Ezekiel · chapter 12 · verse 3
Ezekiel 12:3 in Kannada
ಮನುಷ್ಯ ಪುತ್ರನೇ, ನೀನು ತೆಗೆದುಹಾಕು ವದಕ್ಕೆ ಸಾಮಾನುಗಳನ್ನು ಸಿದ್ಧಮಾಡಿ ಹಗಲಿನಲ್ಲಿ ಅವರ ದೃಷ್ಟಿಯಿಂದ ತೊಲಗಿ ಹೋಗು; ಹೌದು, ಅವರ ಕಣ್ಣುಗಳ ಮುಂದೆಯೇ ನಿನ್ನ ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಹೋಗು; ಅವರು ತಿರುಗಿ ಬೀಳುವ ಮನೆತನದವರಾದಾಗ್ಯೂ ಒಂದು ವೇಳೆ ಮನಸ್ಸು ಮಾಡಿಯಾರು.
Manushya putrane, neenu tegeduhaaku vadakke saamaanugalannu siddhamaadi hagalinalli avara drushtiyinda tolagi hogu; haudu, avara kannugala mundeye ninna sthalavannu bittu berondu sthalakke hogu; avaru tirugi beeluva manetanadavaraadaagyoo ondu vele manassu maadiyaaru.
Ezekiel 12:3 in English
- King James Version (KJV)
- Therefore, thou son of man, prepare thee stuff for removing, and remove by day in their sight; and thou shalt remove from thy place to another place in their sight: it may be they will consider, though they [be] a rebellious house.
- World English Bible (WEB)
- “Therefore, you son of man, prepare your baggage for moving, and move by day in their sight. You shall move from your place to another place in their sight. It may be they will consider, though they are a rebellious house.
- American Standard Version (ASV)
- Therefore, thou son of man, prepare thee stuff for removing, and remove by day in their sight; and thou shalt remove from thy place to another place in their sight: it may be they will consider, though they are a rebellious house.
- Bible in Basic English (BBE)
- And you, O son of man, by day, before their eyes, get ready the vessels of one who is taken away, and go away from your place to another place before their eyes: it may be that they will see, though they are an uncontrolled people.
- Darby Translation (DBY)
- And thou, son of man, prepare thee a captive's baggage, and go captive by day in their sight; and thou shalt go captive from thy place to another place in their sight. It may be they will consider, though they are a rebellious house.
- Webster's Bible (WBS)
- Therefore, thou son of man, prepare thee stuff for removing, and remove by day in their sight; and thou shalt remove from thy place to another place in their sight; it may be they will consider, though they [are] a rebellious house.
- Young's Literal Translation (YLT)
- And thou, son of man, make to thee vessels of removal, and remove by day before their eyes, and thou hast removed from thy place unto another place before their eyes, it may be they consider, for a rebellious house they [are].
Read in context
- 1ಕರ್ತನ ವಾಕ್ಯವು ಮತ್ತೆ ಬಂದು ನನಗೆ ಹೇಳಿದ್ದೇನಂದರೆ--
- 2ಮನುಷ್ಯಪುತ್ರನೇ, ನೀನು ತಿರುಗಿ ಬೀಳುವ ಮನೆತನದವರ ಮಧ್ಯದಲ್ಲಿ ವಾಸಿಸುತ್ತಿರುವಿ, ಅವರಿಗೆ ನೋಡುವದಕ್ಕೆ ಕಣ್ಣು ಗಳುಂಟು ನೋಡುವದಿಲ್ಲ, ಕೇಳುವದಕ್ಕೆ ಕಿವಿಗಳುಂಟು ಕೇಳುವದಿಲ್ಲ; ಅವರು ತಿರುಗಿ ಬೀಳುವ ಮನೆತನ ದವರು.
- 3ಮನುಷ್ಯ ಪುತ್ರನೇ, ನೀನು ತೆಗೆದುಹಾಕು ವದಕ್ಕೆ ಸಾಮಾನುಗಳನ್ನು ಸಿದ್ಧಮಾಡಿ ಹಗಲಿನಲ್ಲಿ ಅವರ ದೃಷ್ಟಿಯಿಂದ ತೊಲಗಿ ಹೋಗು; ಹೌದು, ಅವರ ಕಣ್ಣುಗಳ ಮುಂದೆಯೇ ನಿನ್ನ ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಹೋಗು; ಅವರು ತಿರುಗಿ ಬೀಳುವ ಮನೆತನದವರಾದಾಗ್ಯೂ ಒಂದು ವೇಳೆ ಮನಸ್ಸು ಮಾಡಿಯಾರು.
