Ezekiel · chapter 14 · verse 9
Ezekiel 14:9 in Kannada
ಪ್ರವಾದಿಯು ಮೋಸಹೋಗಿ ವಾಕ್ಯವನ್ನು ಹೇಳಿದರೆ ಕರ್ತನಾದ ನಾನೇ ಆ ಪ್ರವಾದಿಯನ್ನು ಮೋಸಗೊಳಿಸಿರುತ್ತೇನೆ; ನಾನು ನನ್ನ ಕೈಯನ್ನು ಅವನ ಮೇಲೆ ಚಾಚಿ ನನ್ನ ಜನರಾದ ಇಸ್ರಾಯೇಲ್ಯರ ಮಧ್ಯ ದೊಳಗಿಂದ ನಾಶಪಡಿಸುವೆನು.
Pravaadiyu mosahogi vaakyavannu helidare kartanaada naane aa pravaadiyannu mosagolisiruttene; naanu nanna kaiyannu avana mele chaachi nanna janaraada israayelyara madhya dolaginda naashapadisuvenu.
Ezekiel 14:9 in English
- King James Version (KJV)
- And if the prophet be deceived when he hath spoken a thing, I the LORD have deceived that prophet, and I will stretch out my hand upon him, and will destroy him from the midst of my people Israel.
- World English Bible (WEB)
- “‘“If the prophet is deceived and speaks a word, I, the LORD, have deceived that prophet, and I will stretch out my hand on him, and will destroy him from among my people Israel.
- American Standard Version (ASV)
- And if the prophet be deceived and speak a word, I, Jehovah, have deceived that prophet, and I will stretch out my hand upon him, and will destroy him from the midst of my people Israel.
- Bible in Basic English (BBE)
- And if the prophet, tricked by deceit, says anything, it is I the Lord by whom he has been tricked, and I will put out my hand against him, and he will be cut off from among my people Israel.
- Darby Translation (DBY)
- And if the prophet be enticed and shall speak a word, I Jehovah have enticed that prophet; and I will stretch out my hand against him, and will destroy him from the midst of my people Israel.
- Webster's Bible (WBS)
- And if the prophet be deceived when he hath spoken a thing, I the LORD have deceived that prophet, and I will stretch out my hand upon him, and will destroy him from the midst of my people Israel.
- Young's Literal Translation (YLT)
- 'And the prophet, when he is enticed, and hath spoken a word — I, Jehovah, I have enticed that prophet, and have stretched out My hand against him, and have destroyed him from the midst of My people Israel.
Read in context
- 7ನನಗೆ ತನ್ನನ್ನು ಅನ್ಯನನ್ನಾಗಿ ಮಾಡಿಕೊಂಡು ತನ್ನ ಹೃದಯದಲ್ಲಿ ವಿಗ್ರಹಗಳನ್ನು ಸ್ಥಾಪಿಸಿ ಅಕ್ರಮದ ಎಡೆತಡೆಯನ್ನು ತನ್ನ ಮುಖದ ಮುಂದೆ ಇಟ್ಟುಕೊಂಡು ಪ್ರವಾದಿಯ ಬಳಿಗೆ ನನ್ನ ವಿಷಯವಾಗಿ ವಿಚಾರಿಸಲು ಬರುವ ಪ್ರತಿಯೊಬ್ಬ ಇಸ್ರಾಯೇಲಿನ ಮನೆತನದವರಲ್ಲಿಯೂ ಇಸ್ರಾಯೇಲಿನಲ್ಲಿ ತಂಗುವ ಅನ್ಯರಲ್ಲಿಯೂ ಪ್ರತಿಯೊ ಬ್ಬನಿಗೂ ಕರ್ತನಾದ ನಾನೇ ಉತ್ತರ ಕೊಡುತ್ತೇನೆ.
- 8ನಾನು ಆ ಮನುಷ್ಯನ ಮೇಲೆ ಉಗ್ರಕೋಪಗೊಂಡು ಅವು ನನ್ನ ಗುರುತನ್ನಾಗಿಯೂ ಗಾದೆಯನ್ನಾಗಿಯೂ ಮಾಡಿಕೊಂಡು ನನ್ನ ಜನರ ಮಧ್ಯದೊಳಗಿಂದ ಕಡಿದು ಬಿಡುವೆನು; ನಾನೇ ಕರ್ತನೆಂದು ತಿರಿಗಿ ತಿಳಿದುಕೊಳ್ಳು ವಿರಿ.
