Genesis · chapter 13 · verse 10
Genesis 13:10 in Kannada
ಲೋಟನು ತನ್ನ ಕಣ್ಣುಗಳನ್ನು ಎತ್ತಿ ಯೊರ್ದನಿನ ಮೈದಾನವನ್ನೆಲ್ಲಾ ನೋಡಿದನು. ಯಾಕಂದರೆ ಕರ್ತನು ಸೊದೋಮನ್ನೂ ಗೊಮೋರ ವನ್ನೂ ನಾಶಮಾಡುವದಕ್ಕಿಂತ ಮುಂಚೆ ಅದೆಲ್ಲಾ ಚೋಗರಿನ ವರೆಗೆ ನೀರಾವರಿಯಾಗಿದ್ದು ಕರ್ತನ ತೋಟದಂತೆಯೂ ಐಗುಪ್ತದೇಶದಂತೆಯೂ ಇತ್ತು.
Lotanu tanna kannugalannu etti yordanina maidaanavannellaa nodidanu. Yaakandare kartanu sodomannoo gomora vannoo naashamaaduvadakkinta munche adellaa chogarina varege neeraavariyaagiddu kartana totadanteyoo aiguptadeshadanteyoo ittu.
Genesis 13:10 in English
- King James Version (KJV)
- And Lot lifted up his eyes, and beheld all the plain of Jordan, that it [was] well watered every where, before the LORD destroyed Sodom and Gomorrah, [even] as the garden of the LORD, like the land of Egypt, as thou comest unto Zoar.
- World English Bible (WEB)
- Lot lifted up his eyes, and saw all the plain of the Jordan, that it was well-watered everywhere, before the LORD destroyed Sodom and Gomorrah, like the garden of the LORD, like the land of Egypt, as you go to Zoar.
- American Standard Version (ASV)
- And Lot lifted up his eyes, and beheld all the Plain of the Jordan, that it was well watered every where, before Jehovah destroyed Sodom and Gomorrah, like the garden of Jehovah, like the land of Egypt, as thou goest unto Zoar.
- Bible in Basic English (BBE)
- And Lot, lifting up his eyes and looking an the valley of Jordan, saw that it was well watered everywhere, before the Lord had sent destruction on Sodom and Gomorrah; it was like the garden of the Lord, like the land of Egypt, on the way to Zoar.
- Darby Translation (DBY)
- And Lot lifted up his eyes, and beheld all the plain of the Jordan that it was thoroughly watered, before Jehovah had destroyed Sodom and Gomorrah; as the garden of Jehovah, like the land of Egypt, as one goes to Zoar.
- Webster's Bible (WBS)
- And Lot lifted up his eyes, and beheld all the plain of Jordan, that it [was] well watered every where, before the LORD destroyed Sodom and Gomorrah, [even] as the garden of the LORD, like the land of Egypt, as thou comest to Zoar.
- Young's Literal Translation (YLT)
- And Lot lifteth up his eyes, and seeth the whole circuit of the Jordan that it [is] all a watered country (before Jehovah's destroying Sodom and Gomorrah, as Jehovah's garden, as the land of Egypt,) in thy coming toward Zoar,
Read in context
- 8ಅಬ್ರಾಮನು ಲೋಟನಿಗೆ--ನನಗೂ ನಿನಗೂ ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು; ನಾವು ಸಹೋದರರು.
- 9ಭೂಮಿ ಯೆಲ್ಲಾ ನಿನ್ನ ಮುಂದೆ ಇರುತ್ತದಲ್ಲವೋ? ಹಾಗಾದರೆ ನನ್ನ ಬಳಿಯಿಂದ ಪ್ರತ್ಯೇಕವಾಗು; ನೀನು ಎಡಕ್ಕೆ ಹೋದರೆ ನಾನು ಬಲಕ್ಕೆ ಹೋಗುವೆನು; ನೀನು ಬಲಕ್ಕೆ ಹೋದರೆ ನಾನು ಎಡಕ್ಕೆ ಹೋಗುವೆನು ಅಂದನು.