- 4ನಿನ್ನ ಸಾಮಾಗ್ರಿಗಳನ್ನು ತೆಗೆದುಹಾಕು ವದಕ್ಕಾಗುವಂತ ಸಾಮಾಗ್ರಿಗಳನ್ನು ಹಗಲಿನಲ್ಲಿ ಅವರ ಕಣ್ಣುಗಳ ಮುಂದೆ ಹೊರಗೆ ತರಬೇಕು; ಸಂಜೆಯಲ್ಲಿ ಸೆರೆಗೆ ಹೋಗುವವರ ಹಾಗೆ ನೀನು ಅವರ ಕಣ್ಣುಗಳ ಮುಂದೆಹೋಗಬೇಕು.
- 5ಅವರ ಕಣ್ಣುಗಳ ಮುಂದೆಯೇ ನೀನು ಗೋಡೆಯನ್ನು ಕೊರೆದು ಅಲ್ಲಿಂದ ಹೊತ್ತು ಕೊಂಡು ಹೊರಗೆ ಹೊರಟುಹೋಗು.
Cross references
- Jeremiah 36:3 ಯೆರೆಮೀಯ 36:3ಒಂದು ವೇಳೆ ಯೆಹೂ ದದ ಮನೆತನದವರು ನಾನು ಅವರಿಗೆ ಮಾಡುವದಕ್ಕೆ ನೆನಸುವ ಕೇಡನ್ನೆಲ್ಲಾ ಕೇಳಿ ನಾನು ಅವರ ಅಕ್ರಮವನ್ನೂ ಪಾಪವನ್ನೂ ಮನ್ನಿಸುವ ಹಾಗೆ ತಮ್ಮ ತಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು ಅಂದನು.
- Jeremiah 26:3 ಯೆರೆಮೀಯ 26:3ಒಂದು ವೇಳೆ ಅವರು ಕೇಳಿ ನಾನು ಅವರ ಕೃತ್ಯಗಳ ಕೆಟ್ಟತನದ ನಿಮಿತ್ತ ಅವರಿಗೆ ಮಾಡುವದಕ್ಕೆ ಆಲೋಚಿಸಿದ ಕೇಡಿನ ವಿಷಯ ಪಶ್ಚಾತ್ತಾಪಪಡುವ ಹಾಗೆ ತಮ್ಮ ತಮ್ಮ ಕೆಟ್ಟ ಮಾರ್ಗ ವನ್ನು ಬಿಟ್ಟು ತಿರುಗಿಕೊಂಡಾರು.
- 2 Timothy 2:25 2 ತಿಮೊಥೆಯನಿಗೆ 2:25ಎದುರಿಸುವವರನ್ನು ಸಾತ್ವಿಕತ್ವದಿಂದ ತಿದ್ದುವವನು ಆಗಿರಬೇಕು. ಒಂದು ವೇಳೆ ದೇವರು ಆ ಎದುರಿಸುವವರಲ್ಲಿ ಪಶ್ಚಾತ್ತಾಪವನ್ನುಂಟುಮಾಡಿ ಸತ್ಯದ ತಿಳುವಳಿಕೆಯನ್ನು ಅವರಿಗೆ ಕೊಟ್ಟಾನು.ಸೈತಾ ನನ ಉರ್ಲಿಗೆ ಬಿದ್ದು ಅವನ ಇಷ್ಟದಿಂದ ಸೆರೆ ಒಯ್ಯಲ್ಪಟ್ಟವರಾದ ಇವರು ಒಂದು ವೇಳೆ ಎಚ್ಚೆತ್ತಾರು.
- Luke 20:13 ಲೂಕನು 20:13ಆಗ ದ್ರಾಕ್ಷೇತೋಟದ ಯಜಮಾನನು--ನಾನೇನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನೇ ಕಳುಹಿ ಸುವೆನು. ಅವರು ಇವನನ್ನು ನೋಡಿಯಾದರೂ ಇವ ನನ್ನು ಗೌರವಿಸಿಯಾರು ಎಂದು ಅಂದುಕೊಂಡನು.
- Jeremiah 36:7 ಯೆರೆಮೀಯ 36:7ಒಂದು ವೇಳೆ ಅವರ ವಿಜ್ಞಾಪನೆ ಕರ್ತನ ಮುಂದೆ ಬಂದೀತು; ಅವರು ತಮ್ಮ ತಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು; ಕರ್ತನು ಈ ಜನರಿಗೆ ವಿರೋಧವಾಗಿ ಪ್ರಕಟಿಸಿರುವ ಕೋಪವೂ ಉರಿಯೂ ಅಪಾರವಾಗಿದೆ ಅಂದನು.
- Psalm 81:13 ಕೀರ್ತನೆಗಳು 81:13ಹಾ, ನನ್ನ ಜನರು ನನ್ನ ಮಾತನ್ನು ಕೇಳಿ, ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ,
- Jeremiah 27:2 ಯೆರೆಮೀಯ 27:2ಕರ್ತನು ನನಗೆ ಹೇಳಿದ್ದೇನಂದರೆ--ಬಂಧನಗಳನ್ನೂ ನೊಗಗಳನ್ನೂ ಮಾಡಿಸಿಕೊಂಡು ನಿನ್ನ ಕುತ್ತಿಗೆಯ ಮೇಲೆ ಇಡು.
- Luke 13:34 ಲೂಕನು 13:34ಓ ಯೆರೂಸಲೇಮೇ,ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಲ್ಪಟ್ಟವರಿಗೆ ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಎಷ್ಟೋ ಸಾರಿ ಕೂಡಿಸಬೇಕೆಂದಿದ್ದೆನು; ಆದರೆ ನಿನಗೆ ಅದು ಮನಸ್ಸಿಇಗೋ, ನಿಮ್ಮ ಮನೆಯು ಹಾಳಾಗಿ ನಿಮಗೆ ಬಿಡಲ್ಪಟ್ಟಿದೆ; ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
- Ezekiel 12:10–12 ಯೆಹೆಜ್ಕೇಲನು 12:10–12ಅವರಿಗೆ ನೀನು ಹೀಗೆ ಹೇಳಬೇಕು ಎಂದು ದೇವರಾದ ಕರ್ತನು ಹೇಳುತ್ತಾನೆ--ಈ ಭಾರವು ಯೆರೂಸಲೇಮಿನಲ್ಲಿರುವ ಪ್ರಭುವನ್ನೂ ಅದರ ಮಧ್ಯದಲ್ಲಿರುವ ಸಮಸ್ತ ಇಸ್ರಾ ಯೇಲಿನ ಮನೆತನದವರನ್ನೂ ಕುರಿತದ್ದಾಗಿದೆ. ಹೀಗೆ ಹೇಳು--ನಾನು ನಿಮಗೆ ಗುರುತಾಗಿದ್ದೇನೆ. ನಾನು ಮಾಡಿದ ಹಾಗೆ ಅವರಿಗೆ ಮಾಡಲ್ಪಡುವದು, ಅವರು ಸಾಗಿ ಸೆರೆಗೆ ಹೋಗುವರು. ಅವರ ಮಧ್ಯದಲ್ಲಿರುವ ಪ್ರಭುವು ಹೆಗಲ ಮೇಲೆ ಹೊರೆಯನ್ನು ಹೊತ್ತು ಕೊಂಡು ಕತ್ತಲಲ್ಲಿ ಹೊರಟು ಹೋಗುವನು; ಅವರು ಗೋಡೆಯನ್ನು ಕೊರೆದು ಆ ಕಿಂಡಿಯ ಮೂಲಕ ತಮ್ಮ ಸಾಮಗ್ರಿಗಳನ್ನು ಹೊರಗೆ ಸಾಗಿಸುವರು. ಅವನು ತನ್ನ ಕಣ್ಣುಗಳಿಂದ ನೆಲವನ್ನು ನೋಡದ ಹಾಗೆ ಮುಖ ವನ್ನು ಮುಚ್ಚಿಕೊಳ್ಳುವನು.