- 9ಪ್ರವಾದಿಯು ಮೋಸಹೋಗಿ ವಾಕ್ಯವನ್ನು ಹೇಳಿದರೆ ಕರ್ತನಾದ ನಾನೇ ಆ ಪ್ರವಾದಿಯನ್ನು ಮೋಸಗೊಳಿಸಿರುತ್ತೇನೆ; ನಾನು ನನ್ನ ಕೈಯನ್ನು ಅವನ ಮೇಲೆ ಚಾಚಿ ನನ್ನ ಜನರಾದ ಇಸ್ರಾಯೇಲ್ಯರ ಮಧ್ಯ ದೊಳಗಿಂದ ನಾಶಪಡಿಸುವೆನು.
- 10ಅವರು ತಮ್ಮ ಅಕ್ರಮದ ದಂಡನೆಯನ್ನು ಹೊರುವರು; ವಿಚಾರಿಸು ವವನ ದಂಡನೆಯು ಹೇಗೋ ಹಾಗೆಯೇ ಪ್ರವಾ ದನೆಯ ದಂಡನೆಯೂ ಇರುವದು.
- 11ಇಸ್ರಾಯೇಲಿನ ಮನೆತನದವರು ಇನ್ನು ಮೇಲೆ ನನ್ನನ್ನು ಬಿಟ್ಟು ತಿರುಗದೇ ತಮ್ಮ ಎಲ್ಲಾ ದ್ರೋಹಗಳಿಂದ ಅಶುದ್ಧರಾಗದೆ ಇರುವ ದರಿಂದ ಅವರು ನನ್ನ ಜನರಾಗಿರುವರು ಅವರಿಗೆ ನಾನು ದೇವರಾಗಿರುವೆನು, ಎಂದು ದೇವರಾದ ಕರ್ತನು ಹೇಳುತ್ತಾನೆ.
Cross references
- Ezekiel 20:25 ಯೆಹೆಜ್ಕೇಲನು 20:25ಆದಕಾರಣ ನಾನು ಅವರಿಗೆ ಅಹಿತವಾದ ನಿಯಮಗಳನ್ನೂ ಅವರು ಬದುಕಬಾರದ ನ್ಯಾಯಗಳನ್ನೂ ಕೊಟ್ಟೆನು.
- Jeremiah 4:10 ಯೆರೆಮೀಯ 4:10ಆಗ ನಾನು ಹೇಳಿದ್ದೇನಂದರೆ--ಹಾ! ಕರ್ತನೇ, ದೇವರೇ, ನಿಶ್ಚಯ ವಾಗಿ ನೀನು ಈ ಜನರಿಗೂ ಯೆರೂಸಲೇಮಿಗೂ-- ನಿಮಗೆ ಸಮಾಧಾನವಾಗುವದೆಂದು ಹೇಳಿ ಬಹಳ ಮೋಸಮಾಡಿದ್ದೀ; ಕತ್ತಿಯು ಪ್ರಾಣದ ವರೆಗೂ ತಾಕುತ್ತ ದಲ್ಲವೋ?
- Jeremiah 14:15 ಯೆರೆಮೀಯ 14:15ಆದದರಿಂದ ಕರ್ತನು ತಾನು ಕಳುಹಿಸದೆ ತನ್ನ ಹೆಸರಿನಲ್ಲಿ ಪ್ರವಾದಿಸುವಂಥ ಮತ್ತು ಈ ದೇಶದಲ್ಲಿ ಕತ್ತಿಯೂ ಬರವೂ ಇರುವದಿಲ್ಲವೆಂದು ಹೇಳುವಂಥ ಪ್ರವಾದಿಗಳನ್ನು ಕುರಿತು ಹೇಳುವದೇನಂದರೆ--ಕತ್ತಿ ಯಿಂದಲೂ ಕ್ಷಾಮದಿಂದಲೂ ಆ ಪ್ರವಾದಿಗಳು ತಾವೇ ನಿರ್ಮೂಲವಾಗುತ್ತಾರೆ.
