Exodus · chapter 33 · verse 3
Exodus 33:3 in Kannada
ಹಾಲೂ ಜೇನೂ ಹರಿಯುವ ದೇಶಕ್ಕೆ ಹೋಗು, ನಾನು ನಿಮ್ಮ ಮಧ್ಯದಲ್ಲಿ ಹೋಗು ವದಿಲ್ಲ. ನೀವು ಬಗ್ಗದ ಕುತ್ತಿಗೆಯುಳ್ಳ ಜನವಾಗಿದ್ದೀರಿ; ಮಾರ್ಗದಲ್ಲಿ ನಿಮ್ಮನ್ನು ನಾನು ಸಂಹರಿಸೇನು ಅಂದನು.
Haaloo jenoo hariyuva deshakke hogu, naanu nimma madhyadalli hogu vadilla. Neevu baggada kuttigeyulla janavaagiddeeri; maargadalli nimmannu naanu sanharisenu andanu.
Exodus 33:3 in English
- King James Version (KJV)
- Unto a land flowing with milk and honey: for I will not go up in the midst of thee; for thou [art] a stiffnecked people: lest I consume thee in the way.
- World English Bible (WEB)
- Go to a land flowing with milk and honey; but I will not go up among you, for you are a stiff-necked people, lest I consume you on the way.”
- American Standard Version (ASV)
- unto a land flowing with milk and honey: for I will not go up in the midst of thee, for thou art a stiffnecked people, lest I consume thee in the way.
- Bible in Basic English (BBE)
- Go up to that land flowing with milk and honey; but I will not go up among you, for you are a stiff-necked people, for fear that I send destruction on you while you are on the way.
- Darby Translation (DBY)
- into a land flowing with milk and honey; for I will not go up in the midst of thee, for thou art a stiff-necked people, — lest I consume thee on the way.
- Webster's Bible (WBS)
- To a land flowing with milk and honey: for I will not go up in the midst of thee; for thou [art] a stiff-necked people: lest I consume thee in the way.
- Young's Literal Translation (YLT)
- unto a land flowing with milk and honey, for I do not go up in thy midst, for thou [art] a stiff-necked people — lest I consume thee in the way.'
Read in context
- 1ಕರ್ತನು ಮೋಶೆಗೆ--ನೀನು ಐಗುಪ್ತ ದೇಶದಿಂದ ಬರಮಾಡಿದ ಜನರ ಸಂಗಡ ಈ ಸ್ಥಳವನ್ನು ಬಿಟ್ಟು ನಾನು ಅಬ್ರಹಾಮ್ ಇಸಾಕ್ ಯಾಕೋಬರಿಗೂ--ನಿಮ್ಮ ಸಂತತಿಗೆ ಅದನ್ನು ಕೊಡು ವೆನು ಎಂದು ಹೇಳಿ ಪ್ರಮಾಣಮಾಡಿದ ದೇಶಕ್ಕೆ ಹೋಗು.
- 2ನಾನು ನಿನ್ನ ಮುಂದೆ ದೂತನನ್ನು ಕಳುಹಿಸಿ ಕಾನಾನ್ಯರನ್ನೂ ಅಮೋರಿಯರನ್ನೂ ಹಿತ್ತಿಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಹೊರಡಿಸಿ ಬಿಡುವೆನು.
- 3ಹಾಲೂ ಜೇನೂ ಹರಿಯುವ ದೇಶಕ್ಕೆ ಹೋಗು, ನಾನು ನಿಮ್ಮ ಮಧ್ಯದಲ್ಲಿ ಹೋಗು ವದಿಲ್ಲ. ನೀವು ಬಗ್ಗದ ಕುತ್ತಿಗೆಯುಳ್ಳ ಜನವಾಗಿದ್ದೀರಿ; ಮಾರ್ಗದಲ್ಲಿ ನಿಮ್ಮನ್ನು ನಾನು ಸಂಹರಿಸೇನು ಅಂದನು.
- 4ಜನರು ಈ ಕಠಿಣವಾದ ಮಾತುಗಳನ್ನು ಕೇಳಿ ದುಃಖಪಟ್ಟರು. ಯಾರೂ ತಮ್ಮ ಆಭರಣಗಳನ್ನು ಹಾಕಿ ಕೊಳ್ಳಲಿಲ್ಲ.
