Ezekiel · chapter 20 · verse 25
Ezekiel 20:25 in Kannada
ಆದಕಾರಣ ನಾನು ಅವರಿಗೆ ಅಹಿತವಾದ ನಿಯಮಗಳನ್ನೂ ಅವರು ಬದುಕಬಾರದ ನ್ಯಾಯಗಳನ್ನೂ ಕೊಟ್ಟೆನು.
Aadakaarana naanu avarige ahitavaada niyamagalannoo avaru badukabaarada nyaayagalannoo kottenu.
Ezekiel 20:25 in English
- King James Version (KJV)
- Wherefore I gave them also statutes [that were] not good, and judgments whereby they should not live;
- World English Bible (WEB)
- Moreover also I gave them statutes that were not good, and ordinances in which they couldn’t live.
- American Standard Version (ASV)
- Moreover also I gave them statutes that were not good, and ordinances wherein they should not live;
- Bible in Basic English (BBE)
- And further, I gave them rules which were not good and orders in which there was no life for them;
- Darby Translation (DBY)
- And I also gave them statutes that were not good, and ordinances whereby they should not live;
- Webster's Bible (WBS)
- Wherefore I gave them also statutes [that were] not good, and judgments by which they should not live;
- Young's Literal Translation (YLT)
- And I also, I have given to them statutes not good, And judgments by which they do not live.
Read in context
- 23ನಾನು ಅವರನ್ನು ಅನ್ಯಜನಾಂಗಗಳಲ್ಲಿ ಚದರಿಸುತ್ತೇನೆಂದೂ ದೇಶಗಳಲ್ಲಿ ಹರಡಿಸುತ್ತೇನೆಂದೂ ಅರಣ್ಯದಲ್ಲಿ ಅವರ ಮೇಲೆ ಕೈ ಎತ್ತಿದೆನು;
- 24ಅವರು ನನ್ನ ನ್ಯಾಯಗಳಲ್ಲಿ ನಡೆಯದೆ, ನನ್ನ ನಿಯಮಗಳನ್ನು ಅಲಕ್ಷಿಸಿ ನನ್ನ ಸಬ್ಬತ್ತುಗಳನ್ನು ಅಪವಿತ್ರಪಡಿಸಿದರು; ತಮ್ಮ ಪಿತೃಗಳ ವಿಗ್ರಹಗಳ ಕಡೆಗೆ ಕಣ್ಣಿಟ್ಟಿದ್ದರು.
- 25ಆದಕಾರಣ ನಾನು ಅವರಿಗೆ ಅಹಿತವಾದ ನಿಯಮಗಳನ್ನೂ ಅವರು ಬದುಕಬಾರದ ನ್ಯಾಯಗಳನ್ನೂ ಕೊಟ್ಟೆನು.
- 26ನಾನೇ ಕರ್ತನೆಂದು ಅವರು ತಿಳಿಯುವ ಹಾಗೆ ಅವರು ತಮ್ಮ ಚೊಚ್ಚಲು ಮಕ್ಕಳನ್ನು ಬೆಂಕಿಗೆ ಆಹುತಿಮಾಡಿದ್ದರಿಂದ ಅವರು ಹಾಳಾಗಿ ಬಿದ್ದಿರುವಂತೆ ನಾನು ಅವರ ಅರ್ಪಣೆಗಳನ್ನು ಅಪವಿತ್ರಪಡಿಸಿದೆನು.
- 27ಆದದರಿಂದ ಮನುಷ್ಯಪುತ್ರನೇ, ನೀನು ಇಸ್ರಾ ಯೇಲಿನ ಮನೆತನದವರ ಸಂಗಡ ಮಾತಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಅದೇನಂದರೆ, ನನಗೆ ವಿರುದ್ಧವಾಗಿ ಬಹಳ ಅಪರಾಧ ಮಾಡಿದ್ದರಲ್ಲಿ ನಿಮ್ಮ ಪಿತೃಗಳು ನನ್ನನ್ನು ದೂಷಿಸಿದರು.
