Ezekiel · chapter 32 · verse 18
Ezekiel 32:18 in Kannada
ಮನುಷ್ಯಪುತ್ರನೇ, ಐಗುಪ್ತದ ಜನಸಮೂಹದ ವಿಷಯವಾಗಿ ಗೋಳಾಡು. ಅದನ್ನು, ಅದರ ಸಂಗಡ ಘನವುಳ್ಳ ಜನಾಂಗಗಳ ಕುಮಾರ್ತೆ ಯರನ್ನು ಭೂಮಿಯ ಕೆಳಗಿನ ಭಾಗಗಳಿಗೆ ಕುಣಿಯೊ ಳಗೆ ಇಳಿಯುವವರ ಜೊತೆ ತಳ್ಳಿಬಿಡು.
Manushyaputrane, aiguptada janasamoohada vishayavaagi golaadu. Adannu, adara sangada ghanavulla janaangagala kumaarte yarannu bhoomiya kelagina bhaagagalige kuniyo lage iliyuvavara jote tallibidu.
Ezekiel 32:18 in English
- King James Version (KJV)
- Son of man, wail for the multitude of Egypt, and cast them down, [even] her, and the daughters of the famous nations, unto the nether parts of the earth, with them that go down into the pit.
- World English Bible (WEB)
- “Son of man, wail for the multitude of Egypt, and cast them down, even her and the daughters of the famous nations, to the lower parts of the earth, with those who go down into the pit.
- American Standard Version (ASV)
- Son of man, wail for the multitude of Egypt, and cast them down, even her, and the daughters of the famous nations, unto the nether parts of the earth, with them that go down into the pit.
- Bible in Basic English (BBE)
- Son of man, let your voice be loud in sorrow for the people of Egypt and send them down, even you and the daughters of the nations; I will send them down into the lowest parts of the earth, with those who go down into the underworld.
- Darby Translation (DBY)
- Son of man, wail for the multitude of Egypt, and cast them down, her and the daughters of the famous nations, unto the lower parts of the earth, with them that go down into the pit.
- Webster's Bible (WBS)
- Son of man, wail for the multitude of Egypt, and cast them down, [even] her, and the daughters of the famous nations, to the nether parts of the earth, with them that go down into the pit.
- Young's Literal Translation (YLT)
- 'Son of man, Wail for the multitude of Egypt, And cause it to go down, It — and the daughters of honourable nations, Unto the earth — the lower parts, With those going down to the pit.
Read in context
- 16ಇದು ಅವರು ಗೋಳಾಡುವಂತಹ ಗೋಳಾಟವಾಗಿದೆ; ಐಗುಪ್ತದ ವಿಷಯವಾಗಿಯೂ ಅದರ ಎಲ್ಲಾ ಜನ ಸಮೂಹದ ವಿಷಯವಾಗಿಯೂ ಜನಾಂಗಗಳ ಕುಮಾರ್ತೆಯರು ಇದನ್ನು ಕುರಿತು ಗೋಳಾಡುವರು; ಎಂದು ದೇವರಾದ ಕರ್ತನು ಹೇಳುತ್ತಾನೆ.
- 17ಇದಲ್ಲದೆ ಹನ್ನೆರಡನೇ ವರ್ಷದ, ತಿಂಗಳಿನ ಹದಿನೈದನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
- 18ಮನುಷ್ಯಪುತ್ರನೇ, ಐಗುಪ್ತದ ಜನಸಮೂಹದ ವಿಷಯವಾಗಿ ಗೋಳಾಡು. ಅದನ್ನು, ಅದರ ಸಂಗಡ ಘನವುಳ್ಳ ಜನಾಂಗಗಳ ಕುಮಾರ್ತೆ ಯರನ್ನು ಭೂಮಿಯ ಕೆಳಗಿನ ಭಾಗಗಳಿಗೆ ಕುಣಿಯೊ ಳಗೆ ಇಳಿಯುವವರ ಜೊತೆ ತಳ್ಳಿಬಿಡು.
- 19ನೀನು ಸೌಂದರ್ಯದಲ್ಲಿ ಯಾರಿಗೆ ಹೋಲುವಿ? ಕೆಳಗೆ ಹೋಗು ಮತ್ತು ಸುನ್ನತಿಯಿಲ್ಲದವರ ಸಂಗಡ ಮಲಗು.
