Ezekiel · chapter 16 · verse 33
Ezekiel 16:33 in Kannada
ಅವರು ವ್ಯಭಿಚಾರಿಗಳಿಗೆಲ್ಲ ಬಹು ಮಾನ ಕೊಡುತ್ತಾರೆ; ಆದರೆ ನೀನು ನಿನ್ನ ಪ್ರಿಯರಿಗೆಲ್ಲ ನಿನ್ನ ಬಹುಮಾನಗಳನ್ನು ಕೊಟ್ಟು ಅವರನ್ನು ಬಾಡಿಗೆಗೆ ಪಡೆದು ನಿನ್ನ ವ್ಯಭಿಚಾರಕ್ಕಾಗಿ ನಿನ್ನ ಬಳಿಗೆ ಬರುವ ಹಾಗೆ ಅವರಿಗೆ ಬಹುಮಾನ ಕೊಡುತ್ತೀ.
Avaru vyabhichaarigaligella bahu maana koduttaare; aadare neenu ninna priyarigella ninna bahumaanagalannu kottu avarannu baadigege padedu ninna vyabhichaarakkaagi ninna balige baruva haage avarige bahumaana koduttee.
Ezekiel 16:33 in English
- King James Version (KJV)
- They give gifts to all whores: but thou givest thy gifts to all thy lovers, and hirest them, that they may come unto thee on every side for thy whoredom.
- World English Bible (WEB)
- People give gifts to all prostitutes; but you give your gifts to all your lovers, and bribe them, that they may come to you on every side for your prostitution.
- American Standard Version (ASV)
- They give gifts to all harlots; but thou givest thy gifts to all thy lovers, and bribest them, that they may come unto thee on every side for thy whoredoms.
- Bible in Basic English (BBE)
- They give payment to all loose women: but you give rewards to your lovers, offering them payment so that they may come to you on every side for your cheap love.
- Darby Translation (DBY)
- They give rewards to all harlots; but thou gavest thy rewards to all thy lovers, and rewardedst them, that they might come unto thee on every side for thy whoredoms.
- Webster's Bible (WBS)
- They give gifts to all lewd women: but thou givest thy gifts to all thy lovers, and hirest them, that they may come to thee on every side for thy lewdness.
- Young's Literal Translation (YLT)
- To all whores they give a gift, And — thou hast given thy gifts to all thy lovers, And dost bribe them to come in unto thee, From round about — in thy whoredoms.
Read in context
- 31ಪ್ರತಿಯೊಂದು ಬೀದಿಯ ಕೊನೆಯಲ್ಲಿಯೂ ಗದ್ದುಗೆಯನ್ನು ಕಟ್ಟಿ ಪ್ರತಿಯೊಂದು ಹಾದಿಯಲ್ಲಿಯೂ ಉನ್ನತಸ್ಥಾನವನ್ನು ಮಾಡಿಕೊಂಡು ಕೂಲಿಯನ್ನು ಉದಾಸೀನ ಮಾಡುವ ವ್ಯಭಿಚಾರಿಣಿಯು ನೀನಲ್ಲ;
- 32ಆದರೆ ಗಂಡನಿಗೆ ಬದ ಲಾಗಿ ಅನ್ಯರನ್ನು ಅಂಗೀಕರಿಸುವ ವ್ಯಭಿಚಾರಿ ಹೆಂಡತಿ ಯಾಗಿರುವಿ!
- 33ಅವರು ವ್ಯಭಿಚಾರಿಗಳಿಗೆಲ್ಲ ಬಹು ಮಾನ ಕೊಡುತ್ತಾರೆ; ಆದರೆ ನೀನು ನಿನ್ನ ಪ್ರಿಯರಿಗೆಲ್ಲ ನಿನ್ನ ಬಹುಮಾನಗಳನ್ನು ಕೊಟ್ಟು ಅವರನ್ನು ಬಾಡಿಗೆಗೆ ಪಡೆದು ನಿನ್ನ ವ್ಯಭಿಚಾರಕ್ಕಾಗಿ ನಿನ್ನ ಬಳಿಗೆ ಬರುವ ಹಾಗೆ ಅವರಿಗೆ ಬಹುಮಾನ ಕೊಡುತ್ತೀ.
