Exodus · chapter 35 · verse 17
Exodus 35:17 in Kannada
ಅಂಗಳದ ಪರದೆಗಳನ್ನೂ ಅದರ ಸ್ತಂಭಗಳನ್ನೂ ಅದರ ಕುಳಿಗ ಳನ್ನೂ ಅಂಗಳದ ಬಾಗಲಿನ ತೆರೆಗಳನ್ನೂ
Angalada paradegalannoo adara stambhagalannoo adara kuliga lannoo angalada baagalina teregalannoo
Exodus 35:17 in English
- King James Version (KJV)
- The hangings of the court, his pillars, and their sockets, and the hanging for the door of the court,
- World English Bible (WEB)
- the hangings of the court, its pillars, their sockets, and the screen for the gate of the court;
- American Standard Version (ASV)
- the hangings of the court, the pillars thereof, and their sockets, and the screen for the gate of the court;
- Bible in Basic English (BBE)
- The hangings for the open space, its pillars and their bases, and the curtain for the doorway;
- Darby Translation (DBY)
- the hangings of the court, its pillars, and its bases, and the curtains of the gate of the court;
- Webster's Bible (WBS)
- The hangings of the court, its pillars, and their sockets, and the hanging for the door of the court,
- Young's Literal Translation (YLT)
- 'The hangings of the court, its pillars, and their sockets, and the covering of the gate of the court,
Read in context
- 15ಧೂಪ ವೇದಿಯನ್ನೂ ಅದರ ಕೋಲುಗಳನ್ನೂ ಅಭಿಷೇಕಿಸುವ ಎಣ್ಣೆಯನ್ನೂ ಪರಿಮಳ ಧೂಪವನ್ನೂ ಗುಡಾರದಲ್ಲಿ ಪ್ರವೇಶಿಸುವ ಬಾಗಲಿನ ತೆರೆಯನ್ನೂ
- 16ಯಜ್ಞವೇದಿ ಯನ್ನೂ ಅದರೊಂದಿಗೆ ಹಿತ್ತಾಳೆಯ ಜಲ್ಲಡಿಯನ್ನೂ ಅದರ ಕೋಲುಗಳನ್ನೂ ಅದರ ಎಲ್ಲಾ ಉಪಕರಣ ಗಳನ್ನೂ ಗಂಗಾಳವನ್ನೂ ಅದರ ಪೀಠ
- 17ಅಂಗಳದ ಪರದೆಗಳನ್ನೂ ಅದರ ಸ್ತಂಭಗಳನ್ನೂ ಅದರ ಕುಳಿಗ ಳನ್ನೂ ಅಂಗಳದ ಬಾಗಲಿನ ತೆರೆಗಳನ್ನೂ
- 18ಗುಡಾರದ ಗೂಟಗಳನ್ನೂ ಅಂಗಳದ ಗೂಟಗಳನ್ನೂ ಅವುಗಳ ಹಗ್ಗಗಳನ್ನೂ
- 19ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವದ ಕ್ಕಾಗಿ ಸೇವೆಯ ವಸ್ತ್ರಗಳನ್ನೂ ಯಾಜಕನಾದ ಆರೋನನ ಪರಿಶುದ್ಧ ವಸ್ತ್ರಗಳನ್ನೂ ಯಾಜಕ ಸೇವೆಗೋಸ್ಕರ ಅವನ ಕುಮಾರರ ವಸ್ತ್ರಗಳನ್ನೂ ಮಾಡಲಿ ಅಂದನು.
