Ezekiel · chapter 25 · verse 16
Ezekiel 25:16 in Kannada
ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನನ್ನ ಕೈಯನ್ನು ಫಿಲಿಷ್ಟಿಯರ ಮೇಲೆ ಚಾಚುತ್ತೇನೆ; ಕೆರೇತಿಯರನ್ನು ಕಡಿದುಬಿಡುತ್ತೇನೆ; ಉಳಿದವರನ್ನು ಸಮುದ್ರತೀರದಲ್ಲಿ ನಾಶಮಾಡುತ್ತೇನೆ;ನಾನು ದೊಡ್ಡ ಪ್ರತಿದಂಡನೆ ಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ತೀರಿಸುತ್ತೇನೆ; ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
Devaraada kartanu heege heluttaane--igo, naanu nanna kaiyannu philishtiyara mele chaachuttene; keretiyarannu kadidubiduttene; ulidavarannu samudrateeradalli naashamaaduttene;naanu dodda pratidandane yannu uriyulla gadarikegala sangada avaralli teerisuttene; heege prateekaara maadida mele naane kartanendu avarige tiliyuvadu.
Ezekiel 25:16 in English
- King James Version (KJV)
- Therefore thus saith the Lord GOD; Behold, I will stretch out mine hand upon the Philistines, and I will cut off the Cherethims, and destroy the remnant of the sea coast.
- World English Bible (WEB)
- therefore the Lord GOD says, “Behold, I will stretch out my hand on the Philistines, and I will cut off the Cherethites, and destroy the remnant of the sea coast.
- American Standard Version (ASV)
- therefore thus saith the Lord Jehovah, Behold, I will stretch out my hand upon the Philistines, and I will cut off the Cherethites, and destroy the remnant of the sea coast.
- Bible in Basic English (BBE)
- The Lord has said, See, my hand will be stretched out against the Philistines, cutting off the Cherethites and sending destruction on the rest of the sea-land.
- Darby Translation (DBY)
- therefore thus saith the Lord Jehovah: Behold, I stretch out my hands upon the Philistines, and I will cut off the Kerethites, and cause the remnant of the sea-coast to perish.
- Webster's Bible (WBS)
- Therefore thus saith the Lord GOD; Behold, I will stretch out my hand upon the Philistines, and I will cut off the Cherethims, and destroy the remnant of the sea coast.
- Young's Literal Translation (YLT)
- Therefore, thus said the Lord Jehovah: Lo, I am stretching out My hand against the Philistines, And I have cut off the Cherethim, And destroyed the remnant of the haven of the sea,
Read in context
- 14ನಾನು ನನ್ನ ಜನರಾದ ಇಸ್ರಾಯೇಲಿನ ಮೂಲಕವಾಗಿ ನನ್ನ ಪ್ರತಿದಂಡನೆಯನ್ನು ಎದೋಮಿನ ಮೇಲೆ ಇಡುವೆನು, ಅವರು ಎದೋಮಿನಲ್ಲಿ ನನ್ನ ಕೋಪದ ಪ್ರಕಾರವೂ ರೋಷದ ಪ್ರಕಾರವೂ ಮಾಡು ವರು; ಹೀಗೆಯೇ ಅವರು ನನ್ನ ಪ್ರತಿದಂಡನೆಯನ್ನು ತಿಳಿಯುವರೆಂದು ದೇವರಾದ ಕರ್ತನು ಹೇಳುತ್ತಾನೆ.
- 15ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ನಡಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಕೆಡಿಸಿದರು.
