Hosea · chapter 12 · verse 10
Hosea 12:10 in Kannada
ನಾನು ಪ್ರವಾದಿಗಳ ಮುಖಾಂತರ ಸಹ ನಿನ್ನೊಂದಿಗೆ ಮಾತನಾಡಿದ್ದೇನೆ, ನಾನು ದರ್ಶನಗಳನ್ನು ಹೆಚ್ಚಿಸಿದ್ದೇನೆ, ಇದಲ್ಲದೆ ಪ್ರವಾದಿಗಳ ಸೇವೆಯ ಮುಖಾಂತರ ಸಾಮ್ಯಗಳನ್ನು ಉಪಯೋಗಿಸಿದ್ದೇನೆ.
Naanu pravaadigala mukhaantara saha ninnondige maatanaadiddene, naanu darshanagalannu hechchisiddene, idallade pravaadigala seveya mukhaantara saamyagalannu upayogisiddene.
Hosea 12:10 in English
- King James Version (KJV)
- I have also spoken by the prophets, and I have multiplied visions, and used similitudes, by the ministry of the prophets.
- World English Bible (WEB)
- I have also spoken to the prophets, and I have multiplied visions; and by the ministry of the prophets I have used parables.
- American Standard Version (ASV)
- I have also spoken unto the prophets, and I have multiplied visions; and by the ministry of the prophets have I used similitudes.
- Bible in Basic English (BBE)
- My word came to the ears of the prophets and I gave them visions in great number, and by the mouths of the prophets I made use of comparisons.
- Darby Translation (DBY)
- And I have spoken to the prophets, and I have multiplied visions, and by means of the prophets have I used similitudes.
- Webster's Bible (WBS)
- I have also spoken by the prophets, and I have multiplied visions, and used similitudes by the ministry of the prophets.
- Young's Literal Translation (YLT)
- And I have spoken unto the prophets, And I have multiplied vision, And by the hand of the prophets I use similes.
Read in context
- 8ಎಫ್ರಾಯಾಮು--ಆದಾಗ್ಯೂ ನಾನು ಐಶ್ವರ್ಯವಂತನಾದೆನು, ನಾನು ಆಸ್ತಿಯನ್ನು ಕಂಡುಕೊಂಡೆನು; ನನ್ನ ಕೆಲಸಗಳಲ್ಲೆಲ್ಲಾ ಪಾಪವಾದ ದುಷ್ಟತ್ವವನ್ನು ಅವರು ನನ್ನಲ್ಲಿ ಕಂಡುಕೊಳ್ಳುವದಿಲ್ಲ.
- 9ಐಗುಪ್ತದೇಶದಿಂದ ನಿನ್ನ ದೇವರಾಗಿರುವ ಕರ್ತನಾದ ನಾನು ಇನ್ನೂ ಪರಿಶುದ್ಧ ಹಬ್ಬದ ದಿನದ ಪ್ರಕಾರ ಗುಡಾರಗಳಲ್ಲಿ ವಾಸಿಸುವ ಹಾಗೆ ನಿನ್ನನ್ನು ಮಾಡುವೆನು.
- 10ನಾನು ಪ್ರವಾದಿಗಳ ಮುಖಾಂತರ ಸಹ ನಿನ್ನೊಂದಿಗೆ ಮಾತನಾಡಿದ್ದೇನೆ, ನಾನು ದರ್ಶನಗಳನ್ನು ಹೆಚ್ಚಿಸಿದ್ದೇನೆ, ಇದಲ್ಲದೆ ಪ್ರವಾದಿಗಳ ಸೇವೆಯ ಮುಖಾಂತರ ಸಾಮ್ಯಗಳನ್ನು ಉಪಯೋಗಿಸಿದ್ದೇನೆ.
- 11ಗಿಲ್ಯಾದಿನಲ್ಲಿ ದುಷ್ಟತನ ಇದೆಯೋ? ನಿಶ್ಚಯವಾಗಿ ಅವೆಲ್ಲಾ ವ್ಯರ್ಥವೇ; ಅವರು ಗಿಲ್ಗಾಲಿನಲ್ಲಿ ಹೋರಿಗಳನ್ನು ಅರ್ಪಿಸುತ್ತಾರೆ, ಹೌದು, ಅವರ ಬಲಿಪೀಠಗಳು ಹೊಲದ ಸಾಲುಗಳಲ್ಲಿರುವ ಕಲ್ಲುಕುಪ್ಪೆಯ ಹಾಗಿದೆ ಎಂದು ಹೇಳಿದನು.
