Ezekiel · chapter 31 · verse 8
Ezekiel 31:8 in Kannada
ದೇವರ ತೋಟದ ದೇವದಾರುಗಳು ಅವನನ್ನು ಮರೆಮಾಡಲಿಲ್ಲ; ತುರಾಯಿ ಮರಗಳು ಅವನ ಕೊಂಬೆಗಳಿಗೆ ಸಮ ವಾಗಲಿಲ್ಲ; ಆಲದ ಮರಗಳು ಅವನ ರೆಂಬೆಗಳಷ್ಟೂ ಇಲ್ಲ; ಆ ದೇವರ ತೋಟದ ಯಾವುದೇ ಮರವು ಇವನ ಸೌಂದರ್ಯಕ್ಕೆ ಸಮವಾಗಲಿಲ್ಲ.
Devara totada devadaarugalu avanannu maremaadalilla; turaayi maragalu avana kombegalige sama vaagalilla; aalada maragalu avana rembegalashtoo illa; aa devara totada yaavude maravu ivana saundaryakke samavaagalilla.
Ezekiel 31:8 in English
- King James Version (KJV)
- The cedars in the garden of God could not hide him: the fir trees were not like his boughs, and the chesnut trees were not like his branches; nor any tree in the garden of God was like unto him in his beauty.
- World English Bible (WEB)
- The cedars in the garden of God could not hide it. The cypress trees were not like its branches. The pine trees were not like its branches; nor was any tree in the garden of God like it in its beauty.
- American Standard Version (ASV)
- The cedars in the garden of God could not hide it; the fir-trees were not like its boughs, and the plane-trees were not as its branches; nor was any tree in the garden of God like unto it in its beauty.
- Bible in Basic English (BBE)
- No cedars were equal to it in the garden of God; the fir-trees were not like its branches, and plane-trees were as nothing in comparison with its arms; no tree in the garden of God was so beautiful.
- Darby Translation (DBY)
- The cedars in the garden of God could not hide him; the cypresses were not like his boughs, and the plane-trees were not as his branches: no tree in the garden of God was like unto him in his beauty.
- Webster's Bible (WBS)
- The cedars in the garden of God could not hide him: the fir-trees were not like his boughs, and the chesnut-trees were not like his branches; not any tree in the garden of God was like to him in his beauty.
- Young's Literal Translation (YLT)
- Cedars have not hid him in the garden of God, Firs have not been like unto his boughs, And chesnut-trees have not been as his branches, No tree in the garden of God hath been like unto him in his beauty,
Read in context
- 6ಅದರ ಕೊಂಬೆಗಳಲ್ಲಿ ಆಕಾಶದ ಎಲ್ಲಾ ಪಕ್ಷಿಗಳು ತಮ್ಮ ಗೂಡುಗಳನ್ನು ಮಾಡಿದವು; ಅದರ ರೆಂಬೆ ಗಳ ಕೆಳಗೆ ಬಯಲಿನ ಎಲ್ಲಾ ಮೃಗಗಳು ಮರಿಗಳಿಗೆ ಜನ್ಮಕೊಟ್ಟವು; ಅದರ ಕೆಳಗೆ ನೆರಳಿನಲ್ಲಿ ಎಲ್ಲಾ ಮಹಾಜನಾಂಗಗಳು ವಾಸಮಾಡಿದವು.
- 7ಹೀಗೆ ಅವನು ತನ್ನ ದೊಡ್ಡಸ್ತಿಕೆಯಲ್ಲಿ ತನ್ನ ಕೊಂಬೆಗಳ ಉದ್ದದಲ್ಲಿ ಸುಂದರವಾಗಿದ್ದನು; ಯಾಕಂದರೆ ಅವನ ಬೇರು ಮಹಾ ನೀರಿನಿಂದಾಗಿತ್ತು.