- Jeremiah 13:1–11 ಯೆರೆಮೀಯ 13:1–11ಕರ್ತನು ನನಗೆ--ನೀನು ಹೋಗಿ ನಾರಿನ ದಟ್ಟಿಯನ್ನು ತೆಗೆದುಕೊಂಡು ನಿನ್ನ ನಡುವಿಗೆ ಕಟ್ಟು, ಆದರೆ ಅದನ್ನು ನೀರಿನಲ್ಲಿ ಹಾಕಬೇಡ ಅಂದನು; ಆಗ ಕರ್ತನ ಮಾತಿನ ಪ್ರಕಾರ ನಾನು ಆ ದಟ್ಟಿಯನ್ನು ತಕ್ಕೊಂಡು ನನ್ನ ನಡುವಿಗೆ ಕಟ್ಟಿಕೊಂಡೆನು. ಆಗ ಕರ್ತನ ವಾಕ್ಯವು ನನಗೆ ಎರಡನೇ ಸಾರಿ ಉಂಟಾಗಿ ಹೇಳಿದ್ದೆನಂದರೆ--ನೀನು ನಿನ್ನ ನಡುವಿನಲ್ಲಿರುವ ದಟ್ಟಿಯನ್ನು ತಕ್ಕೊಂಡು ಎದ್ದು ಯೂಫ್ರೇಟೀಸ್ಗೆ ಹೋಗಿ ಅದನ್ನು ಅಲ್ಲಿ ಬಂಡೆಯ ಬಿರುಕಿನಲ್ಲಿ ಅಡಗಿಸು ಎಂದಿತು. ಆಗ ನಾನು ಹೋಗಿ ಕರ್ತನು ನನಗೆ ಆಜ್ಞಾಪಿಸಿದ ಪ್ರಕಾರ ಅದನ್ನು ಯೂಫ್ರೇಟೀಸ್ ಬಳಿ ಯಲ್ಲಿ ಅಡಗಿಸಿದೆನು. ಬಹಳ ದಿವಸಗಳಾದ ಮೇಲೆ ಕರ್ತನು ನನಗೆ--ನೀನು ಎದ್ದು ಯೂಫ್ರೆಟೀ ಸ್ಗೆ ಹೋಗಿ ಅಲ್ಲಿ ಅಡಗಿಸಬೇಕೆಂದು ನಾನು ಆಜ್ಞಾಪಿಸಿದ ದಟ್ಟಿಯನ್ನು ಅಲ್ಲಿಂದ ತಕ್ಕೋ ಅಂದನು. ಆಗ ನಾನು ಯೂಫ್ರೇಟೀಸಿಗೆ ಹೋಗಿ ಅಗೆದು ಆ ದಟ್ಟಿಯನ್ನು ನಾನು ಅಡಗಿಸಿದ್ದಲ್ಲಿಂದ ತೆಗೆದೆನು; ಇಗೋ, ಆ ದಟ್ಟಿಯು ಯಾವ ಕೆಲಸಕ್ಕಾದರೂ ಬಾರದೆ ಕೆಟ್ಟು ಹೋಗಿತ್ತು. ಆಗ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ-- ಕರ್ತನು ಹೀಗೆ ಹೇಳುತ್ತಾನೆ --ಈ ಪ್ರಕಾರ ನಾನು ಯೆಹೂದದ ಗರ್ವವನ್ನೂ ಯೆರೂಸಲೇಮಿನ ದೊಡ್ಡ ಗರ್ವವನ್ನೂ ಕೆಡಿಸುವೆನು. ನನ್ನ ವಾಕ್ಯಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಕಲ್ಪನೆಯಂತೆ ನಡಕೊಂಡು ಬೇರೆ ದೇವರುಗಳನ್ನು ಸೇವಿಸುವದಕ್ಕೂ ಅವುಗಳನ್ನು ಆರಾಧಿಸುವದಕ್ಕೂ ಹಿಂಬಾಲಿಸುವ ಈ ಕೆಟ್ಟ ಜನರು ಯಾವ ಕೆಲಸಕ್ಕಾದರೂ ಬಾರದ ಈ ನಡುಕಟ್ಟಿನ ಹಾಗಿರುವರು. ಯಾವ ಪ್ರಕಾರ ದಟ್ಟಿಯು ಮನುಷ್ಯನ ನಡುವಿಗೆ ಹತ್ತಿಕೊ ಳ್ಳುವದೋ ಅದೇ ಪ್ರಕಾರ ನಾನು ಇಸ್ರಾಯೇಲಿನ ಮನೆತನವನ್ನೆಲ್ಲವನ್ನೂ ಯೆಹೂದದ ಮನೆತನವ ನ್ನೆಲ್ಲವನ್ನೂ ನನಗೆ ಜನರೂ ಹೆಸರೂ ಸ್ತೋತ್ರವೂ ಮಹಿಮೆಯೂ ಆಗುವ ಹಾಗೆ ನನಗೆ ಹತ್ತಿಕೊಳ್ಳುವಂತೆ ಮಾಡಿದೆನು; ಆದರೆ ಅವರು ಕೇಳಲಿಲ್ಲ.
