Ezekiel · chapter 17 · verse 2
Ezekiel 17:2 in Kannada
ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರಿಗೆ ಸಾಮ್ಯಗಳನು ಒಗಟಾಗಿ ಹೇಳು.
Manushyaputrane, israayelina manetanadavarige saamyagalanu ogataagi helu.
Ezekiel 17:2 in English
- King James Version (KJV)
- Son of man, put forth a riddle, and speak a parable unto the house of Israel;
- World English Bible (WEB)
- “Son of man, tell a riddle, and speak a parable to the house of Israel;
- American Standard Version (ASV)
- Son of man, put forth a riddle, and speak a parable unto the house of Israel;
- Bible in Basic English (BBE)
- Son of man, give out a dark saying, and make a comparison for the children of Israel,
- Darby Translation (DBY)
- Son of man, put forth a riddle, and speak a parable unto the house of Israel,
- Webster's Bible (WBS)
- Son of man, put forth a riddle, and speak a parable to the house of Israel;
- Young's Literal Translation (YLT)
- 'Son of man, put forth a riddle, and use a simile unto the house of Israel,
Read in context
- 1ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇನಂದರೆ--
- 2ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರಿಗೆ ಸಾಮ್ಯಗಳನು ಒಗಟಾಗಿ ಹೇಳು.
- 3ಹೇಳತಕ್ಕದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ. ದೊಡ್ಡ ರೆಕ್ಕೆಗಳೂ ಉದ್ದವಾದ ರೆಕ್ಕೆಗಳೂ ಉಳ್ಳಂಥ ವಿಧವಿಧವಾದ ಬಣ್ಣ ಬಣ್ಣದ ಪುಕ್ಕಗಳಿಂದ ತುಂಬಿದ್ದಂಥ ಒಂದು ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರಿನ ಮರದ ಮೇಲ್ಗಡೆಯ ಕೊಂಬೆಯನ್ನು ಕಿತ್ತುಹಾಕಿತು.
- 4ಅದರ ಚಿಗುರುಗಳ ಕೊನೆಯನ್ನು ಕಿತ್ತು ವ್ಯಾಪಾರದ ದೇಶಕ್ಕೆ ತೆಗೆದುಕೊಂಡು ಹೋಗಿ ವರ್ತಕರಿರುವ ನಗರದಲ್ಲಿ ಇಟ್ಟಿತು.
Cross references
- Ezekiel 20:49 ಯೆಹೆಜ್ಕೇಲನು 20:49ಆಗ ನಾನು ಹೇಳಿದ್ದೇನಂದರೆ --ಹಾ, ದೇವರಾದ ಕರ್ತನೇ, ಅವನು ಸಾಮ್ಯಗಳನ್ನು ಹೇಳುವದಿಲ್ಲವೇ ಎಂದು ನನ್ನ ವಿಷಯವಾಗಿ ಹೇಳುತ್ತಾರೆ.
- Matthew 13:35 ಮತ್ತಾಯನು 13:35ಹೀಗೆ--ಸಾಮ್ಯಗಳನ್ನು ಹೇಳುವಂತೆ ನನ್ನ ಬಾಯಿ ತೆರೆಯುವೆನು; ಲೋಕದ ಅಸ್ತಿವಾರದಿಂದ ಮರೆಯಾಗಿ ಇಡಲ್ಪಟ್ಟವುಗಳನ್ನು ನಾನು ಹೊರಪಡಿಸುವೆನು ಎಂದು ಪ್ರವಾದಿಯಿಂದ ಹೇಳಲ್ಪಟ್ಟದ್ದು ನೆರವೇರಿತು.
- Mark 4:33–34 ಮಾರ್ಕನು 4:33–34ಅವರು ಕೇಳಿಸಿಕೊಳ್ಳಲು ಸಾಧ್ಯವಾಗುವಷ್ಟು ಇಂಥ ಅನೇಕ ಸಾಮ್ಯಗಳಿಂದ ಆತನು ಅವರಿಗೆ ವಾಕ್ಯವನ್ನು ಹೇಳಿದನು. ಸಾಮ್ಯವಿಲ್ಲದೆ ಅವರೊಂ ದಿಗೆ ಮಾತನಾಡಲಿಲ್ಲ; ಆದರೆ ಅವರು ಏಕಾಂತದ ಲ್ಲಿದ್ದಾಗ ಆತನು ಎಲ್ಲಾ ವಿಷಯಗಳನ್ನು ತನ್ನ ಶಿಷ್ಯರಿಗೆ ವಿವರಿಸಿದನು.