- 5ಕರ್ತನು ಮೋಶೆಗೆ--ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳು--ನೀವು ಬಗ್ಗದ ಕುತ್ತಿಗೆಯುಳ್ಳ ಜನರು, ನಾನು ಕ್ಷಣಮಾತ್ರದಲ್ಲಿ ನಿಮ್ಮೊಳಗೆ ಬಂದು ನಿಮ್ಮನ್ನು ನಿರ್ಮೂಲಮಾಡುವೆನು. ಹೀಗಿರುವದರಿಂದ ನಾನು ನಿಮಗೆ ಏನು ಮಾಡಬೇಕೋ ಅದನ್ನು ತಿಳುಕೊಳ್ಳು ವಂತೆ ನಿಮ್ಮ ಆಭರಣಗಳನ್ನು ಈಗ ನಿಮ್ಮಿಂದ ತೆಗೆದು ಬಿಡಿರಿ ಎಂದು ಹೇಳು ಅಂದನು.
Cross references
- Exodus 32:9–10 ವಿಮೋಚನಕಾಂಡ 32:9–10ಇದಲ್ಲದೆ ಕರ್ತನು ಮೋಶೆಗೆ--ನಾನು ಈ ಜನ ರನ್ನು ನೋಡಿದ್ದೇನೆ; ಇಗೋ, ಇದು ಬೊಗ್ಗದ ಕುತ್ತಿಗೆಯುಳ್ಳ ಜನವೇ. ಹೀಗಿರುವದರಿಂದ ನನ್ನ ಕೋಪವು ಅವರ ಮೇಲೆ ಉರಿದು ಅವರನ್ನು ದಹಿಸಿ ಬಿಡುವಂತೆ ನನ್ನನ್ನು ಬಿಡು. ತರುವಾಯ ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡುವೆನು ಅಂದನು.
- Exodus 3:8 ವಿಮೋಚನಕಾಂಡ 3:8ಆದಕಾರಣ ಅವರನ್ನು ಐಗುಪ್ತ್ಯರ ಕೈಯೊ ಳಗಿಂದ ಬಿಡುಗಡೆ ಮಾಡುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡಿಸಿ ಕೊಂಡು ಹೋಗುವದಕ್ಕೂ ಇಳಿದು ಬಂದಿದ್ದೇನೆ.
- Deuteronomy 9:6–13 ಧರ್ಮೋಪದೇಶಕಾಂಡ 9:6–13ಹೀಗಿರುವದರಿಂದ ನಿನ್ನ ನೀತಿಗೋಸ್ಕರ ನಿನ್ನ ದೇವರಾದ ಕರ್ತನು ನಿನಗೆ ಈ ಉತ್ತಮ ದೇಶವನ್ನು ಸ್ವಾಧೀನಪಡಿಸಿಕೊಳ್ಳುವದಕ್ಕೆ ಕೊಡುವದಿಲ್ಲವೆಂದು ತಿಳಿದುಕೊಳ್ಳಬೇಕು; ನೀನು ಬಗ್ಗದ ಕುತ್ತಿಗೆಯುಳ್ಳ ಜನವೇ. ನೀನು ಅರಣ್ಯದಲ್ಲಿ ನಿನ್ನ ದೇವರಾದ ಕರ್ತನಿಗೆ ಕೋಪವನ್ನೆಬ್ಬಿಸಿದ್ದನ್ನು ಜ್ಞಾಪಕಮಾಡು, ಮರೆಯಬೇಡ; ನೀನು ಐಗುಪ್ತದೇಶದಿಂದ ಹೊರಟ ದಿವಸ ಮೊದಲು ಗೊಂಡು ಈ ಸ್ಥಳಕ್ಕೆ ಬರುವ ವರೆಗೆ ಕರ್ತನಿಗೆ ವಿರೋಧ ವಾಗಿ ತಿರುಗಿಬೀಳುತ್ತಿದ್ದಿರಿ. ಹೋರೇಬಿನಲ್ಲಿಯೂ ಕರ್ತನಿಗೆ ಕೋಪವನ್ನೆಬ್ಬಿಸಿದಾಗ ಕರ್ತನು ನಿಮ್ಮನ್ನು ನಾಶಮಾಡುವ ಹಾಗೆ ನಿಮ್ಮ ಮೇಲೆ ಸಿಟ್ಟುಮಾಡಿ ಕೊಂಡನು. ಆ ಕಲ್ಲಿನ ಹಲಗೆಗಳನ್ನು ಅಂದರೆ ಕರ್ತನು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯ ಹಲಗೆಗಳನ್ನು ತಕ್ಕೊಳ್ಳುವದಕ್ಕೆ ನಾನು ಬೆಟ್ಟದ ಮೇಲೆ ಏರಿದಾಗ ನಾಲ್ವತ್ತು ಹಗಲು ನಾಲ್ವತ್ತು ರಾತ್ರಿ ಬೆಟ್ಟದಲ್ಲಿದ್ದೆನು. ರೊಟ್ಟಿ ತಿನ್ನಲಿಲ್ಲ, ನೀರೂ ಕುಡಿಯಲಿಲ್ಲ; ಆಗ ದೇವರ ಬೆರಳಿನಿಂದ ಬರೆದ ಆ ಎರಡು ಕಲ್ಲಿನ ಹಲಗೆ ಗಳನ್ನು ಕರ್ತನು ನನಗೆ ಕೊಟ್ಟನು; ಕರ್ತನು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಸಭಾಕೂಟದ ದಿವಸದಲ್ಲಿ ಆಡಿದ ಮಾತುಗಳೆಲ್ಲಾ ಅವುಗಳಲ್ಲಿದ್ದವು. ನಾಲ್ವತ್ತು ಹಗಲು ನಾಲ್ವತ್ತು ರಾತ್ರಿಗಳಾದ ಮೇಲೆ ಕರ್ತನು ನನಗೆ ಒಡಂಬಡಿಕೆಯ ಹಲಗೆಗಳಾದ ಆ ಎರಡು ಕಲ್ಲಿನ ಹಲಗೆಗಳನ್ನು ಕೊಟ್ಟನು. ಆಗ ಕರ್ತನು--ಎದ್ದು ಇಲ್ಲಿಂದ ಬೇಗ ಇಳಿದು ಹೋಗು; ಯಾಕಂದರೆ ನೀನು ಐಗುಪ್ತದೇಶದೊಳಗಿಂದ ಬರ ಮಾಡಿದ ನಿನ್ನ ಜನರು ಕೆಟ್ಟುಹೋದರು; ನಾನು ಅವ ರಿಗೆ ಆಜ್ಞಾಪಿಸಿದ ಮಾರ್ಗವನ್ನು ಬಿಟ್ಟು ತಮಗೆ ಎರಕ ಹೊಯ್ದ ವಿಗ್ರಹವನ್ನು ಮಾಡಿಕೊಂಡರು ಎಂದು ನನಗೆ ಹೇಳಿದನು. ಇದಲ್ಲದೆ ಕರ್ತನು ನನಗೆ--ನಾನು ಈ ಜನವನ್ನು ನೋಡಿದ್ದೇನೆ; ಇಗೋ, ಇದು ಬಗ್ಗದ ಕುತ್ತಿಗೆಯುಳ್ಳ ಜನವೇ.
- Acts 7:51 ಅಪೊಸ್ತಲರ ಕೃತ್ಯಗಳು 7:51ಬಗ್ಗದ ಕುತ್ತಿಗೆಯುಳ್ಳವರೇ, ಹೃದಯದಲ್ಲಿಯೂ ಕಿವಿಗಳಲ್ಲಿಯೂ ಸುನ್ನತಿಯಿಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವು ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ.
- Jeremiah 11:5 ಯೆರೆಮೀಯ 11:5ಈ ದಿನ ಇರುವ ಹಾಗೆ ಹಾಲೂ ಜೇನೂ ಹರಿಯುವ ದೇಶವನ್ನು ಅವರಿಗೆ ಕೊಡುವದಕ್ಕೆ ನಿಮ್ಮ ತಂದೆಗಳಿಗೆ ಆಣೆ ಇಟ್ಟ ಪ್ರಮಾಣವನ್ನು ಈಡೇರಿಸುವೆನು ಎಂಬದೇ ಆಗ ನಾನು ಉತ್ತರಕೊಟ್ಟು--ಓ ಕರ್ತನೇ, ಹಾಗೆಯೇ ಆಗಲಿ ಅಂದೆನು.
- Exodus 33:15–17 ವಿಮೋಚನಕಾಂಡ 33:15–17ಮೋಶೆಯು ಆತನಿಗೆ--ನಿನ್ನ ಸನ್ನಿಧಾನವು ನನ್ನೊಂದಿಗೆ ಹೋಗದಿದ್ದರೆ ನಮ್ಮನ್ನು ಇಲ್ಲಿಂದ ಕರ ಕೊಂಡು ಹೋಗಬೇಡ. ನನಗೂ ನಿನ್ನ ಜನರಿಗೂ ನಿನ್ನ ದೃಷ್ಟಿಯಲ್ಲಿ ಕೃಪೆ ದೊರಕಿತೆಂದು ಯಾವದರಿಂದ ತಿಳಿದು ಬರುವದು? ನೀನು ನಮ್ಮೊಂದಿಗೆ ಹೋಗುವ ದರಿಂದ ಅಲ್ಲವೋ? ಹೀಗೆ ನಾನೂ ನಿನ್ನ ಜನರೂ ಭೂಮಿಯ ಮೇಲಿರುವ ಎಲ್ಲಾ ಜನರಿಂದ ಪ್ರತ್ಯೇಕ ವಾಗುವೆವು ಅಂದನು. ಅದಕ್ಕೆ ಕರ್ತನು ಮೋಶೆಗೆ--ನೀನು ಆಡಿದ ಈ ಮಾತಿನಂತೆಯೇ ನಾನು ಇದನ್ನು ಮಾಡುತ್ತೇನೆ. ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರಕಿತು. ನಾನು ನಿನ್ನನ್ನು ಹೆಸರಿನಿಂದ ತಿಳಿದಿದ್ದೇನೆ ಅಂದನು.
- Amos 3:13–14 ಆಮೋಸ 3:13–14ಸೈನ್ಯಗಳ ದೇವರಾದ ಕರ್ತನಾಗಿರುವ ದೇವರು ಹೇಳುವದೇನಂದರೆ--ನೀವು ಕೇಳಿ ಯಾಕೋಬಿನ ಮನೆತನದವರಿಗೆ ಸಾಕ್ಷಿಕೊಡಿರಿ. ಅದು--ನಾನು ಇಸ್ರಾಯೇಲಿನ ಅಪರಾಧಗಳನ್ನು ವಿಚಾರಿಸುವ ದಿನದಲ್ಲಿ ಬೇತೇಲಿನ ಯಜ್ಞವೇದಿಗಳನ್ನು ವಿಚಾರಿಸುವೆನು; ಯಜ್ಞವೇದಿಯ ಕೊಂಬುಗಳು ಕಡಿಯಲ್ಪಟ್ಟು ನೆಲಕ್ಕೆ ಉರುಳುವವು.ಚಳಿಗಾಲದ ಮನೆಯನ್ನು ಬೇಸಿಗೆಯ ಮನೆಯ ಸಂಗಡ ಹೊಡೆದು ಹಾಕುವೆನು. ಆಗ ದಂತಮಂದಿರಗಳು ನಾಶವಾಗು ವವು ಮತ್ತು ದೊಡ್ಡ ಮನೆಗಳು ಕೊನೆಗಾಣುವವು ಎಂದು ಕರ್ತನು ಹೇಳುತ್ತಾನೆ.
- Numbers 16:45 ಅರಣ್ಯಕಾಂಡ 16:45ನೀವು ಈ ಸಭೆಯ ಮಧ್ಯದಿಂದ ಎದ್ದು ಬನ್ನಿರಿ. ನಾನು ಅವರನ್ನು ಕ್ಷಣಮಾತ್ರದಲ್ಲಿ ದಹಿಸಿಬಿಡುತ್ತೇನೆ ಅಂದನು. ಆಗ ಅವರು ಬೋರಲು ಬಿದ್ದರು.
- Joshua 5:6 ಯೆಹೋಶುವ 5:6ಕರ್ತನ ಸ್ವರಕ್ಕೆ ವಿಧೇಯರಾಗದೆ ಹೋದದರಿಂದ ಐಗುಪ್ತದಿಂದ ಹೊರಟ ಯುದ್ಧದ ಮನುಷ್ಯರಾದ ಜನರೆಲ್ಲಾ ನಾಶವಾಗುವ ವರೆಗೂ ಇಸ್ರಾಯೇಲ್ ಮಕ್ಕಳು ನಾಲ್ವತ್ತು ವರುಷಗಳು ಅರಣ್ಯದಲ್ಲಿ ಅಲೆದಾಡು ತ್ತಿದ್ದರು; ಯಾಕಂದರೆ ನಮಗೆ ಕೊಡುವದಕ್ಕೆ ಕರ್ತನು ಅವರ ತಂದೆಗಳಿಗೆ ಆಣೆ ಇಟ್ಟ ದೇಶವನ್ನು ಅಂದರೆ ಹಾಲೂ ಜೇನೂ ಹರಿಯುವ ದೇಶವನ್ನು ಅವರಿಗೆ ತೋರಿಸುವದಿಲ್ಲ ಎಂದು ಕರ್ತನು ಅವರಿಗೆ ಆಣೆ ಇಟ್ಟಿದ್ದನು.