- 10ಲೋಟನು ತನ್ನ ಕಣ್ಣುಗಳನ್ನು ಎತ್ತಿ ಯೊರ್ದನಿನ ಮೈದಾನವನ್ನೆಲ್ಲಾ ನೋಡಿದನು. ಯಾಕಂದರೆ ಕರ್ತನು ಸೊದೋಮನ್ನೂ ಗೊಮೋರ ವನ್ನೂ ನಾಶಮಾಡುವದಕ್ಕಿಂತ ಮುಂಚೆ ಅದೆಲ್ಲಾ ಚೋಗರಿನ ವರೆಗೆ ನೀರಾವರಿಯಾಗಿದ್ದು ಕರ್ತನ ತೋಟದಂತೆಯೂ ಐಗುಪ್ತದೇಶದಂತೆಯೂ ಇತ್ತು.
- 11ತರುವಾಯ ಲೋಟನು ಯೊರ್ದನಿನ ಮೈದಾನ ವನ್ನೆಲ್ಲಾ ತನಗಾಗಿ ಆರಿಸಿಕೊಂಡನು; ಹೀಗೆ ಲೋಟನು ಮೂಡಣಕ್ಕೆ ಹೊರಟು ಹೋದದ್ದರಿಂದ ಅವರು ಒಬ್ಬರಿಂದೊಬ್ಬರು ಪ್ರತ್ಯೇಕಿಸಲ್ಪಟ್ಟರು.
- 12ಅಬ್ರಾಮನು ಕಾನಾನ್ ದೇಶದಲ್ಲಿ ವಾಸಮಾಡಿದನು. ಲೋಟನು ಸೊದೋಮಿನ ಬಳಿಯಲ್ಲಿ ಗುಡಾರಗಳನ್ನು ಹಾಕಿ ಕೊಂಡು ಮೈದಾನದ ಪಟ್ಟಣಗಳಲ್ಲಿ ವಾಸಿಸಿದನು.
Cross references
- Deuteronomy 34:3 ಧರ್ಮೋಪದೇಶಕಾಂಡ 34:3ದಕ್ಷಿಣವನ್ನೂ ಖರ್ಜೂರಗಳ ಪಟ್ಟಣ ವಾದ ಯೆರಿಕೋವಿನ ತಗ್ಗೆಂಬ ಬೈಲನ್ನೂ ಚೋಗ ರೂರಿನ ಪರ್ಯಂತರಕ್ಕೆ ತೋರಿಸಿದನು.
- Isaiah 51:3 ಯೆಶಾಯ 51:3ಕರ್ತನು ಚೀಯೋನನ್ನು ಆದರಿಸುವನು; ಆತನು ಅದರ ಹಾಳಾದ ಸ್ಥಳಗ ಳನ್ನು ಸುಧಾರಿಸುವನು; ಅದರ ಅರಣ್ಯವನ್ನು ಏದೆನ್ ಹಾಗೆಯೂ ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ ಉಲ್ಲಾ ಸವೂ ಉಪಕಾರ ಸ್ತುತಿಯೂ ಇಂಪಾದ ಸ್ವರವೂ ಕಂಡುಬರುವವು.
- Genesis 2:8–10 ಆದಿಕಾಂಡ 2:8–10ಕರ್ತನಾದ ದೇವರು ಏದೆನಿನಲ್ಲಿ ಪೂರ್ವ ದಿಕ್ಕಿಗೆ ತೋಟವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇಟ್ಟನು. ಕರ್ತನಾದ ದೇವರು ನೋಟಕ್ಕೆ ರಮ್ಯವಾದ ಮತ್ತು ಊಟಕ್ಕೆ ಒಳ್ಳೇದಾದ ಎಲ್ಲಾ ಮರಗಳನ್ನು, ತೋಟದ ಮಧ್ಯದಲ್ಲಿ ಜೀವದ ಮರವನ್ನು, ಒಳ್ಳೇದರ ಕೆಟ್ಟದರ ತಿಳುವಳಿಕೆಯ ಮರವನ್ನು ಭೂಮಿಯೊಳಗಿಂದ ಬೆಳೆಯಿಸಿದನು. ತೋಟವನ್ನು ತೋಯಿಸುವದಕ್ಕಿರುವ ನದಿಯು ಏದೆನಿನೊಳಗಿಂದ ಹೊರಟು ಅಲ್ಲಿಂದ ಭಾಗವಾಗಿ ನಾಲ್ಕು ಶಾಖೆಗಳಾಯಿತು.