Cross references
- Psalm 81:12 ಕೀರ್ತನೆಗಳು 81:12ಆದದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಲ್ಲಿ ನಡೆದುಕೊಂಡರು.
- Ezekiel 20:39 ಯೆಹೆಜ್ಕೇಲನು 20:39ನಿಮ್ಮ ವಿಷಯ ವಾಗಿ ಓ ಇಸ್ರಾಯೇಲಿನ ಮನೆತನದವರೇ, ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನೀವು ನನಗೆ ಕಿವಿಗೊಡದಿದ್ದರೆ ಹೋಗಿ ಇನ್ನು ಮೇಲೆಯೂ ನಿಮ್ಮ ನಿಮ್ಮ ವಿಗ್ರಹಗಳನ್ನು ಸೇವಿಸಿರಿ; ಆದರೆ ನಿಮ್ಮ ದಾನಗ ಳಿಂದಲೂ ವಿಗ್ರಹಗಳಿಂದಲೂ ಇನ್ನು ಮೇಲೆ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಪಡಿಸಬೇಡಿರಿ.
- Isaiah 66:4 ಯೆಶಾಯ 66:4ನಾನು ಸಹ ಅವರ ಮೋಸಗಳನ್ನು ಆದುಕೊಂಡು ಅವರ ಭಯಗಳನ್ನು ಅವರ ಮೇಲೆ ಬರಮಾಡುವೆನು; ಯಾಕಂದರೆ ನಾನು ಕರೆಯಲು ಯಾರೂ ಉತ್ತರ ಕೊಡಲಿಲ್ಲ. ನಾನು ಮಾತನಾಡಲು ಅವರು ಕೇಳಲಿಲ್ಲ. ಆದರೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು. ನಾನು ಮೆಚ್ಚದ್ದನ್ನು ಆದುಕೊಂಡರು.
- Deuteronomy 4:27–28 ಧರ್ಮೋಪದೇಶಕಾಂಡ 4:27–28ಆಗ ಕರ್ತನು ನಿಮ್ಮನ್ನು ಜನಾಂಗ ಗಳಲ್ಲಿ ಚದರಿಸುವನು; ಕರ್ತನು ನಿಮ್ಮನ್ನು ನಡಿಸುವಲ್ಲಿ ಅವರ ಮಧ್ಯದಲ್ಲಿ ಸ್ವಲ್ಪ ಮಂದಿಯಾಗಿ ಉಳಿಯುವಿರಿ. ಅಲ್ಲಿ ನೀವು ಮನುಷ್ಯರ ಕೈಕೆಲಸವಾದ ಅಂದರೆ ನೋಡದೆಯೂ ಕೇಳದೆಯೂ ಉಣ್ಣದೆಯೂ ಮೂಸಿ ನೋಡದೆಯೂ ಇರುವಂಥ ಮರ ಕಲ್ಲುಗಳಾದ ದೇವರುಗಳನ್ನು ಸೇವಿಸುವಿರಿ.
