Ezekiel · chapter 32 · verse 20
Ezekiel 32:20 in Kannada
ಅವರು ಕತ್ತಿಯಿಂದ ಹತರಾದವರ ಮಧ್ಯದಲ್ಲಿ ಬೀಳುವರು. ಅವಳು ಕತ್ತಿಗೆ ಒಪ್ಪಿಸಲ್ಪಟ್ಟಿದ್ದಾಳೆ; ಅವಳನ್ನೂ ಅವಳ ಎಲ್ಲಾ ಸಮೂಹವನ್ನೂ ಎಳೆಯಿರಿ.
Avaru kattiyinda hataraadavara madhyadalli beeluvaru. Avalu kattige oppisalpattiddaale; avalannoo avala ellaa samoohavannoo eleyiri.
Ezekiel 32:20 in English
- King James Version (KJV)
- They shall fall in the midst of [them that are] slain by the sword: she is delivered to the sword: draw her and all her multitudes.
- World English Bible (WEB)
- They will fall among those who are slain by the sword. She is delivered to the sword. Draw her away with all her multitudes.
- American Standard Version (ASV)
- They shall fall in the midst of them that are slain by the sword: she is delivered to the sword; draw her away and all her multitudes.
- Bible in Basic English (BBE)
- Among those who have been put to the sword: they will give a resting-place with them to all their people.
- Darby Translation (DBY)
- They shall fall in the midst of them that are slain by the sword. The sword hath been given: draw her out, and all her multitudes.
- Webster's Bible (WBS)
- They shall fall in the midst of [them that are] slain by the sword: she is delivered to the sword: draw her and all her multitudes.
- Young's Literal Translation (YLT)
- In the midst of the pierced of the sword they fall, [To] the sword she hath been given, They drew her out, and all her multitude.
Read in context
- 18ಮನುಷ್ಯಪುತ್ರನೇ, ಐಗುಪ್ತದ ಜನಸಮೂಹದ ವಿಷಯವಾಗಿ ಗೋಳಾಡು. ಅದನ್ನು, ಅದರ ಸಂಗಡ ಘನವುಳ್ಳ ಜನಾಂಗಗಳ ಕುಮಾರ್ತೆ ಯರನ್ನು ಭೂಮಿಯ ಕೆಳಗಿನ ಭಾಗಗಳಿಗೆ ಕುಣಿಯೊ ಳಗೆ ಇಳಿಯುವವರ ಜೊತೆ ತಳ್ಳಿಬಿಡು.
- 19ನೀನು ಸೌಂದರ್ಯದಲ್ಲಿ ಯಾರಿಗೆ ಹೋಲುವಿ? ಕೆಳಗೆ ಹೋಗು ಮತ್ತು ಸುನ್ನತಿಯಿಲ್ಲದವರ ಸಂಗಡ ಮಲಗು.
- 20ಅವರು ಕತ್ತಿಯಿಂದ ಹತರಾದವರ ಮಧ್ಯದಲ್ಲಿ ಬೀಳುವರು. ಅವಳು ಕತ್ತಿಗೆ ಒಪ್ಪಿಸಲ್ಪಟ್ಟಿದ್ದಾಳೆ; ಅವಳನ್ನೂ ಅವಳ ಎಲ್ಲಾ ಸಮೂಹವನ್ನೂ ಎಳೆಯಿರಿ.
- 21ಶೂರರಲ್ಲಿ ಬಲಿಷ್ಠರೂ ಅವನಿಗೆ ಸಹಾಯ ಮಾಡಿದವರ ಸಂಗಡ ಪಾತಾಳದೊಳಗಿಂದ ಅವನ ಸಂಗಡ ಮಾತನಾಡುವರು; ಅವರು ಇಳಿದುಹೋಗಿ ಸುನ್ನತಿ ಯಿಲ್ಲದವರಾಗಿಯೂ ಕತ್ತಿಯಿಂದ ಹತರಾದವರಾ ಗಿಯೂ ಮಲಗಿದ್ದಾರೆ.
- 22ಅಲ್ಲಿ ಅಶ್ಶೂರ್ಯ ಮತ್ತು ಅದರ ಎಲ್ಲಾ ಗುಂಪು ಇರುವದು; ಸುತ್ತಲೂ ಅದರ ಸಮಾಧಿಗಳಿರುವವು; ಅವರೆಲ್ಲರೂ ಕತ್ತಿಯಿಂದ ಬಿದ್ದು ಹತರಾದವರೇ.
