Ezekiel · chapter 20 · verse 11
Ezekiel 20:11 in Kannada
ಯಾವ ಸಂಗತಿಗಳನ್ನು ಮಾಡಿದರೆ ಮನುಷ್ಯನು ಬದುಕುವನೋ? ಆ ನನ್ನ ನಿಯಮಗಳನ್ನು ಅವರಿಗೆ ಕೊಟ್ಟು ನನ್ನ ನ್ಯಾಯಗಳನ್ನು ಅವರಿಗೆ ತಿಳಿಸಿದೆನು.
Yaava sangatigalannu maadidare manushyanu badukuvano? Aa nanna niyamagalannu avarige kottu nanna nyaayagalannu avarige tilisidenu.
Ezekiel 20:11 in English
- King James Version (KJV)
- And I gave them my statutes, and shewed them my judgments, which [if] a man do, he shall even live in them.
- World English Bible (WEB)
- I gave them my statutes and showed them my ordinances, which if a man does, he will live in them.
- American Standard Version (ASV)
- And I gave them my statutes, and showed them mine ordinances, which if a man do, he shall live in them.
- Bible in Basic English (BBE)
- And I gave them my rules and made clear to them my orders, which, if a man keeps them, will be life to him.
- Darby Translation (DBY)
- And I gave them my statutes, and made known unto them mine ordinances, which if a man do, he shall live by them.
- Webster's Bible (WBS)
- And I gave them my statutes, and showed them my judgments, which [if] a man doeth, he shall even live in them.
- Young's Literal Translation (YLT)
- And I give to them My statutes, And my judgments I caused them to know, Which the man who doth — liveth by them.
Read in context
- 9ಆದರೆ ಅವರು ಯಾರ ಮಧ್ಯದಲ್ಲಿದ್ದರೋ ನಾನು ಯಾರ ಮುಂದೆ ಅವರನ್ನು ಐಗುಪ್ತದೇಶದಿಂದ ಹೊರಗೆ ತಂದು ನನ್ನನ್ನು ತಿಳಿಯ ಪಡಿಸಿದೆನೋ? ಆ ಅನ್ಯ ಜನಾಂಗಗಳ ಕಣ್ಣುಗಳ ಮುಂದೆ ನನ್ನ ಹೆಸರು ಅಪವಿತ್ರವಾಗದ ಹಾಗೆ ನನ್ನ ಹೆಸರಿಗೋಸ್ಕರವೇ ಈ ಕೆಲಸ ಮಾಡಿದೆನು;
- 10ಆದದರಿಂದ ನಾನು ಅವರನ್ನು ಐಗುಪ್ತ ದೇಶದಿಂದ ಹೊರಗೆ ಕರತಂದು ಅರಣ್ಯದೊಳಗೆ ಅವರನ್ನು ಬರಮಾಡಿದೆನು.
- 11ಯಾವ ಸಂಗತಿಗಳನ್ನು ಮಾಡಿದರೆ ಮನುಷ್ಯನು ಬದುಕುವನೋ? ಆ ನನ್ನ ನಿಯಮಗಳನ್ನು ಅವರಿಗೆ ಕೊಟ್ಟು ನನ್ನ ನ್ಯಾಯಗಳನ್ನು ಅವರಿಗೆ ತಿಳಿಸಿದೆನು.
- 12ಇದಲ್ಲದೆ ಅವರನ್ನು ಪರಿಶುದ್ಧ ಮಾಡುವ ಕರ್ತನು ನಾನೇ ಎಂದು ಅವರು ತಿಳಿಯುವ ಹಾಗೆ ನನಗೂ ಅವರಿಗೂ ಗುರುತಾಗಿರುವದಕ್ಕೆ ನನ್ನ ಸಬ್ಬತ್ ದಿನಗಳನ್ನು ನಾನು ಅವರಿಗೆ ಕೊಟ್ಟೆನು.
- 13ಆದರೆ ಇಸ್ರಾಯೇಲಿನ ಮನೆತನದವರು ಅರಣ್ಯದಲ್ಲಿಯೂ ನನಗೆ ವಿರುದ್ಧ ವಾಗಿ ತಿರುಗಿಬಿದ್ದರು; ಆಜ್ಞಾವಿಧಿಗಳನ್ನು ಅನುಸರಿಸುವ ಮನುಷ್ಯನು ಬದುಕುವನು. ಅವುಗಳಲ್ಲಿ ನಡೆಯದೆ ನನ್ನ ನ್ಯಾಯಗಳನ್ನು ಅಸಡ್ಡೆ ಮಾಡಿ ನನ್ನ ಸಬ್ಬತ್ ದಿನಗಳನ್ನು ಸಹ ಬಹಳವಾಗಿ ಅಪವಿತ್ರಪಡಿಸಿದರು; ಆಗ ನಾನು ಅವರ ಮೇಲೆ ನನ್ನ ರೋಷದಿಂದ ದಹಿಸಿಬಿಡುವೆನೆಂದು ಹೇಳಿದೆನು.
Cross references
- Romans 10:5 ರೋಮಾಪುರದವರಿಗೆ 10:5ಇದಲ್ಲದೆ-- ನ್ಯಾಯಪ್ರಮಾಣವು ಹೇಳುವವುಗಳನ್ನು ಮಾಡುವವನು ಅವುಗಳಿಂದಲೇ ಜೀವಿಸುವನು ಎಂದು ಮೋಶೆಯು ಅದರ ನೀತಿಯ ವಿಷಯವಾಗಿ ವಿವರಿಸುತ್ತಾನೆ.
- Leviticus 18:5 ಯಾಜಕಕಾಂಡ 18:5ಆದದರಿಂದ ನೀವು ನನ್ನ ನಿಯಮಗಳನ್ನೂ ನಿರ್ಣಯಗಳನ್ನೂ ಕೈಕೊಳ್ಳಿರಿ. ಒಬ್ಬನು ಅವುಗಳನ್ನು ಮಾಡಿದರೆ ಅವನು ಅವುಗಳಲ್ಲಿ ಜೀವಿಸುವನು; ನಾನೇ ಕರ್ತನು.
- Deuteronomy 4:8 ಧರ್ಮೋಪದೇಶಕಾಂಡ 4:8ಇದಲ್ಲದೆ ನಾನು ಈಹೊತ್ತು ನಿಮ್ಮ ಮುಂದೆ ಇಡುವ ಈ ಎಲ್ಲಾ ನ್ಯಾಯಪ್ರಮಾಣದ ಪ್ರಕಾರ ನೀತಿಯುಳ್ಳ ನಿಯಮ ನ್ಯಾಯಗಳುಳ್ಳ ದೊಡ್ಡ ಜನಾಂಗ ಯಾವದು?
- Galatians 3:12 ಗಲಾತ್ಯದವರಿಗೆ 3:12ನ್ಯಾಯಪ್ರಮಾಣಕ್ಕೆ ನಂಬಿಕೆಯು ಆಧಾರ ವಲ್ಲ. ಆದರೆ--ಅದರ ಕ್ರಿಯೆಗಳನ್ನು ಮಾಡುವವನೇ ಅವುಗಳ ಮೂಲಕ ಬದುಕುವನು ಎಂಬದೇ.
- Luke 10:28 ಲೂಕನು 10:28ಆಗ ಆತನು ಅವನಿಗೆ--ನೀನು ಸರಿಯಾಗಿ ಉತ್ತರ ಕೊಟ್ಟಿದ್ದೀ; ಅದರಂತೆಯೇ ಮಾಡು, ಆಗ ನೀನು ಬದುಕುವಿ ಅಂದನು.
