Romans · chapter 3 · verse 2
Romans 3:2 in Kannada
ಎಲ್ಲಾ ವಿಷಯಗಳಲ್ಲಿಯೂ ಬಹಳ ಉಂಟು; ಮುಖ್ಯವಾಗಿ ದೈವೋಕ್ತಿಗಳು ಅವರಿಗೆ ಒಪ್ಪಿಸಲ್ಪಟ್ಟವು.
Ellaa vishayagalalliyoo bahala untu; mukhyavaagi daivoktigalu avarige oppisalpattavu.
Romans 3:2 in English
- King James Version (KJV)
- Much every way: chiefly, because that unto them were committed the oracles of God.
- World English Bible (WEB)
- Much in every way! Because first of all, they were entrusted with the revelations of God.
- American Standard Version (ASV)
- Much every way: first of all, that they were intrusted with the oracles of God.
- Bible in Basic English (BBE)
- Much in every way: first of all because the words of God were given to them.
- Darby Translation (DBY)
- Much every way: and first, indeed, that to them were entrusted the oracles of God.
- Webster's Bible (WBS)
- Much every way: chiefly, because that to them were committed the oracles of God.
- Young's Literal Translation (YLT)
- much in every way; for first, indeed, that they were intrusted with the oracles of God;
Read in context
- 1ಹಾಗಾದರೆ ಯೆಹೂದ್ಯರಿಗಿರುವ ಪ್ರಾಧಾ ನ್ಯತೆ ಏನು? ಇಲ್ಲವೆ ಸುನ್ನತಿಯಿಂದ ಲಾಭವೇನು?
- 2ಎಲ್ಲಾ ವಿಷಯಗಳಲ್ಲಿಯೂ ಬಹಳ ಉಂಟು; ಮುಖ್ಯವಾಗಿ ದೈವೋಕ್ತಿಗಳು ಅವರಿಗೆ ಒಪ್ಪಿಸಲ್ಪಟ್ಟವು.
- 3ಕೆಲವರು ನಂಬದಿದ್ದರೆ ಏನು? ಅವರ ಅಪನಂಬಿಕೆಯು ದೇವರ ವಿಷಯವಾದ ನಂಬಿಕೆಯನ್ನು ನಿರರ್ಥಕ ಮಾಡುವದೋ?
- 4ಹಾಗೆ ಎಂದಿಗೂ ಆಗು ವದಿಲ್ಲ; ಹೌದು, ಎಲ್ಲಾ ಮನುಷ್ಯರು ಸುಳ್ಳುಗಾರ ರಾದರೂ ದೇವರು ಸತ್ಯವಂತನೇ ಸರಿ;ಯಾಕಂದರೆ--ನೀನು ನಿನ್ನ ಮಾತುಗಳಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡಬೇಕೆಂತಲೂ ನಿನಗೆ ತೀರ್ಪಾದಾಗ ನೀನು ಗೆಲ್ಲಬೇಕೆಂತಲೂ ಬರೆದದೆ.
Cross references
- Acts 7:38 ಅಪೊಸ್ತಲರ ಕೃತ್ಯಗಳು 7:38ಇವನೇ ಸೀನಾಯಿ ಬೆಟ್ಟದಲ್ಲಿ ತನ್ನೊಡನೆಯೂ ಪಿತೃಗಳೊಡನೆಯೂ ಮಾತನಾಡಿದ ದೂತನೊಂದಿಗೆ ಅಡವಿಯಲ್ಲಿದ್ದ ಸಭೆ ಯಲ್ಲಿದ್ದುಕೊಂಡು ಜೀವಕರವಾದ ದೇವೋಕ್ತಿಗಳನ್ನು ಹೊಂದಿ ನಮಗೆ ಕೊಟ್ಟವನು.
- Romans 9:4 ರೋಮಾಪುರದವರಿಗೆ 9:4ಇವರು ಇಸ್ರಾಯೇಲ್ಯರು; ದತ್ತುಪುತ್ರ ಸ್ವಿಕಾರವೂ ಮಹಿಮೆಯೂ ಒಡಂಬಡಿ ಕೆಗಳೂ ನ್ಯಾಯಪ್ರಮಾಣ ಕೊಡೋಣವೂ ದೇವರ ಸೇವೆಯೂ ವಾಗ್ದಾನಗಳೂ ಇವರಿಗೆ ಸಂಬಂಧ ಪಟ್ಟವುಗಳು.