- 2 Samuel 12:11–12 2 ಸಮುವೇಲನು 12:11–12ಕರ್ತನು--ಇಗೋ, ನಾನು ನಿನ್ನ ಮನೆಯಲ್ಲಿ ಕೆಟ್ಟದ್ದನ್ನು ನಿನಗೆ ವಿರೋಧವಾಗಿ ಏಳುವಂತೆ ಮಾಡಿ ನಿನ್ನ ಕಣ್ಣುಗಳ ಮುಂದೆ ನಿನ್ನ ಹೆಂಡತಿಯರನ್ನು ತೆಗೆದು ನಿನ್ನ ನೆರೆಯವನಿಗೆ ಕೊಡುವೆನು. ಅವನು ಹಗಲಿನಲ್ಲಿಯೇ ಅವರ ಸಂಗಡ ಮಲಗುವನು. ನೀನು ಅದನ್ನು ಮರೆಯಲ್ಲಿ ಮಾಡಿದಿ; ಆದರೆ ನಾನು ಈ ಕಾರ್ಯವನ್ನು ಇಸ್ರಾಯೇಲ್ಯರೆಲ್ಲರ ಮುಂದೆಯೂ ಸೂರ್ಯನ ಮುಂದೆಯೂ ಮಾಡುವೆನು ಅಂದನು.
- Isaiah 66:4 ಯೆಶಾಯ 66:4ನಾನು ಸಹ ಅವರ ಮೋಸಗಳನ್ನು ಆದುಕೊಂಡು ಅವರ ಭಯಗಳನ್ನು ಅವರ ಮೇಲೆ ಬರಮಾಡುವೆನು; ಯಾಕಂದರೆ ನಾನು ಕರೆಯಲು ಯಾರೂ ಉತ್ತರ ಕೊಡಲಿಲ್ಲ. ನಾನು ಮಾತನಾಡಲು ಅವರು ಕೇಳಲಿಲ್ಲ. ಆದರೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು. ನಾನು ಮೆಚ್ಚದ್ದನ್ನು ಆದುಕೊಂಡರು.
- 2 Thessalonians 2:9–12 2 ಥೆಸಲೊನೀಕದವರಿಗೆ 2:9–12ಆ ಕೆಡುಕನ ಬರುವಿಕೆಯು ಸೈತಾನನ ಕಾರ್ಯಕ್ಕನು ಸಾರವಾಗಿರುವದು; ಅದು ಎಲ್ಲಾ ಶಕ್ತಿಯಿಂದಲೂ ಸೂಚಕ ಕಾರ್ಯಗಳಿಂದಲೂ ಸುಳ್ಳಾದ ಅದ್ಭುತ ಕಾರ್ಯಗಳಿಂದಲೂ ದುರ್ನೀತಿಯ ಎಲ್ಲಾ ವಂಚನೆ ಯಿಂದಲೂ ಕೂಡಿ ನಾಶವಾಗುವವರಲ್ಲಿ ಸಂಭವಿಸು ವದು; ಅವರು ಪ್ರೀತಿಯ ಸತ್ಯವನ್ನು ಅಂಗೀಕರಿಸದ ಕಾರಣ ರಕ್ಷಣೆಯನ್ನು ಹೊಂದುವದಿಲ್ಲ. ಇದೇ ಕಾರಣದಿಂದ ದೇವರು ಬಲವಾದ ಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಮಾಡುತ್ತಾನೆ. ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ತೀರ್ಪಿಗೆ ಒಳಗಾಗುವರು.
- Job 12:16 ಯೋಬನು 12:16ಬಲವೂ ಸುಜ್ಞಾ ನವೂ ಆತನಲ್ಲಿವೆ; ಮೋಸಹೋಗುವವನೂ ಮೋಸ ಗೊಳಿಸುವವನೂ ಆತನವರೇ.
- Isaiah 9:17 ಯೆಶಾಯ 9:17ಹೀಗಿರಲು ಕರ್ತನು ಅವರ ಯೌವನಸ್ಥರಲ್ಲಿ ಆನಂದಿಸುವದಿಲ್ಲ; ಅವರ ಅನಾಥರನ್ನೂ ವಿಧವೆಯರನ್ನೂ ಕರುಣಿಸುವದಿಲ್ಲ; ಪ್ರತಿಯೊಬ್ಬನು ಕಪಟಿಯೂ ಕೇಡು ಮಾಡುವವನೂ ಆಗಿದ್ದಾನೆ. ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ. ಆದದರಿಂದ ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.
