Exodus · chapter 35 · verse 11
Exodus 35:11 in Kannada
ಅವು ಯಾವವಂದರೆ: ಗುಡಾರವನ್ನೂ ಅದರ ಡೇರೆಯನ್ನೂ ಅದರ ಹೊದಿಕೆಯನ್ನೂ ಅದರ ಕೊಂಡಿಗಳನ್ನೂ ಅದರ ಹಲಗೆಗಳನ್ನೂ ಅದರ ಅಗುಳಿಗಳನ್ನೂ ಅದರ ಸ್ತಂಭ ಗಳನ್ನೂ ಅದರ ಕುಳಿಗಳನ್ನೂ
Avu yaavavandare: gudaaravannoo adara dereyannoo adara hodikeyannoo adara kondigalannoo adara halagegalannoo adara aguligalannoo adara stambha galannoo adara kuligalannoo
Exodus 35:11 in English
- King James Version (KJV)
- The tabernacle, his tent, and his covering, his taches, and his boards, his bars, his pillars, and his sockets,
- World English Bible (WEB)
- the tabernacle, its outer covering, its roof, its clasps, its boards, its bars, its pillars, and its sockets;
- American Standard Version (ASV)
- the tabernacle, its tent, and its covering, its clasps, and its boards, its bars, its pillars, and its sockets;
- Bible in Basic English (BBE)
- The House and its tent and its cover, its hooks and its boards, its rods and its pillars and its bases;
- Darby Translation (DBY)
- the tabernacle, its tent, and its covering, its clasps, and its boards, its bars, its pillars, and its bases;
- Webster's Bible (WBS)
- The tabernacle, its tent, and its covering, its buttons, and its boards, its bars, its pillars, and its sockets,
- Young's Literal Translation (YLT)