- Genesis 14:8 ಆದಿಕಾಂಡ 14:8ಸೊದೋಮಿನ ಅರಸನೂ ಗೊಮೋರದ ಅರಸನೂ ಅದ್ಮಾಹದ ಅರಸನೂ ಚೆಬೋಯಾಮಿನ ಅರಸನೂ ಚೋಗ ರೆಂಬ ಬೇಲದ ಅರಸನೂ ಹೊರಟು
- Genesis 14:2 ಆದಿಕಾಂಡ 14:2ಇವರು ಸೊದೋಮಿನ ಅರಸನಾದ ಬೆರಗನೂ ಗೊಮೋರದ ಅರಸನಾದ ಬಿರ್ಶಗನೂ ಅದ್ಮಾಹದ ಅರಸನಾದ ಶಿನಾಬನಿಗೂ ಚೆಬೋಯಾಮಿನ ಅರಸನಾದ ಶಮೇಬರನಿಗೂ ಬೇಲ ಎಂಬ ಚೋಗರದ ಅರಸನಿಗೂ ವಿರೋಧವಾಗಿ ಯುದ್ದಮಾಡಿದರು.
- Ezekiel 28:13 ಯೆಹೆಜ್ಕೇಲನು 28:13ದೇವರ ತೋಟ ವಾದ ಏದೆನಿನಲ್ಲಿ ನೀನಿದ್ದಿ. ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ವಜ್ರ, ವೈಡೂರ್ಯ, ನೀಲ ಗೋಮೇ ಧಿಕ, ಕೆಂಪು, ಸ್ಪಟಿಕ, ಚಿನ್ನ ಈ ಅಮೂಲ್ಯವಾದವು ಗಳಿಂದ ಭೂಷಿತವಾಗಿದ್ದಿ. ನಿನ್ನಲ್ಲಿದ್ದ ದಮ್ಮಡಿಗಳೂ ಕೊಳಲುಗಳೂ ಇವುಗಳ ಕೆಲಸವು ನಿನ್ನಲ್ಲಿದ್ದು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು.
- Joel 2:3 ಯೋವೇಲ 2:3ಅವರ ಮುಂದೆ ಬೆಂಕಿ ದಹಿಸುತ್ತದೆ; ಅವರ ಹಿಂದೆ ಜ್ವಾಲೆ ಸುಡುತ್ತದೆ; ಅವರ ಮುಂದೆ ದೇಶವು ಏದೆನ್ ತೋಟದ ಹಾಗಿದೆ; ಅವರ ಹಿಂದೆ ಹಾಳಾದ ಕಾಡು; ಹೌದು, ಅವುಗಳಿಗೆ ಯಾವದೂ ತಪ್ಪಿಸಿಕೊಳ್ಳಲಾರದು.
- 1 Kings 7:46 1 ಅರಸುಗಳು 7:46ಯೊರ್ದ ನಿಗೆ ಸೇರಿದ ಬೈಲಾದ ಸುಕ್ಕೋತಿಗೂ ಚಾರೆತಾನಿಗೂ ನಡುವೆ ಇರುವ ಜೇಡು ಮಣ್ಣಿನ ಸ್ಥಳದಲ್ಲಿ ಅರಸನು ಅವುಗಳನ್ನು ಎರಕ ಹೊಯ್ಸಿದನು.
- Numbers 32:1–42 ಅರಣ್ಯಕಾಂಡ 32:1–42ಇದಲ್ಲದೆ ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಬಹಳ ಅಧಿಕವಾದ ಪಶುಗಳು ಇದ್ದವು; ಅವರು ಯಗ್ಜೇರೂ ಗಿಲ್ಯಾದೂ ಎಂಬ ದೇಶ ಗಳನ್ನು ನೋಡಿದಾಗ ಅಗೋ, ಆ ಸ್ಥಳವು ಪಶುಗಳ ಸ್ಥಳವಾಗಿತ್ತು. ಆದದರಿಂದ ಗಾದನ ಮಕ್ಕಳೂ ರೂಬೇನನ ಮಕ್ಕಳೂ ಬಂದು ಮಾತನಾಡಿ ಮೋಶೆಗೂ ಯಾಜಕನಾದ ಎಲ್ಲಾಜಾರನಿಗೂ ಸಭೆಯ ಪ್ರಧಾನ ರಿಗೂ-- ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬವುಗಳೂ ಕರ್ತನು ಇಸ್ರಾಯೇಲ್ಯರ ಸಭೆಯ ಮುಂದೆ ಹೊಡೆದ ದೇಶವೂ ಪಶುಗಳ ದೇಶವಾಗಿದೆ; ನಿನ್ನ ಸೇವಕರಿಗೆ ಪಶುಗಳು ಉಂಟು. ಆದದರಿಂದ ನಮಗೆ ನಿಮ್ಮ ದೃಷ್ಟಿಯಲ್ಲಿ ದಯವು ಸಿಕ್ಕಿದ್ದಾದರೆ ಈ ದೇಶವನ್ನು ನಿಮ್ಮ ಸೇವಕರಿಗೆ ಸ್ವಾಸ್ತ್ಯಕ್ಕಾಗಿ ಕೊಡಬೇಕು; ನಮ್ಮನ್ನು ಯೊರ್ದನ್ ನದಿಯ ಆಚೆಗೆ ತಕ್ಕೊಂಡು ಹೋಗಬೇಡಿರಿ ಎಂದು ಹೇಳಿದರು. ಆಗ ಮೋಶೆಯು ಗಾದನ ಮಕ್ಕಳಿಗೂ ರೂಬೇನನ ಮಕ್ಕಳಿಗೂ--ನಿಮ್ಮ ಸಹೋದರರು ಯುದ್ಧಕ್ಕೆ ಹೋಗ ಲಾಗಿ ನೀವು ಇಲ್ಲಿ ಕೂತಿರಬೇಕೋ? ಕರ್ತನು ಅವ ರಿಗೆ ಕೊಟ್ಟ ದೇಶಕ್ಕೆ ಹೋಗುವದಕ್ಕೆ ನೀವು ಇಸ್ರಾ ಯೇಲ್ ಮಕ್ಕಳ ಹೃದಯಗಳನ್ನು ಅಧೈರ್ಯಪಡಿಸು ವದು ಯಾಕೆ? ನಾನು ದೇಶವನ್ನು ನೋಡುವದಕ್ಕೆ ಕಾದೇಶ್ಬರ್ನೇಯದಿಂದ ಅವರನ್ನು ಕಳುಹಿಸಿದಾಗ ನಿಮ್ಮ ಪಿತೃಗಳು ಹಾಗೆಯೇ ಮಾಡಿದರು. ಹೇಗಂದರೆ ಅವರು ಎಷ್ಕೋಲೆಂಬ ತಗ್ಗಿನ ವರೆಗೆ ಬಂದು ದೇಶವನ್ನು ನೋಡಿದಾಗ ಇಸ್ರಾಯೇಲ್ ಮಕ್ಕಳ ಹೃದಯವನ್ನು ಕರ್ತನು ಅವರಿಗೆ ಕೊಟ್ಟ ದೇಶದೊಳಗೆ ಹೋಗದ ಹಾಗೆ ಅಧೈರ್ಯಪಡಿಸಿದರು. ಕರ್ತನು ಅದೇ ಸಮಯದಲ್ಲಿ ಕೋಪೋದ್ರೇಕವುಳ್ಳವನಾಗಿ ಪ್ರಮಾಣಮಾಡಿ-- ಅವರು ನನ್ನನ್ನು ಪೂರ್ಣವಾಗಿ ಹಿಂಬಾಲಿ ಸದೆ ಇರುವದರಿಂದ ನಾನು ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣಮಾಡಿದ ದೇಶವನ್ನು ಐಗುಪ್ತದೊಳಗಿಂದ ಏರಿಬಂದ ಇಪ್ಪತ್ತು ವರುಷವೂ ಅದಕ್ಕಿಂತ ಅಧಿಕವಾದ ಪ್ರಾಯವುಳ್ಳ ಜನರಲ್ಲಿ ಕೆನಿಜ್ಜೀಯನಾದ ಯೆಫುನ್ನೆಯ ಮಗನಾಗಿರುವ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಹೊರತು ಒಬ್ಬನಾದರೂ ನೋಡುವದಿಲ್ಲ; ಯಾಕಂದರೆ ಇವರೇ ಕರ್ತನನ್ನು ಪೂರ್ಣವಾಗಿ ಹಿಂಬಾಲಿಸಿದ್ದಾರೆ. ಹಾಗೆ ಕರ್ತನು ಇಸ್ರಾಯೇಲ್ಯರ ಮೇಲೆ ಕೋಪೋ ದ್ರೇಕಗೊಂಡದ್ದರಿಂದ ಆತನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ ಸಮಸ್ತ ಸಂತತಿಯು ನಾಶವಾಗುವ ವರೆಗೆ ಅವರನ್ನು ಅರಣ್ಯದಲ್ಲಿ ನಾಲ್ವತ್ತು ವರುಷ ಅಲೆದಾಡು ವಂತೆ ಮಾಡಿದನು. ಇಗೋ, ಕರ್ತನ ಕೋಪವು ಇಸ್ರಾಯೇಲ್ ಕಡೆಗೆ ಇನ್ನೂ ಹೆಚ್ಚಾಗುವ ಹಾಗೆ ನೀವು ನಿಮ್ಮ ಪಿತೃಗಳಿಗೆ ಬದಲಾಗಿ ಪಾಪಿಗಳಾದ ಮನುಷ್ಯರ ಅಭಿವೃದ್ಧಿಯಾಗಿ ನಿಂತಿದ್ದೀರಿ. ನೀವು ಆತನ ಕಡೆಯಿಂದ ತಿರುಗಿದರೆ ಆತನು ಇನ್ನೂ ಹೆಚ್ಚಾಗಿ ಅವರನ್ನು ಅರಣ್ಯದಲ್ಲಿ ಇರಿಸಿ ಬಿಡುವನು; ನೀವು ಈ ಸಮಸ್ತ ಜನರನ್ನು ನಾಶಮಾಡುವಿರಿ ಎಂದು ಹೇಳಿದನು. ಆಗ ಅವರು ಅವನ ಬಳಿಗೆ ಬಂದು--ನಾವು ಇಲ್ಲಿ ನಮ್ಮ ಪಶುಗಳಿಗೋಸ್ಕರ ಹಟ್ಟಿಗಳನ್ನೂ ನಮ್ಮ ಮಕ್ಕಳಿಗೋಸ್ಕರ ಪಟ್ಟಣಗಳನ್ನೂ ಕಟ್ಟುವೆವು. ಆದರೆ ನಾವು ಇಸ್ರಾಯೇಲ್ ಮಕ್ಕಳ ಮುಂದೆ ಅವರನ್ನು ಅವರ ಸ್ಥಳದೊಳಗೆ ಸೇರಿಸುವ ವರೆಗೆ ಯುದ್ಧಕ್ಕೆ ಸಿದ್ಧ ವಾಗಿ ಓಡುವೆವು; ನಮ್ಮ ಮಕ್ಕಳು ಮಾತ್ರ ಈ ದೇಶದ ನಿವಾಸಿಗಳ ದೆಸೆಯಿಂದ ಭದ್ರವಾದ ಊರುಗಳಲ್ಲಿ ವಾಸವಾಗಿರಬೇಕು. ಇಸ್ರಾಯೇಲ್ ಮಕ್ಕಳಲ್ಲಿ ಒಬ್ಬೊಬ್ಬನು ತನ್ನ ಸ್ವಾಸ್ತ್ಯವನ್ನು ಹೊಂದಿಕೊಳ್ಳುವ ವರೆಗೆ ನಾವು ನಮ್ಮ ಮನೆಗಳಿಗೆ ತಿರುಗುವದಿಲ್ಲ. ನಾವು ಯೊರ್ದನ್ ನದಿಯ ಆಚೆಯಲ್ಲಿ ಅವರ ಸಂಗಡ ಸ್ವಾಸ್ತ್ಯವನ್ನು ತಕ್ಕೊಳ್ಳುವದಿಲ್ಲ. ಯಾಕಂದರೆ ನಮ್ಮ ಸ್ವಾಸ್ತ್ಯವು ನಮಗೆ ಯೊರ್ದನ್ ನದಿಯ ಈಚೆಯಲ್ಲಿ ಮೂಡಣ ಕಡೆಯಲ್ಲಿ ಬಂತು ಎಂದು ಹೇಳಿದರು. ಆಗ ಮೋಶೆಯು ಇವರಿಗೆ--ನೀವು ಈ ಕಾರ್ಯ ವನ್ನು ಮಾಡಿದರೆ ನೀವು ಕರ್ತನ ಮುಂದೆ ಯುದ್ದಕ್ಕೆ ಸಿದ್ಧವಾಗಿದ್ದರೆ ನಿಮ್ಮಲ್ಲಿ ಯುದ್ಧಕ್ಕೆ ಸಿದ್ಧವಾದವರೆಲ್ಲರು ಕರ್ತನು ತನ್ನ ಶತ್ರುಗಳನ್ನು ತನ್ನ ಸನ್ನಿಧಿಯಿಂದ ಹೊರಡಿಸುವ ವರೆಗೆ ಕರ್ತನ ಮುಂದೆ ಯೊರ್ದನ್ ನದಿಯನ್ನು ದಾಟಿದರೆ ದೇಶವು ಕರ್ತನ ಮುಂದೆ ವಶವಾದ ತರುವಾಯ ನೀವು ಕರ್ತನಿಂದಲೂ ಇಸ್ರಾ ಯೇಲ್ಯರಿಂದಲೂ ನಿರಪರಾಧಿಗಳಾಗಿದ್ದು ತಿರುಗಿಕೊಳ್ಳ ಬಹುದು; ಈ ದೇಶವು ಕರ್ತನ ಮುಂದೆ ನಿಮ್ಮ ಸ್ವಾಸ್ತ್ಯಕ್ಕಾಗುವದು. ಆದರೆ ನೀವು ಈ ಪ್ರಕಾರ ಮಾಡದಿದ್ದರೆ ಇಗೋ, ಕರ್ತನಿಗೆ ವಿರೋಧವಾಗಿ ಪಾಪಮಾಡಿದವರಾಗುವಿರಿ; ನಿಮ್ಮ ಪಾಪ ನಿಮ್ಮನ್ನು ಹಿಡಿದುಕೊಳ್ಳುವದೆಂದು ತಿಳುಕೊಳ್ಳಿರಿ. ನಿಮ್ಮ ಮಕ್ಕಳಿ ಗೋಸ್ಕರ ಪಟ್ಟಣಗಳನ್ನೂ ನಿಮ್ಮ ಕುರಿಗಳಿಗೋಸ್ಕರ ಹಟ್ಟಿಗಳನ್ನೂ ಕಟ್ಟಿ ನಿಮ್ಮ ಬಾಯಿಂದ ಹೊರಟದ್ದನ್ನು ಮಾಡಿರಿ ಎಂದು ಹೇಳಿದನು. ಗಾದನ ಮಕ್ಕಳೂ ರೂಬೇನನ ಮಕ್ಕಳೂ ಮೋಶೆಯ ಸಂಗಡ ಮಾತನಾಡಿ ನಮ್ಮ ಒಡೆಯನು ಆಜ್ಞಾಪಿಸಿದ ಪ್ರಕಾರ ನಿನ್ನ ಸೇವಕರು ಮಾಡುವರು. ನಮ್ಮ ಮಕ್ಕಳೂ ಹೆಂಡತಿಯರೂ ಸಂಪತ್ತೂ ಪಶು ಗಳೆಲ್ಲಾ ಅಲ್ಲಿ ಗಿಲ್ಯಾದಿನ ಪಟ್ಟಣಗಳಲ್ಲಿ ಇರಲಿ. ಆದರೆ ನಿನ್ನ ಸೇವಕರು ಯುದ್ಧಕ್ಕೆ ಸಿದ್ಧವಾದವರೆಲ್ಲರು ನಮ್ಮ ಒಡೆಯನು ಹೇಳಿದ ಪ್ರಕಾರ ಕರ್ತನ ಮುಂದೆ ಯುದ್ಧಕ್ಕೆ ದಾಟಿ ಹೋಗುವರು ಅಂದರು. ಆಗ ಮೋಶೆಯು ಅವರ ವಿಷಯವಾಗಿ ಯಾಜಕ ನಾದ ಎಲ್ಲಾಜಾರನಿಗೂ ನೂನನ ಮಗನಾದ ಯೆಹೋ ಶುವನಿಗೂ ಇಸ್ರಾಯೇಲ್ ಮಕ್ಕಳ ಗೋತ್ರಗಳ ಮುಖ್ಯ ಯಜಮಾನರಿಗೂ ಆಜ್ಞೆಮಾಡಿದನು. ಮೋಶೆಯು ಅವರಿಗೆ--ಗಾದನ ಮಕ್ಕಳೂ ರೂಬೇನನ ಮಕ್ಕಳೂ ಎಲ್ಲರು ಯುದ್ಧಕ್ಕೆ ಸಿದ್ಧವಾಗಿದ್ದು ನಿಮ್ಮ ಸಂಗಡ ಯೊರ್ದನ್ ನದಿಯನ್ನು ಕರ್ತನ ಮುಂದೆ ದಾಟಿದರೆ ದೇಶವು ನಿಮ್ಮ ಮುಂದೆ ವಶವಾಗಿದ್ದಾಗ ನೀವು ಅವರಿಗೆ ಗಿಲ್ಯಾದ್ ದೇಶವನ್ನು ಸ್ವಾಸ್ತ್ಯಕ್ಕಾಗಿ ಕೊಡಬೇಕು. ಆದರೆ ಅವರು ಯುದ್ಧಕ್ಕೆ ಸಿದ್ಧವಾಗಿ ನಿಮ್ಮ ಸಂಗಡ ದಾಟದಿದ್ದರೆ ಅವರು ನಿಮ್ಮೊಳಗೆ ಕಾನಾನ್ ದೇಶದಲ್ಲಿ ಸ್ವಾಸ್ತ್ಯವನ್ನು ಹೊಂದಬೇಕು ಅಂದನು. ಆಗ ಗಾದನ ಮಕ್ಕಳೂ ರೂಬೇನನ ಮಕ್ಕಳೂ ಪ್ರತ್ಯುತ್ತರವಾಗಿ--ಕರ್ತನು ನಿನ್ನ ಸೇವಕರಿಗೆ ಹೇಳಿ ದ್ದಂತೆಯೇ ನಾವು ಮಾಡುವೆವು. ನಾವು ಯುದ್ಧಕ್ಕೆ ಸಿದ್ಧವಾಗಿ ಕರ್ತನ ಮುಂದೆ ಕಾನಾನ್ ದೇಶಕ್ಕೆ ದಾಟಿ ಹೋಗುವೆವು; ಆದರೆ ಯೊರ್ದನ್ ನದಿಯ ಈಚೆ ಯಲ್ಲಿರುವ ನಮ್ಮ ಸ್ವಾಸ್ತ್ಯದ ಭಾಗವೇ ನಮಗಿರಲಿ ಎಂದು ಹೇಳಿದರು. ಹಾಗೆಯೇ ಮೋಶೆಯು ಗಾದನ ಮಕ್ಕಳಿಗೂ ರೂಬೇನನ ಮಕ್ಕಳಿಗೂ ಯೋಸೇಫನ ಮಗನಾದ ಮನಸ್ಸೆಯ ಅರ್ಧ ಗೋತ್ರಕ್ಕೂ ಅಮೋರಿಯರ ಅರಸ ನಾದ ಸೀಹೋನನ ರಾಜ್ಯವನ್ನೂ ಬಾಷಾನಿನ ಅರಸ ನಾದ ಓಗನ ರಾಜ್ಯವನ್ನೂ ಅದರ ಭೂಮಿಯನ್ನೂ ಅದರ ಮೇರೆಗಳಲ್ಲಿ ಸುತ್ತಮುತ್ತಲಿನ ಪಟ್ಟಣಗಳನ್ನೂ ಕೊಟ್ಟನು. ಆಗ ಗಾದನ ಮಕ್ಕಳು ದೀಬೋನ್, ಅಟಾರೋತ್, ಆರೋಯೇರ್, ಅಟ್ರೋತ್ಪೊ ಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮ್ರಾ, ಬೇತ್ ಹಾರಾನ್ ಎಂಬ ಭದ್ರವಾದ ಪಟ್ಟಣಗಳನ್ನೂ ಕುರಿಗಳಿಗೆ ಹಟ್ಟಿಗಳನ್ನೂ ಕಟ್ಟಿದ್ದರು. ರೂಬೇನನ ಮಕ್ಕಳು ಹೆಷ್ಬೋನ್, ಎಲೀಯಾಲೆ, ಕಿರ್ಯಾತಯಿಮ್, ನೆಬೋ, ಬಾಳ್ಮೆಯೋನ್ ಎಂದು ಬೇರೆ ಹೆಸರು ಹೊಂದಿದ್ದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ ತಾವು ಕಟ್ಟಿದ ಪಟ್ಟಣಗಳಿಗೆ ಹೆಸರುಗಳನ್ನು ಇಟ್ಟರು. ಮನಸ್ಸೆಯ ಮಗನಾದ ಮಾಕೀರನ ಮಕ್ಕಳು ಗಿಲ್ಯಾದ್ ದೇಶಕ್ಕೆ ಹೋಗಿ ಅದನ್ನು ತಕ್ಕೊಂಡು, ಅದರಲ್ಲಿದ್ದ ಅಮೋರಿಯರನ್ನು ಹೊರಡಿಸಿದರು. ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗನಾದ ಮಾಕೀರನಿಗೆ ಕೊಟ್ಟದ್ದರಿಂದ ಅವನು ಅದರಲ್ಲಿ ವಾಸಿ ಸಿದನು. ಆದರೆ ಮನಸ್ಸೆಯ ಮಗನಾದ ಯಾಯಾ ರನು ಹೋಗಿ, ಅವರ ನಗರಗಳನ್ನು ತಕ್ಕೊಂಡು, ಅವುಗಳಿಗೆ ಯಾಯಾರನ ನಗರಗಳೆಂದು ಹೆಸರಿಟ್ಟನು.ನೋಬಹನು ಹೋಗಿ ಕೇನಾತೆಂಬ ಪಟ್ಟಣವನ್ನು ಅದರ ಗ್ರಾಮಗಳನ್ನು ತಕ್ಕೊಂಡು ಅದಕ್ಕೆ ತನ್ನ ಹೆಸರಿನ ಹಾಗೆ ನೋಬಹ ಎಂದು ಹೆಸರಿಟ್ಟನು. ನೋಬಹನು ಹೋಗಿ ಕೇನಾತೆಂಬ ಪಟ್ಟಣವನ್ನು ಅದರ ಗ್ರಾಮಗಳನ್ನು ತಕ್ಕೊಂಡು ಅದಕ್ಕೆ ತನ್ನ ಹೆಸರಿನ ಹಾಗೆ ನೋಬಹ ಎಂದು ಹೆಸರಿಟ್ಟನು.