- Nehemiah 9:13–14 ನೆಹೆಮೀಯ 9:13–14ಸೀನಾಯ್ ಪರ್ವ ತದ ಮೇಲಕ್ಕೆ ಇಳಿದು ಬಂದಿ; ಆಕಾಶದಿಂದ ಅವರ ಸಂಗಡ ಮಾತನಾಡಿದಿ; ಸರಿಯಾದ ನ್ಯಾಯಗಳನ್ನೂ ಸತ್ಯವಾದ ನ್ಯಾಯಪ್ರಮಾಣಗಳನ್ನೂ ಉತ್ತಮವಾದ ಕಟ್ಟಳೆ ಗಳನ್ನೂ ಆಜ್ಞೆಗಳನ್ನೂ ಅವರಿಗೆ ಕೊಟ್ಟಿ. ನೀನು ಪರಿಶುದ್ಧ ಸಬ್ಬತ್ ದಿವಸವನ್ನು ಅವರಿಗೆ ತಿಳಿಸಿ ನಿನ್ನ ಸೇವಕನಾದ ಮೋಶೆಯ ಮುಖಾಂತರ ಅವರಿಗೆ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ನ್ಯಾಯಪ್ರಮಾಣವನ್ನೂ
- Psalm 147:19–20 ಕೀರ್ತನೆಗಳು 147:19–20ಆತನು ಯಾಕೋಬರಿಗೆ ತನ್ನ ವಾಕ್ಯವನ್ನೂ ಇಸ್ರಾಯೇಲಿಗೆ ನಿಯಮಗಳನ್ನೂ ನ್ಯಾಯವಿಧಿಗಳನ್ನೂ ತಿಳಿಸುತ್ತಾನೆ.ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ. ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.
- 1 Peter 4:11 1 ಪೇತ್ರನು 4:11ಒಬ್ಬನು ಬೋಧಿಸು ವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ. ಇದರಿಂದ ಎಲ್ಲಾದರಲ್ಲಿ ಯೇಸು ಕ್ರಿಸ್ತನ ಮೂಲಕ ದೇವರಿಗೆ ಮಹಿಮೆ ಉಂಟಾಗುವದು. ಯೇಸು ಕ್ರಿಸ್ತನಿಗೆ ಸ್ತೋತ್ರವೂ ಆಧಿಪತ್ಯವೂ
- 1 Corinthians 9:17 1 ಕೊರಿಂಥದವರಿಗೆ 9:17ನಾನು ಇದನ್ನು ಇಷ್ಟಪೂರ್ವಕವಾಗಿ ಮಾಡಿದರೆ ನನಗೆ ಬಹುಮಾನವುಂಟು. ನನ್ನ ಇಷ್ಟಕ್ಕೆ ವಿರೋಧ ವಾಗಿ ಮಾಡಿದರೆ ಸುವಾರ್ತೆಯ ವಿಷಯವಾದ ದೈವನೇಮವು ನನ್ನ ವಶಕ್ಕೆ ಕೊಡಲ್ಪಟ್ಟಿದೆ.
- Hebrews 5:12 ಇಬ್ರಿಯರಿಗೆ 5:12ನೀವು ಇಷ್ಟರೊಳಗೆ ಬೋಧಕರಾಗಿರ ಬೇಕಾಗಿದ್ದರೂ ಒಬ್ಬನು ನಿಮಗೆ ದೈವೋಕ್ತಿಗಳ ಮೂಲ ಪಾಠಗಳನ್ನು ತಿರಿಗಿ ಕಲಿಸಿಕೊಡಬೇಕಾಗಿದೆ; ನೀವು ಹಾಲು ಕುಡಿಯತಕ್ಕವರೇ ಹೊರತು ಗಟ್ಟಿಯಾದ ಆಹಾರವನ್ನು ತಿನ್ನತಕ್ಕವರಲ್ಲ.
- Ezekiel 20:11–12 ಯೆಹೆಜ್ಕೇಲನು 20:11–12ಯಾವ ಸಂಗತಿಗಳನ್ನು ಮಾಡಿದರೆ ಮನುಷ್ಯನು ಬದುಕುವನೋ? ಆ ನನ್ನ ನಿಯಮಗಳನ್ನು ಅವರಿಗೆ ಕೊಟ್ಟು ನನ್ನ ನ್ಯಾಯಗಳನ್ನು ಅವರಿಗೆ ತಿಳಿಸಿದೆನು. ಇದಲ್ಲದೆ ಅವರನ್ನು ಪರಿಶುದ್ಧ ಮಾಡುವ ಕರ್ತನು ನಾನೇ ಎಂದು ಅವರು ತಿಳಿಯುವ ಹಾಗೆ ನನಗೂ ಅವರಿಗೂ ಗುರುತಾಗಿರುವದಕ್ಕೆ ನನ್ನ ಸಬ್ಬತ್ ದಿನಗಳನ್ನು ನಾನು ಅವರಿಗೆ ಕೊಟ್ಟೆನು.