- 16ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನನ್ನ ಕೈಯನ್ನು ಫಿಲಿಷ್ಟಿಯರ ಮೇಲೆ ಚಾಚುತ್ತೇನೆ; ಕೆರೇತಿಯರನ್ನು ಕಡಿದುಬಿಡುತ್ತೇನೆ; ಉಳಿದವರನ್ನು ಸಮುದ್ರತೀರದಲ್ಲಿ ನಾಶಮಾಡುತ್ತೇನೆ;ನಾನು ದೊಡ್ಡ ಪ್ರತಿದಂಡನೆ ಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ತೀರಿಸುತ್ತೇನೆ; ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
- 17ನಾನು ದೊಡ್ಡ ಪ್ರತಿದಂಡನೆ ಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ತೀರಿಸುತ್ತೇನೆ; ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
Cross references
- 1 Samuel 30:14 1 ಸಮುವೇಲನು 30:14ಆದರೆ ನಾವು ಕೆರೇತ್ಯರ ದಕ್ಷಿಣ ಪಾರ್ಶ್ವದ ಮೇಲೆಯೂ ಯೆಹೂದದ ಮೇರೆಯ ಮೇಲೆಯೂ ಕಾಲೇಬನ ದಕ್ಷಿಣ ಪಾರ್ಶ್ವದ ಮೇಲೆ ಯೂ ಬಿದ್ದು ಚಿಕ್ಲಗನ್ನು ಬೆಂಕಿಯಿಂದ ಸುಟ್ಟುಬಿಟ್ಟೆವು ಅಂದನು.
- Zephaniah 2:4–15 ಚೆಫನ್ಯ 2:4–15ಗಾಜವು ಕೈಬಿಡಲ್ಪಡುವದು, ಅಷ್ಕೆಲೋನ್ ಹಾಳಾ ಗುವದು, ಅಷ್ಡೋದನ್ನು ಮಧ್ಯಾಹ್ನದಲ್ಲಿ ಹೊರಡಿಸು ವರು, ಎಕ್ರೋನ್ ಕೀಳಲ್ಪಡುವದು. ಸಮುದ್ರತೀರದ ನಿವಾಸಿಗಳಾದ ಕೆರೇತ್ಯರ ಜನಾಂಗಕ್ಕೆ ಅಯ್ಯೋ! ಕರ್ತನ ವಾಕ್ಯವು ನಿಮಗೆ ವಿರೋಧವಾಗಿದೆ; ಓ ಕಾನಾನೇ, ಫಿಲಿಷ್ಟಿಯರ ದೇಶವೇ, ನಿವಾಸಿಯೇ ಇಲ್ಲದ ಹಾಗೆ ನಿನ್ನನ್ನು ನಾಶಮಾಡುವೆನು. ಸಮುದ್ರದ ತೀರವು ಕುರುಬರು ಮೇಯಿಸುವ ಸ್ಥಳಗಳಾಗಿಯೂ ಕುಂಟೆ ಗಳಾಗಿಯೂ ಕುರೀಹಟ್ಟಿಗಳಾಗಿಯೂ ಇರುವದು. ತೀರವು ಯೆಹೂದದ ಮನೆತನದವರ ಉಳಿದವರಿಗೆ ಆಗುವದು; ಅದರ ಮೇಲೆ ಮೇಯಿಸುವರು; ಅಷ್ಕೆ ಲೋನಿನ ಮನೆತನಗಳಲ್ಲಿ ಸಾಯಂಕಾಲ ಅವರು ಮಲಗಿಕೊಳ್ಳುವರು; ಅವರ ದೇವರಾದ ಕರ್ತನು ಅವರನ್ನು ದರ್ಶಿಸಿ ಅವರ ಸೆರೆಯನ್ನು ತಿರುಗಿಸುವನು. ನನ್ನ ಜನರನ್ನು ನಿಂದಿಸಿ, ಅವರ ಮೇರೆಗೆ ಮೋವಾ ಬ್ಯರೂ ಅಮ್ಮೋನ್ಯರೂ ವಿರೋಧವಾಗಿ ತಮ್ಮನ್ನು ಹೆಚ್ಚಿಸಿ ಕೊಂಡದ್ದನ್ನು ನಾನು ಕೇಳಿದ್ದೇನೆ. ಆದದರಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೇಳು ವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ಮೋವಾಬು ಸೊದೋಮಿನ ಹಾಗಾಗುವದು; ಅಮ್ಮೋ ನನ ಮಕ್ಕಳು ಗೊಮೋರದ ಹಾಗಾಗುವರು; ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಣಿಗಳುಳ್ಳಂಥ ನಿತ್ಯವಾಗಿ ಹಾಳಾಗುವಂಥ ಸ್ಥಳವಾಗುವರು; ನನ್ನ ಜನರಲ್ಲಿ ಉಳಿದವರು ಅವರನ್ನು ಸುಲುಕೊಳ್ಳುವರು; ನನ್ನ ಜನರಲ್ಲಿ ಮಿಕ್ಕಾದವರು ಅವರನ್ನು ಸ್ವಾಧೀನ ಮಾಡಿಕೊಳ್ಳುವರು. ಅವರ ಗರ್ವಕ್ಕೋಸ್ಕರ ಇದೇ ಅವರಿಗೆ ಸಿಕ್ಕುವದು; ಅವರು ಸೈನ್ಯಗಳ ಕರ್ತನ ಜನರಿಗೆ ವಿರೋಧವಾಗಿ ನಿಂದಿಸಿ ತಮ್ಮನ್ನು ಹೆಚ್ಚಿಸಿಕೊಂಡ ದ್ದರಿಂದಲೇ ಕರ್ತನು ಅವರಿಗೆ ಭಯಂಕರನಾಗಿ ರುವನು. ಆತನು ಭೂಮಿಯ ಎಲ್ಲಾ ದೇವರುಗಳನ್ನು ಕ್ಷೀಣಮಾಡುವನು; ಅನ್ಯಜನಾಂಗಗಳ ದ್ವೀಪಗಳವ ರೆಲ್ಲರು ತಮ್ಮ ತಮ್ಮ ಸ್ಥಳಗಳಿಂದ ಆತನನ್ನು ಆರಾ ಧಿಸುವರು. ಕೂಷ್ಯರೇ, ನೀವೂ ಸಹ ನನ್ನ ಕತ್ತಿ ಯಿಂದ ಕೊಲ್ಲಲ್ಪಡುವಿರಿ; ಆತನು ತನ್ನ ಕೈಯನ್ನು ಉತ್ತರದ ಮೇಲೆ ಚಾಚಿ ಅಶ್ಶೂರನ್ನು ನಾಶಮಾಡಿ ನಿನೆವೆಯನ್ನು ಹಾಳಾಗಿಯೂ ಅರಣ್ಯದಂತೆ ಒಣಗಿ ದ್ದಾಗಿಯೂ ಮಾಡುವನು. ಅದರ ಮಧ್ಯದಲ್ಲಿ ಮಂದೆಗಳೂ ಜನಾಂಗಗಳ ಮೃಗಗಳೆಲ್ಲವೂ ಮಲಗುವವು; ಬಕಪಕ್ಷಿಯೂ ಮುಳ್ಳು ಹಂದಿಯೂ ಅದರ ಮೇಲಿನ ಅವುಗಳ ಹಾಸುಗಳಲ್ಲಿ ಇಳುಕೊಳ್ಳುವವು; ಕಿಟಕಿಗಳಲ್ಲಿ ಹಾಡುವ ಶಬ್ದವಿರುವದು; ಹೊಸ್ತಿಲಗಳಲ್ಲಿ ಹಾಳು ಇರುವದು; ದೇವದಾ ರಿನ ಕೆಲಸವನ್ನು ಬೈಲುಮಾಡುವನು.ನಿಶ್ಚಿಂತೆಯಾಗಿ ವಾಸಿಸಿದಂಥ ತಾನೇ ಹೊರತು ಮತ್ತೊಂದಿಲ್ಲವೆಂದು ತನ್ನೊಳಗೆ ಅಂದುಕೊಂಡಂಥ ಉಲ್ಲಾಸದ ಪಟ್ಟಣವು ಇದೇ. ಅದು ಎಷ್ಟೋ ಹಾಳಾಯಿತು; ಮೃಗಗಳು ಮಲಗಿಕೊಳ್ಳುವ ಸ್ಥಳವಾಯಿತು. ಅದನ್ನು ಹಾದು ಹೋಗುವವರೆಲ್ಲರು ಸಿಳ್ಳಿಟ್ಟು ಕೈ ಅಲ್ಲಾಡಿಸುವರು. ನಿಶ್ಚಿಂತೆಯಾಗಿ ವಾಸಿಸಿದಂಥ ತಾನೇ ಹೊರತು ಮತ್ತೊಂದಿಲ್ಲವೆಂದು ತನ್ನೊಳಗೆ ಅಂದುಕೊಂಡಂಥ ಉಲ್ಲಾಸದ ಪಟ್ಟಣವು ಇದೇ. ಅದು ಎಷ್ಟೋ ಹಾಳಾಯಿತು; ಮೃಗಗಳು ಮಲಗಿಕೊಳ್ಳುವ ಸ್ಥಳವಾಯಿತು. ಅದನ್ನು ಹಾದು ಹೋಗುವವರೆಲ್ಲರು ಸಿಳ್ಳಿಟ್ಟು ಕೈ ಅಲ್ಲಾಡಿಸುವರು.
