Ezekiel · chapter 32 · verse 3
Ezekiel 32:3 in Kannada
ದೇವರಾದ ಕರ್ತನು ಹೀಗೆ ಹೇಳುತ್ತಾನೆ, ಆದುದ ರಿಂದ ನಾನು ಗುಂಪಾಗಿ ಕೂಡಿದ ಬಹಳ ಜನಾಂಗಗಳ ಮೇಲೆ ಬಲೆಯನ್ನು ಬೀಸುವೆನು; ಅವರು ನಿನ್ನನ್ನು ನನ್ನ ಬಲೆಯಲ್ಲಿ ಮೇಲಕ್ಕೆಳೆಯುವರು.
Devaraada kartanu heege heluttaane, aaduda rinda naanu gumpaagi koodida bahala janaangagala mele baleyannu beesuvenu; avaru ninnannu nanna baleyalli melakkeleyuvaru.
Ezekiel 32:3 in English
- King James Version (KJV)
- Thus saith the Lord GOD; I will therefore spread out my net over thee with a company of many people; and they shall bring thee up in my net.
- World English Bible (WEB)
- The Lord GOD says: “I will spread out my net on you with a company of many peoples. They will bring you up in my net.
- American Standard Version (ASV)
- Thus saith the Lord Jehovah: I will spread out my net upon thee with a company of many peoples; and they shall bring thee up in my net.
- Bible in Basic English (BBE)
- This is what the Lord has said: My net will be stretched out over you, and I will take you up in my fishing-net.
- Darby Translation (DBY)
- Thus saith the Lord Jehovah: I will also spread out my net over thee with an assemblage of many peoples; and they shall bring thee up in my net.
- Webster's Bible (WBS)
- Thus saith the Lord GOD; I will therefore spread out my net over thee with a company of many people; and they shall bring thee up in my net.
- Young's Literal Translation (YLT)
- Thus said the Lord Jehovah: And — I have spread out for thee My net, With an assembly of many peoples, And they have brought thee up in My net.
Read in context
- 1ಹನ್ನೆರಡನೇ ವರುಷದ, ಹನ್ನೆರಡನೇ ತಿಂಗಳಿನ, ಮೊದಲನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
- 2ಮನುಷ್ಯ ಪುತ್ರನೇ, ಐಗುಪ್ತ ಅರಸನಾದ ಫರೋಹನ ವಿಷಯ ವಾಗಿ ಗೋಳಾಟವನ್ನೆತ್ತಿ ಅವನಿಗೆ ನೀನು ಹೇಳಬೇಕಾ ದದ್ದೇನಂದರೆ--ನೀನು ಜನಾಂಗಗಳಲ್ಲಿ ಪ್ರಾಯದ ಸಿಂಹಕ್ಕೆ ಸಮನಾಗಿರುವೆ; ಸಮುದ್ರಗಳಲ್ಲಿರುವ ತಿಮಿಂಗಲದ ಹಾಗಿರುವೆ. ನೀನಿದ್ದ ನದಿಗಳನ್ನು ಭೇಧಿಸಿಕೊಂಡು ಬಂದ ನೀರನ್ನು ನಿನ್ನ ಕಾಲುಗಳಿಂದ ಕಲಕಿ ಹೊಳೆಗಳನ್ನು ತುಳಿದು ಬದಿಗೆ ಮಾಡಿದೆ.
- 3ದೇವರಾದ ಕರ್ತನು ಹೀಗೆ ಹೇಳುತ್ತಾನೆ, ಆದುದ ರಿಂದ ನಾನು ಗುಂಪಾಗಿ ಕೂಡಿದ ಬಹಳ ಜನಾಂಗಗಳ ಮೇಲೆ ಬಲೆಯನ್ನು ಬೀಸುವೆನು; ಅವರು ನಿನ್ನನ್ನು ನನ್ನ ಬಲೆಯಲ್ಲಿ ಮೇಲಕ್ಕೆಳೆಯುವರು.