- 8ದೇವರ ತೋಟದ ದೇವದಾರುಗಳು ಅವನನ್ನು ಮರೆಮಾಡಲಿಲ್ಲ; ತುರಾಯಿ ಮರಗಳು ಅವನ ಕೊಂಬೆಗಳಿಗೆ ಸಮ ವಾಗಲಿಲ್ಲ; ಆಲದ ಮರಗಳು ಅವನ ರೆಂಬೆಗಳಷ್ಟೂ ಇಲ್ಲ; ಆ ದೇವರ ತೋಟದ ಯಾವುದೇ ಮರವು ಇವನ ಸೌಂದರ್ಯಕ್ಕೆ ಸಮವಾಗಲಿಲ್ಲ.
- 9ನಾನು ಅವನನ್ನು ಅವನ ಕೊಂಬೆಗಳ ಸಮೂಹದಿಂದ ಸೌಂದರ್ಯಪಡಿಸಿದೆನು; ಅದರಿಂದ ದೇವರ ತೋಟ ದಲ್ಲಿನ ಏದೆನಿನ ಮರಗಳೆಲ್ಲಾ ಅವನ ಮೇಲೆ ಹೊಟ್ಟೇ ಕಿಚ್ಚುಪಟ್ಟವು.
- 10ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಯಾಕಂದರೆ ನೀನು ನೀಳದಲ್ಲಿ ಎತ್ತರವಾಗಿ ಅವನು ತನ್ನ ತಲೆಯನ್ನು ಒತ್ತಿಕೊಂಡಿರುವ ಕೊಂಬೆಗಳ ಕಡೆಗೆ ಚಾಚಿದ ಕಾರಣದಿಂದ ಅವನ ಹೃದಯವು ತನ್ನ ಎತ್ತರದಲ್ಲಿ ಹೆಚ್ಚಿಸಲ್ಪಟ್ಟಿದೆ.
Cross references
- Ezekiel 28:13 ಯೆಹೆಜ್ಕೇಲನು 28:13ದೇವರ ತೋಟ ವಾದ ಏದೆನಿನಲ್ಲಿ ನೀನಿದ್ದಿ. ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ವಜ್ರ, ವೈಡೂರ್ಯ, ನೀಲ ಗೋಮೇ ಧಿಕ, ಕೆಂಪು, ಸ್ಪಟಿಕ, ಚಿನ್ನ ಈ ಅಮೂಲ್ಯವಾದವು ಗಳಿಂದ ಭೂಷಿತವಾಗಿದ್ದಿ. ನಿನ್ನಲ್ಲಿದ್ದ ದಮ್ಮಡಿಗಳೂ ಕೊಳಲುಗಳೂ ಇವುಗಳ ಕೆಲಸವು ನಿನ್ನಲ್ಲಿದ್ದು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು.
- Isaiah 51:3 ಯೆಶಾಯ 51:3ಕರ್ತನು ಚೀಯೋನನ್ನು ಆದರಿಸುವನು; ಆತನು ಅದರ ಹಾಳಾದ ಸ್ಥಳಗ ಳನ್ನು ಸುಧಾರಿಸುವನು; ಅದರ ಅರಣ್ಯವನ್ನು ಏದೆನ್ ಹಾಗೆಯೂ ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ ಉಲ್ಲಾ ಸವೂ ಉಪಕಾರ ಸ್ತುತಿಯೂ ಇಂಪಾದ ಸ್ವರವೂ ಕಂಡುಬರುವವು.
- Psalm 80:10 ಕೀರ್ತನೆಗಳು 80:10ಅದರ ನೆರಳಿನಿಂದ ಬೆಟ್ಟ ಗಳೂ ಕೊಂಬೆಗಳಿಂದ ದೇವದಾರುಗಳೂ ಮುಚ್ಚಲ್ಪ ಟ್ಟವು.
- Genesis 13:10 ಆದಿಕಾಂಡ 13:10ಲೋಟನು ತನ್ನ ಕಣ್ಣುಗಳನ್ನು ಎತ್ತಿ ಯೊರ್ದನಿನ ಮೈದಾನವನ್ನೆಲ್ಲಾ ನೋಡಿದನು. ಯಾಕಂದರೆ ಕರ್ತನು ಸೊದೋಮನ್ನೂ ಗೊಮೋರ ವನ್ನೂ ನಾಶಮಾಡುವದಕ್ಕಿಂತ ಮುಂಚೆ ಅದೆಲ್ಲಾ ಚೋಗರಿನ ವರೆಗೆ ನೀರಾವರಿಯಾಗಿದ್ದು ಕರ್ತನ ತೋಟದಂತೆಯೂ ಐಗುಪ್ತದೇಶದಂತೆಯೂ ಇತ್ತು.
- Genesis 2:8–9 ಆದಿಕಾಂಡ 2:8–9ಕರ್ತನಾದ ದೇವರು ಏದೆನಿನಲ್ಲಿ ಪೂರ್ವ ದಿಕ್ಕಿಗೆ ತೋಟವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇಟ್ಟನು. ಕರ್ತನಾದ ದೇವರು ನೋಟಕ್ಕೆ ರಮ್ಯವಾದ ಮತ್ತು ಊಟಕ್ಕೆ ಒಳ್ಳೇದಾದ ಎಲ್ಲಾ ಮರಗಳನ್ನು, ತೋಟದ ಮಧ್ಯದಲ್ಲಿ ಜೀವದ ಮರವನ್ನು, ಒಳ್ಳೇದರ ಕೆಟ್ಟದರ ತಿಳುವಳಿಕೆಯ ಮರವನ್ನು ಭೂಮಿಯೊಳಗಿಂದ ಬೆಳೆಯಿಸಿದನು.
- Ezekiel 31:16 ಯೆಹೆಜ್ಕೇಲನು 31:16ನಾನು ಅದನ್ನು ಕುಣಿಗೆ ಇಳಿಯುವವರ ಜೊತೆಗೆ ಸೇರಿಸಬೇಕೆಂದು ಪಾತಾಳಕ್ಕೆ ತಳ್ಳಿಬಿಟ್ಟಾಗ ಅದು ಬಿದ್ದ ಶಬ್ದಕ್ಕೆ ಸಕಲ ಜನಾಂಗಗಳು ನಡುಗಿದವು; ಅಧೋ ಲೋಕಕ್ಕೆ ಪಾಲಾದ ಏದೆನಿನ ಎಲ್ಲಾ ಮರಗಳು, ಲೆಬನೋನಿನ ಉತ್ತಮೋತ್ತಮವಾದ ವೃಕ್ಷಗಳು, ನೀರು ಕುಡಿಯುವವುಗಳೆಲ್ಲಾ ಕೆಳಗಿನ ಸೀಮೆಯಲ್ಲಿ ಸಂತೈಸಿ ಕೊಂಡವು.
- Ezekiel 31:18 ಯೆಹೆಜ್ಕೇಲನು 31:18ನೀನು ಹೀಗೆ ಘನತೆಯಿಂದಲೂ ದೊಡ್ಡಸ್ತಿಕೆ ಯಿಂದಲೂ ಏದೆನಿನ ಯಾವ ಮರಗಳಿಗೆ ಸಮ ನಾಗಿರುವೆ? ಆದರೂ ಏದೆನಿನ ಮರಗಳ ಸಂಗಡ ಕೆಳಗಿನ ಸೀಮೆಗಳಿಗೆ ಇಳಿಸಲ್ಪಡುವಿ; ಸುನ್ನತಿಯಿಲ್ಲದವರ ಮಧ್ಯದಲ್ಲಿ ಕತ್ತಿಯಿಂದ ಹತವಾದವರ ಸಂಗಡ ಮಲ ಗುವಿ. ಇದೇ ಫರೋಹನನೂ ಅವನ ಎಲ್ಲಾ ಜನ ಸಮೂಹವೂ ಆಗಿವೆ ಎಂದು ದೇವರಾದ ಕರ್ತನು ಹೇಳುತ್ತಾನೆ.