Cross references
- Exodus 27:9–19 ವಿಮೋಚನಕಾಂಡ 27:9–19ಗುಡಾರದ ಅಂಗಳವನ್ನು ಮಾಡಬೇಕು. ದಕ್ಷಿಣ ದಿಕ್ಕಿನಲ್ಲಿರುವ ದಕ್ಷಿಣ ಭಾಗದಲ್ಲಿ ಅಂಗಳಕ್ಕೋಸ್ಕರ ನಯವಾದ ಹೊಸೆದ ನಾರಿನ ಪರದೆಗಳನ್ನು ಮಾಡ ಬೇಕು. ಒಂದು ಕಡೆಯಲ್ಲಿ ಅದರ ಉದ್ದವು ನೂರು ಮೊಳವಿರಬೇಕು. ಅದರ ಸ್ತಂಭಗಳು ಇಪ್ಪತ್ತು, ಅವುಗಳಿಗೆ ಹಿತ್ತಾಳೆಯ ಕುಳಿಗಳು ಇರಬೇಕು; ಸ್ತಂಭಗಳ ಕೊಂಡಿಗಳನ್ನೂ ಅವುಗಳ ಪಟ್ಟಿಗಳನ್ನೂ ಬೆಳ್ಳಿಯಿಂದ ಮಾಡಬೇಕು. ಹಾಗೆಯೇ ಉತ್ತರ ಪಾರ್ಶ್ವದಲ್ಲಿ ನೂರು ಮೊಳ ಉದ್ದವಾದ ಪರದೆಗಳೂ ಇಪ್ಪತ್ತು ಸ್ತಂಭಗಳೂ ಇಪ್ಪತ್ತು ಹಿತ್ತಾಳೆಯ ಕುಳಿಗಳೂ ಇರಬೇಕು. ಸ್ತಂಭಗಳ ಕೊಂಡಿಗಳನ್ನೂ ಕಟ್ಟುಗಳನ್ನೂ ಬೆಳ್ಳಿಯಿಂದ ಮಾಡಬೇಕು. ಅಂಗಳದ ಪಶ್ಚಿಮ ಪಾರ್ಶ್ವದಲ್ಲಿ ಐವತ್ತು ಮೊಳ ಅಗಲವಾದ ಪರದೆಗಳೂ ಹತ್ತು ಸ್ತಂಭಗಳೂ ಹತ್ತು ಕುಳಿಗಳೂ ಇರಬೇಕು. ಪೂರ್ವದ ಕಡೆಯಲ್ಲಿ ಅಂಗಳದ ಅಗಲವು ಮೂಡಣದಲ್ಲಿ ಐವತ್ತು ಮೊಳ ಇರಬೇಕು. ಒಂದು ಕಡೆಯಲ್ಲಿ ಹದಿನೈದು ಮೊಳದ ಪರದೆಗಳಿದ್ದು ಮೂರು ಸ್ತಂಭಗಳೂ ಮೂರು ಕುಳಿಗಳೂ ಇರಬೇಕು. ಮತ್ತೊಂದು ಕಡೆಯಲ್ಲಿ ಹದಿನೈದು ಮೊಳದ ಪರದೆಗಳೂ ಮೂರು ಸ್ತಂಭ ಗಳೂ ಮೂರು ಕುಳಿಗಳೂ ಇರಬೇಕು. ಅಂಗಳದ ಬಾಗಲಿಗಾಗಿ ನೀಲಿ ಧೂಮ್ರ ರಕ್ತ ವರ್ಣದ ಹೊಸೆದ ನಯವಾದ ನಾರಿನಿಂದ ಕಸೂತಿಯ ಕೆಲಸ ಮಾಡಿದ ಇಪ್ಪತ್ತು ಮೊಳದ ತೆರೆಯೂ ಅದಕ್ಕೆ ನಾಲ್ಕು ಸ್ತಂಭಗಳೂ ನಾಲ್ಕು ಕುಳಿಗಳೂ ಇರಬೇಕು. ಅಂಗಳದ ಸುತ್ತಲಿ ರುವ ಸ್ತಂಭಗಳಿಗೆಲ್ಲಾ ಬೆಳ್ಳಿಯ ಕಟ್ಟುಗಳೂ ಬೆಳ್ಳಿಯ ಕೊಂಡಿಗಳೂ ಹಿತ್ತಾಳೆಯ ಕುಳಿಗಳೂ ಇರಬೇಕು. ಅಂಗಳದ ಉದ್ದ ನೂರು ಮೊಳ, ಅಗಲ ಐವತ್ತು ಮೊಳ, ಅದರ ಎತ್ತರ ಐದು ಮೊಳ ಇರಬೇಕು. ಪರದೆಗಳು ನಯವಾದ ನಾರಿನಿಂದ ಹೊಸೆದದ್ದಾಗಿದ್ದು ಅವುಗಳ ಕುಳಿಗಳನ್ನು ಹಿತ್ತಾಳೆಯಿಂದ ಮಾಡಿಸಬೇಕು. ಗುಡಾರದ ಎಲ್ಲಾ ಕೆಲಸಕ್ಕೆ ಬರುವ ಉಪಕರಣಗಳೂ ಗೂಟಗಳೂ ಅಂಗಳದ ಗೂಟಗಳೂ ಹಿತ್ತಾಳೆಯಿಂದ ಮಾಡಿದವುಗಳಾಗಿರಬೇಕು.
- 2 Samuel 7:2 2 ಸಮುವೇಲನು 7:2ಅರ ಸನು ಪ್ರವಾದಿಯಾದ ನಾತಾನನಿಗೆ--ನೋಡು, ನಾನು ದೇವದಾರುಗಳ ಮನೆಯಲ್ಲಿ ವಾಸವಾಗಿದ್ದೇನೆ; ಆದರೆ ದೇವರ ಮಂಜೂಷವು ತೆರೆಗಳ ಮಧ್ಯದಲ್ಲಿ ವಾಸವಾಗಿದೆ ಅಂದನು.
- Exodus 38:9–20 ವಿಮೋಚನಕಾಂಡ 38:9–20ಅವನು ಅಂಗಳವನ್ನು ಮಾಡಿದನು: ಅಂಗಳದ ದಕ್ಷಿಣ ದಿಕ್ಕಿನ ಭಾಗದಲ್ಲಿದ್ದ ತೆರೆಗಳು ನಯವಾಗಿ ಹೊಸೆದ ನೂಲಿನ ಬಟ್ಟೆಯಿಂದ ಮಾಡಲ್ಪಟ್ಟಿದ್ದವು. ಅವು ನೂರು ಮೊಳ ಉದ್ದವಾಗಿದ್ದವು. ಅವುಗಳಿಗೆ ಇಪ್ಪತ್ತು ಸ್ತಂಭಗಳಿದ್ದವು, ಅವುಗಳಿಗೆ ಇಪ್ಪತ್ತು ಹಿತ್ತಾಳೆಯ ಕಾಲು ಕುಣಿಕೆಗಳಿದ್ದವು; ಆ ಸ್ತಂಭಗಳಿಗೆ ಇದ್ದ ಕೊಂಡಿ ಮತ್ತು ಅಲಂಕಾರದ ಪಟ್ಟಿಗಳು ಬೆಳ್ಳಿಯಿಂದ ಮಾಡಲ್ಪ ಟ್ಟಿದ್ದವು. ಉತ್ತರ ದಿಕ್ಕಿನ ತೆರೆಗಳು ನೂರು ಮೊಳ ಉದ್ದವಾಗಿದ್ದವು; ಅವುಗಳಿಗೆ ಇಪ್ಪತ್ತು ಸ್ತಂಭಗಳಿದ್ದು ಆ ಸ್ತಂಭಗಳಿಗೆ ಇಪ್ಪತ್ತು ಹಿತ್ತಾಳೆಯ ಕಾಲು ಕುಣಿಕೆ ಗಳಿದ್ದವು. ಆ ಸ್ತಂಭಗಳ ಕೊಂಡಿ ಮತ್ತು ಅಲಂಕಾರದ ಪಟ್ಟಿಗಳು ಬೆಳ್ಳಿಯದಾಗಿದ್ದವು. ಪಶ್ಚಿಮ ದಿಕ್ಕಿನ ತೆರೆಗಳು ಐವತ್ತು ಮೊಳ ಉದ್ದವಾಗಿದ್ದವು; ಅವುಗಳಿಗೆ ಹತ್ತು ಸ್ತಂಭಗಳಿದ್ದು ಆ ಸ್ತಂಭಗಳಿಗೆ ಹತ್ತು ಹಿತ್ತಾಳೆಯ ಕಾಲು ಕುಣಿಕೆಗಳಿದ್ದವು. ಆ ಸ್ತಂಭಗಳ ಕೊಂಡಿಗಳೂ ಮತ್ತು ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾಗಿದ್ದವು. ಪೂರ್ವ ದಿಕ್ಕಿನ ಬದಿಗೆ ಐವತ್ತು ಮೊಳ. ದ್ವಾರದ ಒಂದು ಬದಿಯ ತೆರೆಗಳು ಹದಿನೈದು ಮೊಳ ಉದ್ದ ವಾಗಿದ್ದವು; ಅವುಗಳಿಗೆ ಮೂರು ಸ್ತಂಭಗಳೂ ಆ ಸ್ತಂಭಗಳಿಗೆ ಮೂರು ಕಾಲುಕುಣಿಕೆಗಳೂ ಇದ್ದವು. ಅಂಗಳದ ಇನ್ನೊಂದು ಬದಿಯ ದ್ವಾರದ ಎರಡು ಕಡೆಗಳಲ್ಲಿ ಹದಿನೈದು ಮೊಳ ಉದ್ದವಾದ ತೆರೆಗಳಿದ್ದವು; ಅವುಗಳಿಗೆ ಮೂರು ಸ್ತಂಭಗಳೂ ಆ ಸ್ತಂಭಗಳಿಗೆ ಮೂರು ಕಾಲುಕುಣಿಕೆಗಳೂ ಇದ್ದವು. ಅಂಗಳದ ಸುತ್ತಲಿದ್ದ ಎಲ್ಲ ತೆರೆಗಳು ನಯವಾಗಿ ಹೊಸೆದ ನೂಲಿನ ಬಟ್ಟೆಯಿಂದ ಮಾಡಲ್ಪಟ್ಟಿದ್ದವು. ಸ್ತಂಭಗಳ ಕಾಲು ಕುಣಿಕೆಗಳು ಹಿತ್ತಾಳೆಯವುಗಳು; ಆ ಸ್ತಂಭಗಳ ಕೊಂಡಿಯೂ ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾ ಗಿದ್ದವು; ಕಂಬದ ಬೋದಿಗಳು ಬೆಳ್ಳಿಯಿಂದ ಹೊದಿಸ ಲ್ಪಟ್ಟಿದ್ದವು; ಅಂಗಳದ ಎಲ್ಲಾ ಸ್ತಂಭಗಳು ಬೆಳ್ಳಿಯ ಅಲಂಕಾರದ ಪಟ್ಟಿಗಳಿಂದ ಸುತ್ತುವರಿಯಲ್ಪಟ್ಟಿದ್ದವು. ಅಂಗಳ ದ್ವಾರದ ತೆರೆಯು ನಯವಾಗಿ ಹೊಸೆದ ನೂಲಿನ ಬಟ್ಟೆಯಾಗಿತ್ತು; ಅದರ ಮೇಲೆ ನೀಲಿ ಧೂಮ್ರ ರಕ್ತವರ್ಣ ದಾರಗಳಿಂದ ಕಸೂತಿ ಕೆಲಸ ಮಾಡಲಾಗಿತ್ತು; ಅವು ಇಪ್ಪತ್ತು ಮೊಳ ಉದ್ದವಾಗಿದ್ದು ಅಗಲ ಎತ್ತರಗಳಲ್ಲಿ ಅಂಗಳದ ಉಳಿದ ತೆರೆಗಳಿಗೆ ಸರಿಯಾಗುವಂತೆ ಐದು ಮೊಳ ಇತ್ತು. ಅವುಗಳಿಗೆ ನಾಲ್ಕು ಸ್ತಂಭಗಳು, ಆ ಸ್ತಂಭಗಳಿಗೆ ನಾಲ್ಕು ಹಿತ್ತಾಳೆಯ ಕಾಲು ಕುಣಿಕೆಗಳು ಇದ್ದವು; ಅವುಗಳ ಕೊಂಡಿಗಳು ಬೆಳ್ಳಿಯದಾಗಿದ್ದವು, ಅವುಗಳ ಬೋದಿಗಳ ಹೊದಿಕೆಯೂ ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾಗಿದ್ದವು. ಗುಡಾರದ ಅಂಗಳ ಸುತ್ತಲೂ ಇರುವ ಗೂಟಗಳು ಹಿತ್ತಾಳೆಯದಾಗಿದ್ದವು.