Judges · chapter 9 · verse 8
Judges 9:8 in Kannada
ಮರಗಳು ತಮ್ಮ ಮೇಲೆ ಒಬ್ಬ ಅರಸನನ್ನು ಅಭಿಷೇ ಕಿಸಿಕೊಳ್ಳುವದಕ್ಕಾಗಿ ಹೊರಟು ಹೋಗಿ ಇಪ್ಪೆಯ ಮರಕ್ಕೆ--ನೀನು ನಮ್ಮನ್ನು ಆಳು ಅಂದವು.
Maragalu tamma mele obba arasanannu abhishe kisikolluvadakkaagi horatu hogi ippeya marakke--neenu nammannu aalu andavu.
Judges 9:8 in English
- King James Version (KJV)
- The trees went forth [on a time] to anoint a king over them; and they said unto the olive tree, Reign thou over us.
- World English Bible (WEB)
- The trees set out to anoint a king over themselves. They said to the olive tree, ‘Reign over us.’
- American Standard Version (ASV)
- The trees went forth on a time to anoint a king over them; and they said unto the olive-tree, Reign thou over us.
- Bible in Basic English (BBE)
- One day the trees went out to make a king for themselves; and they said to the olive-tree, Be king over us.
- Darby Translation (DBY)
- The trees once went forth to anoint a king over them; and they said to the olive-tree, Reign over us.
- Webster's Bible (WBS)
- The trees went forth [on a time] to anoint a king over them; and they said to the olive-tree, Reign thou over us.
- Young's Literal Translation (YLT)
- 'The trees have diligently gone to anoint over them a king, and they say to the olive, Reign thou over us.
Read in context
- 6ಶೆಕೆಮಿನ ಜನರೆಲ್ಲರೂ ಮಿಲ್ಲೋನಿನ ಮನೆಯವರೆಲ್ಲರೂ ಕೂಡಿಕೊಂಡು ಹೋಗಿ ಶೆಕೆಮಿನ ಬೈಲಲ್ಲಿ ಇರುವ ಸ್ತಂಭದ ಬಳಿಯಲ್ಲಿ ಅಬೀಮೆಲೆಕನನ್ನು ಅರಸನನ್ನಾಗಿ ನೇಮಿಸಿದರು.
- 7ಯೋತಾಮನಿಗೆ ಇದನ್ನು ತಿಳಿಸಿದಾಗ ಅವನು ಹೋಗಿ ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ಏರಿ ನಿಂತು ಗಟ್ಟಿಯಾಗಿ ಕೂಗಿ ಅವರಿಗೆ--ಶೆಕೆಮಿನ ಜನರೇ, ದೇವರು ನಿಮ್ಮ ಮೊರೆ ಕೇಳುವ ಹಾಗೆ ನನ್ನ ಮಾತನ್ನು ಕೇಳಿರಿ.
- 8ಮರಗಳು ತಮ್ಮ ಮೇಲೆ ಒಬ್ಬ ಅರಸನನ್ನು ಅಭಿಷೇ ಕಿಸಿಕೊಳ್ಳುವದಕ್ಕಾಗಿ ಹೊರಟು ಹೋಗಿ ಇಪ್ಪೆಯ ಮರಕ್ಕೆ--ನೀನು ನಮ್ಮನ್ನು ಆಳು ಅಂದವು.
- 9ಇಪ್ಪೆಯ ಮರ ಅವುಗಳಿಗೆ--ಯಾವದರಿಂದ ದೇವರನ್ನೂ ಮನು ಷ್ಯರನ್ನೂ ಘನಪಡಿಸುತ್ತಾರೋ ಆ ನನ್ನ ಪುಷ್ಟಿಯನ್ನು ಬಿಟ್ಟು ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ ಅಂದಿತು.
- 10ಮರಗಳು ಅಂಜೂರದ ಗಿಡಕ್ಕೆ--ನೀನು ಬಂದು ನಮ್ಮ ಮೇಲೆ ಆಳಬೇಕು ಅಂದವು.
Cross references
- 2 Kings 14:9 2 ಅರಸುಗಳು 14:9ಆದರೆ ಇಸ್ರಾಯೇಲಿನ ಅರಸನಾದ ಯೆಹೋವಾಷನು ಯೆಹೂದದ ಅರಸ ನಾಗಿರುವ ಅಮಚ್ಯನಿಗೆ ಹೇಳಿ ಕಳುಹಿಸಿದ್ದೇನಂದರೆಲೆಬನೋನಿನಲ್ಲಿದ್ದ ಮುಳ್ಳು ಗಿಡವು ಲೆಬನೋನಿನ ಲ್ಲಿರುವ ದೇವದಾರಿಗೆ -- ನನ್ನ ಮಗನಿಗೆ ಹೆಂಡತಿ ಯಾಗಿರಲು ನೀನು ನಿನ್ನ ಮಗಳನ್ನು ಕೊಡು ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋನಿನಲ್ಲಿದ್ದ ಅಡವಿಯ ಮೃಗವು ಹಾದು ಹೋಗುತ್ತಿರುವಾಗ ಆ ಮುಳ್ಳು ಗಿಡವನ್ನು ತುಳಿಯಿತು.
- Daniel 4:10–18 ದಾನಿಯೇಲನು 4:10–18ನನ್ನ ಹಾಸಿಗೆಯಲ್ಲಿ ಉಂಟಾದ ನನ್ನ ಮನಸ್ಸಿನ ದರ್ಶನಗಳು--ನಾನು ನೋಡಲಾಗಿ ಇಗೋ, ಭೂಮಧ್ಯದಲ್ಲಿ ಒಂದು ಬಹಳ ಎತ್ತರವಾದ ಮರವು ಇತ್ತು. ಆ ಮರವು ಬೆಳೆದು ಬಲವಾಯಿತು; ಅದರ ಎತ್ತರವು ಆಕಾಶಕ್ಕೂ ಅದು ಭೂಲೋಕದ ಕಟ್ಟಕಡೆಯವರೆಗೂ ಕಾಣಿಸುತ್ತಿತ್ತು. ಅದರ ಎಲೆಗಳು ಅಂದವಾಗಿದ್ದವು, ಅದರ ಫಲವು ಬಹಳವಾಗಿತ್ತು; ಅದರಲ್ಲಿ ಎಲ್ಲರಿಗೂ ಆಹಾರವಿತ್ತು; ಬಯಲು ಮೃಗಗಳಿಗೆ ಅದರ ಕೆಳಗೆ ನೆರಳಿತ್ತು; ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಿಸುತ್ತಿದ್ದವು, ಎಲ್ಲಾ ಜೀವಿಗಳಿಗೂ ಅದರಿಂದಲೇ ಆಹಾರ ಇರುತ್ತಿತ್ತು. ನನ್ನ ಹಾಸಿಗೆಯ ಮೇಲೆ ನನ್ನ ಮನಸ್ಸಿನ ದರ್ಶನ ಗಳನ್ನು ನಾನು ನೋಡಲಾಗಿ; ಇಗೋ, ಒಬ್ಬ ಪಾಲಕನು ಮತ್ತು ಪರಿಶುದ್ಧನೊಬ್ಬನು ಪರಲೋಕದಿಂದ ಇಳಿದು ಬಂದನು. ಅವನು ಗಟ್ಟಿಯಾಗಿ ಕೂಗಿ--ಮರವನ್ನು ಕಡಿದು ಅದರ ಕೊಂಬೆಗಳನ್ನು ಕತ್ತರಿಸಿ ಅದರ ಎಲೆ ಗಳನ್ನು ಉದುರಿಸಿ ಅದರ ಫಲವನ್ನು ಚದರಿಸಿ ಮೃಗಗಳು ಅದರ ಕೆಳಗಿನಿಂದಲೂ ಪಕ್ಷಿಗಳು ಅದರ ಕೊಂಬೆ ಗಳಿಂದಲೂ ಹೋಗಿ ಬಿಡಲಿ. ಆದಾಗ್ಯೂ ಅದರ ಬೇರಿನ ಮೋಟನ್ನು ಕಬ್ಬಿಣ, ಹಿತ್ತಾಳೆಗಳ ಕಟ್ಟುಳ್ಳದ್ದ ನ್ನಾಗಿ ಮಾಡಿ ಭೂಮಿಯಲ್ಲಿಯೂ ಬಯಲಿನ ಎಳೆಯ ಹುಲ್ಲಿನಲ್ಲಿಯೂ ಬಿಡಿರಿ; ಅದು ಆಕಾಶದ ಮಂಜಿನಿಂದ ತೇವವಾಗಲಿ; ಅದರ ಪಾಲು ಮೃಗಗಳ ಸಂಗಡ ಭೂಮಿಯ ಹುಲ್ಲಿನಲ್ಲಿರಲಿ. ಅವನ ಹೃದಯವು ಮನುಷ್ಯನ ಹೃದಯದಂತೆ ಇರದೆ ಬದಲಾಗಲಿ; ಮೃಗದ ಹೃದಯವು ಅವನಿಗೆ ಕೊಡಲ್ಪಡಲಿ; ಏಳು ಕಾಲಗಳು ಅವನನ್ನು ದಾಟಿಹೋಗಲಿ ಎಂದು ಹೇಳಿದನು. ಈ ವಿಷಯವು ಪಾಲಕರ ಕಟ್ಟಡದಿಂದಲೂ ಈ ಸಂಗತಿಯು ಪರಿಶುದ್ಧರ ಮಾತಿನಿಂದಲೂ ಉಂಟಾಯಿತು; ಮಹೋ ನ್ನತನು ಮನುಷ್ಯರ ರಾಜ್ಯದಲ್ಲಿ ಆಳುತ್ತಾನೆಂದೂ ತನ್ನ ಮನಸ್ಸಿಗೆ ಸರಿಯಾದವರಿಗೆ ಅದನ್ನು ಕೊಡುತ್ತಾನೆಂದೂ ಮನುಷ್ಯರಲ್ಲಿ ನೀಚರಾದವರನ್ನು ಅದರ ಮೇಲೆ ನೇಮಿಸುತ್ತಾನೆಂದೂ ಜೀವಂತರಿಗೆ ತಿಳಿಯಬೇಕೆಂದೇ ಸಾರಿದನು. ಈ ಕನಸನ್ನು ನೆಬೂಕದ್ನೆಚ್ಚರನೆಂಬ ಅರಸನಾದ ನಾನು ಕಂಡಿದ್ದೇನೆ. ಈಗ ಬೆಲ್ತೆಶಚ್ಚರ ನೆಂಬ ನೀನು ಅದರ ಅರ್ಥವನ್ನು ಹೇಳು. ನನ್ನ ರಾಜ್ಯದಲ್ಲಿರುವ ಸಕಲ ಜ್ಞಾನಿಗಳು ಅದರ ಅರ್ಥವನ್ನು ನನಗೆ ಹೇಳಲು ಶಕ್ತರಾದವರಲ್ಲ. ಆದರೆ ನಿನ್ನಲ್ಲಿ ಪರಿ ಶುದ್ಧ ದೇವರುಗಳ ಆತ್ಮವು ಇರುವದರಿಂದ ನೀನು ಹೇಳಲು ಸಾಧ್ಯವಾಯಿತು.
- Judges 8:22–23 ನ್ಯಾಯಸ್ಥಾಪಕರು 8:22–23ಗಿದ್ಯೋನನು ಎದ್ದು ಜೆಬಹನನ್ನೂ ಚಲ್ಮುನ್ನನನ್ನೂ ಕೊಂದುಹಾಕಿ ಅವರ ಒಂಟೆಗಳ ಕುತ್ತಿಗೆಗಳಲ್ಲಿ ಇದ್ದ ಆಭರಣಗಳನ್ನು ತೆಗೆದು ಕೊಂಡನು. ಆಗ ಇಸ್ರಾಯೇಲ್ ಜನರು ಗಿದ್ಯೋನನಿಗೆನೀನು ನಮ್ಮನ್ನು ಮಿದ್ಯಾನ್ಯರ ಕೈಯಿಂದ ತಪ್ಪಿಸಿ ರಕ್ಷಿಸಿದ್ದರಿಂದ ನೀನೂ ನಿನ್ನ ಕುಮಾರನೂ ಕುಮಾರನ ಕುಮಾರನೂ ನಮ್ಮನ್ನು ಆಳಬೇಕು ಅಂದರು. ಗಿದ್ಯೋ ನನು ಅವರಿಗೆ ನಾನು ನಿಮ್ಮನ್ನು ಆಳುವದಿಲ್ಲ, ನನ್ನ ಮಗನೂ ನಿಮ್ಮನ್ನು ಆಳುವದಿಲ್ಲ, ಕರ್ತನೇ ನಿಮ್ಮನ್ನು ಆಳುವನು ಅಂದನು.