- 20ಅವರು ಕತ್ತಿಯಿಂದ ಹತರಾದವರ ಮಧ್ಯದಲ್ಲಿ ಬೀಳುವರು. ಅವಳು ಕತ್ತಿಗೆ ಒಪ್ಪಿಸಲ್ಪಟ್ಟಿದ್ದಾಳೆ; ಅವಳನ್ನೂ ಅವಳ ಎಲ್ಲಾ ಸಮೂಹವನ್ನೂ ಎಳೆಯಿರಿ.
Cross references
- Ezekiel 31:14 ಯೆಹೆಜ್ಕೇಲನು 31:14ನೀರಾವರಿಯ ಯಾವ ಮರಗಳು ತಮ್ಮ ಎತ್ತರವನ್ನು ಹೆಚ್ಚಿಸಿಕೊಂಡು ತಮ್ಮ ತುದಿಯನ್ನು ಮೋಡಗಳಿಗೆ ತಗಲಿಸದೆ ಇರುವದರಿಂದ ನೀರನ್ನು ಹೀರುತ್ತಲಿರುವ ದೊಡ್ಡ ದೊಡ್ಡ ಮರಗಳು ಎತ್ತರವಾಗಿ ಚಾಚಿಕೊಳ್ಳದೆ ಇರಲೆಂದು ಹೀಗಾಯಿತು, ಅವೆಲ್ಲಾ ಮರಣದ ಪಾಲಾಗುವವು; ಅವುಗಳಿಗೆ ಅಧೋ ಲೋಕವೇ ಗತಿಯಾಗುವದು, ಪಾತಾಳಕ್ಕೆ ಇಳಿದು ಹೋದ ಮನುಷ್ಯ ಜನ್ಮದವರ ಬಳಿಗೆ ಒಂದೇ ಗುಂಪಾಗಿ ಸೇರುವವು.
- Ezekiel 32:2 ಯೆಹೆಜ್ಕೇಲನು 32:2ಮನುಷ್ಯ ಪುತ್ರನೇ, ಐಗುಪ್ತ ಅರಸನಾದ ಫರೋಹನ ವಿಷಯ ವಾಗಿ ಗೋಳಾಟವನ್ನೆತ್ತಿ ಅವನಿಗೆ ನೀನು ಹೇಳಬೇಕಾ ದದ್ದೇನಂದರೆ--ನೀನು ಜನಾಂಗಗಳಲ್ಲಿ ಪ್ರಾಯದ ಸಿಂಹಕ್ಕೆ ಸಮನಾಗಿರುವೆ; ಸಮುದ್ರಗಳಲ್ಲಿರುವ ತಿಮಿಂಗಲದ ಹಾಗಿರುವೆ. ನೀನಿದ್ದ ನದಿಗಳನ್ನು ಭೇಧಿಸಿಕೊಂಡು ಬಂದ ನೀರನ್ನು ನಿನ್ನ ಕಾಲುಗಳಿಂದ ಕಲಕಿ ಹೊಳೆಗಳನ್ನು ತುಳಿದು ಬದಿಗೆ ಮಾಡಿದೆ.
- Jeremiah 1:10 ಯೆರೆಮೀಯ 1:10ನೋಡು, ನಿನ್ನನ್ನು ಕೀಳುವದಕ್ಕೂ ಕೆಳಗೆ ಹಾಕಿ ಬಿಡುವದಕ್ಕೂ ನಾಶಮಾಡುವದಕ್ಕೂ ಕೆಡವಿಹಾಕುವದಕ್ಕೂ ಕಟ್ಟುವದಕ್ಕೂ ನೆಡುವದಕ್ಕೂ ಜನಾಂಗಗಳ ಮೇಲೆಯೂ ರಾಜ್ಯಗಳ ಮೇಲೆಯೂ ಈ ದಿನ ನಿನ್ನನ್ನು ನೇಮಿಸಿದ್ದೇನೆ ಅಂದನು.
- Ezekiel 32:16 ಯೆಹೆಜ್ಕೇಲನು 32:16ಇದು ಅವರು ಗೋಳಾಡುವಂತಹ ಗೋಳಾಟವಾಗಿದೆ; ಐಗುಪ್ತದ ವಿಷಯವಾಗಿಯೂ ಅದರ ಎಲ್ಲಾ ಜನ ಸಮೂಹದ ವಿಷಯವಾಗಿಯೂ ಜನಾಂಗಗಳ ಕುಮಾರ್ತೆಯರು ಇದನ್ನು ಕುರಿತು ಗೋಳಾಡುವರು; ಎಂದು ದೇವರಾದ ಕರ್ತನು ಹೇಳುತ್ತಾನೆ.
- Micah 1:8 ಮೀಕ 1:8ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು.
- Ezekiel 43:3 ಯೆಹೆಜ್ಕೇಲನು 43:3ಇದು, ನಾನು ನೋಡಿದ ದರ್ಶನದ ತೋರ್ವಿಕೆಯ ಪ್ರಕಾರ ಇತ್ತು ನಾನು ಪಟ್ಟಣವನ್ನು ನಾಶಮಾಡುವದಕ್ಕೆ ಬಂದಾಗ ನೋಡಿದ ಆ ದರ್ಶನದ ಹಾಗೆಯೇ ಇತ್ತು; ನಾನು ಕೇಬಾರ್ ನದಿಯ ದಡದ ಮೇಲೆ ನೋಡಿದ ದರ್ಶನಗಳ ಹಾಗೆ ಇತ್ತು; ಆಗ ನಾನು ಬೋರಲು ಬಿದ್ದೆನು.
- Hosea 6:5 ಹೋಶೇಯ 6:5ಆದದರಿಂದ ನಾನು ಪ್ರವಾದಿಗಳ ಮುಖಾಂತರ ಕಡಿದುಬಿಟ್ಟು ನನ್ನ ಬಾಯಿ ಮಾತುಗಳಿಂದ ಅವರನ್ನು ಕೊಂದುಹಾಕಿದ್ದೇನೆ; ನಿನ್ನ ನ್ಯಾಯತೀರ್ಪುಗಳು ಬೆಳಕಿನ ಹಾಗೆ ಹೊರಟವು.
- Ezekiel 26:20 ಯೆಹೆಜ್ಕೇಲನು 26:20ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ನಿಮ್ಮ ಪೂರ್ವ ಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು. ನಾನು ನಿನ್ನ ಮಹಿಮೆಯನ್ನು ಜೀವ ಲೋಕದಲ್ಲಿ ನೆಲೆಗೊಳಿಸದ ನಿರ್ನಿವಾಸಿಯಾಗುವಂತೆ ನಿನ್ನನ್ನು ಪಾತಾಳಕ್ಕಿಳಿದವರ ಸಹವಾಸಕ್ಕೆ ಸೇರಿಸುವೆನು.ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.
- Ezekiel 31:16 ಯೆಹೆಜ್ಕೇಲನು 31:16ನಾನು ಅದನ್ನು ಕುಣಿಗೆ ಇಳಿಯುವವರ ಜೊತೆಗೆ ಸೇರಿಸಬೇಕೆಂದು ಪಾತಾಳಕ್ಕೆ ತಳ್ಳಿಬಿಟ್ಟಾಗ ಅದು ಬಿದ್ದ ಶಬ್ದಕ್ಕೆ ಸಕಲ ಜನಾಂಗಗಳು ನಡುಗಿದವು; ಅಧೋ ಲೋಕಕ್ಕೆ ಪಾಲಾದ ಏದೆನಿನ ಎಲ್ಲಾ ಮರಗಳು, ಲೆಬನೋನಿನ ಉತ್ತಮೋತ್ತಮವಾದ ವೃಕ್ಷಗಳು, ನೀರು ಕುಡಿಯುವವುಗಳೆಲ್ಲಾ ಕೆಳಗಿನ ಸೀಮೆಯಲ್ಲಿ ಸಂತೈಸಿ ಕೊಂಡವು.
- Isaiah 16:9 ಯೆಶಾಯ 16:9ಆದಕಾರಣ ಸಿಬ್ಮದ ದ್ರಾಕ್ಷಾ ಲತೆಯ ನಿಮಿತ್ತ ಯಜ್ಜೇರಿನೊಂದಿಗೆ ಅಳುವೆನು; ಓ ಹೆಷ್ಬೋನೇ, ಎಲೆಯಾಲೇ, ನಿನ್ನನ್ನು ನನ್ನ ಕಣ್ಣೀರಿ ನಿಂದ ತೋಯಿಸುವೆನು; ಬಿದ್ದುಹೋದ ನಿನ್ನ ಬೇಸಿ ಗೆಯ ಫಲಗಳಿಗೂ ಬೆಳೆಗಳಿಗೂ ಆರ್ಭಟಿಸುವರು.