- Ezekiel 24:3 ಯೆಹೆಜ್ಕೇಲನು 24:3ತಿರುಗಿ ಬೀಳುವ ಮನೆತನ ದವರಿಗೆ ಸಾಮ್ಯವನ್ನು ತಿಳಿಸಿ ಅವರಿಗೆ ಹೇಳಬೇಕಾದದ್ದೇ ನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಹಂಡೆಯನ್ನು ಒಲೆಯ ಮೇಲಿಡು, ಅದರಲ್ಲಿ ನೀರನ್ನು ಸುರಿ.
- Matthew 13:13–14 ಮತ್ತಾಯನು 13:13–14ಆದದರಿಂದ ನಾನು ಅವರಿಗೆ ಸಾಮ್ಯಗಳಲ್ಲಿ ಮಾತ ನಾಡುತ್ತೇನೆ; ಯಾಕಂದರೆ ಅವರು ನೋಡಿದರೂ ಕಾಣುವದಿಲ್ಲ ಮತ್ತು ಕೇಳಿದರೂ ತಿಳುಕೊಳ್ಳುವದಿಲ್ಲ; ಇಲ್ಲವೆ ಅವರು ಗ್ರಹಿಸುವದು ಇಲ್ಲ ಹೀಗೆ ಯೆಶಾಯನ ಪ್ರವಾದನೆಯು ಅವರಲ್ಲಿ ನೆರವೇರಿತು. ಅದೇನಂದರೆ -- ನೀವು ಕೇಳುತ್ತೀರಿ, ಕೇಳಿದರೂ ತಿಳು ಕೊಳ್ಳುವದೇ ಇಲ್ಲ; ಮತ್ತು ನೋಡುತ್ತೀರಿ, ನೋಡಿ ದರೂ ಗ್ರಹಿಸುವದೇ ಇಲ್ಲ.
- 2 Samuel 12:1–4 2 ಸಮುವೇಲನು 12:1–4ಕರ್ತನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ಅವನು ಅವನ ಬಳಿಗೆ ಬಂದು ಹೇಳಿದ್ದೇನಂದರೆ--ಒಂದು ಪಟ್ಟಣದಲ್ಲಿ ಇಬ್ಬರು ಮನುಷ್ಯರಿದ್ದರು; ಒಬ್ಬನು ಐಶ್ವರ್ಯವಂತನು, ಮತ್ತೊಬ್ಬನು ಬಡವನು. ಐಶ್ವರ್ಯವಂತನಿಗೆ ಕುರಿ ಪಶುಗಳು ಬಹಳವಾಗಿದ್ದವು. ಆದರೆ ಬಡವನಿಗೆ ತಾನು ಕೊಂಡುಕೊಂಡ ಒಂದು ಚಿಕ್ಕ ಹೆಣ್ಣುಕುರಿ ಮರಿಯ ಹೊರತು ಬೇರೇನೂ ಇರಲಿಲ್ಲ. ಅದು ಅವನ ಸಂಗಡವೂ ಅವನ ಮಕ್ಕಳ ಸಂಗಡವೂ ಬೆಳೆದು ಅವನೊಡನೆ ಆಹಾರ ತಿಂದು ಅವನ ಪಾತ್ರೆಯಲ್ಲಿ ಕುಡಿದು ಅವನ ಮಗ್ಗುಲಲ್ಲಿ ಮಲಗಿಕೊಂಡು ಅವನಿಗೆ ಕುಮಾರ್ತೆಯ ಹಾಗಿತ್ತು. ಐಶ್ವರ್ಯವುಳ್ಳ ಆ ಮನು ಷ್ಯನ ಬಳಿಗೆ ಒಬ್ಬ ಪ್ರಯಾಣಿಕನು ಬಂದಾಗ ಪ್ರಯಾಣ ಮಾಡುವವನಿಗೆ ಅಡಿಗೆಯನ್ನು ಮಾಡಿಸುವದಕ್ಕೆ ತನ್ನ ಕುರಿ ಪಶುಗಳಲ್ಲಿ ಒಂದನ್ನೂ ತಕ್ಕೊಳ್ಳ ಮನಸ್ಸಿಲ್ಲದೆ ಆ ಬಡವನ ಕುರಿಯನ್ನು ತಕ್ಕೊಂಡು ಅದನ್ನು ತನ್ನ ಬಳಿಗೆ ಬಂದ ಆ ಮನುಷ್ಯನಿಗೆ ಅಡಿಗೆಯನ್ನು ಮಾಡಿಸಿ ದನು ಅಂದನು.