- 12ಯಾಕೋಬನು ಸಿರಿಯಾ ದೇಶಕ್ಕೆ ಓಡಿಹೋದನು; ಇಸ್ರಾಯೇಲನು ಹೆಂಡತಿಯ ನಿಮಿತ್ತ ಸೇವೆಮಾಡಿ ಹೆಂಡತಿಯ ನಿಮಿತ್ತ ಕುರಿಗಳನ್ನು ಕಾದನು.
Cross references
- 2 Kings 17:13 2 ಅರಸುಗಳು 17:13ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ, ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ನ್ಯಾಯಪ್ರಮಾಣದ ಪ್ರಕಾರ ನನ್ನ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳಿರೆಂದು ಕರ್ತನು ಎಲ್ಲಾ ಪ್ರವಾ ದಿಗಳ ಮುಖಾಂತರವಾಗಿಯೂ ಎಲ್ಲಾ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ ಯೆಹೂ ದಕ್ಕೂ ಸಾಕ್ಷಿ ಹೇಳಿದನು.
- Ezekiel 20:49 ಯೆಹೆಜ್ಕೇಲನು 20:49ಆಗ ನಾನು ಹೇಳಿದ್ದೇನಂದರೆ --ಹಾ, ದೇವರಾದ ಕರ್ತನೇ, ಅವನು ಸಾಮ್ಯಗಳನ್ನು ಹೇಳುವದಿಲ್ಲವೇ ಎಂದು ನನ್ನ ವಿಷಯವಾಗಿ ಹೇಳುತ್ತಾರೆ.
- Jeremiah 19:1 ಯೆರೆಮೀಯ 19:1ಕರ್ತನು ಹೀಗೆ ಹೇಳುತ್ತಾನೆ--ಹೋಗಿ, ಕುಂಬಾರನ ಮಣ್ಣಿನ ಕೂಜೆಯನ್ನು ತಕ್ಕೊಂಡು, ಜನರ ಹಿರಿಯರಿಂದಲೂ ಯಾಜಕರ ಹಿರಿಯರಿಂದಲೂ ಕೆಲವರನ್ನು ಕರಕೊಂಡು
- Isaiah 20:2–5 ಯೆಶಾಯ 20:2–5ಅದೇ ಸಮಯದಲ್ಲಿ ಕರ್ತನು ಆಮೋ ಚನ ಮಗನಾದ ಯೆಶಾಯನಿಗೆ ಹೋಗಿ ನಿನ್ನ ನಡುವಿನ ಮೇಲಿರುವ ಗೋಣಿತಟ್ಟನ್ನು ಬಿಚ್ಚು, ನಿನ್ನ ಪಾದಗಳ ಲ್ಲಿರುವ ಕೆರಗಳನ್ನು ತೆಗೆದಿಡು ಎಂದು ಹೇಳಿದನು. ಅವನು ಹಾಗೆ ಮಾಡಿ ಬೆತ್ತಲೆಯಾಗಿ ಕೆರವಿಲ್ಲದೆ ತಿರು ಗುತ್ತಿದ್ದನು. ಕರ್ತನು ಹೇಳಿದ್ದೇನಂದರೆ, ನನ್ನ ಸೇವಕ ನಾದ ಯೆಶಾಯನು ಐಗುಪ್ತಕ್ಕೂ ಐಥಿಯೋಪಿ ಯಕ್ಕೂ ಗುರುತಾಗಿಯೂ ಆಶ್ಚರ್ಯವಾಗಿಯೂ ಹೀಗೆ ಮೂರು ವರ್ಷ ಬೆತ್ತಲೆಯಾಗಿ ಕೆರವಿಲ್ಲದೆ ನಡೆದನು. ಹಾಗೆಯೇ ಅಶ್ಶೂರಿನ ಅರಸನು ಐಗುಪ್ತ್ಯರನ್ನು ಬಂಧಿಸಿ ಐಥಿಯೋಪಿಯಾದ ಕೈದಿಗಳನ್ನು ಅವರು ದೊಡ್ಡವರಾಗಲಿ ಸಣ್ಣವರಾಗಲಿ ಬಟ್ಟೆ ಕೆರಗಳಿಲ್ಲದೆ ಬರಿ ಕುಂಡಿಯವರಾಗಿ ಐಗುಪ್ತದ ಮಾನಭಂಗಕ್ಕೋ ಸ್ಕರ ಸೆರೆಗೆ ನಡೆಯುವಂತೆ ಮಾಡುವನು. ಆಗ (ನನ್ನ ಜನರು) ಅವನು ನಿರೀಕ್ಷಿಸಿಕೊಂಡಿದ್ದ ಐಥಿಯೋ ಪಿಯರ ನಿಮಿತ್ತವಾಗಿಯೂ ತಮ್ಮ ವೈಭವದ ಐಗುಪ್ತದ ವಿಷಯವಾಗಿಯೂ ಬೆಚ್ಚಿ ಬೆರಗಾಗಿ ನಾಚಿಕೆಪಡು ವರು.ಆ ದಿವಸದಲ್ಲಿ ಈ ತೀರದ ನಿವಾಸಿಗಳು ಹೇಳುವದೇನಂದರೆ--ಇಗೋ, ಅಶ್ಶೂರದ ಅರಸ ರಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ ನಿರೀಕ್ಷಿಸಿದ್ದೇವೋ ಅವ ರಿಗೆ ಈ ಗತಿ ಬಂತಲ್ಲಾ ನಾವು ತಪ್ಪಿಸಿಕೊಳ್ಳುವದು ಹೇಗೆ ಅನ್ನುವರು.
