Ezekiel · chapter 25 · verse 13
Ezekiel 25:13 in Kannada
ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನೂ ನನ್ನ ಕೈಯನ್ನು ಎದೋಮಿನ ಮೇಲೆ ಚಾಚುತ್ತೇನೆ, ಅದರೊಳಗಿನಿಂದ ಮನುಷ್ಯರನ್ನೂ ಮೃಗಗಳನ್ನೂ ಕಡಿದುಬಿಡುತ್ತೇನೆ, ತೇಮಾನು ಮೊದಲುಗೊಂಡು ಅದನ್ನು ಕಾಡನ್ನಾಗಿ ಮಾಡುತ್ತೇನೆ; ದೆದಾನಿಯವರು ಕತ್ತಿಯಿಂದ ಬೀಳು ವರು.
Aadadarinda devaraada kartanu heege heluttaane--naanoo nanna kaiyannu edomina mele chaachuttene, adarolagininda manushyarannoo mrugagalannoo kadidubiduttene, temaanu modalugondu adannu kaadannaagi maaduttene; dedaaniyavaru kattiyinda beelu varu.
Ezekiel 25:13 in English
- King James Version (KJV)
- Therefore thus saith the Lord GOD; I will also stretch out mine hand upon Edom, and will cut off man and beast from it; and I will make it desolate from Teman; and they of Dedan shall fall by the sword.
- World English Bible (WEB)
- therefore the Lord GOD says, “I will stretch out my hand on Edom, and will cut off man and animal from it; and I will make it desolate from Teman. They will fall by the sword even to Dedan.
- American Standard Version (ASV)
- therefore thus saith the Lord Jehovah, I will stretch out my hand upon Edom, and will cut off man and beast from it; and I will make it desolate from Teman; even unto Dedan shall they fall by the sword.
- Bible in Basic English (BBE)
- The Lord has said, My hand will be stretched out against Edom, cutting off from it man and beast: and I will make it waste, from Teman even as far as Dedan they will be put to the sword.
- Darby Translation (DBY)
- therefore thus saith the Lord Jehovah: I will also stretch out my hand upon Edom; and will cut off man and beast from it; and I will make it desolate from Teman; and unto Dedan shall they fall by the sword.
- Webster's Bible (WBS)
- Therefore thus saith the Lord GOD; I will also stretch out my hand upon Edom, and will cut off man and beast from it; and I will make it desolate from Teman; and they of Dedan shall fall by the sword.
- Young's Literal Translation (YLT)
- Therefore, thus said the Lord Jehovah: I have stretched out My hand against Edom, And I have cut off from it man and beast, And given it up — a waste, from Teman even to Dedan, By sword they do fall.
Read in context
- 11ಮೋವಾಬ್ಯರಿಗೆ ನಾನು ನ್ಯಾಯಗಳನ್ನು ತೀರಿಸುವೆನು; ಆಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
- 12ದೇವರಾದ ಕರ್ತನು--ಎದೋಮು ಮತ್ತು ಯೆಹೂದನ ಮನೆತನದವರಿಗೆ ಮುಯ್ಯಿಗೆಮುಯ್ಯಿ ತೀರಿಸಿದ್ದರಿಂದಲೇ ಮತ್ತು ಅತಿ ಅಪರಾಧ ಮಾಡಿ ಅವರಲ್ಲಿ ಸೇಡು ತೀರಿಸಿ ತೆಗೆದುಕೊಂಡದ್ದರಿಂದಲೇ ಎಂದು ಹೇಳುತ್ತಾನೆ.
- 13ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನೂ ನನ್ನ ಕೈಯನ್ನು ಎದೋಮಿನ ಮೇಲೆ ಚಾಚುತ್ತೇನೆ, ಅದರೊಳಗಿನಿಂದ ಮನುಷ್ಯರನ್ನೂ ಮೃಗಗಳನ್ನೂ ಕಡಿದುಬಿಡುತ್ತೇನೆ, ತೇಮಾನು ಮೊದಲುಗೊಂಡು ಅದನ್ನು ಕಾಡನ್ನಾಗಿ ಮಾಡುತ್ತೇನೆ; ದೆದಾನಿಯವರು ಕತ್ತಿಯಿಂದ ಬೀಳು ವರು.