- Hosea 12:10 ಹೋಶೇಯ 12:10ನಾನು ಪ್ರವಾದಿಗಳ ಮುಖಾಂತರ ಸಹ ನಿನ್ನೊಂದಿಗೆ ಮಾತನಾಡಿದ್ದೇನೆ, ನಾನು ದರ್ಶನಗಳನ್ನು ಹೆಚ್ಚಿಸಿದ್ದೇನೆ, ಇದಲ್ಲದೆ ಪ್ರವಾದಿಗಳ ಸೇವೆಯ ಮುಖಾಂತರ ಸಾಮ್ಯಗಳನ್ನು ಉಪಯೋಗಿಸಿದ್ದೇನೆ.
- 1 Corinthians 13:12 1 ಕೊರಿಂಥದವರಿಗೆ 13:12ಈಗ ನಾವು ಕನ್ನಡಿಯಲ್ಲಿ ಮೊಬ್ಬಾಗಿ ನೋಡುತ್ತೇವೆ. ತರುವಾಯ ಮುಖಾಮುಖಿ ಯಾಗಿ ನೋಡುವೆವು; ಈಗ ನಾನು ಅಪೂರ್ಣವಾಗಿ ತಿಳಿದಿದ್ದೇನೆ. ತರುವಾಯ ದೇವರು ನನ್ನನ್ನು ತಿಳಿದು ಕೊಂಡಂತೆಯೇ ನಾನೂ ತಿಳಿದುಕೊಳ್ಳುತ್ತೇನೆ.ಹೀಗೆ ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಆದರೆ ಇವುಗಳಲ್ಲಿ ದೊಡ್ಡದು ಪ್ರೀತಿಯೇ.
- Judges 9:8–15 ನ್ಯಾಯಸ್ಥಾಪಕರು 9:8–15ಮರಗಳು ತಮ್ಮ ಮೇಲೆ ಒಬ್ಬ ಅರಸನನ್ನು ಅಭಿಷೇ ಕಿಸಿಕೊಳ್ಳುವದಕ್ಕಾಗಿ ಹೊರಟು ಹೋಗಿ ಇಪ್ಪೆಯ ಮರಕ್ಕೆ--ನೀನು ನಮ್ಮನ್ನು ಆಳು ಅಂದವು. ಇಪ್ಪೆಯ ಮರ ಅವುಗಳಿಗೆ--ಯಾವದರಿಂದ ದೇವರನ್ನೂ ಮನು ಷ್ಯರನ್ನೂ ಘನಪಡಿಸುತ್ತಾರೋ ಆ ನನ್ನ ಪುಷ್ಟಿಯನ್ನು ಬಿಟ್ಟು ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ ಅಂದಿತು. ಮರಗಳು ಅಂಜೂರದ ಗಿಡಕ್ಕೆ--ನೀನು ಬಂದು ನಮ್ಮ ಮೇಲೆ ಆಳಬೇಕು ಅಂದವು. ಆದರೆ ಅಂಜೂರದ ಗಿಡವು ಅವುಗ ಳಿಗೆ--ನಾನು ನನ್ನ ಮಧುರವನ್ನೂ ನನ್ನ ಒಳ್ಳೇ ಫಲ ವನ್ನೂ ಬಿಟ್ಟು ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ ಅಂದಿತು. ಮರಗಳು ದ್ರಾಕ್ಷೇ ಗಿಡಕ್ಕೆ--ನೀನು ಬಂದು ನಮ್ಮನ್ನು ಆಳು ಅಂದವು. ಆದರೆ ದ್ರಾಕ್ಷೇ ಗಿಡವು