Ezekiel · chapter 16 · verse 35
Ezekiel 16:35 in Kannada
ಆದಕಾರಣ ಓ ವ್ಯಭಿಚಾರಿಣಿಯೇ, ನೀನು ಕರ್ತನ ವಾಕ್ಯವನ್ನು ಕೇಳು.
Aadakaarana o vyabhichaariniye, neenu kartana vaakyavannu kelu.
Ezekiel 16:35 in English
- King James Version (KJV)
- Wherefore, O harlot, hear the word of the LORD:
- World English Bible (WEB)
- “Therefore, prostitute, hear the LORD’s word:
- American Standard Version (ASV)
- Wherefore, O harlot, hear the word of Jehovah:
- Bible in Basic English (BBE)
- For this cause, O loose woman, give ear to the voice of the Lord:
- Darby Translation (DBY)
- Therefore, O harlot, hear the word of Jehovah.
- Webster's Bible (WBS)
- Wherefore, O harlot, hear the word of the LORD:
- Young's Literal Translation (YLT)
- Therefore, O whore, hear a word of Jehovah,
Read in context
- 33ಅವರು ವ್ಯಭಿಚಾರಿಗಳಿಗೆಲ್ಲ ಬಹು ಮಾನ ಕೊಡುತ್ತಾರೆ; ಆದರೆ ನೀನು ನಿನ್ನ ಪ್ರಿಯರಿಗೆಲ್ಲ ನಿನ್ನ ಬಹುಮಾನಗಳನ್ನು ಕೊಟ್ಟು ಅವರನ್ನು ಬಾಡಿಗೆಗೆ ಪಡೆದು ನಿನ್ನ ವ್ಯಭಿಚಾರಕ್ಕಾಗಿ ನಿನ್ನ ಬಳಿಗೆ ಬರುವ ಹಾಗೆ ಅವರಿಗೆ ಬಹುಮಾನ ಕೊಡುತ್ತೀ.
- 34ಹೀಗಿರುವ ದರಿಂದ ಹೆಂಗಸರಿಗೆ ವಿರೋಧವಾದದ್ದು ನಿನ್ನ ವ್ಯಭಿ ಚಾರದಲ್ಲಿ ನಿನಗಾಯಿತು; ವ್ಯಭಿಚಾರಮಾಡುವ ಹಾಗೆ ನಿನ್ನನ್ನು ಯಾರೂ ಹಿಂಬಾಲಿಸುವದಿಲ್ಲ; ನೀನು ಬಹು ಮಾನ ಕೊಡುತ್ತೀಯೇ ಹೊರತು ನಿನಗೆ ಯಾರೂ ಬಹುಮಾನ ಕೊಡುವದಿಲ್ಲ. ಆದದರಿಂದ ಇದು ವಿರೋಧವಾದದ್ದಾಗಿದೆ.
- 35ಆದಕಾರಣ ಓ ವ್ಯಭಿಚಾರಿಣಿಯೇ, ನೀನು ಕರ್ತನ ವಾಕ್ಯವನ್ನು ಕೇಳು.
- 36ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಿನ್ನ ಅಸಹ್ಯವು ಸುರಿಯಲ್ಪಟ್ಟ ಕಾರಣ ದಿಂದಲೂ ನಿನ್ನ ಬೆತ್ತಲೆತನವು ಪ್ರಕಟವಾಗುವಂತೆ ನಿನ್ನ ಪ್ರಿಯರ ಸಂಗಡ ಮಾಡಿದ ವ್ಯಭಿಚಾರದಿಂದಲೂ ನಿನ್ನ ಎಲ್ಲಾ ಅಸಹ್ಯವಾದ ವಿಗ್ರಹಗಳಿಂದಲೂ ನೀನು ಅವರಿಗೆ ಕೊಟ್ಟ ನಿನ್ನ ಮಕ್ಕಳ ರಕ್ತದಿಂದಲೂ
- 37ಇಗೋ, ನೀನು ಆನಂದ ಪಟ್ಟವರೊಂದಿಗೆ ಪ್ರೀತಿ ಮಾಡಿದವರೆ ಲ್ಲರನ್ನೂ ಹಗೆಮಾಡಿದವರೆಲ್ಲರನ್ನೂ ಸಹ ಕೂಡಿಸು ವೆನು; ನಾನು ಅವರನ್ನು ನಿನಗೆ ವಿರುದ್ಧವಾಗಿ ಸುತ್ತಲೂ ಕೂಡಿಸಿ ಅವರಿಗೆ ನಿನ್ನ ಬೆತ್ತಲೆಯನ್ನು ಪ್ರಕಟಪಡಿಸು ವೆನು. ಆಗ ಅವರು ನಿನ್ನ ಬೆತ್ತಲೆಯನ್ನು ನೋಡುವರು.
