗ ನೀನು ಹೋರಟು ನಾನು ನಿನಗೆ ಹೇಳಿದ ಸ್ಥಳಕ್ಕೆ ಜನರನ್ನು ಕರೆದುಕೊಂಡು ಹೋಗು; ಇಗೋ, ನನ್ನ ದೂತನು ನಿನ್ನ ಮುಂದೆ ಹೋಗುವನು. ಆದಾಗ್ಯೂ ನಾನು ಶಿಕ್ಷಿಸುವ ದಿನದಲ್ಲಿ ಅವರ ಪಾಪಕ್ಕೆ ತಕ್ಕಂತೆ ಶಿಕ್ಷಿಸುವೆನು.ಹೀಗೆ ಜನರ ಪ್ರೇರಣೆಯಿಂದ ಆರೋನನು ಕರುವನ್ನು ಮಾಡಿದ್ದರಿಂದ ಕರ್ತನು ಜನರನ್ನು ಬಾಧಿಸಿದನು.
- Exodus 3:8 ವಿಮೋಚನಕಾಂಡ 3:8ಆದಕಾರಣ ಅವರನ್ನು ಐಗುಪ್ತ್ಯರ ಕೈಯೊ ಳಗಿಂದ ಬಿಡುಗಡೆ ಮಾಡುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡಿಸಿ ಕೊಂಡು ಹೋಗುವದಕ್ಕೂ ಇಳಿದು ಬಂದಿದ್ದೇನೆ.
- Exodus 23:20 ವಿಮೋಚನಕಾಂಡ 23:20ಇಗೋ, ಮಾರ್ಗದಲ್ಲಿ ನಿಮ್ಮನ್ನು ಕಾಪಾಡುವದ ಕ್ಕೋಸ್ಕರವೂ ನಾನು ಸಿದ್ಧಮಾಡಿದ ಸ್ಥಳಕ್ಕೆ ನಿಮ್ಮನ್ನು ತರುವದಕ್ಕೋಸ್ಕರವೂ ಒಬ್ಬ ದೂತನನ್ನು ನಿಮ್ಮ ಮುಂದೆ ಕಳುಹಿಸುತ್ತೇನೆ.
- Exodus 23:27–31 ವಿಮೋಚನಕಾಂಡ 23:27–31ನನ್ನ ಭಯವನ್ನು ನಿಮ್ಮ ಮುಂದೆ ಕಳುಹಿಸಿ ನೀವು ಸೇರುವ ಜನರನ್ನೆಲ್ಲಾ ನಾಶಮಾಡುವೆನು ಮತ್ತು ನಿಮ್ಮನ್ನು ವಿರೋಧಿಸುವವರೆಲ್ಲಾ ನಿಮಗೆ ಬೆನ್ನು ತೋರಿ ಸುವಂತೆ ಮಾಡುವೆನು. ಹಿವ್ವಿಯರೂ ಕಾನಾನ್ಯರೂ ಹಿತ್ತಿಯರೂ ನಿಮ್ಮ ಎದುರಿನಿಂದ ಓಡಿಹೋಗುವಂತೆ ಕಡಜದ ಹುಳಗಳನ್ನು ನಿಮ್ಮ ಮುಂದೆ ಕಳುಹಿಸುವೆನು. ಭೂಮಿಯು ಬರಿದಾಗದಂತೆಯೂ ಅಡವಿಯ ಮೃಗ ಗಳು ನಿಮ್ಮ ವಿರೋಧವಾಗಿ ಹೆಚ್ಚಾಗದ ಹಾಗೆಯೂ ಅವುಗಳನ್ನು ಒಂದೇ ವರುಷದಲ್ಲಿ ನಿಮ್ಮ ಎದುರಿನಿಂದ ಓಡಿಸದೆ ನೀವು ಅಭಿವೃದ್ಧಿಯಾಗಿ ದೇಶವನ್ನು ಸ್ವತಂತ್ರಿ ಸಿಕೊಳ್ಳುವ ವರೆಗೆ ಸ್ವಲ್ಪಸ್ವಲ್ಪವಾಗಿ ಹೊರಡಿಸುವೆನು. ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ವರೆಗೂ ಅರಣ್ಯದಿಂದ ನದಿಯ ವರೆಗೂ ನಿಮ್ಮ ಮೇರೆ ಗಳನ್ನು ನೇಮಿಸುವೆನು; ದೇಶದ ನಿವಾಸಿಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುವೆನು. ನೀವು ಅವರನ್ನು ನಿಮ್ಮ ಎದುರಿ ನಿಂದ ಓಡಿಸಿಬಿಡುವಿರಿ.
- Deuteronomy 7:22 ಧರ್ಮೋಪದೇಶಕಾಂಡ 7:22ನಿನ್ನ ದೇವರಾದ ಕರ್ತನು ಆ ಜನಾಂಗಗಳನ್ನು ನಿನ್ನ ಮುಂದೆ ಸ್ವಲ್ಪ ಸ್ವಲ್ಪವಾಗಿ ಹೊರಗೆ ಹಾಕುವನು. ಅಡವಿಯ ಮೃಗಗಳು ನಿನ್ನ ಮೇಲೆ ಹೆಚ್ಚದ ಹಾಗೆ ಅವರನ್ನು ತ್ವರೆಯಾಗಿ ಸಂಹರಿಸಬಾರದು.
- Exodus 3:17 ವಿಮೋಚನಕಾಂಡ 3:17ಐಗುಪ್ತದಲ್ಲಿ ನಿಮಗುಂಟಾಗಿರುವ ಸಂಕಟದಿಂದ ಬಿಡಿಸಿ ನಿಮ್ಮನ್ನು ಕಾನಾನ್ಯರೂ ಹಿತ್ತಿಯರೂ ಅಮೋರಿಯರೂ ಪೆರಿಜೀಯರೂ ಹಿವ್ವಿಯರೂ ಯೆಬೂಸಿಯರೂ ಇರುವ ಹಾಲೂ ಜೇನೂ ಹರಿಯುವ ದೇಶಕ್ಕೆ ಬರಮಾಡುವೆನೆಂದು ಹೇಳಿದ್ದೇನೆ ಎಂದು ಅವರಿಗೆ ಹೇಳು.
- Exodus 34:11 ವಿಮೋಚನಕಾಂಡ 34:11ನಾನು ಈ ಹೊತ್ತು ನಿನಗೆ ಆಜ್ಞಾಪಿಸುವದನ್ನು ಅನುಸರಿಸು; ಇಗೋ, ಅಮೋರಿಯರನ್ನೂ ಕಾನಾನ್ಯ ರನ್ನೂ ಹಿತ್ತಿಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ನಿನ್ನ ಎದುರಿನಿಂದ ಹೊರಡಿಸಿ ಬಿಡುತ್ತೇನೆ.