- Isaiah 36:4–18 ಯೆಶಾಯ 36:4–18ರಬ್ಷಾಕನು ಅವರಿಗೆ--ನೀವು ಅಶ್ಶೂರಿನ ಅರಸನಾದ ಮಹಾರಾಜನ ಈ ಮಾತುಗಳನ್ನು ಹಿಜ್ಕೀಯನಿಗೆ ತಿಳಿ ಸಿರಿ--ಈ ನಿನ್ನ ಭರವಸಕ್ಕೆ ಯಾವ ಆಧಾರವುಂಟು? ಯುದ್ಧಕ್ಕೆ ಬೇಕಾದ ಆಲೋಚನೆಯೂ ಪರಾಕ್ರಮವೂ ನನಗೆ ಉಂಟೆಂದು ಹೇಳುವ ನಿನ್ನ ಮಾತು ಬರೀ ವ್ಯರ್ಥವಾದ ಮಾತುಗಳೇ, ನೀನು ಯಾರನ್ನು ನಂಬಿ ಕೊಂಡು ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಿ? ಜಜ್ಜಿದ ದಂಡಿಗೆ ಸಮಾನವಾದ ಐಗುಪ್ತವೆಂಬ ಕೋಲಿನ ಮೇಲೆ ಭರವಸವಿಟ್ಟಿರುತ್ತಿಯಷ್ಟೆ; ಒಬ್ಬನು ಅಂತ ಕೋಲನ್ನು ಊರಿಕೊಳ್ಳುವದಾದರೆ ಅದು ಅವನ ಕೈಯೊಳಕ್ಕೆ ಹೋಗಿ ತಿವಿಯುತ್ತದೆ. ಐಗುಪ್ತದ ಅರಸ ನಾದ ಫರೋಹನು ತನ್ನಲ್ಲಿ ನಂಬಿಕೆ ಇಟ್ಟುಕೊಳ್ಳುವ ವರೆಲ್ಲರಿಗೆ ಹೀಗೆ ಇದ್ದಾನೆ. ಆದರೆ ನೀನು ನಮ್ಮ ದೇವರಾದ ಕರ್ತನಲ್ಲಿ ನಂಬಿಕೆಯಿಟ್ಟಿದ್ದೇವೆಂದು ನನಗೆ ಹೇಳಿದರೆ ಹಿಜ್ಕೀಯನು ಇದೇ ಯಜ್ಞವೇದಿಯ ಮುಂದೆ ಆರಾಧನೆ ಮಾಡಬೇಕೆಂಬದಾಗಿ ಯೆಹೂ ದಕ್ಕೂ ಯೆರೂಸಲೇಮಿಗೂ ಆಜ್ಞಾಪಿಸಿ, ಹಿಜ್ಕೀಯನು ಯಾವನ ಪೂಜಾ ಸ್ಥಳಗಳನ್ನೂ ಯಜ್ಞವೇದಿಗಳನ್ನೂ ತೆಗೆದುಹಾಕಿದ್ದಾನೋ ಅವನೇ ಅಲ್ಲವೋ? ಹಾಗಾದರೆ ಈಗ ನನ್ನ ಯಜಮಾನನಾದ ಅಶ್ಶೂ ರಿನ ಅರಸನಿಗೆ ಹೊಣೆಗಾರರನ್ನು ಕೊಡು ಎಂದು ಬೇಡಿಕೊಳ್ಳುತ್ತೇನೆ. ಆಗ ನೀನು ಅವುಗಳ ಮೇಲೆ ಸವಾರಿಮಾಡುವದಕ್ಕೆ ಜನರನ್ನು ಕೊಡುವದಕ್ಕಾದರೆ ನಿನಗೆ ಎರಡು ಸಾವಿರ ಕುದುರೆಗಳನ್ನು ನಾನು ಕೊಡು ವೆನು. ಇದಾಗದಿದ್ದರೆ ನನ್ನ ಯಜಮಾನನ ಸೇವಕ ರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯ ಮುಖವನ್ನು ಹೇಗೆ ತಿರುಗಿಸಿ ಬಿಡುವಿ? ಹೀಗಿರಲಾಗಿ ಕುದುರೆಗಳಿ ಗೋಸ್ಕರವೂ ರಾಹುತರಿಗೋಸ್ಕರವೂ ಐಗುಪ್ತದಲ್ಲಿ ನಂಬಿಕೊಳ್ಳುತ್ತೀ. ಈ ದೇಶವನ್ನು ಹಾಳುಮಾಡು ವದಕ್ಕೆ ಕರ್ತನಿಲ್ಲದೆ ನಾನು ಬಂದಿದ್ದೇನೋ? ಈ ದೇಶಕ್ಕೆ ವಿರೋಧವಾಗಿ ಬಂದು ಅದನ್ನು ಹಾಳುಮಾಡಿ ಬಿಡು ಎಂದು ಕರ್ತನೇ ನನಗೆ ಆಜ್ಞಾಪಿಸಿದನು