Cross references
- Jeremiah 3:1 ಯೆರೆಮೀಯ 3:1ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಟ್ಟಾಗ ಅವಳು ಅವನನ್ನು ಬಿಟ್ಟು ಹೋಗಿ ಬೇರೆಯವನವಳಾದರೆ ಅವನು ಇನ್ನು ಅವಳ ಹತ್ತಿರ ಹಿಂತಿರುಗುವನೋ? ಆ ದೇಶವು ಬಹಳವಾಗಿ ಅಪವಿತ್ರವಾಗುವದಿಲ್ಲವೋ? ನೀನು ಅನೇಕ ಮಿಂಡರ ಸಂಗಡ ಸೂಳೆತನ ಮಾಡಿದ್ದೀ; ಆದಾಗ್ಯೂ ನನ್ನ ಬಳಿಗೆ ತಿರುಗಿಕೋ ಎಂದು ಕರ್ತನು ಅನ್ನುತ್ತಾನೆ.
- Isaiah 23:15–16 ಯೆಶಾಯ 23:15–16ಆ ದಿವಸದಲ್ಲಿ ಆಗುವದೇನಂದರೆ, ತೂರ್ ಪಟ್ಟಣವು ಒಬ್ಬ ಅರಸನ ದಿವಸಗಳ ಪ್ರಕಾರ ಎಪ್ಪತ್ತು ವರುಷಗಳ ತನಕ (ಮೂಲ ದಿನಗಳು) ಜ್ಞಾಪಕಕ್ಕೆ ಬಾರದೇ ಇರುವದು; ಎಪ್ಪತ್ತು ವರುಷಗಳ ಕೊನೆಯಲ್ಲಿ ತೂರ್ ಪಟ್ಟಣವು ಸೂಳೆಯರ ವಿಷಯವಾದ ಗೀತೆಯ ಹಾಗಾಗುವದು. ಮರೆತುಹೋದ ಸೂಳೆಯೇ, ಕಿನ್ನರಿಯನ್ನು ತಕ್ಕೋ, ಪಟ್ಟಣಗಳಲ್ಲಿ ಅಲೆಯುತ್ತಾ ನೀನು ನೆನಪಾಗುವ ಹಾಗೆ ಚೆನ್ನಾಗಿ ನುಡಿಸಿ ಬಹಳ ಗೀತೆಗಳನ್ನು ಹಾಡು (ಎಂಬದೇ).
- Isaiah 28:14 ಯೆಶಾಯ 28:14ಆದಕಾರಣ ಯೆರೂಸಲೇಮಿನಲ್ಲಿರುವ ಈ ಜನ ರನ್ನು ಆಳುವ ಹಾಸ್ಯದ ಜನರಾದ ನೀವು ಕರ್ತನ ಮಾತನ್ನು ಕೇಳಿರಿ,
- Nahum 3:4 ನಹೂಮ 3:4ಸೌಂದರ್ಯವುಳ್ಳ ಮಾಟಗಾರ್ತಿಯಾದ ಸೂಳೆಯ ಸೂಳೆತನಗಳು ಬಹಳ; ಅವಳು ತನ್ನ ಸೂಳೆತನಗಳಿಂದ ಜನಾಂಗಗಳನ್ನೂ ತನ್ನ ಮಾಟಗಳಿಂದ ಗೋತ್ರಗಳನ್ನೂ ಮಾರಿದಳಲ್ಲಾ?
- Revelation 17:5 ಪ್ರಕಟನೆ 17:5ಇದಲ್ಲದೆ ಮರ್ಮ, ಮಹಾ ಬಾಬೆಲು, ಭೂಮಿಯಲ್ಲಿರುವ ಜಾರಸ್ತ್ರೀಯರಿಗೂ ಅಸಹ್ಯವಾದ ವುಗಳಿಗೂ ತಾಯಿ ಎಂಬ ಹೆಸರು ಅವಳ ಹಣೆಯ ಮೇಲೆ ಬರೆದಿತ್ತು.
