Exodus · chapter 40 · verse 29
Exodus 40:29 in Kannada
ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ದಹನಬಲಿಯನ್ನೂ ಆಹಾರಸಮರ್ಪಣೆಯನ್ನೂ ಅರ್ಪಿಸಿದನು.
Kartanu moshege aajnyaapisida haage adara mele dahanabaliyannoo aahaarasamarpaneyannoo arpisidanu.
Exodus 40:29 in English
- King James Version (KJV)
- And he put the altar of burnt offering [by] the door of the tabernacle of the tent of the congregation, and offered upon it the burnt offering and the meat offering; as the LORD commanded Moses.
- World English Bible (WEB)
- He set the altar of burnt offering at the door of the tabernacle of the Tent of Meeting, and offered on it the burnt offering and the meal offering, as the LORD commanded Moses.
- American Standard Version (ASV)
- And he set the altar of burnt-offering at the door of the tabernacle of the tent of meeting, and offered upon it the burnt-offering and the meal-offering; as Jehovah commanded Moses.
- Bible in Basic English (BBE)
- And at the door of the House of the Tent of meeting, he put the altar of burned offerings, offering on it the burned offering and the meal offering, as the Lord had given him orders.
- Darby Translation (DBY)
- And he put the altar of burnt-offering at the entrance to the tabernacle of the tent of meeting, and offered on it the burnt-offering and the oblation; as Jehovah had commanded Moses.
- Webster's Bible (WBS)
- And he put the altar of burnt-offering [by] the door of the tabernacle of the tent of the congregation, and offered upon it the burnt-offering, and the meat-offering; as the LORD commanded Moses.
- Young's Literal Translation (YLT)
- and the altar of the burnt-offering he hath set at the opening of the tabernacle of the tent of meeting, and causeth the burnt-offering to go up upon it, and the present, as Jehovah hath commanded Moses.
Read in context
- 27ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ಪರಿಮಳ ಧೂಪವನ್ನು ಸುಟ್ಟನು.
- 28ಗುಡಾರದ ಬಾಗಿಲಿನ ತೆರೆಯನ್ನು ತೂಗುಹಾಕಿ ದನು. ಸಭೆ ಡೇರೆಯ ಗುಡಾರದ ಬಳಿಯಲ್ಲಿ ದಹನ ಬಲಿಪೀಠವನ್ನು ಇಟ್ಟನು.
- 29ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ದಹನಬಲಿಯನ್ನೂ ಆಹಾರಸಮರ್ಪಣೆಯನ್ನೂ ಅರ್ಪಿಸಿದನು.
- 30ಸಭೆ ಡೇರೆಗೂ ಯಜ್ಞವೇದಿಗೂ ಮಧ್ಯ ಗಂಗಾಳ ವನ್ನು ಇಟ್ಟು ಅದರಲ್ಲಿ ತೊಳೆಯುವದಕ್ಕೆ ನೀರನ್ನು ಹೊಯ್ದನು.
- 31ಮೋಶೆಯೂ ಆರೋನನೂ ಅವನ ಕುಮಾರರೂ ಅದರಲ್ಲಿ ಕೈಕಾಲುಗಳನ್ನು ತೊಳೆದು ಕೊಂಡರು.
Cross references
- Exodus 40:6 ವಿಮೋಚನಕಾಂಡ 40:6ನೀನು ದಹನಬಲಿಪೀಠವನ್ನು ಸಭೆಯ ಡೇರೆಯಾದ ಗುಡಾರದ ಬಾಗಿಲಿಗೆ ಎದುರಾಗಿ ಇಡ ಬೇಕು.