ಎನ್ನುವದು. ಆಗ ಎಲ್ಯಾಕೀಮ್, ಶೆಬ್ನ, ಯೋವ ಎಂಬವರು ರಬ್ಷಾಕೆಗೆ--ನೀನು ಮಾತನಾಡುವದು ಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ. ಆದದರಿಂದ ದಯ ವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಸಿರಿಯಾ ಭಾಷೆ ಯಲ್ಲಿ ಮಾತನಾಡು ಅದು ನಮಗೆ ತಿಳಿಯುತ್ತದೆ; ಯೆಹೂದ್ಯರ ಭಾಷೆಯಲ್ಲಿ ಮಾತನಾಡಬೇಡ ಎಂದು ಹೇಳಿದರು. ಆದರೆ ರಬ್ಷಾಕೆಯು--ನನ್ನ ಯಜ ಮಾನನು ನಿಮ್ಮ ಸಂಗಡವಾಗಲಿ ನಿಮ್ಮ ಯಜಮಾ ನನ ಸಂಗಡವಾಗಲಿ ಈ ಮಾತುಗಳನ್ನು ಹೇಳುವ ದಕ್ಕೆ ಕಳುಹಿಸಿದನೋ? ತಮ್ಮ ಸ್ವಂತ ಮಲವನ್ನು ತಿಂದು ಸ್ವಂತ ಮೂತ್ರವನ್ನು ಕುಡಿಯಬೇಕೆಂದು ಈ ಗೋಡೆಯ ಮೇಲೆ ಕೂತಿರುವ ಮನುಷ್ಯರ ಸಂಗಡ ಮಾತನಾಡಲು ಅವನು ನನ್ನನ್ನು ಕಳುಹಿಸಲಿಲ್ಲವೋ ಅಂದನು. ಆಗ ರಬ್ಷಾಕನು ನಿಂತುಕೊಂಡು ಯೆಹೂ ದ್ಯರ ಭಾಷೆಯಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿದ್ದೇನಂದರೆ--ಅಶ್ಶೂರಿನ ಅರಸನಾದ ಮಹಾ ರಾಜನ ಮಾತುಗಳನ್ನು ಕೇಳಿರಿ. ಇವನು ನಿಮಗೆ--ಹಿಜ್ಕೀಯನು ನಿಮಗೆ ಮೋಸಮಾಡದಿರಲಿ, ಅವನು ನಿಮ್ಮನ್ನು ಬಿಡಿಸಲು ಶಕ್ತನಲ್ಲ. ಇಲ್ಲವೇ ಕರ್ತನು ನಿಶ್ಚಯವಾಗಿ ನಮ್ಮನ್ನು ತಪ್ಪಿಸುವನು; ಈ ಪಟ್ಟಣವು ಅಶ್ಶೂರದ ಅರಸನ ವಶವಾಗುವದಿಲ್ಲ ಎಂದು ಹೇಳಿ ನೀವು ಕರ್ತನಲ್ಲಿ ಭರವಸೆ ಇಡುವಂತೆ ಮಾಡಿದರೂ; ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ; ಅಶ್ಶೂರದ ಅರಸನು ಹೇಳುವದೇನಂದರೆ, ನನ್ನೊಡನೆ ಒಡಂಬಡಿಕೆ ಮಾಡಿಕೊಂಡು ನನ್ನ ಬಳಿಗೆ ಹೊರಗೆ ಬನ್ನಿರಿ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಅಂಜೂರದ ಮರ, ದ್ರಾಕ್ಷಾಲತೆ ಇವುಗಳ ಫಲಗಳನ್ನು ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವಿರಿ. ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷೇತೋಟ ಇವು ಸಮೃದ್ಧಿ ಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರಕೊಂಡು ಹೋಗುವೆನು. ಕರ್ತನು ನಮ್ಮನ್ನು ತಪ್ಪಿಸುವನು ಎಂದು ಹೇಳಿ ಹಿಜ್ಕೀಯನು ನಿಮ್ಮನ್ನು ಪ್ರೇರೇಪಿಸದಂತೆ ಎಚ್ಚರಿಕೆ ಯಾಗಿರ್ರಿ. ಯಾವ ಜನಾಂಗದ ದೇವರುಗಳಾದರೂ ತನ್ನ ದೇಶಗಳನ್ನು ಅಶ್ಶೂರದ ಅರಸನ ಕೈಯಿಂದ ಬಿಡಿಸಿದವೋ?