- 4ಆಗ ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು, ಬಯಲಿನ ಮೇಲೆ ಬಿಸಾಡುವೆನು; ಆಕಾಶದ ಪಕ್ಷಿಗಳನ್ನೆಲ್ಲಾ ನಿನ್ನ ಮೇಲೆ ಕೂರಿಸಿ, ಸಮಸ್ತ ಭೂಮಿಯ ಮೇಲಿನ ಮೃಗಗಳನ್ನು ನಿನ್ನಿಂದ ತೃಪ್ತಿಪಡಿಸುವೆನು.
- 5ನಿನ್ನ ಮಾಂಸವನ್ನು ಬೆಟ್ಟಗಳ ಮೇಲೆ ಹಾಕಿ, ನಿನ್ನ ರಾಶಿ ಯಿಂದ ಕಣಿವೆಗಳನ್ನು ತುಂಬಿಸುವೆನು.
Cross references
- Ezekiel 12:13 ಯೆಹೆಜ್ಕೇಲನು 12:13ನನ್ನ ಬಲೆಯನ್ನು ಸಹ ನಾನು ಅವನ ಮೇಲೆ ಹರಡುವೆನು. ಅವನು ನನ್ನ ಉರ್ಲಿನಲ್ಲಿ ಸಿಕ್ಕಿಬೀಳುವನು. ನಾನು ಅವನನ್ನು ಕಸ್ದೀಯ ದೇಶದ ಬಾಬೆಲಿಗೆ ಒಯ್ಯುವೆನು. ಆದರೆ ಅವನು ಅದನ್ನು ನೋಡದೆ ಅಲ್ಲಿಯೇ ಸಾಯುವನು.
- Jeremiah 16:16 ಯೆರೆಮೀಯ 16:16ಇಗೋ, ನಾನು ಅನೇಕ ವಿಾನುಗಾರರನ್ನು ಕಳುಹಿಸುತ್ತೇನೆಂದು ಕರ್ತನು ಅನ್ನುತ್ತಾನೆ; ಇವರು ಅವರನ್ನು ಹಿಡಿಯುವರು; ಆಮೇಲೆ ಅನೇಕ ಬೇಟೆ ಗಾರರನ್ನು ಕಳುಹಿಸುವೆನು; ಇವರು ಎಲ್ಲಾ ಬೆಟ್ಟಗುಡ್ಡಗಳ ಮೇಲೆಯೂ ಎಲ್ಲಾ ಗುಡ್ಡಗಳ ಮೇಲೆಯೂ ಎಲ್ಲಾ ಬಂಡೆಗಳ ಬಿರುಕುಗಳಲ್ಲಿಯೂ ಅವರನ್ನು ಬೇಟೆಯಾಡು ವರು.
- Hosea 7:12 ಹೋಶೇಯ 7:12ಅವರು ಹೋಗುವಾಗ, ನಾನು ಅವರ ಮೇಲೆ ನನ್ನ ಬಲೆಯನ್ನು ಹಾಸುವೆನು; ಆಕಾಶದ ಪಕ್ಷಿಗಳ ಹಾಗೆ ಅವರನ್ನು ಕೆಳಗೆ ಇಳಿಸಿ ಅವರ ಸಭೆಯು ಕೇಳಿರುವ ಪ್ರಕಾರ ಅವರನ್ನು ಶಿಕ್ಷಿಸುವೆನು.