- Ezekiel 17:3–10 ಯೆಹೆಜ್ಕೇಲನು 17:3–10ಹೇಳತಕ್ಕದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ. ದೊಡ್ಡ ರೆಕ್ಕೆಗಳೂ ಉದ್ದವಾದ ರೆಕ್ಕೆಗಳೂ ಉಳ್ಳಂಥ ವಿಧವಿಧವಾದ ಬಣ್ಣ ಬಣ್ಣದ ಪುಕ್ಕಗಳಿಂದ ತುಂಬಿದ್ದಂಥ ಒಂದು ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರಿನ ಮರದ ಮೇಲ್ಗಡೆಯ ಕೊಂಬೆಯನ್ನು ಕಿತ್ತುಹಾಕಿತು. ಅದರ ಚಿಗುರುಗಳ ಕೊನೆಯನ್ನು ಕಿತ್ತು ವ್ಯಾಪಾರದ ದೇಶಕ್ಕೆ ತೆಗೆದುಕೊಂಡು ಹೋಗಿ ವರ್ತಕರಿರುವ ನಗರದಲ್ಲಿ ಇಟ್ಟಿತು. ಅದು ದೇಶದ ಬೀಜವನ್ನೂ ಸಹ ತೆಗೆದು ಕೊಂಡು ಹೋಗಿ ಫಲವುಳ್ಳ ಹೊಲದಲ್ಲಿ ಇರಿಸಿತು; ಅದು ಹೆಚ್ಚು ನೀರಿರುವ ಸ್ಥಳದಲ್ಲಿ ಅದನ್ನು ನೆಟ್ಟು ನೀರವಂಜಿಯ ಮರದ ಹಾಗೆ ಬೆಳೆಯಿಸಿತು. ಅದು ಮೊಳೆತು ತಗ್ಗಾದ ಪ್ರಮಾಣದಲ್ಲಿ ಹಬ್ಬುವ ದ್ರಾಕ್ಷೇ ಗಿಡವಾಯಿತು; ಅದರ ಬಳ್ಳಿಗಳು ಅದರ ಕಡೆಗೆ ತಿರುಗಿ ಕೊಂಡವು, ಅದರ ಬೇರುಗಳು ಅದರ ಕೆಳಗಿದ್ದವು; ಹೀಗೆ ಅದು ದ್ರಾಕ್ಷೇ ಗಿಡವಾಯಿತು, ಕೊಂಬೆಗಳು ಒಡೆದು ಬಳ್ಳಿಗಳು ಹಬ್ಬಿದವು. ದೊಡ್ಡ ರೆಕ್ಕೆಗಳೂ ಬಹಳ ಗರಿಗಳೂ ಇದ್ದ ಇನ್ನೊಂದು ದೊಡ್ಡ ಹದ್ದು ಇತ್ತು; ಆಗ ಇಗೋ, ಆ ದ್ರಾಕ್ಷೇ ಗಿಡವು ತಾನು ನಾಟಿಕೊಂಡಿದ್ದ ಪಾತಿಯೊಳಗಿಂದ ಅದರ ಕಡೆಗೆ ತನ್ನ ಬೇರುಗಳನ್ನು ತಿರುಗಿಸಿ ತನ್ನ ರೆಂಬೆಗಳನ್ನು ಚಾಚಿ ಅದರ ಮೂಲಕ ನೀರನ್ನು ಹಾಯಿಸುತ್ತಿತ್ತು. ಅದು ಕೊಂಬೆ ಗಳನ್ನು ಬೆಳೆಸಿ ಫಲಫಲಿಸುವ ಹಾಗೆಯೂ ಒಳ್ಳೇ ದ್ರಾಕ್ಷೇಗಿಡ ಆಗುವ ಹಾಗೆಯೂ ಒಳ್ಳೇ ಭೂಮಿಯಲ್ಲಿ ಹೆಚ್ಚು ನೀರಿನ ಬಳಿಯಲ್ಲಿ ಬೆಳೆಸಲ್ಪಟ್ಟಿತು. ನೀನು ಹೇಳಬೇಕಾದದ್ದೇನಂದರೆ -- ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಅದು ಸಮೃದ್ಧಿಯಾಗಿ ರುವದೋ? ಆ ಹದ್ದು ಅದರ ಬೇರುಗಳನ್ನು ಕಿತ್ತು ಅದರ ಹಣ್ಣುಗಳನ್ನು ತೆಗೆದುಬಿಟ್ಟರೆ ಅದು ಒಣಗುವದಿಲ್ಲವೇ? ಅದರ ಮೊಳಕೆಯ ಎಲೆಗಳೆಲ್ಲಾ ಒಣಗಿಹೋದಾಗ ಅದನ್ನು ಬೇರು ಸಹಿತ ಕೀಳಬೇಕಾದರೆ ಮಹಾಬಲವಾಗಲೀ ಅಥವಾ ಬಹಳ ಜನರಾಗಲೀ ಇರಬೇಕು. ಹೌದು, ಇಗೋ, ನೆಟ್ಟಿರಲಾಗಿ ಅದು ಸಮೃದ್ಧಿಯಾಗಿರುವದೇ? ಅದಕ್ಕೆ ಮೂಡಣಗಾಳಿ ತಗಲುವಾಗ ಅದು ಸಂಪೂರ್ಣ ವಾಗಿ ಒಣಗುವದಿಲ್ಲವೇ? ಅದು ಮೊಳೆತ ಪಾತಿಗಳ ಲ್ಲಿಯೇ ಒಣಗಿಹೋಗುವದು.