- Ezekiel 32:21 ಯೆಹೆಜ್ಕೇಲನು 32:21ಶೂರರಲ್ಲಿ ಬಲಿಷ್ಠರೂ ಅವನಿಗೆ ಸಹಾಯ ಮಾಡಿದವರ ಸಂಗಡ ಪಾತಾಳದೊಳಗಿಂದ ಅವನ ಸಂಗಡ ಮಾತನಾಡುವರು; ಅವರು ಇಳಿದುಹೋಗಿ ಸುನ್ನತಿ ಯಿಲ್ಲದವರಾಗಿಯೂ ಕತ್ತಿಯಿಂದ ಹತರಾದವರಾ ಗಿಯೂ ಮಲಗಿದ್ದಾರೆ.
- Ezekiel 32:24–32 ಯೆಹೆಜ್ಕೇಲನು 32:24–32ಅಲ್ಲಿ ಏಲಾಮು ಮತ್ತು ಅದರ ಎಲ್ಲಾ ಸಮೂಹವು ಆಕೆಯ ಸಮಾಧಿಯ ಸುತ್ತಲೂ ಇದೆ; ಅವರೆಲ್ಲರೂ ಕತ್ತಿಯಿಂದ ಬಿದ್ದು ಹತರಾದವರೇ; ಸುನ್ನತಿಯಿಲ್ಲದವರಾಗಿ ಭೂಮಿಯ ಕೆಳಗಿನ ಭಾಗಗಳಿಗೆ ಇಳಿದುಹೋದವರೇ, ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದಾಗ್ಯೂ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತುಕೊಂಡಿದ್ದಾರೆ. ಅವರು ಅದರ ಎಲ್ಲಾ ಸಮೂಹಕ್ಕೂ ಹತವಾದವರ ಮಧ್ಯದಲ್ಲಿ ಹಾಸಿಗೆ ಹಾಕಿದ್ದಾರೆ; ಅದರ ಸುತ್ತಲೂ ಅವರ ಸಮಾಧಿಗಳಿವೆ; ಅವರೆಲ್ಲರೂ ಕತ್ತಿಯಿಂದ ಹತರಾಗಿ ಸುನ್ನತಿಯಿಲ್ಲದವರಾಗಿದ್ದಾರೆ; ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದಾಗ್ಯೂ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತು ಕೊಂಡು ಹತರಾದವರ ಮಧ್ಯದಲ್ಲಿ ಇಡಲ್ಪಟ್ಟಿದ್ದಾರೆ. ಅಲ್ಲಿ ಮೇಷೆಕೂ ತೂಬಲೂ ಮತ್ತು ಅದರ ಎಲ್ಲಾ ಸಮೂಹವೂ ಅದರ ಸಮಾಧಿಗಳೂ ಅದರ ಸುತ್ತಲಾಗಿ ಇವೆ ಇವರೆಲ್ಲರೂ ಜೀವಿತರ ದೇಶದಲ್ಲಿ ಭಯಂಕರರಾಗಿ ದ್ದಾಗ್ಯೂ ಸುನ್ನತಿಯಿಲ್ಲದೆ ಕತ್ತಿಯಿಂದ ಹತರಾದವರು. ಸುನ್ನತಿಯಿಲ್ಲದವರಲ್ಲಿ ಬಿದ್ದಂತ ತಮ್ಮ ಯುದ್ಧದ ಆಯುಧಗಳ ಸಂಗಡ ಪಾತಾಳಕ್ಕೆ ಇಳಿದಂತ ಶೂರರ ಸಂಗಡ ಇವರು ಮಲಗಬೇಡವೇ? ಅವರು ತಮ್ಮ ಕತ್ತಿಗಳನ್ನು ತಮ್ಮ ತಲೆಗಳ ಕೆಳಗೆ ಇಟ್ಟುಕೊಂಡಿದ್ದಾರೆ; ಅವರು ಜೀವಿತರ ದೇಶದಲ್ಲಿ ಶೂರರಿಗೆ ಭಯಂಕರ ರಾಗಿದ್ದಾಗ್ಯೂ ಅವರ ಅಕ್ರಮಗಳು ಅವರ ಎಲುಬು ಗಳ ಮೇಲೆ ಇರುವವು. ಹೌದು, ನೀನು ಸುನ್ನತಿಯಿಲ್ಲದವರ ಮಧ್ಯದಲ್ಲಿ ಮುರಿಯಲ್ಪಡುವಿ; ಕತ್ತಿಯಿಂದ ಹತರಾದವರ ಸಂಗಡ ಮಲಗುವಿ. ಅಲ್ಲಿ ಎದೋಮೂ ಅದರ ಅರಸರೂ ಮತ್ತು ಎಲ್ಲಾ ಪ್ರಧಾನರೂ ಶೂರರಾಗಿದ್ದಾಗ್ಯೂ ಕತ್ತಿಯಿಂದ ಹತವಾ ದವರ ಸಂಗಡ ಹೂಣಲ್ಪಟ್ಟಿದ್ದಾರೆ; ಅವರು ಸುನ್ನತಿಯಿಲ್ಲದವರ ಸಂಗಡವೂ ಕುಣಿಗೆ ಇಳಿಯುವವರ ಸಂಗಡವೂ ಹತರಾದವರು. ಅಲ್ಲಿ ಉತ್ತರದ ಪ್ರಧಾ ನರೂ ಚೀದೋನಿನವರೆಲ್ಲರೂ ಹತರಾದವರ ಸಂಗಡ ಇಳಿದಿದ್ದಾರೆ; ಅವರು ಭಯಂಕರತ್ವದಿಂದ ತಮ್ಮ ಪರಾ ಕ್ರಮಕ್ಕೆ ನಾಚಿಕೆಪಟ್ಟಿದ್ದಾರೆ; ಹತರಾದವರ ಸಂಗಡ ಇಳಿದಿದ್ದಾರೆ; ಸುನ್ನತಿಯಿಲ್ಲದವರಾಗಿದ್ದು ಕತ್ತಿಯಿಂದ ಹತರಾಗಿ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತವರಾಗಿದ್ದಾರೆ. ಫರೋಹನು ತನ್ನ ಯಾವ ಸಮೂಹವನ್ನು ನೋಡಿ ಆದರಣೆ ಹೊಂದುವನೋ ಹೌದು, ಅವನೂ ಅವನ ಎಲ್ಲಾ ಸೈನ್ಯವು ಹತರಾದವರು ಎಂದು ದೇವರಾದ ಕರ್ತನು ಹೇಳುತ್ತಾನೆ.ನಾನು ನನ್ನ ಭಯವನ್ನು ಜೀವಿತರ ದೇಶದಲ್ಲಿ ಉಂಟು ಮಾಡಿದ್ದೇನೆ. ಆ ಫರೋಹನೂ ಅವನ ಎಲ್ಲಾ ಸಮೂಹದ ಸಹಿತವಾಗಿ ಕತ್ತಿಯಿಂದ ಹತರಾದವರ ಸಂಗಡ, ಸುನ್ನತಿಯಿಲ್ಲದವರ ಮಧ್ಯದಲ್ಲಿ ಮಲಗಿಸಲ್ಪಡುವನೆಂದು ದೇವರಾದ ಕರ್ತನು ಹೇಳುತ್ತಾನೆ. ನಾನು ನನ್ನ ಭಯವನ್ನು ಜೀವಿತರ ದೇಶದಲ್ಲಿ ಉಂಟು ಮಾಡಿದ್ದೇನೆ. ಆ ಫರೋಹನೂ ಅವನ ಎಲ್ಲಾ ಸಮೂಹದ ಸಹಿತವಾಗಿ ಕತ್ತಿಯಿಂದ ಹತರಾದವರ ಸಂಗಡ, ಸುನ್ನತಿಯಿಲ್ಲದವರ ಮಧ್ಯದಲ್ಲಿ ಮಲಗಿಸಲ್ಪಡುವನೆಂದು ದೇವರಾದ ಕರ್ತನು ಹೇಳುತ್ತಾನೆ.
Original words (Hebrew)
- Son · H1121בֵּן bên
- man · H120אָדָם ʼâdâm
- wail · H5091נָהָה nâhâh
- multitude · H1995הָמוֹן hâmôwn
- Egypt · H4714מִצְרַיִם Mitsrayim
- down · H3381יָרַד yârad
- daughters · H1323בַּת bath
- famous · H117אַדִּיר ʼaddîyr
- nations · H1471גּוֹי gôwy
- parts · H8482תַּחְתִּי tachtîy
- earth · H776אֶרֶץ ʼerets
- down · H3381יָרַד yârad
- pit · H953בּוֹר bôwr