- 1 John 2:15–16 1 ಯೋಹಾನನು 2:15–16ಲೋಕವನ್ನಾಗಲಿ ಲೋಕದಲ್ಲಿರುವವುಗಳ ನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕ ವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವವುಗಳೆಲ್ಲವು ಅಂದರೆ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಗೆ ಸಂಬಂಧ ಪಟ್ಟವುಗಳಲ್ಲ, ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ.
- Ezekiel 31:8 ಯೆಹೆಜ್ಕೇಲನು 31:8ದೇವರ ತೋಟದ ದೇವದಾರುಗಳು ಅವನನ್ನು ಮರೆಮಾಡಲಿಲ್ಲ; ತುರಾಯಿ ಮರಗಳು ಅವನ ಕೊಂಬೆಗಳಿಗೆ ಸಮ ವಾಗಲಿಲ್ಲ; ಆಲದ ಮರಗಳು ಅವನ ರೆಂಬೆಗಳಷ್ಟೂ ಇಲ್ಲ; ಆ ದೇವರ ತೋಟದ ಯಾವುದೇ ಮರವು ಇವನ ಸೌಂದರ್ಯಕ್ಕೆ ಸಮವಾಗಲಿಲ್ಲ.
- Genesis 3:6 ಆದಿಕಾಂಡ 3:6ಸ್ತ್ರೀಯು--ಆ ಮರದ ಫಲವು ಆಹಾರಕ್ಕೆ ಒಳ್ಳೇದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಒಬ್ಬನನ್ನು ಜ್ಞಾನಿಯನ್ನಾಗಿ ಮಾಡುವದಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಅದೆ ಎಂದು ನೋಡಿ ಅದರ ಫಲವನ್ನು ತೆಗೆದುಕೊಂಡು ತಿಂದಳು; ತನ್ನ ಸಂಗಡ ಇದ್ದ ತನ್ನ ಗಂಡನಿಗೂ ಕೊಟ್ಟಳು; ಅವನೂ ತಿಂದನು.
Original words (Hebrew)
- Lot · H3876לוֹט Lôwṭ
- up · H5375נָשָׂא nâsâʼ
- eyes · H5869עַיִן ʻayin
- beheld · H7200רָאָה râʼâh
- plain · H3603כִּכָּר kikkâr
- Jordan · H3383יַרְדֵּן Yardên
- watered · H4945מַשְׁקֶה mashqeh
- before · H6440פָּנִים pânîym
- destroyed · H7843שָׁחַת shâchath
- Sodom · H5467סְדֹם Çᵉdôm
- Gomorrah · H6017עֲמֹרָה ʻĂmôrâh
- garden · H1588גַּן gan
- land · H776אֶרֶץ ʼerets
- Egypt · H4714מִצְרַיִם Mitsrayim
- comest · H935בּוֹא bôwʼ
- Zoar · H6820צֹעַר Tsôʻar