- 1 Kings 22:20–23 1 ಅರಸುಗಳು 22:20–23ಆಗ ಕರ್ತನು--ಅಹಾಬನು ಹೋಗಿ ಗಿಲ್ಯಾದಿನ ರಾಮೋ ತಿನ ಬಳಿಯಲ್ಲಿ ಬೀಳುವ ಹಾಗೆ ಅವನನ್ನು ಮರುಳು ಗೊಳಿಸುವವನು ಯಾರು ಅಂದನು. ಒಬ್ಬನು ಹೀಗೆಯೂ ಮತ್ತೊಬ್ಬನು ಹಾಗೆಯೂ ಹೇಳುತ್ತಿರುವಾಗ ಒಂದು ಆತ್ಮವು ಹೊರಟು ಬಂದು ಕರ್ತನ ಮುಂದೆ ನಿಂತು--ನಾನು ಅವನನ್ನು ಮರುಳುಗೊಳಿಸುತ್ತೇನೆ ಅಂದಿತು. ಆಗ ಕರ್ತನು ಅದಕ್ಕೆ--ಯಾವದರಿಂದ ಅಂದನು. ಅದಕ್ಕದು-- ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮನಾಗಿ ರುವೆನು ಅಂದಿತು. ಅದಕ್ಕೆ ಆತನು--ನೀನು ಅವ ನನ್ನು ಮರುಳುಗೊಳಿಸುವಿ ಮತ್ತು ಜಯಿಸುವಿ. ನೀನು ಹೋಗಿ ಹಾಗೆ ಮಾಡು ಅಂದನು. ಆದದರಿಂದ ಇಗೋ, ಈಗ ಕರ್ತನು ಈ ಎಲ್ಲಾ ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮವನ್ನು ಇಟ್ಟಿದ್ದಾನೆ; ಇದ ಲ್ಲದೆ ಕರ್ತನು ನಿನ್ನನ್ನು ಕುರಿತು ಕೇಡನ್ನು ಹೇಳಿದ್ದಾನೆ ಅಂದನು.
- Isaiah 10:4 ಯೆಶಾಯ 10:4ನಾನಿಲ್ಲದೆ ಕೈದಿಗಳ ಕೆಳಗೆ ಮುದುರಿಕೊಂಡು, ಹತರಾಗಿರುವವರ ಕೆಳಗೆ ಬಿದ್ದಿರುವದೇ ಇವರ ಗತಿ. ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇರುವದು.
- Psalm 81:11–12 ಕೀರ್ತನೆಗಳು 81:11–12ಆದರೆ ನನ್ನ ಜನರು ನನ್ನ ಸ್ವರವನ್ನು ಕೇಳಲಿಲ್ಲ; ಇಸ್ರಾಯೇಲು ನನ್ನ ಮೇಲೆ ಮನಸ್ಸಿಡಲಿಲ್ಲ. ಆದದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಲ್ಲಿ ನಡೆದುಕೊಂಡರು.
- Isaiah 9:21 ಯೆಶಾಯ 9:21ಹೀಗೆ ಮನಸ್ಸೆಯು ಎಫ್ರಾಯಾಮನ್ನು ಮತ್ತು ಎಫ್ರಾಯಾಮು ಮನಸ್ಸೆ ಯನ್ನು ತಿಂದುಬಿಡುವವು; ಅವರು ಒಟ್ಟಾಗಿ ಸೇರಿ ಯೆಹೂದಕ್ಕೆ ವಿರೋಧವಾಗಿರುವರು. ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇರುವದು.
Original words (Hebrew)
- prophet · H5030נָבִיא nâbîyʼ
- deceived · H6601פָּתָה pâthâh
- spoken · H1696דָבַר dâbar
- thing · H1697דָּבָר dâbâr
- deceived · H6601פָּתָה pâthâh
- prophet · H5030נָבִיא nâbîyʼ
- out · H5186נָטָה nâṭâh
- hand · H3027יָד yâd
- destroy · H8045שָׁמַד shâmad
- midst · H8432תָּוֶךְ tâvek
- people · H5971עַם ʻam
- Israel · H3478יִשְׂרָאֵל Yisrâʼêl