- Nehemiah 9:13–14 ನೆಹೆಮೀಯ 9:13–14ಸೀನಾಯ್ ಪರ್ವ ತದ ಮೇಲಕ್ಕೆ ಇಳಿದು ಬಂದಿ; ಆಕಾಶದಿಂದ ಅವರ ಸಂಗಡ ಮಾತನಾಡಿದಿ; ಸರಿಯಾದ ನ್ಯಾಯಗಳನ್ನೂ ಸತ್ಯವಾದ ನ್ಯಾಯಪ್ರಮಾಣಗಳನ್ನೂ ಉತ್ತಮವಾದ ಕಟ್ಟಳೆ ಗಳನ್ನೂ ಆಜ್ಞೆಗಳನ್ನೂ ಅವರಿಗೆ ಕೊಟ್ಟಿ. ನೀನು ಪರಿಶುದ್ಧ ಸಬ್ಬತ್ ದಿವಸವನ್ನು ಅವರಿಗೆ ತಿಳಿಸಿ ನಿನ್ನ ಸೇವಕನಾದ ಮೋಶೆಯ ಮುಖಾಂತರ ಅವರಿಗೆ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ನ್ಯಾಯಪ್ರಮಾಣವನ್ನೂ
- Ezekiel 20:13 ಯೆಹೆಜ್ಕೇಲನು 20:13ಆದರೆ ಇಸ್ರಾಯೇಲಿನ ಮನೆತನದವರು ಅರಣ್ಯದಲ್ಲಿಯೂ ನನಗೆ ವಿರುದ್ಧ ವಾಗಿ ತಿರುಗಿಬಿದ್ದರು; ಆಜ್ಞಾವಿಧಿಗಳನ್ನು ಅನುಸರಿಸುವ ಮನುಷ್ಯನು ಬದುಕುವನು. ಅವುಗಳಲ್ಲಿ ನಡೆಯದೆ ನನ್ನ ನ್ಯಾಯಗಳನ್ನು ಅಸಡ್ಡೆ ಮಾಡಿ ನನ್ನ ಸಬ್ಬತ್ ದಿನಗಳನ್ನು ಸಹ ಬಹಳವಾಗಿ ಅಪವಿತ್ರಪಡಿಸಿದರು; ಆಗ ನಾನು ಅವರ ಮೇಲೆ ನನ್ನ ರೋಷದಿಂದ ದಹಿಸಿಬಿಡುವೆನೆಂದು ಹೇಳಿದೆನು.
- Psalm 147:19–20 ಕೀರ್ತನೆಗಳು 147:19–20ಆತನು ಯಾಕೋಬರಿಗೆ ತನ್ನ ವಾಕ್ಯವನ್ನೂ ಇಸ್ರಾಯೇಲಿಗೆ ನಿಯಮಗಳನ್ನೂ ನ್ಯಾಯವಿಧಿಗಳನ್ನೂ ತಿಳಿಸುತ್ತಾನೆ.ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ. ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.
- Deuteronomy 20:15–16 ಧರ್ಮೋಪದೇಶಕಾಂಡ 20:15–16ಹೀಗೆ ಇಲ್ಲಿರುವ ಈ ಜನಾಂಗಗಳ ಪಟ್ಟಣಗಳಲ್ಲದಂಥ, ನಿನಗೆ ದೂರವಾಗಿರುವಂಥ ಪಟ್ಟಣಗಳಿಗೆಲ್ಲಾ ಹಾಗೇ ಮಾಡ ಬೇಕು. ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಈ ಜನಗಳ ಪಟ್ಟಣಗಳಲ್ಲಿ ಮಾತ್ರ ಶ್ವಾಸ ವುಳ್ಳ ಯಾವದನ್ನಾದರೂ ಉಳಿಸಬಾರದು.
- Ezekiel 20:21 ಯೆಹೆಜ್ಕೇಲನು 20:21ಆದಾಗ್ಯೂ ಮಕ್ಕಳು ನನಗೆ ವಿರೋಧವಾಗಿ ತಿರುಗಿ ಬಿದ್ದರು; ಯಾವವುಗಳನ್ನು ಮನುಷ್ಯನು ಮಾಡಿದರೆ ಬದುಕುವನೋ ಆ ನನ್ನ ನಿಯಮಗಳಲ್ಲಿ ನಡೆಯಲಿಲ್ಲ ನನ್ನ ನ್ಯಾಯಗಳನ್ನು ಕೈಕೊಂಡುಮಾಡಲಿಲ್ಲ; ನನ್ನ ಸಬ್ಬತ್ತುಗಳನ್ನು ಅಪವಿತ್ರ ಪಡಿಸಿದಾಗ ಅವರ ಮೇಲೆ ನನ್ನ ರೋಷವನ್ನು ಸುರಿದುಬಿಡುವೆನೆಂದೂ ನನ್ನ ಕೋಪ ವನ್ನು ಅರಣ್ಯದಲ್ಲಿ ಅವರ ಮೇಲೆ ತೀರಿಸಿಬಿಡುವೆ ನೆಂದೂ ಹೇಳಿದೆನು.
- Romans 3:2 ರೋಮಾಪುರದವರಿಗೆ 3:2ಎಲ್ಲಾ ವಿಷಯಗಳಲ್ಲಿಯೂ ಬಹಳ ಉಂಟು; ಮುಖ್ಯವಾಗಿ ದೈವೋಕ್ತಿಗಳು ಅವರಿಗೆ ಒಪ್ಪಿಸಲ್ಪಟ್ಟವು.