- 14ನಾನು ನನ್ನ ಜನರಾದ ಇಸ್ರಾಯೇಲಿನ ಮೂಲಕವಾಗಿ ನನ್ನ ಪ್ರತಿದಂಡನೆಯನ್ನು ಎದೋಮಿನ ಮೇಲೆ ಇಡುವೆನು, ಅವರು ಎದೋಮಿನಲ್ಲಿ ನನ್ನ ಕೋಪದ ಪ್ರಕಾರವೂ ರೋಷದ ಪ್ರಕಾರವೂ ಮಾಡು ವರು; ಹೀಗೆಯೇ ಅವರು ನನ್ನ ಪ್ರತಿದಂಡನೆಯನ್ನು ತಿಳಿಯುವರೆಂದು ದೇವರಾದ ಕರ್ತನು ಹೇಳುತ್ತಾನೆ.
- 15ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ನಡಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಕೆಡಿಸಿದರು.
Cross references
- Ezekiel 29:8 ಯೆಹೆಜ್ಕೇಲನು 29:8ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ನಿನ್ನ ಮೇಲೆ ಕತ್ತಿಯನ್ನು ತರುತ್ತೇನೆ. ಮನುಷ್ಯರನ್ನೂ ಮೃಗಗಳನ್ನೂ ನಿನ್ನೊಳಗಿಂದ ಕಡಿದುಬಿಡುತ್ತೇನೆ.
- Jeremiah 25:23 ಯೆರೆಮೀಯ 25:23ದೆದಾನಿಗೂ ತೇಮಾಗೂ ಬೂಜಿಗೂ ಕಟ್ಟಕಡೆಯ ಮೂಲೆಯ ವರೆಗೂ
- Malachi 1:3–4 ಮಲಾಕಿಯ 1:3–4ಆದರೆ ಏಸಾವನನ್ನು ಹಗೆ ಮಾಡಿದೆನು; ಅವನ ಬೆಟ್ಟಗಳನ್ನು ಹಾಳುಮಾಡಿ ಅವನ ಸ್ವಾಸ್ತ್ಯವನ್ನು ಅಡವಿಯ ಸರ್ಪಗಳಿಗೆ ಕೊಟ್ಟೆನು. ಎದೋಮು--ನಾವು ಬಡಕಲಾದೆವು, ಆದರೆ ನಾವು ತಿರಿಗಿಕೊಂಡು ಹಾಳಾದ ಸ್ಥಳಗಳನ್ನು ಕಟ್ಟುವೆವೆಂದು ಹೇಳಿದರೂ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಅವರು ಕಟ್ಟಬಹುದು, ಆದರೆ ನಾನು ಕೆಡವಿಬಿಡುವೆನು; ಅದಕ್ಕ ವರು--ದುಷ್ಟತನದ ಮೇರೆಯೂ ಕರ್ತನ ನಿತ್ಯ ಕೋಪದ ಜನಾಂಗವೆಂದೂ ಕರೆಯುವರು.
- Jeremiah 49:7–8 ಯೆರೆಮೀಯ 49:7–8ಎದೋಮಿನ ವಿಷಯವಾಗಿ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ತೇಮಾನ್ನಲ್ಲಿ ಇನ್ನು ಮೇಲೆ ಜ್ಞಾನವಿರುವದಿಲ್ಲವೋ? ವಿವೇಕಿಗಳಿಂದ ಆಲೋಚ ನೆಯು ನಾಶವಾಯಿತೋ? ಅವರ ಜ್ಞಾನವು ಕಾಣದೆ ಹೋಯಿತೋ? ದೇದಾನಿನ ನಿವಾಸಿಗಳೇ, ಓಡಿ ಹೋಗಿರಿ, ತಿರುಗಿಕೊಳ್ಳಿರಿ, ಆಳವಾದ ಸ್ಥಳದಲ್ಲಿ ವಾಸಮಾಡಿರಿ. ಏಸಾವಿನ ಆಪತ್ತನ್ನೂ ನಾನು ಅವನನ್ನು ವಿಚಾರಿಸುವ ಕಾಲವನ್ನು ಅವನ ಮೇಲೆ ಬರಮಾಡು ತ್ತೇನೆ.
- Lamentations 4:21–22 ಪ್ರಲಾಪಗಳು 4:21–22ಎದೋಮಿನ ಮಗಳೇ, ಊಚ್ ದೇಶದಲ್ಲಿ ವಾಸವಾಗಿರುವವಳೇ, ಆನಂದಿಸು, ಸಂತೋಷಪಡು; ನಿನ್ನ ಬಳಿಗೆ ಪಾತ್ರೆಯು ಸಹ ದಾಟಿ ಬರುವದು, ನೀನು ಕುಡಿದು ನಿನ್ನನ್ನು ನೀನೇ ಬೆತ್ತಲೆ ಮಾಡಿಕೊಳ್ಳುವಿ.ಚೀಯೋನಿನ ಮಗಳೇ, ನಿನ್ನ ಅಕ್ರಮದ ಶಿಕ್ಷೆಯು ತೀರಿಹೋಯಿತು; ಆತನು ಇನ್ನು ಮೇಲೆ ನಿನ್ನನ್ನು ಸೆರೆಗೆ ಒಯ್ಯುವದಿಲ್ಲ. ಎದೋಮಿನ ಮಗಳೇ, ಆತನು ನಿನ್ನ ಅಕ್ರಮವನ್ನು ವಿಚಾರಿಸುವನು; ಆತನು ನಿನ್ನ ಪಾಪಗಳನ್ನು ಕಂಡು ಹಿಡಿಯುವನು. ಚೀಯೋನಿನ ಮಗಳೇ, ನಿನ್ನ ಅಕ್ರಮದ ಶಿಕ್ಷೆಯು ತೀರಿಹೋಯಿತು; ಆತನು ಇನ್ನು ಮೇಲೆ ನಿನ್ನನ್ನು ಸೆರೆಗೆ ಒಯ್ಯುವದಿಲ್ಲ. ಎದೋಮಿನ ಮಗಳೇ, ಆತನು ನಿನ್ನ ಅಕ್ರಮವನ್ನು ವಿಚಾರಿಸುವನು; ಆತನು ನಿನ್ನ ಪಾಪಗಳನ್ನು ಕಂಡು ಹಿಡಿಯುವನು.
- Obadiah 1:9 ಓಬದ್ಯ 1:9ಸರ್ವರು ಸಂಹಾರದಿಂದ ಏಸಾವನ ಬೆಟ್ಟದೊಳಗಿಂದ ನಾಶ ವಾಗುವ ಹಾಗೆ ಓ ತೇಮಾನೇ, ನಿನ್ನ ಪರಾಕ್ರಮ ಶಾಲಿಗಳು ಗಾಬರಿಪಡುವರು.