ಅವುಗಳಿಗೆ--ದೇವರನ್ನೂ ಮನುಷ್ಯನನ್ನೂ ಸಂತೋಷಪಡಿಸುವ ನನ್ನ ರಸವನ್ನು ನಾನು ಬಿಟ್ಟು ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ ಅಂದಿತು. ಆಗ ಎಲ್ಲಾ ಮರಗಳು ಮುಳ್ಳಿನ ಗಿಡಕ್ಕೆ--ನೀನು ಬಂದು ನಮ್ಮನ್ನು ಆಳು ಅಂದವು. ಮುಳ್ಳಿನ ಗಿಡವು ಮರಗಳಿಗೆ--ನೀವು ನನ್ನನ್ನು ಅರಸನನ್ನಾಗಿ ಅಭಿಷೇಕ ಮಾಡುವದು ಸತ್ಯ ವಾದರೆ ನನ್ನ ನೆರಳಲ್ಲಿ ಬಂದು ಆಶ್ರಯಿಸಿಕೊಳ್ಳಿರಿ; ಇಲ್ಲದಿದ್ದರೆ ಮುಳ್ಳಿನ ಗಿಡದಿಂದ ಬೆಂಕಿ ಹೊರಟು ಲೆಬನೋನಿನ ದೇವದಾರುಗಳನ್ನು ದಹಿಸಿಬಿಡಲಿ ಅಂದಿತು.
- Judges 14:12–19 ನ್ಯಾಯಸ್ಥಾಪಕರು 14:12–19ಅವರಿಗೆ ಸಂಸೋನನು--ನಾನು ನಿಮಗೆ ಒಂದು ಒಗಟನ್ನು ಹೇಳುವೆನು; ನೀವು ಅದನ್ನು ಔತಣದ ಈ ಏಳು ದಿವಸಗಳಲ್ಲಿ ಗ್ರಹಿಸಿಕೊಂಡು ನನಗೆ ಅದರ ಅರ್ಥವನ್ನು ನಿಜವಾಗಿ ಹೇಳಿದರೆ ನಾನು ನಿಮಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ದುಸ್ತು ವಸ್ತ್ರಗಳನ್ನೂ ಕೊಡುವೆನು. ಅದರ ಅರ್ಥವನ್ನು ನೀವು ನನಗೆ ಹೇಳದೆ ಹೋದರೆ ನೀವು ನನಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ದುಸ್ತುವಸ್ತ್ರ ಗಳನ್ನೂ ಕೊಡಬೇಕು ಅಂದನು. ಅವರು ಅವನಿಗೆನೀನು ನಿನ್ನ ಒಗಟನ್ನು ಹೇಳು, ಅದನ್ನು ಕೇಳೋಣ ಅಂದರು. ಆಗ ಅವನು ಅವರಿಗೆ--ತಿನ್ನುವಂಥದ್ದರಿಂದ ತಿನ್ನ ತಕ್ಕದ್ದು ಹೊರಟಿತು, ಬಲವಾದದ್ದರಿಂದ ಸಿಹಿಯು ಹೊರಟಿತು ಅಂದನು. ಒಗಟನ್ನು ಅವರು ಮೂರು ದಿವಸ ಬಿಡಿಸಲಾರದೆ ಹೋದರು. ಏಳನೇ ದಿವಸದಲ್ಲಿ ಆದದ್ದೇನಂದರೆ, ಅವರು ಸಂಸೋನನ ಹೆಂಡತಿಗೆ ನಾವು ನಿನ್ನನ್ನೂ ನಿನ್ನ ತಂದೆಯ ಮನೆಯನ್ನೂ ಬೆಂಕಿ ಯಿಂದ ಸುಟ್ಟು ಬಿಡದಹಾಗೆ ನೀನು ನಿನ್ನ ಗಂಡನ ಆ ಒಗಟನ್ನು ನಮಗೆ ತಿಳಿಸುವ ಹಾಗೆ ಅವನನ್ನು ಮರುಳುಗೊಳಿಸು. ನೀನು ನಮಗೆ ಉಂಟಾದದ್ದನ್ನು ಕಸಕೊಳ್ಳುವದಕ್ಕಲ್ಲವೇ ನಮ್ಮನ್ನು ಕರೆಸಿದಿ ಅಂದರು. ಆಗ ಸಂಸೋನನ ಹೆಂಡತಿ ಅವನ ಮುಂದೆ ಅತ್ತು--ನೀನು ನನ್ನನ್ನು ಪ್ರೀತಿಮಾಡದೆ ನನ್ನನ್ನು ಹಗೆ ಮಾಡುತ್ತೀ. ನೀನು ನನ್ನ ಜನರ ಮಕ್ಕಳಿಗೆ ಒಂದು ಒಗಟನ್ನು ಹೇಳಿ ಅದನ್ನು ನನಗೆ ತಿಳಿಸದೆ ಹೋದಿ ಅಂದಳು. ಅವನು ಅವಳಿಗೆ--ಇಗೋ, ನಾನು ನನ್ನ ತಂದೆ ತಾಯಿಗಳಿಗೆ ಅದನ್ನು ತಿಳಿಸಲಿಲ್ಲ; ನಿನಗೆ ತಿಳಿಸುವೆನೋ? ಅಂದನು. ಅವರಿಗೆ ಔತಣ ಇದ್ದ ಏಳು ದಿವಸಗಳಲ್ಲಿ ಅವನ ಮುಂದೆ ಅವಳು ಅತ್ತಳು. ಆದರೆ ಏಳನೇ ದಿನದಲ್ಲಿ ಅವಳು ಅವನನ್ನು ಬಹಳವಾಗಿ ಪೀಡಿಸಿದ್ದರಿಂದ ಅವಳಿಗೆ ತಿಳಿಸಿದನು. ಆಗ ಆಕೆ ತನ್ನ ಜನರ ಮಕ್ಕಳಿಗೆ ಆ ಒಗಟನ್ನು ತಿಳಿಸಿದಳು. ಆದದ ರಿಂದ ಏಳನೇ ದಿನದಲ್ಲಿ ಸೂರ್ಯನು ಮುಳುಗುವದ ಕ್ಕಿಂತ ಮುಂಚೆ ಆ ಊರಿನವರು ಅವನಿಗೆ--ಜೇನಿಗಿಂತ ಸಿಹಿಯಾದದ್ದೇನು? ಸಿಂಹಕ್ಕಿಂತ ಬಲವಾದದ್ದೇನು? ಎಂದು ಹೇಳಿದರು. ಅವನು ಅವರಿಗೆ--ನೀವು ನನ್ನ ಕಡಸಿನಿಂದ ಉಳದಿದ್ದರೆ ನನ್ನ ಒಗಟನ್ನು ಗ್ರಹಿಸಲಾರಿರಿ ಅಂದನು. ಕರ್ತನ ಆತ್ಮವು ಅವನ ಮೇಲೆ ಬಂದದ್ದ ರಿಂದ ಅವನು ಅಷ್ಕೆಲೋನಿಗೆ ಹೋಗಿ ಆ ಊರಿನಲ್ಲಿ ಮೂವತ್ತು ಜನರನ್ನು ವಧಿಸಿ ಸುಲುಕೊಂಡು ಒಗಟನ್ನು ತಿಳಿಸಿದವರಿಗೆ ದುಸ್ತುವಸ್ತ್ರಗಳನ್ನು ಕೊಟ್ಟನು.ಅವನು ಕೋಪಗೊಂಡು ತನ್ನ ತಂದೆಯ ಮನೆಗೆ ಹೊರಟು ಹೋದನು. ಆದರೆ ಸಂಸೋನನ ಹೆಂಡತಿಯು ಅವನ ಸ್ನೇಹಿತನಾಗಿದ್ದ ಒಬ್ಬನಿಗೆ ಕೊಡಲ್ಪಟ್ಟಳು.