- Ezekiel 25:13 ಯೆಹೆಜ್ಕೇಲನು 25:13ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನೂ ನನ್ನ ಕೈಯನ್ನು ಎದೋಮಿನ ಮೇಲೆ ಚಾಚುತ್ತೇನೆ, ಅದರೊಳಗಿನಿಂದ ಮನುಷ್ಯರನ್ನೂ ಮೃಗಗಳನ್ನೂ ಕಡಿದುಬಿಡುತ್ತೇನೆ, ತೇಮಾನು ಮೊದಲುಗೊಂಡು ಅದನ್ನು ಕಾಡನ್ನಾಗಿ ಮಾಡುತ್ತೇನೆ; ದೆದಾನಿಯವರು ಕತ್ತಿಯಿಂದ ಬೀಳು ವರು.
- Jeremiah 47:1–7 ಯೆರೆಮೀಯ 47:1–7ಫರೋಹನು ಗಾಜಾವನ್ನು ಹೊಡೆಯುವದಕ್ಕಿಂತ ಮುಂಚೆ ಫಿಲಿಷ್ಟಿಯರಿಗೆ ವಿರೋಧವಾಗಿ ಪ್ರವಾದಿಯಾದ ಯೆರೆವಿಾಯನಿಗೆ ಬಂದ ಕರ್ತನ ವಾಕ್ಯವು. ಕರ್ತನು ಹೀಗೆ ಹೇಳು ತ್ತಾನೆ--ಇಗೋ, ಪ್ರವಾಹಗಳು ಉತ್ತರದಿಂದ ಬರು ತ್ತವೆ, ಅವು ತುಂಬಿ ತುಳುಕುವ ಪ್ರಳಯವಾಗುವದು; ದೇಶವನ್ನೂ ಅದರಲ್ಲಿರುವ ಸಮಸ್ತವನ್ನೂ ಪಟ್ಟಣವನ್ನೂ ಅದರ ನಿವಾಸಿಗಳನ್ನೂ ಆಕ್ರಮಿಸುವವು, ಆಗ ಮನು ಷ್ಯರು ಕೂಗುವರು, ದೇಶದ ನಿವಾಸಿಗಳೆಲ್ಲರೂ ಗೋಳಾ ಡುವರು. ಅವನ ಬಲವಾದ ಕುದುರೆಗಳ ಗೊರಸು ಗಳ ತುಳಿಯುವಿಕೆಯ ಶಬ್ದದಿಂದಲೂ ಅವನ ರಥಗಳ ಘೋಷದಿಂದಲೂ ಚಕ್ರಗಳ ಧ್ವನಿಯಿಂದಲೂ ತಂದೆ ಗಳ ಕೈ ಬಲಹೀನತೆಯಿಂದಾಗಿ ತಮ್ಮ ಮಕ್ಕಳ ಕಡೆಗೆ ಹಿಂತಿರುಗಿ ನೋಡರು. ಫಿಲಿಷ್ಟಿಯರೆಲ್ಲರನ್ನು ಸೂರೆ ಮಾಡುವದಕ್ಕೂ ತೂರಿನಿಂದ ಚೀದೋನಿನಿಂದ ಉಳಿದ ಪ್ರತಿ ಸಹಾಯಕನನ್ನು ಕಡಿದು ಬಿಡುವದಕ್ಕೂ ಆ ದಿವಸ ಬಂತು. ಕರ್ತನು ಫಿಲಿಷ್ಟಿಯರನ್ನು