- 34ಹೀಗಿರುವ ದರಿಂದ ಹೆಂಗಸರಿಗೆ ವಿರೋಧವಾದದ್ದು ನಿನ್ನ ವ್ಯಭಿ ಚಾರದಲ್ಲಿ ನಿನಗಾಯಿತು; ವ್ಯಭಿಚಾರಮಾಡುವ ಹಾಗೆ ನಿನ್ನನ್ನು ಯಾರೂ ಹಿಂಬಾಲಿಸುವದಿಲ್ಲ; ನೀನು ಬಹು ಮಾನ ಕೊಡುತ್ತೀಯೇ ಹೊರತು ನಿನಗೆ ಯಾರೂ ಬಹುಮಾನ ಕೊಡುವದಿಲ್ಲ. ಆದದರಿಂದ ಇದು ವಿರೋಧವಾದದ್ದಾಗಿದೆ.
- 35ಆದಕಾರಣ ಓ ವ್ಯಭಿಚಾರಿಣಿಯೇ, ನೀನು ಕರ್ತನ ವಾಕ್ಯವನ್ನು ಕೇಳು.
Cross references
- Isaiah 57:9 ಯೆಶಾಯ 57:9ಬಹು ಸುಗಂಧ ದ್ರವ್ಯಗಳನ್ನು ಕೂಡಿಸಿ, ತೈಲದೊಂದಿಗೆ ರಾಜನ ಬಳಿಗೆ ಹೋಗಿದ್ದೀ, ದೂರಕ್ಕೆ ನಿನ್ನ ಸೇವಕರನ್ನು ಕಳುಹಿಸಿದ್ದೀ, ಪಾತಾಳ ದಷ್ಟು ನೀಚಸ್ಥಿತಿಗೆ ಇಳಿದಿದ್ದೀ.
- Hosea 8:9–10 ಹೋಶೇಯ 8:9–10ಅವರು ಒಂಟಿಯಾದ ಕಾಡುಕತ್ತೆಯ ಹಾಗೆ ಅಶ್ಯೂರಕ್ಕೆ ಹೋಗಿದ್ದಾರೆ. ಎಫ್ರಾಯಾಮು ಮಿಂಡರಿಗೆ ಕೂಲಿ ಕೊಟ್ಟಿದೆ. ಹೌದು, ಅವರು ಜನಾಂಗಗಳಲ್ಲಿ ಕೂಲಿ ಕೊಟ್ಟಿದ್ದರೂ ಅವರನ್ನು ನಾನು ಈಗ ಒಟ್ಟುಗೂಡಿ ಸುವೆನು; ಸ್ವಲ್ಪವಾದವರಲ್ಲಿ ಅವರು ಪ್ರಧಾನರು ಗಳ ಅರಸನ ಭಾರದಿಂದ ಕಷ್ಟಪಡುವರು.
- Hosea 2:12 ಹೋಶೇಯ 2:12ಮತ್ತು--ನನ್ನ ಮಿಂಡರಿಂದಾದ ಪ್ರತಿಫಲ ಇವುಗಳೇ ಎಂದು ಅವಳು ಹೇಳಿದ ಅವಳ ದ್ರಾಕ್ಷೇ ಬಳ್ಳಿಗಳನ್ನು ಅವಳ ಅಂಜೂರದ ಮರಗಳನ್ನು ನಾನು ಹಾಳುಮಾಡಿ ಅವುಗಳನ್ನು ಕಾಡನ್ನಾಗಿ ಮಾಡುವೆನು; ಅಡವಿಯ ಮೃಗಗಳು ಅವುಗಳನ್ನು ತಿನ್ನುವವು.