- Ezekiel 14:9–11 ಯೆಹೆಜ್ಕೇಲನು 14:9–11ಪ್ರವಾದಿಯು ಮೋಸಹೋಗಿ ವಾಕ್ಯವನ್ನು ಹೇಳಿದರೆ ಕರ್ತನಾದ ನಾನೇ ಆ ಪ್ರವಾದಿಯನ್ನು ಮೋಸಗೊಳಿಸಿರುತ್ತೇನೆ; ನಾನು ನನ್ನ ಕೈಯನ್ನು ಅವನ ಮೇಲೆ ಚಾಚಿ ನನ್ನ ಜನರಾದ ಇಸ್ರಾಯೇಲ್ಯರ ಮಧ್ಯ ದೊಳಗಿಂದ ನಾಶಪಡಿಸುವೆನು. ಅವರು ತಮ್ಮ ಅಕ್ರಮದ ದಂಡನೆಯನ್ನು ಹೊರುವರು; ವಿಚಾರಿಸು ವವನ ದಂಡನೆಯು ಹೇಗೋ ಹಾಗೆಯೇ ಪ್ರವಾ ದನೆಯ ದಂಡನೆಯೂ ಇರುವದು. ಇಸ್ರಾಯೇಲಿನ ಮನೆತನದವರು ಇನ್ನು ಮೇಲೆ ನನ್ನನ್ನು ಬಿಟ್ಟು ತಿರುಗದೇ ತಮ್ಮ ಎಲ್ಲಾ ದ್ರೋಹಗಳಿಂದ ಅಶುದ್ಧರಾಗದೆ ಇರುವ ದರಿಂದ ಅವರು ನನ್ನ ಜನರಾಗಿರುವರು ಅವರಿಗೆ ನಾನು ದೇವರಾಗಿರುವೆನು, ಎಂದು ದೇವರಾದ ಕರ್ತನು ಹೇಳುತ್ತಾನೆ.
- Ezekiel 20:26 ಯೆಹೆಜ್ಕೇಲನು 20:26ನಾನೇ ಕರ್ತನೆಂದು ಅವರು ತಿಳಿಯುವ ಹಾಗೆ ಅವರು ತಮ್ಮ ಚೊಚ್ಚಲು ಮಕ್ಕಳನ್ನು ಬೆಂಕಿಗೆ ಆಹುತಿಮಾಡಿದ್ದರಿಂದ ಅವರು ಹಾಳಾಗಿ ಬಿದ್ದಿರುವಂತೆ ನಾನು ಅವರ ಅರ್ಪಣೆಗಳನ್ನು ಅಪವಿತ್ರಪಡಿಸಿದೆನು.
- Deuteronomy 28:36 ಧರ್ಮೋಪದೇಶಕಾಂಡ 28:36ಕರ್ತನು ನಿನ್ನನ್ನೂ ನೀನು ನಿನ್ನ ಮೇಲೆ ಇರಿಸಿಕೊಳ್ಳುವ ಅರಸನನ್ನೂ ನೀನೂ ನಿನ್ನ ಪಿತೃಗಳೂ ಅರಿಯದ ಜನಾಂಗದ ಬಳಿಗೆ ಹೋಗ ಮಾಡುವನು; ಅಲ್ಲಿ ಮರವೂ ಕಲ್ಲೂ ಆಗಿರುವ ಬೇರೆ ದೇವರುಗಳನ್ನು ನೀನು ಸೇವಿಸುವಿ.
- 2 Thessalonians 2:9–11 2 ಥೆಸಲೊನೀಕದವರಿಗೆ 2:9–11ಆ ಕೆಡುಕನ ಬರುವಿಕೆಯು ಸೈತಾನನ ಕಾರ್ಯಕ್ಕನು ಸಾರವಾಗಿರುವದು; ಅದು ಎಲ್ಲಾ ಶಕ್ತಿಯಿಂದಲೂ ಸೂಚಕ ಕಾರ್ಯಗಳಿಂದಲೂ ಸುಳ್ಳಾದ ಅದ್ಭುತ ಕಾರ್ಯಗಳಿಂದಲೂ ದುರ್ನೀತಿಯ ಎಲ್ಲಾ ವಂಚನೆ ಯಿಂದಲೂ ಕೂಡಿ ನಾಶವಾಗುವವರಲ್ಲಿ ಸಂಭವಿಸು ವದು; ಅವರು ಪ್ರೀತಿಯ ಸತ್ಯವನ್ನು ಅಂಗೀಕರಿಸದ ಕಾರಣ ರಕ್ಷಣೆಯನ್ನು ಹೊಂದುವದಿಲ್ಲ. ಇದೇ ಕಾರಣದಿಂದ ದೇವರು ಬಲವಾದ ಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಮಾಡುತ್ತಾನೆ.