- Exodus 29:38–46 ವಿಮೋಚನಕಾಂಡ 29:38–46ಇದಲ್ಲದೆ ಯಜ್ಞವೇದಿಯ ಮೇಲೆ ನೀನು ಅರ್ಪಿಸ ಬೇಕಾದದ್ದು ಇದೇ; ಒಂದು ವರುಷದ ಎರಡು ಕುರಿಮರಿಗಳನ್ನು ಪ್ರತಿದಿನ ಬಿಡದೆ ಅರ್ಪಿಸಬೇಕು. ಒಂದು ಕುರಿಮರಿಯನ್ನು ಬೆಳಿಗ್ಗೆ ಅರ್ಪಿಸಬೇಕು, ಮತ್ತೊಂದನ್ನು ಸಾಯಂಕಾಲ ಅರ್ಪಿಸಬೇಕು. ಹಿನ್ನಿನ ನಾಲ್ಕನೆಯ ಒಂದು ಪಾಲಿನಷ್ಟು ಹಿಂಡಿದ ಎಣ್ಣೆ ಹೊಯಿದ ನಯವಾದ ಹಿಟ್ಟಿನ ಹತ್ತನೆಯ ಪಾಲೂ ಹಿನ್ನಿನ ನಾಲ್ಕನೆಯ ಪಾಲಿನಷ್ಟು ದ್ರಾಕ್ಷಾರಸದ ಪಾನ ದರ್ಪಣೆಯೂ ಒಂದು ಕುರಿಮರಿಯೊಂದಿಗೆ ಅರ್ಪಿಸ ಬೇಕು. ಇನ್ನೊಂದು ಕುರಿಮರಿಯನ್ನು ಸಾಯಂಕಾಲ ದಲ್ಲಿ ಅರ್ಪಿಸಬೇಕು. ಉದಯದ ಆಹಾರ ಕಾಣಿಕೆ ಯಂತೆಯೂ ಅದರ ಪಾನದರ್ಪಣೆಯಂತೆಯೂ ಇದಕ್ಕೂ ಮಾಡಿ ಕರ್ತನಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಅರ್ಪಿಸಬೇಕು. ಇದು ತಲತಲಾಂತರಗಳಲ್ಲಿಯೂ ನಿತ್ಯಕ್ಕೂ ಸಭೆಯ ಗುಡಾರದ ಮುಂದೆ ಕರ್ತನ ಸನ್ನಿಧಿಯಲ್ಲಿ ನಾನು ನಿಮ್ಮ ಸಂಗಡ ಮಾತನಾಡುವದಕ್ಕೆ ಸಂಧಿಸುವಲ್ಲಿ ಇದೇ ನಿತ್ಯವಾದ ದಹನಬಲಿಯಾಗಿರುವದು. ಅಲ್ಲಿ ನಾನು ಇಸ್ರಾಯೇಲ್ ಮಕ್ಕಳನ್ನು ಸಂಧಿಸುವೆನು. ಗುಡಾರವು ನನ್ನ ಮಹಿಮೆಯಿಂದ ಪವಿತ್ರವಾಗುವದು. ಸಭೆಯ ಗುಡಾರವನ್ನೂ ಯಜ್ಞವೇದಿಯನ್ನೂ ಪರಿಶುದ್ಧಮಾಡುವೆನು. ಆರೋನನನ್ನೂ ಅವನ ಕುಮಾರರನ್ನೂ ನನಗೆ ಯಾಜಕ ಸೇವೆಮಾಡುವಂತೆ ಪವಿತ್ರಮಾಡುವೆನು. ಇಸ್ರಾಯೇಲ್ ಮಕ್ಕಳ ಮಧ್ಯ ದಲ್ಲಿ ನಾನು ವಾಸಮಾಡಿ ಅವರಿಗೆ ದೇವರಾಗಿರುವೆನು.ಅವರ ಮಧ್ಯದಲ್ಲಿ ನಾನು ವಾಸವಾಗಿರುವದಕ್ಕಾಗಿ ಅವರನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ ಅವರ ದೇವರಾದ ಕರ್ತನು ನಾನೇ ಎಂದು ಅವರಿಗೆ ತಿಳಿಯುವದು. ನಾನೇ ಅವರ ದೇವರಾದ ಕರ್ತನು. ಅವರ ಮಧ್ಯದಲ್ಲಿ ನಾನು ವಾಸವಾಗಿರುವದಕ್ಕಾಗಿ ಅವರನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ ಅವರ ದೇವರಾದ ಕರ್ತನು ನಾನೇ ಎಂದು ಅವರಿಗೆ ತಿಳಿಯುವದು. ನಾನೇ ಅವರ ದೇವರಾದ ಕರ್ತನು.
- Hebrews 9:12 ಇಬ್ರಿಯರಿಗೆ 9:12ಹೋತಗಳ ಮತ್ತು ಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವನಾಗಿ ಒಂದೇ ಸಾರಿ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿದನು.