ಕಫ್ತೋರಿನ ದೇಶದ ಉಳಿದವರನ್ನೂ ಸೂರೆ ಮಾಡುವನು. ಗಾಜಾದ ಮೇಲೆ ಬೋಳುತನ ಬಂತು; ಅಷ್ಕೆ ಲೋನು ಅವರ ತಗ್ಗಿನ ಉಳಿದವುಗಳಿಂದ ತೆಗೆದು ಹಾಕಲ್ಪಟ್ಟಿತು; ಎಷ್ಟು ಕಾಲ ನಿನಗೆ ನೀನೇ ಗಾಯಮಾಡಿ ಕೊಳ್ಳುವಿ? ಕರ್ತನ ಕತ್ತಿಯೇ, ಎಷ್ಟರ ವರೆಗೆ ವಿಶ್ರಮಿಸಿಕೊಳ್ಳದೆ ಇರುವಿ? ನಿನ್ನ ಒರೆಯಲ್ಲಿ ಅಡಗಿಕೋ! ವಿಶ್ರಮಿಸಿಕೋ, ಸುಮ್ಮನಿರು.ಅದು ಹೇಗೆ ಸುಮ್ಮನಿರುವದು? ಅಷ್ಕೆಲೋನಿಗೆ ವಿರೋಧವಾಗಿಯೂ ಸಮುದ್ರತೀರಕ್ಕೆ ವಿರೋಧ ವಾಗಿಯೂ ಕರ್ತನು ಅದಕ್ಕೆ ಆಜ್ಞೆ ಕೊಟ್ಟಿದ್ದಾನಲ್ಲಾ; ಅಲ್ಲಿ ಅದನ್ನು ನೇಮಿಸಿದ್ದಾನೆ. ಅದು ಹೇಗೆ ಸುಮ್ಮನಿರುವದು? ಅಷ್ಕೆಲೋನಿಗೆ ವಿರೋಧವಾಗಿಯೂ ಸಮುದ್ರತೀರಕ್ಕೆ ವಿರೋಧ ವಾಗಿಯೂ ಕರ್ತನು ಅದಕ್ಕೆ ಆಜ್ಞೆ ಕೊಟ್ಟಿದ್ದಾನಲ್ಲಾ; ಅಲ್ಲಿ ಅದನ್ನು ನೇಮಿಸಿದ್ದಾನೆ.
- Ezekiel 25:7 ಯೆಹೆಜ್ಕೇಲನು 25:7ಇಗೋ, ನಾನು ನನ್ನ ಕೈಯನ್ನು ನಿಮ್ಮ ಮೇಲೆ ಚಾಚಿ, ಅನ್ಯಜನಾಂಗಗಳಿಗೆ ಕೊಳ್ಳೆಯಾಗಿ ಕೊಟ್ಟು ಜನಗಳೊಳಗೆ ನಿನ್ನನ್ನು ಕಡಿದುಬಿಟ್ಟು ದೇಶದೊಳಗಿಂದ ನಿನ್ನನ್ನು ನಾಶಮಾಡಿ ಸಂಹಾರ ಮಾಡುವೆನು, ಆಗ ನಾನೇ ಕರ್ತನೆಂದು ತಿಳಿಯುವಿ.
- 2 Samuel 15:18 2 ಸಮುವೇಲನು 15:18ಅವನ ಎಲ್ಲಾ ಸೇವಕರೂ ಕೆರೇತ್ಯರೂ ಪೆಲೇತ್ಯರೂ ಅವನ ಹಿಂದೆ ಗತ್ ಊರಿನಿಂದ ಅವನ ಸಂಗಡ ಬಂದ ಗಿತ್ತಿಯರಾದ ಆರುನೂರು ಮಂದಿಯೂ ಅರಸನ ಮುಂದೆ ನಡೆದರು.