Cross references
- Psalm 28:3 ಕೀರ್ತನೆಗಳು 28:3ದುಷ್ಟರ ಸಂಗಡಲೂ ಅಪರಾಧಮಾಡುವವರ ಸಂಗಡಲೂ ನನ್ನನ್ನು ಎಳೆಯಬೇಡ; ತಮ್ಮ ನೆರೆಯವರಿಗೆ ಅವರು ಸಮಾಧಾನವಾಗಿ ಮಾತನಾಡುತ್ತಾರೆ; ಕೇಡು ಅವರ ಹೃದಯದಲ್ಲಿ ಅದೆ.
- Ezekiel 32:23–26 ಯೆಹೆಜ್ಕೇಲನು 32:23–26ಅವರ ಸಮಾಧಿಗಳು ಕುಣಿಯ ಕಡೆಗಳಲ್ಲಿ ಇಡಲ್ಪಟ್ಟಿವೆ, ಅದರ ಸಮಾಧಿಯ ಸುತ್ತಲೂ ಅವರ ಗುಂಪುಗಳಿವೆ. ಜೀವಿತರ ದೇಶದಲ್ಲಿ ಭಯಂಕ ರರಾಗಿದ್ದ ಇವರೆಲ್ಲರೂ ಕತ್ತಿಯಿಂದ ಬಿದ್ದು ಹತರಾ ದರು. ಅಲ್ಲಿ ಏಲಾಮು ಮತ್ತು ಅದರ ಎಲ್ಲಾ ಸಮೂಹವು ಆಕೆಯ ಸಮಾಧಿಯ ಸುತ್ತಲೂ ಇದೆ; ಅವರೆಲ್ಲರೂ ಕತ್ತಿಯಿಂದ ಬಿದ್ದು ಹತರಾದವರೇ; ಸುನ್ನತಿಯಿಲ್ಲದವರಾಗಿ ಭೂಮಿಯ ಕೆಳಗಿನ ಭಾಗಗಳಿಗೆ ಇಳಿದುಹೋದವರೇ, ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದಾಗ್ಯೂ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತುಕೊಂಡಿದ್ದಾರೆ. ಅವರು ಅದರ ಎಲ್ಲಾ ಸಮೂಹಕ್ಕೂ ಹತವಾದವರ ಮಧ್ಯದಲ್ಲಿ ಹಾಸಿಗೆ ಹಾಕಿದ್ದಾರೆ; ಅದರ ಸುತ್ತಲೂ ಅವರ ಸಮಾಧಿಗಳಿವೆ; ಅವರೆಲ್ಲರೂ ಕತ್ತಿಯಿಂದ ಹತರಾಗಿ ಸುನ್ನತಿಯಿಲ್ಲದವರಾಗಿದ್ದಾರೆ; ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದಾಗ್ಯೂ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತು ಕೊಂಡು ಹತರಾದವರ ಮಧ್ಯದಲ್ಲಿ ಇಡಲ್ಪಟ್ಟಿದ್ದಾರೆ. ಅಲ್ಲಿ ಮೇಷೆಕೂ ತೂಬಲೂ ಮತ್ತು ಅದರ ಎಲ್ಲಾ ಸಮೂಹವೂ ಅದರ ಸಮಾಧಿಗಳೂ ಅದರ ಸುತ್ತಲಾಗಿ ಇವೆ ಇವರೆಲ್ಲರೂ ಜೀವಿತರ ದೇಶದಲ್ಲಿ ಭಯಂಕರರಾಗಿ ದ್ದಾಗ್ಯೂ ಸುನ್ನತಿಯಿಲ್ಲದೆ ಕತ್ತಿಯಿಂದ ಹತರಾದವರು.