- Exodus 27:1–8 ವಿಮೋಚನಕಾಂಡ 27:1–8ಇದಲ್ಲದೆ ಜಾಲೀ ಮರದಿಂದ ಯಜ್ಞವೇದಿಯನ್ನು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾಗಿಯೂ ಮಾಡಬೇಕು. ಆ ಯಜ್ಞವೇದಿಯು ಚಚ್ಚೌಕವಾಗಿರಬೇಕು. ಅದರ ಎತ್ತ ರವು ಮೂರು ಮೊಳ ಇರಬೇಕು. ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಬೇಕು. ಆ ಕೊಂಬುಗಳು ಯಜ್ಞವೇದಿಗೆ ಎತ್ತರವಾಗಿರಬೇಕು; ನೀನು ಅದನ್ನು ಹಿತ್ತಾಳೆಯಿಂದ ಹೊದಿಸಬೇಕು. ಅದರ ಬೂದಿಗಾಗಿ ತಟ್ಟೆಗಳನ್ನು ಸಲಿಕೆಗಳನ್ನು ಬೋಗುಣಿಗಳನ್ನು ಮುಳ್ಳುಗಳನ್ನು ಅಗ್ನಿಪಾತ್ರೆಗಳನ್ನು ಎಲ್ಲಾ ಉಪಕರಣಗಳನ್ನು ಹಿತ್ತಾಳೆಯಿಂದ ಮಾಡಬೇಕು. ಅದಕ್ಕೆ ಹಿತ್ತಾಳೆಯ ಜಾಳಿಗೆಯನ್ನು ಮಾಡಿ ಆ ಜಾಳಿಗೆಯ ಮೇಲೆ ನಾಲ್ಕು ಮೂಲೆಗಳಿಗೆ ಹಿತ್ತಾಳೆಯ ನಾಲ್ಕು ಬಳೆಗಳನ್ನು ಮಾಡಬೇಕು. ಆ ಜಾಳಿಗೆಯು ಯಜ್ಞವೇದಿಯ ಸುತ್ತಲಿರುವ ಕಟ್ಟೆಯ ಕೆಳಗೆ ಇದ್ದು, ಯಜ್ಞವೇದಿಯ ಬುಡದಿಂದ ನಡುವಿನ ತನಕ ಇರು ವಂತೆ ಹಾಕಿಸಬೇಕು. ಯಜ್ಞವೇದಿಗೆ ಜಾಲೀ ಮರ ದಿಂದ ಕೋಲುಗಳನ್ನು ಮಾಡಿ ಅವುಗಳನ್ನು ಹಿತ್ತಾಳೆ ಯಿಂದ ಹೊದಿಸಬೇಕು. ಆ ಕೋಲುಗಳನ್ನು ಬಳೆ ಗಳಲ್ಲಿ ಸೇರಿಸಬೇಕು. ಅವುಗಳು ಯಜ್ಞವೇದಿಯನ್ನು ಹೊರುವದಕ್ಕೆ ಅದರ ಎರಡೂ ಪಾರ್ಶ್ವಗಳಲ್ಲಿ ಇರ ಬೇಕು. ಹಲಗೆಗಳಿಂದ ಅದನ್ನು ಪೊಳ್ಳಾಗಿರುವಂತೆ ಮಾಡಬೇಕು. ಬೆಟ್ಟದಲ್ಲಿ ನಿನಗೆ ತೋರಿಸಿದಂತೆಯೇ ಅದನ್ನು ಮಾಡಬೇಕು.
- Hebrews 13:5–6 ಇಬ್ರಿಯರಿಗೆ 13:5–6ನಿಮ್ಮ ನಡತೆಯು ದ್ರವ್ಯಾಶೆ ಯಿಲ್ಲದ್ದಾಗಿರಲಿ; ನಿಮಗಿರುವವುಗಳಲ್ಲಿ ತೃಪ್ತರಾಗಿರ್ರಿ; ಯಾಕಂದರೆ--ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ ಇಲ್ಲವೆ ತೊರೆಯುವದಿಲ್ಲವೆಂದು ಆತನು ಹೇಳಿದ್ದಾನೆ. ಆದದರಿಂದ--ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
- Hebrews 13:10 ಇಬ್ರಿಯರಿಗೆ 13:10ನಮಗೊಂದು ಯಜ್ಞವೇದಿ ಉಂಟು, ಅದರ ಪದಾರ್ಥವನ್ನು ತಿನ್ನುವದಕ್ಕೆ ಗುಡಾರದಲ್ಲಿ ಸೇವೆಯನ್ನು ನಡಿಸುವವರಿಗೆ ಹಕ್ಕಿಲ್ಲ.