- Isaiah 10:7–14 ಯೆಶಾಯ 10:7–14ಅದರ ಅಭಿಪ್ರಾಯವೋ ಹಾಗಲ್ಲ; ಇಲ್ಲವೇ ಅದರ ಹೃದಯವು ಈ ಪ್ರಕಾರ ಆಲೋಚಿಸುವದಿಲ್ಲ; ಜನಾಂಗಗಳನ್ನು ಕಡಿದು ಬಿಡುವದು ಕೊಂಚವಾಗಿ ಅಲ್ಲ. ಆದರೆ ನಾಶಮಾಡುವದು ಅವನ ಹೃದಯದಲ್ಲಿ ಇದೆ. ಅವನು ಅಂದು ಕೊಳ್ಳುವದೇನಂದರೆ--ನನ್ನ ಅಧಿಪತಿಗಳೆಲ್ಲಾ ರಾಜರಲ್ಲವೇ? ಕಲ್ನೋ, ಕರ್ಕೆ ವಿಾಷಿನ ಹಾಗಲ್ಲವೋ? ಹಾಮಾತ್ ಅರ್ಪದಿನ ಹಾಗಲ್ಲವೇ? ಸಮಾರ್ಯವು ದಮಸ್ಕದ ಹಾಗ ಲ್ಲವೋ? ಯೆರೂಸಲೇಮಿನಲ್ಲಿಯೂ ಸಮಾರ್ಯ ದಲ್ಲಿಯೂ ಹೆಚ್ಚಾಗಿದ್ದ ಅವರ ವಿಗ್ರಹಗಳು ಹಾಗೂ ಕೆತ್ತಿದ ವಿಗ್ರಹಗಳ ರಾಜ್ಯಗಳು ನನ್ನ ಕೈಗೆ ಸಿಕ್ಕಿದಂತೆ ನಾನು ಸಮಾರ್ಯಕ್ಕೂ ಅದರ ವಿಗ್ರಹಗಳಿಗೂ ಮಾಡಿದಂತೆ ಯೆರೂಸಲೇಮಿಗೂ ಅದರ ವಿಗ್ರಹ ಗಳಿಗೂ ಮಾಡದೆ ಇರುವೆನೋ? ಆದಕಾರಣ, ಕರ್ತನು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತನ್ನ ಕಾರ್ಯಗಳನ್ನು ಮಾಡಿ ಮುಗಿಸಿದ ಮೇಲೆ, ಅಶ್ಶೂರದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿ ಸುವೆನು. ಅವನು ತನ್ನೊಳಗೆ--ನನ್ನ ಕೈಯ ಬಲ ದಿಂದಲೂ ಜ್ಞಾನದಿಂದಲೂ ಅದನ್ನು ಮಾಡಿದೆ; ನಾನು ವಿವೇಕಿ ಮತ್ತು ಜನಾಂಗಗಳ ಮೇರೆಗಳನ್ನು ಕಿತ್ತು ಅವರ ನಿಧಿಗಳನ್ನು ಕೊಳ್ಳೆಹೊಡೆದು ಅದರ ನಿವಾಸಿಗಳನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ. ಜನಗಳ ಐಶ್ವರ್ಯವು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ, ಬಿಡಲ್ಪಟ್ಟ ಮೊಟ್ಟೆಗಳನ್ನು ಕೂಡಿಸುವಂತೆ ಭೂಮಿಯನ್ನೆಲ್ಲಾ ಸಂಗ್ರಹಿಸಿಕೊಂಡಿದ್ದೇನೆ; ರೆಕ್ಕೆಯಾ ಡಿಸಿ ಬಾಯಿತೆರೆದು ಕಿಚುಗುಟ್ಟುವವರು ಯಾರೂ ಇಲ್ಲವೆಂದು ಅಂದುಕೊಂಡನು.