- Romans 1:21–28 ರೋಮಾಪುರದವರಿಗೆ 1:21–28ಅವರು ದೇವರನ್ನು ಅರಿತಾಗ ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ, ಕೃತಜ್ಞತೆಯುಳ್ಳವರಾಗಿಯೂ ಇರಲಿಲ್ಲ; ಅವರು ತಮ್ಮ ಕಲ್ಪನೆಗಳಲ್ಲಿ ವಿಫಲರಾದರು ಮತ್ತು ಮೂರ್ಖತನದ ಅವರ ಹೃದಯವು ಕತ್ತಲಾ ಯಿತು. ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚ ರಾದರು; ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಕ್ಷಿ, ಪಶುಗಳ ಮತ್ತು ಹರಿದಾಡುವವುಗಳ ಪ್ರತಿಮೆಗೆ ಮಾರ್ಪಡಿಸಿದರು. ಆದಕಾರಣ ತಮ್ಮ ಹೃದಯಗಳ ದುರಾಶೆಗಳ ಮೂಲಕ ತಮ್ಮ ಸ್ವಂತ ದೇಹಗಳನ್ನು ತಮ್ಮೊಳಗೆ ಅವ ಮಾನಪಡಿಸಿಕೊಳ್ಳುವಂತೆ ದೇವರು ಅವರನ್ನು ಅಶುದ್ಧ ತನಕ್ಕೆ ಒಪ್ಪಿಸಿದನು; ಅವರು ದೇವರ ವಿಷಯವಾದ ಸತ್ಯವನ್ನು ಸುಳ್ಳಿಗೆ ಬದಲಾಯಿಸಿ ಸೃಷ್ಟಿಕರ್ತನಿಗಿಂತ ಹೆಚ್ಚಾಗಿ ಸೃಷ್ಟಿಯನ್ನೇ ಆರಾಧಿಸಿ ಸೇವಿಸಿದರು; ಆತನು (ಸೃಷ್ಟಿಕರ್ತನು) ಎಂದೆಂದಿಗೂ ಸ್ತುತಿ ಹೊಂದತಕ್ಕವನು. ಆಮೆನ್. ಈ ಕಾರಣದಿಂದ ದೇವರು ಅವರನ್ನು ತುಚ್ಛ ವಾದ ಮನೋಭಾವಗಳಿಗೆ ಒಪ್ಪಿಸಿಬಿಟ್ಟನು. ಹೇಗೆಂದರೆ ಅವರ ಹೆಂಗಸರು ಸಹ ಸ್ವಾಭಾವಿಕವಾದ ಭೋಗ ವನ್ನು ಸ್ವಭಾವ ವಿರುದ್ಧವಾದ ಭೋಗಕ್ಕೆ ಮಾರ್ಪಡಿ ಸಿದರು. ಅದರಂತೆ ಗಂಡಸರೂ ಸ್ವಾಭಾವಿಕ ಸ್ತ್ರೀ ಭೋಗವನ್ನು ಬಿಟ್ಟು ಒಬ್ಬರಮೇಲೊಬ್ಬರು ತಮ್ಮ ಕಾಮಾತುರದಿಂದ ತಾಪಪಡುತ್ತಾ ಗಂಡಸರ ಸಂಗಡ ಗಂಡಸರು ಅಯೋಗ್ಯವಾದದ್ದನ್ನು ಮಾಡುತ್ತಾ ತಮ್ಮ ತಪ್ಪಿಗೆ ತಕ್ಕ ಪ್ರತಿಫಲವನ್ನು ತಮ್ಮಲ್ಲಿ ಹೊಂದಿದರು. ಇದಲ್ಲದೆ ಅವರು ತಮ್ಮ ತಿಳುವಳಿಕೆಯಿಂದ ದೇವರನ್ನು ಸ್ಮರಿಸುವದಕ್ಕೆ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಮಾಡಬಾರದವುಗಳನ್ನು ಮಾಡು ವಂತೆ ಅನಿಷ್ಟಭಾವಕ್ಕೆ ಒಪ್ಪಿಸಿದನು.