- Numbers 16:21 ಅರಣ್ಯಕಾಂಡ 16:21ಈ ಸಭೆಯ ಮಧ್ಯದೊಳಗಿಂದ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ. ನಾನು ಅವರನ್ನು ಕ್ಷಣಮಾತ್ರ ದಲ್ಲಿ ದಹಿಸಿಬಿಡುತ್ತೇನೆ ಅಂದನು.
- Ezekiel 33:13–16 ಯೆಹೆಜ್ಕೇಲನು 33:13–16ನಾನು ನೀತಿವಂತನಿಗೆ--ನೀನು ನಿಶ್ಚಯವಾಗಿ ಬದುಕುವಿ ಎಂದು ಹೇಳುವಾಗ--ಅವನು ಒಂದು ವೇಳೆ ಅವನ ಸ್ವಂತ ನೀತಿಯನ್ನು ನಂಬಿ ಅನ್ಯಾಯವನ್ನು ಮಾಡಿದರೆ ಅವನ ಎಲ್ಲಾ ನೀತಿಯು ಜ್ಞಾಪಕಮಾಡಿ ಕೊಳ್ಳಲ್ಪಡುವದಿಲ್ಲ; ಆದರೆ ಅವನು ಮಾಡಿದ ಅವನ ಅಕ್ರಮಗಳಿಗಾಗಿಯೇ ಅವನು ಸಾಯುತ್ತಾನೆ. ನಾನು ದುಷ್ಟನಿಗೆ--ನೀನು ನಿಶ್ಚಯ ವಾಗಿ ಸಾಯುವಿ ಎಂದು ಹೇಳುವಾಗ ಅವನು ಪಾಪ ದಿಂದ ತಿರುಗಿಕೊಂಡರೆ ಮತ್ತು ನ್ಯಾಯವನ್ನೂ ನೀತಿ ಯನ್ನೂ ಮಾಡಿದರೆ ದುಷ್ಟನು ತನ್ನ ಒತ್ತೆಯನ್ನು ಹಿಂದಕ್ಕೆ ಕೊಟ್ಟರೆ ಮತ್ತು ದೋಚಿಕೊಂಡದ್ದನ್ನು ತಿರುಗಿ ಕೊಟ್ಟು ಅನ್ಯಾಯವನ್ನು ಮಾಡದೆ ಜೀವದ ನಿಯಮಗಳಲ್ಲಿ ನಡೆದರೆ ಅವನು ಸಾಯದೆ ಖಂಡಿತ ವಾಗಿ ಬದುಕುವನು. ಅವನು ಮಾಡಿರುವ ಪಾಪ ಗಳಲ್ಲಿ ಒಂದಾದರೂ ಅವನಿಗೆ ವಿರೋಧವಾಗಿ ಜ್ಞಾಪ ಕಕ್ಕೆ ಬರುವದಿಲ್ಲ; ಅವನು ನ್ಯಾಯವನ್ನೂ ನೀತಿ ಯನ್ನೂ ಮಾಡಿದ್ದರಿಂದ ನಿಶ್ಚಯವಾಗಿ ಬದುಕುವನು.
- Exodus 23:21 ವಿಮೋಚನಕಾಂಡ 23:21ಆತನ ವಿಷಯದಲ್ಲಿ ಜಾಗ್ರತೆ ಯಾಗಿದ್ದು ಆತನ ಮಾತಿಗೆ ವಿಧೇಯನಾಗು. ಆತನಿಗೆ ಕೋಪವನ್ನೆಬ್ಬಿಸಬೇಡ; ನನ್ನ ಹೆಸರು ಆತನಲ್ಲಿ ಇರುವ ದರಿಂದ ಆತನು ನಿಮ್ಮ ದ್ರೋಹಗಳನ್ನು ಮನ್ನಿಸುವದಿಲ್ಲ.