- Psalm 37:35 ಕೀರ್ತನೆಗಳು 37:35ದುಷ್ಟನು ದೊಡ್ಡ ಅಧಿಕಾರದಲ್ಲಿರು ವದನ್ನು ನಾನು ನೋಡಿದೆನು; ಅವನು ಹಸುರಾಗಿ ವಿಸ್ತರಿಸಿಕೊಂಡ ಮರದ ಹಾಗೆ ಇದ್ದನು.
- Isaiah 37:11–13 ಯೆಶಾಯ 37:11–13ಇಗೋ, ಅಶ್ಶೂರದ ಅರಸರು ಎಲ್ಲಾ ದೇಶಗಳನ್ನು ಪೂರ್ಣವಾಗಿ ನಾಶ ಮಾಡಿದರೆಂದು ನೀನು ಕೇಳಿದಿಯಲ್ಲಾ; ಹೀಗಿದ್ದ ಮೇಲೆ ನೀನು ಬಿಡುಗಡೆಯಾಗುವಿಯೋ? ನನ್ನ ಪಿತೃಗಳು ಗೋಜಾನ್, ಖಾರಾನ್, ರೆಚೆಫ್ ಎಂಬ ಪಟ್ಟಣ ಗಳನ್ನು ತೆಲಸ್ಸಾರ್ ಪ್ರಾಂತ್ಯದಲ್ಲಿರುವ ಏದೆನಿನ ಜನ ರನ್ನು ನಾಶಮಾಡುವದಕ್ಕೆ ಹೋದಾಗ ಜನಾಂಗಗಳ ದೇವರುಗಳು ಅವರನ್ನು ಬಿಡುಗಡೆ ಮಾಡಿದವೋ? ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ ಎಂಬ ಪಟ್ಟಣಗಳ ಅರಸರು ಏನಾದರೂ ಎಂಬ ನನ್ನ ಮಾತನ್ನು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಿರಿ ಎಂಬದಾಗಿ ಸೇವಕರನ್ನು ಹಿಜ್ಕೀಯನ ಬಳಿಗೆ ಕಳುಹಿಸಿದನು.
Original words (Hebrew)
- cedars · H730אֶרֶז ʼerez
- garden · H1588גַּן gan
- God · H430אֱלֹהִים ʼĕlôhîym
- hide · H6004עָמַם ʻâmam
- trees · H1265בְּרוֹשׁ bᵉrôwsh
- like · H1819דָּמָה dâmâh
- boughs · H5589סְעַפָּה çᵉʻappâh
- trees · H6196עַרְמוֹן ʻarmôwn
- branches · H6288פְּאֹרָה pᵉʼôrâh
- tree · H6086עֵץ ʻêts
- garden · H1588גַּן gan
- God · H430אֱלֹהִים ʼĕlôhîym
- like · H1819דָּמָה dâmâh
- beauty · H3308יֳפִי yŏphîy