- Exodus 38:1–7 ವಿಮೋಚನಕಾಂಡ 38:1–7ಅವನು ಜಾಲೀ ಮರದಿಂದ ದಹನ ಬಲಿಪೀಠವನ್ನು ಮಾಡಿದನು. ಅದು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾ ಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರ ಮೂರು ಮೊಳವಾಗಿತ್ತು. ಇದಲ್ಲದೆ ಅವನು ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಿದನು; ಅದರ ಕೊಂಬುಗಳು ಜಾಲೀ ಮರದ್ದೇ ಆಗಿದ್ದವು; ಅವನು ಅವುಗಳನ್ನು ಹಿತ್ತಾಳೆಯಿಂದ ಹೊದಿಸಿದನು. ಅನಂತರ ಅವನು ಬಲಿಪೀಠದ ಎಲ್ಲಾ ಸಾಮಾನುಗಳನ್ನು ಮಾಡಿ ದನು: ಕೊಡಗಳು, ಸಲಿಕೆಗಳು, ಬೋಗುಣಿಗಳು, ಮಾಂಸ ಸಿಕ್ಕಿಸುವ ಕೊಂಡಿಗಳು, ಅಗ್ಗಿಷ್ಟಿಗೆಗಳು; ಇವೆಲ್ಲ ವುಗಳನ್ನು ಅವನು ಹಿತ್ತಾಳೆಯಿಂದ ಮಾಡಿದನು. ಬಲಿಪೀಠದ ಕೆಳಗಿನ ಆವರಣದಲ್ಲಿ ನೆಲದಿಂದ ಪೀಠದ ಮಧ್ಯದ ವರೆಗೆ ಬರುವಂತೆ ಜಾಲರೀ ಕೆಲಸದಿಂದ ಹಿತ್ತಾಳೆಯ ಬೆಂಕಿಗೂಡನ್ನು ಮಾಡಿದನು. ಆ ಹಿತ್ತಾಳೆ ಯ ಬೆಂಕಿಯ ಗೂಡನ್ನು ಹೊರುವಾಗ ಕೋಲು ಸಿಕ್ಕಿಸುವದಕ್ಕೋಸ್ಕರ ಅದರ ನಾಲ್ಕು ತುದಿಗಳಲ್ಲಿ ನಾಲ್ಕು ಉಂಗುರಗಳನ್ನು ಎರಕಹೊಯ್ದನು. ಅವನು ಜಾಲೀ ಮರದಿಂದ ಕೋಲುಗಳನ್ನು ಮಾಡಿ ಅವುಗಳಿಗೆ ಹಿತ್ತಾ ಳೆಯ ಹೊದಿಕೆಯನ್ನು ಹೊದಿಸಿದನು. ಬಲಿಪೀಠವನ್ನು ಹೊರುವದಕ್ಕೆ ಅದರ ಬದಿಯಲ್ಲಿ ಮಾಡಿದ ಉಂಗುರ ಗಳಲ್ಲಿ ಆ ಕೋಲುಗಳನ್ನು ಸಿಕ್ಕಿಸಿದನು; ಅವನು ಆ ಬಲಿಪೀಠವನ್ನು ಹಲಗೆಗಳಿಂದ ಪೊಳ್ಳಾಗಿ ಮಾಡಿದನು.
- Romans 3:24–26 ರೋಮಾಪುರದವರಿಗೆ 3:24–26ಅವರು ನೀತಿವಂತರೆಂದು ನಿರ್ಣಯ ಹೊಂದುವದು ಆತನ ಉಚಿತಾರ್ಥವಾದ ಕೃಪೆ ಯಿಂದಲೇ. ಇದು ಕ್ರಿಸ್ತ ಯೇಸುವಿನಿಂದಾದ ವಿಮೋ ಚನೆಯ ಮೂಲಕವಾಗಿ ಆಗುವದು. ಈತನು ತನ್ನ ರಕ್ತದ ಮೂಲಕ ನಂಬಿಕೆಯಿದ್ದವರಿಗಾಗಿ ಪಾಪದ ಪ್ರಾಯಶ್ಚಿತ್ತವಾಗಿರಬೇಕೆಂದು ದೇವರು ಈತನನ್ನು ಮುಂದಿಟ್ಟನು. ದೇವರು ಹಿಂದಿನಕಾಲದ ಪಾಪಗಳನ್ನು ಸಹಿಸಿಕೊಂಡಿರಲಾಗಿ ತನ್ನ ನೀತಿಯನ್ನು ಈಗಿನ ಕಾಲದಲ್ಲಿ ಹೀಗೆ ತೋರಿಸಿ ತಾನು ನೀತಿವಂತನಾಗಿಯೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತ ರೆಂದು ನಿರ್ಣಯಿಸುವವನಾಗಿಯೂ ಪ್ರಸಿದ್ಧಿಪಡಿಸಿ ಕೊಂಡನು.
- Matthew 23:19 ಮತ್ತಾಯನು 23:19ಮೂರ್ಖರೇ, ಕುರುಡರೇ, ಯಾವದು ದೊಡ್ಡದು? ಕಾಣಿಕೆಯೋ ಇಲ್ಲವೆ ಕಾಣಿಕೆಯನ್ನು ಪಾವನಮಾಡುವ ಯಜ್ಞವೇದಿಯೋ?
Original words (Hebrew)
- put · H7760שׂוּם sûwm
- altar · H4196מִזְבֵּחַ mizbêach
- offering · H5930עֹלָה ʻôlâh
- door · H6607פֶּתַח pethach
- tabernacle · H4908מִשְׁכָּן mishkân
- tent · H168אֹהֶל ʼôhel
- congregation · H4150מוֹעֵד môwʻêd
- offered · H5927עָלָה ʻâlâh
- offering · H5930עֹלָה ʻôlâh
- offering · H4503מִנְחָה minchâh
- commanded · H6680צָוָה tsâvâh
- Moses · H4872מֹשֶׁה Môsheh