- Ezekiel 25:16 ಯೆಹೆಜ್ಕೇಲನು 25:16ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನನ್ನ ಕೈಯನ್ನು ಫಿಲಿಷ್ಟಿಯರ ಮೇಲೆ ಚಾಚುತ್ತೇನೆ; ಕೆರೇತಿಯರನ್ನು ಕಡಿದುಬಿಡುತ್ತೇನೆ; ಉಳಿದವರನ್ನು ಸಮುದ್ರತೀರದಲ್ಲಿ ನಾಶಮಾಡುತ್ತೇನೆ;ನಾನು ದೊಡ್ಡ ಪ್ರತಿದಂಡನೆ ಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ತೀರಿಸುತ್ತೇನೆ; ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
- Isaiah 63:1–6 ಯೆಶಾಯ 63:1–6ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರಗಳನ್ನು ತೊಟ್ಟುಕೊಂಡ ವನಾಗಿ ತನ್ನ ಮಹಾಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? ನೀತಿಯಲ್ಲಿ ಮಾತನಾಡು ವವನೂ ರಕ್ಷಿಸಲು ಬಲಿಷ್ಠನೂ ಆಗಿರುವ ನಾನೇ. ನಿನ್ನ ವಸ್ತ್ರಗಳು ಯಾಕೆ ಕೆಂಪಾದವು? ನಿನ್ನ ಬಟ್ಟೆಗಳು ಯಾಕೆ ದ್ರಾಕ್ಷೇಯನ್ನು ತುಳಿಯುವವನ ಹಾಗಿವೆ? ದ್ರಾಕ್ಷೇ ತೊಟ್ಟಿಯನ್ನು ನಾನೊಬ್ಬನೇ ತುಳಿದಿದ್ದೇನೆ, ಜನಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ; ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ ಉರಿಯಲ್ಲಿ ಅವರನ್ನು ಜಜ್ಜಿಬಿಟ್ಟಿದ್ದೇನೆ. ಆದದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಚಿಮುಕಿಸ ಲ್ಪಟ್ಟಿದೆ, ನನ್ನ ವಸ್ತ್ರಗಳೆಲ್ಲಾ ಮೈಲಿಗೆಯಾದವು. ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಇದೆ; ನಾನು ವಿಮೋಚಿಸಿದವರ ವರುಷವು ಬಂತು. ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ; ಉದ್ಧಾರ ಮಾಡುವವನು ಇಲ್ಲದ್ದರಿಂದ ಆಶ್ಚರ್ಯಪಟ್ಟೆನು; ಆದದರಿಂದ ನನ್ನ ಸ್ವಂತ ಬಾಹುವು ನನಗೆ ರಕ್ಷಣೆಯನ್ನುಂಟುಮಾಡಿತು; ನನ್ನ ರೋಷವು ನನ್ನನ್ನು ಮೆಲಕ್ಕೆತ್ತಿತು. ನನ್ನ ಕೋಪ ದಲ್ಲಿ ಜನಗಳನ್ನು ತುಳಿದು ಬಿಟ್ಟೆನು; ನನ್ನ ರೋಷ ದಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು; ಅವರ ಶಕ್ತಿಯನ್ನು ಭೂಮಿಗೆ ಇಳಿಯುವಂತೆ ಮಾಡಿದೆನು.
- Habakkuk 3:3 ಹಬಕ್ಕೂಕ 3:3ದೇವರು ತೇಮಾನಿ ನಿಂದಲೂ ಪರಿಶುದ್ಧನು ಪಾರಾನ್ ಪರ್ವತದಿಂದಲೂ ಬಂದನು. ಸೆಲಾ. ಆತನ ಮಹಿಮೆ ಆಕಾಶಗಳನ್ನು ಮುಚ್ಚಿತು: ಆತನ ಸ್ತೋತ್ರವು ಭೂಮಿಯನ್ನು ತುಂಬಿ ಸಿತು.