- Ezekiel 29:8–12 ಯೆಹೆಜ್ಕೇಲನು 29:8–12ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ನಿನ್ನ ಮೇಲೆ ಕತ್ತಿಯನ್ನು ತರುತ್ತೇನೆ. ಮನುಷ್ಯರನ್ನೂ ಮೃಗಗಳನ್ನೂ ನಿನ್ನೊಳಗಿಂದ ಕಡಿದುಬಿಡುತ್ತೇನೆ. ಅವನು--ಆ ನದಿಯು ನನ್ನದೇ, ನಾನೇ ಅದನ್ನು ನಿರ್ಮಿಸಿದವನೆಂದು ಹೇಳಿಕೊಂಡದ್ದ ರಿಂದ ಐಗುಪ್ತ ದೇಶವು ಹಾಳು ಅರಣ್ಯವಾಗುವದು; ಆಗ ನಾನೇ ಕರ್ತನೆಂದು ಅವರು ತಿಳಿಯುವರು. ಆದದರಿಂದ ಇಗೋ, ನಾನು ನಿನಗೆ ವಿರೋಧ ವಾಗಿಯೂ ನಿನ್ನ ನದಿಗಳಿಗೆ ವಿರುದ್ಧವಾಗಿಯೂ ಇದ್ದೇನೆ. ಐಗುಪ್ತದೇಶವನ್ನು ಸೆವೇನೆಯ ಗೋಪುರ ಮೊದಲುಗೊಂಡು ಕೂಷಿನ ಪ್ರಾಂತ್ಯದವರೆಗೂ ಸಂಪೂರ್ಣವಾಗಿ ಕಾಡಾಗಿಯೂ ಹಾಳಾಗಿಯೂ ಮಾಡುತ್ತೇನೆ. ಯಾವ ಮನುಷ್ಯನ ಪಾದವಾದರೂ ಮೃಗಗಳ ಪಾದವಾದರೂ ಅದರಲ್ಲಿ ಹಾದುಹೋಗುವ ದಿಲ್ಲ ಅಥವಾ ನಾಲ್ವತ್ತು ವರ್ಷಗಳ ಕಾಲ ಅದರಲ್ಲಿ ವಾಸಮಾಡುವವರೇ ಇರುವದಿಲ್ಲ. ನಾನು ಐಗುಪ್ತ ದೇಶದವನ್ನು ಹಾಳಾದ ದೇಶಗಳ ಮಧ್ಯದಲ್ಲಿ ಹಾಳು ಮಾಡುವೆನು; ಅದರ ಪಟ್ಟಣಗಳು ಕಾಡಾಗಿರುವ ಪಟ್ಟಣಗಳ ಮಧ್ಯದಲ್ಲಿ ನಾಲ್ವತ್ತು ವರ್ಷಗಳು ಹಾಳಾಗಿರುವವು; ನಾನು ಐಗುಪ್ತರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳಲ್ಲಿ ಹರಡಿಸಿಬಿಡುವೆನು.
- Proverbs 24:11 ಜ್ಞಾನೋಕ್ತಿಗಳು 24:11ಮರಣಕ್ಕೆ ಸೆಳೆಯ ಲ್ಪಟ್ಟವನನ್ನು ಬಿಡಿಸುವದಕ್ಕೂ ವಧಿಸಲ್ಪಡುವದಕ್ಕೆ ಸಿದ್ಧವಾದವರನ್ನು ನೀನು ರಕ್ಷಿಸಲೂ ಹಿಂದೆಗೆದರೆ
- Jeremiah 22:19 ಯೆರೆಮೀಯ 22:19ಕತ್ತೆಯನ್ನು ಹೂಣಿಡುವ ಪ್ರಕಾರ ಅವನನ್ನು ಹೂಣಿಡುವರು; ಅವನನ್ನು ಎಳಕೊಂಡು ಹೋಗಿ ಯೆರೂಸಲೇಮಿನ ಬಾಗಿಲುಗಳ ಆಚೆಗೆ ಬಿಸಾಡುವರು.
- Ezekiel 32:29–30 ಯೆಹೆಜ್ಕೇಲನು 32:29–30ಅಲ್ಲಿ ಎದೋಮೂ ಅದರ ಅರಸರೂ ಮತ್ತು ಎಲ್ಲಾ ಪ್ರಧಾನರೂ ಶೂರರಾಗಿದ್ದಾಗ್ಯೂ ಕತ್ತಿಯಿಂದ ಹತವಾ ದವರ ಸಂಗಡ ಹೂಣಲ್ಪಟ್ಟಿದ್ದಾರೆ; ಅವರು ಸುನ್ನತಿಯಿಲ್ಲದವರ ಸಂಗಡವೂ ಕುಣಿಗೆ ಇಳಿಯುವವರ ಸಂಗಡವೂ ಹತರಾದವರು. ಅಲ್ಲಿ ಉತ್ತರದ ಪ್ರಧಾ ನರೂ ಚೀದೋನಿನವರೆಲ್ಲರೂ ಹತರಾದವರ ಸಂಗಡ ಇಳಿದಿದ್ದಾರೆ; ಅವರು ಭಯಂಕರತ್ವದಿಂದ ತಮ್ಮ ಪರಾ ಕ್ರಮಕ್ಕೆ ನಾಚಿಕೆಪಟ್ಟಿದ್ದಾರೆ; ಹತರಾದವರ ಸಂಗಡ ಇಳಿದಿದ್ದಾರೆ; ಸುನ್ನತಿಯಿಲ್ಲದವರಾಗಿದ್ದು ಕತ್ತಿಯಿಂದ ಹತರಾಗಿ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತವರಾಗಿದ್ದಾರೆ.