- Isaiah 30:6–7 ಯೆಶಾಯ 30:6–7ದಕ್ಷಿಣ ಸೀಮೆಯ ಮೃಗಗಳ ವಿಷಯವಾದ ದೈವೋಕ್ತಿ. ಇಕ್ಕಟ್ಟಾದ ಶ್ರಮೆಯುಳ್ಳ ದೇಶಕ್ಕೆ ಪ್ರಾಯ ಮತ್ತು ಮುದಿ ಸಿಂಹವೂ, ಸರ್ಪವೂ, ಹಾರುವ ಉರಿ ಮಂಡಲ ಸರ್ಪವೂ ಬರುವಲ್ಲಿಗೆ ಅವರು ಕತ್ತೆಮರಿ ಗಳ ಬೆನ್ನುಗಳ ಮೇಲೆ ತಮ್ಮ ಬದುಕನ್ನೂ ಒಂಟೆಗಳ ಡಬ್ಬಗಳ ಮೇಲೆ ತಮ್ಮ ದ್ರವ್ಯಗಳನ್ನೂ ಪ್ರಯೋಜನ ವಲ್ಲದ ಜನಕ್ಕೆ ತಕ್ಕೊಂಡು ಹೋಗುತ್ತಾರೆ. ಐಗುಪ್ತ್ಯರ ಸಹಾಯವು ವ್ಯರ್ಥವೇ ವ್ಯರ್ಥ. ಆದದರಿಂದ ಇದನ್ನು ಕುರಿತು ಅವರ ಬಲವು ನಿಂತುಹೋಗಿದೆ ಎಂದು ನಾನು ಕೂಗಿದ್ದೇನೆ.
- Micah 1:7 ಮೀಕ 1:7ಅದರ ಕೆತ್ತಿದ ವಿಗ್ರಹಗಳೆಲ್ಲಾ ತುಂಡು ಗಳಾಗುವಂತೆ ಒಡೆಯಲ್ಪಡುವವು. ಅದಕ್ಕೆ ಆದ ಸಂಪಾದನೆಗಳೆಲ್ಲಾ ಬೆಂಕಿಯಿಂದ ಸುಡಲ್ಪಡುವವು; ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು; ಸೂಳೆಯ ಕೂಲಿಯಿಂದ ಅವುಗಳನ್ನು ಕೂಡಿಸಿ ಕೊಂಡಿತು, ಸೂಳೆಯ ಕೂಲಿಗೆ ಅವು ತಿರುಗುವವು.
- Luke 15:30 ಲೂಕನು 15:30ಆದರೆ ನಿನ್ನ ಬದುಕನ್ನು ಸೂಳೆಯ ರೊಂದಿಗೆ ನುಂಗಿಬಿಟ್ಟ ಈ ನಿನ್ನ ಮಗನು ಬಂದ ಕೂಡಲೆ ಅವನಿಗೋಸ್ಕರ ಕೊಬ್ಬಿದ ಕರುವನ್ನು ನೀನು ಕೊಯ್ಸಿದ್ದೀ ಅಂದನು.
- Joel 3:3 ಯೋವೇಲ 3:3ನನ್ನ ಜನರಿ ಗೋಸ್ಕರ ಚೀಟು ಹಾಕಿ ಹುಡುಗನನ್ನು ಸೂಳೆಗಾಗಿ ಕೊಟ್ಟು, ಹುಡುಗಿಯನ್ನು ದ್ರಾಕ್ಷಾರಸಕ್ಕಾಗಿ ಮಾರಿ ಅವರು ಕುಡಿಯುವ ಹಾಗೆ ಮಾರಿದ್ದಾರಲ್ಲಾ?