- Isaiah 34:1–17 ಯೆಶಾಯ 34:1–17ಜನಾಂಗಗಳೇ, ಕೇಳುವದಕ್ಕೆ ಹತ್ತಿರ ಬನ್ನಿರಿ; ಜನಗಳೇ ಕಿವಿಗೊಡಿರಿ, ಭೂಮಿ ಯೂ ಅದರಲ್ಲಿನ ಸಮಸ್ತವೂ ಲೋಕವೂ ಅದರ ಎಲ್ಲಾ ಹುಟ್ಟುವಳಿಯೂ ಕೇಳಲಿ. ಕರ್ತನು ಸಕಲ ಜನಾಂಗಗಳ ಮೇಲೆ ಕೋಪಮಾಡಿ ಅವುಗಳ ಎಲ್ಲಾ ಸೈನ್ಯಗಳ ಮೇಲೆ ರೋಷಗೊಂಡು ಅವರನ್ನು ಕೊಲೆಗೆ ಈಡುಮಾಡಿ ಸಂಪೂರ್ಣವಾಗಿ ನಾಶಮಾಡಿದ್ದಾನೆ. ಅವರಲ್ಲಿ ಕೊಂದುಹಾಕಲ್ಪಟ್ಟವರು ಬಿಸಾಡಲ್ಪಡು ವರು. ಅವರ ಹೆಣಗಳ ದುರ್ವಾಸನೆಯು ಮೇಲಕ್ಕೆ ಏರುವದು. ಅವರ ರಕ್ತಪ್ರವಾಹದಿಂದ ಪರ್ವತಗಳು ಕರಗಿಹೋಗುವವು. ಆಕಾಶದ ಸೈನ್ಯವೆಲ್ಲಾ ಗತಿಸಿ ಹೋಗುವದು. ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವದು, ದ್ರಾಕ್ಷೆಯ ಎಲೆ ಒಣಗಿ ಗಿಡದಿಂದ ಬೀಳುವಂತೆಯೂ ಅಂಜೂರ ಮರದಿಂದ ತರಗು ಉದುರುವ ಹಾಗೂ ಅವುಗಳ ಸೈನ್ಯವೆಲ್ಲಾ ಬಾಡಿ ಕೆಳಗೆ ಬೀಳುವದು. ನನ್ನ ಖಡ್ಗವು ಪರಲೋಕದಲ್ಲಿ ರೋಷ ಪಾನಮಾಡುವದು; ಇಗೋ, ಅದು ಎದೋ ಮಿನ ಮತ್ತು ನಾನು ಶಪಿಸಿದ ಜನರ ಮೇಲೆ ನ್ಯಾಯ ತೀರಿಸುವದಕ್ಕಾಗಿ ಕೆಳಗೆ ಇಳಿದು ಬರುವದು. ಕರ್ತನ ಖಡ್ಗವು ರಕ್ತದಿಂದ ತುಂಬಿದೆ; ಅದು ಕುರಿಹೋತಗಳ ರಕ್ತದಿಂದಲೂ ಟಗರುಗಳ ಮೂತ್ರಪಿಂಡದ ಕೊಬ್ಬಿ ನಿಂದಲೂ ಪುಷ್ಟಿಯಾಯಿತು; ಯಾಕಂದರೆ ಕರ್ತನು ಬೊಚ್ರದಲ್ಲಿ ಬಲಿಯನ್ನೂ ಎದೋಮಿನ ದೇಶದಲ್ಲಿ ದೊಡ್ಡ ಕೊಲೆಯನ್ನೂ ಉಂಟು ಮಾಡಿದ್ದಾನೆ. ಕಾಡು ಕೋಣಗಳು ಅವುಗಳ ಸಂಗಡಲೂ ಎತ್ತುಗಳು ಹೋರಿ ಗಳ ಸಂಗಡಲೂ ಬೀಳುವವು; ಅವರ ದೇಶವು ರಕ್ತ ದಿಂದ ನೆನೆಯುವದು, ಅವರ ಧೂಳು ಕೊಬ್ಬಿನಿಂದ ಪುಷ್ಟಿಯಾಗುವದು-- ಏಕಂದರೆ ಅದು ಕರ್ತನು ಮುಯ್ಯಿ ತೀರಿಸುವ ದಿನವಾಗಿದೆ; ಚೀಯೋನಿನ ವ್ಯಾಜ್ಯದಲ್ಲಿ ದಂಡನೆ ವಿಧಿಸತಕ್ಕ ವರುಷವು ಒದಗಿದೆ. ಪ್ರವಾಹಗಳು ಇಳಿಜಾರಾಗಿ ಮಾರ್ಪಡುವದೂ; ಅದರ ದೂಳು ಗಂಧಕವಾಗುವದು; ದೇಶವು ಉರಿ ಯುವ ಇಳಿಜಾರು ಪ್ರದೇಶವಾಗುವದು. ಅದು ರಾತ್ರಿಯಲ್ಲಾದರೂ ಇಲ್ಲವೆ ಹಗಲಿನಲ್ಲಾದರೂ ಆರು ವದಿಲ್ಲ; ಅದರ ಹೊಗೆಯು ನಿರಂತರವಾಗಿ ಏಳುತ್ತಿರು ವದು; ಅದು ತಲತಲಾಂತರಕ್ಕೂ ಹಾಳಾಗಿ ಬಿದ್ದಿರು ವದು; ಅದನ್ನು ಎಂದೆಂದಿಗೂ ಯಾರೂ ಹಾದು ಹೋಗರು. ಆದರೆ ಬಕ ಪಕ್ಷಿಯು ಮತ್ತು ಮುಳ್ಳು ಹಂದಿಯು ಅದನ್ನು ಆವರಿಸಿಕೊಳ್ಳುವವು; ಗೂಬೆ ಮತ್ತು ಕಾಗೆಗಳು ಸಹ ಅಲ್ಲಿ ವಾಸಿಸುವವು; ಗಲಿಬಿಲಿ ಯೆಂಬ ನೂಲನ್ನು ಶೂನ್ಯವೆಂಬ ಗಟ್ಟಿ ತೂಕವನ್ನು ಆತನು ಅದರ ಮೇಲೆ ಎಳೆಯುವನು. ಅವರ ರಾಜ್ಯಕ್ಕೆ ಪ್ರಮುಖರನ್ನು ಕರೆಯುವರು; ಆದರೆ ಅಲ್ಲಿ ಯಾರೂ ಇರುವದಿಲ್ಲ; (ಅದರ) ಅವಳ ಪ್ರಭುಗಳು ಇಲ್ಲದಂತಾಗುವರು. ಅವಳ ಅರಮನೆಗಳಲ್ಲಿ ಮುಳ್ಳುಗಳು ಬೆಳೆಯುವವು; ಅವಳ ಕೋಟೆಗಳಲ್ಲಿ ತುರುಚಿಯೂ ದತ್ತೂರಿಯೂ ಇರುವವು; ಅದು (ಉಷ್ಟ್ರ ಪಕ್ಷಿಗಳ) ಸರ್ಪಗಳ ನಿವಾಸವೂ ಗೂಬೆಗಳಿಗೆ ಸ್ಥಾನವೂ ಆಗುವದು. ಮರುಭೂಮಿಯ ಕಾಡು ಮೃಗಗಳು ಸಹ ದ್ವೀಪದ ಕಾಡುಮೃಗಗಳೊಂದಿಗೆ ಸಂಧಿಸುವವು; ದೆವ್ವವು ತನ್ನ ಜೊತೆಯನ್ನು ಕೂಗು ವದು; ಅಲ್ಲಿ ಚೀರುಗೂಬೆಯು ಸಹ ವಿಶ್ರಮಿಸಿಕೊಂಡು ಉಪಶಮನ ಸ್ಥಳವನ್ನು ಕಂಡುಕೊಳ್ಳುವದು. ದೊಡ್ಡ ಗೂಬೆಯು ಅಲ್ಲಿ ಗೂಡನ್ನು ಮಾಡಿಕೊಂಡು ಮೊಟ್ಟೆ ಯಿಟ್ಟು ಮರಿ ಮಾಡಿ ಅವುಗಳನ್ನು ತನ್ನ ನೆರಳಿನಲ್ಲಿ ಕೂಡಿಸುವದು; ಅಲ್ಲಿ ಹದ್ದುಗಳಲ್ಲಿ ಪ್ರತಿಯೊಂದು ತಮ್ಮ ಜೊತೆಜೊತೆಯಾಗಿ ಕೂಡಿಕೊಳ್ಳುವವು. ಕರ್ತನ ಪುಸ್ತಕದಲ್ಲಿ ನೀವು ಹುಡುಕಿ ಓದಿರಿ; ಇವು ಗಳಲ್ಲಿ ಒಂದಾದರೂ ತಪ್ಪದು, ಜೊತೆಯಿಲ್ಲದೆ ಒಂದೂ ಇಲ್ಲ; ನನ್ನ ಬಾಯಿಯೇ ಅದನ್ನು ಆಜ್ಞಾಪಿ ಸಿತು; ಆತನ ಆತ್ಮವೇ ಅವುಗಳನ್ನು ಒಟ್ಟುಗೂಡಿಸಿತುಆತನೇ ಅವುಗಳಿಗೋಸ್ಕರ ಚೀಟು ಹಾಕಿದ್ದಾನೆ, ಆತನ ಕೈಯೇ ಅದನ್ನು