- 'The tabernacle, its tent, and its covering, its hooks, and its boards, its bars, its pillars, and its sockets,
Read in context
- 9ಗೋಮೇಧಕ, ಎಫೋದ್ನ್ನು ಎದೆಯಲ್ಲಿಯೂ ಪದಕದಲ್ಲಿಯೂ ಕೂಡ್ರಿಸಲು ರತ್ನಗಳು ಇವೆ.
- 10ನಿಮ್ಮಲ್ಲಿ ಜ್ಞಾನದ ಹೃದಯವುಳ್ಳವರೆಲ್ಲರೂ ಬಂದು ಕರ್ತನು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಲಿ.
- 11ಅವು ಯಾವವಂದರೆ: ಗುಡಾರವನ್ನೂ ಅದರ ಡೇರೆಯನ್ನೂ ಅದರ ಹೊದಿಕೆಯನ್ನೂ ಅದರ ಕೊಂಡಿಗಳನ್ನೂ ಅದರ ಹಲಗೆಗಳನ್ನೂ ಅದರ ಅಗುಳಿಗಳನ್ನೂ ಅದರ ಸ್ತಂಭ ಗಳನ್ನೂ ಅದರ ಕುಳಿಗಳನ್ನೂ
- 12ಮಂಜೂಷವನ್ನೂ ಅದರ ಕೋಲುಗಳನ್ನೂ ಅವುಗಳೊಂದಿಗೆ ಕರುಣಾಸನ ವನ್ನೂ ಮರೆಮಾಡುವ ತೆರೆಯನ್ನೂ
- 13ಮೇಜನ್ನೂ ಅದರ ಕೋಲುಗಳನ್ನೂ ಅದರ ಎಲ್ಲಾ ಉಪಕರಣ ಗಳನ್ನೂ ಸಮ್ಮುಖದ ರೊಟ್ಟಿಯನ್ನೂ
Cross references
- Exodus 26:1–37 ವಿಮೋಚನಕಾಂಡ 26:1–37ಗುಡಾರವನ್ನು ಹತ್ತು ತೆರೆಗಳಿಂದ ಮಾಡ ಬೇಕು. ಅವು ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣಗ ಳಿಂದಲೂ ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳವು ಗಳಾಗಿಯೂ ಇರಬೇಕು. ಒಂದು ತೆರೆಯ ಉದ್ದವು ಇಪ್ಪತ್ತೆಂಟು ಮೊಳ, ಅದರ ಅಗಲವು ನಾಲ್ಕು ಮೊಳ ವಾಗಿರಬೇಕು ಪ್ರತಿಯೊಂದು ತೆರೆಯು ಒಂದೇ ಅಳತೆ ಯುಳ್ಳದ್ದಾಗಿರಬೇಕು. ಐದು ತೆರೆಗಳು ಒಂದಕ್ಕೊಂದು ಜೋಡಿಸಲ್ಪಟ್ಟಿರಬೇಕು, ಬೇರೆ ಐದು ತೆರೆಗಳು ಒಂದ ಕ್ಕೊಂದು ಜೋಡಿಸಲ್ಪಟ್ಟಿರಬೇಕು. ಒಂದು ತೆರೆಯ ಅಂಚಿನ ಕೊನೆಗೆ ಜೋಡಿಸುವ ಸ್ಥಳದಲ್ಲಿ ನೀಲಿ ನೂಲಿನ ಕುಣಿಕೆಗಳನ್ನು ಮಾಡಿ ಎರಡನೇ ಜೋಡನೆಯ ಕಡೇ ತೆರೆಯ ಕೊನೆಯಲ್ಲಿಯೂ ಹಾಗೆಯೇ ಮಾಡಬೇಕು. ಒಂದು ತೆರೆಯನ್ನು ಜೋಡಿಸುವ ಸ್ಥಳದಲ್ಲಿ ಇರುವ ಇನ್ನೊಂದು ತೆರೆಯ ಕೊನೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಬೇಕು. ಆ ಕುಣಿಕೆಗಳು ಒಂದಕ್ಕೊಂದು ಸರಿ ಯಾಗಿ ಹಿಡುಕೊಳ್ಳುವವುಗಳಾಗಿರಬೇಕು. ಬಂಗಾರದ ಐವತ್ತು ಕೊಂಡಿಗಳನ್ನು ಮಾಡಿ ಅವುಗಳಿಂದ ತೆರೆಗಳನ್ನು ಒಂದಕ್ಕೊಂದು ಜೋಡಿಸಬೇಕು. ಹೀಗೆ ಅದು ಒಂದೇ ಗುಡಾರವಾಗುವದು. ಇದಲ್ಲದೆ ನೀನು ಗುಡಾರದ ಮೇಲೆ ಹೊದಿಸು ವದಕ್ಕಾಗಿ ಮೇಕೆ ಕೂದಲಿನಿಂದ ಹನ್ನೊಂದು ತೆರೆಗಳನ್ನು ಮಾಡಬೇಕು. ಒಂದು ತೆರೆಯ ಉದ್ದವು ಮೂವತ್ತು ಮೊಳ, ಅದರ ಅಗಲವು ನಾಲ್ಕು ಮೊಳ, ಹನ್ನೊಂದು ತೆರೆಗಳಿಗೂ ಅದೇ ಅಳತೆ ಇರಬೇಕು. ಐದು ತೆರೆಗಳನ್ನು ಬೇರೆಯಾಗಿಯೂ ಆರು ತೆರೆಗಳನ್ನು ಬೇರೆಯಾಗಿಯೂ ಜೋಡಿಸಿ ಆರನೆಯ ತೆರೆಯನ್ನು ಗುಡಾರದ ಮುಂಭಾಗ ದಲ್ಲಿ ಇಮ್ಮಡಿ ಮಾಡಬೇಕು. ಜೋಡಿಸುವಾಗ ಕಡೇ ಒಂದು ತೆರೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಜೋಡಣೆಯಲ್ಲಿರುವ ಎರಡನೇ ತೆರೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಮಾಡಬೇಕು. ಇದಲ್ಲದೆ ಹಿತ್ತಾಳೆಯ ಐವತ್ತು ಕೊಂಡಿಗಳನ್ನು ಮಾಡಿ ಕೊಂಡಿಗಳನ್ನು ಕುಣಿಕೆಗಳಲ್ಲಿ ಸಿಕ್ಕಿಸಿ ಗುಡಾರವು ಒಂದಾಗುವ ಹಾಗೆ ಜೋಡಿಸಬೇಕು. ಗುಡಾರದ ತೆರೆಗಳಲ್ಲಿ ಮಿಕ್ಕಿ ಉಳಿದ ಅರ್ಧ ತೆರೆಯು ಗುಡಾರದ ಹಿಂಭಾಗದಲ್ಲಿ ತೂಗಾಡಲಿ. ಗುಡಾರದ ತೆರೆಗಳ ಉದ್ದದಲ್ಲಿ ಆಚೆ ಈಚೆ ಮಿಕ್ಕಿದ ಒಂದು ಮೊಳವು ಗುಡಾರದ ಈಚೆ ಆಚೆಯಲ್ಲಿ ಅದನ್ನು ಮುಚ್ಚುವದಕ್ಕಾಗಿ ತೂಗಾಡಲಿ. ಕೆಂಪು ಬಣ್ಣದ ಟಗರಿನ ಚರ್ಮಗಳಿಂದ ಗುಡಾರಕ್ಕೆ ಹೊದಿಕೆಯನ್ನೂ ಕಡಲು ಹಂದಿಯ ಚರ್ಮ ಗಳಿಂದ ಮೇಲು ಹೊದಿಕೆಯನ್ನೂ ಮಾಡಬೇಕು. ಗುಡಾರಕ್ಕೆ ಜಾಲೀ ಮರದಿಂದ ನಿಲ್ಲುವ ಹಲಿಗೆ ಗಳನ್ನು ಮಾಡಬೇಕು. ಹಲಿಗೆಯ ಉದ್ದವು ಹತ್ತು ಮೊಳ, ಅದರ ಅಗಲ ಒಂದುವರೆ ಮೊಳ ಇರಬೇಕು. ಒಂದು ಹಲಗೆಗೆ ಎರಡು ಕೂರುಗಳು ಇರಬೇಕು. ಅವುಗಳನ್ನು ಕ್ರಮವಾಗಿ ಇರಿಸುವಂತೆ ಅವು ಎದುರು ಬದುರಾಗಿ ಇರಬೇಕು. ಹೀಗೆ ಗುಡಾರದ ಎಲ್ಲಾ ಹಲಗೆ ಗಳಿಗೂ ನೀನು ಮಾಡಬೇಕು. ಗುಡಾರದ ದಕ್ಷಿಣ ದಿಕ್ಕಿನಲ್ಲಿ ಇಪ್ಪತ್ತು ಹಲಗೆಗಳನ್ನು ನೀನು ಮಾಡಬೇಕು. ಇಪ್ಪತ್ತು ಹಲಗೆಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಕುಳಿಗಳನ್ನು ಮಾಡಬೇಕು; ಒಂದೊಂದು ಹಲಗೆಯ ಕೆಳಗೆ ಅದರ ಎರಡು ಕೂರುಗಳಿಗಾಗಿ ಎರಡೆರಡು ಕುಳಿಗಳನ್ನು ಮಾಡಬೇಕು. ಉತ್ತರ ದಿಕ್ಕಿನಲ್ಲಿರುವ ಅದರ ಮತ್ತೊಂದು ಪಾರ್ಶ್ವಕ್ಕೋಸ್ಕರ ಇಪ್ಪತ್ತು ಹಲಗೆ ಗಳನ್ನೂ ಒಂದೊಂದು ಹಲಗೆಯ ಕೆಳಗೆ ಎರಡೆರಡು ಕೂರುಗಳಂತೆ ನಾಲ್ವತ್ತು ಬೆಳ್ಳಿಯ ಕೂರುಗಳನ್ನೂ ಗುಡಾರದ ಪಶ್ಚಿಮದ ಕಡೆಗೆ ಆರು ಹಲಗೆಗಳನ್ನೂ ಮಾಡಬೇಕು. ಗುಡಾರದ ಉಭಯ ಪಾರ್ಶ್ವಗಳ ಲ್ಲಿರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡ ಬೇಕು. ಇವುಗಳನ್ನು ಅಡಿಯಲ್ಲಿ ಜೋಡಿಸಿರಬೇಕು; ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿರ ಬೇಕು. ಹೀಗೆ ಅವು ಎರಡಾಗಿದ್ದು ಆ ಎರಡು ಮೂಲೆಗಳಲ್ಲಿ ಇರಬೇಕು. ಹೀಗೆ ಅವು ಎಂಟು ಹಲಗೆಗಳು; ಒಂದೊಂದು ಹಲಗೆಯ ಕೆಳಗೆ ಎರಡೆ ರಡು ಕುಳಿಗಳು ಇರುವದರಿಂದ ಅವುಗಳಿಗೆ ಹದಿನಾರು ಬೆಳ್ಳಿಯ ಕುಳಿಗಳು ಇರಬೇಕು. ಜಾಲೀ ಮರದಿಂದ ಅಗುಳಿಗಳನ್ನೂ ಮಾಡಬೇಕು. ಗುಡಾರದ ಒಂದು ಪಾರ್ಶ್ವದ ಹಲಗೆಗಳಿಗೆ ಐದು ಗುಡಾರದ ಇನ್ನೊಂದು ಪಾರ್ಶ್ವದ ಹಲಗೆಗಳಿಗೆ ಐದು ಅಗುಳಿ ಗಳನ್ನೂ ಗುಡಾರ ಹಿಂಭಾಗದ ಪಶ್ಚಿಮದ ಎರಡು ಕಡೆಗಳಲ್ಲಿ ಇರುವ ಹಲಗೆಗಳಿಗೆ ಐದು ಅಗುಳಿಗಳನ್ನೂ ಮಾಡಬೇಕು. ಮಧ್ಯದ ಅಗುಳಿಯು ಹಲಗೆಗಳ ನಡುವೆ ಒಂದು ಕಡೆಯಿಂದ ಮತ್ತೊಂದು ಕಡೆಯ ವರೆಗೆ ಮುಟ್ಟಿರಬೇಕು. ಆ ಹಲಗೆಗಳನ್ನು ಬಂಗಾರ ದಿಂದ ಹೊದಿಸಬೇಕು. ಅವುಗಳಿಗೆ ಬಂಗಾರದಿಂದ ಬಳೆಗಳನ್ನು ಮಾಡಬೇಕು, ಅಗುಳಿಗಳನ್ನೂ ಬಂಗಾರ ದಿಂದ ಹೊದಿಸಬೇಕು. ಹೀಗೆ ಬೆಟ್ಟದ ಮೇಲೆ ನಾನು ನಿನಗೆ ತೋರಿಸಿದ ಕ್ರಮದ ಪ್ರಕಾರ ಗುಡಾರ ವನ್ನು ನಿಲ್ಲಿಸಬೇಕು. ನೀಲಿ ಧೂಮ್ರ ರಕ್ತವರ್ಣಗಳಿರುವ ನಯವಾದ ನಾರುಗಳಿಂದ ಹೊಸೆದ ತೆರೆಯನ್ನು ಮಾಡಬೇಕು. ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು. ಅದನ್ನು ಬಂಗಾರದಿಂದ ಹೊದಿಸಿದ ಬಂಗಾರದ ಕೊಂಡಿಗಳಿದ್ದ ಬೆಳ್ಳಿಯ ನಾಲ್ಕು ಕುಳಿಗಳಲ್ಲಿ ಊರಿಕೊಂಡಿರುವ ನಾಲ್ಕು ಜಾಲೀ ಮರದ ಸ್ತಂಭಗಳಲ್ಲಿ ಅದನ್ನು ತೂಗುಹಾಕಬೇಕು. ಆ ತೆರೆಯನ್ನು ಕೊಂಡಿಗಳ ಕೆಳಗೆ ತೂಗುಹಾಕಿ ತೆರೆಯೊಳಗೆ ಸಾಕ್ಷಿ ಹಲಗೆಗಳ ಮಂಜೂಷವನ್ನು ತರ ಬೇಕು. ಪರಿಶುದ್ಧ ಸ್ಥಳವನ್ನೂ ಅತಿಪರಿಶುದ್ಧ ಸ್ಥಳವನ್ನೂ ಆ ತೆರೆಯು ವಿಂಗಡಿಸುವದು. ಅತಿಪರಿಶುದ್ಧ ಸ್ಥಳದಲ್ಲಿ ಸಾಕ್ಷಿ ಹಲಗೆಗಳ ಮಂಜೂಷದ ಮೇಲೆ ಕರುಣಾಸನ ವನ್ನು ಇಡಬೇಕು. ತೆರೆಯ ಹೊರಗೆ ಮೇಜನ್ನು ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇಡಬೇಕು. ಉತ್ತರ ಭಾಗದಲ್ಲಿ ಮೇಜನ್ನು ಇಡಬೇಕು. ಗುಡಾರದ ಬಾಗಲಿಗೆ ನೀಲಿ ಧೂಮ್ರ ರಕ್ತವರ್ಣ ಗಳಿರುವ ನಯವಾಗಿ ಹೊಸೆದ ನಾರುಗಳಿಂದ ಕಸೂತಿ ಕೆಲಸದ ತೆರೆಯನ್ನು ತೂಗುಹಾಕಬೇಕು.ಆ ತೆರೆಗೆ ಜಾಲೀ ಮರದ ಐದು ಸ್ತಂಭಗಳನ್ನು ಮಾಡಿ ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳ ಕೊಂಡಿಗಳು ಬಂಗಾರದವುಗಳಾಗಿರಬೇಕು. ಅವುಗಳಿಗೆ ಹಿತ್ತಾಳೆಯ ಐದು ಕುಳಿಗಳನ್ನು ಎರಕ ಹೊಯ್ಯಬೇಕು. ಆ ತೆರೆಗೆ ಜಾಲೀ ಮರದ ಐದು ಸ್ತಂಭಗಳನ್ನು ಮಾಡಿ ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳ ಕೊಂಡಿಗಳು ಬಂಗಾರದವುಗಳಾಗಿರಬೇಕು. ಅವುಗಳಿಗೆ ಹಿತ್ತಾಳೆಯ ಐದು ಕುಳಿಗಳನ್ನು ಎರಕ ಹೊಯ್ಯಬೇಕು.
- Exodus 36:8–34 ವಿಮೋಚನಕಾಂಡ 36:8–34ಹೀಗಿರಲಾಗಿ ಕೆಲಸದವರಲ್ಲಿ ಜ್ಞಾನ ಹೃದಯವುಳ್ಳ ಪ್ರತಿಯೊಬ್ಬನೂ ಗುಡಾರವನ್ನು ಹತ್ತು ತೆರೆಗಳಿಂದ ಮಾಡಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ಹೊಸೆದ ನಯವಾದ ನೂಲಿನಿಂದಲೂ ಕೌಶಲ್ಯದ ಕೆಲಸದಿಂದಲೂ ಕೆರೂಬಿಗಳನ್ನು ಮಾಡಿ ದನು. ಒಂದು ತೆರೆಯು ಇಪ್ಪತ್ತೆಂಟು ಮೊಳ ಉದ್ದ ವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು. ತೆರೆಗಳೆಲ್ಲಾ ಒಂದೇ ಅಳತೆಯವುಗಳಾಗಿದ್ದವು. ಅವನು ಐದು ತೆರೆಗಳನ್ನು ಒಂದಕ್ಕೊಂದು ಜೋಡಿ ಸಿದನು, ಬೇರೆ ಐದು ತೆರೆಗಳನ್ನೂ ಒಂದಕ್ಕೊಂದು ಜೋಡಿಸಿದನು. ಈ ಎರಡು ಜೋಡನೆಗಳಲ್ಲಿ ಒಂದೊಂದರ ಕೊನೇ ಬಟ್ಟೆಯ ಅಂಚಿನಲ್ಲಿ ನೀಲಿ ದಾರದಿಂದ ಕುಣಿಕೆಗಳನ್ನು ಮಾಡಿದರು; ಒಂದು ತೆರೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಿ ಇನ್ನೊಂದು ತೆರೆಯ ಅಂಚನ್ನು ಜೋಡಿಸುವ ಸ್ಥಳದಲ್ಲಿ ಐವತ್ತು ಕುಣಿಕೆಗಳನ್ನು ಮಾಡಿದನು. ಆ ಕುಣಿಕೆಗಳು ಒಂದು ತೆರೆಯನ್ನು ಮತ್ತೊಂದು ತೆರೆಯು ಹಿಡಿದುಕೊಳ್ಳುವಂತೆ ಮಾಡಿದನು. ಅವನು ಚಿನ್ನದ ಐವತ್ತು ಕೊಂಡಿಗಳನ್ನು ಮಾಡಿ ಆ ಕೊಂಡಿಗಳಿಂದ ತೆರೆಗಳನ್ನು ಒಂದ ಕ್ಕೊಂದಾಗಿ ಜೋಡಿಸಿದನು. ಹೀಗೆ ಅದು ಒಂದೇ ಗುಡಾರವಾಯಿತು. ಈ ಗುಡಾರದ ಮೇಲಿನ ಡೇರೆಗೋಸ್ಕರ ಅವನು ಮೇಕೆಯ ಕೂದಲಿನ ಹನ್ನೊಂದು ತೆರೆಗಳನ್ನು ಮಾಡಿ ಸಿದನು. ಒಂದು ತೆರೆಯು ಮೂವತ್ತು ಮೊಳ ಉದ್ದ ವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು. ಹನ್ನೊಂದು ತೆರೆಗಳೂ ಒಂದೇ ಅಳತೆಯಾಗಿದ್ದವು. ಅವನು ಐದು ತೆರೆಗಳನ್ನು ಬೇರೆಯಾಗಿಯೂ ಆರು ತೆರೆಗಳನ್ನು ಬೇರೆಯಾಗಿಯೂ ಜೋಡಿಸಿದನು. ಅವನು ತೆರೆಯ ಕೊನೇ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಎರಡನೆಯ ತೆರೆಯನ್ನು ಜೋಡಿಸುವ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಮಾಡಿದನು. ಅದು ಒಂದೇ ಡೇರೆ ಆಗುವಂತೆ ಅವುಗಳ ಜೋಡ ಣೆಗೆ ಅವನು ಐವತ್ತು ಹಿತ್ತಾಳೆಯ ಕೊಂಡಿಗಳನ್ನು ಮಾಡಿದನು. ಅವನು ಆ ಡೇರೆಗಾಗಿ ಕೆಂಪು ಬಣ್ಣದಲ್ಲಿ ಅದ್ದಿ ತೆಗೆದ ಟಗರುಗಳ ಚರ್ಮದ ಹೊದಿಕೆಯನ್ನು ಮಾಡಿದನು. ಅದರ ಮೇಲೆ ಕಡಲ ಹಂದಿಯ ಚರ್ಮದ ಮೇಲ್ಹೊದಿಕೆಯನ್ನು ಮಾಡಿದನು. ಗುಡಾರವು ನಿಂತುಕೊಂಡಿರುವದಕ್ಕೆ ಅವನು ಜಾಲೀ ಮರದಿಂದ ಹಲಗೆಗಳನ್ನು ಮಾಡಿದನು. ಒಂದು ಹಲಗೆಯ ಉದ್ದಳತೆ ಹತ್ತು ಮೊಳದ್ದಾಗಿಯೂಆ ಹಲಗೆಯ ಅಗಲಳತೆ ಒಂದುವರೆ ಮೊಳದ್ದಾಗಿಯೂ ಇತ್ತು. ಒಂದು ಹಲಗೆಗೆ ಒಂದಕ್ಕೊಂದು ಸರಿಯಾದ ಅಂತರದಲ್ಲಿ ಎರಡು ಕೈಗಳನ್ನು ಮಾಡಿದನು; ಅದೇ ಪ್ರಕಾರ ಅವನು ಗುಡಾರದ ಎಲ್ಲಾ ಹಲಗೆಗಳಿಗೆ ಮಾಡಿದನು. ಅವನು ಗುಡಾರಕ್ಕೋಸ್ಕರ ಹಲಗೆ ಗಳನ್ನು ಮಾಡಿದನು. ದಕ್ಷಿಣ ದಿಕ್ಕಿಗೆ ದಕ್ಷಿಣಭಾಗಕ್ಕೆ ಇಪ್ಪತ್ತು ಹಲಗೆಗಳನ್ನು ಮಾಡಿದನು. ಅವನು ಇಪ್ಪತ್ತು ಹಲಗೆಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು; ಒಂದು