- Habakkuk 1:14–17 ಹಬಕ್ಕೂಕ 1:14–17ಮನುಷ್ಯರನ್ನು ಸಮುದ್ರದ ವಿಾನುಗ ಳಂತೆಯೂ ಆಳುವವನಿಲ್ಲದ ಕ್ರಿಮಿಗಳಂತೆಯೂ ಯಾಕೆ ಮಾಡುತ್ತೀ? ಅವರನ್ನೆಲ್ಲಾ ಗಾಳದಿಂದ ಎತ್ತಿ ತಮ್ಮ ಬಲೆಯಿಂದ ಅವರನ್ನು ಹಿಡಿದು ತಮ್ಮ ಜಾಲದಿಂದ ಅವರನ್ನು ಕೂಡಿಸುತ್ತಾರೆ; ಆದದರಿಂದ ಸಂತೋಷಿಸಿ ಉಲ್ಲಾಸ ಪಡುತ್ತಾರೆ. ತಮ್ಮ ಬಲೆಗೆ ಬಲಿ ಅರ್ಪಿಸಿ ತಮ್ಮ ಜಾಲಕ್ಕೆ ಧೂಪವನ್ನು ಸುಡುತ್ತಾರೆ; ಇವುಗಳಿಂದ ಅವರ ಪಾಲು ಕೊಬ್ಬಾಗಿಯೂ ಅವರ ಆಹಾರ ಪುಷ್ಟಿ ಯುಳ್ಳದ್ದಾಗಿಯೂ ಇದೆ.ಹೀಗಿರುವದರಿಂದ ಅವರು ತಮ್ಮ ಬಲೆಯನ್ನು ಬರಿದುಮಾಡಿ ನಿತ್ಯವಾಗಿ ಜನಾಂಗ ಗಳನ್ನು ಕರುಣಿಸದೆ ಸದಾ ಸಂಹರಿಸುತ್ತಿರಬೇಕೋ? ಹೀಗಿರುವದರಿಂದ ಅವರು ತಮ್ಮ ಬಲೆಯನ್ನು ಬರಿದುಮಾಡಿ ನಿತ್ಯವಾಗಿ ಜನಾಂಗ ಗಳನ್ನು ಕರುಣಿಸದೆ ಸದಾ ಸಂಹರಿಸುತ್ತಿರಬೇಕೋ?
- Ecclesiastes 9:12 ಪ್ರಸಂಗಿ 9:12ಮನುಷ್ಯನು ಸಹ ತನ್ನ ಕಾಲವನ್ನು ತಿಳಿದಲ್ಲಿ ಬಾಧೆಯನ್ನುಂಟುಮಾಡುವ ಬಲೆಯಿಂದ ಹಿಡಿಯುವ ವಿಾನಿನಂತೆಯೂ ಉರುಲಿನಲ್ಲಿ ಸಿಕ್ಕುವ ಪಕ್ಷಿಗ ಳಂತೆಯೂ ಮನುಷ್ಯನ ಮಕ್ಕಳ ಮೇಲೆ ಕೇಡಿನ ಕಾಲವು ತಕ್ಷಣ ಬೀಳುವಾಗ ಹಿಡಿಯಲ್ಪಡುತ್ತಾರೆ.
- Ezekiel 17:20 ಯೆಹೆಜ್ಕೇಲನು 17:20ನಾನು ಅವನ ಮೇಲೆ ನನ್ನ ಬಲೆಯನ್ನು ಬೀಸುತ್ತೇನೆ; ಆಗ ಅವನು ನನ್ನ ಉರ್ಲಿನಲ್ಲಿ ಸಿಕ್ಕಿಬೀಳುವನು; ನಾನು ಅವನನ್ನು ಬಾಬೆಲಿಗೆ ಒಯ್ದು ಅವನು ನನಗೆ ವಿರೋಧವಾಗಿ ಮಾಡಿರುವ ಅಪರಾಧದ ವಿಷಯದಲ್ಲಿ ನಾನು ಅವರೊಂದಿಗೆ ವಾದಿಸುವೆನು.
- Lamentations 1:13 ಪ್ರಲಾಪಗಳು 1:13ಆತನು ಮೇಲಿನಿಂದ ನನ್ನ ಎಲುಬುಗಳಿಗೆ ಬೆಂಕಿಯನ್ನು ಕಳುಹಿಸಿ ದ್ದಾನೆ, ಅದು ಅವುಗಳನ್ನು ವಶಪಡಿಸಿಕೊಂಡಿದೆ; ನನ್ನ ಪಾದದ ಮೇಲೆ ಒಂದು ಬಲೆಯನ್ನು ಬೀಸಿ ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ; ನನ್ನನ್ನು ದಿನವೆಲ್ಲಾ ಹಾಳಾಗಿಯೂ ಮೂರ್ಛೆ ಹೋಗುವಂತೆಯೂ ಮಾಡಿದ್ದಾನೆ.