ಗೆರೆ ಎಳೆದು ಅವರಿಗೆ ಹಂಚಿ ಕೊಟ್ಟಿದೆ. ಅವು ಅದನ್ನು ನಿರಂತರಕ್ಕೂ ವಶಮಾಡಿ ಕೊಳ್ಳುವವು. ಅವು ತಲತಲಾಂತರಕ್ಕೂ ಅದರಲ್ಲಿ ವಾಸವಾಗಿರುವವು. ಆತನೇ ಅವುಗಳಿಗೋಸ್ಕರ ಚೀಟು ಹಾಕಿದ್ದಾನೆ, ಆತನ ಕೈಯೇ ಅದನ್ನು ಗೆರೆ ಎಳೆದು ಅವರಿಗೆ ಹಂಚಿ ಕೊಟ್ಟಿದೆ. ಅವು ಅದನ್ನು ನಿರಂತರಕ್ಕೂ ವಶಮಾಡಿ ಕೊಳ್ಳುವವು. ಅವು ತಲತಲಾಂತರಕ್ಕೂ ಅದರಲ್ಲಿ ವಾಸವಾಗಿರುವವು.
- Ezekiel 25:7 ಯೆಹೆಜ್ಕೇಲನು 25:7ಇಗೋ, ನಾನು ನನ್ನ ಕೈಯನ್ನು ನಿಮ್ಮ ಮೇಲೆ ಚಾಚಿ, ಅನ್ಯಜನಾಂಗಗಳಿಗೆ ಕೊಳ್ಳೆಯಾಗಿ ಕೊಟ್ಟು ಜನಗಳೊಳಗೆ ನಿನ್ನನ್ನು ಕಡಿದುಬಿಟ್ಟು ದೇಶದೊಳಗಿಂದ ನಿನ್ನನ್ನು ನಾಶಮಾಡಿ ಸಂಹಾರ ಮಾಡುವೆನು, ಆಗ ನಾನೇ ಕರ್ತನೆಂದು ತಿಳಿಯುವಿ.
- Jeremiah 49:20 ಯೆರೆಮೀಯ 49:20ಆದದರಿಂದ ಕರ್ತನು ಎದೋಮಿಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೂ ತೇಮಾನಿನ ನಿವಾಸಿಗಳಿಗೆ ವಿರೋಧವಾಗಿ ಅವನು ಮಾಡಿದ ಯೋಚನೆಗಳನ್ನೂ ಕೇಳಿರಿ. ನಿಶ್ಚಯವಾಗಿ ಮಂದೆಯ ಮರಿಗಳು ಅವರನ್ನು ಎಳೆಯುವವು, ನಿಶ್ಚಯವಾಗಿ ಅವರ ನಿವಾಸವನ್ನು ಅವರ ಸಂಗಡ ಹಾಳುಮಾಡು ವನು.
Original words (Hebrew)
- saith · H559אָמַר ʼâmar
- Lord · H136אֲדֹנָי ʼĂdônây
- out · H5186נָטָה nâṭâh
- hand · H3027יָד yâd
- Edom · H123אֱדֹם ʼĔdôm
- off · H3772כָּרַת kârath
- man · H120אָדָם ʼâdâm
- beast · H929בְּהֵמָה bᵉhêmâh
- make · H5414נָתַן nâthan
- desolate · H2723חׇרְבָּה chorbâh
- Teman · H8487תֵּימָן Têymân
- Dedan · H1719דְּדָן Dᵉdân
- fall · H5307נָפַל nâphal
- sword · H2719חֶרֶב chereb