- John 4:10 ಯೋಹಾನನು 4:10ಯೇಸು ಪ್ರತ್ಯುತ್ತರವಾಗಿ ಆಕೆಗೆ--ದೇವರ ದಾನವೇನೆಂಬದೂ ಮತ್ತು--ನನಗೆ ಕುಡಿಯುವದಕ್ಕೆ ಕೊಡು ಎಂದು ನಿನ್ನನ್ನು ಕೇಳಿದಾತನು ಯಾರೆಂಬದೂ ನಿನಗೆ ತಿಳಿದಿದ್ದರೆ ನೀನು ಆತನನ್ನು ಕೇಳುತ್ತಿದ್ದಿ, ಆತನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು ಎಂದು ಹೇಳಿದನು.
- Ezekiel 34:7 ಯೆಹೆಜ್ಕೇಲನು 34:7ಆದದರಿಂದ ಕುರುಬರೇ, ನೀವು ಕರ್ತನ ವಾಕ್ಯವನ್ನು ಕೇಳಿರಿ.
- Isaiah 1:21 ಯೆಶಾಯ 1:21ನಂಬಿಗಸ್ತಿಕೆಯ ಪಟ್ಟಣವು ಸೂಳೆಯಂತಾದ ಳಲ್ಲಾ! ಅದು ನ್ಯಾಯದಿಂದ ತುಂಬಿ ನೀತಿಯಲ್ಲಿ ನೆಲೆ ಯಾಗಿತ್ತು; ಆದರೆ ಈಗ ಕೊಲೆಗಾರರಿಂದ ತುಂಬಿದೆ.
- Hosea 2:5 ಹೋಶೇಯ 2:5ಅವರ ತಾಯಿ ಸೂಳೆ ತನ ಮಾಡಿದ್ದಾಳೆ; ಅವರನ್ನು ಹೆತ್ತವಳು ನಾಚಿಕೆಯಿ ಲ್ಲದೆ ನಡೆದಿದ್ದಾಳೆ; ಯಾಕಂದರೆ ಅವಳು--ನನ್ನ ರೊಟ್ಟಿ ಯನ್ನೂ ನನ್ನ ನೀರನ್ನೂ ನನ್ನ ಉಣ್ಣೆನಾರು ಗಳನ್ನೂ ನನ್ನ ತೈಲವನ್ನೂ ಪಾನವನ್ನೂ ನನಗೆ ಕೊಡುವ ನನ್ನ ಪ್ರಿಯರ ಹಿಂದೆ ಹೋಗುತ್ತೇನೆಂದು ಅಂದುಕೊಂಡಿದ್ದಾಳೆ.
- Ezekiel 13:2 ಯೆಹೆಜ್ಕೇಲನು 13:2ಮನುಷ್ಯಪುತ್ರನೇ, ಪ್ರವಾದಿ ಸುತ್ತಿರುವ ಇಸ್ರಾಯೇಲಿನ ಪ್ರವಾದಿಗಳಿಗೆ ವಿರುದ್ಧ ವಾಗಿ ನೀನು ಪ್ರವಾದಿಸಿ, ತಮ್ಮ ಸ್ವಂತ ಹೃದಯಗ ಳೊಳಗಿಂದ ಪ್ರವಾದಿಸುತ್ತಿರುವವರಿಗೆ ಹೀಗೆ ಹೇಳು --ಕರ್ತನ ವಾಕ್ಯವನ್ನು ಕೇಳಿರಿ;
- John 4:18 ಯೋಹಾನನು 4:18ಯಾಕಂದರೆ ನಿನಗೆ ಐದು ಮಂದಿ ಗಂಡಂದಿರಿದ್ದರು; ಈಗ ನಿನಗಿರುವವನು ನಿನ್ನ ಗಂಡ ನಲ್ಲ; ಆ ವಿಷಯದಲ್ಲಿ ನೀನು ಹೇಳಿದ್ದು ಸತ್ಯವಾದದ್ದು ಅಂದನು.
- Isaiah 1:10 ಯೆಶಾಯ 1:10ಸೊದೋಮಿನ ಅಧಿಪತಿಗಳೇ, ನೀವು ಕರ್ತನ ಮಾತನ್ನು ಕೇಳಿರಿ; ಗೊಮೋರದ ಪ್ರಜೆಗಳೇ, ನಮ್ಮ ದೇವರ ನ್ಯಾಯಪ್ರಮಾಣಕ್ಕೆ ಕಿವಿಗೊಡಿರಿ.