Proverbs · chapter 24 · verse 11
Proverbs 24:11 in Kannada
ಮರಣಕ್ಕೆ ಸೆಳೆಯ ಲ್ಪಟ್ಟವನನ್ನು ಬಿಡಿಸುವದಕ್ಕೂ ವಧಿಸಲ್ಪಡುವದಕ್ಕೆ ಸಿದ್ಧವಾದವರನ್ನು ನೀನು ರಕ್ಷಿಸಲೂ ಹಿಂದೆಗೆದರೆ
Maranakke seleya lpattavanannu bidisuvadakkoo vadhisalpaduvadakke siddhavaadavarannu neenu rakshisaloo hindegedare
Proverbs 24:11 in English
- King James Version (KJV)
- If thou forbear to deliver [them that are] drawn unto death, and [those that are] ready to be slain;
- World English Bible (WEB)
- Rescue those who are being led away to death! Indeed, hold back those who are staggering to the slaughter!
- American Standard Version (ASV)
- Deliver them that are carried away unto death, And those that are ready to be slain see that thou hold back.
- Bible in Basic English (BBE)
- Be the saviour of those who are given up to death, and do not keep back help from those who are slipping to destruction.
- Darby Translation (DBY)
- Deliver them that are taken forth unto death, and withdraw not from them that stagger to slaughter.
- Webster's Bible (WBS)
- If thou forbearest to deliver [them that are] drawn to death, and [those that are] ready to be slain;
- Young's Literal Translation (YLT)
- If [from] delivering those taken to death, And those slipping to the slaughter — thou keepest back.
Read in context
- 9ಬುದ್ಧಿಹೀನನ ಆಲೋ ಚನೆಯು ಪಾಪ; ಪರಿಹಾಸ್ಯಗಾರನು ಮನುಷ್ಯರಿಗೆ ಅಸಹ್ಯ.
- 10ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವು ಕೊಂಚವಾಗಿದೆ.
- 11ಮರಣಕ್ಕೆ ಸೆಳೆಯ ಲ್ಪಟ್ಟವನನ್ನು ಬಿಡಿಸುವದಕ್ಕೂ ವಧಿಸಲ್ಪಡುವದಕ್ಕೆ ಸಿದ್ಧವಾದವರನ್ನು ನೀನು ರಕ್ಷಿಸಲೂ ಹಿಂದೆಗೆದರೆ
- 12ನೀನು--ಇಗೋ, ಅದು ನನಗೆ ಗೊತ್ತಿಲ್ಲ ಎಂದು ಹೇಳಿದರೆ ಹೃದಯವನ್ನು ಪರಿಶೋಧಿಸುವಾತನು ಅದನ್ನು ಯೋಚಿಸುವದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ಅದನ್ನು ತಿಳಿಯುವದಿಲ್ಲವೋ? ಪ್ರತಿ ಯೊಬ್ಬನಿಗೆ ತನ್ನ ಕಾರ್ಯಗಳಿಗನುಸಾರವಾಗಿ ಆತನು ಪ್ರತಿಫಲವನ್ನು ಕೊಡದೆ ಇರುವನೇ?
- 13ನನ್ನ ಮಗನೇ, ಜೇನು ಚೆನ್ನಾಗಿರುವದರಿಂದಲೂ ನಿನ್ನ ಬಾಯಿಗೆ ಜೇನು ತುಪ್ಪವು ಸಿಹಿಯಾಗಿರುವದರಿಂದಲೂ ಅದನ್ನು ತಿನ್ನು;
Cross references
- Psalm 82:4 ಕೀರ್ತನೆಗಳು 82:4ದರಿದ್ರನನ್ನೂ ಬಡವ ನನ್ನೂ ದುಷ್ಟರ ಕೈಯಿಂದ ಬಿಡಿಸಿರಿ.
- Isaiah 58:6–7 ಯೆಶಾಯ 58:6–7ನಾನು ಆದುಕೊಳ್ಳುವ ಉಪವಾಸವು ಕೇಡಿನ ಬಂಧನಗಳನ್ನು ಬಿಚ್ಚುವದೂ ಭಾರವಾದ ಹೊರೆಯನ್ನು ಬಿಚ್ಚುವದೂ ಹಿಂಸಿಸಲ್ಪಟ್ಟವರು ಬಿಡಿಸ ಲ್ಪಟ್ಟವರಾಗಿ ಹಾಕುವದೂ ಆಗಿದೆಯಲ್ಲವೋ? ನಿನ್ನ ರೊಟ್ಟಿಯನ್ನು ಹಸಿದವರಿಗೆ ಹಂಚುವದೂ ಅಲೆಯು ತ್ತಿರುವ ಬಡವರನ್ನು ನಿನ್ನ ಮನೆಗೆ ಬರಮಾಡಿ ಕೊಳ್ಳುವದೂ ಬೆತ್ತಲೆಯವರನ್ನು ಕಂಡಾಗೆಲ್ಲ ಅವರಿಗೆ ಹೊದಿಸುವದೂ ನಿನ್ನ ಸ್ವಂತ ಶರೀರದಂತಿರುವವ ನಿಗೆ ನಿನ್ನನ್ನು ಮರೆಮಾಡಿಕೊಳ್ಳದಿರುವದೂ ಇದೇ ಅಲ್ಲವೋ?