- Romans 11:15–23 ರೋಮಾಪುರದವರಿಗೆ 11:15–23ಅವರನ್ನು ತಳ್ಳುವದರಿಂದ ಲೋಕವು ಸಮಾಧಾನವಾಗು ವದಾದರೆ ಅವರನ್ನು ಸೇರಿಸಿಕೊಳ್ಳುವದರಿಂದ ಏನಾಗುವದು? ಸತ್ತವರು ಜೀವಿತರಾಗಿ ಎದ್ದು ಬಂದಂತಾಗುವದಿಲ್ಲವೇ. ಪ್ರಥಮ ಫಲವು ಪವಿತ್ರವಾಗಿದ್ದರೆ ಕಣಕವೂ ಪವಿತ್ರವಾಗಿದೆ ಮತ್ತು ಬೇರು ಪವಿತ್ರವಾಗಿದ್ದರೆ ಕೊಂಬೆಗಳೂ ಪವಿತ್ರವಾಗಿವೆ. ಆದರೆ ಕೆಲವು ಕೊಂಬೆಗಳು ಮುರಿದು ಹಾಕಲ್ಪಟ್ಟ ದ್ದರಿಂದ ಕಾಡೆಣ್ಣೇ ಮರದಂತಿರುವ ನೀನು ಅವುಗಳ ತಾವಿನಲ್ಲಿ ಕಸಿಕಟ್ಟಿಸಿಕೊಂಡವನಾಗಿ ಊರೆಣ್ಣೇ ಮರದ ರಸವತ್ತಾದ ಬೇರಿನಲ್ಲಿ ಪಾಲು ಹೊಂದಿದವನಾಗಿದ್ದೀ. ಆದರೂ ಆ ಕೊಂಬೆಗಳಿಗೆ ಮೇಲಾಗಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ; ಹೆಚ್ಚಿಸಿಕೊಂಡರೂ ಆ ಬೇರಿಗೆ ನೀನು ಆಧಾರವಲ್ಲ, ಅದು ನಿನಗೆ ಆಧಾರವಾಗಿದೆಯಷ್ಟೆ. ಈ ಮಾತಿಗೆ--ನಾನು ಕಸಿಕಟ್ಟಿಸಿ ಕೊಳ್ಳುವಂತೆ ಕೊಂಬೆಗಳು ಮುರಿದು ಹಾಕಲ್ಪಟ್ಟವಲ್ಲಾ ಎಂದು ನೀನು ಹೇಳುವಿ. ಒಳ್ಳೆಯದು, ಅವರು ನಂಬದೆ ಹೋದದರಿಂದ ಮುರಿದುಹಾಕಲ್ಪಟ್ಟರು, ನೀನು ನಿಂತಿರುವದು ನಂಬಿಕೆಯಿಂದಲೇ, ಗರ್ವ ಪಡಬೇಡ, ಭಯದಿಂದಿರು; ದೇವರು ಹುಟ್ಟು ಕೊಂಬೆಗಳನ್ನು ಉಳಿಸದೆಯಿದ್ದ ಮೇಲೆ ನಿನ್ನನ್ನೂ ಉಳಿಸು ವದಿಲ್ಲ. ಆದದರಿಂದ ದೇವರ ದಯೆಯನ್ನೂ ಕಾಠಿಣ್ಯ ವನ್ನೂ ನೋಡು; ಬಿದ್ದವರ ಕಡೆಗೆ ಕಾಠಿಣ್ಯ; ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡೇ ಇದ್ದರೆ ನಿನ್ನ ಕಡೆಗೆ ಆತನ ದಯೆ; ಇಲ್ಲವಾದರೆ ನೀನೂ ಕಡಿದು ಹಾಕಲ್ಪಡುವಿ. ಅವರು ಕೂಡ ಇನ್ನು ಅಪ ನಂಬಿಕೆಯಲ್ಲಿ ನಿಲ್ಲದ ಪಕ್ಷಕ್ಕೆ ಕಸಿಕಟ್ಟಲ್ಪಡುವರು; ಯಾಕಂದರೆ ದೇವರು ಅವರನ್ನು ತಿರಿಗಿ ದೇವರು ಕಸಿಕಟ್ಟುವದಕ್ಕೆ ಸಮರ್ಥನಾಗಿದ್ದಾನೆ.
- Psalm 78:4–7 ಕೀರ್ತನೆಗಳು 78:4–7ನಾವು ಕರ್ತನ ಸ್ತೋತ್ರಗಳನ್ನೂ ಆತನ ತ್ರಾಣವನ್ನೂ ಆತನು ಮಾಡಿದ ಅದ್ಭುತಗಳನ್ನೂ ವಿವರಿಸುತ್ತಾ ಅವರ ಮಕ್ಕಳಿಗೆ, ಮುಂದಿನ ವಂಶಕ್ಕೆ ಮರೆಮಾಡುವದಿಲ್ಲ. ಆತನು ಯಾಕೋಬನಲ್ಲಿ ಸಾಕ್ಷಿ ಯನ್ನು ಸ್ಥಾಪಿಸಿ ಇಸ್ರಾಯೇಲಿನಲ್ಲಿ ನ್ಯಾಯಪ್ರಮಾಣವನ್ನು ಇಟ್ಟು ಮುಂದಿನ ವಂಶವು ಅಂದರೆ ಹುಟ್ಟುವ ದಕ್ಕಿರುವ ಮಕ್ಕಳು ತಿಳಿದು, ಎದ್ದು, ತಮ್ಮ ಮಕ್ಕಳಿಗೆ ವಿವರಿಸಲಾಗಿ ಇವರು ದೇವರಲ್ಲಿ ತಮ್ಮ ನಿರೀಕ್ಷೆ ಇಡುವಂತೆಯೂ ದೇವರ ಕ್ರಿಯೆಗಳನ್ನು ಮರೆತುಬಿಡ ದಂತೆಯೂ ಆತನ ಆಜ್ಞೆಗಳನ್ನು ಕೈಕೊಂಡು
- 2 Peter 1:19–21 2 ಪೇತ್ರನು 1:19–21ನಮಗೂ ಬಹು ದೃಢವಾದ ಪ್ರವಾದನೆಯ ವಾಕ್ಯವು ಇರುತ್ತದೆ; ಆ ದಿನವು ಬೆಳಗುವವರೆಗೆ ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವ ತನಕ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪ ವೆಂದೆಣಿಸಿ ಅದಕ್ಕೆ ನೀವು ಲಕ್ಷ್ಯಕೊಡುವದು ಒಳ್ಳೇದು. ಬರಹದ ಯಾವ ಪ್ರವಾದನೆಯೂ ಕೇವಲ ಸ್ವಂತ ವಾಗಿ ವಿವರಿಸತಕ್ಕಂಥದ್ದಲ್ಲವೆಂಬದನ್ನು ಮೊದಲು ತಿಳಿದುಕೊಳ್ಳಿರಿ.ಯಾಕಂದರೆ ಹಿಂದಿನ ಕಾಲದಲ್ಲಿ ಯಾವ ಪ್ರವಾದನೆಯೂ ಮನುಷ್ಯನ ಚಿತ್ತದಿಂದ ಬರಲಿಲ್ಲ; ಪರಿಶುದ್ಧರಾದ ದೇವಜನರು ಪವಿತ್ರಾತ್ಮ ಪ್ರೇರಿತರಾಗಿ ಮಾತನಾಡಿದರು. ಯಾಕಂದರೆ ಹಿಂದಿನ ಕಾಲದಲ್ಲಿ ಯಾವ ಪ್ರವಾದನೆಯೂ ಮನುಷ್ಯನ ಚಿತ್ತದಿಂದ ಬರಲಿಲ್ಲ; ಪರಿಶುದ್ಧರಾದ ದೇವಜನರು ಪವಿತ್ರಾತ್ಮ ಪ್ರೇರಿತರಾಗಿ ಮಾತನಾಡಿದರು.
- 2 Timothy 3:15–17 2 ತಿಮೊಥೆಯನಿಗೆ 3:15–17ಚಿಕ್ಕಂದಿನಿಂದಲೂ ನೀನು ಪರಿಶುದ ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ. ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.ಆದದರಿಂದ ದೇವರ ಮನುಷ್ಯನು ಪರಿಪೂರ್ಣ ನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು. ಆದದರಿಂದ ದೇವರ ಮನುಷ್ಯನು ಪರಿಪೂರ್ಣ ನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.