- Jeremiah 18:2–12 ಯೆರೆಮೀಯ 18:2–12ಎದ್ದು ಕುಂಬಾರನ ಮನೆಗೆ ಇಳಿದು ಹೋಗು; ಅಲ್ಲಿ ನಿನಗೆ ನನ್ನ ವಾಕ್ಯಗಳನ್ನು ಕೇಳಮಾಡುವೆನು ಎಂಬದೇ. ಆಗ ನಾನು ಕುಂಬಾರನ ಮನೆಗೆ ಇಳಿದುಹೋದೆನು; ಇಗೋ, ಅವನು ಚಕ್ರದ ಮೇಲೆ ಕೆಲಸಮಾಡುತ್ತಿದ್ದನು. ಅವನು ಮಣ್ಣಿನಿಂದ ಮಾಡಿದ ಪಾತ್ರೆ ಕುಂಬಾರನ ಕೈಯಲ್ಲಿ ಕೆಟ್ಟುಹೋಯಿತು; ಆಗ ಕುಂಬಾರನಿಗೆ ಒಳ್ಳೇದೆಂದು ತೋರುವ ಪ್ರಕಾರ ಅದನ್ನು ಮತ್ತೊಂದು ಪಾತ್ರೆ ಯನ್ನಾಗಿ ಮಾಡಿದನು. ಆಗ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ-- ಓ ಇಸ್ರಾಯೇಲಿನ ಮನೆತನದ ವರೇ, ನಾನು ಈ ಕುಂಬಾರನ ಹಾಗೆ ನಿಮಗೆ ಮಾಡ ಕೂಡದೋ ಎಂದು ಕರ್ತನು ಅನ್ನುತ್ತಾನೆ. ಇಗೋ, ಕುಂಬಾರನ ಕೈಯಲ್ಲಿ ಮಣ್ಣು ಹೇಗೋ ಹಾಗೆಯೇ ಓ ಇಸ್ರಾಯೇಲಿನ ಮನೆತನದವರೇ, ನನ್ನ ಕೈಯಲ್ಲಿ ನೀವು ಇದ್ದೀರಿ. ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿ ಮತ್ತು ಒಂದು ರಾಜ್ಯದ ವಿಷಯವಾಗಿ ಅದನ್ನು ಕೀಳುವದಕ್ಕೂ ಕೆಡವುವ ದಕ್ಕೂ ನಾಶಮಾಡುವದಕ್ಕೂ ಮಾತಾಡುತ್ತೇನೋ ಆ ಜನಾಂಗಕ್ಕೆ ವಿರೋಧವಾಗಿ ನಾನು ಮಾತನಾಡಿದ ತನ್ನ ಕೆಟ್ಟತನವನ್ನು ಬಿಟ್ಟು ತಿರುಗಿದರೆ ನಾನು ಅದಕ್ಕೆ ಮಾಡಬೇಕೆಂದು ಯೋಚಿಸಿದ ಕೆಟ್ಟದ್ದನ್ನು ಕುರಿತು ಪಶ್ಚಾ ತ್ತಾಪ ಪಡುವೆನು. ಇದಲ್ಲದೆ ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿಯೂ ಒಂದು ರಾಜ್ಯದ ವಿಷಯವಾಗಿಯೂ ಅದನ್ನು ಕಟ್ಟುವದಕ್ಕೂ ನೆಡುವದಕ್ಕೂ ಮಾತನಾಡುತ್ತೇನೋ ಅದು ನನ್ನ ಸ್ವರಕ್ಕೆ ವಿಧೇಯವಾಗದೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರೆ ನಾನು ಅದಕ್ಕೆ ಮೇಲನ್ನು ಮಾಡುತ್ತೇನೆಂದು ಹೇಳಿದ ಒಳ್ಳೇದನ್ನು ಕುರಿತು ಪಶ್ಚಾತ್ತಾಪಪಡುವೆನು. ಹೀಗಿರುವದರಿಂದ ಈಗ ಯೆಹೂದದ ಮನುಷ್ಯ ರಿಗೂ ಯೆರೂಸಲೇಮಿನ ನಿವಾಸಿಗಳಿಗೂ ನೀನು ಹೇಳಬೇಕಾದದ್ದೇನಂದರೆ, ಕರ್ತನು ಹೀಗೆ ಹೇಳುತ್ತಾನೆ --ಇಗೋ, ನಾನು ನಿಮಗೆ ವಿರೋಧವಾಗಿ ಕೆಟ್ಟದ್ದನ್ನು ಕಲ್ಪಿಸುತ್ತಾ ಇದ್ದೇನೆ; ನಿಮಗೆ ವಿರೋಧವಾಗಿ ಉಪಾಯವನ್ನು ಆಲೋಚಿಸುತ್ತಾ ಇದ್ದೇನೆ; ನಿಮ್ಮ ನಿಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ಹಿಂತಿರುಗಿರಿ, ನಿಮ್ಮ ಮಾರ್ಗಗಳನ್ನೂ ಕ್ರಿಯೆಗಳನ್ನೂ ಒಳ್ಳೇದಾಗ ಮಾಡಿರಿ ಎಂಬದು. ಆದರೆ ಅವರು--ನಿರೀಕ್ಷೆಯಿಲ್ಲ; ಸ್ವಂತ ಆಲೋಚನೆಗಳ ಪ್ರಕಾರ ನಡೆದುಕೊಳ್ಳುವೆವು; ನಮ್ಮ ನಮ್ಮ ಕೆಟ್ಟ ಹೃದಯಗಳ ಕಲ್ಪನೆಯ ಪ್ರಕಾರ ಮಾಡುವೆವು ಅಂದರು.
- Ezekiel 4:1–17 ಯೆಹೆಜ್ಕೇಲನು 4:1–17ಇದಲ್ಲದೆ ಮನುಷ್ಯಪುತ್ರನೇ, ನೀನು ಒಂದು ಹಂಚನ್ನು ತೆಗೆದುಕೊಂಡು ನಿನ್ನ ಮುಂದಿಟ್ಟು ಅದರ ಮೇಲೆ ಯೆರೂಸಲೇಮ್ ನಗರದ ನಕ್ಷೆಯನ್ನು ಬರೆ. ಅದಕ್ಕೆ ಮುತ್ತಿಗೆ ಹಾಕಿ ಎದುರಾಗಿ ಒಂದು ಕೋಟೆಯನ್ನು ಕಟ್ಟು. ಇದಲ್ಲದೆ ಎದುರಾಗಿ ಒಂದು ದಿಬ್ಬವನ್ನು ಕಟ್ಟು; ಎದುರಾಗಿ ಒಂದು ದಂಡನ್ನು ಇರಿಸಿ ವಿರೋಧವಾಗಿ ಸುತ್ತಲೂ ಭಿತ್ತಿಭೇದಕ ಮಾಡು ವಂಥ ಆಯುಧಗಳನ್ನು ಇಡು. ಇದಾದ ಮೇಲೆ ನೀನು ಒಂದು ಕಬ್ಬಿಣದ ತಟ್ಟೆಯನ್ನು ತೆಗೆದುಕೊಂಡು ಅದನ್ನು ಕಬ್ಬಿಣದ ಗೋಡೆಯೆಂದು ತಿಳಿದು ನಿನಗೂ ನಗರಕ್ಕೂ ಮಧ್ಯದಲ್ಲಿ ಇರಿಸು. ಆಮೇಲೆ ಅದಕ್ಕೆ ಎದುರಾಗಿ ನಿನ್ನ ಮುಖವನ್ನು ಇಡು. ಆಗ ಅದು ಮುತ್ತಲ್ಪಡುವದು; ನೀನು ಅದಕ್ಕೆ ಎದುರಾಗಿ ಮುತ್ತಿ ದಂತಾಗುವದು. ಇದು ಇಸ್ರಾಯೇಲ್ ಮನೆತನದ ಗುರುತಾಗಿರುವದು. ನೀನು ನಿನ್ನ ಎಡಪಾರ್ಶ್ವದಲ್ಲಿ ಮಲಗಿ ಇಸ್ರಾ ಯೇಲ್ ವಂಶದವರ ಅಕ್ರಮಗಳನ್ನು ಅದರ ಮೇಲಿಡ ಬೇಕು; ನೀನು ಅದರ ಮೇಲೆ ಮಲಗುವ ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮಗಳನ್ನು ಹೊತ್ತುಕೊಂಡಿ ರಬೇಕು. ನಾನು ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮದ ವರ್ಷಗಳನ್ನು ನಿನಗೆ ನೇಮಿಸಿದ್ದೇನೆ. ಅವು ಮುನ್ನೂರತೊಂಭತ್ತು ದಿವಸಗಳಾಗಿವೆ; ಹೀಗೆ ನೀನು ಇಸ್ರಾಯೇಲ್ಯರ ಮನೆತನದವರ ಅಕ್ರಮಗಳನ್ನು ಹೊರಬೇಕು. ನೀನು ಇವುಗಳನ್ನು ಮಾಡಿದ ಮೇಲೆ ಇನ್ನೊಂದು ಸಾರಿ ಬಲಪಾರ್ಶ್ವದಲ್ಲಿ ಮಲಗಿ ಯೆಹೂ ದನ ಮನೆಯ ಅಕ್ರಮವನ್ನು ನಲವತ್ತು ದಿವಸ ಹೊರಬೇಕು; ನಾನು ನಿನಗೆ ಒಂದೊಂದು ದಿನವನ್ನು ಒಂದೊಂದು ವರ್ಷಕ್ಕೆ ನೇಮಿಸಿದ್ದೇನೆ. ಆದದರಿಂದ ಯೆರೂಸಲೇಮಿನ ಮುತ್ತಿಗೆಯ ಕಡೆಗೆ ನಿನ್ನ ಮುಖವನ್ನು ಇಡಬೇಕು; ನಿನ್ನ ಭುಜವನ್ನು ನೀನು ಬರಿದುಮಾಡಿ ಕೊಂಡು ಅದಕ್ಕೆ ವಿರೋಧವಾಗಿ ಪ್ರವಾದಿಸಬೇಕು. ಇಗೋ, ನಾನು ನಿನ್ನ ಮೇಲೆ ಬಂಧನಗಳನ್ನು ಇಡು ತ್ತೇನೆ. ನೀನು ನಿನ್ನ ಮುತ್ತಿಗೆಯ ದಿವಸಗಳು ಮುಗಿ ಯುವವರೆಗೂ ಒಂದು ಪಾರ್ಶ್ವದಿಂದ ಮತ್ತೊಂದು ಪಾರ್ಶ್ವಕ್ಕೆ ತಿರುಗಿಕೊಳ್ಳಬಾರದು. ಇದಲ್ಲದೆ ನೀನು ಗೋಧಿ, ಬಾರ್ಲಿ, ಅವರೆ, ಅಲ ಸಂದಿ, ನವಣೆ, ಸಜ್ಜೆಗಳನ್ನು ತೆಗೆದುಕೊಂಡು ಅವುಗಳನ್ನು ಒಂದು ಮಡಿಕೆಯಲ್ಲಿಟ್ಟು ನೀನು ನಿನ್ನ ಪಾರ್ಶ್ವದಲ್ಲಿ ಮಲಗುವ ದಿವಸಗಳ ಲೆಕ್ಕದ ಪ್ರಕಾರ ನಿನಗಾಗಿ ರೊಟ್ಟಿಯನ್ನು ಮಾಡಿಕೊಂಡು ಮುನ್ನೂರ ತೊಂಭತ್ತು ದಿನಗಳು ಅದರಿಂದಲೇ ತಿನ್ನಬೇಕು. ನೀನು ತಿನ್ನುವ ಆಹಾರದ ತೂಕದ ಪ್ರಕಾರ ಅದು ಒಂದು ದಿನಕ್ಕೆ ಇಪ್ಪತ್ತು ಶೇಕೆಲುಗಳಾಗಿರಬೇಕು. ಕಾಲಕಾಲಕ್ಕೆ ಸರಿಯಾಗಿ ಅದನ್ನು ತಿನ್ನಬೇಕು. ನೀನು ನೀರನ್ನು ಸಹ ಅಳತೆಯ ಪ್ರಕಾರ ಕುಡಿಯಬೇಕು. ಹಿನ್ನಿನ ಆರನೆಯ ಪಾಲನ್ನು ಕಾಲಕಾಲಕ್ಕೆ ಸರಿಯಾಗಿ ಕುಡಿಯಬೇಕು. ಇದಲ್ಲದೆ ನೀನು ಆಹಾರವನ್ನು ಬಾರ್ಲಿಯ ರೊಟ್ಟಿಗಳಂತೆ ತಿನ್ನಬೇಕು; ಮತ್ತು ಅದನ್ನು ಮನುಷ್ಯನೊಳಗಿಂದ ಬರುವ ಮಲದಿಂದ ಅವರ ಕಣ್ಣುಗಳ ಮುಂದೆ ಅಡಿಗೆಮಾಡಬೇಕು; ಕರ್ತನು ಹೇಳಿದ್ದೇನಂದರೆ -- ಹೀಗೆಯೇ ಇಸ್ರಾಯೇಲ್ಯರ ಮಕ್ಕಳು ತಮ್ಮ ಅಶುದ್ಧವಾದ ರೊಟ್ಟಿಯನ್ನು ಅನ್ಯ ಜನಾಂಗಗಳೊಳಗೆ ತಿನ್ನುವರು. ಆಗ ನಾನು ಅವರನ್ನು ಓಡಿಸಿ ಬಿಡುತ್ತೇನೆ. ಆಮೇಲೆ ನಾನು--ಹಾ! ದೇವ ರಾದ ಕರ್ತನೇ, ಇಗೋ, ನನ್ನ ಪ್ರಾಣವು ಅಶುದ್ಧವಾಗ ಲಿಲ್ಲ, ಯಾಕಂದರೆ ನಾನು ಚಿಕ್ಕಂದಿನಿಂದ ಇಷ್ಟರವರೆಗೂ ತನ್ನಷ್ಟಕ್ಕೆ ತಾನೇ ಸತ್ತಿರುವದನ್ನು ಅಥವಾ ಹರಿದು ಚೂರು ಚೂರಾಗಿರುವದನ್ನು ತಿನ್ನಲಿಲ್ಲ; ಇಲ್ಲವೆ ಅಸಹ್ಯ ವಾದ ಮಾಂಸವನ್ನಾದರೂ ನನ್ನ ಬಾಯಿಯ ಹತ್ತಿರ ತಂದಿಲ್ಲ ಎಂದೆನು. ಆಗ ಆತನು ನನಗೆ--ಇಗೋ, ಮನುಷ್ಯನ ಮಲಕ್ಕೆ ಬದಲಾಗಿ ಹಸುವಿನ ಸಗಣಿಯನ್ನು ನಿನಗೆ ಕೊಟ್ಟಿದ್ದೇನೆ; ಅದರಿಂದ ನೀನು ರೊಟ್ಟಿಯನ್ನು ತಯಾರಿಸಬಹುದು ಅಂದನು. ಇದಾದ ಮೇಲೆ ಆತನು ನನಗೆ ಮನುಷ್ಯ ಪುತ್ರನೇ, ಇಗೋ, ನಾನು ಯೆರೂಸಲೇಮಿನಲ್ಲಿ ಅನ್ನದಾನವನ್ನು ಮುರಿಯುವೆನು. ಅವರು ತೂಕದ ಪ್ರಕಾರ ಜಾಗರೂಕತೆಯಿಂದ ರೊಟ್ಟಿಯನ್ನು ತಿನ್ನುವರು. ನೀರನ್ನು ಅಳತೆಯ ಪ್ರಕಾರ ಆಶ್ಚರ್ಯದಿಂದ ಕುಡಿಯುವರು.ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಆಶ್ಚರ್ಯಪಟ್ಟು ಒಬ್ಬರ ಸಂಗಡ ಒಬ್ಬರು ತಮ್ಮ ಅಕ್ರಮಗಳಿಗಾಗಿ ಕ್ಷಯಿಸಿ ಹೋಗುವರು. ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಆಶ್ಚರ್ಯಪಟ್ಟು ಒಬ್ಬರ ಸಂಗಡ ಒಬ್ಬರು ತಮ್ಮ ಅಕ್ರಮಗಳಿಗಾಗಿ ಕ್ಷಯಿಸಿ ಹೋಗುವರು.
Original words (Hebrew)
- son · H1121בֵּן bên
- man · H120אָדָם ʼâdâm
- prepare · H6213עָשָׂה ʻâsâh
- stuff · H3627כְּלִי kᵉlîy
- removing · H1473גּוֹלָה gôwlâh
- remove · H1540גָּלָה gâlâh
- day · H3119יוֹמָם yôwmâm
- sight · H5869עַיִן ʻayin
- remove · H1540גָּלָה gâlâh
- place · H4725מָקוֹם mâqôwm
- another · H312אַחֵר ʼachêr
- place · H4725מָקוֹם mâqôwm
- sight · H5869עַיִן ʻayin
- consider · H7200רָאָה râʼâh
- rebellious · H4805מְרִי mᵉrîy
- house · H1004בַּיִת bayith