- 1 John 3:16–17 1 ಯೋಹಾನನು 3:16–17ಆತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದ್ದರಲ್ಲಿಯೇ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ. ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದು ಹೇಗೆ?
- Job 29:17 ಯೋಬನು 29:17ದುಷ್ಟರ ದವಡೆಗಳನ್ನು ಮುರಿ ದೆನು; ಅವನ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ತೆಗೆದೆನು.
- Luke 10:31–32 ಲೂಕನು 10:31–32ಆಗ ಅನಿರೀಕ್ಷಿತವಾಗಿ ಒಬ್ಬಾನೊಬ್ಬ ಯಾಜಕನು ಆ ಮಾರ್ಗವಾಗಿ ಬಂದು ಅವನನ್ನು ನೋಡಿ ಓರೆ ಯಾಗಿ ಹೋದನು. ಅದೇ ಪ್ರಕಾರ ಒಬ್ಬ ಲೇವಿ ಯೂ ಆ ಸ್ಥಳಕ್ಕೆ ಬಂದು ಅವನನ್ನು ನೋಡಿ ಓರೆಯಾಗಿ ಹೋದನು.
- 1 Samuel 26:8–9 1 ಸಮುವೇಲನು 26:8–9ಆಗ ಅಬೀಷೈಯು ದಾವೀ ದನಿಗೆ--ಈ ಹೊತ್ತು ದೇವರು ನಿನ್ನ ಶತ್ರುವನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಈಗ ನಾನು ಅವನನ್ನು ಈಟಿಯಿಂದ ಒಂದೇ ಪೆಟ್ಟಿನಲ್ಲಿ ನೆಲಕ್ಕೆ ಹತ್ತುವಂತೆ ಹೊಡೆಯಲು ಅಪ್ಪಣೆ ಕೊಡಬೇಕು; ಎರಡು ಸಾರಿ ಹೊಡೆಯುವದಿಲ್ಲ ಅಂದನು. ಆದರೆ ದಾವೀದನು ಅಬೀಷೈಯನಿಗೆ -- ಅವನನ್ನು ಸಂಹರಿಸಬೇಡ; ಯಾಕಂದರೆ ಕರ್ತನ ಅಭಿಷಿಕ್ತನಿಗೆ ವಿರೋಧವಾಗಿ ಕೈ ಹಾಕುವವನು ನಿರಪರಾಧಿಯಾಗುವದಿಲ್ಲ ಅಂದನು.
- Luke 23:23–25 ಲೂಕನು 23:23–25ಆದರೆ ಆತನು ಶಿಲುಬೆಗೆ ಹಾಕಲ್ಪಡಬೇಕೆಂದು ಅವರು ಮಹಾಧ್ವನಿಯಿಂದ ಒತ್ತಾಯ ಮಾಡಿದರು. ಹೀಗೆ ಅವರ ಕೂಗಾಟವೂ ಪ್ರಧಾನಯಾಜಕರ ಕೂಗಾಟವೂ ಗೆದ್ದಿತು. ಆಗ ಪಿಲಾತನು ಅವರು ಕೇಳಿಕೊಂಡಂತೆ ಆಗಲಿ ಎಂದು ನಿರ್ಣಯಿಸಿದನು. ಇದಲ್ಲದೆ ಅವರು ಇಷ್ಟಪಟ್ಟವ ನನ್ನು ಅಂದರೆ ದಂಗೆಯ ಮತ್ತು ಕೊಲೆಯ ನಿಮಿತ್ತ ಸೆರೆಮನೆಯೊಳಗೆ ಹಾಕಲ್ಪಟ್ಟವನನ್ನು ಅವರಿಗೆ ಬಿಟ್ಟು ಕೊಟ್ಟು ಯೇಸುವನ್ನು ಅವರ ಇಷ್ಟಕ್ಕೆ ಒಪ್ಪಿಸಿದನು.
- Acts 21:31–32 ಅಪೊಸ್ತಲರ ಕೃತ್ಯಗಳು 21:31–32ಅವರು ಅವನನ್ನು ಕೊಲ್ಲಬೇಕೆಂ ದಿದ್ದಾಗ ಯೆರೂಸಲೇಮಿನಲ್ಲೆಲ್ಲಾ ಗಲಭೆ ಆಯಿತೆಂದು ಪಟಾಲಮಿನ ಮುಖ್ಯ ನಾಯಕನಿಗೆ ವರದಿ ಬಂತು. ಅವನು ತಕ್ಷಣವೇ ಸೈನಿಕರನ್ನೂ ಶತಾಧಿಪತಿಗಳನ್ನೂ ತೆಗೆದುಕೊಂಡು ಅವರ ಬಳಿಗೆ ಓಡಿ ಬಂದನು. ಅವರು ಮುಖ್ಯ ನಾಯಕನನ್ನೂ ಸೈನಿಕರನ್ನೂ ನೋಡಿ ಪೌಲನನ್ನು ಹೊಡೆಯುವದನ್ನು ಬಿಟ್ಟರು.
- Acts 18:17 ಅಪೊಸ್ತಲರ ಕೃತ್ಯಗಳು 18:17ಆಗ ಗ್ರೀಕರೆಲ್ಲರೂ ಸಭಾಮಂದಿರದ ಮುಖ್ಯ ಅಧಿಕಾರಿಯಾಗಿದ್ದ ಸೋಸ್ಥೆನ ನನ್ನು ಹಿಡಿದುಕೊಂಡು ನ್ಯಾಯಸ್ಥಾನದ ಮುಂದೆ ಹೊಡೆದರು. ಗಲ್ಲಿಯೋನನಾದರೋ ಅವುಗಳಲ್ಲಿ ಒಂದಕ್ಕಾದರೂ ಲಕ್ಷ್ಯಕೊಡಲಿಲ್ಲ.
- Acts 23:10 ಅಪೊಸ್ತಲರ ಕೃತ್ಯಗಳು 23:10ಅಲ್ಲಿ ದೊಡ್ಡ ಭೇದ ಉಂಟಾದಾಗ ಅವರು ಪೌಲನನ್ನು ಎಳೆದಾಡಿ ತುಂಡುತುಂಡಾಗಿ ಮಾಡಿ ಯಾರು ಎಂದು ಮುಖ್ಯ ನಾಯಕನು ಭಯಪಟ್ಟು ಅವನನ್ನು ಅವರೊಳಗಿಂದ ಬಲವಂತವಾಗಿ ಕೋಟೆಯೊಳಗೆ ತರಬೇಕೆಂದು ಸೈನಿಕರಿಗೆ ಆಜ್ಞಾಪಿಸಿದನು.
- Acts 23:23–35 ಅಪೊಸ್ತಲರ ಕೃತ್ಯಗಳು 23:23–35ಆಗ ಅವನು ಇಬ್ಬರು ಶತಾಧಿಪತಿ ಗಳನ್ನು ತನ್ನ ಬಳಿಗೆ ಕರೆದು--ರಾತ್ರಿ ಮೂರು ಘಂಟೆಗೆ ಕೈಸರೈಯಕ್ಕೆ ಹೋಗುವದಕ್ಕಾಗಿ ಇನ್ನೂರು ಮಂದಿ ಸೈನಿಕರನ್ನೂ ಎಪ್ಪತ್ತು ಮಂದಿ ಕುದುರೆ ಸವಾರರನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಮಾಡಿ, ಕುದುರೆಗಳನ್ನು ತಂದು ಪೌಲನನ್ನು ಹತ್ತಿಸಿ ಅಧಿಪತಿ ಯಾದ ಫೇಲಿಕ್ಸನ ಬಳಿಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕೆಂದು ಹೇಳಿದನು. ಅವನು ಈ ರೀತಿ ಯಲ್ಲಿ ಒಂದು ಪತ್ರವನ್ನು ಬರೆದನು:- ಅತ್ಯುತ್ತಮ ಅಧಿಪತಿಯಾದ ಫೇಲಿಕ್ಸನಿಗೆ ಕ್ಲೌದ್ಯ ಲೂಸ್ಯನು ಮಾಡುವ ವಂದನೆ. ಯೆಹೂದ್ಯರು ಈ ಮನುಷ್ಯ ನನ್ನು ಹಿಡಿದು ಕೊಲ್ಲಬೇಕೆಂದಿದ್ದಾಗ ನಾನು ಸೈನ್ಯ ದೊಂದಿಗೆ ಬಂದು ಅವನು ರೋಮ್ನವನೆಂದು ತಿಳಿದುಕೊಂಡು ಅವನನ್ನು ತಪ್ಪಿಸಿದೆನು. ಅವರು ಅವನ ಮೇಲೆ ತಪ್ಪು ಹೊರಿಸಿದ ಕಾರಣವನ್ನು ತಿಳಿದು ಕೊಳ್ಳಲು ನಾನು ಅಪೇಕ್ಷಿಸಿ ಅವರ ಆಲೋಚನಾಸಭೆಗೆ ಅವನನ್ನು ಕರೆದುಕೊಂಡು ಹೋದೆನು. ಆಗ ತಮ್ಮ ನ್ಯಾಯಪ್ರಮಾಣ ಸಂಬಂಧವಾದ ಪ್ರಶ್ನೆಗಳಿಂದ ಅವನ ಮೇಲೆ ತಪ್ಪು ಹೊರಿಸಿದರೇ ಹೊರತು ಮರಣ ದಂಡನೆಗಾಗಲೀ ಬೇಡಿಗಳಿಗಾಗಲೀ ಯೋಗ್ಯವಾದ ಯಾವದನ್ನೂ ಅವರು ಅವನ ಮೇಲೆ ತಪ್ಪು ಹೊರಿಸ ಲಿಲ್ಲವೆಂದು ನಾನು ಗ್ರಹಿಸಿದೆನು. ಯೆಹೂದ್ಯರು ಹೇಗೆ ಆ ಮನುಷ್ಯನಿಗಾಗಿ ಹೊಂಚುಹಾಕುತ್ತಿದ್ದಾರೆಂದು ನನಗೆ ತಿಳಿದಾಗ ಕೂಡಲೇ ಅವನನ್ನು ನಾನು ನಿನ್ನ ಬಳಿಗೆ ಕಳುಹಿಸಿ ಅವನ ಮೇಲೆ ತಪ್ಪು ಹೊರಿಸುವವರು ಅವನಿಗೆ ವಿರೋಧವಾಗಿ ಮಾತನಾಡುವದನ್ನು ನಿನ್ನ ಮುಂದೆಯೇ ಹೇಳಬೇಕೆಂದು ಅವರಿಗೆ ಸಹ ನಾನು ಅಪ್ಪಣೆಕೊಟ್ಟೆನು; ಶ ಆಗ ತಮಗೆ ಅಪ್ಪಣೆಯಾದಂತೆ ಸೈನಿಕರು ಪೌಲನನ್ನು ರಾತ್ರಿಯ ಸಮಯದಲ್ಲಿ ಅಂತಿಪತ್ರಿಗೆ ಕರೆದುಕೊಂಡು ಹೋದರು. ಮರುದಿನ ಕುದುರೆ ಸವಾರರು ಅವನ ಜೊತೆಯಲ್ಲಿ ಹೋಗುವಂತೆ ಬಿಟ್ಟು ತಾವು ಕೋಟೆಗೆ ಹಿಂತಿರುಗಿದರು. ಅವರು ಕೈಸರೈಯಕ್ಕೆ ಬಂದು ಪತ್ರವನ್ನು ಅಧಿಪತಿಗೆ ತಲುಪಿಸಿ ಪೌಲನನ್ನು ಸಹ ಅವನ ಮುಂದೆ ನಿಲ್ಲಿಸಿದರು. ಆ ಅಧಿಪತಿಯು ಪತ್ರವನ್ನು ಓದಿ ಪೌಲನು ಯಾವ ಪ್ರಾಂತ್ಯದವನು ಎಂದು ವಿಚಾರಿಸಿದಾಗ ಅವನು ಕಿಲಿಕ್ಯದವನೆಂದು ತಿಳುಕೊಂಡು--ನಿನ್ನ ಮೇಲೆ ತಪ್ಪು ಹೊರಿಸುವವರು ಬಂದಾಗ ನಾನು ನಿನ್ನನ್ನು ವಿಚಾರಣೆ ಮಾಡುವೆನು ಎಂದು ಹೇಳಿ ಅವನನ್ನು ಹೆರೋದನ ನ್ಯಾಯಾಲಯದಲ್ಲಿ ಇಟ್ಟು ಕಾಯಬೇಕೆಂದು ಅಪ್ಪಣೆ ಕೊಟ್ಟನು. ನಿನ್ನ ಮೇಲೆ ತಪ್ಪು ಹೊರಿಸುವವರು ಬಂದಾಗ ನಾನು ನಿನ್ನನ್ನು ವಿಚಾರಣೆ ಮಾಡುವೆನು ಎಂದು ಹೇಳಿ ಅವನನ್ನು ಹೆರೋದನ ನ್ಯಾಯಾಲಯದಲ್ಲಿ ಇಟ್ಟು ಕಾಯಬೇಕೆಂದು ಅಪ್ಪಣೆ ಕೊಟ್ಟನು.