- Deuteronomy 23:17–18 ಧರ್ಮೋಪದೇಶಕಾಂಡ 23:17–18ಇಸ್ರಾಯೇಲಿನ ಕುಮಾರ್ತೆಯರಲ್ಲಿ ಸೂಳೆ ಇರ ಬಾರದು; ಇಸ್ರಾಯೇಲಿನ ಕುಮಾರರಲ್ಲಿ ಪುರುಷ ಸಂಗದವನು ಇರಬಾರದು. ಸೂಳೆಯ ಕೂಲಿಯನ್ನು ಇಲ್ಲವೆ ನಾಯಿಯ ಕ್ರಯವನ್ನು ಯಾವದೊಂದು ಪ್ರಮಾಣವಾಗಿ ನಿನ್ನ ದೇವರಾದ ಕರ್ತನ ಮನೆಗೆ ತರಬಾರದು. ಅವೆರಡು ನಿನ್ನ ದೇವರಾದ ಕರ್ತನಿಗೆ ಅಸಹ್ಯ.
- Genesis 38:16–18 ಆದಿಕಾಂಡ 38:16–18ಮಾರ್ಗ ದಿಂದ ಆಕೆಯ ಕಡೆಗೆ ತಿರುಗಿಕೊಂಡು ಅವನು--ನನ್ನನ್ನು ನಿನ್ನ ಬಳಿಗೆ ಬರಗೊಡಿಸು ಅಂದನು. (ಯಾಕಂದರೆ ಅವಳು ತನ್ನ ಸೊಸೆಯೆಂದು ಅವನಿಗೆ ತಿಳಿದಿರಲಿಲ್ಲ). ಅವಳು--ನೀನು ನನ್ನ ಬಳಿಗೆ ಬಂದರೆ ನನಗೆ ಏನು ಕೊಡುವಿ ಅಂದಳು. ಅವನು--ಮಂದೆಯಿಂದ ನಿನಗೆ ಮೇಕೆಯ ಮರಿಯನ್ನು ಕಳುಹಿ ಸುತ್ತೇನೆ ಅಂದನು. ಅವಳು--ನೀನು ಅದನ್ನು ಕಳುಹಿಸುವವರೆಗೆ ಈಡುಕೊಡುವಿಯೋ ಅಂದಳು. ಅದಕ್ಕೆ ಅವನು--ನಿನಗೆ ಕೊಡತಕ್ಕ ಈಡು ಏನು ಅಂದಾಗ ಅವಳು--ನಿನ್ನ ಮುದ್ರೆಯೂ ನಿನ್ನ ಕಡಗ ಗಳೂ ನಿನ್ನ ಕೈಯಲ್ಲಿರುವ ಕೋಲು ಅಂದಳು. ಆಗ ಅವನು ಅವುಗಳನ್ನು ಆಕೆಗೆ ಕೊಟ್ಟು ಆಕೆಯ ಬಳಿಗೆ ಹೋದನು. ಹೀಗೆ ಅವಳು ಅವನಿಂದ ಗರ್ಭಿಣಿಯಾದಳು.
- Ezekiel 16:41 ಯೆಹೆಜ್ಕೇಲನು 16:41ಅವರು ನಿನ್ನ ಮನೆಗಳನ್ನು ಸುಟ್ಟು ಬಹಳ ಸ್ತ್ರೀಯರ ಕಣ್ಣುಗಳ ಮುಂದೆ ನಿನಗೆ ನ್ಯಾಯ ತೀರಿಸುವರು; ನೀನು ವ್ಯಭಿಚಾರ ಮಾಡುವದನ್ನು ನಾನು ನಿಲ್ಲಿಸುವೆನು; ಆಗ ನೀನು ಕೂಲಿ ಸಹ ಕೊಡುವದನ್ನು ನಿಲ್ಲಿಸುವೆನು;
- Isaiah 30:3 ಯೆಶಾಯ 30:3ಆದಕಾರಣ ಫರೋಹನ ಬಲವು ನಿಮಗೆ ನಾಚಿಕೆಯೂ ಐಗುಪ್ತದ ನೆರಳಿನ ಭರವಸದಿಂದ ನಿಮ ಗೆ ನಿಂದೆಯೂ ಉಂಟಾಗುವದು.