- Joel 2:28 ಯೋವೇಲ 2:28ಆಮೇಲೆ ಆಗುವದೇನಂದರೆ--ಎಲ್ಲಾ ಶರೀರಗಳ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ಆಗ ನಿಮ್ಮ ಕುಮಾರರೂ ಕುಮಾರ್ತೆಯರೂ ಪ್ರವಾದಿ ಸುವರು; ನಿಮ್ಮ ವೃದ್ಧರು ಕನಸುಗಳನ್ನು ಕಾಣುವರು; ನಿಮ್ಮ ಯೌವನಸ್ಥರು ದರ್ಶನಗಳನ್ನು ನೋಡುವರು.
- Jeremiah 7:25 ಯೆರೆಮೀಯ 7:25ನಿಮ್ಮ ಪಿತೃಗಳು ಐಗುಪ್ತ ದೇಶವನ್ನು ಬಿಟ್ಟು ಹೋದಂದಿನಿಂದ ಇಂದಿನ ವರೆಗೂ ನಾನು ನನ್ನ ದಾಸರಾಗಿರುವ ಸಕಲ ಪ್ರವಾದಿಗಳನ್ನು ದಿನ ದಿನವೂ ಬೆಳಿಗ್ಗೆ ಎದ್ದು ನಿಮ್ಮ ಬಳಿಗೆ ಕಳುಹಿಸಿದೆನು.
- 2 Corinthians 12:1 2 ಕೊರಿಂಥದವರಿಗೆ 12:1ಹೆಚ್ಚಳಪಡುವದು ಹೇಗೂ ವಿಹಿತವಲ್ಲ ದಿದ್ದರೂ ಅದು ನನಗೆ ಅವಶ್ಯವಾಗಿದೆ; ಆದದರಿಂದ ಕರ್ತನು ನನಗೆ ದಯಪಾಲಿಸಿದ ದರ್ಶನಗಳ ಮತ್ತು ಪ್ರಕಟನೆಗಳ ವಿಷಯವಾಗಿ ಹೇಳುತ್ತೇನೆ.
- 1 Kings 17:1 1 ಅರಸುಗಳು 17:1ಗಿಲ್ಯಾದಿನ ನಿವಾಸಿಗಳಲ್ಲಿ ತಿಷ್ಬೀಯನಾದ ಎಲೀಯನು ಅಹಾಬನಿಗೆ--ಯಾವಾತನ ಸಮ್ಮುಖದಲ್ಲಿ ನಿಲ್ಲುತ್ತೇನೋ ಆ ಇಸ್ರಾಯೇಲಿನ ದೇವ ರಾದ ಕರ್ತನ ಜೀವದಾಣೆ, ನನ್ನ ಮಾತಿನ ಪ್ರಕಾರ ವಲ್ಲದೆ ಈ ವರ್ಷಗಳಲ್ಲಿ ಮಂಜೂ ಮಳೆಯೂ ಬೀಳು ವದಿಲ್ಲ ಅಂದನು.
- 1 Kings 13:1 1 ಅರಸುಗಳು 13:1ಯಾರೊಬ್ಬಾಮನು ಧೂಪವನ್ನರ್ಪಿಸಲು ಬಲಿಪೀಠದ ಬಳಿಯಲ್ಲಿ ನಿಂತಿರುವಾಗ ಇಗೋ, ಕರ್ತನ ಮಾತಿನಂತೆ ದೇವರ ಮನುಷ್ಯನು ಯೆಹೂದದಿಂದ ಬೇತೇಲಿಗೆ ಬಂದನು.
- Amos 7:14 ಆಮೋಸ 7:14ಆಗ ಆಮೋಸನು ಅಮಚ್ಯನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ--ನಾನು ಪ್ರವಾದಿಯಲ್ಲ, ಪ್ರವಾ ದಿಯ ಮಗನೂ ಅಲ್ಲ; ಆದರೆ ನಾನು ಕುರುಬನೂ ಹತ್ತಿ ಹಣ್ಣುಗಳನ್ನು ಕೂಡಿಸುವವನೂ ಆಗಿದ್ದೇನೆ.
- Jeremiah 13:1–14 ಯೆರೆಮೀಯ 13:1–14ಕರ್ತನು ನನಗೆ--ನೀನು ಹೋಗಿ ನಾರಿನ ದಟ್ಟಿಯನ್ನು ತೆಗೆದುಕೊಂಡು ನಿನ್ನ ನಡುವಿಗೆ ಕಟ್ಟು, ಆದರೆ ಅದನ್ನು ನೀರಿನಲ್ಲಿ ಹಾಕಬೇಡ ಅಂದನು; ಆಗ ಕರ್ತನ ಮಾತಿನ ಪ್ರಕಾರ ನಾನು ಆ ದಟ್ಟಿಯನ್ನು ತಕ್ಕೊಂಡು ನನ್ನ ನಡುವಿಗೆ ಕಟ್ಟಿಕೊಂಡೆನು. ಆಗ ಕರ್ತನ ವಾಕ್ಯವು ನನಗೆ ಎರಡನೇ ಸಾರಿ ಉಂಟಾಗಿ ಹೇಳಿದ್ದೆನಂದರೆ--ನೀನು ನಿನ್ನ ನಡುವಿನಲ್ಲಿರುವ ದಟ್ಟಿಯನ್ನು ತಕ್ಕೊಂಡು ಎದ್ದು ಯೂಫ್ರೇಟೀಸ್ಗೆ ಹೋಗಿ ಅದನ್ನು ಅಲ್ಲಿ ಬಂಡೆಯ ಬಿರುಕಿನಲ್ಲಿ ಅಡಗಿಸು ಎಂದಿತು. ಆಗ ನಾನು ಹೋಗಿ ಕರ್ತನು ನನಗೆ ಆಜ್ಞಾಪಿಸಿದ ಪ್ರಕಾರ ಅದನ್ನು ಯೂಫ್ರೇಟೀಸ್ ಬಳಿ ಯಲ್ಲಿ ಅಡಗಿಸಿದೆನು. ಬಹಳ ದಿವಸಗಳಾದ ಮೇಲೆ ಕರ್ತನು ನನಗೆ--ನೀನು ಎದ್ದು ಯೂಫ್ರೆಟೀ ಸ್ಗೆ ಹೋಗಿ ಅಲ್ಲಿ ಅಡಗಿಸಬೇಕೆಂದು ನಾನು ಆಜ್ಞಾಪಿಸಿದ ದಟ್ಟಿಯನ್ನು ಅಲ್ಲಿಂದ ತಕ್ಕೋ ಅಂದನು. ಆಗ ನಾನು ಯೂಫ್ರೇಟೀಸಿಗೆ ಹೋಗಿ ಅಗೆದು ಆ ದಟ್ಟಿಯನ್ನು ನಾನು ಅಡಗಿಸಿದ್ದಲ್ಲಿಂದ ತೆಗೆದೆನು; ಇಗೋ, ಆ ದಟ್ಟಿಯು ಯಾವ ಕೆಲಸಕ್ಕಾದರೂ ಬಾರದೆ ಕೆಟ್ಟು ಹೋಗಿತ್ತು. ಆಗ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ-- ಕರ್ತನು ಹೀಗೆ ಹೇಳುತ್ತಾನೆ --ಈ ಪ್ರಕಾರ ನಾನು ಯೆಹೂದದ ಗರ್ವವನ್ನೂ ಯೆರೂಸಲೇಮಿನ ದೊಡ್ಡ ಗರ್ವವನ್ನೂ ಕೆಡಿಸುವೆನು. ನನ್ನ ವಾಕ್ಯಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಕಲ್ಪನೆಯಂತೆ ನಡಕೊಂಡು ಬೇರೆ ದೇವರುಗಳನ್ನು ಸೇವಿಸುವದಕ್ಕೂ ಅವುಗಳನ್ನು ಆರಾಧಿಸುವದಕ್ಕೂ ಹಿಂಬಾಲಿಸುವ ಈ ಕೆಟ್ಟ ಜನರು ಯಾವ ಕೆಲಸಕ್ಕಾದರೂ ಬಾರದ ಈ ನಡುಕಟ್ಟಿನ ಹಾಗಿರುವರು. ಯಾವ ಪ್ರಕಾರ ದಟ್ಟಿಯು ಮನುಷ್ಯನ ನಡುವಿಗೆ ಹತ್ತಿಕೊ ಳ್ಳುವದೋ ಅದೇ ಪ್ರಕಾರ ನಾನು ಇಸ್ರಾಯೇಲಿನ ಮನೆತನವನ್ನೆಲ್ಲವನ್ನೂ ಯೆಹೂದದ ಮನೆತನವ ನ್ನೆಲ್ಲವನ್ನೂ ನನಗೆ ಜನರೂ ಹೆಸರೂ ಸ್ತೋತ್ರವೂ ಮಹಿಮೆಯೂ ಆಗುವ ಹಾಗೆ ನನಗೆ ಹತ್ತಿಕೊಳ್ಳುವಂತೆ ಮಾಡಿದೆನು; ಆದರೆ ಅವರು ಕೇಳಲಿಲ್ಲ. ಆದದರಿಂದ ನೀನು ಅವರಿಗೆ ಈ ಮಾತನ್ನು ಹೇಳಬೇಕು--ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ ಬುದ್ದಲಿಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವವು; ಆಗ ಅವರು ನಿನಗೆ--ಬುದ್ದಲಿಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವವೆಂದು ನಮಗೆ ಚೆನ್ನಾಗಿ ತಿಳಿಯಿತಲ್ಲವೋ ಎಂದು ನಿನಗೆ ಹೇಳುವರು. ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ದೇಶದ ನಿವಾಸಿಗಳನ್ನೆಲ್ಲಾ ದಾವೀದನ ಸಿಂಹಾಸನದಲ್ಲಿ ಕೂಡ್ರುವ ಅರಸುಗಳನ್ನೂ ಯಾಜಕರನ್ನೂ ಪ್ರವಾದಿ ಗಳನ್ನೂ ಯೆರೂಸಲೇಮಿನ ನಿವಾಸಿಗಳೆಲ್ಲರನ್ನೂ ಅಮಲಿನಿಂದ ತುಂಬಿಸುವೆನು. ಅವರ ತಂದೆಗಳನ್ನೂ ಮಕ್ಕಳನ್ನೂ ಕೂಡ ಒಬ್ಬನ ಮೇಲೊಬ್ಬನನ್ನು ಅಪ್ಪಳಿಸು ವೆನು. ನಾನು ಅವರನ್ನು ಕನಿಕರಿಸುವದಿಲ್ಲ, ಕರುಣಿಸು ವದಿಲ್ಲ ಅಂತಃಕರುಣೆಪಡುವದಿಲ್ಲ ಅವರನ್ನು ಕೆಡಿಸು ವೆನು ಎಂದು ಕರ್ತನು ಅನ್ನುತ್ತಾನೆ.
- Nehemiah 9:30 ನೆಹೆಮೀಯ 9:30ನೀನು ಅನೇಕ ವರುಷ ಅವರನ್ನು ತಾಳಿಕೊಂಡಿದ್ದು ನಿನ್ನ ಪ್ರವಾದಿಗಳ ಮುಖಾಂತರ ನಿನ್ನ ಆತ್ಮನಿಂದ ಅವರಿಗೆ ವಿರೋಧವಾಗಿ ಸಾಕ್ಷಿಹೇಳಿದಿ. ಆದರೆ ಅವರು ಕಿವಿಗೊಡದೆ ಇದ್ದದ್ದರಿಂದ ನೀನು ಅವರನ್ನು ದೇಶಗಳ ಜನರ ಕೈಯಲ್ಲಿ ಒಪ್ಪಿಸಿದಿ.