ಹಲಗೆಯ ಕೆಳಗೆ ಇರುವ ಎರಡು ಕೈಗಳಿಗೋಸ್ಕರ ಎರಡು ಕಾಲುಗಳನ್ನೂ ಇನ್ನೊಂದು ಹಲಗೆಯ ಕೆಳಗೆ ಇರುವ ಎರಡು ಕೈಗಳಿಗೋಸ್ಕರ ಎರಡು ಕಾಲುಗಳನ್ನೂ ಗುಡಾರದ ಉತ್ತರ ದಿಕ್ಕಿನ ಮೂಲೆಯ ಇನ್ನೊಂದು ಭಾಗಕ್ಕೆ ಅವನು ಇಪ್ಪತ್ತು ಹಲಗೆಗಳನ್ನೂ ಮಾಡಿದನು. ಒಂದೊಂದು ಹಲಗೆಯ ಕೆಳಗೆ ಎರಡೆರಡಾಗಿ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು. ಗುಡಾರದ ಪಶ್ಚಿಮ ಭಾಗದ ಮಗ್ಗಲುಗಳಿಗೆ ಆರು ಹಲಗೆಗಳನ್ನು ಮಾಡಿ ದನು. ಅವನು ಗುಡಾರದ ಎರಡು ಪಾರ್ಶ್ವಗಳಲ್ಲಿ ರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡಿದನು. ಅವುಗಳು ಅಡಿಯಲ್ಲಿಯೂ ಮೇಲ್ಗಡೆಯಲ್ಲಿಯೂ ಒಂದೇ ಉಂಗುರದಿಂದ ಜೋಡಿಸಲ್ಪಟ್ಟವು. ಇದೇ ರೀತಿಯಲ್ಲಿ ಅವನು ಎರಡೂ ಮೂಲೆಗಳಲ್ಲಿರುವ ಎರಡಕ್ಕೂ ಮಾಡಿದನು. ಇಂಥ ಎಂಟು ಹಲಗೆ ಗಳಿದ್ದವು; ಪ್ರತಿಯೊಂದು ಹಲಗೆಯ ಕೆಳಗೆ ಎರಡೆರಡು ಕಾಲುಗಳಂತೆ ಅವುಗಳಿಗೆ ಹದಿನಾರು ಬೆಳ್ಳಿಯ ಕಾಲು ಗಳಿದ್ದವು. ಅವನು ಜಾಲೀ ಮರದ ಅಗುಳಿಗಳನ್ನು ಮಾಡಿದನು; ಗುಡಾರದ ಒಂದು ಭಾಗದ ಹಲಗೆಗಳಿಗೆ ಐದು ಅಗುಳಿಗಳು, ಗುಡಾರದ ಇನ್ನೊಂದು ಭಾಗದ ಹಲಗೆಗಳಿಗೆ ಐದು ಅಗುಳಿಗಳು, ಗುಡಾರದ ಪಶ್ಚಿಮ ಭಾಗಗಳಲ್ಲಿರುವ ಹಲಗೆಗಳಿಗೆ ಐದು ಅಗುಳಿಗಳನ್ನು ಮಾಡಿದನು. ಮಧ್ಯದ ಅಗುಳಿಯು ಹಲಗೆಗಳ ನಡುವೆ ಒಂದು ಬದಿಯಿಂದ ಇನ್ನೊಂದು ಬದಿಯ ವರೆಗೆ ಹಾದು ಹೋಗುವ ಹಾಗೆ ಮಾಡಿದನು. ಆ ಹಲಗೆಗಳನ್ನು ಚಿನ್ನದಿಂದ ಹೊದಿಸಿ ಅಗುಳಿಗಳಿಗೆ ಬಳೆಗಳಾಗಿರುವ ಉಂಗುರಗಳನ್ನು ಚಿನ್ನದಿಂದ ಮಾಡಿ ಅಗುಳಿಗಳನ್ನು ಚಿನ್ನದಿಂದ ಹೊದಿಸಿದನು.
- Exodus 31:7–9 ವಿಮೋಚನಕಾಂಡ 31:7–9ಸಭೆಯ ಗುಡಾರವನ್ನೂ ಸಾಕ್ಷಿಯ ಹಲಗೆ ಗಳ ಮಂಜೂಷವನ್ನೂ ಅದರ ಮೇಲಿರುವ ಕರುಣಾಸ ನವನ್ನೂ ಗುಡಾರದ ಎಲ್ಲಾ ಉಪಕರಣಗಳನ್ನೂ ಮೇಜನ್ನೂ ಅದರ ಉಪಕರಣಗಳನ್ನೂ ಶುದ್ಧವಾದ ದೀಪಸ್ತಂಭವನ್ನೂ ಅದರ ಎಲ್ಲಾ ಉಪಕರಣಗಳನ್ನೂ ಧೂಪವೇದಿಯನ್ನೂ ದಹನಬಲಿಯ ವೇದಿಯನ್ನೂ ಅದರ ಎಲ್ಲಾ ಉಪಕರಣಗಳನ್ನೂ ಗಂಗಾಳವನ್ನೂ ಅದರ ಪೀಠವನ್ನೂ